Tag: Jamiya Masjid

  • ಸಕ್ಕರೆನಾಡು ಮಂಡ್ಯ ಕೇಸರಿಮಯ – ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

    ಸಕ್ಕರೆನಾಡು ಮಂಡ್ಯ ಕೇಸರಿಮಯ – ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ

    ಮಂಡ್ಯ: ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿಯ (Jamiya Masjid) ವಿವಾದ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಪ್ರತಿ ವರ್ಷದಂತೆ ಇಂದು ಜಾಮಿಯಾ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಪುನರ್ ನಿರ್ಮಾಣ ಮಾಡುವ ಪ್ರತಿಜ್ಞೆ ಮಾಡಿ ಹನುಮ ಮಾಲಧಾರಿಗಳು (Hanuma Maladharis) ಬೃಹತ್ ಸಂಕೀರ್ತನಾ ಯಾತ್ರೆಯನ್ನು ಮಾಡುತ್ತಿದ್ದಾರೆ.

    ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕೋಟೆ ನಗರಿ ಎಂದು ಕರೆಯಲ್ಪಡುವ ಶ್ರೀರಂಗಪಟ್ಟಣದಲ್ಲಿ ಎಲ್ಲಿ ನೋಡಿದರು ಕೇಸರಿ ಮಯವಾಗಿದೆ. ಬೀದಿ ಬೀದಿಗಳಲ್ಲಿ ಕೇಸರಿ ಬಾವುಟ, ಮೂಡಲ ಬಾಗಿಲು ಆಂಜನೇಯಸ್ವಾಮಿಯ ದೇವಸ್ಥಾನದ ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ರಾರಾಜಿಸುತ್ತಿದೆ. ಈ ಮೂಲಕ ಇಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಸಂಘಟನೆಗಳಿಂದ ನಡೆಯುತ್ತಿರುವ ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆಗೆ ಶ್ರೀರಂಗಪಟ್ಟಣ ಸಂಪೂರ್ಣ ಸಜ್ಜಾಗಿದೆ. ಇದನ್ನೂ ಓದಿ: ಫಿಲ್ಮ್‌ ಚೇಂಬರ್‌ ಎಲೆಕ್ಷನ್;‌ ಸಾರಾ ಗೋವಿಂದು ಬಣಕ್ಕೆ ಜಯ – ಅಧ್ಯಕ್ಷರಾಗಿ ನರಸಿಂಹಲು ಆಯ್ಕೆ

    ಸದ್ಯ ಶ್ರೀರಂಗಪಟ್ಟಣದಲ್ಲಿ ಇರುವ ಜಾಮಿಯಾ ಮಸೀದಿ ಜಾಗದಲ್ಲಿ ಹಿಂದೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಇತ್ತು. ದೇವಸ್ಥಾನವನ್ನು ಕೆಡವಿ ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇದಕ್ಕೆ ಈಗಲೂ ಇಲ್ಲಿರುವ ಕಲ್ಯಾಣಿ, ನಾಗರ ಕಲ್ಲುಗಳು ಸೇರಿದಂತೆ ಇತರ ಕುರುಹುಗಳೇ ಸಾಕ್ಷಿಯಾಗಿವೆ. ಹೀಗಾಗಿ ಜಾಮಿಯಾ ಮಸೀದಿಯನ್ನು ಕೆಡವಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಮರು ಸ್ಥಾಪನೆ ಮಾಡಲೇಬೇಕೆಂದು ಸಂಕಲ್ಪ ಮಾಡಿ ಹಲವು ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಪರ ಸಂಘಟನೆಗಳು ಹನುಮ ಮಾಲಾಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆಯನ್ನು ಮಾಡಿಕೊಂಡು ಬಂದಿವೆ. ಅದೇ ರೀತಿ ಇಂದು ಸಹ ಶ್ರೀರಂಗಪಟ್ಟಣದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಟ್ರಂಪ್‌ ರೆಸಾರ್ಟ್‌ನಲ್ಲಿ ಆಪಲ್‌ ಸಿಇಒ ಟಿಮ್‌ ಕುಕ್‌, ಡಿನ್ನರ್‌ನಲ್ಲಿ ಭಾಗಿ

    ಇಂದು ನಿಮಿಷಾಂಬ ದೇವಸ್ಥಾನದಿಂದ ಆರಂಭಗೊಳ್ಳುವ ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಮುಂಭಾಗದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಜರುಗಲಿದೆ. ಈ ಯಾತ್ರೆಯಲ್ಲಿ ಮಂಡ್ಯ, ಮೈಸೂರು, ಕೊಡಗು, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಹನುಮ ಮಾಲೆಯನ್ನು ಹಾಕಿಕೊಂಡಿರುವ ಸಾವಿರಾರು ಸಂಖ್ಯೆಯ ಹನುಮ ಮಾಲಾಧಾರಿಗಳು ಭಾಗಿಯಾಗಲಿದ್ದಾರೆ. ಅಲ್ಲದೇ ರಾಜ್ಯದ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಜೆಡಿಎಸ್ ನಾಯಕರು ಸಹ ಭಾಗಿಯಾಗಲಿದ್ದಾರೆ. ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮಂಡ್ಯ ಪೊಲೀಸ್ ಇಲಾಖೆ ಶ್ರೀರಂಗಪಟ್ಟಣದ್ಯಾಂತ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದು, ಯಾತ್ರೆ ಸಾಗುವ ದಾರಿಯುದ್ಧಕ್ಕೂ ಸಿಸಿಟಿವಿಗಳನ್ನು ಹಾಕಲಾಗಿದೆ. ಇದನ್ನೂ ಓದಿ: ತೆಂಕುತಿಟ್ಟು ಯಕ್ಷಗಾನದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಾಡಿತ್ತಾಯ ನಿಧನ

  • ಚಿತ್ರದುರ್ಗ| ಚಳ್ಳಕೆರೆಯಲ್ಲಿ ವಕ್ಫ್ ಬೋರ್ಡ್ ವಿರುದ್ಧ ಆಸ್ತಿ ಕಬಳಿಕೆ ಯತ್ನ ಆರೋಪ

    ಚಿತ್ರದುರ್ಗ| ಚಳ್ಳಕೆರೆಯಲ್ಲಿ ವಕ್ಫ್ ಬೋರ್ಡ್ ವಿರುದ್ಧ ಆಸ್ತಿ ಕಬಳಿಕೆ ಯತ್ನ ಆರೋಪ

    – ದಲಿತ ಮುಖಂಡರ ಆಕ್ರೋಶ

    ಚಿತ್ರದುರ್ಗ: ರಾಜ್ಯಾದ್ಯಂತ ವಿವಿಧ ಸಮುದಾಯಗಳ ಆಸ್ತಿಗಳನ್ನು ವಕ್ಫ್ ಕಬಳಿಸುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ಪಟ್ಟಣದಲ್ಲಿ ಸಹ ದಲಿತರ ಆಸ್ತಿ (Dalit Property) ಕಬಳಿಸಲು ವಕ್ಫ್ (Waqf Board) ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    2023ರಲ್ಲಿ ಚರ್ಮ ಕೈಗಾರಿಕಾ ಪ್ರದೇಶದ ನಾಲ್ಕು ಎಕರೆ ಜಮೀನು, ಜನತಾ ಕಾಲೋನಿ ಹಾಗು ಖಬರಸ್ಥಾನ್‌ನ 30 ಗುಂಟೆ ಜಾಗವನ್ನು ಜಾಮಿಯ ಮಸೀದಿಗೆ ನೀಡುವಂತೆ ನಗರಸಭೆಗೆ ಮನವಿ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಜಯಪುರದಲ್ಲಿ ರೈತರಿಗೆ ನೀಡಿರೋ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿಎಂ ಘೋಷಣೆ

    ಈ ಬಗ್ಗೆ ಚಳ್ಳಕೆರೆಯಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ದಲಿತ ಮುಖಂಡ ಶಿವಮೂರ್ತಿ, ನಮ್ಮ ಜಾಗಗಳನ್ನು ನಾವು ಬಿಟ್ಟು ಕೊಡಲ್ಲ. ರಕ್ತ ಕ್ರಾಂತಿಯಾದರು ನಮ್ಮ ಜಾಗವನ್ನು ಜಾಮಿಯಾ ಮಸೀದಿಗೆ ಬಿಟ್ಟು ಕೊಡಲ್ಲ. ಆ ಜಾಗಗಳು ನಮಗೆ ಮೈಸೂರು ಒಡೆಯರಿಂದ ಬ್ರಿಟೀಷರ ಕಾಲದಲ್ಲೇ ಬಂದಿವೆ. ಆದರೆ ನಾವು ಅಸ್ಪೃಶ್ಯರು, ಅನಕ್ಷರಸ್ತರು, ಅಸಹಾಯಕರು ಎಂದು ಈ ಜಾಗಗಳನ್ನು ಕಬಳಿಸುವ ಯತ್ನ ನಡೆದಿದ್ದು, ಕೋರ್ಟಿಗೆ ಎಳೆದು ದಲಿತರ ಜಾಗ ಕಬಳಿಸುವ ಹುನ್ನಾರವಿದು. ಹೀಗಾಗಿ ಕ್ಷೇತ್ರದ ಶಾಸಕ ರಘುಮೂರ್ತಿ ಹಾಗು ಅಧಿಕಾರಿಗಳು ಈ ಜಾಗವನ್ನು ದಲಿತರಿಗೆ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿಎಂ

  • ಮಂಡ್ಯದಲ್ಲಿ ಜಾಮಿಯಾ ಮಸೀದಿ ವಿವಾದ ಕೆಣಕಿ ಬಿಜೆಪಿ ರಾಜಕೀಯ -ಹೆಚ್‌ಡಿಕೆ

    ಮಂಡ್ಯದಲ್ಲಿ ಜಾಮಿಯಾ ಮಸೀದಿ ವಿವಾದ ಕೆಣಕಿ ಬಿಜೆಪಿ ರಾಜಕೀಯ -ಹೆಚ್‌ಡಿಕೆ

    ಮಂಡ್ಯ: ಜಾಮಿಯಾ ಮಸೀದಿ (Jamiya Masjid) ವಿವಾದವನ್ನು ಕೆಣಕಿ ಬಿಜೆಪಿ (BJP) ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ರಾಜಕೀಯ (Politics) ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅಸಮಾಧಾನ ಹೊರಹಾಕಿದ್ದಾರೆ.

    ಮಂಡ್ಯದ (Mandya) ಬೇವಿನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಬಿಜೆಪಿ (BJP) ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಅವರಿಗೆ ಧರ್ಮದ ವಿಚಾರ ಬಳಕೆ ಮಾಡಿಕೊಂಡು ರಾಜಕೀಯ ಮಾಡುವುದು ಮಾತ್ರ ಗೊತ್ತು. ಆ ಕಾರಣಕ್ಕಾಗಿಯೇ ಅವರು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದವನ್ನು ಕೆಣಕುತ್ತಿದ್ದಾರೆ. ಜನರ ಭಾವನಾತ್ಮಕತೆ ಬಳಸಿಕೊಂಡು ರಾಜಕೀಯವಾಗಿ ಅವರು ಯಶಸ್ವಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಅತಿಥಿ ಶಿಕ್ಷಕನ ಅಟ್ಟಹಾಸಕ್ಕೆ 2ನೇ ಬಲಿ – ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಶಿಕ್ಷಕಿ ಸಾವು

    ಮಂಡ್ಯ ಜಿಲ್ಲೆ ಕರಾವಳಿ ಪ್ರದೇಶವಲ್ಲ, ಕರಾವಳಿ ಪ್ರದೇಶದ ಜನರ ಜೀವನ ಶೈಲಿ ಹಾಗೂ ವಾತಾವರಣ ಬೇರೆ. ಮಂಡ್ಯ ಜಿಲ್ಲೆಯ ಜನರ ಜೀವನ ಶೈಲಿ ಮತ್ತು ವಾತಾವರಣವೇ ಬೇರೆ. ಮಂಡ್ಯದ ಜನರು ಶ್ರಮಜೀವಿಗಳು, ಇಲ್ಲಿ ಬಿಜೆಪಿ ಅವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಹೋದರೆ ಅವರಿಗೆ ಮುಳುವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?

    Live Tv
    [brid partner=56869869 player=32851 video=960834 autoplay=true]