Tag: jammu kashmir

  • ಜಮ್ಮು ಕಾಶ್ಮೀರದ ದೋಡಾದ ಸೇನಾ ಪೋಸ್ಟ್‌ ಮೇಲೆ ಉಗ್ರರ ದಾಳಿ

    ಜಮ್ಮು ಕಾಶ್ಮೀರದ ದೋಡಾದ ಸೇನಾ ಪೋಸ್ಟ್‌ ಮೇಲೆ ಉಗ್ರರ ದಾಳಿ

    ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ದೋಡಾದಲ್ಲಿ (Doda) ಮಂಗಳವಾರ ರಾತ್ರಿ ಸೇನಾ ಪೋಸ್ಟ್‌ ಮೇಲೆ ದಾಳಿ (Terrorists Attack ) ನಡೆಸಿದ ನಂತರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ನಡೆಯುತ್ತಿದೆ ಎಂದು ವರದಿಯಾಗಿದೆ.

    ರಿಯಾಸಿಯಲ್ಲಿ (Reasi Attack) ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಮೇಲೆ ದಾಳಿ, ಕಥುವಾದಲ್ಲಿ (Kathua) ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಒಬ್ಬ ನಾಗರಿಕ ಗಾಯಗೊಂಡ ನಂತರ ನಡೆದ ಮೂರನೇ ಘಟನೆ ಇದಾಗಿದೆ.


    ರಾತ್ರಿ ಕಥುವಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: 30 ಲಕ್ಷಕ್ಕೆ ಡೀಲ್‌ – ಕೊಲೆ ಮಾಡಿ ದರ್ಶನ್ ಟೀಂ ಸಿಕ್ಕಿಬಿದ್ದಿದ್ದೇ ರೋಚಕ!

    ದೋಡಾ ಘಟನೆಯ ಬಗ್ಗೆ ಮಾತನಾಡಿದ ಅವರು, ತಡರಾತ್ರಿ ಚಟರ್ಗಾಲಾ ಪ್ರದೇಶದ ಸೇನಾ ನೆಲೆಯಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದರು.

    ಭದ್ರತಾ ಪಡೆಗಳು ಈಗ ಕಥುವಾದ ಹೀರಾನಗರ ಪ್ರದೇಶದಲ್ಲಿ ಡ್ರೋನ್‌ ಬಳಸಿಕೊಂಡು ಉಳಿದಿರುವ ಭಯೋತ್ಪಾದಕನನ್ನು ಹುಡುಕುತ್ತಿವೆ.

  • ಕಂದಕಕ್ಕೆ ಬಿದ್ದ ನಂತರವೂ ಬಸ್ಸಿನ ಬಳಿ ಬಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು : ಭಯಾನಕ ಅನುಭವ ಬಿಚ್ಚಿಟ್ಟ ಯತ್ರಾರ್ಥಿ

    ಕಂದಕಕ್ಕೆ ಬಿದ್ದ ನಂತರವೂ ಬಸ್ಸಿನ ಬಳಿ ಬಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು : ಭಯಾನಕ ಅನುಭವ ಬಿಚ್ಚಿಟ್ಟ ಯತ್ರಾರ್ಥಿ

    – ಹಿಂದೂಗಳಿದ್ದ ಬಸ್ಸನ್ನು ಹೊಂಚು ಹಾಕಿ ಸುತ್ತುವರಿದು ಗುಂಡಿನ ದಾಳಿ
    – 9 ಮಂದಿ ಬಲಿ, 33 ಮಂದಿಗೆ ಗಾಯ

    ಶ್ರೀನಗರ: ಬಸ್ಸು ಕಂದಕಕ್ಕೆ ಬಿದ್ದ ಮೇಲೂ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ರಿಯಾಸಿಯಲ್ಲಿ (Reasi) ಬದುಕಿಳಿದ ವೈಷ್ಣೋದೇವಿ ಯಾತ್ರಾರ್ಥಿಗಳು (Vaishno Devi Temple) ತಿಳಿಸಿದ್ದಾರೆ.

    ರಸ್ತೆ ಬದಿಯಲ್ಲಿ ಅವಿತ್ತಿದ್ದ ಉಗ್ರರು ಹಿಂದೂಗಳು ತೆರಳುತ್ತಿದ್ದ ಬಸ್ಸಿನ ಮೇಲೆ ದಾಳಿ ನಡೆಸಿದ್ದಾರೆ. ಮೊದಲು ರಸ್ತೆ ಬದಿಯಿಂದ ದಾಳಿ ನಡೆಸಿದ್ದ ಉಗ್ರರು ಕಂದಕಕ್ಕೆ ಬಿದ್ದ ನಂತರ ಬಸ್ಸು ಬಳಿ ಬಂದು ಹಲವು ನಿಮಿಷ ಗುಂಡಿನ ದಾಳಿ ನಡೆಸಿದ್ದಾರೆ.

    ತಂಡದಲ್ಲಿ 6-7 ಮಂದಿ ಇದ್ದರು. ಎಲ್ಲ ಉಗ್ರರು ಮುಖಕ್ಕೆ ಮಾಸ್ಕ್‌ ಹಾಕಿದ್ದರು. ಆರಂಭದಲ್ಲಿ ಬಸ್ಸನ್ನು ಸುತ್ತುವರಿದು ಎಲ್ಲಾ ಕಡೆಯಿಂದ ದಾಳಿ ನಡೆಸಿದ್ದಾರೆ. ಕೆಳಕ್ಕೆ ಉರಳಿದ ನಂತರವೂ ಬಸ್‌ ಬಳಿ ಬಂದು 20 ನಿಮಿಷ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ದಾಳಿ ವೇಳೆ ನಾವೆಲ್ಲ ಮೌನಕ್ಕೆ ಶರಣಾಗಿದ್ದೆವು. ಯಾವುದೇ ಧ್ವನಿ ಹೊರಬಾರದೇ ಇರುವುದನ್ನು ನೋಡಿದ ಉಗ್ರರು ಎಲ್ಲಾ ಪ್ರಯಾಣಿಕರು ಮೃತಪಟ್ಟಿರಬಹುದು ಎಂದು ಭಾವಿಸಿ ತೆರಳಿದ್ದಾರೆ ಎಂದು ಯಾತ್ರಾರ್ಥಿಯೊಬ್ಬರು ಹೇಳಿದ್ದಾರೆ. ದಾಳಿಯಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದು 33 ಮಂದಿ ಗಾಯಗೊಂಡಿದ್ದಾರೆ.

    ದಾಳಿ ಹೇಗಾಯ್ತು?
    ಜಮ್ಮು ಮತ್ತು ಕಾಶ್ಮೀರದ (Jammu and Kashmir Bus Attack) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಸಂಜೆ 6:10ರ ವೇಳೆಗೆ ಈ ಘಟನೆ ನಡೆದಿದೆ. ಶಿವಖೋಡಿಯ ಗುಹಾ ದೇವಾಲಯದಿಂದ ವೈಷ್ಣೋದೇವಿಯ ಕ್ಷೇತ್ರವಾದ ಕಟ್ರಾಗೆ ಹಿಂದೂಗಳು ಬಸ್ಸಿನಲ್ಲಿ ತೆರಳುತ್ತಿದ್ದರು.  ಇದನ್ನೂ ಓದಿ:ಮೋದಿ ಸಂಪುಟದಲ್ಲಿ ನಡ್ಡಾಗೆ ಸ್ಥಾನ – ಯಾರಾಗ್ತಾರೆ ಬಿಜೆಪಿ ಮುಂದಿನ ಅಧ್ಯಕ್ಷ?

    ರಸ್ತೆಯ ಪಕ್ಕದ ಅರಣ್ಯದಲ್ಲಿ ಅವಿತಿದ್ದ ಉಗ್ರರು ಬಸ್ಸಿನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಬಸ್ಸಿನ ಚಾಲಕನಿಗೆ ಬುಲೆಟ್ ತಗುಲಿದ ಪರಿಣಾಮ ನಿಯಂತ್ರಣ ತಪ್ಪಿ ಬಸ್ಸು ಕಂದಕಕ್ಕೆ ಬಿದ್ದಿದೆ.


    ಶೋಧ ಆರಂಭ:
    ಈ ಪ್ರದೇಶ ಅರಣ್ಯವನ್ನು ಹೊಂದಿದ್ದು, ಈ ಜಾಗದಲ್ಲಿ ಅಡಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ತಿಂಗಳಿನಿಂದ ರಾಜೌರಿ ಮತ್ತು ಪೂಂಚ್‌ನಲ್ಲಿ ಇತರ ದಾಳಿಗಳನ್ನು ನಡೆಸಿಸಿದ ಉಗ್ರರು ಗುಂಪಿನ ಸದಸ್ಯರೇ ಈ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಭಯೋತ್ಪಾದಕರು ದಟ್ಟವಾದ ಕಾಡಿನಲ್ಲಿ ಅಡಗಿ ಬಸ್ಸು ಬರುವುದನ್ನೇ ಕಾಯುತ್ತಿದ್ದರು. ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ಪೊಲೀಸರು ರಾತ್ರಿ 8:10ರ ವೇಳೆಗೆ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕಮರಿಗೆ ಉರುಳಿದ ಬಸ್ – 10 ಯಾತ್ರಾರ್ಥಿಗಳ ಸಾವು, 33 ಮಂದಿಗೆ ಗಾಯ

    ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕಮರಿಗೆ ಉರುಳಿದ ಬಸ್ – 10 ಯಾತ್ರಾರ್ಥಿಗಳ ಸಾವು, 33 ಮಂದಿಗೆ ಗಾಯ

    ಶ್ರೀನಗರ: ಭಯೋತ್ಪಾದಕರು (Terrorists) ನಡೆಸಿದ ಗುಂಡಿನ ದಾಳಿಗೆ ಚಾಲಕನ ನಿಯಂತ್ರಣ ತಪ್ಪಿ ಬಸ್ (Bus) ಕಮರಿಗೆ ಉರುಳಿದ ಪರಿಣಾಮ 10 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 33 ಮಂದಿ ಗಂಭೀರ ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu Kashmir) ರಿಯಾಸಿಯಲ್ಲಿ (Reasi) ನಡೆದಿದೆ.

    ಬಸ್ ಶಿವ ಖೋರಿ ಗುಹಾಂತರ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ದಾಳಿ ನಡೆದಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಬಸ್ ಕಮರಿಗೆ ಬಿದ್ದಿದೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ – 28 ಪ್ರಯಾಣಿಕರಿಗೆ ಗಾಯ

    ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಪೊಲೀಸರು ರಾತ್ರಿ 8:10ರ ವೇಳೆಗೆ ಎಲ್ಲಾ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಹತ್ತು ಸಾವುಗಳು ದೃಢಪಟ್ಟಿವೆ. 33 ಗಾಯಾಳುಗಳನ್ನು ರಿಯಾಸಿ, ತ್ರೇಯತ್ ಮತ್ತು ಜಮ್ಮುವಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಗುಂಡಿಕ್ಕಿ ನಾಲ್ವರ ಹತ್ಯೆಗೈದಿದ್ದ ಪ್ರಕರಣ – ಆರೋಪಿಯನ್ನು ಬಂಧಿಸಿದ ಎನ್‍ಐಎ

    ಗುಂಡಿನ ದಾಳಿಯಿಂದಾಗಿ ಚಾಲಕ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ಬಸ್ ಕಮರಿಗೆ ಬಿದ್ದಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಿಯಾಸಿ ಮೋಹಿತಾ ಶರ್ಮಾ ಹೇಳಿದ್ದಾರೆ. ಪ್ರಯಾಣಿಕರು ಯಾರೂ ಸ್ಥಳೀಯರಲ್ಲ ಮತ್ತು ಅವರ ಗುರುತನ್ನು ಇನ್ನೂ ದೃಢೀಕರಿಸಲಾಗಿಲ್ಲ ತಿಳಿಸಿದ್ದಾರೆ. ಇದನ್ನೂ ಓದಿ: ಹಾವೇರಿಯಲ್ಲಿ 7.91 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ – ನಾಲ್ವರು ಆರೋಪಿಗಳು ಅರೆಸ್ಟ್

    ಮೂಲಗಳ ಪ್ರಕಾರ, ಭಯೋತ್ಪಾದಕರು ರಾಜೌರಿ, ಪೂಂಚ್ ಮತ್ತು ರಿಯಾಸಿಯ ಮೇಲ್ಭಾಗದಲ್ಲಿ ಅಡಗಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಉಗ್ರರನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸ್, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ಮಹಿಳೆಯನ್ನು ತುಂಡಾಗಿ ಕತ್ತರಿಸಿ ರೈಲಿನಲ್ಲಿಟ್ಟ ದುಷ್ಕರ್ಮಿಗಳು

    ಘಟನೆಯ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರೆ ನಾಯಕರು ಸಂತಾಪ ಸೂಚಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಹೊಸದಾಗಿ ರಚನೆಯಾದ ಎನ್‌ಡಿಎ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ

  • ವಿಶೇಷ ಸ್ಥಾನಮಾನ ರದ್ದು ಬಳಿಕ ಜಮ್ಮು-ಕಾಶ್ಮೀರದಲ್ಲಿ ‘ಇಂಡಿಯಾ’ ಒಕ್ಕೂಟ ಮುನ್ನಡೆ

    ವಿಶೇಷ ಸ್ಥಾನಮಾನ ರದ್ದು ಬಳಿಕ ಜಮ್ಮು-ಕಾಶ್ಮೀರದಲ್ಲಿ ‘ಇಂಡಿಯಾ’ ಒಕ್ಕೂಟ ಮುನ್ನಡೆ

    ಶ್ರೀನಗರ: ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.

    ಐಎನ್‌ಡಿಐಎ ಒಕ್ಕೂಟ (INDIA Bloc) ಜಮ್ಮು ಮತ್ತು ಕಾಶ್ಮೀರದಲ್ಲಿ 5 ರ ಪೈಕಿ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್‌ಡಿಎಗೆ (NDA) 1 ಸ್ಥಾನ ಸಿಕ್ಕಿದೆ ಎಂದು ಟ್ರೆಂಡ್‌ಗಳು ಹೇಳುತ್ತಿವೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಫಲಿತಾಂಶ ನೋಡಲು ಪ್ರಜ್ವಲ್ ರೇವಣ್ಣಗೆ ಅವಕಾಶ

    ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪೈಕಿ ಒಮರ್ ಅಬ್ದುಲ್ಲಾ ಮುನ್ನಡೆಯಲ್ಲಿದ್ದಾರೆ. ಆದರೆ ಮೆಹಬೂಬಾ ಮುಫ್ತಿ ಅವರು 60,000 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

    ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ (NC) ಒಮರ್ ಅಬ್ದುಲ್ಲಾ ಅವರು ತಮ್ಮ ಪ್ರತಿಸ್ಪರ್ಧಿ ಜೆ & ಕೆ ಪೀಪಲ್ಸ್ ಕಾನ್ಫರೆನ್ಸ್ (JKPC) ನ ಸಜಾದ್ ಗನಿ ಲೋನ್ ಅವರಿಗಿಂತ ಮುಂದಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯನ್ನು ಶೀಘ್ರದಲ್ಲಿಯೇ ನಡೆಸುವುದಾಗಿ ಚುನಾವಣಾ ಆಯೋಗ ಸೋಮವಾರ ಹೇಳಿತ್ತು. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನದ ಪ್ರಮಾಣದಿಂದ ಚುನಾವಣಾ ಆಯೋಗವು ಉತ್ಸುಕವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜನರ ಉತ್ಸುಕತೆ ತೋರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: NDA vs I.N.D.I.A ನೆಕ್‌ ಟು ನೆಕ್‌ ಫೈಟ್‌ – ಎನ್‌ಡಿಎ 295 ಕ್ಷೇತ್ರಗಳಲ್ಲಿ ಮುನ್ನಡೆ

  • ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಕಂದಕಕ್ಕೆ ಉರುಳಿ‌ 15 ಮಂದಿ ದುರ್ಮರಣ

    ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಕಂದಕಕ್ಕೆ ಉರುಳಿ‌ 15 ಮಂದಿ ದುರ್ಮರಣ

    ಶ್ರೀನಗರ: ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಕಂದಕಕ್ಕೆ ಉರುಳಿ‌ 15 ಮಂದಿ ಸಾವನ್ನಪ್ಪಿದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu Kashmir) ರಾಜೌರಿ ಜಿಲ್ಲೆಯಲ್ಲಿ ಇಂದು (ಗುರುವಾರ) ನಡೆದಿದೆ.

    ಮಾಹಿತಿ ಪ್ರಕಾರ, ಉತ್ತರ ಪ್ರದೇಶದ ಈ ಬಸ್ ಜಮ್ಮುವಿನಿಂದ ಶಿವಖೋಡಿಗೆ ಹೋಗುತ್ತಿತ್ತು. ಬಸ್ಸಿನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಇದನ್ನೂ ಓದಿ: ಮಂಡಿಯೂರಿ ವೃದ್ಧೆ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ ವೀಡಿಯೋ ವೈರಲ್‌

    ಶಿವಖೋಡಿಗೆ ತೆರಳುತ್ತಿದ್ದ ಬಸ್‌ ಅಖ್ನೂರ್ ನ ತುಂಗಿ ಮೋರ್ ಎಂಬಲ್ಲಿ ರಸ್ತೆಯಿಂದ ಜಾರಿ ಸುಮಾರು 150 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ 9 ಮಂದಿ ಮೃತಪಟ್ಟರೆ, 30 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೇ ಗಾಯಾಳುಗಳನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಲ್ಲರನ್ನೂ ಜಮ್ಮುವಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಹಲವು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳದಲ್ಲಿ ಎಸ್‌ಡಿಎಂ ಅಖ್ನೂರ್ ಲೇಖ್ ರಾಜ್, ಎಸ್‌ಡಿಪಿಒ ಅಖ್ನೂರ್ ಮೋಹನ್ ಶರ್ಮಾ, ಪೊಲೀಸ್ ಠಾಣೆ ಪ್ರಭಾರಿ ಅಖ್ನೂರ್ ತಾರಿಕ್ ಅಹ್ಮದ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

  • ಐದನೇ ಹಂತದ ಮತದಾನ ಮುಕ್ತಾಯ – ಭಾರೀ ಸಂಖ್ಯೆಯಲ್ಲಿ ಮತದಾನಗೈದ ಕಾಶ್ಮೀರಿ ಪಂಡಿತರು

    ಐದನೇ ಹಂತದ ಮತದಾನ ಮುಕ್ತಾಯ – ಭಾರೀ ಸಂಖ್ಯೆಯಲ್ಲಿ ಮತದಾನಗೈದ ಕಾಶ್ಮೀರಿ ಪಂಡಿತರು

    ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election) ಐದನೇ ಹಂತ ಮುಕ್ತಾಯವಾಗಿದೆ. 8 ರಾಜ್ಯಗಳ 49 ಸ್ಥಾನಗಳಲ್ಲಿ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಸುಗಮ ಮತದಾನ ನಡೆದಿದೆ. ರಾಹುಲ್ ಗಾಂಧಿ, ಸ್ಮೃತಿ ಇರಾನಿ ಸೇರಿ 617 ಅಭ್ಯರ್ಥಿಗಳ ಮತ ಭವಿಷ್ಯ ಮತಯಂತ್ರ ಸೇರಿದೆ. ಇದರೊಂದಿಗೆ ಒಟ್ಟು 428 ಕ್ಷೇತ್ರಗಳಲ್ಲಿ ಚುನಾವಣೆ ಮುಕ್ತಾಯಗೊಂಡಿದೆ.

    ಸಂಜೆ ಐದು ಗಂಟೆ ಹೊತ್ತಿಗೆ 57.95% ಮತದಾನ ನಡೆದಿದೆ. ಪಶ್ಚಿಮ ಬಂಗಾಳ (West Bengal) ಹೆಚ್ಚು ಅಂದ್ರೆ 73.07% ಮಹಾರಾಷ್ಟದಲ್ಲಿ (Maharashtra) ಕಡಿಮೆ ಅಂದ್ರೆ 50.02% ಮತದಾನ ನಡೆದಿದೆ. ಜಮ್ಮು ಕಾಶ್ಮೀರದಲ್ಲಿ 55.49% ವೋಟಿಂಗ್ ಆದರೆ ಲಡಾಖ್‌ನಲ್ಲಿ 68.47% ಮತದಾನ ನಡೆದಿದೆ.  ಇದನ್ನೂ ಓದಿ: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಗೌರವಾರ್ಥ ಮಂಗಳವಾರ ಭಾರತದಲ್ಲಿ ಶೋಕಾಚರಣೆ


    ರಾಹುಲ್ ಗಾಂಧಿ ರಾಯ್‌ಬರೇಲಿಯ ಮತಗಟ್ಟೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೈಶ್ರೀರಾಮ್ ಘೋಷಣೆ ಮೊಳಗಿಸಿದ ಘಟನೆಯೂ ನಡೆದಿದೆ. ಮಂಡಿಯಲ್ಲಿ ಕಂಗನಾ ರಣಾವತ್‌ಗೆ ಕಾಂಗ್ರೆಸ್ ಕಾರ್ಯಕರ್ತರು, ಬರಕ್‌ಪುರದಲ್ಲಿ ಬಿಜೆಪಿಯ ಅರ್ಜುನ್‌ಸಿಂಗ್‌ಗೆ ಟಿಎಂಸಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕಾಶ್ಮೀರದ ಪಂಡಿತರು (Kashmiri Pandits) ಬಾರಮುಲ್ಲಾದಲ್ಲಿ ಮೊದಲ ಬಾರಿ ಭಾರೀ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.

    2019ರಲ್ಲಿ ಈ 49 ಕ್ಷೇತ್ರಗಳಲ್ಲಿ 39ನ್ನು ಬಿಜೆಪಿ ಗೆದ್ದಿತ್ತು. ಕೇವಲ 8 ಕ್ಷೇತ್ರಗಳಲ್ಲಿ ಮಾತ್ರ ಐಎನ್‌ಡಿಐಎ (INDIA) ಗೆದ್ದಿತ್ತು. ಇಂದು ಒಡಿಶಾ ವಿಧಾನಸಭೆಗೆ ಮೂರನೇ ಹಂತದ ಚುನಾವಣೆ ನಡೆಯಿತು.

  • ಚುನಾವಣೆಗೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಗುಂಡಿನ ದಾಳಿಗೆ ಮಾಜಿ ಸರ್ಪಂಚ್‌ ಬಲಿ, ದಂಪತಿಗೆ ಗಾಯ!

    ಚುನಾವಣೆಗೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಗುಂಡಿನ ದಾಳಿಗೆ ಮಾಜಿ ಸರ್ಪಂಚ್‌ ಬಲಿ, ದಂಪತಿಗೆ ಗಾಯ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನಕ್ಕೆ ಕ್ಷಣನೆ ಬಾಕಿಯಿರುವಾಗಲೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಒಂದೇ ದಿನ ಎರಡು ಕಡೆ ಉಗ್ರರು ನಾಗರಿಕರು ಹಾಗೂ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ.

    ಇಲ್ಲಿನ ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಾಜಿ ಸರ್ಪಂಚ್‌ (Ex Sarpanch) ಒಬ್ಬರು ಹತರಾದರೆ, ಅನಂತನಾಗ್‌ ಜಿಲ್ಲೆಯಲ್ಲಿ ರಾಜಸ್ಥಾನದ ದಂಪತಿಯು ಗಾಯಗೊಂಡಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು (J & K Police) ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳು ಹೆಚ್ಚಾಗಿದ್ದು, ಕಳೆದ ಏಪ್ರಿಲ್‌ನಲ್ಲೂ ಶೋಪಿಯಾನ್‌ ಜಿಲ್ಲೆಯಲ್ಲಿ ಟೂರಿಸ್ಟ್‌ ಗೈಡ್‌ ಒಬ್ಬನನ್ನ ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: ಜೀನ್ಸ್ ಪ್ಯಾಂಟ್, ಟೀಶರ್ಟ್‍ನಲ್ಲಿಟ್ಟು ಸಾಗಿಸುತ್ತಿದ್ದ 1.96 ಕೋಟಿ ಮೌಲ್ಯದ ಚಿನ್ನ ಸೀಜ್

    ಶೋಪಿಯಾನ್‌ ಜಿಲ್ಲೆಯ ಹುರ್ಪುರ ಗ್ರಾಮದಲ್ಲಿ ಉಗ್ರರ ದಾಳಿಯಲ್ಲಿ (Terrorist Attacks) ಮಾಜಿ ಸರ್ಪಂಚ್‌ ಐಜಾಜ್‌ ಅಹ್ಮದ್‌ ಶೇಖ್‌ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆಗೆ ದೇಹ ಸ್ಪಂಧಿಸದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 10ಕ್ಕೂ ಹೆಚ್ಚು ಅನಧಿಕೃತ ಕೋಚಿಂಗ್‌ ಸೆಂಟರ್‌ಗಳ ಮೇಲೆ ದಾಳಿ – ಸೋಮವಾರದ ಒಳಗೆ ಬಂದ್‌ಗೆ ಸೂಚನೆ!

    ದಂಪತಿಗೆ ಗಾಯ:
    ಅನಂತನಾಗ್‌ನಲ್ಲಿಯೂ ಉಗ್ರರ ದಾಳಿ ನಡೆದಿದ್ದು, ರಾಜಸ್ಥಾನ ಮೂಲದ ಪತಿ-ಪತ್ನಿ (Tourist Couple) ಗಾಯಗೊಂಡಿದ್ದಾರೆ. ಟೂರಿಸ್ಟ್‌ ಕ್ಯಾಂಪ್‌ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಪರ್ಹಾ ಹಾಗೂ ಅವರ ಪತಿ ತಬ್ರೇಜ್‌ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಕಡೆ ದಾಳಿ ಮಾಡಿದವರು ಯಾವ ಸಂಘಟನೆಗೆ ಸೇರಿದವರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೇ 20ರಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರಕ್ಕೆ (Lok Sabha Constituency) ಮತದಾನ ನಡೆಯಲಿದೆ.

  • ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಮೂವರು ಭಯೋತ್ಪಾದಕರ ಹತ್ಯೆ

    ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಮೋಸ್ಟ್‌ ವಾಂಟೆಡ್‌ ಉಗ್ರ ಸೇರಿ ಮೂವರು ಭಯೋತ್ಪಾದಕರ ಹತ್ಯೆ

    ಶ್ರೀನಗರ: ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಎಲ್‌ಇಟಿ ಕಮಾಂಡರ್ ಸೇರಿ ಮೂವರ ಹತ್ಯೆಯಾಗಿದೆ.

    ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ರೆಡ್ವಾನಿ ಪಯೀನ್ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ.

    ರೆಡ್ವಾನಿ ಪಯೀನ್‌ನ ನಿವಾಸಿ ಬಸಿತ್ ಅಹ್ಮದ್ ದಾರ್, ಲಷ್ಕರ್-ಎ-ತೈಬಾ (ಎಲ್‌ಇಟಿ) ಆಫ್‌ಶೂಟ್ ಗ್ರೂಪ್ ಮತ್ತು ದಿ ರೆಸಿಸ್ಟೆಂಟ್ ಫ್ರಂಟ್ (ಟಿಆರ್‌ಎಫ್)ನ ಕಮಾಂಡರ್ ಆಗಿದ್ದ. ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯ ಹತ್ಯೆಗಳಲ್ಲಿ ಭಾಗಿಯಾಗಿದ್ದರು. ದಾರ್ ಜೊತೆ ಹತ್ಯೆಗೊಳಗಾದ ಇಬ್ಬರು ಎಲ್‌ಇಟಿ ಭಯೋತ್ಪಾದಕರು ಮೋಮಿನ್ ಗುಲ್ಜಾರ್ ಮತ್ತು ಫಾಹಿಮ್ ಅಹ್ಮದ್ ಬಾಬಾ ಎಂದು ಗುರುತಿಸಲಾಗಿದೆ.

    18 ಹತ್ಯೆಗಳಲ್ಲಿ ಭಾಗಿಯಾಗಿದ್ದವರನ್ನು ಎನ್‌ಕೌಂಟರ್‌ ಮಾಡಿರುವುದು ನಮಗೆ ದೊಡ್ಡ ಸಾಧನೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ, ನಾಗರಿಕರು ಮತ್ತು ಅಲ್ಪಸಂಖ್ಯಾತರು ಸೇರಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿ ಕೆ ಬಿರ್ಡಿ ತಿಳಿಸಿದ್ದಾರೆ.

  • ಸೈನಿಕರ ಮೇಲೆ ದಾಳಿ – ಇಬ್ಬರು ಪಾಕ್ ಉಗ್ರರ ತಲೆಗೆ 20 ಲಕ್ಷ ಬಹುಮಾನ ಘೋಷಿಸಿದ IAF

    ಸೈನಿಕರ ಮೇಲೆ ದಾಳಿ – ಇಬ್ಬರು ಪಾಕ್ ಉಗ್ರರ ತಲೆಗೆ 20 ಲಕ್ಷ ಬಹುಮಾನ ಘೋಷಿಸಿದ IAF

    ಶ್ರೀನಗರ: ಇತ್ತೀಚೆಗೆ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ ವಾಹನದ ಮೇಲೆ ನಡೆದ ದಾಳಿಗೆ ಹೊಣೆಗಾರರಾಗಿರುವ ಇಬ್ಬರು ಪಾಕಿಸ್ತಾನಿ (Pakistan) ಭಯೋತ್ಪಾದಕರ ರೇಖಾಚಿತ್ರಗಳನ್ನು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆ ಬಹಿರಂಗಪಡಿಸಿದೆ.

    ಶಂಕಿತ ಉಗ್ರರ ಬಂಧನಕ್ಕೆ ನೆರವಾಗುವ ಯಾವುದೇ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭದ್ರತಾ ಪಡೆ (Indian Air Force) ಘೋಷಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ- ಫಾರೂಖ್ ಅಬ್ದುಲ್ಲ ವಿವಾದಾತ್ಮಕ ಹೇಳಿಕೆ

    ಶನಿವಾರ ಸಂಜೆ ಪೂಂಚ್‌ನ ಶಾಸಿತಾರ್ ಬಳಿ ಐಎಎಫ್ (IAF) ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐಎಎಫ್ ಕಾರ್ಪೋರಲ್ ವಿಕ್ಕಿ ಪಹಾಡೆ ಪ್ರಾಣ ಕಳೆದುಕೊಂಡಿದ್ದರು. ಅಲ್ಲದೇ ಘಟನೆಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದರು. ದಾಳಿಯ ಬಳಿಕ ಶಾಸಿತಾರ್ ಪ್ರದೇಶದಲ್ಲಿ ಸಶಸ್ತ್ರ ಪಡೆಗಳು ಸಶಸ್ತ್ರ ಪಡೆಗಳು ಮಹತ್ವದ ಶೋಧ ಕಾರ್ಯಾಚರಣೆ ನಡೆಸಿದವು. ಇದನ್ನೂ ಓದಿ: ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

    ದಾಳಿಯಲ್ಲಿ ದುರಂತವಾಗಿ ಪ್ರಾಣ ಕಳೆದುಕೊಂಡ ವಿಕ್ಕಿ ಪಹಾಡೆ, ತನ್ನ ಸಹೋದರಿಯ ಮದುವೆಗೆ 15 ದಿನಗಳ ರಜೆ ತೆಗೆದುಕೊಂಡಿದ್ದು, ಬಳಿಕ ಕೆಲಸಕ್ಕೆ ಬಂದಿದ್ದರು. ಮಧ್ಯಪ್ರದೇಶದ ಚಿಂದ್ವಾರದ ನೋನಿಯಾ ಕರ್ಬಲ್ ಪ್ರದೇಶದ ಪಹಾಡೆಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದ್ದರು. 2011 ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಅವರು ತಮ್ಮ ಪತ್ನಿ ರೀನಾ ಮತ್ತು ಮಗ ಹಾರ್ದಿಕ್ ಅವರನ್ನು ಅಗಲಿದ್ದಾರೆ.

    ಸಹೋದರಿ ಗೀತಾ ಪಹಾಡೆ ಅವರು ತಮ್ಮ ಸಹೋದರನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ನನಗೆ ನನ್ನ ಸಹೋದರನ ಬಗ್ಗೆ ಹೆಮ್ಮೆ ಇದೆ. ನಿನ್ನೆ ಮೊನ್ನೆಯಷ್ಟೇ ಸಹೋದರನ ನಿಧನ ಬಗ್ಗೆ ನನಗೆ ತಿಳಿದಿತ್ತು. ನನ್ನ ಸಹೋದರನಿಗೆ ನ್ಯಾಯ ಬೇಕು ಎಂದು ಹೇಳಿದರು.

  • ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

    ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ

    ಶ್ರೀನಗರ: ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ (IAF) ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಗಿಳಿದ ಸೇನೆ (Indian Army) ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.

    ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಸೇನೆಯು ಹೆಲಿಕಾಪ್ಟರ್ ಬಳಸಿ ದಾಳಿ ನಡೆದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೈಮಾನಿಕ ಕಣ್ಗಾವಲು ಕೂಡ ನಡೆಸಿದೆ. ಸ್ಥಳಕ್ಕೆ ಸೇನೆಯ ಅಧಿಕಾರಿಗಳು, ಗುಪ್ತಚರ ಸಂಸ್ಥೆ ಅಧಿಕಾರಿಗಳು ಹಾಗೂ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದ ಪೂಂಚ್‌ನಲ್ಲಿ ವಾಯು ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರ ದಾಳಿ – ಓರ್ವ ಯೋಧ ಹುತಾತ್ಮ

    ಶಹಸಿತಾರ್ ಬಳಿ ಶನಿವಾರ ಸಂಜೆ ನಡೆದ ದಾಳಿಯಲ್ಲಿ ಐವರು ಐಎಎಫ್ ಸಿಬ್ಬಂದಿ ಗಾಯಗೊಂಡು, ಒಬ್ಬರು ಮೃತಪಟ್ಟಿದ್ದರು. ದಾಳಿ ನಡೆದ ಬಳಿಕ ಉಗ್ರರು ಸಮೀಪದ ಅರಣ್ಯಕ್ಕೆ ಪರಾರಿಯಾಗಿದ್ದರು. ದಾಳಿಗೆ ಉಗ್ರರು ಎಕೆ ಅಸಾಲ್ಟ್ ರೈಫಲ್, ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಮತ್ತು ಸ್ಟೀಲ್ ಬುಲೆಟ್‍ಗಳನ್ನು ಬಳಸಿದ್ದಾರೆ. ಉಗ್ರರಿಗಾಗಿ ಸೇನೆ ಶೋಧ ಕಾರ್ಯ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2003 ಮತ್ತು 2021ರ ನಡುವೆ ಈ ಭಾಗದಲ್ಲಿ ಯಾವುದೇ ಭಯೋತ್ಪಾದನಾ ದಾಳಿಗಳಿಲ್ಲದೆ ಶಾಂತಿ ನೆಲೆಸಿತ್ತು. ಕಳೆದ ವರ್ಷ ಇದೇ ಭಾಗದಲ್ಲಿ ಪ್ರಮುಖ ಭಯೋತ್ಪಾದಕ ದಾಳಿ ನಡೆದಿತ್ತು. ಇದನ್ನೂ ಓದಿ: ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ್ದಕ್ಕೆ ಯುವಕನ ಕೊಲೆ