Tag: jammu kashmir

  • ಜಮ್ಮು ಕಾಶ್ಮೀರದ ದೋಡಾದಲ್ಲಿ ಎನ್‌ಕೌಂಟರ್‌ – ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದ ದೋಡಾದಲ್ಲಿ ಎನ್‌ಕೌಂಟರ್‌ – ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu Kashmir) ದೋಡಾ ಜಿಲ್ಲೆಯಲ್ಲಿ ಉಗ್ರರ ಜೊತೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ (Encounter) ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಭಾರತೀಯ ಸೇನಾ (Indian Army) ಯೋಧರು ಹುತಾತ್ಮರಾಗಿದ್ದಾರೆ.

    ಭಯೋತ್ಪಾದಕರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ದೋಡಾದ (Doda) ದೇಸಾದ ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾತ್ರಿ 9 ಗಂಟೆಯಿಂದ ಉಗ್ರರ ಜೊತೆ ಗುಂಡಿನ ಕಾಳಗ ಆರಂಭವಾಗಿದೆ. ಉಗ್ರರು ಬೆಟ್ಟದ ತುದಿಯಲ್ಲಿ ಅವಿತುಕೊಂಡು ದಾಳಿ ಮಾಡುತ್ತಿರುವ ಕಾರಣ ಕಾರ್ಯಾಚರಣೆ ಕಷ್ಟವಾಗುತ್ತಿದೆ.

    ಕಳೆದ ವಾರ ಕಥುವಾದಲ್ಲಿ ಐವರು ಯೋಧರು ಹುತಾತ್ಮರಾದ ನಂತರ ಜಮ್ಮು ಪ್ರದೇಶದಲ್ಲಿ ನಡೆದ ಎರಡನೇ ಪ್ರಮುಖ ಎನ್‌ಕೌಂಟರ್ ಇದಾಗಿದೆ. ಈ ದಾಳಿಯಲ್ಲಿ ಐವರು ಸೈನಿಕರು ಗಾಯಗೊಂಡಿದ್ದರು, ಕನಿಷ್ಠ 12 ಸೈನಿಕರನ್ನು ಹೊತ್ತ ಎರಡು ಟ್ರಕ್‌ಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು. ಇದನ್ನೂ ಓದಿ: ಹೆಬ್ಬಾಳೆ ಸೇತುವೆ ಮುಳುಗಡೆ , ಕಳಸ-ಹೊರನಾಡು ಸಂರ್ಪಕ ಕಡಿತ

    ಭಯೋತ್ಪಾದಕರು 500 ಮೀಟರ್ ದೂರದಿಂದ ಟ್ರಕ್‌ಗಳನ್ನು ಗುರಿಯಾಗಿಸಿ ಗ್ರೆನೇಡ್‌ ಎಸೆದಿದ್ದರು. ಉಗ್ರರು ಅಸಾಲ್ಟ್‌ ರೈಫಲ್‌ ಬಳಸಿ ದಾಳಿ ನಡೆಸಿದ್ದರು. ಜಮ್ಮು ಪ್ರದೇಶ ಭಯೋತ್ಪಾದನೆಯಿಂದ ಮುಕ್ತವಾಗಿತ್ತು. ಲೋಕಸಭಾ ಚುನಾವಣಾ ಸಮಯದಲ್ಲಿ ಜಮ್ಮು ಭಾಗದಲ್ಲಿ ಭಾರೀ ಪ್ರಮಾಣದ ಮತದಾನ ನಡೆದಿತ್ತು. ಳೆದ 32 ತಿಂಗಳುಗಳಲ್ಲಿ ಜಮ್ಮು ಪ್ರದೇಶದಲ್ಲಿ ಉಗ್ರರ ಜೊತೆಗಿನ ಕಾಳಗದಲ್ಲಿ 48 ಯೋಧರು ಹುತಾತ್ಮರಾಗಿದ್ದಾರೆ.

     

  • 200 ಅಡಿ ಆಳದ ಕಮರಿಗೆ ಉರುಳಿದ ಬಸ್ – ಇಬ್ಬರು ಸಾವು, 25 ಮಂದಿಗೆ ಗಾಯ

    200 ಅಡಿ ಆಳದ ಕಮರಿಗೆ ಉರುಳಿದ ಬಸ್ – ಇಬ್ಬರು ಸಾವು, 25 ಮಂದಿಗೆ ಗಾಯ

    ಶ್ರೀನಗರ: 28 ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಬಸ್‌ವೊಂದು (Bus) ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಉರುಳಿದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu Kashmir) ದೋಡಾ (Doda) ಜಿಲ್ಲೆಯಲ್ಲಿ ನಡೆದಿದೆ.

    ಖಾಸಗಿ ಬಸ್ ಭಾಲೆಸ್ಸಾದಿಂದ ಥಾತ್ರಿಗೆ ತೆರಳುತ್ತಿದ್ದಾಗ ಬೆಳಗ್ಗೆ 10:30ರ ಸುಮಾರಿಗೆ ಭತ್ಯಾಸ್ ಬಳಿ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲೇ ಒಬ್ಬ ಮಹಿಳೆ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅನಂತ್‌ ಅಂಬಾನಿ ಮದುವೆ ಸಮಾರಂಭದಲ್ಲಿ ದೀದಿ – ಹರಿದು ಬಂತು ರಾಜಕೀಯ ನಾಯಕರ ದಂಡು!

    ಘಟನೆಯಲ್ಲಿ 9 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾರತೀಯ ಸೇನೆ ಮತ್ತು ಸ್ಥಳೀಯರ ನೆರವಿನಿಂದ ಗಾಯಾಳುಗಳಿಗೆ ದೋಡಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – ತೆರಿಗೆ ಪಾವತಿಸೋ ಮಂದಿಗೆ ಉಚಿತ ವಿದ್ಯುತ್‌ ಕಟ್

  • ದೆಹಲಿಯಂತೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ

    ದೆಹಲಿಯಂತೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ

    – ವರ್ಗಾವಣೆ, ನೇಮಕಾತಿ, ಯೋಜನೆಗಳ ಜಾರಿಗೆ ಸರ್ಕಾರಕ್ಕೆ ಬೇಕು ಅನುಮತಿ

    ನವದೆಹಲಿ: ಲೆಫ್ಟಿನೆಂಟ್ ಗವರ್ನರ್‌ಗೆ (Lt Governor) ಹೆಚ್ಚಿನ ಅಧಿಕಾರವನ್ನು ನೀಡಲು ಗೃಹ ವ್ಯವಹಾರಗಳ ಸಚಿವಾಲಯ ಜಮ್ಮು ಮತ್ತು ಕಾಶ್ಮೀರ (Jammu And Kashmir) ಮರುಸಂಘಟನೆ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕೂಡ ಈಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ನಂತೆ ಆಡಳಿತಾತ್ಮಕ ಅಧಿಕಾರವನ್ನು ಪಡೆಯಲಿದ್ದಾರೆ.

    ಹೊಸ ತಿದ್ದುಪಡಿ ಅನ್ವಯ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಅನುಮತಿಯಿಲ್ಲದೆ ವರ್ಗಾವಣೆ, ನೇಮಕಾತಿ ಅಥವಾ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. 2019ರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯ ಸೆಕ್ಷನ್ 55ರ ಅಡಿಯಲ್ಲಿ ತಿದ್ದುಪಡಿ ಮಾಡಿದ ನಿಯಮಗಳನ್ನು ಗೃಹ ಇಲಾಖೆ ಸೂಚಿಸಿದೆ. ಇದರಲ್ಲಿ ಎಲ್‌ಜಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಹೊಸ ವಿಭಾಗಗಳನ್ನು ಸೇರಿಸಿದೆ. ಇದನ್ನೂ ಓದಿ: ಆಟೋ ಚಕ್ರದಿಂದ ಮೈಗೆ ಚಿಮ್ಮಿದ ಕೆಸರು – ಮರಳಿ ಬರುವವರೆಗೂ ಕಾದು ಚಾಲಕನಿಗೆ ಚಾಕು ಇರಿತ

    ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಅಲ್ಲಿ ಚುನಾವಣೆ ನಡೆದಿಲ್ಲ. ಆದರೆ ಕೇಂದ್ರ ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ನಡೆಸಬಹುದಾಗಿದ್ದು, ಅಲ್ಲಿ ಸರ್ಕಾರ ರಚನೆಯಾಗಲಿದೆ. ಸರ್ಕಾರ ರಚನೆಗೂ ಮುನ್ನ ಲೆಫ್ಟಿನೆಂಟ್ ಗವರ್ನರ್‌ಗೆ ಚುನಾಯಿತ ಸರ್ಕಾರಕ್ಕಿಂತ ಹೆಚ್ಚಿನ ಅಧಿಕಾರವನ್ನು ಕೇಂದ್ರ ಸರ್ಕಾರ ನೀಡಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಭೂಕುಸಿತ – ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಕನ್ನಡಿಗರು ಪಾರು

    ಈ ನಿಯಮದಿಂದ ದೆಹಲಿಯಲ್ಲಿ ಆಪ್ ಸರ್ಕಾರ ಮತ್ತು ಲೆಫ್ಟಿನೆಂಟ್ ಗರ್ವನರ್ ನಡುವೆ ಆಗಾಗ ಸಮರ ನಡೆಯುತ್ತಲೇ ಇರುತ್ತದೆ. ಲೆಫ್ಟಿನೆಂಟ್ ಗರ್ವನರ್ ಬದಲು ಜನರಿಂದ ಆಯ್ಕೆಯಾಗಿ ಬಂದ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು. ನೇಮಕಾತಿ, ವರ್ಗಾವಣೆ ಮತ್ತು ಯೋಜನೆಗಳ ಜಾರಿ ವಿಚಾರದಲ್ಲಿ ವಿಧಾನಸಭೆಗೆ ಹೆಚ್ಚು ಮಾನ್ಯತೆ ನೀಡಬೇಕು ಎಂದು ಈಗಾಗಲೇ ಆಪ್ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿದೆ. ಇದನ್ನೂ ಓದಿ: 6 ತಿಂಗಳ ಹಿಂದೆ ಮೃತಪಟ್ಟಿದ್ದ ಅಧಿಕಾರಿಗೆ ವರ್ಗಾವಣೆ – ಪೌರಾಡಳಿತ ಇಲಾಖೆ ಯಡವಟ್ಟು

  • ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ – ಐವರು ಸೈನಿಕರು ಹುತಾತ್ಮ!

    ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ – ಐವರು ಸೈನಿಕರು ಹುತಾತ್ಮ!

    – ಎರಡು ದಿನಗಳಲ್ಲಿ 7 ಮಂದಿ ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and kashmir) ಕಥುವಾ ಜಿಲ್ಲೆಯ ದೂರದ ಮಚೇಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಸೈನಿಕರು (Army Personnel) ಹುತಾತ್ಮರಾಗಿದ್ದಾರೆ. 6 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

    ಕಥುವಾ ಪಟ್ಟಣದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಲ ಸೇನಾ ವಾಹನಗಳು ಈ ಪ್ರದೇಶದಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದವು ಎಂದು ಹೇಳಲಾಗಿದೆ. ಇದನ್ನೂ ಓದಿ: ಅಪಘಾತಕ್ಕೂ ಮುನ್ನ 18,730 ರೂ. ಮದ್ಯ ಕುಡಿದಿದ್ದ ಮಿಹಿರ್‌ ಶಾ – ಮಗ ಮಾಡಿದ ತಪ್ಪಿಗೆ ತಂದೆಗೆ ಜೈಲು!

    ಕತುವಾ ಜಿಲ್ಲೆಯ ಮಚೇಡಿ ಪ್ರದೇಶದ ಜೆಂಡಾ ನಲ್ಲಾ ಗ್ರಾಮದ ಬಳಿ ಸೋಮವಾರ (ಜು.8) ಮಧ್ಯಾಹ್ನ 3.30ರ ಸುಮಾರಿಗೆ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ನಮ್ಮ ಸೈನಿಕರು ಸಹ ಪ್ರತಿದಾಳಿ ನಡೆಸಿದ್ದರು. ಆದ್ರೆ ದುರದೃಷ್ಟವಶಾತ್‌ ಐವರು ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆಯ ಕಾರ್ಪ್ಸ್‌ ಅಡಿಯಲ್ಲಿ ಈ ಪ್ರದೇಶ ಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ 2 ದಿನಗಳಲ್ಲಿ ಇದು ಸೇನೆಯ ಮೇಲೆ ನಡೆದ 2ನೇ ದಾಳಿಯಾಗಿದೆ. ಜೊತೆಗೆ ಒಂದು ವಾರದಲ್ಲಿ ಸೇನಾ ವಾಹನವನ್ನೇ ಗುರಿಯಾಗಿಸಿ ನಡೆಸಿದ 2ನೇ ದಾಳಿಯೂ ಆಗಿದೆ. ಇತ್ತೀಚೆಗೆ ಇಲ್ಲಿನ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 6 ಭಯೋತ್ಪಾದಕರು ಮೃತಪಟ್ಟಿದ್ದರು. ಇದನ್ನೂ ಓದಿ: ಋತುಚಕ್ರದ ವೇಳೆ ಮಹಿಳೆಯರಿಗೆ ರಜೆ ನೀಡೋದು ಸರ್ಕಾರದ ನೀತಿಯ ವಿಷಯ- ವಿಚಾರಣೆ ನಡೆಸಲು ಸುಪ್ರೀಂ ನಕಾರ

    ಸೇನೆಯ ವಾಹನ ತೆರಳುವ ಕುರಿತು ಮಾಹಿತಿ ಪಡೆದಿದ್ದ ಉಗ್ರರು, ಯೋಜನೆ ರೂಪಿಸಿ, ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಸಮೀಪದ ಅರಣ್ಯ ಪ್ರದೇಶದಲ್ಲಿ ಸುಮಾರು ಇಬ್ಬರು-ಮೂವರು ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಹೆಚ್ಚಿನ ಸೈನಿಕರನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

  • ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರ ದಾಳಿ – 2 ದಿನಗಳಲ್ಲಿ 2ನೇ ಅಟ್ಯಾಕ್‌!

    ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರ ದಾಳಿ – 2 ದಿನಗಳಲ್ಲಿ 2ನೇ ಅಟ್ಯಾಕ್‌!

    – ಇಬ್ಬರು ಯೋಧರಿಗೆ ಗಾಯ, ಉಗ್ರರಿಗಾಗಿ ಶೋಧ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಉಗ್ರರು ಮತ್ತೆ ಅಟ್ಟಹಾಸ ಮುಂದುವರಿಸಿದ್ದಾರೆ. ಕಥುವಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ (Terrorists Attack) ನಡೆಸಿದ್ದಾರೆ.

    ಕತುವಾ ಜಿಲ್ಲೆಯ ಮಚೇಡಿ ಪ್ರದೇಶದ ಜೆಂಡಾ ನಲ್ಲಾ ಗ್ರಾಮದ ಬಳಿ ಸೋಮವಾರ (ಜು.8) ಮಧ್ಯಾಹ್ನ 3.30ರ ಸುಮಾರಿಗೆ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಕಳೆದ 2 ದಿನಗಳಲ್ಲಿ ಇದು ಸೇನೆಯ ಮೇಲೆ ನಡೆದ 2ನೇ ದಾಳಿಯಾಗಿದೆ. ಜೊತೆಗೆ ಒಂದು ವಾರದಲ್ಲಿ ಸೇನಾ ವಾಹನವನ್ನೇ ಗುರಿಯಾಗಿಸಿ ನಡೆಸಿದ 2ನೇ ದಾಳಿಯೂ ಆಗಿದೆ. ಇತ್ತೀಚೆಗೆ ಇಲ್ಲಿನ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 6 ಭಯೋತ್ಪಾದಕರು ಮೃತಪಟ್ಟಿದ್ದರು. ಇದನ್ನೂ ಓದಿ: NEET-UG ಮರು ಪರೀಕ್ಷೆ ನಮ್ಮ ಕೊನೆಯ ಆಯ್ಕೆ, ಪೇಪರ್‌ ಸೋರಿಕೆ ಬಗ್ಗೆ ತನಿಖೆ ನಡೆಸಬೇಕು: ಸುಪ್ರೀಂ

    ಸೇನೆಯ ವಾಹನ ತೆರಳುವ ಕುರಿತು ಮಾಹಿತಿ ಪಡೆದಿದ್ದ ಉಗ್ರರು, ಯೋಜನೆ ರೂಪಿಸಿ, ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ನಂತರ, ಸೈನಿಕರೂ ಪ್ರತಿದಾಳಿ ನಡೆಸಿದ್ದಾರೆ. ಇದನ್ನೂ ಓದಿ: 1.92 ಲಕ್ಷ ಮೌಲ್ಯದ ಸೀರೆಯುಟ್ಟು ಮಿಂಚಿದ ಗರ್ಭಿಣಿ ದೀಪಿಕಾ ಪಡುಕೋಣೆ

    ಸದ್ಯ ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಲೇ ಭಾರತೀಯ ಸೇನೆಯ ಯೋಧರು ತಿರುಗೇಟು ನೀಡುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಸುಮಾರು 2-3 ಉಗ್ರರು ಅಡಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – ಕಾಜಿರಂಗ ಪಾರ್ಕ್‍ನಲ್ಲಿ 131 ವನ್ಯಜೀವಿಗಳು ಸಾವು

  • ಕಾಶ್ಮೀರದಲ್ಲಿ ಭಯೋತ್ಪಾದಕರು-ಭದ್ರತಾಪಡೆಗಳ ನಡುವೆ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ

    ಕಾಶ್ಮೀರದಲ್ಲಿ ಭಯೋತ್ಪಾದಕರು-ಭದ್ರತಾಪಡೆಗಳ ನಡುವೆ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ಭದ್ರತಾ ಪಡೆಗಳು (Security Force) ಮತ್ತು ಭಯೋತ್ಪಾದಕರ (Terrorist) ನಡುವೆ ಶನಿವಾರ ಎನ್‌ಕೌಂಟರ್ ನಡೆದಿದ್ದು, ಓರ್ವ ಸೇನಾ ಸಿಬ್ಬಂದಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ.

    ಮೊದರ್ಗಾಮ್ ಗ್ರಾಮದಲ್ಲಿ ಭಯೋತ್ಪಾದಕರ ಉಪಟಳದ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ ಸಿಆರ್‌ಪಿಎಫ್, ಸೇನೆ ಮತ್ತು ಸ್ಥಳೀಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ನಂತರ ಎನ್‌ಕೌಂಟರ್ (Encounter) ನಡೆದಿದೆ. ಈ ವೇಳೆ ಸೇನಾ ಸಿಬ್ಬಂದಿ ಗಾಯಗೊಂಡಿದ್ದರು. ಆರಂಭಿಕ ಗುಂಡಿನ ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಡೆಂಗ್ಯೂನಿಂದ ಜನ ಸಾಯ್ತಿದ್ರೆ, ಸಚಿವರು ಸ್ವಿಮ್ಮಿಂಗ್ ಪೂಲ್‍ನಲ್ಲಿದ್ದಾರೆ: ಛಲವಾದಿ ನಾರಾಯಣಸ್ವಾಮಿ ಕಿಡಿ

    ಕಾಶ್ಮೀರ ವಲಯ ಪೊಲೀಸರು ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕುಲ್ಗಾಮ್ ಜಿಲ್ಲೆಯ ಮೊದರ್ಗಾಮ್ ಗ್ರಾಮದಲ್ಲಿ ಎನ್‌ಕೌಂಟರ್ ಪ್ರಾರಂಭವಾಯಿತು. ಪೊಲೀಸ್ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ಚನ್ನಪಟ್ಟಣ ಮೈತ್ರಿ ಕಗ್ಗಂಟು- ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಸುಳಿವು ನೀಡಿದ ಸಿಪಿವೈ

  • ಅಮರನಾಥ ಯಾತ್ರೆಯ ಬಳಿಕ  ಜಮ್ಮು ಕಾಶ್ಮೀರದಲ್ಲಿ  ಚುನಾವಣೆ – ತಯಾರಿ ಆರಂಭಿಸಿದ ಬಿಜೆಪಿ

    ಅಮರನಾಥ ಯಾತ್ರೆಯ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ – ತಯಾರಿ ಆರಂಭಿಸಿದ ಬಿಜೆಪಿ

    ನವದೆಹಲಿ : ಅಮರನಾಥ ಯಾತ್ರೆಯ (Amarnath Yatra) ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ವಿಧಾನಸಭೆ ಚುನಾವಣೆ (Vidhan Sabha Election) ನಡೆಯುವ ಸಾಧ್ಯತೆಗಳಿದೆ. ಈ ಹಿನ್ನಲೆ‌ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೇತೃತ್ವದ ಬಿಜೆಪಿ ರಾಷ್ಟ್ರೀಯ ನಾಯಕತ್ವವು ರಾಜ್ಯ ಬಿಜೆಪಿ ನಾಯಕರಿಗೆ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

    ಗುರುವಾರ ತಡರಾತ್ರಿ ನಡೆದ ಸಭೆಯಲ್ಲಿ ಕೇಂದ್ರ  ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು ಬಿಜೆಪಿ ರಾಜ್ಯ ಘಟಕದ ನಾಯಕರಿಗೆ ಚುನಾವಣೆಗೆ ತಯಾರಿ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಪಕ್ಷವು ಎಲ್ಲ 90 ಸ್ಥಾನಗಳಲ್ಲೂ ಸ್ಪರ್ಧಿಸಲಿದೆ ಎಂದು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ.

    ರಾಜ್ಯದಲ್ಲಿ ಯಾವುದೇ ಪಕ್ಷದೊಂದಿಗೆ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ನಾಯಕತ್ವ ರಾಜ್ಯ ನಾಯಕರಿಗೆ ತಿಳಿಸಿದೆ. ಆದಾಗ್ಯೂ ಸಮಾನ ಮನಸ್ಸಿನ ಪಕ್ಷಗಳೊಂದಿಗೆ ಚುನಾವಣಾ ಒಪ್ಪಂದ ಮಾಡಿಕೊಳ್ಳಬಹುದು. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಪಕ್ಷವು ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

    ಮುಂದಿನ ದಿನಗಳಲ್ಲಿ ಕೇಂದ್ರದ ಪ್ರಮುಖ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಪಕ್ಷವು ರಾಜ್ಯದ ಜನರೊಂದಿಗೆ ಜನ ಸಂಪರ್ಕ ಕಾರ್ಯಕ್ರಮವನ್ನೂ ಆರಂಭಿಸಲಿದೆ. ಪ್ರಸ್ತುತ ರವೀಂದರ್ ರೈನಾ ರಾಜ್ಯ ಬಿಜೆಪಿ ಘಟಕದಲ್ಲಿ ನಾಯಕತ್ವ ಹೊಂದಿದ್ದು ಸಂಘಟನೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎನ್ನಲಾಗಿದೆ.

    ಜಮ್ಮು ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆಗೆ ಮತ ಚಲಾಯಿಸಲು ಸಾಲಿನಲ್ಲಿ ನಿಂತ ಮತದಾರರು

    ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರೈನಾ ಜಮ್ಮು ಮತ್ತು ಕಾಶ್ಮೀರದ ಪಕ್ಷದ ಸಂಸದರು, ಜಿತೇಂದ್ರ ಸಿಂಗ್ ಮತ್ತು ಜುಗಲ್ ಕಿಶೋರ್ ಶರ್ಮಾ ಮತ್ತು ಇತರ ಉನ್ನತ ನಾಯಕರು ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

    ಆಗಸ್ಟ್ 2019 ರಲ್ಲಿ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮುನ್ನ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜಿಸಲಾಯಿತು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು.

     

  • ಜಮ್ಮು-ಕಾಶ್ಮೀರದಲ್ಲಿ ವಿಜಯಪುರ ಮೂಲದ ಯೋಧ ಹುತಾತ್ಮ

    ಜಮ್ಮು-ಕಾಶ್ಮೀರದಲ್ಲಿ ವಿಜಯಪುರ ಮೂಲದ ಯೋಧ ಹುತಾತ್ಮ

    ವಿಜಯಪುರ: ಜಮ್ಮು-ಕಾಶ್ಮೀರದಲ್ಲಿ (Jammu And Kashmir) ರೆಜಿಮೆಂಟ್‌ 13ರಲ್ಲಿ ಹವಾಲ್ದಾರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ವಿಜಯಪುರ ಮೂಲದ ಯೋಧ (Soldier) ಹುತಾತ್ಮರಾಗಿದ್ದಾರೆ.

    ವಿಜಯಪುರ (Vijayapura) ಜಿಲ್ಲೆಯ ತಿಕೋಟಾದ ಯೋಧ ರಾಜು ಕರ್ಜಗಿ ಹುತಾತ್ಮರಾಗಿದ್ದಾರೆ. ಕುಟುಂಬಸ್ಥರಿಗೆ ನಿನ್ನೆ ಸಂಜೆ ಕರೆ ಮಾಡಿ ಹುತಾತ್ಮ ಆದ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಯಾವ ರೀತಿ ಹುತಾತ್ಮರಾದರು. ಯಾವಾಗ ಮೃತದೇಹ ತರಲಾಗುತ್ತೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದನ್ನೂ ಓದಿ: 1 ಕೋಟಿ ಲೀಟರ್ ಹಾಲು ಉತ್ಪಾದನೆ- KMF ಮೈಲಿಗಲ್ಲು: ಸಿಎಂ ಸಿದ್ದರಾಮಯ್ಯ

    ಇದರಿಂದ ಕುಟುಂಬಸ್ಥರು ಚಿಂತಾಕ್ರಾಂತರಾಗಿದ್ದಾರೆ. ಇನ್ನೂ ಯೋಧನ ಬಗ್ಗೆ ಜಿಲ್ಲಾಡಾಳಿತಕ್ಕೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಯೋಧ ಅಗಲಿಕೆಯಿಂದ ತಿಕೋಟ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ.

    ಹುತಾತ್ಮ ಯೋಧ ರಾಜು ಸಾವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ, ಹುತಾತ್ಮ ಯೋಧನ ಅಕಲಿಕೆಯಿಂದ ಭಾರತೀಯ ಸೇನೆಗೆ ತುಂಬಲಾರದ ನಷ್ಟ ಆಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಶಾಸಕರ ಬೆಂಬಲ ಪಡೆದೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಮಹಾದೇವಪ್ಪ

  • ಇಬ್ಬರು ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ- ಓರ್ವ ಅಧಿಕಾರಿಗೆ ಗಾಯ

    ಇಬ್ಬರು ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ- ಓರ್ವ ಅಧಿಕಾರಿಗೆ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (jammu Kashmir) ಬಾರಾಮುಲ್ಲಾದಲ್ಲಿ ಇಂದು (ಬುಧವಾರ) ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.

    ಬಾರಾಮುಲ್ಲಾದ ಸೋಪೋರ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೋಪೋರ್‌ನ ಹಡಿಪೋರಾದಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದಾರೆ. ಅವರ ಗುರುತು ಪತ್ತೆ ಹಚ್ಚಲಾಗಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸೋಮವಾರ, ಕೇಂದ್ರಾಡಳಿತ ಪ್ರದೇಶದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: 24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್‌ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ

    ಭಾನುವಾರ ರಾತ್ರಿ ಜಿಲ್ಲೆಯ ಅರಗಂ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸರ್ಚ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಸಿಬ್ಬಂದಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

  • ರಿಯಾಸಿ ಬಸ್‌ ಮೇಲೆ ದಾಳಿ – 50 ಸ್ಥಳೀಯರನ್ನು ವಶಕ್ಕೆ ಪಡೆದ ಪೊಲೀಸರು

    ರಿಯಾಸಿ ಬಸ್‌ ಮೇಲೆ ದಾಳಿ – 50 ಸ್ಥಳೀಯರನ್ನು ವಶಕ್ಕೆ ಪಡೆದ ಪೊಲೀಸರು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ (Jammu Kashmir) ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪರಿಶೀಲನಾ ಸಭೆ ನಡೆಸಿದ ಕಲವೇ ಗಂಟೆಗಳಲ್ಲಿ ರಿಯಾಸಿ ಬಸ್‌ (Reasi Bus Attack) ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು 50 ಮಂದಿ ಸ್ಥಳೀಯರನ್ನು ವಶಕ್ಕೆ ಪಡೆದಿದ್ದಾರೆ.

    1995 ಮತ್ತು 2005 ನಡುವೆ ರಿಯಾಸಿ ಜಿಲ್ಲೆಯ ಜಿಲ್ಲೆಯ ಅರ್ನಾಸ್ ಮತ್ತು ಮಹೋರ್ ಪ್ರದೇಶಗಳು ಉಗ್ರರಿಗೆ ಸುರಕ್ಷಿತ ತಾಣವಾಗಿತ್ತು. ಹೀಗಾಗಿ 50 ಮಂದಿಯನ್ನು ವಶ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    ರಿಯಾಸಿ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ. ಅರ್ನಾಸ್ ಮತ್ತು ಮಹೋರ್‌ನ ದೂರದ ಪ್ರದೇಶ ಒಳಗೊಂಡಂತೆ ಶೋಧ ಕಾರ್ಯಾಚರಣೆಗಳನ್ನು ವಿಸ್ತರಿಸಲಾಗಿದೆ ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

    ಭಾನುವಾರ ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ 53 ಆಸನಗಳ ಬಸ್ ಶಿವ ಖೋರಿ ದೇವಸ್ಥಾನದಿಂದ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಬಸ್ದು ಕಮರಿಗೆ ಉರುಳಿ ಬಿದ್ದು 9 ಮಂದಿ ಸಾವನ್ನಪ್ಪಿದ್ದರು.  ಇದನ್ನೂ ಓದಿ: ಕಂದಕಕ್ಕೆ ಬಿದ್ದ ನಂತರವೂ ಬಸ್ಸಿನ ಬಳಿ ಬಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು : ಭಯಾನಕ ಅನುಭವ ಬಿಚ್ಚಿಟ್ಟ ಯತ್ರಾರ್ಥಿ

    ಭಯೋತ್ಪಾದನೆ ಮುಕ್ತ ಪ್ರದೇಶವೆಂದು ಗುರುತಿಸಲಾದ ಪ್ರದೇಶಗಳಲ್ಲಿ ಈಗ ದಾಳಿಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ರಿಯಾಸಿ ಹೊರತುಪಡಿಸಿ, ಮಂಗಳವಾರ ಕಥುವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಮರುದಿನ, ದೋಡಾ ಜಿಲ್ಲೆಯಲ್ಲಿ ಪೊಲೀಸ್ ಚೆಕ್‌ ಪೋಸ್ಟ್‌ ಮೇಲೆ ದಾಳಿ ನಡೆಸಿದ್ದರು

    ರಿಯಾಸಿಯಲ್ಲಿ ಬಸ್‌ ಮೇಲೆ ದಾಳಿ ನಡೆಸಿದ ನಾಲ್ವರು ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಅವರ ಬಗ್ಗೆ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.