ಬೆಂಗಳೂರು: ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ (Pahalgam) ಕಣಿವೆಯಲ್ಲಿ ಉಗ್ರರು ನಡೆಸಿದ ನಡೆದ ಹಿಂದೂಗಳ ನರಮೇಧದಲ್ಲಿ ಬೆಂಗಳೂರಿನ ಮಧುಸೂದನ್ (Madhusudhan) ಬಲಿಯಾಗಿದ್ದಾರೆ.
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಮತ್ತೆ ಉಗ್ರರು ಬಾಲಬಿಚ್ಚಿ ಹಿಂದೂಗಳ ನರಮೇಧ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ (Pahalgam) ಕಣಿವೆಯಲ್ಲಿ ಹಿಂದೂಗಳನ್ನೇ (Hindu) ಗುರಿಯಾಗಿಸಿ ಕಲಿಮಾ (Kalima) ಹೇಳಲು ಬಾರದಕ್ಕೆ ತಲೆಗೆ ಗುಂಡಿಟ್ಟಿದ್ದಾರೆ.
ಗುಂಡಿನ ದಾಳಿ ಆಗುತ್ತಿದ್ದಂತೆ ನಾವು ಟೆಂಟ್ ಒಳಗೆ ಹೋಗಿ ಅಡಗಿ ಕುಳಿತಿವು. ಟೆಂಟ್ ಬಳಿ ಬಂದ ಉಗ್ರ ತಂದೆಯನ್ನು ಹೊರಗೆ ಬರುವಂತೆ ಕರೆದ. ಟೆಂಟ್‌ನಿಂದ ಹೊರ ಬಂದ ತಂದೆಯ ಬಳಿ ಕಲಿಮಾ(ಇಸ್ಲಾಮಿಕ್ ಶ್ಲೋಕ) ಹೇಳುವಂತೆ ಸೂಚಿಸಿದರು. ತಂದೆ ನನಗೆ ತಿಳಿದಿಲ್ಲ ಎಂದು ಹೇಳಿದ ಕೂಡಲೇ ಕಿವಿ, ತಲೆ, ಬೆನ್ನಿಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದರು ಎಂದು ವಿವರಿಸಿದರು.
ಉಗ್ರರು ನನ್ನ ಪತಿಯ ಬಳಿ ನಿನ್ನ ಧರ್ಮ ಯಾವುದು ಎಂದು ಕೇಳಿದರು. ಮುಸ್ಲಿಮ್ ಅಲ್ಲ ಎಂದು ಹೇಳಿದ ಕೂಡಲೇ ಗುಂಡಿನ ದಾಳಿ ನಡೆಸಿದರು ಎಂದು ಮಹಿಳೆಯೊಬ್ಬರು ಅಳುತ್ತಲೇ ಘಟನೆಯನ್ನು ವಿವರಿಸಿದರು.
ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದ ಉಗ್ರರು 26 ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ. ಇಬ್ಬರು ವಿದೇಶಿಗರು ಸೇರಿದಂತೆ ರಾಶಿ ರಾಶಿ ಹೆಣಗಳನ್ನು ಟಾರ್ಪಲ್‌ನಲ್ಲಿ ಮುಚ್ಚಲಾಗಿದೆ. ಪ್ರವಾಸದ ಖುಷಿಯಲ್ಲಿದ್ದ ಪ್ರವಾಸಿಗರ ಬಳಿ ಏಕಾಏಕಿ ನುಗ್ಗಿರುವ ಲಷ್ಕರ್‌ನ ಅಂಗ ಉಗ್ರ ಸಂಘಟನೆ ಟಿಆರ್‌ಎಫ್ ಟೆರರಿಸ್ಟ್ಗಳು ಗುಂಡಿನ ದಾಳಿ ಮಾಡಿದ್ದಾರೆ. ಅದರಲ್ಲೂ, ಪುರುಷರನ್ನೇ ಟಾರ್ಗೆಟ್ ಮಾಡಿ ನರಮೇಧ ಮಾಡಿದ್ದಾರೆ.
ಶ್ರೀನಗರ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಮ್ಮು ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಂಬನ್ (Ramban) ಜಿಲ್ಲೆಯಲ್ಲಿ ಭೂಕುಸಿತ (Landslide) ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಮಕ್ಕಳು, ವೃದ್ಧರು ಮತ್ತು ರೋಗಿಗಳ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಎನ್‌ಹೆಚ್-44ರಲ್ಲಿ ಮಣ್ಣು ಮತ್ತು ಕಲ್ಲುಗಳು ಕುಸಿದಿದೆ. ಗುಡ್ಡ ಕುಸಿತದಿಂದ ಹೆದ್ದಾರಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಅಗತ್ಯ ವಸ್ತುಗಳ ಪೂರೈಕೆಗೂ ಸಮಸ್ಯೆಯಾಗಿದೆ. ಇದನ್ನೂ ಓದಿ: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಡಿಕೆಶಿ ಭೇಟಿ – ಧರ್ಮಾಧಿಕಾರಿಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಸಿಎಂ
ಬನಿಹಾಲ್‌ನಲ್ಲಿ 71 ಮಿ.ಮೀ, ಖಾಜಿ ಕುಂಡ್‌ನಲ್ಲಿ 53 ಮಿ.ಮೀ, ಕೊಕರ್‌ನಾಗ್‌ನಲ್ಲಿ 43 ಮಿ.ಮೀ, ಪಹಲ್ಗಾಮ್‌ನಲ್ಲಿ 34 ಮಿ.ಮೀ ಮತ್ತು ಶ್ರೀನಗರದಲ್ಲಿ 12 ಮಿ.ಮೀ. ಮಳೆ ದಾಖಲಾಗಿದೆ. ಶ್ರೀನಗರದ ದಕ್ಷಿಣ ಪ್ರದೇಶದಲ್ಲಿ 80-100 ಮಿ.ಮೀ ಮಳೆಯಾಗಿದೆ. ರಂಬನ್ ಮತ್ತು ಬನಿಹಾಲ್ ನಡುವಿನ ಹಲವೆಡೆ ಭೂಕುಸಿತ ಉಂಟಾಗಿದ್ದು, ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಭದ್ರತೆಯ ದೃಷ್ಟಿಯಿಂದ ಉಧಮ್‌ಪುರದಿಂದ ಶ್ರೀನಗರಕ್ಕೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕಾಗುಣಿತ ತಪ್ಪಾಗಿರೋದಕ್ಕೆ ತಹಶೀಲ್ದಾರ್‌ಗೆ ನೋಟಿಸ್
ಶ್ರೀನಗರ: ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಜಮ್ಮು ಮತ್ತು ಕಾಶ್ಮೀರದ (Jammu Kashmir) ಪೂಂಚ್ ಪ್ರದೇಶದ ಗಡಿ ನಿಯಂತ್ರಣ ರೇಖೆಯ (LOC) ಉದ್ದಕ್ಕೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪಾಕ್ ಸೇನೆಯಿಂದ (Pakistan Army) ಅಪ್ರಚೋದಿತ ಗುಂಡಿನ ದಾಳಿ ಮತ್ತು ಅತಿಕ್ರಮಣ ನಡೆದಿದೆ. ಭಾರತದ ಗಡಿಯೊಳಗೆ ನುಗ್ಗಲು ನೋಡಿದ ಪಾಕ್ ಸೇನೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.
ಭಾರತದ ನೆಲಕ್ಕೆ ನುಗ್ಗಿದ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯೂ (Indian Army) ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಸೇನಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಎನ್‌ಜಿಒಗಳಿಗೆ ಜಾರ್ಜ್ ಸೊರೊಸ್ ನಿಧಿಯಿಂದ ಹಣ ವರ್ಗಾವಣೆ – ಪತ್ತೆ ಹಚ್ಚಿದ ಇಡಿ
ಏಪ್ರಿಲ್ 1 ರಂದು ಗಡಿ ನಿಯಂತ್ರಣ ರೇಖೆಯಾದ್ಯಂತ ದಾಟಿ ಪಾಕಿಸ್ತಾನ ಸೇನೆಯ ಒಳನುಸುಳುವಿಕೆಯ ಪರಿಣಾಮವಾಗಿ ಕೃಷ್ಣ ಘಾಟಿ ವಲಯದಲ್ಲಿ ಗಣಿ ಸ್ಫೋಟ ಸಂಭವಿಸಿದೆ. ಇದರ ನಂತರ ಕದನ ವಿರಾಮ ಒಪ್ಪಂದದ ಉಲ್ಲಂಘನೆ ಮಾಡಿರುವ ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಾವು ನೋವಿನ ಬಗ್ಗೆ ಯಾವುದೇ ವರದಿ ಆಗಿಲ್ಲ. ಭಾರತ ಪಾಕಿಸ್ತಾನದೊಂದಿಗೆ ಒಟ್ಟು 3,323 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಇದನ್ನೂ ಓದಿ: ಆರ್‌ಬಿಐ ನೂತನ ಡೆಪ್ಯೂಟಿ ಗವರ್ನರ್ ಆಗಿ ಪೂನಮ್ ಗುಪ್ತಾ ನೇಮಕ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಥುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ (Terrorists) ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಭದ್ರತಾ ಪಡೆಗಳು ಶೋಧ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ DSP ಧೀರಜ್ ಕಟೋಚ್, 1 PARA (Special Forces) ಯೋಧ ಸೇರಿ ಐವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರರಿಂದ ನಾಲ್ಕು ಭಯೋತ್ಪಾದಕರು ಇನ್ನೂ ಅವಿತುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: Jammu Terrorist Attack: ಜಮ್ಮುವಿನಲ್ಲಿ ದಿಢೀರ್ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವುದು ಏಕೆ?
ಕಥುವಾ ಜಿಲ್ಲೆಯ ಸುಫೈನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಾಡಿನಲ್ಲಿ ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು. ಮೃತಪಟ್ಟ ಪೊಲೀಸರಲ್ಲಿ ಹೆಡ್ ಕಾನ್ಸ್‌ಟೇಬಲ್ ಮತ್ತು ಇಬ್ಬರು ಕಾನ್ಸ್‌ಟೇಬಲ್ ಇದ್ದಾರೆ. ಗುಂಡಿನ ದಾಳಿ ತೀವ್ರವಾಗಿದ್ದರಿಂದ ಮೃತದೇಹಗಳನ್ನು ಸ್ಥಳದಿಂದ ಸಾಗಿಸಲು ಸಾಧ್ಯವಾಗಿಲ್ಲ. ಗ್ರೆನೇಡ್ ಮತ್ತು ರಾಕೆಟ್ ದಾಳಿಯಿಂದ ಪ್ರದೇಶವು ತತ್ತರಿಸಿದೆ. ಇದನ್ನೂ ಓದಿ: Jammu & Kashmir | 40 ಅಡಿ ಆಳದ ಕಂದಕಕ್ಕೆ ಉರುಳಿದ ಸೇನೆಯ ಬಸ್ – ಮೂವರು ಯೋಧರು ದುರ್ಮರಣ
ಕಥುವಾ ಉಗ್ರರ ಸ್ವರ್ಗವಾಗುತ್ತಿದೆಯೇ?
1990ರ ದಶಕದಲ್ಲಿ ಕಥುವಾ (Kathua) ಭಯೋತ್ಪಾದಕರ ದೊಡ್ಡ ನೆಲೆಯಾಗಿ ಗುರುತಿಸಿಕೊಂಡಿತ್ತು. ಇಡೀ ಜಮ್ಮು ಮತ್ತು ಕಾಶ್ಮೀರದಾದ್ಯಂತ ದಾಳಿ ನಡೆಸಲು ಇಲ್ಲಿಯೇ ಉಗ್ರರು ಪ್ಲ್ಯಾನ್ ರೂಪಿಸುತ್ತಿದ್ದರು. ಸೇನೆ ವಿರುದ್ಧ ಯುದ್ಧಗಳ ತಯಾರಿಯೂ ಇಲ್ಲಿಯೇ ನಡೆಸುತ್ತಿದ್ದರು. ಕಥುವಾ ಉಧಂಪುರ, ಸಾಂಬಾ ಮತ್ತು ದೋಡಾ ಜಿಲ್ಲೆಗಳ ಪಕ್ಕದಲ್ಲಿದ್ದ ಕಾರಣ ಭದ್ರತಾ ಪಡೆಗಳು ಉಗ್ರರ ಹೆಡೆಮುರಿ ಕಟ್ಟಲು ಇಲ್ಲಿಯೇ ಬೀಡುಬಿಟ್ಟಿರುತ್ತಿದ್ದವು ಎಂದು ಅಲ್ಲಿನ ಪ್ರಾಥಮಿಕ ಮೂಲಗಳು ತಿಳಿಸಿವೆ. ಈಗ ಮತ್ತೆ ಕಥುವಾ ಉಗ್ರರ ನೆಲೆಯಾಗುತ್ತಿದೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ. ಏಕೆಂದರೆ ಇಲ್ಲಿನ ಭೌಗೋಳಿಕತೆ ವಿಶೇಷವಾಗಿದೆ. ಒಂದು ಬದಿಯಲ್ಲಿ ಪಾಕಿಸ್ತಾನ ಗಡಿ ಇದ್ದರೆ, ಮತ್ತೊಂದು ಬದಿಯಲ್ಲಿ ಹಿಮಾಚಲ ಪ್ರದೇಶ ಇದೆ. ಮುಖ್ಯವಾಗಿ ಅರಣ್ಯ ಪ್ರದೇಶ ದಟ್ಟವಾಗಿರುವುದರಿಂದ ಉಗ್ರರು ತಪ್ಪಿಸಿಕೊಳ್ಳಲು ಅನುಕೂಲಕರ ವಾತಾವರಣ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉಗ್ರರು ಈ ಭಾಗದ ನೆಲೆಯನ್ನು ಗುರಿಯಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಉತ್ತರಾಖಂಡ್‌ನ (Uttarakhand) ಚಮೋಲಿಯಲ್ಲಿ ಹಿಮಸ್ಫೋಟದಿಂದಾಗಿ ಕಾಮಗಾರಿ ನಡೆಸುತ್ತಿದ್ದ 57ಕ್ಕೂ ಹೆಚ್ಚು ಬಾರ್ಡರ್ ರೋಡ್ ಆರ್ಗನೈಸೇಷನ್ (BRO) ಕಾರ್ಮಿಕರು ಸಿಲುಕಿದ್ದು ಇಲ್ಲಿಯವರೆಗೆ 47 ಕಾರ್ಮಿಕರನ್ನು ರಕ್ಷಿಸಲಾಗಿದೆ. ಇನ್ನೂ 8 ಕಾರ್ಮಿಕರು ಹಿಮದಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ರಕ್ಷಣೆ ಮಾಡಲಾದ ಕಾರ್ಮಿಕರನ್ನು ಹೆಲಿಕಾಪ್ಟರ್ ಮೂಲಕ ಜೋಶಿ ಮಠದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಮದಡಿ ಸಿಲುಕಿರುವ ಉಳಿದ ಕಾರ್ಮಿಕರ ರಕ್ಷಣೆಗೆ ಸೇನಾ ಕಾರ್ಯಾಚರಣೆ ಮುಂದುವರಿದಿದೆ.
ಈ ಬಗ್ಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಜೊತೆಗೆ ಅಗತ್ಯ ನೆರವಿನ ಭರವಸೆಯನ್ನೂ ನೀಡಿದ್ದಾರೆ.
ಚಮೋಲಿ ಜಿಲ್ಲೆಯಲ್ಲಿ ಏಕಾಏಕಿ ಹಿಮಪರ್ವತ ಜಾರಿ ಬಂದಿದ್ದು, ಘಸ್ತೋಲಿಗೆ ಸಂಪರ್ಕ ಕಲ್ಪಿಸುವ ಮಾನಾ ಗ್ರಾಮದಲ್ಲಿ ಅವಾಂತರ ಸೃಷ್ಟಿಯಾಗಿದೆ. ಹಿಮದಡಿ ಸಿಲುಕಿರುವ ಇನ್ನೂ 8 ಕಾರ್ಮಿಕರಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಪಿಬಿ, ಬಿಆರ್‌ಓ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸ್ತಿದ್ದಾರೆ.
ಮೇಲ್ಭಾಗದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಲು ಜಿಲ್ಲೆಯ ಶಾಸ್ತ್ರಿನಗರದಲ್ಲಿ ನೋಡನೋಡ್ತಿದ್ದಂತೆ ಕಾರುಗಳು-ಬೈಕ್‌ಗಳು ಕೊಚ್ಚಿ ಹೋಗಿವೆ. ತಗ್ಗು ಪ್ರದೇಶದಜನರನ್ನು ಸುರಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ.
ಶಿಮ್ಲಾ, ಚಂಬಲ್, ಕಿನ್ನೌರ್, ಲಹೌಲ್‌ನಲ್ಲೂ ಹಾನಿಯಾಗಿದೆ. ಕಿರಾತ್‌ಪುರ- ಮನಾಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಿಮ್ಲಾ- ಕಿನ್ನೌರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತವಾಗಿದೆ. ಕುಲು, ಮಂಡಿ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್‌ಜಾಮ್ ಉಂಟಾಗಿದೆ. ಬಿಯಾಸ್, ಉಹಾಲ್ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ (Srinagar) ದಟ್ಟ ಹಿಮ ಬೀಳುತ್ತಿದೆ. ಉತ್ತರಾಖಂಡ್‌ನ ಪರ್ವತ ಪ್ರದೇಶದಲ್ಲಿ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 20 ಸೆಂಟಿಮೀಟರ್‌ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್‌ಗಳಲ್ಲೂ ಗುಡುಗು-ಸಿಡಿಲು-ಮಿಂಚು ಸಹಿತ ಭಾರೀ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ನವದೆಹಲಿ: ಕರ್ನಾಟಕದಲ್ಲಿ ಬಿಸಿಲ ಪ್ರತಾಪ ದಿನೇ ದಿನೇ ಕಾಡುತ್ತಿದ್ದರೆ ಉತ್ತರ ಭಾರತದಲ್ಲಿ (North India) ಮಳೆ, ಹಿಮದ ಆರ್ಭಟ ಶುರುವಾಗಿದೆ. ಉತ್ತರಾಖಂಡ್‌ನ (Uttarakhand) ಬದರಿನಾಥ ದೇಗುಲದ (Badrinath Temple) 3 ಕಿ.ಮೀ. ಸಮೀಪದಲ್ಲಿ ಹಿಮಸ್ಫೋಟವಾಗಿದೆ.
ಹಿಮಸ್ಫೋಟದಿಂದ (Avalanche) ಕಾಮಗಾರಿ ನಡೆಸುತ್ತಿದ್ದ 57ಕ್ಕೂ ಹೆಚ್ಚು ಬಾರ್ಡರ್ ರೋಡ್ ಆರ್ಗನೈಸೇಷನ್ (BRO) ಕಾರ್ಮಿಕರು ಸಿಲುಕಿದ್ದು ಇಲ್ಲಿಯವರೆಗೆ 32 ಕಾರ್ಮಿಕರನ್ನು ರಕ್ಷಿಸಲಾಗಿದೆ. ಚಮೋಲಿ ಜಿಲ್ಲೆಯಲ್ಲಿ ಏಕಾಏಕಿ ಹಿಮಪರ್ವತ ಜಾರಿ ಬಂದಿದ್ದು, ಘಸ್ತೋಲಿಗೆ ಸಂಪರ್ಕ ಕಲ್ಪಿಸುವ ಮಾನಾ ಗ್ರಾಮದಲ್ಲಿ ಅವಾಂತರ ಸೃಷ್ಟಿಯಾಗಿದೆ. ಇದನ್ನೂ ಓದಿ: ಯಮುನಾ ಸ್ವಚ್ಛತೆಗೆ ಮಿಷನ್ ಮೋಡ್; ಮಾಸ್ಟರ್ ಪ್ಲ್ಯಾನ್ ಸಿದ್ಧ
ಹಿಮದಡಿ ಸಿಲುಕಿರುವ 25 ಕಾರ್ಮಿಕರಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಪಿಬಿ, ಬಿಆರ್‌ಓ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸ್ತಿದ್ದಾರೆ. ಸಿಎಂ ಧಾಮಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದಾರೆ.
ಮೇಲ್ಭಾಗದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಲು ಜಿಲ್ಲೆಯ ಶಾಸ್ತ್ರಿನಗರದಲ್ಲಿ ನೋಡನೋಡ್ತಿದ್ದಂತೆ ಕಾರುಗಳು-ಬೈಕ್‌ಗಳು ಕೊಚ್ಚಿ ಹೋಗಿವೆ. ತಗ್ಗು ಪ್ರದೇಶದಜನರನ್ನು ಸುರಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಜನಜೀವನ ಅಸ್ತವ್ಯಸ್ಥ
ಶಿಮ್ಲಾ, ಚಂಬಲ್, ಕಿನ್ನೌರ್, ಲಹೌಲ್‌ನಲ್ಲೂ ಹಾನಿಯಾಗಿದೆ. ಕಿರಾತ್‌ಪುರ- ಮನಾಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಿಮ್ಲಾ- ಕಿನ್ನೌರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತವಾಗಿದೆ. ಕುಲು, ಮಂಡಿ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್‌ಜಾಮ್ ಉಂಟಾಗಿದೆ. ಬಿಯಾಸ್, ಉಹಾಲ್ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ (Srinagar) ದಟ್ಟ ಹಿಮ ಬೀಳುತ್ತಿದೆ. ಉತ್ತರಾಖಂಡ್‌ನ ಪರ್ವತ ಪ್ರದೇಶದಲ್ಲಿ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 20 ಸೆಂಟಿಮೀಟರ್‌ವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್‌ಗಳಲ್ಲೂ ಗುಡುಗು-ಸಿಡಿಲು-ಮಿಂಚು ಸಹಿತ ಭಾರೀ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಪ್ರತಿ ವರ್ಷ ಪ್ರೇಮಿಗಳ ದಿನವನ್ನಾಗಿ ಆಚರಿಸುವ ಪ್ರತಿಯೊಬ್ಬರಿಗೂ ಇದು ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಅನ್ನೋದು ಮತ್ತೆ ಮತ್ತೆ ನೆನಪಿಗೆ ಬರುತ್ತೆ. ಏಕೆಂದರೆ ಇದೇ ದಿನ ಸರಿಯಾಗಿ 6 ವರ್ಷಗಳ ಹಿಂದೆ ಭಾರತೀಯ ಸೇನೆ (Indian Army) ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ (CRPF) ಯೋಧರು ಹುತಾತ್ಮರಾಗಿದ್ದರು. ಇಡೀ ಭಾರತವೇ ಶೋಕಾಚರಣೆ ಆಚರಿಸಿ, ಮರುಕ ವ್ಯಕ್ತಪಡಿಸಿತ್ತು.
ಈಗಲೂ ಪ್ರತಿ ವರ್ಷ ಫೆಬ್ರವರಿ 14, ಭಾರತೀಯರ ಪಾಲಿಗೆ ಮರೆಯಲಾಗದ ದಿನ, ಕರಾಳ ದಿನ ಎಂದೇ ಹೇಳಬಹುದು. ಹೌದು.. 5 ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್‌ಪಿಎಫ್ ಅಧಿಕಾರಿಗಳು ಹುತಾತ್ಮರಾಗಿದ್ದರು. ಈ ಸುದ್ದಿ ಕೇಳಿ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು.
ಜೈಶ್-ಎ-ಮೊಹಮ್ಮದ್ (JEM) ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡರು. ಸ್ಫೋಟಕ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬೆಂಗಾವಲು ಪಡೆಯ ಮೇಲೆ ಭೀಕರವಾಗಿ ದಾಳಿ ನಡೆಸಲಾಗಿತ್ತು. ಈ ಕರಾಳ ಘಟನೆಯ ಬಗ್ಗೆ ನೆಟ್ಟಿಗರು #BlackDay ಹೆಸರಿನಲ್ಲಿ ಪೋಸ್ಟ್ ಮಾಡಿ ವೀರ ಯೋಧರ ಬಲಿದಾನವನ್ನು ಸ್ಮರಿಸುತ್ತಿದ್ದಾರೆ.
ದಾಳಿಯ ಪ್ರಮುಖ ಅಂಶಗಳು 14 ಫೆಬ್ರವರಿ 2019:
ಜಮ್ಮು ಮತ್ತು ಕಾಶ್ಮೀರದಲ್ಲಿ 40 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 2 ಬಸ್‌ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬಸ್‌ಗಳು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಅರೆಸೇನಾಪಡೆಯ ವಾಹನಗಳ ದೊಡ್ಡ ಗುಂಪಿನ ಭಾಗವಾಗಿತ್ತು. ದಾಳಿಯ ಸ್ವಲ್ಪ ಸಮಯದ ನಂತರ ಜೈಶ್-ಇ-ಮೊಹಮ್ಮದ್ ಸಂಘಟನೆ ವೀಡಿಯೋ ಬಿಡುಗಡೆ ಮಾಡಿತು. ದಾಳಿಯ ಹೊಣೆ ಹೊತ್ತುಕೊಂಡಿತ್ತು. ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಂಡಿಬಾಗ್, ಕಾಕಪೋರಾದಲ್ಲಿ ವಾಸಿಸುತ್ತಿದ್ದ ಸ್ಥಳೀಯ ಕಾಶ್ಮೀರಿ ಜಿಹಾದಿ ಎಂದು ಹೇಳಿಕೊಂಡಿದ್ದನು.
15 ಫೆಬ್ರವರಿ 2019:
ಫೆಬ್ರವರಿ 15, 2019 ರಂದು ಪತ್ರಿಕಾ ಪ್ರಕಟಣೆಯಲ್ಲಿ ವಿದೇಶಾಂಗ ಸಚಿವಾಲಯವು, ಪಾಕಿಸ್ತಾನವು ಭಯೋತ್ಪಾದನೆ ಬೆಂಬಲಿಸುತ್ತಿದೆ ಎಂದು ಆರೋಪಿಸಿತು. ಪಾಕಿಸ್ತಾನಿ ನಿಯಂತ್ರಿತ ಪ್ರದೇಶಗಳಲ್ಲಿ ತನ್ನ ಭಯೋತ್ಪಾದಕ ಮೂಲಸೌಕರ್ಯವನ್ನು ನಿರ್ವಹಿಸಲು ಮತ್ತು ವಿಸ್ತರಿಸಲು, ಭಾರತ ಇತರೆಡೆ ದಾಳಿಗಳನ್ನು ನಡೆಸಲು ಜೈಷ್ ನಾಯಕ ಮಸೂದ್ ಅಜರ್‌ಗೆ ಸಂಪೂರ್ಣ ಸ್ವಾತಂತ್ರ‍್ಯವನ್ನು ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆ ಆರೋಪಿಸಿತು.
ಪುಲ್ವಾಮಾ ದಾಳಿಯಲ್ಲಿ ಪಾಕ್ ಭಾಗವಹಿಸಿದೆ ಎಂಬ ಆರೋಪವನ್ನು ಪಾಕಿಸ್ತಾನ ನಿರಾಕರಿಸಿತು. ಮಸೂದ್ ಅಜರ್ ಭಯೋತ್ಪಾದಕ ಸಂಘಟನೆಗೆ ಸೇರಿದವನಲ್ಲ ಎಂದು ಚೀನಾ ಸಮರ್ಥಿಸಿಕೊಂಡಿತು. ಇದಕ್ಕೆ ಕಾರಣರಾದವರು ಭಾರೀ ಬೆಲೆ ತೆರಬೇಕಾಗುತ್ತದೆ ಮತ್ತು ಭಯೋತ್ಪಾದಕರನ್ನು ಎದುರಿಸಲು ಭದ್ರತಾ ಪಡೆಗಳಿಗೆ ಮುಕ್ತ ನಿಯಂತ್ರಣ ನೀಡಲಾಗುವುದು. ಉಗ್ರರು ಎಲ್ಲೇ ಅಡಗಿದ್ದರೂ ಅವರ ಮನೆಗೆ ನುಗ್ಗಿ ಹೊಡೆದು ಬರುತ್ತೇವೆ ಎಂದು ಅಂದು ಮೋದಿ ಗುಡುಗಿದ್ದರು. ಇಂತಹ ದಾಳಿಗಳನ್ನು ಸಂಘಟಿಸಿ ಭಾರತವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ಪುಲ್ವಾಮಾ ಭಯೋತ್ಪಾದಕ ದಾಳಿಯ ವಿರುದ್ಧ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಜಮ್ಮುವಿನಲ್ಲಿ ಕರ್ಫ್ಯೂ ಜಾರಿಗೊಳಿಸಲಾಯಿತು. ಮಿಲಿಟರಿ ಪಡೆಗಳ ನಿಯೋಜನೆಯಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಯಿತು.
16 ಫೆಬ್ರವರಿ 2019:
ರಾಜಕೀಯ ಪಕ್ಷಗಳು ಭದ್ರತಾ ಪಡೆಗಳನ್ನು ಬೆಂಬಲಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದವು, ಸ್ವಲ್ಪ ಸಮಯದ ನಂತರ ಎಲ್ಲಾ ಪಾಕಿಸ್ತಾನಿ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು 200 ಪ್ರತಿಶತಕ್ಕೆ ಹೆಚ್ಚಿಸಲಾಯಿತು. – ಜೆಎಂ ಜೊತೆ ಆಪಾದಿತ ಸಂಪರ್ಕ ಹೊಂದಿರುವ ಕನಿಷ್ಠ 7 ಜನರನ್ನು ಪುಲ್ವಾಮದಲ್ಲಿ ಬಂಧಿಸಲಾಯಿತು.
ಈ ದಾಳಿ ಪರಿಣಾಮದಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟೂ ಹದಗೆಟ್ಟಿತ್ತು. ಭಾರತವು ತನ್ನ ಅತ್ಯಂತ ಆದ್ಯತೆಯ ರಾಷ್ಟ್ರವಾಗಿ ಪಾಕಿಸ್ತಾನದ ಸ್ಥಾನಮಾನವನ್ನು ತೆಗೆದುಹಾಕಿತು. ಭಾರತಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಪಾಕಿಸ್ತಾನಿ ಸರಕುಗಳ ಮೇಲಿನ ಕಸ್ಟಮ್ಸ್ ಹೆಚ್ಚಿಸಲಾಯಿತು. ಭಾರತದ ಸರ್ಕಾರದ ಪ್ರಕಾರ, ಪಾಕಿಸ್ತಾನವನ್ನು ಮನಿ ಲಾಂಡರಿಂಗ್ (ಎಫ್‌ಎಟಿಎಫ್) ಕಪ್ಪುಪಟ್ಟಿಗೆ ಹಣಕಾಸು ಆಕ್ಷನ್ ಟಾಸ್ಕ್ ಫೋರ್ಸ್ ಸೇರಿಸಬೇಕು. ಜಮ್ಮು ಮತ್ತು ಕಾಶ್ಮೀರ ಆಡಳಿತವು ಫೆಬ್ರವರಿ 17 ರಂದು ಪ್ರತ್ಯೇಕತಾವಾದಿ ನಾಯಕರ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಂಡಿತು.
26 ಫೆಬ್ರವರಿ 2019:
ಭಾರತೀಯ ವಾಯುಪಡೆಯ ಜೆಟ್‌ಗಳು 12 ದಿನಗಳ ನಂತರ ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾದಲ್ಲಿರುವ ಬಾಲಾಕೋಟ್‌ನಲ್ಲಿರುವ ಜೆಇಎಂ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿತು. 1971ರ ಭಾರತ-ಪಾಕಿಸ್ತಾನ ಯುದ್ಧದ ನಂತರ, ದಾಳಿಯ ವಿಮಾನವು ನಿಯಂತ್ರಣ ರೇಖೆಯನ್ನು ದಾಟಿದ್ದು ಇದೇ ಮೊದಲಾಗಿತ್ತು. ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯ 12 ಮಿರಾಜ್-2000 ಜೆಟ್‌ಗಳು, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲಕೋಟ್‌ನಲ್ಲಿದ್ದ ಉಗ್ರಗಾಮಿ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿತು. ಇದು ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿ ಮತ್ತು ಈ ದಾಳಿಯಲ್ಲಿ ಸುಮಾರು 250 ಉಗ್ರಗಾಮಿಗಳು ಬಲಿಯಾದರು ಎಂದು ವರದಿ ಹೇಳಿತ್ತು.
27 ಫೆಬ್ರವರಿ 2019:
ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳು ಭಾರತದ ವಾಯುನೆಲೆಯನ್ನು ಪ್ರವೇಶಿಸಿದವು. ಈ ಯುದ್ಧವಿಮಾನಗಳು ಭಾರತೀಯ ಮಿಗ್-21 ಬೈಸನ್ ಎರಡು ಯುದ್ಧವಿಮಾನಗಳನ್ನು ನಾಶಪಡಿಸಿದವು. ಇದೇ ವೇಳೆ ಪಾಕಿಸ್ತಾನದ ಎಫ್-16 ವಿಮಾನವನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಲ್ಟಿಹೊಡೆಯುವಂತೆ ಮಾಡಿದ್ದರು. ಈ ವೇಳೆ ಅಭಿನಂದನ್ ಅವರನ್ನ ಪಾಕಿಸ್ತಾನ ಸೆರೆಹಿಡಿಯಿತು.
28 ಫೆಬ್ರವರಿ 2019:
ಬಂಧಿತ ಐಎಎಫ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಇಮ್ರಾನ್ ಖಾನ್ ಫೆಬ್ರವರಿ 28 ರಂದು ಘೋಷಿಸಿದರು.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಡಿಯ ಪೂಂಚ್ ಜಿಲ್ಲೆಯ ಬಟ್ಟಲ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ (LoC) ಬಳಿ ನೆಲಬಾಂಬ್ ಸ್ಫೋಟದಿಂದ (Landmine blast) ಕನಿಷ್ಠ ಐವರು ಪಾಕ್ ಉಗ್ರರು (Pakistani Militants) ಸಾವನ್ನಪ್ಪಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ದಾಟುತ್ತಿದ್ದ ಉಗ್ರರಲ್ಲಿ ಓರ್ವ ಆಕಸ್ಮಿಕವಾಗಿ ಭಾರತದ ಕಡೆ ಹಾಕಲಾಗಿದ್ದ ನೆಲಬಾಂಬ್ ಮೇಲೆ ಹೆಜ್ಜೆ ಇಟ್ಟಿದ್ದಾನೆ. ಈ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉಗ್ರರು ಒಳನುಸುಳಿ ಭಾರತದ ಕಡೆ ಬರುವ ಜಾಗದಲ್ಲಿ ನೆಲಬಾಂಬ್‌ಗಳನ್ನು ಹುದುಗಿ ಇಡಲಾಗಿದೆ. ಕೆಲವೊಮ್ಮೆ ಮಳೆಯಿಂದಲಾಗಿ ಈ ಬಾಂಬ್‌ಗಳು ದೂರ ಸಾಗಿ ಹೋಗುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ: ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಭಾರತದೊಂದಿಗೆ ಮಾತುಕತೆಯ ಮೂಲಕ ಪರಿಹರಿಸಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ.
ಕಾಶ್ಮೀರಿಗಳಿಗೆ ಬೆಂಬಲ ತೋರಿಸುವ ವಾರ್ಷಿಕ ಪಾಕಿಸ್ತಾನಿ ಕಾರ್ಯಕ್ರಮವಾದ ಕಾಶ್ಮೀರ ಒಗ್ಗಟ್ಟಿನ ದಿನದಂದು ಮುಜಫರಾಬಾದ್‌ನಲ್ಲಿ ನಡೆದ ಪಾಕ್ ಆಕ್ರಮಿತ ಕಾಶ್ಮೀರ (POK) ಅಸೆಂಬ್ಲಿಯ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಷರೀಫ್ ಅವರು ಶಾಂತಿ ಮಾತುಕತೆಯ ಪ್ರಸ್ತಾಪ ಮುಂದಿಟ್ಟರು. ಇದನ್ನೂ ಓದಿ: ಮಹಿಳಾ ಕ್ರೀಡೆಗಳಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ – ಆದೇಶಕ್ಕೆ ಟ್ರಂಪ್ ಸಹಿ
ಕಾಶ್ಮೀರ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು. ಭಾರತವು 2019, ಆ.5ರ ಚಿಂತನೆಯಿಂದ ಹೊರಬಂದು ವಿಶ್ವಸಂಸ್ಥೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಸಂವಾದವನ್ನು ಪ್ರಾರಂಭಿಸಬೇಕು ಎಂದು ಷರೀಫ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಹಳಸಿದ ಸಂಬಂಧಗಳನ್ನು ಸರಿಪಡಿಸಲು ಏಕೈಕ ಮಾರ್ಗವೆಂದರೆ ಅದು ಮಾತುಕತೆ. 1999 ರ ಲಾಹೋರ್ ಘೋಷಣೆಯಲ್ಲಿ ಉಲ್ಲೇಖಿಸಿದಂತೆ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಸಹಿ ಹಾಕಲಾದ ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧವನ್ನು ಬಯಸುವುದಾಗಿ ಭಾರತ ಸ್ಪಷ್ಟಪಡಿಸಿದೆ. ಇದನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದ ಭಾಷಣ – ಉದ್ರಿಕ್ತರಿಂದ ಶೇಖ್ ಹಸೀನಾ ತಂದೆ ನಿವಾಸ ಧ್ವಂಸ
ಭಾರತವು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ ಎಂದು ಪ್ರಧಾನಿ ಷರೀಫ್ ಆರೋಪಿಸಿದರು. ಇದು ಈ ಪ್ರದೇಶದಲ್ಲಿ ಶಾಂತಿಯನ್ನು ತರುವುದಿಲ್ಲ ಎಂದು ಪ್ರತಿಪಾದಿಸಿದರು. ಭಾರತವು ಬುದ್ಧಿವಂತರಾಗಿರಬೇಕು. ಮುಂದುವರಿಯಲು ಏಕೈಕ ಮಾರ್ಗವೆಂದರೆ ಶಾಂತಿ ಎಂದು ಅವರು ಹೇಳಿದರು. ಕಾಶ್ಮೀರ ಸಮಸ್ಯೆಗೆ ಏಕೈಕ ಪರಿಹಾರವೆಂದರೆ ವಿಶ್ವಸಂಸ್ಥೆಯ ನಿರ್ಣಯದ ಅಡಿಯಲ್ಲಿ ಸ್ವಯಂ ನಿರ್ಣಯದ ಹಕ್ಕು ಎಂದು ಅವರು ಪ್ರತಿಪಾದಿಸಿದರು.