Tag: Jammu and Kashmir Assembly Elections

  • ಜಮ್ಮು-ಕಾಶ್ಮೀರ: ಕಥುವಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆ – ಉಗ್ರರಿಗಾಗಿ ಮುಂದುವರಿದ ಶೋಧ

    ಜಮ್ಮು-ಕಾಶ್ಮೀರ: ಕಥುವಾ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನ ಹತ್ಯೆ – ಉಗ್ರರಿಗಾಗಿ ಮುಂದುವರಿದ ಶೋಧ

    ಶ್ರೀನಗರ: ಕಥುವಾದ ಮಂಡ್ಲಿಯಲ್ಲಿ (Kathua-Mandli) ಸೇನಾ ಕಾರ್ಯಾಚರಣೆ ಮುಂದುವರಿದಿದೆ. 2ನೇ ದಿನದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಉಗ್ರರನೊಬ್ಬನ್ನ ಗುಂಡಿಕ್ಕಿ ಕೊಂಡಿದೆ. ಇನ್ನುಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

    ಸೆ.28ರಂದು ಕಥುವಾದ ಮಂಡ್ಲಿಯಲ್ಲಿ ಭಯೋತ್ಪಾದಕರು (Terrorist) ಇರುವಿಕೆಯ ಮಾಹಿತಿ ದೊರೆತ ಆಧಾರದ ಮೇಲೆ ಭದ್ರತಾ ಪಡೆಗಳ ಶೋಧಕಾರ್ಯ ಪ್ರಾರಂಭವಾಯಿತು. ಕಥುವಾದಲ್ಲಿ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ಭಾನುವಾರ ಭದ್ರತಾ ಪಡೆಯು ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದಾರೆ.ಇದನ್ನೂ ಓದಿ: ಡೆಲಿವರಿ ಬಳಿಕ ಮಗನ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್

    ಈ ಕುರಿತು ಅಧಿಕಾರಿಗಳು ಮಾತನಾಡಿ, ಭಾನುವಾರ ಮಧ್ಯಾಹ್ನ ಬಿಲ್ಲವರ ತಹಸಿಲ್‌ನ ಕಾಗ್-ಮಂಡ್ಲಿಯಲ್ಲಿ ನಡೆದ ಎನ್‌ಕೌಂಟರ್‌ನ ಸ್ಥಳದಿಂದ ಭಯೋತ್ಪಾದಕನ ಮೃದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಮಾತನಾಡಿ, ಇನ್ನುಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಮೂರ್ನಾಲ್ಕು ವಿದೇಶಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಎನ್‌ಕಂಟರ್ ಹಾಗೂ ಶೋಧಕಾರ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ. ಜೊತೆಗೆ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.

    ಈ ಪ್ರದೇಶಕ್ಕೆ ಈಗಾಗಲೇ ಬಿಗಿ ಭದ್ರತೆಯನ್ನು ನೀಡಲಾಗಿದ್ದು, ಇಲ್ಲಿ ಅಡಗಿಕೊಂಡಿರುವ ಮೂರ್ನಾಲ್ಕು ವಿದೇಶಿ ಭಯೋತ್ಪಾದಕರನ್ನು ಸೆರೆಹಿಡಿಯಲು ಈ ಕಾರ್ಯಾಚರಣೆ ನಡೆಯುತ್ತಿದೆ ಎಂದರು.ಇದನ್ನೂ ಓದಿ: ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು: ಪ್ರೊ.ಕೆ.ಎಸ್.ಭಗವಾನ್

    ಅ.1ರಂದು ನಡೆಯಲಿರುವ ಮೂರನೇ ಹಂತದ ಮತದಾನಕ್ಕೆ ಮೊದಲು ಭಯೋತ್ಪಾದಕರನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಭಯೋತ್ಪಾದಕ ಸಂಬಂಧಿತ ಘಟನೆಗಳು ಮತ್ತು ಹಿಂಸಾಚಾರ ಮುಕ್ತವಾಗಿ ಮೂರನೇ ಹಂತದ ಮತದಾನ ನಡೆಯಬೇಕು ಎಂದು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

    ಕಥುವಾ ಗುರಿಯಾಗಿದ್ದೇಕೆ?
    1990ರ ದಶಕದಲ್ಲಿ ಕಥುವಾ (Kathua) ಭಯೋತ್ಪಾದಕರ ದೊಡ್ಡ ನೆಲೆಯಾಗಿ ಗುರುತಿಸಿಕೊಂಡಿತ್ತು. ಇಡೀ ಜಮ್ಮು ಮತ್ತು ಕಾಶ್ಮೀರದಾದ್ಯಂತ (Jammu and Kashmir) ದಾಳಿ ನಡೆಸಲು ಇಲ್ಲಿಯೇ ಉಗ್ರರು ಪ್ಲ್ಯಾನ್‌ ರೂಪಿಸುತ್ತಿದ್ದರು. ಸೇನೆ ವಿರುದ್ಧ ಯುದ್ಧಗಳ ತಯಾರಿಯೂ ಇಲ್ಲಿಯೇ ನಡೆಸುತ್ತಿದ್ದರು. ಕಥುವಾ ಉಧಂಪುರ, ಸಾಂಬಾ ಮತ್ತು ದೋಡಾ ಜಿಲ್ಲೆಗಳ ಪಕ್ಕದಲ್ಲಿದ್ದ ಕಾರಣ ಭದ್ರತಾ ಪಡೆಗಳು ಉಗ್ರರ ಹೆಡೆಮುರಿ ಕಟ್ಟಲು ಇಲ್ಲಿಯೇ ಬೀಡುಬಿಟ್ಟಿರುತ್ತಿದ್ದವು ಎಂದು ಅಲ್ಲಿನ ಪ್ರಾಥಮಿಕ ಮೂಲಗಳು ತಿಳಿಸಿವೆ.

    ಈಗ ಮತ್ತೆ ಕಥುವಾ ಉಗ್ರರ ನೆಲೆಯಾಗುತ್ತಿದೆಯೇ ಎಂಬ ಸಂಶಯ ಹುಟ್ಟಿಕೊಂಡಿದೆ. ಏಕೆಂದರೆ ಇಲ್ಲಿನ ಭೌಗೋಳಿಕತೆ ವಿಶೇಷವಾಗಿದೆ. ಒಂದು ಬದಿಯಲ್ಲಿ ಪಾಕಿಸ್ತಾನ ಗಡಿ ಇದ್ದರೆ, ಮತ್ತೊಂದು ಬದಿಯಲ್ಲಿ ಹಿಮಾಚಲ ಪ್ರದೇಶ ಇದೆ. ಮುಖ್ಯವಾಗಿ ಅರಣ್ಯ ಪ್ರದೇಶ ದಟ್ಟವಾಗಿರುವುದರಿಂದ ಉಗ್ರರು ತಪ್ಪಿಸಿಕೊಳ್ಳಲು ಅನುಕೂಲಕರ ವಾತಾವರಣ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಉಗ್ರರು ಈ ಭಾಗದ ನೆಲೆಯನ್ನು ಗುರಿಯಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

  • ಜಮ್ಮು-ಕಾಶ್ಮೀರಕ್ಕಿಂದು ಮೋದಿ ಭೇಟಿ – 30,000 ಕಾರ್ಯಕರ್ತರನ್ನುದ್ದೇಶಿಸಿ ಭಾಷಣ

    ಜಮ್ಮು-ಕಾಶ್ಮೀರಕ್ಕಿಂದು ಮೋದಿ ಭೇಟಿ – 30,000 ಕಾರ್ಯಕರ್ತರನ್ನುದ್ದೇಶಿಸಿ ಭಾಷಣ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ (Jammu and Kashmir Assembly Election) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು (ಸೆ.19) ಶ್ರೀನಗರದ ಶೇರ್ ಇ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

    ಬುಧವಾರ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬಳಿಕ ಬಹುಭದ್ರತೆಯ ನಡುವೆ ಪ್ರಧಾನಿ ಮೋದಿ ಗುರುವಾರ ಶ್ರೀನಗರದ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.ಇದನ್ನೂ ಓದಿ: ಗಡಿಭಾಗದ ಮಕ್ಕಳನ್ನು ಶಾಲೆಗೆ ಸೆಳೆಯೋಕೆ ಶಿಕ್ಷಕರ ಪ್ಲ್ಯಾನ್‌ – ಸ್ವಂತ ಖರ್ಚಿನಲ್ಲಿ ಎಲ್‌ಕೆಜಿ, ಯುಕೆಜಿ

    ಶ್ರೀನಗರದ ಶೇರ್ ಇ ಕಾಶ್ಮೀರ ಪಾರ್ಕ್‌ನಲ್ಲಿ (Sher-e-Kashmir Park) ರ‍್ಯಾಲಿ ನಡೆಯಲಿದ್ದು, ಪಕ್ಷದ 30 ಸಾವಿರ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸುವ ಸಾಧ್ಯತೆಯಿದೆ. ಬಿಜೆಪಿ ಪ್ರಚಾರದ ಭಾಗವಾಗಿ ಈ ರ‍್ಯಾಲಿ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.

    ಈ ಸಂಬಂಧ ಬಿಜೆಪಿ ನಾಯಕ ಅಲ್ತಾಫ್ ಠಾಕೂರ್ (Altaf Thakur) ಮಾತನಾಡಿ, ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ, 19 ಅಭ್ಯರ್ಥಿಗಳನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಇದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಲಿದೆ ಎಂದು ತಿಳಿಸಿದರು.

    ಈ ಬಾರಿಯ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಕಾಶ್ಮೀರದ 45 ಸ್ಥಾನಗಳ ಪೈಕಿ 19 ಕ್ಷೇತ್ರಗಳಲ್ಲಿ ಬಿಜೆಪಿ (BJP)ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, 2014ರ ಚುನಾವಣೆಗಿಂತ ಈ ಬಾರಿ ಕಡಿಮೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ಇದನ್ನೂ ಓದಿ: ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ಆಂಧ್ರ ಸಿಎಂ ಆರೋಪ

    ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಬುಧವಾರ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಮೊದಲ ಹಂತದ ಮತದಾನದಲ್ಲಿ 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಇನ್ನೂ ಎರಡು ಹಂತಗಳಲ್ಲಿ ಮತದಾನ ಬಾಕಿಯಿದ್ದು, ಸೆ.25 ಹಾಗೂ ಅ.1 ರಂದು ಮತದಾನ ನಡೆಯಲಿದೆ. ಅ.8 ರಂದು ಮತ ಎಣಿಕೆ ನಡೆಯಲಿದೆ.

  • ಸುರಕ್ಷಿತ, ಸಮೃದ್ಧ ಜಮ್ಮು-ಕಾಶ್ಮೀರ ನಿರ್ಮಿಸುತ್ತೇವೆ, ಇದು ಮೋದಿ ಗ್ಯಾರಂಟಿ: ಪ್ರಧಾನಿ ಭರವಸೆ

    ಸುರಕ್ಷಿತ, ಸಮೃದ್ಧ ಜಮ್ಮು-ಕಾಶ್ಮೀರ ನಿರ್ಮಿಸುತ್ತೇವೆ, ಇದು ಮೋದಿ ಗ್ಯಾರಂಟಿ: ಪ್ರಧಾನಿ ಭರವಸೆ

    – ಈ ಚುನಾವಣೆ ಪರಿವಾರ-ಯುವಕರ ನಡುವಿನದು

    ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ (Jammu And Kashmir) ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವ ಕೆಲಸವನ್ನು ಬಿಜೆಪಿ (BJP) ಸರ್ಕಾರ ಮಾತ್ರ ಮಾಡಲಿದೆ. ತಮ್ಮ ಸ್ವಾರ್ಥಕ್ಕಾಗಿ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಪರಿವಾರದ ಪಕ್ಷಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದು ಪ್ರಧಾನಿ ಮೋದಿ (Narendra Modi) ಹೇಳಿದ್ದಾರೆ.

    ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ (Assembly Elections) ಹಿನ್ನೆಲೆ ದೋಡಾದಲ್ಲಿ (Doda) ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗಳು ಮೂರು ರಾಜವಂಶಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಕರ ನಡುವೆ ನಡೆಯುತ್ತಿದೆ. ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಈ ಮೂರು ಕುಟುಂಬಗಳು ಸೇರಿ ಮಾಡಿದ ಕೆಲಸ ಯಾವ ಪಾಪಕ್ಕಿಂತ ಕಡಿಮೆಯಿಲ್ಲ. ಈ ಮೂರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರವನ್ನು ವರ್ಷಗಳಿಂದ ನಾಶಮಾಡಲು ಕಾರಣವಾಗಿವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೀಸಲಾತಿ ಸ್ಥಗಿತ ಬಗ್ಗೆ ರಾಹುಲ್ ಹೇಳಿಕೆ – ದಲಿತರ ಹಣ ನುಂಗಿ ಹೀಗೆ ಮಾತಾಡುವ ಕಾಂಗ್ರೆಸಿಗರು ಪಾಪಿಗಳು: ಛಲವಾದಿ

    ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಹಂತ ಬಂದಿದೆ. ಇದರ ಶ್ರೇಯಸ್ಸು ಇಲ್ಲಿನ ಯುವಕರಿಗೆ ಮಾತ್ರ ಸಲ್ಲುತ್ತದೆ. ಇಂದು ನಾನು ಜಮ್ಮು ಮತ್ತು ಕಾಶ್ಮೀರದ ಯುವಕರು, ಅದು ಗಂಡಾಗಿರಲಿ, ಹೆಣ್ಣಮಕ್ಕಳಾಗಿರಲಿ ಅವರ ಉತ್ಸಾಹವನ್ನು ಅಭಿನಂದಿಸುತ್ತೇನೆ ಎಂದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‍ಕೌಂಟರ್ – ಐವರು ಉಗ್ರರು ಬಲಿ

    2000ದ ಬಳಿಕ ಇಲ್ಲಿ ಪಂಚಾಯ್ತಿ ಚುನಾವಣೆ ನಡೆದಿಲ್ಲ. ಬಿಡಿಸಿ ಚುನಾವಣೆಗಳು ಇಲ್ಲಿ ನಡೆದಿಲ್ಲ. ದಶಕಗಳಿಂದ ಸ್ವಜನಪಕ್ಷಪಾತವು ಇಲ್ಲಿನ ಮಕ್ಕಳು ಮತ್ತು ಭರವಸೆಯ ಯುವಕರನ್ನು ಮುಂದೆ ಬರಲು ಬಿಡಲಿಲ್ಲ. ಯುವಕರು ರಾಜಕೀಯಕ್ಕೆ ಬರುವುದು ಕುಟುಂಬದವರಿಗೆ ಇಷ್ಟವಿರಲಿಲ್ಲ. 2014ರಲ್ಲಿ ಬಿಜೆಪಿ ಸರ್ಕಾರಕ್ಕೆ ಬಂದ ನಂತರ, ನಾನು ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರ ಹೊಸ ನಾಯಕತ್ವವನ್ನು ತರಲು ಪ್ರಯತ್ನಿಸಿದೆ. ನಂತರ 2018ರಲ್ಲಿ ಪಂಚಾಯತ್ ಚುನಾವಣೆಗಳು ನಡೆದವು. 2019ರಲ್ಲಿ ಬಿಡಿಸಿ ಚುನಾವಣೆಗಳು ನಡೆದವು ಮತ್ತು 2020 ರಲ್ಲಿ ಮೊದಲ ಬಾರಿಗೆ ಡಿಡಿಸಿ ಚುನಾವಣೆಗಳು ನಡೆದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ತಳಮಟ್ಟದವರೆಗೆ ತಲುಪಲು ಈ ಚುನಾವಣೆಗಳನ್ನು ನಡೆಸಲಾಯಿತು ಎಂದು ಹೇಳಿದರು. ಇದನ್ನೂ ಓದಿ:  ದಲಿತ ವಿಕಲಚೇತನ ವ್ಯಕ್ತಿಗೆ ಹಂಚಿಕೆಯಾದ ಜಾಗದಲ್ಲಿ ಸಿದ್ದರಾಮಯ್ಯ ಮನೆ: ಹೆಚ್‌ಡಿಕೆ ಬಾಂಬ್‌

    ಸ್ವಾತಂತ್ರ‍್ಯ ಬಂದಾಗಿನಿಂದಲೂ ನಮ್ಮ ಪ್ರೀತಿಯ ಜಮ್ಮು ಮತ್ತು ಕಾಶ್ಮೀರ ವಿದೇಶಿ ಶಕ್ತಿಗಳ ಗುರಿಯಾಗಿದೆ. ಇದರ ನಂತರ ಸ್ವಜನಪಕ್ಷಪಾತವು ಈ ಸುಂದರ ರಾಜ್ಯವನ್ನು ಟೊಳ್ಳು ಮಾಡಲು ಪ್ರಾರಂಭಿಸಿತು. ನೀವು ನಂಬಿದ ರಾಜಕೀಯ ಪಕ್ಷಗಳಿಗೆ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಆ ರಾಜಕೀಯ ಪಕ್ಷಗಳು ತಮ್ಮ ಮಕ್ಕಳನ್ನು ಮಾತ್ರ ಬೆಳೆಸಿದವು. ಜಮ್ಮು ಮತ್ತು ಕಾಶ್ಮೀರದ ನನ್ನ ಯುವಕರು ಭಯೋತ್ಪಾದನೆಯಲ್ಲಿ ನಲುಗುತ್ತಲೇ ಇದ್ದರು. ರಾಜವಂಶವನ್ನು ಉತ್ತೇಜಿಸುವ ಪಕ್ಷಗಳು ನಿಮ್ಮನ್ನು ದಾರಿ ತಪ್ಪಿಸುವ ಮೂಲಕ ಮೋಜು ಮಾಡುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ನಾಯಕತ್ವ ಹೊರಹೊಮ್ಮಲು ಈ ಜನರು ಎಂದಿಗೂ ಅನುಮತಿಸಲಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೀವನವು ಖಟಾ-ಖಟ್ ಅಲ್ಲ, ಕಠಿಣ ಪರಿಶ್ರಮ ಬೇಕು: ರಾಹುಲ್‌ಗೆ ಜೈಶಂಕರ್‌ ಟಾಂಗ್‌

    ಈ ಬಾರಿಯ ಚುನಾವಣೆ ಜಮ್ಮು ಮತ್ತು ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸಲಿದೆ. ನಾವು ಸುರಕ್ಷಿತ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಾಣ ಮಾಡುತ್ತೇವೆ. ನಾನು ನಿಮಗಾಗಿ ಮತ್ತು ದೇಶಕ್ಕಾಗಿ ಡಬಲ್ ಮತ್ತು ಟ್ರಿಪಲ್ ಕೆಲಸ ಮಾಡುವ ಮೂಲಕ ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಮರುಪಾವತಿಸುತ್ತೇನೆ. ನಾವು ಒಟ್ಟಾಗಿ ಸುರಕ್ಷಿತ ಮತ್ತು ಸಮೃದ್ಧ ಜಮ್ಮು ಮತ್ತು ಕಾಶ್ಮೀರವನ್ನು ನಿರ್ಮಿಸುತ್ತೇವೆ. ಇದು ಮೋದಿ ಗ್ಯಾರಂಟಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಹೊಟ್ಟೆ ತುಂಬ ಊಟ ಕೊಡಿ ಪ್ಲೀಸ್ – ಅರೆಹೊಟ್ಟೆಯಲ್ಲಿ ವಸತಿ ಶಾಲಾ ವಿದ್ಯಾರ್ಥಿನಿಯರ ಪರದಾಟ