Tag: jammu kashmir

  • Jammu Kashmir | ಕಾಂಗ್ರೆಸ್‌ ಬೆಂಬಲ ಇಲ್ಲದೇ ಬಹುಮತ ಸಾಧಿಸಿದ NC

    Jammu Kashmir | ಕಾಂಗ್ರೆಸ್‌ ಬೆಂಬಲ ಇಲ್ಲದೇ ಬಹುಮತ ಸಾಧಿಸಿದ NC

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಕಾಂಗ್ರೆಸ್‌ (Congress) ಬೆಂಬಲ ಇಲ್ಲದೇ ನ್ಯಾಷನಲ್‌ ಕಾನ್ಫರೆನ್ಸ್‌ (NC) ಈಗ ಬಹುಮತ ಪಡೆದಿದೆ. 4 ಮಂದಿ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದಾರೆ.

    ಒಟ್ಟು 90 ಸ್ಥಾನಗಳಿಗೆ ಚುನಾವಣೆ (Election) ನಡೆದಿದ್ದು ಸರ್ಕಾರ ರಚನೆಗೆ 46 ಶಾಸಕರ ಬೆಂಬಲ ಬೇಕು. ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ 42, ಕಾಂಗ್ರೆಸ್‌ 6 ಸ್ಥಾನ ಗೆದ್ದರೆ 7 ಮಂದಿ ಪಕ್ಷೇತರರಯ ಗೆದ್ದಿದ್ದರು. 7 ಮಂದಿಯ ಪೈಕಿ 4 ಮಂದಿ ಎನ್‌ಸಿಗೆ ಬೆಂಬಲ ನೀಡಿದ್ದಾರೆ. ಇದನ್ನೂ ಓದಿ: ರತನ್ ಟಾಟಾಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಶಿಫಾರಸು

    ಕಾಂಗ್ರೆಸ್‌ ಮತ್ತು ಪಕ್ಷೇತರರ ಬೆಂಬಲದಿಂದಾಗಿ ಎನ್‌ಸಿ ಬಲ ಮತ್ತಷ್ಟು ಗಟ್ಟಿಯಾಗಲಿದೆ. ಪಕ್ಷೇತರರ ಬಲ ಇರುವ ಕಾರಣ ಮಂತ್ರಿ ಸ್ಥಾನ ಹಂಚುವ ವೇಳೆ ಕಾಂಗ್ರೆಸ್‌ ಶಾಸಕರಿಗೆ ಮಂತ್ರಿಗಿರಿ ಸಾಧ್ಯತೆ ಕಡಿಮೆಯಿದೆ.

    ಯಾರು ಎಷ್ಟು ಸ್ಥಾನ?
    ನ್ಯಾಷನಲ್‌ ಕಾನ್ಫರೆನ್ಸ್‌ – 42
    ಬಿಜೆಪಿ – 29
    ಕಾಂಗ್ರೆಸ್‌ – 06
    ಪಿಡಿಪಿ – 03
    ಜೆಪಿಸಿ – 1
    ಸಿಪಿಐ(ಎಂ)- 01
    ಆಪ್‌ – 01
    ಇತರರು – 07

  • ಮತ ಎಣಿಕೆಯಲ್ಲಿ ಅಕ್ರಮ, ಆಯೋಗಕ್ಕೆ ದೂರು ನೀಡುತ್ತೇವೆ: ರಾಹುಲ್‌ ಗಾಂಧಿ

    ಮತ ಎಣಿಕೆಯಲ್ಲಿ ಅಕ್ರಮ, ಆಯೋಗಕ್ಕೆ ದೂರು ನೀಡುತ್ತೇವೆ: ರಾಹುಲ್‌ ಗಾಂಧಿ

    ನವದೆಹಲಿ: ಹರಿಯಾಣದಲ್ಲಿ (Haryana Election) ಆಘಾತಕಾರಿ ಸೋಲು ಅನುಭವಿಸಿದ ಒಂದು ದಿನದ ಬಳಿಕ ಲೋಕಸಭೆ (Lok Sabha ) ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ (Rahul Ganndhi) ಮೌನ ಮುರಿದಿದ್ದಾರೆ.

    ಹರಿಯಾಣ ಸೋಲಿನ ಬಗ್ಗೆ ವಿಶ್ಲೇಷಣೆ ನಡೆಸಲಾಗುವುದು ಮತ್ತು ಕೆಲವು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ಗೆ ಸೋಲು – ಮೈತ್ರಿ ಪಕ್ಷವನ್ನೇ ಟೀಕಿಸಿದ ಶಿವಸೇನೆ

    ನಾವು ಹರಿಯಾಣದ ಅನಿರೀಕ್ಷಿತ ಫಲಿತಾಂಶವನ್ನು ವಿಶ್ಲೇಷಿಸುತ್ತಿದ್ದೇವೆ. ಹಲವು ವಿಧಾನಸಭಾ ಕ್ಷೇತ್ರಗಳಿಂದ ಬರುವ ದೂರುಗಳ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ತಿಳಿಸುತ್ತೇವೆ. ಈ ಅವಧಿಯಲ್ಲಿ ಬೆಂಬಲಿಸಿದ ಹರಿಯಾಣದ ಎಲ್ಲಾ ಜನರಿಗೆ ಮತ್ತು ಅವರ ಅವಿರತ ಶ್ರಮಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು. ನಾವು ಮುಂದುವರಿಯುತ್ತೇವೆ, ನಿಮ್ಮ ಹಕ್ಕುಗಳಿಗಾಗಿ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ, ಸತ್ಯಕ್ಕಾಗಿ ಮತ್ತು ನಿಮ್ಮ ಪರವಾಗಿ ನಾವು ಧ್ವನಿಯನ್ನು ಎತ್ತುತ್ತಲೇ ಇರುತ್ತೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭೂಪಿಂದರ್‌ ಹೂಡಾಗೆ ಮಣೆ ಹಾಕಿ ಕೈ ಸುಟ್ಟುಕೊಂಡ ಕಾಂಗ್ರೆಸ್!‌

    ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಫಲಿತಾಂಶವು ಸಂವಿಧಾನದ ಗೆಲುವು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ವಿಜಯವು ಸಂವಿಧಾನದ ವಿಜಯವಾಗಿದೆ, ಪ್ರಜಾಪ್ರಭುತ್ವದ ಸ್ವಾಭಿಮಾನದ ಗೆಲುವಾಗಿದೆ ಎಂದು ಬಣ್ಣಿಸಿದ್ದಾರೆ.

     

  • 5 ಸ್ಟಾರ್‌ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡವರನ್ನ ಒಡೆಯುತ್ತಿದ್ದಾರೆ: ರಾಗಾಗೆ ಮೋದಿ ಚಾಟಿ

    5 ಸ್ಟಾರ್‌ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡವರನ್ನ ಒಡೆಯುತ್ತಿದ್ದಾರೆ: ರಾಗಾಗೆ ಮೋದಿ ಚಾಟಿ

    – ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ನಡೆದಿದೆ
    – ಬಿಜೆಪಿ ಬಡವರ ಸೇವೆಗೆ ಬದ್ಧ

    ನವದೆಹಲಿ: ಹುಟ್ಟುತ್ತಲೇ ಬೆಳ್ಳಿ ಸ್ಪೂನ್‌ ಹಿಡಿದವರು, ಪಂಚತಾರಾ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡಜನರನ್ನು ಒಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಪ್ರಧಾನಿ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ.

    ದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವದ ವೇಳೆ ಮಾತನಾಡಿದ ಮೋದಿ, ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಮತದಾರರು ಕಾಂಗ್ರೆಸ್‌ಗೆ ‘ನೋ ಎಂಟ್ರಿ’ ಬೋರ್ಡ್‌ ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸತತ 3ನೇ ಬಾರಿಗೆ ಅಧಿಕಾರ ನೀಡಿ ಹರಿಯಾಣ ಇತಿಹಾಸ ಬರೆದಿದೆ: ಮೋದಿ ಸೆಲ್ಯೂಟ್‌

    ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಅಪರೂಪ. 13 ವರ್ಷಗಳ ಹಿಂದೆ ಅಸ್ಸಾಂನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತು. 60 ವರ್ಷಗಳಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರದ ಕೆಲವು ರಾಜ್ಯಗಳಿವೆ ಎಂದು ಮೋದಿ ಕುಟುಕಿದ್ದಾರೆ.

    ಹುಟ್ಟುತ್ತಲೇ ಬೆಳ್ಳಿ ಚಮಚ ಹಿಡಿದು, ಪಂಚತಾರಾ ಹೋಟೆಲ್‌ಗಳಲ್ಲಿ ಜೀವನ ನಡೆಸುತ್ತಿರುವವರು ಬಡವರು ಜಾತಿ ವಿಚಾರದಲ್ಲಿ ತಮ್ಮ ತಮ್ಮಲ್ಲೇ ಜಗಳ ಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ನಮ್ಮ ದಲಿತ ಸಮುದಾಯ ಇದನ್ನು ಮರೆಯಬಾರದು ಎಂದು ಪ್ರಧಾನಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್‌

    ದಲಿತ ಓಬಿಸಿ ಮೀಸಲಾತಿ ಕಸಿದು ತನ್ನ ವೋಟ್‌ಬ್ಯಾಂಕ್‌ಗೆ ನೀಡಲು ಸಂಚು ಮಾಡಿತ್ತು. ಹರಿಯಾಣದಲ್ಲೂ ಇದನ್ನೇ ಮಾಡಲು ಹೊರಟಿದ್ದರು. ಕಾಂಗ್ರೆಸ್ ಅರಾಜಕತೆ ಸೃಷ್ಟಿಸಿ ದೇಶವನ್ನು ಬಲಹೀನಗೊಳಿಸುತ್ತದೆ. ನಮ್ಮ ಸೇನೆಯ ಬಗ್ಗೆಯೂ ಅಪಪ್ರಚಾರ ಮಾಡಿತು. ನಮ್ಮ ಯುವಕರೂ ಇದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ. ದೇಶಭಕ್ತರನ್ನು ಒಡೆಯುವ ಕಾಂಗ್ರೆಸ್ ಪ್ರಯತ್ನವನ್ನು ಹರಿಯಾಣ ಜನರು ವಿಫಲಗೊಳಿಸಿದ್ದಾರೆ. ಭಾರತದ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆದಿದೆ. ಕಾಂಗ್ರೆಸ್ ಸೇರಿದಂತೆ ಅದರ ಇತರೆ ಪಕ್ಷಗಳು ಇದರಲ್ಲಿ ಶಾಮೀಲಾಗಿವೆ. ನಾನು ಇದನ್ನು ಬಹಳಷ್ಟು ಜವಬ್ದಾರಿಯಿಂದ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ನಾವು ಇಂತಹ ಕುತಂತ್ರ ಸಫಲವಾಗಲು ಬಿಟ್ಟಿಲ್ಲ. ಕಾಂಗ್ರೆಸ್ ಈಗ ಪರ ಜೀವಿ ಪಕ್ಷವಾಗಿದೆ. ಹರಿಯಾಣದಲ್ಲಿ ಒಂದೇಯಾಗಿತ್ತು, ಅದಕ್ಕೆ ಹೀನಾಯ ಸೋಲಾಯಿತು. ಜಮ್ಮು ಕಾಶ್ಮೀರದಲ್ಲಿ ಎನ್‌ಸಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್‌ನಿಂದ ನಷ್ಟವಾಗಿದೆ ಎಂದು ಈ ಹಿಂದೆ ಎನ್‌ಸಿ ಹೇಳಿತ್ತು. ಈಗ ಕಾಶ್ಮೀರದಲ್ಲಿ ಅದೇ ಆಗಿದೆ. ಯಾರು ಕಾಂಗ್ರೆಸ್ ಮೇಲೆ ಭರವಸೆ ಇಟ್ಟಿದ್ದರೋ, ಅವರ ದೋಣಿಯೇ ಮುಳುಗಿದೆ. ಬಿಜೆಪಿ ಸರ್ಕಾರ ಎರಡು ರಾಜ್ಯಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲಿದೆ. ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ರೋಡ್ ಮ್ಯಾಪ್ ಸಿದ್ಧಪಡಿಸಿದೆ. ಮಹಿಳೆಯರ ಸಶಕ್ತಿಕರಣಕ್ಕಾಗಿ ಬಿಜೆಪಿ ಫೋಕಸ್ ಮಾಡುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Jammu Kashmir Results | ಚುನಾವಣೆಯಲ್ಲಿ ಸೋತರೂ ಮತಗಳಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

    ದೇಶವೇ ಮೊದಲ ಎನ್ನುವ ಸಂಕಲ್ಪ ಬಿಜೆಪಿ ಹೊಂದಿದೆ. ಬಿಜೆಪಿ ಬಡವರ ಸೇವೆಗೆ ಬದ್ಧವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಕಳೆದ ಹತ್ತು ವರ್ಷದಲ್ಲಿ ಭ್ರಷ್ಟಾಚಾರ ಒಂದೇ ಒಂದು ಕಳಂಕ ಇಲ್ಲ. ನಾವು ಸಮರ್ಪಣ ಭಾವದಿಂದ ಕೆಲಸ ಮಾಡಿದ್ದೇವೆ. ನಾನು ಸಿಎಂ ಮನೋಹರ ಲಾಲ್ ಕಟ್ಟರ್ ಮತ್ತು ಸೈನಿಗೆ ಶ್ಲಾಘಿಸುತ್ತೇನೆ. ನಮ್ಮ ನೀತಿ ನಿಯತ್ತಿಗೆ ಬೆಂಬಲ ಸಿಕ್ಕಾಗ, ಕೆಲಸ ಮಾಡಲು ದ್ವಿಗುಣ ಶಕ್ತಿ ಬರುತ್ತದೆ. ಜಮ್ಮು ಕಾಶ್ಮೀರ ಅಭಿವೃದ್ಧಿಯಾಗುತ್ತದೆ, ಭಾರತ ಅಭಿವೃದ್ಧಿಯಾಗುತ್ತದೆ. ನಮ್ಮ ಎಲ್ಲ ಹೋರಾಟದ ಹಿಂದೆ ಕಾರ್ಯಕರ್ತರ ಶ್ರಮವಿದೆ. ಹೆಜ್ಜೆಗೆ ಹೆಜ್ಜೆ ಹಾಕಿ ಭುಜಕ್ಕೆ ಭುಜ ಕೊಟ್ಟು ನಡೆಯುವ ನಮ್ಮ ಕಾರ್ಯಕರ್ತರು ಯಾವುದಕ್ಕೂ ಬಗ್ಗುವುದಿಲ್ಲ ಎಂದು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ.

  • Jammu Kashmir Results | ಚುನಾವಣೆಯಲ್ಲಿ ಸೋತರೂ ಮತಗಳಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

    Jammu Kashmir Results | ಚುನಾವಣೆಯಲ್ಲಿ ಸೋತರೂ ಮತಗಳಿಕೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

    ನವದೆಹಲಿ: 10 ವರ್ಷದ ಬಳಿಕ ನಡೆದ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ (Jammu Kashmir Election) ನ್ಯಾಷನಲ್‌ ಕಾಂಗ್ರೆಸ್‌, ಕಾಂಗ್ರೆಸ್‌, ಸಿಪಿಐ(ಎಂ) ಮೈತ್ರಿಕೂಟ ಗೆದ್ದು ಬೀಗಿದ್ದರೂ ಮತಗಳಿಕೆಯಲ್ಲಿ (Vote Share) ಬಿಜೆಪಿ (BJP) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    90 ಸ್ಥಾನಗಳ ಪೈಕಿ INDIA ಮೈತ್ರಿಕೂಟ 49 ಸ್ಥಾನ ಗೆದ್ದಿದೆ. ನ್ಯಾಷನಲ್ ಕಾನ್ಫರೆನ್ಸ್ 42, ಕಾಂಗ್ರೆಸ್ 6 ಮತ್ತು ಸಿಪಿಐ 1 ಕಡೆ ಗೆದ್ದಿದೆ. ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದ ಬಿಜೆಪಿ 29 ಸ್ಥಾನ ಗೆದ್ದು ವಿಪಕ್ಷ ಸ್ಥಾನವನ್ನು ಅಲಂಕರಿಸಿದೆ. ಪಿಡಿಪಿ ಕೇವಲ 3 ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಇತರರು ಎಂಟು ಕಡೆ ಗೆದ್ದಿದ್ದಾರೆ.

    ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಅವರ ಪಕ್ಷದ ಪ್ರಣಾಳಿಕೆಗಳು ಕೈಹಿಡಿದಿವೆ. ಎಂದಿನಂತೆ ಬಿಜೆಪಿ ಜಮ್ಮು ಪ್ರಾಂತ್ಯದಲ್ಲಿ ಪಾಸ್ ಆದರೆ, ಕಾಶ್ಮೀರದಲ್ಲಿ ಫೇಲ್ ಆಗಿದೆ. ಆದರೂ ಮತ ಪ್ರಮಾಣದಲ್ಲಿ ಬಿಜೆಪಿ ಎಲ್ಲಾ ಪಕ್ಷಗಳಿಗಿಂತ ಮುಂದಿದೆ ಎಂಬುದು ವಿಶೇಷ. ಇದನ್ನೂ ಓದಿ: Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ

    ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಪಿಡಿಪಿಯನ್ನು ಈ ವಿಚಾರದಲ್ಲಿ ಹಿಂದಿಕ್ಕಿದೆ. ಬಹುತೇಕ ಕಡೆ ಎನ್‌ಸಿ-ಕಾಂಗ್ರೆಸ್‌ಗೆ ಬಿಜೆಪಿ ಬಿಗ್ ಫೈಟ್ ನೀಡಿದೆ. ಗಣನೀಯ ಪ್ರಮಾಣದಲ್ಲಿ ಮತ ಗಿಟ್ಟಿಸಿದೆ ಎನ್ನುವುದು ಗಮನಾರ್ಹ ಸಂಗತಿ.

    ಮುಸ್ಲಿಮರೇ ಹೆಚ್ಚಿರುವ ಜಮ್ಮುವಿನ ಕಿಶ್ತ್ವಾರದಲ್ಲಿ ಬಿಜೆಪಿಯ ಮಹಿಳಾ ಅಭ್ಯರ್ಥಿ ಶಗುನ್ ಪರಿಹಾರ್ 521 ಮತಗಳ ಅಂತರದಿಂದ ಗೆದ್ದಿರುವುದು ಸಣ್ಣ ಸಂಗತಿಯಲ್ಲ. 2014ರ ಚುನಾವಣೆಯಲ್ಲಿಯೂ ಬಿಜೆಪಿ ಕಾಶ್ಮೀರ ಪ್ರಾಂತ್ಯದಲ್ಲಿ ಶೂನ್ಯ ಸಂಪಾದನೆ ಮಾಡಿತ್ತು.  ಇದನ್ನೂ ಓದಿ: Haryana Results| ಕಾಂಗ್ರೆಸ್‌ ಸೋತಿದ್ದು ಹೇಗೆ? – ಇಲ್ಲಿದೆ 6 ಕಾರಣಗಳು

     

     

    ಮತ ಪ್ರಮಾಣ ಯಾರಿಗೆ ಎಷ್ಟು?
    ಬಿಜೆಪಿ – 25.64%
    ನ್ಯಾಷನಲ್‌ ಕಾನ್ಫರೆನ್ಸ್‌ – 23.43%
    ಕಾಂಗ್ರೆಸ್‌ – 11.97%
    ಪಿಡಿಪಿ – 8.8%
    ನೋಟಾ -1.48%

    2014 ವಿಧಾನಸಭಾ ಚುನಾವಣೆಯಲ್ಲಿ ಏನಾಗಿತ್ತು?
    ಒಟ್ಟು 87 ಕ್ಷೇತ್ರಗಳ ಪೈಕಿ ಪಿಡಿಪಿ 28 (22.9%), ಬಿಜೆಪಿ 25 (23.2%) ನ್ಯಾಷನಲ್‌ ಕಾನ್ಫರೆನ್ಸ್‌ 15 (21%) ಕಾಂಗ್ರೆಸ್‌ 12 (18.2%) ಮತಗಳನ್ನು ಪಡೆದಿತ್ತು. ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ – ಖಾತೆ ತೆರೆದ ಎಎಪಿ; ಬಿಜೆಪಿ ಅಭ್ಯರ್ಥಿ ವಿರುದ್ಧ ಮಲಿಕ್‌ ಜಯಭೇರಿ

    2024ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು?
    ಒಟ್ಟು 5 ಕ್ಷೇತ್ರಗ ಪೈಕಿ ಬಿಜೆಪಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್‌ ತಲಾ 2 ರಲ್ಲಿ ಜಯಗಳಿಸಿದರೆ ಪಕ್ಷೇತರ ಅಭ್ಯರ್ಥಿ ಅಬ್ದುಲ್‌ ರಶೀದ್‌ ಬಾರಾಮುಲ್ಲಾದಿಂದ ಗೆದ್ದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ 24.6% ನ್ಯಾಷನಲ್‌ ಕಾನ್ಫರೆನ್ಸ್‌ 22.4%, ಪಕ್ಷೇತರರು 14.8% ಮತ ಗಳಿಸಿದ್ದರು.

     

  • Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ

    Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ

    – ಮುಸ್ಲಿಂ ಬಾಹುಳ್ಯ ಇರುವ ಕ್ಷೇತ್ರದಲ್ಲಿ ಜಯ

    ಶ್ರೀನಗರ: 2018ರಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಅಜಿತ್ ಪರಿಹಾರ್ ಎಂಬವರ ಮಗಳು ಶಗುನ್ ಪರಿಹಾರ್ (Shagun Parihar) ಬಿಜೆಪಿಯಿಂದ (BJP) ಜಮ್ಮು ಮತ್ತು ಕಾಶ್ಮೀರದ (Jammu Kashmir) ಕಿಶ್ತ್ವಾರ್‌ನಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 521 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಶಗುನ್ ಪರಿಹಾರ್ 29,053 ಮತಗಳನ್ನು ಪಡೆದರೆ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನಿಂದ ಎರಡು ಬಾರಿ ಶಾಸಕರಾದ ಸಜ್ಜದ್ ಅಹ್ಮದ್ ಕಿಚ್ಲೂ ಅವರು 28,532 ಮತಗಳನ್ನು ಗಳಿಸಿದರು. ಈ ಮೂಲಕ ಶಗುನ್ ಪರಿಹಾರ್ 521 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: Haryana Results| ಕಾಂಗ್ರೆಸ್‌ ಸೋತಿದ್ದು ಹೇಗೆ? – ಇಲ್ಲಿದೆ 6 ಕಾರಣಗಳು

    ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 14 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ತಮ್ಮ ಮೊದಲ ಪ್ರಚಾರರದ ವೇಳೆ ಕೇಂದ್ರಾಡಳಿತ ಪ್ರದೇಶದಲ್ಲಿ ʻಭಯೋತ್ಪಾದನೆಯನ್ನು ಕೊನೆಗೊಳಿಸಲು ಬಿಜೆಪಿಯ ಸಂಕಲ್ಪಕ್ಕೆ ಜೀವಂತ ಉದಾಹರಣೆʼ ಎಂದು ಶಗುನ್ ಪರಿಹಾರ್ ಅವರನ್ನು ಪರಿಚಯಿಸಿದ್ದರು.

    ಬಿಜೆಪಿಯ ಶಗುನ್ ಪರಿಹಾರ್ ಅವರ ತಂದೆ ಅಜಿತ್ ಪರಿಹಾರ್ ಮತ್ತು ಜಿಲ್ಲಾ ಬಿಜೆಪಿ ನಾಯಕರಾಗಿದ್ದ ಅವರ ಚಿಕ್ಕಪ್ಪ ಅನಿಲ್ ಪರಿಹಾರ್ ಅವರನ್ನು ನವೆಂಬರ್ 2018 ರಲ್ಲಿ ಭಯೋತ್ಪಾದಕರು ಹತ್ಯೆಗೈದಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ – ಖಾತೆ ತೆರೆದ ಎಎಪಿ; ಬಿಜೆಪಿ ಅಭ್ಯರ್ಥಿ ವಿರುದ್ಧ ಮಲಿಕ್‌ ಜಯಭೇರಿ

  • ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ – ಖಾತೆ ತೆರೆದ ಎಎಪಿ; ಬಿಜೆಪಿ ಅಭ್ಯರ್ಥಿ ವಿರುದ್ಧ ಮಲಿಕ್‌ ಜಯಭೇರಿ

    ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ – ಖಾತೆ ತೆರೆದ ಎಎಪಿ; ಬಿಜೆಪಿ ಅಭ್ಯರ್ಥಿ ವಿರುದ್ಧ ಮಲಿಕ್‌ ಜಯಭೇರಿ

    ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷ (AAP) ಖಾತೆ ತೆರೆದಿದೆ.

    ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ, ಜಮ್ಮು ಮತ್ತು ಕಾಶ್ಮೀರದ ದೋಡಾ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿ ಇತಿಹಾಸ ಬರೆದಿದೆ. ಆಪ್ ಅಭ್ಯರ್ಥಿ ಮೆಹರಾಜ್ ಮಲಿಕ್, ಬಿಜೆಪಿಯ ಗಜಯ್ ಸಿಂಗ್ ರಾಣಾ ಅವರನ್ನು ಸೋಲಿಸಿದ್ದಾರೆ. ಇದನ್ನೂ ಓದಿ: Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ

    36 ನೇ ವಯಸ್ಸಿನಲ್ಲಿ ಮಲಿಕ್ ಅವರು ತಮ್ಮ ಪರ್ವತ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆಯ ಮೇಲೆ ಮತ ಕೇಳಿದ್ದರು. ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ದೋಡಾದಲ್ಲಿ ರ‍್ಯಾಲಿ ನಡೆಸಿದ್ದು, ಮಲಿಕ್‌ ಪ್ರಚಾರಕ್ಕೆ ಮತ್ತಷ್ಟು ಶಕ್ತಿ ನೀಡಿತ್ತು.

    2014 ರ ಬಳಿಕ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಿತು. ಸೆ.18 ರಂದು ಮೊದಲ ಹಂತದಲ್ಲಿ 24 ಸ್ಥಾನಗಳಿಗೆ ಮತದಾನ ನಡೆಯಿತು. ಸೆ.25 ರಂದು ಎರಡನೇ ಹಂತದಲ್ಲಿ 26 ಸ್ಥಾನ ಹಾಗೂ ಅ.1 ರಂದು ಕೊನೆ ಹಂತದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯಿತು. ಇದನ್ನೂ ಓದಿ: Haryana Results| ಕಾಂಗ್ರೆಸ್‌ ಸೋತಿದ್ದು ಹೇಗೆ? – ಇಲ್ಲಿದೆ 6 ಕಾರಣಗಳು

    ಕಾಶ್ಮೀರದಲ್ಲಿ ಎನ್‌ಸಿ-ಕಾಂಗ್ರೆಸ್ ಒಟ್ಟು 90 ಸ್ಥಾನಗಳಲ್ಲಿ 40-48, ಬಿಜೆಪಿ 27-32, ಪಿಡಿಪಿ 6-12 ಮತ್ತು ಇತರರು 6-11 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ರಾಜ್ಯದಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳ ಅಗತ್ಯವಿದೆ. ಎನ್‌ಸಿ-ಕಾಂಗ್ರೆಸ್‌ ಮೈತ್ರಿಕೂಟ ರಾಜ್ಯದಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.

  • ಒಮರ್‌ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮುಂದಿನ ಸಿಎಂ

    ಒಮರ್‌ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮುಂದಿನ ಸಿಎಂ

    ಶ್ರೀನಗರ: ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಒಮರ್‌ ಅಬ್ದುಲ್ಲಾ (Omar Abdullah) ಆಯ್ಕೆ ಆಗಿದ್ದಾರೆ.

    ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌, ಕಾಂಗ್ರೆಸ್‌ ಮೈತ್ರಿಕೂಟ ಜಯಗಳಿಸಿದ ಬೆನ್ನಲ್ಲೇ ಕಾಶ್ಮೀರದ ಮಾಜಿ ಸಿಎಂ ಫಾರೂಖ್‌ ಅಬ್ದುಲ್ಲಾ (Farooq Abdullah) ಅವರು ಒಮರ್‌ ಅಬ್ದುಲ್ಲಾ ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದಾರೆ.

    ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷನಾಗಿರುವ ಒಮರ್ ಅಬ್ದುಲ್ಲಾ ಬುದ್ಗಾಮ್ ಮತ್ತು ಗಂದರ್ಬಾಲ್ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಅಬ್ದುಲ್ಲಾ ಕುಟುಂಬಕ್ಕೆ ಮೂರು ತಲೆಮಾರುಗಳಿಂದ ಗಂದೇರ್ಬಾಲ್ ಕ್ಷೇತ್ರ ಭದ್ರಕೋಟೆಯಾಗಿದೆ. ಎನ್‌ಸಿ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರು 1977 ರಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು. ನಂತರ ಅವರ ಮಗ ಫಾರೂಕ್ ಅಬ್ದುಲ್ಲಾ ಅವರು 1983, 1987 ಮತ್ತು 1996 ರಲ್ಲಿ ವಿಜಯಗಳಿಸಿದರು. ನಂತರ ಒಮರ್ ಅಬ್ದುಲ್ಲಾ ಅವರು 2008 ರಲ್ಲಿ ಕ್ಷೇತ್ರದಿಂದ ಆಯ್ಕೆಯಾದರು.

    ಬುದ್ಗಾಮ್‌ನಲ್ಲಿ ಅಬ್ದುಲ್ಲಾ ಅವರು ಪಿಡಿಪಿಯ ಅಗಾ ಸೈಯದ್ ಮುಂತಜೀರ್ ಮೆಹದಿ ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್‌ನ ಅಗಾ ಸೈಯದ್ ಅಹ್ಮದ್ ಮೂಸ್ವಿ ಸೇರಿದಂತೆ 7 ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದರು.

    ಆರಂಭದಿಂದಲೂ ಎನ್‌ಸಿ ಮತ್ತು ಕಾಂಗ್ರೆಸ್‌ ಮುನ್ನಡೆ ಸಿಕ್ಕಿತ್ತು. ಮಧ್ಯಾಹ್ನ 2 ಟ್ರೆಂಡ್‌ ಪ್ರಕಾರ ಎನ್‌ಸಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟ 51ಕ್ಷೇತ್ರ, ಬಿಜೆಪಿ (BJP) 27 ಪಿಡಿಪಿ (PDP) 02 ಇತರರು 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಒಟ್ಟು 90 ಕ್ಷೇತ್ರಗಳ ಪೈಕಿ ಎನ್‌ಸಿ 56, ಕಾಂಗ್ರೆಸ್‌ 38, ಸಿಪಿಎಂ 1 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿದ್ದವು. ಬಿಜೆಪಿ 62 ಕ್ಷೇತ್ರಗಳಲ್ಲಿ ಪಿಡಿಪಿ 81 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.

    90 ಕ್ಷೇತ್ರಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯು ಮೂರು ಹಂತಗಳಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ನಡೆದಿತ್ತು

    2014 ರಲ್ಲಿ ನಡೆದ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಷನಲ್‌ ಕಾನ್ಫರೆನ್ಸ್‌ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರದ ಭರವಸೆಯಿತ್ತು, 3ನೇ ಬಾರಿಗೆ ಬಿಜೆಪಿಗೆ ಅಧಿಕಾರ ಸಿಗುತ್ತಿದೆ: ರಾಮಲಿಂಗಾ ರೆಡ್ಡಿ

    ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರದ ಭರವಸೆಯಿತ್ತು, 3ನೇ ಬಾರಿಗೆ ಬಿಜೆಪಿಗೆ ಅಧಿಕಾರ ಸಿಗುತ್ತಿದೆ: ರಾಮಲಿಂಗಾ ರೆಡ್ಡಿ

    – ಬಿಜೆಪಿಯ ಸಿಹಿ ಸುಳ್ಳುಗಳನ್ನು ಜನರು ಬೇಗ ನಂಬುತ್ತಾರೆ

    ಚಿತ್ರದುರ್ಗ: ಹರಿಯಾಣದಲ್ಲಿ (Haryana) ಕಾಂಗ್ರೆಸ್‌ಗೆ (Congress) ಅಧಿಕಾರದ ಭರವಸೆಯಿತ್ತು. ಮೂರನೇ ಬಾರಿಗೆ ಬಿಜೆಪಿಗೆ (BJP) ಅಧಿಕಾರ ಸಿಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ (Jammu And Kashmir) ಹಾಗೂ ಹರಿಯಾಣ ಚುನಾವಣಾ ಫಲಿತಾಂಶದ (Election Results) ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದ ವಿರುದ್ಧ ಅಲ್ಲಿನ ಜನರಿದ್ದರು. ಕೇಂದ್ರ ಸರ್ಕಾರದ ವಿರುದ್ಧವೂ ಹರಿಯಾಣ ಜನರಿದ್ದರು. ಹರಿಯಾಣದಲ್ಲಿ ಗ್ಯಾರಂಟಿ ಘೋಷಣೆ ವಿಫಲ ಅಂತ ಅಲ್ಲ. ಬಿಜೆಪಿಯ ಸಿಹಿ ಸುಳ್ಳುಗಳನ್ನು ಜನರು ಬಹುಬೇಗ ನಂಬುತ್ತಾರೆ. ಜನ ನಂಬುವಂತೆ ಬಿಜೆಪಿಗರು ಸುಳ್ಳುಗಳನ್ನು ಹೇಳುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಇಲ್ಲೂ ನಂಬಿದ್ದರು ಎಂದರು. ಇದನ್ನೂ ಓದಿ: ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಯೇ ನಡೆದಿಲ್ಲ: ಸಚಿವ ಕೃಷ್ಣಭೈರೇಗೌಡ

    ಐದು ವರ್ಷ ಸಿದ್ಧರಾಮಯ್ಯ ಸಿಎಂ ಆಗಿ ಇರುತ್ತಾರೆ. ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರಗೆ ಕನಸು ಬೀಳುತ್ತಿರುತ್ತವೆ ಎಂದು ವ್ಯಂಗ್ಯವಾಡಿದರು. ಜಾತಿ ಜನಗಣತಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ನ್ಯೂನತೆಗಳಿದ್ದರೆ ಸರಿಪಡಿಸಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಈಗ ಅಪ್ರಸ್ತುತ. ಮುಂದೆ ದಲಿತರು ಸಿಎಂ, ಪಿಎಂ ಆಗಲಿ, ಬೇಡ ಎನ್ನಲು ಆಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತೆ ಅಂತ ವಿಪಕ್ಷಗಳು ಬೊಬ್ಬೆ ಹಾಕ್ತಿದ್ವು – ವಿಜಯೇಂದ್ರ

  • Jammu Kashmir Results | ಅಧಿಕಾರದತ್ತ ಎನ್‌ಸಿ, ಕಾಂಗ್ರೆಸ್‌ ಮೈತ್ರಿ – ಬಿಜೆಪಿಗೆ ಹಿನ್ನಡೆ

    Jammu Kashmir Results | ಅಧಿಕಾರದತ್ತ ಎನ್‌ಸಿ, ಕಾಂಗ್ರೆಸ್‌ ಮೈತ್ರಿ – ಬಿಜೆಪಿಗೆ ಹಿನ್ನಡೆ

    ನವದೆಹಲಿ: ಜಮ್ಮು ಕಾಶ್ಮೀರದಲ್ಲಿ (Jammu Kashmir) 10 ವರ್ಷದ ನಂತರ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (National Conference) ಮತ್ತು ಕಾಂಗ್ರೆಸ್ (Congress) ಮೈತ್ರಿಕೂಟವು 50 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಸರಳ ಬಹುಮತದತ್ತ ದಾಪುಗಾಲಿಟ್ಟಿದೆ.

    ಆರಂಭದಿಂದಲೂ ಎನ್‌ಸಿ ಮತ್ತು ಕಾಂಗ್ರೆಸ್‌ ಮುನ್ನಡೆ ಸಿಕ್ಕಿತ್ತು. ಮಧ್ಯಾಹ್ನ 12 ಗಂಟೆಯ ಟ್ರೆಂಡ್‌ ಪ್ರಕಾರ ಎನ್‌ಸಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟ 50 ಕ್ಷೇತ್ರ, ಬಿಜೆಪಿ (BJP) 26, ಪಿಡಿಪಿ (PDP) 05, ಇತರರು 09 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಚುನಾವಣೆ ಇದಾಗಿರುವ ಕಾರಣ ಈ ಚುನಾವಣೆ ಮಹತ್ವ ಪಡೆದಿತ್ತು.

    ಈ ಚುನಾವಣೆಯಲ್ಲಿ ಗೆದ್ದರೆ ಜಮ್ಮು ಕಾಶ್ಮೀರಕ್ಕೆ ರಾಜ್ಯಸ್ಥಾನಮಾನವನ್ನು ನೀಡುತ್ತೇವೆ ಎಂದು ಕಾಂಗ್ರೆಸ್‌ ಮತ್ತು ಎನ್‌ಸಿ ಘೋಷಿಸಿತ್ತು. ಅಷ್ಟೇ ಅಲ್ಲದೇ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತ್ತು. ಈ ಘೋಷಣೆಗಳ ಪರಿಣಾಮ ಎನ್‌ಸಿ ಮೈತ್ರಿಕೂಟ ಚುನಾವಣೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.

    ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಎನ್‌ಸಿ ಮೈತ್ರಿಕೂಟ ಜಮ್ಮು ಕಾಶ್ಮೀರದಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದವು.

     

    ಒಟ್ಟು 90 ಕ್ಷೇತ್ರಗಳ ಪೈಕಿ ಎನ್‌ಸಿ 56, ಕಾಂಗ್ರೆಸ್‌ 38, ಸಿಪಿಎಂ 1 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಇಳಿಸಿದ್ದವು. ಬಿಜೆಪಿ 62 ಕ್ಷೇತ್ರಗಳಲ್ಲಿ ಪಿಡಿಪಿ 81 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.

    90 ಕ್ಷೇತ್ರಗಳ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯು ಮೂರು ಹಂತಗಳಲ್ಲಿ ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1ರಂದು ನಡೆದಿತ್ತು  2014 ರಲ್ಲಿ ನಡೆದ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಷನಲ್‌ ಕಾನ್ಫರೆನ್ಸ್‌ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • Haryana Result | 2 ಲಕ್ಷ ಸರ್ಕಾರಿ ಉದ್ಯೋಗ ಭರವಸೆ, 100 ಚದರ ಅಡಿ ಸೈಟು ಫ್ರೀ ಗ್ಯಾರಂಟಿ: ಯಾರ ʻಕೈʼ ಮೇಲಾಗುತ್ತೆ?

    Haryana Result | 2 ಲಕ್ಷ ಸರ್ಕಾರಿ ಉದ್ಯೋಗ ಭರವಸೆ, 100 ಚದರ ಅಡಿ ಸೈಟು ಫ್ರೀ ಗ್ಯಾರಂಟಿ: ಯಾರ ʻಕೈʼ ಮೇಲಾಗುತ್ತೆ?

    ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶವೂ (Haryana Election Result) ಇಂದೇ (ಅಕ್ಟೋಬರ್ 8) ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಹರಿಯಾಣದಲ್ಲಿ 90 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು, ಅಧಿಕಾರದ ಗದ್ದುಗೆ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

    2019ರ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ 90 ಸ್ಥಾನಗಳಲ್ಲಿ ಬಿಜೆಪಿ 40, ಕಾಂಗ್ರೆಸ್ (Congress) 31 ಮತ್ತು ಜನನಾಯಕ ಜನತಾ ಪಕ್ಷ (BJP) 10 ಸ್ಥಾನಗಳನ್ನು ಗೆದ್ದಿದ್ದವು. ಜೆಜೆಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿತ್ತು. ದುಶ್ಯಂತ್ ಚೌಟಾಲಾ ಉಪಮುಖ್ಯಮಂತ್ರಿಯಾದರು. ಮಾರ್ಚ್‌ನಲ್ಲಿ ಬಿಜೆಪಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ ನಂತರ ಮೈತ್ರಿ ಕೊನೆಗೊಂಡಿತ್ತು. ಇದೀಗ ಹ್ಯಾಟ್ರಿಕ್‌ ಗೆಲುವು ಸಾಧಿಸುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್‌ ಅಧಿಕಾರ ಹಿಡಿಯಲು ಪ್ರಯತ್ನಿಸಿದೆ. ಈ ಗೆಲುವಿಗೆ ಪಕ್ಷದ ಪ್ರಣಾಳಿಕೆಗಳೂ ಮಹತ್ವದ ಪಾತ್ರ ವಹಿಸುತ್ತವೆಯೇ ಎಂಬುದನ್ನು ಕಾದುನೋಡಬೇಕಿದೆ. ಯಾವ ಪಕ್ಷದ ಪ್ರಣಾಳಿಕೆ ಹೇಗಿದೆ? ಎಂಬುದನ್ನು ನೋಡುವುದಾದರೆ…

    ಹರಿಯಾಣಕ್ಕೆ ಕಾಂಗ್ರೆಸ್‌ ಸಪ್ತ ಗ್ಯಾರಂಟಿ!
    1. 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಮತ್ತು 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು.
    2. 18 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಜೊತೆಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು.
    3. 2 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಡ್ರಗ್ ಮುಕ್ತ ಹರಿಯಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು
    4. ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ಪಿಂಚಣಿ 6,000 ರೂ. ಹಾಗೂ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಲಾಗುವುದು.
    5. ಜಾತಿ ಗಣತಿ ನಡೆಸಲಾಗುವುದು, ಕೆನೆ ಪದರದ ಮಿತಿಯನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.
    6. ಕನಿಷ್ಠ ಬೆಂಬಲ ಬೆಲೆ (MSP) ಕಾನೂನುಬದ್ಧವಾಗಿ ಖಾತರಿಪಡಿಸುತ್ತದೆ. ಬೆಳೆ ಪರಿಹಾರ ತಕ್ಷಣ ದೊರೆಯಲಿದೆ.
    7. ಬಡ ಕುಟುಂಬಗಳಿಗೆ 100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ಕೋಣೆಗಳ ಮನೆ

    ಬಿಜೆಪಿ ಗ್ಯಾರಂಟಿಗಳೇನು?
    * ಲಡೋ ಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ 2,100 ರೂಪಾಯಿ ಭತ್ಯೆ ನೀಡುವುದಾಗಿ ಬಿಜೆಪಿ ಭರವಸೆ
    * 10 ಕೈಗಾರಿಕಾ ನಗರಗಳನ್ನು ನಿರ್ಮಿಸಲು ಯೋಜನೆ ಈ ಮೂಲಕ ಸ್ಥಳೀಯ ಯುವಕರಿಗೆ 50,000 ಉದ್ಯೋಗಗಳನ್ನು ಸೃಷ್ಟಿ
    * ಚಿರಾಯು-ಆಯುಷ್ಮಾನ್ ಯೋಜನೆಯು ಪ್ರತಿ ಕುಟುಂಬಕ್ಕೆ ರೂ 10 ಲಕ್ಷದವರೆಗೆ ಉಚಿತ ಚಿಕಿತ್ಸೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಹೆಚ್ಚುವರಿ ರೂ 5 ಲಕ್ಷವನ್ನು ನೀಡುತ್ತದೆ
    * ಕನಿಷ್ಠ ಬೆಂಬಲ ಬೆಲೆಯಲ್ಲಿ 24 ಬೆಳೆಗಳ ಖರೀದಿಯನ್ನು ಖಾತರಿಪಡಿಸಲಾಗಿದೆ
    * 200,000 ಸರ್ಕಾರಿ ಉದ್ಯೋಗ ಭರವಸೆ ನೀಡಲಾಗಿದೆ
    * ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 500,000 ಮನೆಗಳನ್ನು ನಿರ್ಮಾಣ
    * ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್, ಜೊತೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ರೋಗನಿರ್ಣಯ ಸೇವೆಗಳು
    * ಪ್ರತಿ ಜಿಲ್ಲೆಗೂ ಒಲಂಪಿಕ್ ಗೇಮ್ಸ್ ನರ್ಸರಿ
    * ಹರ್ ಘರ್ ಗೃಹನಿ ಯೋಜನೆ ಅಡಿಯಲ್ಲಿ ಸಿಲಿಂಡರ್‌ಗಳನ್ನು ರೂ 500 ಕ್ಕೆ ನೀಡಲಾಗುತ್ತದೆ
    * ಆವಲ್ ಬಾಲಿಕಾ ಯೋಜನೆಯು ಗ್ರಾಮೀಣ ಪ್ರದೇಶದ ಪ್ರತಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗೆ ಸ್ಕೂಟರ್ ಅನ್ನು ಖಾತರಿಪಡಿಸುತ್ತದೆ
    * ಪ್ರತಿಯೊಬ್ಬ ಹರ್ಯಾನ್ವಿ ಅಗ್ನಿವೀರ್‌ಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಲಾಗುವುದು