Tag: jammu kashmir

  • ರಾಜಕೀಯ ಕೈದಿಗಳಿಗೆ ಕ್ಷಮಾದಾನ, ಆರ್ಟಿಕಲ್‌ 370 ಮರುಸ್ಥಾಪನೆ – J&K ನಲ್ಲಿ ಪಕ್ಷಗಳ ಪ್ರಣಾಳಿಕೆ ಬಲ ನೀಡುತ್ತಾ?

    ರಾಜಕೀಯ ಕೈದಿಗಳಿಗೆ ಕ್ಷಮಾದಾನ, ಆರ್ಟಿಕಲ್‌ 370 ಮರುಸ್ಥಾಪನೆ – J&K ನಲ್ಲಿ ಪಕ್ಷಗಳ ಪ್ರಣಾಳಿಕೆ ಬಲ ನೀಡುತ್ತಾ?

    ನವದೆಹಲಿ: ಜಮ್ಮು- ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು (ಅಕ್ಟೋಬರ್ 8) ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಶುರುವಾಗಲಿದೆ. ಲೋಕಸಭೆ ಚುನಾವಣೆ ನಡೆದ ಬಳಿಕ ನಡೆದ ಹೈವೋಲ್ಟೇಜ್ ಚುನಾವಣೆ ಇದಾಗಿದ್ದು, ಜಮ್ಮು-ಕಾಶ್ಮೀರದ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ.

    ಅದೇ ರೀತಿ ಹರಿಯಾಣದಲ್ಲೂ ಹ್ಯಾಟ್ರಿಕ್‌ ಕನಸು ಕಂಡಿರುವ ಬಿಜೆಪಿಗೆ ಸೆಡ್ಡು ಹೊಡೆದು, ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಲು ಪ್ರಯತ್ನಿಸಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತಕ್ಕೆ ಒಳಪಟ್ಟ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವ ಕಾರಣ ದೇಶದ ಗಮನಸೆಳೆದಿದೆ. ಈ ಫಲಿತಾಂಶವು ಈ ವರ್ಷ ಕೊನೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ರಾಜಕೀಯದ ಮೇಲೂ ಪರಿಣಾಮ ಬೀರಬಹುದು ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.

    ಈ ಚುನಾವಣೆ ಗದ್ದುಗೆ ಹಿಡಿಯಲು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿ ಕೂಟ ಹಾಗೂ ಬಿಜೆಪಿ ಪಕ್ಷಗಳ ಪ್ರಣಾಳಿಕೆ ಪರಿಣಾಮಕಾರಿಯಾಗಲಿದೆಯೇ ಹಾಗಿದ್ದರೆ, ಪಕ್ಷಗಳ ಪ್ರಣಾಳಿಕೆಯಲ್ಲಿ ಏನಿದೆ ಎಂಬುದನ್ನು ತಿಳಿಯಲು ಮುಂದೆ ಓದಿ…

    ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೇಸ್ ಪ್ರಣಾಳಿಕೆ:
    * ಜಮ್ಮು ಮತ್ತು ಕಾಶ್ಮೀರದ ಅರ್ಹ ನಿರುದ್ಯೋಗಿ ಯುವಕರಿಗೆ 1 ವರ್ಷದವರೆಗೆ ಪ್ರತಿ ತಿಂಗಳು 3,500 ರೂ.ವರೆಗೆ ನಿರುದ್ಯೋಗ ಭತ್ಯೆ ನೀಡುವ ಭರವಸೆ
    * 30 ದಿನಗಳಲ್ಲಿ ಉದ್ಯೋಗ ಕ್ಯಾಲೆಂಡರ್ ನೀಡುವ ಮೂಲಕ ಖಾಲಿ ಇರುವ 1 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ
    * ಪೊಲೀಸ್, ಅಗ್ನಿಶಾಮಕ ದಳ ಮತ್ತು ಅರಣ್ಯ ಸಂರಕ್ಷಣಾ ಪಡೆಗಳಿಗೆ ವಿಶೇಷ ಗಡಿ ನೇಮಕಾತಿಯನ್ನು ಪುನರುಜ್ಜೀವನಗೊಳಿಸುವ ಭರವಸೆ
    * ಭೂರಹಿತರು, ಹಿಡುವಳಿದಾರರು ಮತ್ತು ಜಮೀನು ಹೊಂದಿರುವ ಕೃಷಿಕ ಕುಟುಂಬಗಳಿಗೆ ರೂ 4,000 ಹೆಚ್ಚುವರಿ ಆರ್ಥಿಕ ಬೆಂಬಲ
    * ನಿರುದ್ಯೋಗಿ ಇಂಜಿನಿಯರುಗಳ ಗುಂಪುಗಳಿಗೆ ಶೇ.30 ರಷ್ಟು ನಿರ್ಮಾಣ ಕಾಮಗಾರಿ ಸಂಬಂಧಿತ ಗುತ್ತಿಗೆಗಳನ್ನು ಹಂಚಿಕೆ ಮಾಡುವ ಯೋಜನೆಯನ್ನು ಪುನಶ್ಚೇತನಗೊಳಿಸುವುದಾಗಿ ಭರವಸೆ
    * ಮಹಿಳಾ ಸಮ್ಮಾನ್ ಕಾರ್ಯಕ್ರಮದಡಿ ಕುಟುಂಬದ ಮಹಿಳೆಗೆ ಮಾಸಿಕ 3000 ರೂ.ಗಳ ನೆರವು ನೀಡುವುದಾಗಿ ಭರವಸೆ

    ನ್ಯಾಷನಲ್‌ ಕಾನ್ಫರೆನ್ಸ್‌ (NC)
    * ಎನ್‌ಸಿ ಪ್ರಣಾಳಿಕೆಯು ವಿಶೇಷ ಸ್ಥಾನಮಾನ ಕುರಿತಾದ 370ನೇ ವಿಧಿಯನ್ನು ಮರಳಿ ಸ್ಥಾಪಿಸುವುದಾಗಿ ಭರವಸೆ
    * ಎನ್ ಸಿ ಅಧಿಕಾರಕ್ಕೆ ಬಂದರೆ ಎಲ್ಲಾ ರಾಜಕೀಯ ಕೈದಿಗಳಿಗೆ ಕ್ಷಮಾದಾನ
    * ಕಾಶ್ಮೀರಿ ಪಂಡಿತರನ್ನು ಕಣಿವೆಗೆ ಘನತೆಯಿಂದ ಹಿಂದಿರುಗಿಸುವುದಾಗಿ ಭರವಸೆ
    * 200 ಯೂನಿಟ್ ಉಚಿತ ವಿದ್ಯುತ್, ವಿದ್ಯುತ್ ಮತ್ತು ನೀರಿನ ಬಿಕ್ಕಟ್ಟಿಗೆ ಪರಿಹಾರ
    * ಜಮ್ಮು ಮತ್ತು ಕಾಶ್ಮೀರಕ್ಕೆ ಜಲ-ವಿದ್ಯುತ್ ವಿದ್ಯುತ್ ಯೋಜನೆಗಳ ವರ್ಗಾವಣೆ
    * ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಪ್ರತಿ ವರ್ಷ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತ

    ಪಿಡಿಪಿ
    * ಮಸೀದಿ, ಮಂದಿರಾ ಗುರುದ್ವಾರಗಳಿಗೆ ಉಚಿತ ವಿದ್ಯುತ್
    * ಗುತ್ತಿಗೆ ಶಿಕ್ಷಕರ ಗೌರವ ಧನ ಹೆಚ್ಚಳ
    * ಜೈಲು ಖೈದಿಗಳಿಗೆ ಉಚಿತ ಕಾನೂನು ಸಲಹೆ
    * ರಾಜ್ಯದ ವಿಶೇಷ ಸ್ಥಾನಮಾನ ಮರು ಸ್ಥಾಪನೆ
    * ಆರ್ಥಿಕ ಸ್ಥಿತಿ ಮರುಸ್ಥಾಪನೆ
    * 60,000 ದಿನಗೂಲಿಗಳನ್ನು ಕ್ರಮಬದ್ಧಗೊಳಿಸುವುದು
    * ಹಳೆಯ ಪಿಂಚಣಿ ಯೋಜನೆ ಜಾರಿ
    * J&K ಪೊಲೀಸರಿಗೆ ತೊಂದರೆಗೊಳಗಾಗದ ಪ್ರದೇಶ ಭತ್ಯೆ

    ಬಿಜೆಪಿ
    * ಯುವಕರಿಗೆ 5 ಲಕ್ಷ ಉದ್ಯೋಗಾವಕಾಶ ಕಲ್ಪಿಸಿ, ನ್ಯಾಯಯುತ ಮತ್ತು ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಖಚಿತಪಡಿಸಿಕೊಳ್ಳಿ
    * ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ 10,000 ರೂ.
    * ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ದರದಲ್ಲಿ 50% ಕಡಿತ
    * ಮಾ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಹಿರಿಯ ಮಹಿಳೆಗೆ ವಾರ್ಷಿಕ 18,000 ರೂ.
    * ಉಜ್ವಲ ಫಲಾನುಭವಿಗಳಿಗೆ ವರ್ಷಕ್ಕೆ 2 ಉಚಿತ ಸಿಲಿಂಡರ್
    * ಅಟಲ್ ವಸತಿ ಯೋಜನೆಯಡಿ ಭೂರಹಿತ ಫಲಾನುಭವಿಗಳಿಗೆ ಉಚಿತ ಭೂಮಿ ಹಂಚಿಕೆ.
    * ವೃದ್ಧಾಪ್ಯ, ವಿಧವೆ ಮತ್ತು ಅಂಗವಿಕಲರಿಗೆ ಪಿಂಚಣಿ ಮೂರು ಪಟ್ಟು ಹೆಚ್ಚಳ
    * ಪ್ರಗತಿ ಶಿಕ್ಷಾ ಯೋಜನೆಯಡಿ ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ 3,000 ರೂ. ಪ್ರಯಾಣ ಭತ್ಯೆ.
    * 1,000 ಹೊಸ ವೈದ್ಯಕೀಯ ಕಾಲೇಜು ಸೀಟುಗಳನ್ನು ಸೇರಿಸಿ
    * ಶ್ರೀನಗರದಲ್ಲಿ ಮೆಟ್ರೋ ಆರಂಭ, ಭಯೋತ್ಪಾದನೆ ನಿಗ್ರಹ

  • ಇಂದು ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶ – ಕದನ ಕುತೂಹಲ

    ಇಂದು ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶ – ಕದನ ಕುತೂಹಲ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಚುನಾವಣಾ ಫಲಿತಾಂಶ (Election Results Haryana 2024) ಮಂಗಳವಾರ (ಅ.8) ಹೊರಬೀಳಲಿದೆ. 10 ವರ್ಷಗಳ ಬಳಿಕ, ಆರ್ಟಿಕಲ್ 370 ರದ್ದಾದ ಬಳಿಕ ಕಣಿವೆನಾಡಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲೋದು ಯಾರು? ಬಿಜೆಪಿನಾ? ಎನ್‌ಸಿ-ಕಾಂಗ್ರೆಸ್ (Congress-NC) ಮೈತ್ರಿಕೂಟನಾ? ಅಥ್ವಾ ಪಿಡಿಪಿನಾ ಎಂಬ ಪ್ರಶ್ನೆಗೆ ಇಂದು ನಿಖರ ಉತ್ತರ ಸಿಗಲಿದೆ.

    ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಮತ ಎಣಿಕೆ ಹಿನ್ನೆಲೆ ಚುನಾವಣೆ ಕೇಂದ್ರಗಳ ಸುತ್ತಲೂ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಇಂದು ಜಮ್ಮು- ಕಾಶ್ಮೀರದ 28 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ರೂ, ಇಂಡಿಯಾ ಮೈತ್ರಿ ಕೂಟ ಮತ್ತು ಬಿಜೆಪಿ ಮಾತ್ರ ತಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿವೆ. ಮತ್ತೊಂದು ಕಡೆ, ಇಂಡಿಯಾ ಕೂಟ, ಮೆಹಬೂಬಾ ಮುಫ್ತಿ ಬೆಂಬಲದ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: ಒಂದೇ ಗಂಟೆಯೊಳಗೆ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಇಸ್ರೇಲ್

    ಇನ್ನೂ ಹರಿಯಾಣ ಫಲಿತಾಂಶವೂ ಸಾಕಷ್ಟು ಕುತೂಹಲ ಕೆರಳಿಸಿದೆ. 10 ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುತ್ತಾ? ವಿಪಕ್ಷ ಕಾಂಗ್ರೆಸ್ ಗೆದ್ದು ಆಡಳಿತದ ಚುಕ್ಕಾಣಿ ಹಿಡಿಯುತ್ತಾ ಎಂಬುದು ಕುತೂಹಲಕಾರಿ ಅಂಶ. ಇದ್ರ ಮಧ್ಯೆ ಎಕ್ಸಿಟ್ ಪೋಲ್‌ಗಳೆಲ್ಲಾ ಕಾಂಗ್ರೆಸ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದು, ಇದು ನಿಜವಾಗುತ್ತಾ ಅನ್ನೋದು ಗೊತ್ತಾಗಲಿದೆ. ಇದನ್ನೂ ಓದಿ: ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ – 6 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್‌

    ಹರಿಯಾಣ ಚುನಾವಣೋತ್ತರ ಸಮೀಕ್ಷೆ ಹೇಗಿದೆ?
    ಮ್ಯಾಟ್ರಿಜ್‌ ಸಮೀಕ್ಷೆ: ಕಾಂಗ್ರೆಸ್‌ 55-62, ಬಿಜೆಪಿ 18-24, ಐಎನ್ಎಲ್‌ಡಿ 3-6, ಜೆಜೆಪಿ 03, ಇತರರು 2-5
    ಎಬಿಪಿ ಸಮೀಕ್ಷೆ: ಕಾಂಗ್ರೆಸ್ – 57, ಬಿಜೆಪಿ – 27, ಇತರೆ – 06
    ದೈನಿಕ್‌ ಭಾಸ್ಕರ್‌: ಕಾಂಗ್ರೆಸ್ 44-54, ಬಿಜೆಪಿ 19-29, ಐಎನ್‌ಎಲ್‌ಡಿ 1-5, ಜೆಜೆಪಿ- 1, ಇತರರು 4-10

    ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ ಹೇಗಿದೆ?
    ಸಿ ವೋಟರ್ – ಆಜ್ ತಕ್
    ಕಾಂಗ್ರೆಸ್ + ಎನ್‌ಸಿ – 11-15
    ಬಿಜೆಪಿ – 27-31
    ಪಿಡಿಪಿ – 02
    ಇತರೆ – 01

    ದೈನಿಕ್‌ ಬಾಸ್ಕರ್‌
    ಕಾಂಗ್ರೆಸ್ + ಎನ್‌ಸಿ – 35-40
    ಬಿಜೆಪಿ – 20-25
    ಪಿಡಿಪಿ – 4-7
    ಇತರೆ – 12-16

    ಪೀಪಲ್‌ ಪ್ಲಸ್‌
    ಕಾಂಗ್ರೆಸ್ + ಎನ್‌ಸಿ – 40-48
    ಬಿಜೆಪಿ – 27-32
    ಪಿಡಿಪಿ – 7-11
    ಇತರೆ – 4-6

    ಇಂಡಿಯಾ ಟುಡೆ- ಸಿ ವೋಟರ್‌
    ಕಾಂಗ್ರೆಸ್ + ಎನ್‌ಸಿ – 40-48
    ಬಿಜೆಪಿ – 27-32
    ಪಿಡಿಪಿ – 6-12
    ಇತರೆ – 6-11

  • ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ – ಯಾರಿಗೆ ಗದ್ದುಗೆ?

    ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ – ಯಾರಿಗೆ ಗದ್ದುಗೆ?

    ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಚುನಾವಣಾ ಫಲಿತಾಂಶ (Election Results Haryana 2024) ಮಂಗಳವಾರ (ಅ.8) ಹೊರಬೀಳಲಿದೆ. 10 ವರ್ಷಗಳ ಬಳಿಕ, ಆರ್ಟಿಕಲ್ 370 ರದ್ದಾ ಬಳಿಕ ಕಣಿವೆನಾಡಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲೋದು ಯಾರು? ಬಿಜೆಪಿನಾ? ಎನ್‌ಸಿ-ಕಾಂಗ್ರೆಸ್ (Congress-NC) ಮೈತ್ರಿಕೂಟನಾ? ಅಥ್ವಾ ಪಿಡಿಪಿನಾ ಎಂಬ ಪ್ರಶ್ನೆಗೆ ಮಂಗಳವಾರ ನಿಖರ ಉತ್ತರ ಸಿಗಲಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಯಾವುದೇ ಪಕ್ಷಕ್ಕೆ ಬಹುಮತ ಬರಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ರೂ, ಇಂಡಿಯಾ ಮೈತ್ರಿ ಕೂಟ ಮತ್ತು ಬಿಜೆಪಿ ಮಾತ್ರ ತಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿವೆ. ಮತ್ತೊಂದು ಕಡೆ, ಇಂಡಿಯಾ ಕೂಟ, ಮೆಹಬೂಬಾ ಮುಫ್ತಿ ಬೆಂಬಲದ ನಿರೀಕ್ಷೆಯಲ್ಲಿದೆ. ಆದ್ರೆ, ಯಾರೇ ಗೆದ್ರೂ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗೋವರೆಗೂ ಸರ್ಕಾರ ರಚಿಸಬಾರದು ಎಂದು ಸಂಸದ ಎಂಜಿನಿಯರ್ ರಶೀದ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: Exit Poll Results: ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಕನಸು ಭಗ್ನ – ಕಾಂಗ್ರೆಸ್‌ ಅಧಿಕಾರಕ್ಕೆ

    ಇನ್ನೂ ಹರಿಯಾಣ ಫಲಿತಾಂಶವೂ ಸಾಕಷ್ಟು ಕುತೂಹಲ ಕೆರಳಿಸಿದೆ. 10 ವರ್ಷದಿಂದ ಆಡಳಿತದಲ್ಲಿರುವ ಬಿಜೆಪಿ ಮತ್ತೆ ಅಧಿಕಾರ ಉಳಿಸಿಕೊಳ್ಳುತ್ತಾ? ವಿಪಕ್ಷ ಕಾಂಗ್ರೆಸ್ ಗೆದ್ದು ಆಡಳಿತದ ಚುಕ್ಕಾಣಿ ಹಿಡಿಯುತ್ತಾ ಎಂಬುದು ಕುತೂಹಲಕಾರಿ ಅಂಶ. ಇದ್ರ ಮಧ್ಯೆ ಎಕ್ಸಿಟ್ ಪೋಲ್‌ಗಳೆಲ್ಲಾ ಕಾಂಗ್ರೆಸ್ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದು, ಇದು ನಿಜವಾಗುತ್ತಾ ಅನ್ನೋದು ಗೊತ್ತಾಗಲಿದೆ. ಇದನ್ನೂ ಓದಿ: Exit Poll Result | ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟಕ್ಕೆ ಅಧಿಕಾರ – ಬಿಜೆಪಿಗೆ ಹಿಂದಿಗಿಂತ ಹೆಚ್ಚು ಸ್ಥಾನ

    ಹರಿಯಾಣ ಚುನಾವಣೋತ್ತರ ಸಮೀಕ್ಷೆ ಹೇಗಿದೆ?
    ಮ್ಯಾಟ್ರಿಜ್‌ ಸಮೀಕ್ಷೆ: ಕಾಂಗ್ರೆಸ್‌ 55-62, ಬಿಜೆಪಿ 18-24, ಐಎನ್ಎಲ್‌ಡಿ 3-6, ಜೆಜೆಪಿ 03, ಇತರರು 2-5
    ಎಬಿಪಿ ಸಮೀಕ್ಷೆ: ಕಾಂಗ್ರೆಸ್ – 57, ಬಿಜೆಪಿ – 27, ಇತರೆ – 06
    ದೈನಿಕ್‌ ಭಾಸ್ಕರ್‌: ಕಾಂಗ್ರೆಸ್ 44-54, ಬಿಜೆಪಿ 19-29, ಐಎನ್‌ಎಲ್‌ಡಿ 1-5, ಜೆಜೆಪಿ- 1, ಇತರರು 4-10

    ಜಮ್ಮು ಮತ್ತು ಕಾಶ್ಮೀರ ಚುನಾವಣೋತ್ತರ ಸಮೀಕ್ಷೆ ಹೇಗಿದೆ?
    ಸಿ ವೋಟರ್ – ಆಜ್ ತಕ್
    ಕಾಂಗ್ರೆಸ್ + ಎನ್‌ಸಿ – 11-15
    ಬಿಜೆಪಿ – 27-31
    ಪಿಡಿಪಿ – 02
    ಇತರೆ – 01

    ದೈನಿಕ್‌ ಬಾಸ್ಕರ್‌
    ಕಾಂಗ್ರೆಸ್ + ಎನ್‌ಸಿ – 35-40
    ಬಿಜೆಪಿ – 20-25
    ಪಿಡಿಪಿ – 4-7
    ಇತರೆ – 12-16

    ಪೀಪಲ್‌ ಪ್ಲಸ್‌
    ಕಾಂಗ್ರೆಸ್ + ಎನ್‌ಸಿ – 40-48
    ಬಿಜೆಪಿ – 27-32
    ಪಿಡಿಪಿ – 7-11
    ಇತರೆ – 4-6

    ಇಂಡಿಯಾ ಟುಡೆ- ಸಿ ವೋಟರ್‌
    ಕಾಂಗ್ರೆಸ್ + ಎನ್‌ಸಿ – 40-48
    ಬಿಜೆಪಿ – 27-32
    ಪಿಡಿಪಿ – 6-12
    ಇತರೆ – 6-11

  • Jammu Kashmir | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ – LG ನಿರ್ಧಾರ ಸರಿಯೇ?

    Jammu Kashmir | ಫಲಿತಾಂಶಕ್ಕೆ ಮೊದಲೇ ಐವರು ಶಾಸಕರಾಗಿ ಆಯ್ಕೆ – LG ನಿರ್ಧಾರ ಸರಿಯೇ?

    ನವದೆಹಲಿ: ಜಮ್ಮು ಕಾಶ್ಮೀರ ಚುನಾವಣಾ (Jammu Kashmir) ಫಲಿತಾಂಶ ಪ್ರಕಟವಾಗುವುದಕ್ಕೆ ಮೊದಲೇ ಐವರು ಶಾಸಕರಾಗಿ ನಾಮನಿರ್ದೇಶನವಾಗಿದ್ದು, ಈ ಐವರು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

    ಹೌದು, ಲೆಫ್ಟಿನೆಂಟ್‌ ಗವರ್ನರ್‌ (Lieutenant Governor) ಮನೋಜ್‌ ಸಿನ್ಹಾ (Manoj Sinha) ಐವರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ಗೆ ತಿದ್ದುಪಡಿಗಳ ಭಾಗವಾಗಿ ಇಬ್ಬರು ಮಹಿಳೆಯರು, ಇಬ್ಬರು ಕಾಶ್ಮೀರಿ ಪಂಡಿತರು ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಿಂದ ಆಗಮಿಸಿದ ನಿರಾಶ್ರಿತ ವ್ಯಕ್ತಿಯೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.

    90 ಸ್ಥಾನಗಳಿಗೆ ಚುನಾವಣೆ ನಡೆದರೂ ಐವರು ನಾಮನಿರ್ದೇಶನಗೊಂಡ ಸದಸ್ಯರಿಗೆ ಮತದಾನದ ಹಕ್ಕು ಇರುವ ಕಾರಣ ಜಮ್ಮು ಕಾಶ್ಮೀರ ವಿಧಾನಸಭೆಯ ಒಟ್ಟು ಶಾಸಕರ ಬಲಾಬಲ 95ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಹುಮತಕ್ಕೆ 48 ಸದಸ್ಯರ ಬೆಂಬಲ ಬೇಕು. ಇದನ್ನೂ ಓದಿ: Exit Poll Result | ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟಕ್ಕೆ ಅಧಿಕಾರ – ಬಿಜೆಪಿಗೆ ಹಿಂದಿಗಿಂತ ಹೆಚ್ಚು ಸ್ಥಾನ

    ಜಮ್ಮು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಈ ಐವರ ಪಾತ್ರ ಭಾರೀ ಮಹತ್ವ ಪಡೆದಿದೆ.

    ಸರ್ಕಾರ ರಚನೆಗೂ ಮೊದಲೇ ಗವರ್ನರ್‌ ನಾಮನಿರ್ದೇಶನ ಮಾಡಿದ್ದಕ್ಕೆ ಕಾಂಗ್ರೆಸ್‌ (Congress) ಆಕ್ಷೇಪ ವ್ಯಕ್ತಪಡಿಸಿದೆ. ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರವೀಂದ್ರ ಶರ್ಮಾ, ಐವರು ಶಾಸಕರ ನಾಮ ನಿರ್ದೇಶನವನ್ನು ನಾವು ವಿರೋಧಿಸುತ್ತೇವೆ. ಸರ್ಕಾರ ರಚನೆಗೂ ಮೊದಲೇ ನಾಮ ನಿರ್ದೇಶನ ಅಗತ್ಯವಿಲ್ಲ. ಇಂತಹ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ ಅಲ್ಲದೇ ಜನರ ತೀರ್ಪನ್ನು ಅಗೌರವಿಸುವ ನಡೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರಾಡಳಿತ ರಾಜ್ಯವಾಗಿರುವ ಜಮ್ಮು ಕಾಶ್ಮೀರ ಪುದುಚೇರಿ (Puducherry) ವಿಧಾನಸಭಾ ಮಾದರಿಯಲ್ಲಿ ರಚನೆಯಾಗಿದೆ. ಅಲ್ಲಿ ಮೂವರನ್ನು ರಾಜ್ಯಪಾಲರು ನಾಮ ನಿರ್ದೇಶನ ಮಾಡಬಹುದು. ಅವರು ಚುನಾಯಿತ ಶಾಸಕರಂತೆ ಕೆಲಸ ಮಾಡುತ್ತಾರೆ ಮತ್ತು ಮತದಾನ ಮಾಡುವ ಹಕ್ಕನ್ನು ಸಹ ಹೊಂದಿದ್ದಾರೆ.

    ಸುಪ್ರೀಂ ಹೇಳಿದ್ದೇನು?
    2017 ರಲ್ಲಿ ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಆಗಿದ್ದ ಕಿರಣ್ ಬೇಡಿ ಅವರು ಮೂವರನ್ನು ನಾಮನಿರ್ದೇಶನ ಮಾಡಿದ್ದನ್ನು ಕಾಂಗ್ರೆಸ್‌ ಸುಪ್ರೀಂನಲ್ಲಿ ಪ್ರಶ್ನಿಸಿತ್ತು. ನಮ್ಮ ಸರ್ಕಾರವನ್ನು ಕೇಳದೇ ನಾಮ ನಿರ್ದೇಶನ ಮಾಡಿದ್ದು ಸರಿಯಲ್ಲ ಎಂದು ಕಾಂಗ್ರೆಸ್‌ ವಾದಿಸಿತ್ತು. ಆದರೆ ಅಂತಿಮವಾಗಿ 2018 ರಲ್ಲಿ ಸುಪ್ರೀಂ ಕೋರ್ಟ್ ಲೆಫ್ಟಿನೆಂಟ್‌ ಗವರ್ನರ್‌ ನಿರ್ಧಾರವನ್ನು ಎತ್ತಿ ಹಿಡಿದು ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಮಹತ್ವದ ತೀರ್ಪು ನೀಡಿತ್ತು.

    ಪುದುಚೇರಿ ವಿಧಾನಸಭೆಗೆ ನಾಮನಿರ್ದೇಶನ ಮಾಡುವುದು ಪುದುಚೇರಿ ಸರ್ಕಾರದ ವ್ಯವಹಾರವಲ್ಲ. ಇದು ಕೇಂದ್ರ ಸರ್ಕಾರದ ವ್ಯವಹಾರ ಎಂದು ನ್ಯಾಯಮೂರ್ತಿ ಎ.ಕೆ.ಸಿಕ್ರಿ, ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರ ಪೀಠ ಹೇಳಿತ್ತು.

     

  • ಗಡಿ ನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್

    ಗಡಿ ನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್

    ಶ್ರೀನಗರ: ಅಕ್ರಮವಾಗಿ ಭಾರತದ ಗಡಿ ನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು (Terrorists) ಭದ್ರತಾ ಪಡೆಗಳು ಎನ್‌ಕೌಂಟರ್ ಮಾಡಿವೆ.

    ಕಾಶ್ಮೀರದ (Jammu Kashmir) ಕುಪ್ವಾರ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಉಗ್ರರನ್ನು ಹಿಮ್ಮೆಟ್ಟಿಸುವ ವೇಳೆ ಗುಂಡಿನ ಕಾಳಗ ಏರ್ಪಟ್ಟಿದ್ದು ಈ ವೇಳೆ ಉಗ್ರರನ್ನು ಹತ್ಯೆ ಮಾಡಿದೆ ಎಂದು ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಹೇಳಿದೆ. ಇದನ್ನೂ ಓದಿ: ದೆಹಲಿಗೆ ಡ್ರಗ್ ರಾಕೆಟ್‌ ಹಿಂದೆ ದುಬೈ, ಲಂಡನ್ ನಂಟು – ದುಬೈನಲ್ಲಿರುವ ಭಾರತೀಯನಿಂದಲೇ ಡ್ರಗ್ ಮಾಫಿಯಾ

    ಕುಪ್ವಾರದ ಗುಗಲ್‌ಧಾರ್‌ನಲ್ಲಿ ಸೈನಿಕರು ಅನುಮಾನಾಸ್ಪದ ಚಟುವಟಿಕೆ ಪತ್ತೆಯಾದ ಬಳಿಕ ಈಗ ಗುಂಡಿನ ಕಾಳಗ ನಡೆದಿದೆ ಎಂದು ಭದ್ರತಾ ಪಡೆಗಳು ಈ ಹಿಂದೆ ತಿಳಿಸಿದ್ದವು. ಅಕ್ಟೋಬರ್ 4 ರಂದು, ಒಳನುಸುಳುವಿಕೆ ಯತ್ನದ ಬಗ್ಗೆ ಗುಪ್ತಚರ ಮಾಹಿತಿ ನೀಡಿತ್ತು‌. ಮಾಹಿತಿ ಆಧಾರದ ಮೇಲೆ ಭಾರತೀಯ ಸೇನೆ ಮತ್ತು ಜೆಕೆ ಪೋಲಿಸ್ ಜಂಟಿ ಕಾರ್ಯಾಚರಣೆಯನ್ನು ಕುಪ್ವಾರದ ಗುಗಲ್ಧರ್‌ನಲ್ಲಿ ಆರಂಭಿಸಿತ್ತು.

    ಶೋಧ ಕಾರ್ಯದಲ್ಲಿ ಪಡೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಿದರು. ಈ ವೇಳೆ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ಆರಂಭವಾಯಿತು. ಭದ್ರತಾ ಪಡೆಗಳು ಈಗಾಗಲೇ ಇಬ್ಬರನ್ನು ಸೆದೆಬಡಿದಿದ್ದು, ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಚಿನಾರ್ ಕಾರ್ಪ್ಸ್ ಹೇಳಿದೆ. ಇದನ್ನೂ ಓದಿ: ಮುಂದಿನ ವಾರ ಬೆಂಗಳೂರಿಗೆ ಬರಲಿದ್ದಾರೆ ಭಾರತ ವಿರೋಧಿ ಮಾಲ್ಡೀವ್ಸ್‌ ಅಧ್ಯಕ್ಷ

  • Jammu Kashmir Election| ಈದ್‌, ಮೊಹರಂ ಹಬ್ಬಕ್ಕೆ 2 ಸಿಲಿಂಡರ್‌ ಫ್ರೀ : ಶಾ ಘೋಷಣೆ

    Jammu Kashmir Election| ಈದ್‌, ಮೊಹರಂ ಹಬ್ಬಕ್ಕೆ 2 ಸಿಲಿಂಡರ್‌ ಫ್ರೀ : ಶಾ ಘೋಷಣೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಈದ್‌ (Eid) ಮತ್ತು ಮೊಹರಂ (Muharram) ಹಬ್ಬದ ಸಂದರ್ಭದಲ್ಲಿ  ಉಚಿತವಾಗಿ ಎರಡು ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭರವಸೆ ನೀಡಿದ್ದಾರೆ.

    ಮೆಂಧಾರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಬ್ದುಲ್ಲಾ, ಮುಫ್ತಿ ಮತ್ತು ನೆಹರು-ಗಾಂಧಿ ಕುಟುಂಬವು 90ರ ದಶಕದಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದನೆ ಕೊನೆಯಾಗಿದೆ. ಇಲ್ಲಿನ ಯುವಕರ ಕೈಗೆ ಕಲ್ಲುಗಳ ಬದಲಾಗಿ ಲ್ಯಾಪ್‌ಟಾಪ್‌ ನೀಡಲಾಗಿದೆ ಎಂದರು.

    ಅಬ್ದುಲ್ಲಾ, ಮುಫ್ತಿ , ಮತ್ತು ನೆಹರು-ಗಾಂಧಿ ಕುಟುಂಬ ಈ ಮೂರು ಕುಟುಂಬಗಳು ಇಲ್ಲಿ ಪ್ರಜಾಪ್ರಭುತ್ವವನ್ನು ನಿಲ್ಲಿಸಿದ್ದವು. ಈ ಚುನಾವಣೆಯು ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಮೂರು ಕುಟುಂಬಗಳ ಆಡಳಿತವನ್ನು ಕೊನೆಗೊಳಿಸಲಿದೆ. 2014 ರಲ್ಲಿ ಮೋದಿ ಸರ್ಕಾರ ಬರದಿದ್ದರೆ ಇಲ್ಲಿ ಬ್ಲಾಕ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.


    ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಇಲ್ಲಿ 35 ವರ್ಷ ಆಳಿತು. ಭಯೋತ್ಪಾದನೆ ಹೆಚ್ಚಾಯಿತು. 40 ಸಾವಿರ ಜನರು ಹತ್ಯೆಯಾದರು. ಮೂರು ಸಾವಿರ ದಿನ ಜಮ್ಮು ಮತ್ತು ಕಾಶ್ಮೀರ ಮುಚ್ಚಿತ್ತು. ಎಂಟು ವರ್ಷಗಳ ಕಾಲ ಕತ್ತಲೆಯಲ್ಲಿ ಮುಳುಗಿತ್ತು. ಇದಕ್ಕೆಲ್ಲ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಹೊಣೆಗಾರರು ಎಂದರು.

  • ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ರಾಹುಲ್‌ ಬಾಬಾ ಐಸ್‌ಕ್ರೀಂ ತಿಂದಿದ್ದಾರೆ, ಬೈಕ್‌ ರೈಡ್‌ ಮಾಡಿದ್ದಾರೆ: ಅಮಿತ್‌ ಶಾ

    ಕಾಶ್ಮೀರ ಈಗ ಸುರಕ್ಷಿತವಾಗಿರುವುದರಿಂದ ರಾಹುಲ್‌ ಬಾಬಾ ಐಸ್‌ಕ್ರೀಂ ತಿಂದಿದ್ದಾರೆ, ಬೈಕ್‌ ರೈಡ್‌ ಮಾಡಿದ್ದಾರೆ: ಅಮಿತ್‌ ಶಾ

    ಶ್ರೀನಗರ: ಕಾಶ್ಮೀರ (Jammu Kashmir) ಈಗ ಸುರಕ್ಷಿತವಾಗಿರುವುದರಿಂದ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಐಸ್ ಕ್ರೀಮ್ ತಿಂದಿದ್ದಾರೆ ಮತ್ತು ಬೈಕ್ ಓಡಿಸಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ (Amit Shah) ಕಾಲೆಳೆದಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ, ನಾವು ಕಾಶ್ಮೀರವನ್ನು ಸುರಕ್ಷಿತಗೊಳಿಸಿದ್ದೇವೆ. ರಾಹುಲ್ ಬಾಬಾ ಕಾಶ್ಮೀರದಲ್ಲಿ ಬೈಕ್ ಓಡಿಸಿದ್ದಾರೆ ಮತ್ತು ಲಾಲ್ ಚೌಕ್‌ನಲ್ಲಿ ಐಸ್‌ಕ್ರೀಂ (Ice Cream) ತಿನ್ನುತ್ತಿದ್ದಾಗ ಮೋದಿಜಿಯನ್ನು ನಿಂದಿಸಿದ್ದಾರೆ. ನೀವು ಮೋದಿ ಅವರನ್ನು ನೀವು ನಿಂದಿಸಬಹುದು. ಆದರೆ ನಿಮ್ಮ ಸರ್ಕಾರದಲ್ಲಿ ಇಲ್ಲಿ ಶಾಂತಿ ಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ. ಮೋದಿಯವರು ಭಯೋತ್ಪಾದನೆಯನ್ನು ಸಮಾಧಿಯಲ್ಲಿ ಹೂತು ಹಾಕಿದ್ದಾರೆ ಎಂದರು. ಇದನ್ನೂ ಓದಿ: ಈದ್ ಮಿಲಾದ್ ಹೊತ್ತಲ್ಲೇ ರಾಜ್ಯದಲ್ಲಿ ಪ್ಯಾಲೆಸ್ತೀನ್ ಪ್ರೇಮ – ಚಿಕ್ಕಮಗಳೂರಲ್ಲಿ ಬಾವುಟ; 6 ಮಂದಿ ವಿರುದ್ಧ ಕೇಸ್

     

    ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಶ್ರೀನಗರದ ಲಾಲ್ ಚೌಕ್‌ನಲ್ಲಿರುವ (Lal Chowk) ಅಂಗಡಿಯಲ್ಲಿ ಐಸ್ ಕ್ರೀಮ್ ತಿಂದಿದ್ದರು. ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು ಲಡಾಖ್‌ನಲ್ಲಿ ಬೈಕ್ ಓಡಿಸಿದ್ದರು. ಈ ವಿಚಾರವನ್ನು ಪ್ರಸ್ತಾಪ ಮಾಡಿ ಅಮಿತ್‌ ಶಾ ವ್ಯಂಗ್ಯವಾಡಿದರು.

    ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾಗಲೂ ಕಾಶ್ಮೀರಕ್ಕೆ ತೆರಳಲು ತಾನು ಹೆದರುತ್ತಿದ್ದೆ ಎಂದು ಮಾಜಿ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರ ಇತ್ತೀಚಿನ ಹೇಳಿಕೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ಶಾ ವಾಗ್ದಾಳಿ ನಡೆಸಿದರು.

     

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ (Sushil Kumar Shinde) ಅವರು ಲಾಲ್‌ ಚೌಕ್‌ಗೆ ಬರಲು ನಾನು ಹೆದರಿದ್ದೆ ಎಂದು ಹೇಳಿದ್ದಾರೆ. ಶಿಂಧೆ ಸಾಹೇಬರೇ, ಈಗ ನಿಮ್ಮ ಮಕ್ಕಳೊಂದಿಗೆ ಬಂದು ಲಾಲ್ ಚೌಕ್ ನಲ್ಲಿ ಸಂಚರಿಸಿ. ನಿಮ್ಮ ಮೇಲೆ ಯಾರು ದಾಳಿ ಮಾಡುವ ಧೈರ್ಯತೋರಿಸುವುದಿಲ್ಲ ಎಂದು ಹೇಳಿದರು.

    ಸೆ. 10 ರಂದು ದೆಹಲಿಯಲ್ಲಿ ನಡೆದ ತಮ್ಮ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಶಿಂಧೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಭಯಭೀತನಾಗಿದ್ದೆ. ಆದರೆ ಯಾರಿಗೆ ಹೇಳುವುದು? ಈಗ ನಾನು ಈ ವಿಚಾರ ತಿಳಿಸುತ್ತಿದ್ದೇನೆ. 2008 ಮತ್ತು 2010ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ ಪಾಕಿಸ್ತಾನದ ಧ್ವಜಗಳು ಹಾರಿದ ಸಂದರ್ಭವನ್ನು ನಾನು ನೋಡಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

     

  • ಸುರಕ್ಷಿತ, ಸಮೃದ್ಧ ಜಮ್ಮು-ಕಾಶ್ಮೀರ ನಿರ್ಮಿಸುತ್ತೇವೆ, ಇದು ಮೋದಿ ಗ್ಯಾರಂಟಿ: ಪ್ರಧಾನಿ ಭರವಸೆ

    ಸುರಕ್ಷಿತ, ಸಮೃದ್ಧ ಜಮ್ಮು-ಕಾಶ್ಮೀರ ನಿರ್ಮಿಸುತ್ತೇವೆ, ಇದು ಮೋದಿ ಗ್ಯಾರಂಟಿ: ಪ್ರಧಾನಿ ಭರವಸೆ

    – ಈ ಚುನಾವಣೆ ಪರಿವಾರ-ಯುವಕರ ನಡುವಿನದು

    ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ (Jammu And Kashmir) ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವ ಕೆಲಸವನ್ನು ಬಿಜೆಪಿ (BJP) ಸರ್ಕಾರ ಮಾತ್ರ ಮಾಡಲಿದೆ. ತಮ್ಮ ಸ್ವಾರ್ಥಕ್ಕಾಗಿ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಪರಿವಾರದ ಪಕ್ಷಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದು ಪ್ರಧಾನಿ ಮೋದಿ (Narendra Modi) ಹೇಳಿದ್ದಾರೆ.

    ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ (Assembly Elections) ಹಿನ್ನೆಲೆ ದೋಡಾದಲ್ಲಿ (Doda) ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗಳು ಮೂರು ರಾಜವಂಶಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಕರ ನಡುವೆ ನಡೆಯುತ್ತಿದೆ. ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಈ ಮೂರು ಕುಟುಂಬಗಳು ಸೇರಿ ಮಾಡಿದ ಕೆಲಸ ಯಾವ ಪಾಪಕ್ಕಿಂತ ಕಡಿಮೆಯಿಲ್ಲ. ಈ ಮೂರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರವನ್ನು ವರ್ಷಗಳಿಂದ ನಾಶಮಾಡಲು ಕಾರಣವಾಗಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೀಸಲಾತಿ ಸ್ಥಗಿತ ಬಗ್ಗೆ ರಾಹುಲ್ ಹೇಳಿಕೆ – ದಲಿತರ ಹಣ ನುಂಗಿ ಹೀಗೆ ಮಾತಾಡುವ ಕಾಂಗ್ರೆಸಿಗರು ಪಾಪಿಗಳು: ಛಲವಾದಿ

    ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಹಂತ ಬಂದಿದೆ. ಇದರ ಶ್ರೇಯಸ್ಸು ಇಲ್ಲಿನ ಯುವಕರಿಗೆ ಮಾತ್ರ ಸಲ್ಲುತ್ತದೆ. ಇಂದು ನಾನು ಜಮ್ಮು ಮತ್ತು ಕಾಶ್ಮೀರದ ಯುವಕರು, ಅದು ಗಂಡಾಗಿರಲಿ, ಹೆಣ್ಣಮಕ್ಕಳಾಗಿರಲಿ ಅವರ ಉತ್ಸಾಹವನ್ನು ಅಭಿನಂದಿಸುತ್ತೇನೆ ಎಂದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‍ಕೌಂಟರ್ – ಐವರು ಉಗ್ರರು ಬಲಿ

    2000ದ ಬಳಿಕ ಇಲ್ಲಿ ಪಂಚಾಯ್ತಿ ಚುನಾವಣೆ ನಡೆದಿಲ್ಲ. ಬಿಡಿಸಿ ಚುನಾವಣೆಗಳು ಇಲ್ಲಿ ನಡೆದಿಲ್ಲ. ದಶಕಗಳಿಂದ ಸ್ವಜನಪಕ್ಷಪಾತವು ಇಲ್ಲಿನ ಮಕ್ಕಳು ಮತ್ತು ಭರವಸೆಯ ಯುವಕರನ್ನು ಮುಂದೆ ಬರಲು ಬಿಡಲಿಲ್ಲ. ಯುವಕರು ರಾಜಕೀಯಕ್ಕೆ ಬರುವುದು ಕುಟುಂಬದವರಿಗೆ ಇಷ್ಟವಿರಲಿಲ್ಲ. 2014ರಲ್ಲಿ ಬಿಜೆಪಿ ಸರ್ಕಾರಕ್ಕೆ ಬಂದ ನಂತರ, ನಾನು ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರ ಹೊಸ ನಾಯಕತ್ವವನ್ನು ತರಲು ಪ್ರಯತ್ನಿಸಿದೆ. ನಂತರ 2018ರಲ್ಲಿ ಪಂಚಾಯತ್ ಚುನಾವಣೆಗಳು ನಡೆದವು. 2019ರಲ್ಲಿ ಬಿಡಿಸಿ ಚುನಾವಣೆಗಳು ನಡೆದವು ಮತ್ತು 2020 ರಲ್ಲಿ ಮೊದಲ ಬಾರಿಗೆ ಡಿಡಿಸಿ ಚುನಾವಣೆಗಳು ನಡೆದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ತಳಮಟ್ಟದವರೆಗೆ ತಲುಪಲು ಈ ಚುನಾವಣೆಗಳನ್ನು ನಡೆಸಲಾಯಿತು ಎಂದು ಹೇಳಿದರು. ಇದನ್ನೂ ಓದಿ:  ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗದಲ್ಲಿ ಸಿದ್ದರಾಮಯ್ಯ ಮನೆ: ಹೆಚ್‌ಡಿಕೆ ಬಾಂಬ್‌

    ಸ್ವಾತಂತ್ರ‍್ಯ ಬಂದಾಗಿನಿಂದಲೂ ನಮ್ಮ ಪ್ರೀತಿಯ ಜಮ್ಮು ಮತ್ತು ಕಾಶ್ಮೀರ ವಿದೇಶಿ ಶಕ್ತಿಗಳ ಗುರಿಯಾಗಿದೆ. ಇದರ ನಂತರ ಸ್ವಜನಪಕ್ಷಪಾತವು ಈ ಸುಂದರ ರಾಜ್ಯವನ್ನು ಟೊಳ್ಳು ಮಾಡಲು ಪ್ರಾರಂಭಿಸಿತು. ನೀವು ನಂಬಿದ ರಾಜಕೀಯ ಪಕ್ಷಗಳಿಗೆ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಆ ರಾಜಕೀಯ ಪಕ್ಷಗಳು ತಮ್ಮ ಮಕ್ಕಳನ್ನು ಮಾತ್ರ ಬೆಳೆಸಿದವು. ಜಮ್ಮು ಮತ್ತು ಕಾಶ್ಮೀರದ ನನ್ನ ಯುವಕರು ಭಯೋತ್ಪಾದನೆಯಲ್ಲಿ ನಲುಗುತ್ತಲೇ ಇದ್ದರು. ರಾಜವಂಶವನ್ನು ಉತ್ತೇಜಿಸುವ ಪಕ್ಷಗಳು ನಿಮ್ಮನ್ನು ದಾರಿ ತಪ್ಪಿಸುವ ಮೂಲಕ ಮೋಜು ಮಾಡುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ನಾಯಕತ್ವ ಹೊರಹೊಮ್ಮಲು ಈ ಜನರು ಎಂದಿಗೂ ಅನುಮತಿಸಲಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೀವನವು ಖಟಾ-ಖಟ್ ಅಲ್ಲ, ಕಠಿಣ ಪರಿಶ್ರಮ ಬೇಕು: ರಾಹುಲ್‌ಗೆ ಜೈಶಂಕರ್‌ ಟಾಂಗ್‌

    ಈ ಬಾರಿಯ ಚುನಾವಣೆ ಜಮ್ಮು ಮತ್ತು ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸಲಿದೆ. ನಾವು ಸುರಕ್ಷಿತ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಾಣ ಮಾಡುತ್ತೇವೆ. ನಾನು ನಿಮಗಾಗಿ ಮತ್ತು ದೇಶಕ್ಕಾಗಿ ಡಬಲ್ ಮತ್ತು ಟ್ರಿಪಲ್ ಕೆಲಸ ಮಾಡುವ ಮೂಲಕ ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಮರುಪಾವತಿಸುತ್ತೇನೆ. ನಾವು ಒಟ್ಟಾಗಿ ಸುರಕ್ಷಿತ ಮತ್ತು ಸಮೃದ್ಧ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಿಸುತ್ತೇವೆ. ಇದು ಮೋದಿ ಗ್ಯಾರಂಟಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಹೊಟ್ಟೆ ತುಂಬ ಊಟ ಕೊಡಿ ಪ್ಲೀಸ್ – ಅರೆಹೊಟ್ಟೆಯಲ್ಲಿ ವಸತಿ ಶಾಲಾ ವಿದ್ಯಾರ್ಥಿನಿಯರ ಪರದಾಟ

  • ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ

    ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ

    – ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಭಯೋತ್ಪಾದಕರೊಂದಿಗಿನ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಥುವಾದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ರೈಸಿಂಗ್ ಸ್ಟಾರ್ ಕಾರ್ಪ್ಸ್‌ನ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

    ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಕಿಶ್ತ್ವಾರ್‌ನ ಚತ್ರೂದಲ್ಲಿ ಪ್ರಾರಂಭಿಸಲಾಗಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿತ್ತು. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ.

    ಕಿಶ್ತ್ವಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರೇ ಜುಲೈನಲ್ಲಿ ದೋಡಾದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲೂ ಭಾಗಿಯಾಗಿದ್ದರು. ಆಗ ಅಧಿಕಾರಿ ಸೇರಿದಂತೆ ನಾಲ್ವರು ಸೈನಿಕರು ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು.

  • ಜಮ್ಮು & ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ – ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಉಗ್ರರು

    ಜಮ್ಮು & ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ – ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಉಗ್ರರು

    ಶ್ರೀನಗರ: ಸೇನೆಯ ವಿಶೇಷ ಪಡೆಗಳು, ಜಮ್ಮು ಮತ್ತು ಕಾಶ್ಮೀರ (Jammu & Kashmir) ಪೊಲೀಸರು ಬುಧವಾರ ಕಥುವಾ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

    ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ. ಇಬ್ಬರು ಉಗ್ರರ ಮೃತದೇಹಗಳು ಪತ್ತೆಯಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಉಗ್ರರು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದರು. ಇದನ್ನೂ ಓದಿ: ರಾಹುಲ್‌ ಹೇಳಿಕೆ ಉಲ್ಲೇಖಿಸಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ಬೇಡಿಕೆ ಮುಂದಿಟ್ಟ ಉಗ್ರ ಪನ್ನುನ್

    ಜಮ್ಮು ಮತ್ತು ಕಾಶ್ಮೀರದಲ್ಲಿ ಸೆ.18 ರಿಂದ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಇಂದು ಮುಂಜಾನೆ, ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಗಾಯಗೊಂಡಿದ್ದಾರೆ.

    ಸೇನಾಪಡೆಗಳು ಕಟ್ಟೆಚ್ಚರದಲ್ಲಿವೆ ಎಂದು ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಕಾಯುವ ಬಿಎಸ್‌ಎಫ್‌ ತಿಳಿಸಿದೆ. ಈ ಗಡಿಯು ಸರಿಸುಮಾರು 3,323 ಕಿಮೀ ವ್ಯಾಪಿಸಿದೆ. ಉದ್ವಿಗ್ನತೆ ಮತ್ತು ಭದ್ರತಾ ಸವಾಲುಗಳನ್ನು ಹೊಂದಿರುವ ವಿವಿಧ ವಲಯಗಳನ್ನು ಈ ಗಡಿ ಭಾಗ ಹೊಂದಿದೆ. ಇದನ್ನೂ ಓದಿ: ತಮಿಳುನಾಡಿನ ಮೀನುಗಾರಿಕಾ ಬೋಟ್‍ಗೆ ಲಂಕಾ ನೌಕಾಪಡೆಯ ಹಡಗು ಡಿಕ್ಕಿ – ನಾಲ್ವರಿಗೆ ಗಾಯ