Tag: jammu kashimr

  • ಜಮ್ಮು ಕಾಶ್ಮೀರದಲ್ಲಿ ದೋಣಿ ಮುಳುಗಡೆ – ಶಾಲಾ ಮಕ್ಕಳು ಸೇರಿದಂತೆ ಹಲವರು ನಾಪತ್ತೆ

    ಜಮ್ಮು ಕಾಶ್ಮೀರದಲ್ಲಿ ದೋಣಿ ಮುಳುಗಡೆ – ಶಾಲಾ ಮಕ್ಕಳು ಸೇರಿದಂತೆ ಹಲವರು ನಾಪತ್ತೆ

    ಶ್ರೀನಗರ: ಗಂಡಾಬಾಲ್‌ನಿಂದ ಶ್ರೀನಗರದ (Srinagar) ಬಟ್ವಾರಕ್ಕೆ ಶಾಲಾ ಮಕ್ಕಳು ಮತ್ತು ಸ್ಥಳೀಯರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು (Boat) ಝೇಲಂ ನದಿಯಲ್ಲಿ (Jhelum River) ಮುಳುಗಿದ ಪರಿಣಾಮ ಶಾಲಾ ಮಕ್ಕಳು ಸೇರಿ ಹಲವರು ನಾಪತ್ತೆಯಾಗಿದ್ದಾರೆ.

    ಘಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ವಿಪತ್ತು ಪರಿಹಾರ ಪಡೆ ನಾಪತ್ತೆಯಾದ ಪ್ರಯಾಣಿಕರಿಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಝೇಲಂ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಇದನ್ನೂ ಓದಿ: ಸೇತುವೆಯಿಂದ ಬಸ್‌ ಕೆಳಗೆ ಬಿದ್ದು 5 ಮಂದಿ ಸಾವು

  • ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನ

    ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನ

    – ಇಬ್ಬರ ಬಂಧನ

    ಶ್ರೀನಗರ: ಆಟಿಕೆ ಗನ್ ಬಳಸಿ ಬ್ಯಾಂಕ್ ದರೋಡೆಗೆ ಯತ್ನಿಸಿದ ಇಬ್ಬರನ್ನು ಬಂಧಿಸಿರುವ ಘಟನೆ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದರೋಡೆಗೆ ಯತ್ನಿಸಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

    ಇಬ್ಬರು ಯುವಕರು ಆಟಿಕೆ ಬಂದೂಕು ಹಿಡಿದು ನಾಥನುಸಾ ಗ್ರಾಮದ ಗ್ರಾಮೀಣ ಬ್ಯಾಂಕ್ ಪ್ರವೇಶ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿಗೆ ಗನ್ ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಬ್ಯಾಂಕಿನಲ್ಲಿದ್ದ ಗ್ರಾಹಕರಿಗೆ ಕೈಯಲ್ಲಿರುವ ಗನ್ ಆಟಿಕೆ ಎಂದು ಅನುಮಾನ ಬಂದಿದೆ. ಕೂಡಲೇ ಬ್ಯಾಂಕ್ ಪ್ರವೇಶ ದ್ವಾರದ ಶೆಟರ್ ಎಳೆದು ಇಬ್ಬರನ್ನು ಹಿಡಿದಿದ್ದಾರೆ. ನಂತರ ಬ್ಯಾಂಕ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರ ಬಳಿಯಲ್ಲಿದ್ದ ಆಟಿಕೆ ಗನ್, ಜೇಬಿನಲ್ಲಿದ್ದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದ ಮಾದಕ ವಸ್ತುವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

  • ಪಾಕ್ ಸೇನೆಯಿಂದ ಪೈಶಾಚಿಕ ಕೃತ್ಯ – ಇಬ್ಬರು ಭಾರತೀಯ ಯೋಧರ ಶಿರಚ್ಛೇದ

    ಪಾಕ್ ಸೇನೆಯಿಂದ ಪೈಶಾಚಿಕ ಕೃತ್ಯ – ಇಬ್ಬರು ಭಾರತೀಯ ಯೋಧರ ಶಿರಚ್ಛೇದ

    ನವದೆಹಲಿ: ಭಾರತೀಯ ಯೋಧರ ಸಹನೆ ಪರೀಕ್ಷಿಸಿ ಕಾಲ್ಕೆರದು ಪದೇ ಪದೇ ಕದನವಿರಾಮ ಉಲ್ಲಂಘಿಸುವ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿಸೆಪ್ಟೆಂಬರ್ 29, 2016ರಲ್ಲಿ `ಸರ್ಜಿಕಲ್ ಸ್ಟ್ರೈಕ್’ ಮಾಡಿದ್ರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ. ಸೋಮವಾರ ಬೆಳಗ್ಗೆ ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್‍ನಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ಸೇನೆಯ ಇಬ್ಬರು ಯೋಧರನ್ನು ಬರ್ಬರ, ಅಮಾನುಷವಾಗಿ ಕೊಂದಿದೆ.

    ಯೋಧರ ಶಿರಚ್ಛೇದನ ಮಾಡಿ ದೇಹವನ್ನು ತುಂಡರಿಸಿ ಪೈಶಾಚಿಕವಾಗಿ ನಡೆದುಕೊಂಡಿದೆ. ಮಧ್ಯಾಹ್ನ ಗಸ್ತಿನಲ್ಲಿ ಯೋಧರಿಗೆ ಕೃಷ್ಣಘಾಟ್ ಬಳಿ ಶಿರಚ್ಛೇದನವಾಗಿ ಬಿದ್ದಿದ್ದ ಸೇನಾ ಕಿರಿಯ ಕಮಾಂಡೆಂಟ್ ಪರಮ್‍ಜಿತ್ ಸಿಂಗ್ ಹಾಗೂ ಬಿಎಸ್‍ಎಫ್‍ನ ಹೆಡ್ ಕಾನ್ಸಟೇಬಲ್ ಪರಮ್ ಸಾಗರ್ ಎಂಬ ಇಬ್ಬರು ಯೋಧರ ಶವ ಪತ್ತೆಯಾಗಿದೆ.

    ಈ ಇಬ್ಬರು ನೆಲ ಬಾಂಬ್ ನಿಷ್ಕ್ರಿಯಗೊಳಿಸಲು ಎಲ್‍ಒಸಿಯಲ್ಲಿ ಪಹರೆ ನಡೆಸ್ತಿದ್ರು. ಇನ್ನು, ಪಾಕಿಸ್ತಾನದ ಕೃತ್ಯವನ್ನು ಅತ್ಯುಘ್ರವಾಗಿ ಖಂಡಿಸಿರೋ ಸೇನೆ, ಶೀಘ್ರದಲ್ಲೇ ತಕ್ಕ ಉತ್ತರ ಕೊಡೋದಾಗಿ ಎಚ್ಚರಿಕೆ ರವಾನಿಸಿದೆ.

    ಅಂದಹಾಗೆ, ನಿನ್ನೆ ತಾನೇ ಎಲ್‍ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಖಮರ್ ಭಜ್ವಾ ಭೇಟಿ ನೀಡಿ ತಮ್ಮ ಜಾಗವನ್ನು ಉಳಿಸಿಕೊಳ್ಳೋಣ. ನೀವು ಹೋರಾಡಿ ಅಂತಾ ಅವರ ಸೈನಿಕರಿಗೆ ಹುರಿದುಂಬಿಸಿದ್ರು. ಈ ಭೇಟಿಯ ಬೆನ್ನಲ್ಲೇ ಪಾಕ್ ಸೈನಿಕರು ನಮ್ಮ ಭಾರತೀಯ ಸೈನಿಕರ ಶಿರಚ್ಛೇದನ ಮಾಡಿದ್ದಾರೆ.

    ಘಟನೆ ಬಗ್ಗೆ ಪ್ರಧಾನಿ ಮೋದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮಾಹಿತಿ ನೀಡಿದ್ದಾರೆ. ಪಾಕಿಸ್ಥಾನಕ್ಕೆ ತಿರುಗೇಟು ನೀಡಲು ಚಿಂತನೆ ನಡೆಸಿದ್ದಾರೆ. ಇನ್ನು, ಪಾಕಿಸ್ತಾನ ತನ್ನ ಅವಸಾನವನ್ನ ಆಹ್ವಾನಿಸಿಕೊಳ್ತಿದೆ ಅಂತ ರಾಜಕೀಯ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.