Tag: jammu kashmir

  • ಜಮ್ಮು-ಕಾಶ್ಮೀರ: ವಾಹನದೊಳಗೆ ಇಬ್ಬರು ಪೊಲೀಸ್‌ ಸಿಬ್ಬಂದಿ ಮೃತದೇಹ ಪತ್ತೆ

    ಜಮ್ಮು-ಕಾಶ್ಮೀರ: ವಾಹನದೊಳಗೆ ಇಬ್ಬರು ಪೊಲೀಸ್‌ ಸಿಬ್ಬಂದಿ ಮೃತದೇಹ ಪತ್ತೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪೊಲೀಸ್ ವಾಹನದೊಳಗೆ ಗುಂಡಿನ ಗಾಯಗಳಿರುವ ಇಬ್ಬರು ಪೊಲೀಸ್‌ ಸಿಬ್ಬಂದಿ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎಕೆ-47 ರೈಫಲ್ ಗುಂಡೇಟು ಬಿದ್ದಿವೆ ಎಂದು ಉಧಂಪುರ ಪೊಲೀಸರು ತಿಳಿಸಿದ್ದಾರೆ. ಸಿಬ್ಬಂದಿ ಸೋಪೋರ್‌ನಿಂದ ತಲ್ವಾರ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದರು ಎಂದು ಎಸ್‌ಎಸ್‌ಪಿ ಉಧಂಪುರ ಅಮೋದ್ ಅಶೋಕ್ ನಾಗ್‌ಪುರೆ ಮಾಹಿತಿ ನೀಡಿದ್ದಾರೆ.

    ಬೆಳಗ್ಗೆ 6:30 ಕ್ಕೆ ಘಟನೆ ನಡೆದಿದೆ. ಅವರು ಸೋಪೋರ್‌ನಿಂದ ತಲ್ವಾರದಲ್ಲಿರುವ ತರಬೇತಿ ಕೇಂದ್ರದ ಕಡೆಗೆ ಹೋಗುತ್ತಿದ್ದರು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆಯಲ್ಲಿ ಎಕೆ -47 ರೈಫಲ್ ಬಳಸಿರುವುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

    ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾರ್ಯವಿಧಾನಗಳಿಗಾಗಿ ಜಿಎಂಸಿ ಉಧಂಪುರಕ್ಕೆ ಸಾಗಿಸಲಾಗಿದೆ.

  • ಜಮ್ಮು-ಕಾಶ್ಮೀರ | ಭದ್ರತಾ ಪಡೆ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆ

    ಜಮ್ಮು-ಕಾಶ್ಮೀರ | ಭದ್ರತಾ ಪಡೆ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ದಾಚಿಗಂ ಅರಣ್ಯ ಪ್ರದೇಶದಲ್ಲಿ (Dachigam Forest) ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಉಗ್ರರಿರುವ ಮಾಹಿತಿ ಮೇರೆಗೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸೋಮವಾರ (ಡಿ.01) ಎನ್‌ಕೌಂಟರ್ ಪ್ರಾರಂಭವಾಗಿದ್ದು, ಮಂಗಳವಾರ ಬೆಳಿಗ್ಗೆ ಓರ್ವ ಉಗ್ರ ಹತನಾಗಿದ್ದಾನೆ.ಇದನ್ನೂ ಓದಿ: UI ರಿಲೀಸ್‌ಗೂ ಮುನ್ನ ಉಪೇಂದ್ರ & ಟೀಮ್‌ ಟೆಂಪಲ್‌ ರನ್

    ದಾಚಿಗಂ ಅರಣ್ಯ ಪ್ರದೇಶಕ್ಕೂ ಮುನ್ನ ಶ್ರೀನಗರದ ಹರ್ವಾನ್ ಅರಣ್ಯಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಬಳಿಕ ಉಗ್ರರ ಅಡಗುತಾಣ ಸುತ್ತುವರಿದಾಗ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಎನ್‌ಕೌಂಟರ್ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ನ.23 ರಂದು, ಬಾರಾಮುಲ್ಲಾ ಪೊಲೀಸರು ಹಾಗೂ ಭದ್ರತಾ ಪಡೆಗಳೊಂದಿಗೆ ನಡೆಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕುಂಜರ್ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸುವ ಮೂಲಕ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡರು.ಇದನ್ನೂ ಓದಿ: ಬಿಜೆಪಿಯಲ್ಲಿ ಬಣ ಫೈಟ್ – ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೇಟಿ

     

  • ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

    ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

    ಮುಂಬೈ: ಸ್ವತಃ ಇಂದಿರಾ ಗಾಂಧಿ (Indira Gandhi) ಅವರೇ ಸ್ವರ್ಗದಿಂದ ಹಿಂತಿರುಗಿ ಬಂದರೂ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಗುಡುಗಿದರು.

    ಮಹಾರಾಷ್ಟ್ರದ ಚುನಾವಣಾ (Maharashtra Elections) ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಸರ್ಕಾರವು 370ನೇ ವಿಧಿಯನ್ನು (Article 370) ಮರುಸ್ಥಾಪಿಸಲು ನಿರ್ಣಯ ಮಂಡಿಸಿದೆ. ನಾನು ಈಗಲೂ ಹೇಳುತ್ತೇನೆ ಸ್ವತಃ ಇಂದಿರಾ ಗಾಂಧಿ ಅವರೇ ಸ್ವರ್ಗದಿಂದ ಹಿಂತಿರುಗಿ ಬಂದರೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಮೈಕೆಲ್ ಕುನ್ಹಾ 7,223 ಕೋಟಿ ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ: ಹೆಚ್‌.ಕೆ ಪಾಟೀಲ್

    ಇದೇ ವೇಳೆ ಶ್ರೀನಗರದ ಲಾಲ್ ಚೌಕ್‌ಗೆ ಭೇಟಿ ನೀಡಿದಾಗ ನನಗೆ ಭಯವಾಗಿತ್ತು ಎಂಬ ಮಾಜಿ ಕೇಂದ್ರ ಸಚಿವ ಸುಶೀಲ್‌ಕುಮಾರ್ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮನಮೋಹನ್ ಆಡಳಿತದ 10 ವರ್ಷಗಳ ಅವಧಿಯಲ್ಲಿ, ಭಯೋತ್ಪಾದಕರು ಪಾಕಿಸ್ತಾನದಿಂದ ಮುಕ್ತವಾಗಿ ಬಂದು ಇಲ್ಲಿ ಬಾಂಬ್ ಸ್ಫೋಟ ಮಾಡುತ್ತಿದ್ದರು, ಬಾಂಬ್‌ ಸ್ಫೋಟಕ್ಕೂ ಪ್ರಚೋದನೆ ನೀಡುತ್ತಿದ್ದರು. ಶಿಂಧೇ ಜೀ, ಈಗ ನಿಮ್ಮ ಮೊಮ್ಮಕ್ಕಳೊಂದಿಗೆ ಈಗ ಕಾಶ್ಮೀರಕ್ಕೆ ಬೇಕಾದ್ರೂ ಹೋಗಿ, ನಿಮಗೆ ಏನೂ ಆಗುವುದಿಲ್ಲ ಎಂದು ಹೇಳಿದರು.

    ಇತ್ತೀಚೆಗೆ ಮುಂಬೈನಲ್ಲಿ ನಡೆದ ರ‍್ಯಾಲಿಯಲ್ಲೂ ಇದೇ ರೀತಿಯ ಹೇಳಿಕೆಗಳನ್ನು ಸಚಿವರು ನೀಡಿದ್ದರು. ರಾಹುಲ್ ಗಾಂಧಿಯವರ 4ನೇ ತಲೆಮಾರಿನವರು ಬಂದರೂ ಸಹ ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಗುಡುಗಿದ್ದರು. ಇದನ್ನೂ ಓದಿ:  ರಾಜ್ಯದ ಜನತೆಗೆ ಮುಜರಾಯಿ ಇಲಾಖೆ ಗುಡ್‌ನ್ಯೂಸ್ – ವೈಷ್ಣೋದೇವಿಗೆ ತೆರಳುವ ಭಕ್ತರಿಗೆ 5,000 ಸಹಾಯಧನ

  • ಕಾಶ್ಮೀರ್‌ದ ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಓರ್ವ ಸೇನಾಧಿಕಾರಿ ಹುತಾತ್ಮ: ಮೂವರಿಗೆ ಗಾಯ

    ಕಾಶ್ಮೀರ್‌ದ ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಓರ್ವ ಸೇನಾಧಿಕಾರಿ ಹುತಾತ್ಮ: ಮೂವರಿಗೆ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕಿಶ್ತ್ವಾರ್ (Kishtwar) ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಸೇನಾಧಿಕಾರಿ ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ.

    ಸೇನಾಧಿಕಾರಿಯನ್ನು ನಯೀಬ್ ಸುಬೇದಾರ್ ರಾಕೇಶ್ ಕುಮಾರ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಡಬಲ್‌ ಮರ್ಡರ್‌ ಕೇಸ್‌ – ಆರೋಪಿ ಬಂಧನ

    ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರ ತಂಡಗಳು ಉಗ್ರರಿಗಾಗಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ನ.10 ರಂದು ಕಿಶ್ತ್ವಾರ್‌ನ ಭರ್ಟ್ ರಿಡ್ಜ್ ಪ್ರದೇಶದಲ್ಲಿ 2 ಪ್ಯಾರಾ (ವಿಶೇಷ ಪಡೆಯ) ನಾಲ್ವರು ಗಾಯಗೊಂಡಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಉಧಂಪುರಕ್ಕೆ ವಿಮಾನದಲ್ಲಿ ಕಳುಹಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸೇನಾಧಿಕಾರಿ ನೈಬ್ ಸುಬೇದಾರ್ ಕುಮಾರ್ ಸಾವನ್ನಪ್ಪಿದ್ದಾರೆ.

    ಅದೇ ಸ್ಥಳದಿಂದ ಕೆಲವು ಕಿ.ಮೀ. ದೂರದಲ್ಲಿರುವ ಕುಂಟ್ವಾರ ಮತ್ತು ಕಿಶ್ತ್ವಾರ್‌ನ ಕೇಶ್ವಾನ್ ಅರಣ್ಯದಲ್ಲಿ ವಿಲೇಜ್ ಡಿಫೆನ್ಸ್ ಗ್ರೂಪ್‌ನ ಇಬ್ಬರು ಸದಸ್ಯರು ಪತ್ತೆಯಾಗಿದ್ದಾರೆ. ಇನ್ನೂ ಅದೇ ತಂಡದ ಇಬ್ಬರನ್ನು ಅಪಹರಿಸಿ ಹತ್ಯೆಗೈದಿದ್ದಾರೆ.ಇದನ್ನೂ ಓದಿ: Maharashtra Polls | 28 ಬಂಡಾಯ ಅಭ್ಯರ್ಥಿಗಳನ್ನು ಅಮಾನತುಗೊಳಿಸಿದ ಕಾಂಗ್ರೆಸ್‌

  • ಈ ಮೋದಿ ಇರೋವರೆಗೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಗುಡುಗಿದ ಪ್ರಧಾನಿ

    ಈ ಮೋದಿ ಇರೋವರೆಗೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಗುಡುಗಿದ ಪ್ರಧಾನಿ

    ಮುಂಬೈ (ನಾಸಿಕ್‌): ಈ ಮೋದಿ ಇದೋವರೆಗೂ ಈ ದೇಶದಲ್ಲಿ ಕಾಂಗ್ರೆಸ್‌ ಯಾವುದೇ ಪಿತೂರಿ ಮಾಡಲು ಸಾಧ್ಯವಿಲ್ಲ. ಅಂಬೇಡ್ಕರ್‌ ಸಂವಿಧಾನ ಮಾತ್ರ ಈ ದೇಶದಲ್ಲಿ ನಡೆಯುತ್ತದೆ. ಯಾವುದೇ ಶಕ್ತಿಯು 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಸಿಕ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಣಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಪಿತೂರಿಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: Articles 370 Row | ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನ ಮಾರಾಮಾರಿ

    ಕಾಂಗ್ರೆಸ್‌ ಪಕ್ಷವು ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ವಿಧಾನಸಭೆಯಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಈಗಾಗಲೇ ಅಂಗೀಕರಿಸಲಾಗಿದೆ. ಮಹರಾಷ್ಟ್ರದ ಜನತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ಪಿತೂರಿಗಳನ್ನು ಅರ್ಥಮಾಡಿಕೊಳ್ಳಬೇಕು. 370ನೇ ವಿಧಿಯ ಮೇಲಿನ ನಿರ್ಣಯವನ್ನು ಈ ದೇಶ ಒಪ್ಪಿಕೊಳ್ಳುವುದಿಲ್ಲ. ಮೋದಿ ಇದುವವರೆಗೂ ಕಾಶ್ಮೀರದಲ್ಲಿ ಕಾಂಗ್ರೆಸ್‌ ಯಾವುದೇ ಪಿತೂರಿ ಮಾಡಲು ಸಾಧ್ಯವಾಗುವುದಿಲ್ಲ. ಅಂಬೇಡ್ಕರ್‌ ಅವರ ಸಂವಿಧಾನ ಮಾತ್ರ ಈ ದೇಶದಲ್ಲಿ ನಡೆಯುತ್ತದೆ. ಯಾವುದೇ ಶಕ್ತಿಯು 370ನೇ ವಿಧಿ ಮರಳಿ ತರಲು ಸಾಧ್ಯವಿಲ್ಲ ಎಂದು ಗುಡುಗಿದರು.

    ರಾಹುಲ್‌ ಗಾಂಧಿಗೆ ಮೋದಿ ಸವಾಲ್‌:
    ವೀರ ಸಾವರ್ಕರ್‌ರನ್ನ ಹಾಡಿ ಹೊಗಳಿದರು. ಇದೇ ವೇಳೆ ಸಾವರ್ಕರ್‌, ಬಾಳಾಸಾಹೇಬ್‌ ಠಾಕ್ರೆ ಅವರನ್ನ ಹೊಗಳುವಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಗೆ ಸವಾಲ್‌ ಹಾಕಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ

    ಕಾಂಗ್ರೆಸ್‌ನವರು ಮೊದಲಿನಿಂದಲೂ ಸಾವರ್ಕರ್‌ ಅವರನ್ನ ನಿಂದಿಸುತ್ತಿದ್ದಾರೆ. ಆದ್ರೆ ಎಂವಿಎ ಈ ಚುನಾವಣೆಯಲ್ಲಿ ಗೆಲ್ಲಬೇಕಾದ್ರೆ ಸಾವರ್ಕರ್‌ ನಿಂದಿಸೋದನ್ನ ನಿಲ್ಲಿಸುವಂತೆ ಕಾಂಗ್ರೆಸ್‌ನ ʻಯುವರಾಜʼನಿಗೆ ಹೇಳಿದೆ. ಆದ್ರೆ ಕಾಂಗ್ರೆಸ್‌ ಎಂದಿಗೂ ಸಾವರ್ಕರ್‌ ಹಾಗೂ ಶಿವಸೇನೆ ಸಂಸ್ಥಾಪಕರನ್ನು ಹೊಗಳುವುದಿಲ್ಲ. ಅವರಿಗೆ ನೈತಿಕತೆಯಿದ್ದರೆ ಸಾವರ್ಕರ್‌ ಅವರ ತ್ಯಾಗ ಸಮರ್ಪಣೆಯನ್ನು ಪ್ರಸಂಶಿಸುವಂತೆ ಸವಾಲು ಹಾಕುತ್ತೇನೆ ಎಂದಿದ್ದಾರೆ.

    ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಾವರ್ಕರ್ ಅವರು ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದವರು. ಆದ್ರೆ ಕಾಂಗ್ರೆಸ್‌ ಅವರ ತ್ಯಾಗವನ್ನ ಕಡೆಗಣಿಸುತ್ತಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಅವರ ಪಾತ್ರವನ್ನು ಟೀಕಿಸುತ್ತಿದೆ. ತಮ್ಮ ಹೆಸರು ಗಾಂಧಿ, ಸಾವರ್ಕರ್ ಅಲ್ಲ. ಹಾಗಾಗಿ ಯಾರ ಬಳಿಯೂ ʻಯುವರಾಜʼ ಕ್ಷಮೆ ಕೇಳುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್‌

    ಜಾತಿಗಳ ನಡುವೆ ಸಂಘರ್ಷ ತಂದಿದ್ದು ಕಾಂಗ್ರೆಸ್:
    ಮುಂದುವರಿದು, ಮಹಾಯುತಿ ಒಕ್ಕೂಟದ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಲಿದೆ. ಮಹಾ ವಿಕಾಸ್ ಆಘಾಡಿಯ ಡ್ರೈವರ್ ಯಾರು ಎನ್ನುವುದು ಆ ಒಕ್ಕೂಟದ ನಾಯಕರಿಗೇ ಸ್ಪಷ್ಟತೆಯಿಲ್ಲ. ಹೀಗಿದ್ದಾಗ, ಅವರಿಗೆ ಅಧಿಕಾರ ಕೊಟ್ಟರೆ ಸುಭದ್ರ ಸರ್ಕಾರವನ್ನು ನೀಡಬಲ್ಲರೇ? ಜಾತಿಜಾತಿಗಳ ನಡುವೆ ಸಂಘರ್ಷವನ್ನು ಕಾಂಗ್ರೆಸ್ ತಂದಿತು. ಇದರಿಂದ ದೇಶ ಇಬ್ಬಾಗವಾಯಿತು. ಈಗ ಪರಿಶಿಷ್ಟ ಜಾತಿ, ಪಂಗಡ ಮತ್ತುಇತರ ಹಿಂದುಳಿದ ವರ್ಗಗಳ ನಡುವೆ ತಂದಿಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದು, ಸಾಮಾನ್ಯವಾಗಿ ಕಾಂಗ್ರೆಸ್ ಅನುಸರಿಸುತ್ತಿರುವ ನೀತಿ ಎಂದು ಕಿಡಿ ಕಾರಿದ್ದಾರೆ.

    288 ಕ್ಷೇತ್ರಗಳ ವಿಧಾನಸಭೆಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದ್ದು, ನ.23ಕ್ಕೆ ಫಲಿತಾಂಶ ಹೊರಬೀಳಲಿದೆ.

  • ಸಂಸತ್‌ನಲ್ಲಿ ಯಾಸಿನ್‌ ಬಗ್ಗೆ ಚರ್ಚಿಸಿ: ರಾಹುಲ್‌ಗೆ ಪತ್ನಿ ಮುಶಾಲ್ ಹುಸೈನ್ ಪತ್ರ

    ಸಂಸತ್‌ನಲ್ಲಿ ಯಾಸಿನ್‌ ಬಗ್ಗೆ ಚರ್ಚಿಸಿ: ರಾಹುಲ್‌ಗೆ ಪತ್ನಿ ಮುಶಾಲ್ ಹುಸೈನ್ ಪತ್ರ

    ನವದೆಹಲಿ: ಸಂಸತ್‌ ಅಧಿವೇಶನದಲ್ಲಿ ಯಾಸಿನ್‌ ಮಲಿಕ್ (Yasin Malik) ಬಗ್ಗೆ ಚರ್ಚೆ ಮಾಡಬೇಕೆಂದು ಕೋರಿ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಯಾಸಿನ್‌ ಪತ್ನಿ ಮುಶಾಲ್ ಹುಸೈನ್ ಮಲಿಕ್ (Mushaal Hussein Mullick) ಪತ್ರ ಬರೆದಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಶಾಂತಿ ನೆಲೆಸುವಂತೆ ಮಾಡುವುದು ಯಾಸಿನ್ ಮಲಿಕ್‌ಗೆ ಮಾತ್ರ ಸಾಧ್ಯ ಎಂದ ಪತ್ನಿ ಪತ್ರದಲ್ಲಿ ತಿಳಿಸಿದ್ದಾರೆ.

    ಪಾಕಿಸ್ತಾನಿ ಚಿತ್ರಕಲಾ ಕಲಾವಿದೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಮುಶಾಲ್ ಹುಸೈನ್ ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನ ಮಂತ್ರಿಯ ವಿಶೇಷ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

    ರಾಹುಲ್‌ಗೆ ಪತ್ರ ಬರೆದಿದ್ದಕ್ಕೆ ಬಿಜೆಪಿ ಕಿಡಿಕಾರಿದೆ. ಜಮ್ಮು ಕಾಶ್ಮೀರದಲ್ಲಿ ಅಮಾಯಕರನ್ನು ಕೊಂದವರು ಇಂದು ರಾಹುಲ್ ಗಾಂಧಿಗೆ ಪತ್ರ ಬರೆಯುತ್ತಿದ್ದಾರೆ. ಇವರೆಲ್ಲಾ ರಾಹುಲ್ ಗಾಂಧಿ ಬೆಂಬಲ ಕೇಳುತ್ತಿರುವುದು ಯಾಕೆ ಎಂದು ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಪ್ರಶ್ನಿಸಿದ್ದಾರೆ.

    ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಯಾಸಿನ್ ಮಲಿಕ್ ಅವರ ಪತ್ನಿ ರಾಹುಲ್ ಗಾಂಧಿಗೆ ಪತ್ರ ಬರೆದಿರುವುದರಲ್ಲಿ ಆಶ್ಚರ್ಯ ಏನಿಲ್ಲ. ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ವಾಯುಪಡೆಯ ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಮಲಿಕ್‌ ದೋಷಿಯಾಗಿದ್ದಾನೆ. ಡಾ ಮನಮೋಹನ್ ಸಿಂಗ್ ಆತನನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿದ್ದರು ಮತ್ತು ದೆಹಲಿ ಮಾಧ್ಯಮಗಳು ಆತನನ್ನು ‘ಯೂತ್ ಐಕಾನ್’ ಎಂದು ಗೌರವಿಸುತ್ತಿವೆ. ಕಾಂಗ್ರೆಸ್ ಯಾವಾಗಲೂ ಭಯೋತ್ಪಾದಕರ ಜೊತೆ ನಿಂತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

    ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್‌ ಮಲಿಕ್‌ನನ್ನು ದೇಶದ್ರೋಹ ಆರೋಪದ ಅಡಿ ಎನ್‌ಐಎ ಬಂಧಿಸಿದೆ. ಜಮ್ಮು ಕಾಶ್ಮೀರದಲ್ಲಿ ಪಂಡಿತರ ನರಮೇಧ ಪ್ರಕರಣದಲ್ಲಿ ಭಾಗಿಯಾಗಿರುವ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಈತನಿಗೆ ಗಲ್ಲು ಶಿಕ್ಷೆ ವಿಧಿಸುಂತೆ ಎನ್‌ಐಎ ಕೋರ್ಟ್‌ ಮನವಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್‌ ಮಲಿಕ್‌ ದೆಹಲಿ ಹೈಕೋರ್ಟ್‌ನಲ್ಲಿ ವಾದಿಸುತ್ತಿದ್ದಾನೆ.

     

  • Jammu Kashmir | 6 ವರ್ಷದ ನಂತರ ನಡೆದ ಅಧಿವೇಶನದ ಮೊದಲ ದಿನವೇ ಗದ್ದಲ

    Jammu Kashmir | 6 ವರ್ಷದ ನಂತರ ನಡೆದ ಅಧಿವೇಶನದ ಮೊದಲ ದಿನವೇ ಗದ್ದಲ

    ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ (Jammu Kashmir) ಒಮರ್ ಅಬ್ದುಲ್ಲ (Omar Abdullah) ನೇತೃತ್ವದಲ್ಲಿ ಎನ್‌ಸಿ ಸರ್ಕಾರ ರಚನೆಯಾದ ಬಳಿಕ ಮೊದಲ ಅಧಿವೇಶನ (Session) ನಡೆದಿದೆ. ಅಧಿವೇಶನ ಮೊದಲ ದಿನವೇ ರಾಜ್ಯತ್ವ ಮರುಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾಹಲ ಏರ್ಪಟ್ಟಿದೆ.

    ಅಧಿವೇಶನದ ಮೊದಲ ದಿನವೇ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಶಾಸಕ ವಹೀದ್ ಪಾರಾ ಅವರು ಆರ್ಟಿಕಲ್ 370 ರದ್ದತಿಯನ್ನು ವಿರೋಧಿಸಿ ಮತ್ತು ಕೇಂದ್ರಾಡಳಿತ ಪ್ರದೇಶದ ವಿಶೇಷತೆಯನ್ನು ಮರುಸ್ಥಾಪಿಸುವಂತೆ ನಿರ್ಣಯವನ್ನು ಮಂಡಿಸಿದರು.

     

    ಅಜೆಂಡಾದ ಭಾಗವಾಗಿಲ್ಲದಿದ್ದರೂ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಚರ್ಚೆಗೆ ವಿನಂತಿಸಿದರು, ಸದನದ ಕಾರ್ಯಸೂಚಿಯನ್ನು ಅಂತಿಮಗೊಳಿಸಲಾಗಿದ್ದರೂ ಸ್ಪೀಕರ್ ಆಗಿ ನಿಮ್ಮ ಅಧಿಕಾರವು ನಿರ್ಣಯವನ್ನು ಸೇರಿಸಲು ಅವಕಾಶ ನೀಡುತ್ತದೆ ಎಂದು ನಾವು ನಂಬುತ್ತೇವೆ. ಏಕೆಂದರೆ ಇದು ಜನರ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಮನವಿಯಲ್ಲಿ ಹೇಳಿದರು.

    ನಿರ್ಣಯವನ್ನು ಸಲ್ಲಿಸಿದ ಬೆನ್ನಲ್ಲೇ 28 ಮಂದಿ ಬಿಜೆಪಿ ಶಾಸಕರು ಈ ಕ್ರಮವನ್ನು ವಿರೋಧಿಸಲು ಎದ್ದು ನಿಂತರು. ಇದು ವಿಧಾನಸಭೆಯೊಳಗೆ ಗದ್ದಲಕ್ಕೆ ಕಾರಣವಾಯಿತು. ವಿಧಾನಸಭೆ ನಿಯಮಗಳನ್ನು ಉಲ್ಲಂಘಿಸಿ ನಿರ್ಣಯ ತಂದಿದ್ದಕ್ಕಾಗಿ ಪಾರಾ ಅವರನ್ನು ಅಮಾನತುಗೊಳಿಸುವಂತೆ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ ಒತ್ತಾಯಿಸಿದರು. ಪ್ರತಿಭಟನಾ ನಿರತ ಸದಸ್ಯರಿಗೆ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಸ್ಪೀಕರ್ ಪದೇ ಪದೇ ಮನವಿ ಮಾಡಿದರೂ ಅವರು ಧರಣಿ ಮುಂದುವರಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶ, ಕೇರಳ, ಪಂಜಾಬ್ ಉಪಚುನಾವಣೆ ದಿನಾಂಕ ಬದಲು – ನ.20ರಂದುಮತದಾನ

     

    ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ನಿರ್ಣಯಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ ಮತ್ತು ಇದು ಕ್ಯಾಮೆರಾಗಳಿಗೆ ಮಾತ್ರ ಎಂದು ಹೇಳಿದರು. ಸದನವು ಈ ವಿಷಯವನ್ನು ಹೇಗೆ ಚರ್ಚಿಸುತ್ತದೆ ಎಂಬುದನ್ನು ಯಾವುದೇ ಒಬ್ಬ ಸದಸ್ಯರು ನಿರ್ಧರಿಸುವುದಿಲ್ಲ. ನಿರ್ಣಯದ ಹಿಂದೆ ಸರಿಯಾದ ಉದ್ದೇಶವಿದ್ದರೆ ಅವರು ಮೊದಲು ನಮ್ಮೊಂದಿಗೆ ಚರ್ಚಿಸುತ್ತಿದ್ದರು ಎಂದು ಅವರು ಹೇಳಿದರು.

    370 ನೇ ವಿಧಿಯನ್ನು ರದ್ದುಪಡಿಸಿದ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ಜನರು ಒಪ್ಪುವುದಿಲ್ಲ ನನ್ನ ಸರ್ಕಾರವು ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ. ಇದು ನಮ್ಮ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರು ಇಟ್ಟಿರುವ ನಂಬಿಕೆಯ ಪ್ರತಿಫಲವಾಗಿದೆ ಎಂದು ಒಮರ್ ಅಬ್ದುಲ್ಲ ಹೇಳಿದರು.

     

  • Jammu Kashmir | ಪೂಂಛ್‌ನಲ್ಲಿದ್ದ ಉಗ್ರರ ತಾಣ ಧ್ವಂಸ

    Jammu Kashmir | ಪೂಂಛ್‌ನಲ್ಲಿದ್ದ ಉಗ್ರರ ತಾಣ ಧ್ವಂಸ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಪೂಂಛ್ (Poonch) ಜಿಲ್ಲೆಯಲ್ಲಿ ಉಗ್ರರು ಅಡಗಿದ್ದ ತಾಣ ಪತ್ತೆಯಾಗಿದ್ದು, ಭದ್ರತಾ ಪಡೆಗಳು ಇಂದು (ಅ.26) ರಂದು ಧ್ವಂಸಗೊಳಿಸಿವೆ.

    ಅಧಿಕಾರಿಗಳ ಮಾಹಿತಿ ಪ್ರಕಾರ, ಪೂಂಛ್ ಅಡುಗುದಾಣದಲ್ಲಿ ಗ್ರೆನೇಡ್‌ಗಳು ಹಾಗೂ ಸ್ಫೋಟಕಗಳು ಪತ್ತೆಯಗಿದ್ದು, ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದೆ.ಇದನ್ನೂ ಓದಿ: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ – ಸಿಪಿವೈ

    ಜಮ್ಮುವಿನ ಮೇಂಧರ್ ಉಪವಿಭಾಗದ ಬಲನೋಯ್ ಸೆಕ್ಟರ್‌ನಲ್ಲಿ ಶೋಧ ಕಾರ್ಯದ ವೇಳೆ ಈ ಅಡಗುದಾಣ ಪತ್ತೆಯಾಗಿದ್ದು, ಬಳಿಕ ಭದ್ರತಾ ಪಡೆಗಳು ಅದನ್ನು ಧ್ವಂಸಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡರು.

    ಇದೇ ವೇಳೆ ಭದ್ರತಾ ಸಿಬ್ಬಂದಿ ಮನ್‌ಕೋಡಿ ಸೆಕ್ಟರ್ ಸಮೀಪ ಗಸ್ತು ತಿರುಗುವ ವೇಳೆ ತುಕ್ಕು ಹಿಡಿರುವ ಮೋರ್ಟರ್ ಶೆಲ್ ಕೂಡ ಪತ್ತೆಯಾಗಿದೆ. ಧ್ವಂಸಗೊಳಿಸಿದ ಬಳಿಕ ಶೆಲ್‌ನ್ನು ಸುರಕ್ಷಿತ ಸ್ಥಳದಲ್ಲಿ ಸ್ಫೋಟಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ಕಾರವಾರ | ದೇವಬಾಗ್ ಕಡಲ ತೀರದಲ್ಲಿ ನಟ ರಮೇಶ್ ಅರವಿಂದ್

  • ಜಮ್ಮು-ಕಾಶ್ಮೀರದ ಸಿಎಂ ಆಗಿ ಒಮರ್ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕಾರ

    ಜಮ್ಮು-ಕಾಶ್ಮೀರದ ಸಿಎಂ ಆಗಿ ಒಮರ್ ಅಬ್ದುಲ್ಲಾ ಇಂದು ಪ್ರಮಾಣವಚನ ಸ್ವೀಕಾರ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ನೂತನ ಸಿಎಂ ಆಗಿ ಒಮರ್ ಅಬ್ದುಲ್ಲಾ (Omar Abdullah) ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಪ್ರಮಾಣವಚನ ಸ್ವೀಕಾರ ಸಮಾರಂಭವು ಶೇರ್ ಇ ಕಾಶ್ಮೀರ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ (Sher-i-Kashmir International Convention Centre) 11:30ಕ್ಕೆ ನಡೆಯಲಿದ್ದು, ಒಮರ್ ಅಬ್ದುಲ್ಲಾ ಎರಡನೇ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನೆರಡು ದಿನ ಕಾಡಲಿದ್ದಾನೆ ವರುಣ; ಶಾಲೆಗಳಿಗೆ ರಜೆ ಘೋಷಣೆ

    ಆರ್ಟಿಕಲ್ 370 ರದ್ಧತಿಯ ಬಳಿಕ ನಡೆದ ಚೊಚ್ಚಲ ವಿಧಾನಸಭೆಯಲ್ಲಿ ಗೆದ್ದ ನ್ಯಾಷನಲ್ ಕಾನ್ಫರೆನ್ಸ್‌ನ (National Conference) ಮುಖ್ಯಸ್ಥ ಒಮರ್ ಅಬ್ದುಲ್ಲಾ ಮೊದಲ ಮುಖ್ಯಮಂತ್ರಿಯಾಗಿ ಸ್ಥಾನಕ್ಕೇರಲಿದ್ದಾರೆ. ಇದಕ್ಕೂ ಮುನ್ನ 2009-2014 ರಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

    ಬುಧವಾರ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಜನರಲ್ ಮನೋಜ್ ಸಿನ್ಹಾ ಪ್ರಮಾಣ ವಚನ ಬೋಧಿಸಲಿದ್ದಾರೆ.

    ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಎಸ್‌ಪಿ ನಾಯಕ ಅಖಿಲೇಶ್ ಯಾದವ್, ಆಪ್ ಮುಖಸ್ಥ ಅರವಿಂದ್ ಕೇಜ್ರಿವಾಲ್ ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚು ವಿಐಪಿಗಳು ಆಗಮಿಸುತ್ತಿರುವ ಹಿನ್ನೆಲೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ: 16-10-2024

    ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಎನ್‌ಸಿ ಪಕ್ಷವು ಒಟ್ಟು 42, ಕಾಂಗ್ರೆಸ್ 6 ಹಾಗೂ ಬಿಜೆಪಿ 27 ಸ್ಥಾನಗಳನ್ನು ಪಡೆದುಕೊಂಡಿತ್ತು

  • ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟು ಕಾಶ್ಮೀರದಲ್ಲಿ ಎನ್‌ಸಿ ಕೈ ಹಿಡಿದ ಆಪ್‌!

    ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟು ಕಾಶ್ಮೀರದಲ್ಲಿ ಎನ್‌ಸಿ ಕೈ ಹಿಡಿದ ಆಪ್‌!

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಕಾಶ್ಮೀರದಲ್ಲಿ (Jammu Kashmir) ನ್ಯಾಷನಲ್‌ ಕಾನ್ಫರೆನ್ಸ್‌ಗೆ (National Conference) ಆಪ್‌ ಬೆಂಬಲ ನೀಡಿದೆ.

    ಗುರುವಾರ ಎನ್‌ಸಿಗೆ 4 ಮಂದಿ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದರು. ಈ ಮೂಲಕ ಕಾಂಗ್ರೆಸ್‌ ಬೆಂಬಲ ಇಲ್ಲದೇ ಬಹುಮತವನ್ನು ಸಾಧಿಸಿತ್ತು. ಈಗ ದೊಡಾ ಕ್ಷೇತ್ರದ ಆಪ್‌ (AAP) ಶಾಸಕ ಮೆಹರಾಜ್‌ ಮಲಿಕ್‌ ಅವರು ಎನ್‌ಸಿಗೆ ಬೆಂಬಲ ನೀಡಿದ್ದಾರೆ.

    ಲೋಕಸಭಾ ಚುನಾವಣೆ (Lok Sabha Election) ವೇಳೆ ಹರಿಯಾಣದಲ್ಲಿ (Haryana) ಕಾಂಗ್ರೆಸ್‌ ಮತ್ತು ಆಪ್‌ ಮೈತ್ರಿ ಮಾಡಿಕೊಂಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೂ ಮೊದಲೇ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿತ್ತು. ಆಪ್‌ ಪ್ರತ್ಯೇಕವಾಗಿ ಕಣಕ್ಕೆ ಇಳಿದಿತ್ತು. ಆದರೆ ಈಗ ನ್ಯಾಷನಲ್‌ ಕಾನ್ಫರೆನ್ಸ್‌ಗೆ ಆಪ್‌ ಬೆಂಬಲ ನೀಡುವ ಮೂಲಕ ಕಾಂಗ್ರೆಸ್‌ಗೆ ಶಾಕ್‌ ನೀಡಿದೆ.

    ಜಮ್ಮು ಕಾಶ್ಮೀರದಲ್ಲಿ ಒಟ್ಟು 90 ಸ್ಥಾನಗಳಿಗೆ ಚುನಾವಣೆ (Election) ನಡೆದಿದ್ದು ಸರ್ಕಾರ ರಚನೆಗೆ 46 ಶಾಸಕರ ಬೆಂಬಲ ಬೇಕು. ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ 42, ಕಾಂಗ್ರೆಸ್‌ 6 ಸ್ಥಾನ ಗೆದ್ದರೆ 7 ಮಂದಿ ಪಕ್ಷೇತರರು ಗೆದ್ದಿದ್ದರು. 7 ಮಂದಿಯ ಪೈಕಿ 4 ಮಂದಿ ಎನ್‌ಸಿಗೆ ಬೆಂಬಲ ನೀಡಿದ್ದಾರೆ. ಉಳಿದ ಶಾಸಕರ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಒಮರ್‌ ಅಬ್ದುಲ್ಲಾ ತಿಳಿಸಿದ್ದರು.

    ಪಕ್ಷೇತರರ ಜೊತೆ ಆಪ್‌ ಬೆಂಬಲ ನೀಡಿದ್ದರಿಂದ ಎನ್‌ಸಿ ಬಲ ಮತ್ತಷ್ಟು ಗಟ್ಟಿಯಾಗಲಿದೆ. ಪಕ್ಷೇತರರ ಬಲ ಇರುವ ಕಾರಣ ಮಂತ್ರಿ ಸ್ಥಾನ ಹಂಚುವ ವೇಳೆ ಕಾಂಗ್ರೆಸ್‌ ಶಾಸಕರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಕಡಿಮೆಯಿದೆ.

    ಯಾರು ಎಷ್ಟು ಸ್ಥಾನ?
    ನ್ಯಾಷನಲ್‌ ಕಾನ್ಫರೆನ್ಸ್‌ – 42
    ಬಿಜೆಪಿ – 29
    ಕಾಂಗ್ರೆಸ್‌ – 06
    ಪಿಡಿಪಿ – 03
    ಜೆಪಿಸಿ – 1
    ಸಿಪಿಐ(ಎಂ)- 01
    ಆಪ್‌ – 01
    ಇತರರು – 07

    ಹರಿಯಾಣ ಚುನಾವಣೆಗೂ ಮುನ್ನ ಆಪ್‌ ಮತ್ತು ಕಾಂಗ್ರೆಸ್‌ ಮಧ್ಯೆ ಸೀಟು ಹಂಚಿಕೆಯ ಬಗ್ಗೆ ಮಾತುಕತೆ ನಡೆದಿತ್ತು. ಈ ವೇಳೆ ಆಪ್‌ 10 ಸ್ಥಾನ ನೀಡುವಂತೆ ಕೇಳಿಕೊಂಡಿತ್ತು. ಆದರೆ ಕಾಂಗ್ರೆಸ್‌ ಆಪ್‌ ಮನವಿಯನ್ನು ತಿರಸ್ಕರಿಸಿತ್ತು.  ಇದನ್ನೂ ಓದಿ:ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ಗೆ ಸೋಲು – ಮೈತ್ರಿ ಪಕ್ಷವನ್ನೇ ಟೀಕಿಸಿದ ಶಿವಸೇನೆ

    ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಸೋಲಾದ ಬೆನ್ನಲ್ಲೇ INDIA ಒಕ್ಕೂಟದ ಸದಸ್ಯರು ನೇರವಾಗಿಯೇ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಮಿತ್ರ ಪಕ್ಷಗಳ ಜೊತೆ ಮಾತುಕತೆ ನಡೆಸಿ ಸ್ಥಾನ ಹಂಚಿಕೊಂಡಿದ್ದರೆ ಹರಿಯಾಣವನ್ನು ಗೆಲ್ಲಬಹುದಿತ್ತು ಎಂದು ಹೇಳಿವೆ.

     

    ಇನ್ನೊಂದು ಕಡೆ ಭಾರತ ರಾಷ್ಟ್ರ ಸಮಿತಿ ಉಪಾಧ್ಯಕ್ಷ ಮಾಜಿ ಸಚಿವ ಕೆಟಿ ರಾಮ ರಾವ್‌ ಒಮರ್‌ ಅಬ್ದುಲ್ಲಾ ಅವರನ್ನು ಅಭಿನಂದಿಸಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಪಕ್ಷಗಳು ಪರಸ್ಪರ ಎದುರಾಳಿಗಳು ಎನ್ನುವುದು ವಿಶೇಷ.