Tag: Jamir Ahmed

  • ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಿದ್ದರಾಮಯ್ಯ ಮನೆಗೆ ಹೋಗಿದ್ದೆ: ಪುಟ್ಟರಾಜು

    ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಿದ್ದರಾಮಯ್ಯ ಮನೆಗೆ ಹೋಗಿದ್ದೆ: ಪುಟ್ಟರಾಜು

    ಮಂಡ್ಯ: ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಿದ್ದರಾಮಯ್ಯನವರ ಮನೆಗೆ ಹೋಗಿದ್ದೆ ಎಂದು ಮೇಲುಕೋಟೆಯ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಸ್ಪಷ್ಟಪಡಿಸಿದ್ದಾರೆ.

    ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಡಿಂಕಾ ಮಲ್ಲಿಗೆರೆ ಗ್ರಾಮದಲ್ಲಿ ಸಿದ್ದರಾಮೇಶ್ವರ ದೇವಾಲಯ ನಿರ್ಮಾಣ ಮಾಡಿದ್ದಾರೆ. ದೇವಾಲಯ ಸಮಿತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡುವಂತೆ ಒತ್ತಾಯಿಸಿದ್ದರು ಎಂದರು. ಇದನ್ನೂ ಓದಿ: ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮಾಡಿದ್ದೇನೆ: ಬೊಮ್ಮಾಯಿ

    ಹೀಗಾಗಿ ಸಿದ್ದರಾಮಯ್ಯನವರ ಭೇಟಿಗೆ ಸಮಯ ಕೇಳಿದ್ದು, ಅವರು ನಿನ್ನೆ ಬೆಳಿಗ್ಗೆ 7 ಗಂಟೆಗೆ ಸಮಯ ನೀಡಿದ್ದರು. ಆದರೆ ಸಿದ್ದರಾಮಯ್ಯನವರನ್ನು ಸಂಜೆ 6:30ಕ್ಕೆ ಭೇಟಿಯಾಗಲು ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

    ಅದೇ ವೇಳೆಗೆ ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಸಿದ್ದರಾಮಯ್ಯ ಅವರ ಮನೆಗೆ ಬಂದರು. ಇದನ್ನೂ ಗಮನಿಸಿದ ಯಾರೋ ಫೋಟೋ ತೆಗೆದು ವೈರಲ್ ಮಾಡಿದ್ದಾರೆ. ರಾಜಕೀಯದ ಬಗ್ಗೆ ಮಾತನಾಡೋದಕ್ಕೆ ಏನಿದೆ? ನಾನು ಜೆಡಿಎಸ್, ಅವರು ಕಾಂಗ್ರೆಸ್, ಹಾಗಾಗಿ ರಾಜಕೀಯ ಚರ್ಚೆ ಏನೂ ಇಲ್ಲ ಎಂದು ನುಡಿದರು.

     

  • ರಾಜಕೀಯ ಎಂದರೆ ನನಗೆ ಇಷ್ಟ ಇಲ್ಲ: ಜಮೀರ್ ಪುತ್ರ

    ರಾಜಕೀಯ ಎಂದರೆ ನನಗೆ ಇಷ್ಟ ಇಲ್ಲ: ಜಮೀರ್ ಪುತ್ರ

    ಹಾಸನ: ನನ್ನ ತಂದೆ ರಾಜಕೀಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಆದರೆ ನಾನು ಮೊದಲಿನಿಂದಲೂ ರಾಜಕೀಯದಿಂದ ದೂರವೇ ಇದ್ದೇನೆ ಎಂದು ಶಾಸಕ ಜಮೀರ್‌ ಅಹಮದ್‌ ಪುತ್ರ ಹಾಗೂ ನಟ ಜೈದ್‌ ಖಾನ್‌ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ರಾಜಕೀಯದಿಂದ ನಾನು ಮೊದಲಿನಿಂದಲೂ ದೂರ ಉಳಿದಿದ್ದೇನೆ. ರಾಜಕೀಯ ನನಗೆ ಇಷ್ಟ ಇಲ್ಲ. ನನ್ನ ಆಯ್ಕೆ ಸಿನಿಮಾರಂಗ ಎಂದು ತಿಳಿಸಿದರು. ಇದನ್ನೂ ಓದಿ: ‘ಬನಾರಸ್’ ಫಸ್ಟ್ ಲುಕ್ ಮೋಷನ್ ಪೋಸ್ಟರ್‌ಗೆ ಚಿತ್ರರಸಿಕರಿಂದ ಬಹುಪರಾಕ್

    ನನ್ನ ನೋಡಲೆಂದು ಬಂದಿರುವ ಜನಸಾಗರ ನೋಡಿ ಸಂತೋಷವಾಗಿದೆ. ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೇನೊ ನನಗೆ ಗೊತ್ತಿಲ್ಲ. ತಂದೆಯವರು ಸಾಕಷ್ಟು ಜನಪರ ಕೆಲಸ, ಬಡವರ ಸೇವೆ ಮಾಡಿದ್ದಾರೆ. ಅವರ ಮೇಲೆ ಪ್ರೀತಿ ಇಟ್ಟಿರುವ ಜನ ಇಂದು ನನ್ನನ್ನೂ ಗೌರವಿಸುತ್ತಿದ್ದಾರೆ. ನಾನು ತುಂಬ ಅದೃಷ್ಟವಂತನೆಂದು ಹೇಳಿಕೊಳ್ಳಲು ಹೆಮ್ಮಯಾಗುತ್ತಿದೆ ಎಂದು ಸಂಸತ ವ್ಯಕ್ತಪಡಿಸಿದರು.

    5 ಭಾಷೆಗಳಲ್ಲಿ ನಿರ್ಮಾಣವಾಗಿರುವ ʻಬನರಸ್ʼ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದು, ಈಗಾಗಲೇ ಟ್ರೈಲರ್‌ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದೇನೆ. ರಾಜಕೀಯದಲ್ಲಿ ತಂದೆಗೆ ತೋರಿದ ಪ್ರೀತಿಯನ್ನು ನನ್ನ ಮೇಲೂ ತೋರಿಸಿ. ಚಿತ್ರರಂಗದಲ್ಲಿ ನನ್ನನ್ನು ಬೆಳೆಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ‘ಪುಷ್ಪ’ ಸಿನಿಮಾದ ರೋಮ್ಯಾಂಟಿಕ್ ಸೀನ್​ಗೆ ಬಿತ್ತು ಕತ್ತರಿ

    ಬನರಸ್ ಚಲನಚಿತ್ರದಲ್ಲಿ ಕಾಮಿಡಿ, ಆ್ಯಕ್ಷನ್, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಎಲ್ಲಾ ರೀತಿಯ ಸನ್ನಿವೇಶಗಳಿವೆ. ಕುಟುಂಬ ಸಮೇತರಾಗಿ ಸಿನಿಮಾ ನೋಡಿ. ಬನರಸ್ ಸಿನಿಮಾ ೨೦೨೨ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

  • ಜೆಡಿಎಸ್ ಸತ್ತಿದೆ, ಕುಮಾರಸ್ವಾಮಿ ಯಾವ ಸೀಮೆ ಲೀಡರ್ – ಜಮೀರ್ ಅಹ್ಮದ್

    ಜೆಡಿಎಸ್ ಸತ್ತಿದೆ, ಕುಮಾರಸ್ವಾಮಿ ಯಾವ ಸೀಮೆ ಲೀಡರ್ – ಜಮೀರ್ ಅಹ್ಮದ್

    – ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ
    – ಸಿಎಂ ಇಬ್ರಾಹಿಂ ವಿರುದ್ಧ ಕಿಡಿ

    ಬಾಗಲಕೋಟೆ: ಸಿದ್ದರಾಮಯ್ಯರಂತಹ ಲೀಡರ್‍ ನ ನಾನು ನೋಡಿಯೇ ಇಲ್ಲ, ಎಚ್.ಡಿ ಕುಮಾರಸ್ವಾಮಿ ಯಾವ ಸೀಮೆ ಲೀಡರ್ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.

    ಖಾಸಗಿ ಕಾರ್ಯಕ್ರಮಕ್ಕಾಗಿ ಬಾದಾಮಿ ತಾಲೂಕಿನ ಕೆರೂರು ಪಟ್ಟಣಕ್ಕೆ ಆಗಮಿಸಿದ ಜಮೀರ್ ಅಹ್ಮದ್ ಆಗಮಿಸಿದ್ದರು. ಈ ವೇಳೆ ಉತ್ತರ ಕರ್ನಾಟಕ ಬಾಗಲಕೋಟೆಯಲ್ಲಿ ಜೆಡಿಎಸ್ ಸಂಘಟನಾ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷ ಎಲ್ಲಿದೆ? ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಸೇರಿದೆ ಎಂದರು.

    ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಉಪಸಭಾಪತಿ ಆಯ್ಕೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿದೆ, ಸದ್ಯ ಜೆಡಿಎಸ್ ಪಕ್ಷದಿಂದ ಎಸ್ ಪದವನ್ನು ತೆಗೆಯಬೇಕು. ಇದು ಯಾವ ಜಾತ್ಯಾತೀತ ಪಕ್ಷ. ಜೆಡಿಎಸ್ ಪಕ್ಷ ಪ್ರಸ್ತುತ ಸತ್ತಿದೆ. 2006ರಲ್ಲಿ ಎಚ್‍ಡಿಕೆ ಸಿಎಂ ಆಗಿ ಒಳ್ಳೆಯ ಆಡಳಿತ ಕೊಟ್ಟಿದ್ದರು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಿದ್ದರಾಮಯ್ಯ ಜೆಡಿಎಸ್‍ನಲ್ಲಿದ್ದಾಗ 59 ಸೀಟು ಬಂದಿತ್ತು. ಈಗ ಕುಮಾರಸ್ವಾಮಿ ಲೀಡರ್ ಎನ್ನುತ್ತಾರಲ್ಲ. ಈಗ ಆ ನಂಬರ್ ರೀಚ್ ಮಾಡುದಕ್ಕೆ ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಸೆಪ್ಟೆಂಬರ್ ಅಕ್ಟೋಬರ್‍ ನಲ್ಲಿ ಚುನಾವಣೆ ನಡೆಯುತ್ತದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಧಿ ಪೂರ್ಣಗೊಳಿಸುತ್ತದೆ. ಬಿಜೆಪಿಗೆ ಪೂರ್ಣ ಬಹುಮತವಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.

    ಇನ್ನು ಅಲ್ಪಸಂಖ್ಯಾತರ ಅನುದಾನ ಕಡಿತ ವಿಚಾರಕ್ಕೆ ಮಾತನಾಡಿದ ಜಮೀರ್, ಅಲ್ಪಸಂಖ್ಯಾತರ ಅನುದಾನ ನಮಗೆ ಕೊಟ್ಟಿದ್ದ ಅನುದಾನ ಕಡಿತ ಗೊಳಿಸಿದ್ದಾರೆ. ಅಲ್ಪಸಂಖ್ಯಾತರಿಗೆ 3150 ಕೋಟಿ ಇದ್ದ ಅನುದಾನವನ್ನು 600 ಕೋಟಿಗೆ ತಂದು ನಿಲ್ಲಿಸಿದ್ದಾರೆ. ಶಾದಿ ಭಾಗ್ಯ ನಿಲ್ಲಿಸಿದ್ದಾರೆ. ಏನೇ ಮಾಡಲಿ ಅವರ ಸರ್ಕಾರವಿದೆ. ಆದರೆ ಮಕ್ಕಳಿಗೆ ಕೊಡುತ್ತಿದ್ದ ಸ್ಕಾಲರ್ ಶಿಪ್ 198 ಕೋಟಿ ಇದ್ದಿದ್ದು 100 ಕೋಟಿ ಮಾಡಿದ್ದಾರೆ. ಇದರಿಂದ ಉಳಿದ 98 ಕೋಟಿ ಯಾರು ಕೊಡುತ್ತಾರೆ? ಓದುವ ಮಕ್ಕಳ ಮುಂದಿನ ಭವಿಷ್ಯ ಏನು ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

    ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಗೊಳ್ಳುವ ವಿಚಾರಕ್ಕೆ ಮಾತನಾಡಿದ ಜಮೀರ್, ಸಿಎಂ ಇಬ್ರಾಹಿಂ ಕಾಂಗ್ರೆಸ್‍ನ ಎಂಎಲ್‍ಸಿ ಆಗಿದ್ದಾರೆ. ಇನ್ನು ನಾಲ್ಕೂವರೆ ವರ್ಷ ಅವಧಿ ಇದೆ. ಹಾಗೇನಾದ್ರೂ ಕಾಂಗ್ರೆಸ್ ಬಿಡಬೇಕಿದ್ದರೆ ಎಂಎಲ್‍ಸಿ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು. ಚುನಾವಣೆಗಳಲ್ಲಿ ಸೋತಮೇಲೂ ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷದ ಚೇರ್ಮನ್ ಮಾಡಿದೆ. ಇದನ್ನು ಹೊರತು ಪಡಿಸಿ ಪಕ್ಷ ಇಬ್ರಾಹಿಂಗೆ ಮತ್ತೇನು ಮಾಡಬೇಕು? ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ ಎನುವುದಾದರೆ ಸಿದ್ದರಾಮಯ್ಯ ಸಿಎಂ ಇದ್ದಾಗ ಅಲ್ಪಸಂಖ್ಯಾತರಿಗೆ 120 ಕೋಟಿ ಇದ್ದ ಅನುದಾನವನ್ನು 3100 ಕೋಟಿಗೆ ಹೆಚ್ಚಿಸಿದ್ದರು. ಅಲ್ಪಸಂಖ್ಯಾತರ ಅನುದಾನ ಹೆಚ್ಚಿಸಿದಾಗ ಕಾಂಗ್ರೆಸ್‍ನಲ್ಲೇ ಇದ್ದ ಇಬ್ರಾಹಿಂ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ ಎಂದು ವ್ಯಂಗವಾಡಿದರು.

  • ಯೇ ಕ್ಯಾ ಜಮೀರ್ ಸಾಬ್? ನಿಮ್ಮ ಎಂಜಲೆಲೆ ಊಟ ಪೊಲೀಸರ ಬಾಯಿಗೆ ಕೊಟ್ಟಿರೋದು ಸರಿನಾ?

    ಯೇ ಕ್ಯಾ ಜಮೀರ್ ಸಾಬ್? ನಿಮ್ಮ ಎಂಜಲೆಲೆ ಊಟ ಪೊಲೀಸರ ಬಾಯಿಗೆ ಕೊಟ್ಟಿರೋದು ಸರಿನಾ?

    ಮೈಸೂರು: ದಸರಾ ಫುಡ್ ಫೆಸ್ಟಿವಲ್ ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅವರ ಲೇಟೆಸ್ಟು ಸ್ಟೈಲ್ ಗೆ ಕೆಲವ್ರು ಫಿದಾ ಆದ್ರೇ ಇನ್ನು ಕೆಲವ್ರು ಇರಿಸುಮುರಿಸು ಅನುಭವಿಸಿದ್ರು.

    ಸಂಭ್ರಮದ ದರ್ಬಾರ್ ನಲ್ಲಿ ಫುಲ್ ರೌಂಡ್ ಹೊಡೆಯುತ್ತಿರುವ ಜಮೀರ್ ಸಾಹೇಬ್ರಿಗೆ ಏನು ಹೊಸ ಐಡಿಯಾ ಹೊಡೆಯಿತೋ ಗೊತ್ತಿಲ್ಲ. ಸ್ಕೌಡ್ಸ್ ಅಂಡ್ ಗೈಡ್ ಗ್ರೌಂಡ್ ನಲ್ಲಿ ಫುಡ್ ಫೆಸ್ಟ್ ನಲ್ಲಿ ಭಾಗವಹಿಸಿದ್ದ ಸಾಹೇಬ್ರು ಊಟಕ್ಕೆ ಕೂತ್ರು.

    ಮೈಸೂರು ಊಟ ಗಡದ್ದಾಗಿ ತಿಂದು ತೇಗೋದು ಬಿಟ್ಟು ಗ್ಯಾಪ್ ನಲ್ಲಿ ಹೊಸ ವಿವಾದ ಮಾಡ್ಕೊಂಡ್ರು. ಊಟದ ಕೊನೆಯಲ್ಲಿ ಅನ್ನ ಮಿಕ್ಕಿತ್ತೋ ಅಥ್ವಾ ಪೊಲೀಸರ ಮೇಲೆ ಹೆವಿ ಪ್ರೀತಿ ಉಕ್ಕಿ ಹರಿಯಿತೋ ಗೊತ್ತಿಲ್ಲ. ಇಧರ್ ಆವೋ ಅಂತಾ ಖಾಕಿಯವರನ್ನು ಕರೆದ್ರು. ಮಿನಿಸ್ಟ್ರು ಕರೆಯುತ್ತಾರೆ ಅಂತಾ ಓಡೋಡಿ ಬಂದ ಪೊಲೀಸ್ ಪೇದೆಗಳಿಗೆ ಬಾಯಿ ಹಾ ಅನ್ನು ಅಂತಾ ಹೇಳಿ ಅನ್ನ ಕಲಸಿ ಹಂಗಂಗೆ ತುರುಕಿದ್ರು. ಅದು ಮೂರು ಜನ್ರಿಗೂ ಎಂಜಲೆಲೆ ಊಟ ನಾ ಬಾಯಿಗೆ ತುರುಕಿದ್ರು.

    ಇತ್ತ ಸಚಿವರ ಕೈ ತುತ್ತಿಗೆ ಬೇಡ ಅನ್ನೋದಕ್ಕೂ ಆಗದೇ ಪೇದೆಗಳು ಬಾಯಿ ಒರೆಸಿಕೊಂಡು ಸುಮ್ಮನಾದ್ರು. ಇದು ಮಿನಿಸ್ಟ್ರ ಸಿಂಪ್ಲಿಸಿಟಿ ಅಂತಾ ಅಂದ್ ಕೊಂಡ್ರು. ಈಗ ಈ ರೀತಿ ಎಂಜಲೆಲೆ ಊಟ ಕೊಟ್ಟಿದ್ದು ಎಷ್ಟು ಸರಿ ಎನ್ನುವ ಚರ್ಚೆ ಆರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ಧಾಂತ ಇಲ್ಲದ ಶಾ ನಮಗೆ ನೀತಿ ಪಾಠ ಹೇಳೋ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

    ಸಿದ್ಧಾಂತ ಇಲ್ಲದ ಶಾ ನಮಗೆ ನೀತಿ ಪಾಠ ಹೇಳೋ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಿದ್ಧಾಂತವಿಲ್ಲ. ಅವರು ಬಂದು ನೀತಿ ಪಾಠ ಮಾಡುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಸಿಎಂ ಗೃಹ ಕಛೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಚಾಣಾಕ್ಷ ಅಂತ ಆಗಬೇಕಾದ್ರೆ ಸಿದ್ಧಾಂತಗಳನ್ನು ಬಿಡಬೇಕು. ಈ ಸಮಯದಲ್ಲಿ ಬಂದು ಮಠ ಮಾನ್ಯಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದು ದೂರಿದರು.

    ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಗತಿಪರರು ಮೈತ್ರಿ ಬಗ್ಗೆ ಹೇಳಲಿಲ್ಲ. ಕೋಮುವಾದಿ ಪಕ್ಷವನ್ನು ಸೋಲಿಸಲು ಪ್ರಗತಿಪರರು ಜಾತ್ಯಾತೀತ ಪಕ್ಷಗಳು ಒಂದಾಗಬೇಕು ಎಂದು ಹೇಳಿದ್ದಾರೆ. ಆದರೆ ಜೆಡಿಎಸ್ ನವರು ಜಾತ್ಯಾತೀತರಲ್ಲ ಅವರು ಸಿದ್ಧಾಂತ ಬಿಟ್ಟವರು ಎಂದರು.

    ನಮ್ಮ ಕುಟುಂಬದ ಬಗ್ಗೆ ಮಾತನಾಡಬೇಡಿ ಎಂಬ ಹೆಚ್‍ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮೀರ್ ಅಹಮದ್, ನಾನು ಅವರ ಕುಟುಂಬದ ಬಗ್ಗೆ ಮಾತನಾಡಿಲ್ಲ. ಪ್ರಜ್ವಲ್ ರೇವಣ್ಣ ಬೆಳೆಯೋದು ಅವರು ಸಹಿಸಲ್ಲ ಇನ್ನು ನಾವು ಬೆಳೆಯೋದು ಸಹಿಸುತ್ತಾರ ಎಂದು ಹೇಳಿದ್ದೇನೆ ಅಷ್ಟೇ. ಪ್ರಜ್ವಲ್ ರೇವಣ್ಣ ಬೆಳೆಯೋದು ಅವರಿಗೆ ಇಷ್ಟ ಇಲ್ಲ. ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನೇ ನಾನು ಹೇಳಿದ್ದೇನೆ ಅಷ್ಟೆ ಎಂದರು.