Tag: Jamia masjid

  • ಮತ್ತೆ ಮುನ್ನೆಲೆಗೆ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ – ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ

    ಮತ್ತೆ ಮುನ್ನೆಲೆಗೆ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ – ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಜಾಮಿಯಾ ಮಸೀದಿಯ (Jamia Mosque) ವಿವಾದ ಹಲವು ವರ್ಷಗಳಿಂದ‌ ಕೇಳಿ ಬರುತ್ತಿದೆ. ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕೆಡವಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಮತ್ತೆ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಮಾಡಬೇಕೆಂದು ಹಲವು ವರ್ಷಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಹನುಮಂತ ಭಕ್ತರು ಪ್ರತಿಭಟನೆ ಹಾಗೂ ಬೃಹತ್ ಹನುಮ ಸಂಕೀರ್ತನಾ ಯಾತ್ರೆಯ ಮೂಲಕ ಹೋರಾಟ ಮಾಡಿದ್ದರು. ಇದೀಗ ಭಜರಂಗ ಸೇನೆ 101 ಹನುಮ ಭಕ್ತರ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.

    ಇಷ್ಟು ದಿನಗಳ ಕಾಲ ಪ್ರತಿಭಟನೆಗಳ ಮೂಲಕ‌ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಾರಂಪರಿಕ ಕಟ್ಟದಲ್ಲಿ ಮದರಸವನ್ನು ನಡೆಸಲಾಗುತ್ತಿದೆ. ಅಲ್ಲದೇ ಜಾಮಿಯಾ ಒಂದು ಮಸೀದಿಯಲ್ಲ. ಇದು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ. ಟಿಪ್ಪು ಸುಲ್ತಾನ್ ದೇವಸ್ಥಾನ ಕೆಡವಿ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇದು ದೇವಸ್ಥಾನ ಎನ್ನಲು ಇಲ್ಲಿನ ಗೋಡೆಗಳಲ್ಲಿ ಇರುವ ಹಿಂದೂ ದೇವಸ್ಥಾನ ಕಲ್ಲುಗಳು, ಕೆತ್ತನೆಗಳು. ಅಲ್ಲದೇ ಮಸೀದಿಯ ಒಳ ಭಾಗದಲ್ಲಿಯೇ ಹಿಂದೂ ದೇವಸ್ಥಾನದ ಕಲ್ಯಾಣಿ ಹಾಗೂ ಗೋಪುರದಲ್ಲಿ ಕಳಶ ಇದೆ. ಇವುಗಳು ಇದು ಮಸೀದಿಯಲ್ಲ ಮಂದಿರ ಎಂದು ನಿರೂಪಿಸುತ್ತವೆ. ಹೀಗಾಗಿ ಜಾಮಿಯಾ ಮಸೀದಿಯ ಜಾಗದಲ್ಲಿ ಮೊದಲು ಇದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಸ್ಥಾಪನೆಗೆ ಸರ್ವೇ ನಡೆಸಿ ಅವಕಾಶ ಕಲ್ಪಿಸಿಕೊಡಬೇಕೆಂದು ಭಜರಂಗ ಸೇನೆ ಹೈಕೋರ್ಟ್‌ಗೆ ದಾವೆ ಹೂಡಿದೆ. ಇದನ್ನೂ ಓದಿ: ಪ್ರಸಿದ್ಧ ವಿಭೂತಿ ಫಾಲ್ಸ್‌ಗೆ ಪ್ರವಾಸಿಗರಿಗೆ ನಿರ್ಬಂಧ

    ಕೇಸ್‌ನ್ನು ಹೈಕೋರ್ಟ್ ಫೈಲ್ ಮಾಡಿಕೊಂಡಿದೆ. ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಂಡ್ಯ ಡಿಸಿ, ವಕ್ಫ್ ಹಾಗೂ ಧಾರ್ಮಿಕ ದತ್ತಿ ಇಲಾಖೆಗಳಿಗೆ ಕೋರ್ಟ್ ನೋಟೀಸ್ ನೀಡಿದೆ. ಈ ಕೇಸ್‌ ಸಂಬಂಧ ಮೊದಲ ವಾದ-ಪ್ರತಿವಾದಗಳು ಜು.11 (ನಾಳೆ) ರಂದು ನಡೆಯಲಿದೆ. ಅಂದು ನೋಟಿಸ್ ನೀಡಿರುವ ಎಲ್ಲಾ ಇಲಾಖೆಯ ಮುಖ್ಯಸ್ಥರು ಕೋರ್ಟ್‌ಗೆ ಬರುವಂತೆ ನ್ಯಾಯಾಧೀಶರು ಕೋರಿದ್ದಾರೆ.

    ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಸಂಬಂಧ ಇಷ್ಟು ದಿನಗಳ ಕಾಲ ಪ್ರತಿಭಟನೆ ಮೂಲಕ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳು ಇದೀಗ ನ್ಯಾಯಾಲಯದ ಮೊರೆ ಹೋಗಿವೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್; ಕಾಂಗ್ರೆಸ್‌ ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ!

  • ಮಂಡ್ಯ ಗೆಲ್ಲಲು ಬಿಜೆಪಿಯಿಂದ ಹಿಂದುತ್ವದ ಅಜೆಂಡಾ

    ಮಂಡ್ಯ ಗೆಲ್ಲಲು ಬಿಜೆಪಿಯಿಂದ ಹಿಂದುತ್ವದ ಅಜೆಂಡಾ

    ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ (Vidhanasabha Election) ಯಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಅಧಿಕ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕೆಂದು ಪ್ಲಾನ್ ಹಾಕಿಕೊಂಡಿರುವ ಬಿಜೆಪಿ (BJP) ಮಂಡ್ಯ ಗೆಲ್ಲಲು ಹಿಂದುತ್ವದ ಅಜೆಂಡಾ ಹಿಡಿದು ಹೊರಟಿದೆ. ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮೂಲಕ ಚುನಾವಣೆಯ ರಂಗು ಹೆಚ್ಚಿಸಲು ಮುಂದಾಗಿದೆ.

    ಹೌದು. ಇಷ್ಟು ದಿನಗಳ ಕಾಲ ಜಾಮಿಯಾ ಮಸೀದಿಯಲ್ಲ ಅದು ಹನುಮನ ಮಂದಿರ ಎಂದು ಹಿಂದೂಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದವು. ಈ ವೇಳೆ ರಾಜ್ಯ ಬಿಜೆಪಿ ಈ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿತ್ತು. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರು ಮಂಡ್ಯದ ಎಲ್ಲಾ ಬಿಜೆಪಿ ಕಾರ್ಯಕ್ರಮಗಳಲ್ಲೂ ಜಾಮಿಯಾ ಮಸೀದಿಯ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ (Sacchidananda) ಪರ ಇಂಡುವಾಳುನಲ್ಲಿ ನಡೆದ ಸಭೆಯಲ್ಲಿ ಜಾಮಿಯಾ ಮಸೀದಿ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ರಂಗನಾಥಸ್ವಾಮಿ ಹಾಗೂ ಆಂಜನೇಯಸ್ವಾಮಿಯ ಕಾಲ ಬರುತ್ತಿದೆ. ಇದನ್ನೂ ಓದಿ: ಕಳೆದ‌ ಬಾರಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತ್ತಾ?

    ಜಾಮಿಯಾ ಮಸೀದಿ ಅದು ಹನುಮಂತನ ಮಂದಿರ, ಇಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕಟ್ಟುವುದು ನಮ್ಮ ಕಮಿಟ್ಮೆಂಟ್ ಆಗಿದೆ. ಮುಸ್ಲಿಮರಿಗೆ ನಾವೇನು ಬರೆದು ಕೊಟ್ಟಿಲ್ಲ ಮಸೀದಿ ಮಾಡಿಕೊಳ್ಳಿ ಅಂತಾ. ನಮ್ಮದನ್ನ ಕಿತ್ತುಕೊಂಡಿರುವುದನ್ನು ನಮಗೆ ಕೊಡಲೇ ಬೇಕು. ನಿಮಗೆ ಒಂದಕ್ಕೆ ಎರಡು ಮಸೀದಿಯನ್ನು ಕಟ್ಟಿಕೊಡುತ್ತೇವೆ. ನಮ್ಮ ಆಂಜನೇಯಸ್ವಾಮಿ ದೇವಸ್ಥಾನದ ತಂಟೆಗೆ ಯಾರೂ ಬರಬೇಡಿ ಎಂದು ಹೇಳುವ ಮೂಲಕ ಸಿ.ಟಿ.ರವಿ ಚುನಾವಣೆಯಲ್ಲಿ ಮಂದಿರ ಮತ್ತು ಮಸೀದಿ ಫೈಟ್‍ನ್ನು ಶುರು ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಾಮಿಯಾದಲ್ಲಿನ ಅಕ್ರಮ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

    ಜಾಮಿಯಾದಲ್ಲಿನ ಅಕ್ರಮ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ ಗಡುವು

    ಮಂಡ್ಯ: ಸಾಕಷ್ಟು ವಿವಾದ ಸೃಷ್ಟಿಸಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿ (Jamia Masjid) ವಿವಾದ ಇದೀಗ ಮತ್ತೆ ಭುಗಿಲೆದ್ದಿದೆ. ಜಾಮಿಯಾ ಮಸೀದಿಯ ಒಳಭಾಗದಲ್ಲಿ ನಡೆಯುತ್ತಿರುವ ಮದರಸಾ ತೆರವಿಗೆ ಹಿಂದೂ ಜಾಗರಣ ವೇದಿಕೆ (Hindu Jagarana Vedike) ಮಂಡ್ಯ ಜಿಲ್ಲಾಡಳಿತಕ್ಕೆ ಗಡುವು ನೀಡಿದೆ.

    ಐತಿಹಾಸಿಕ ಸ್ಥಳವಾಗಿರುವ ಜಾಮಿಯಾ ಮಸೀದಿ ಅಲ್ಲ, ಅದು ಮಂದಿರ ಎಂದು ಅತ್ತ ಬಜರಂಗಸೇನೆ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನು ಹೋರಾಟವನ್ನು ಆರಂಭಿಸಿದೆ. ಇತ್ತ ಹಿಂದೂ ಜಾಗರಣ ವೇದಿಕೆ ಮಸೀದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದರಸಾ ತೆರವಿಗೆ ಹೋರಾಟವನ್ನು ಆರಂಭಿಸಿದೆ.

    1934 ರಲ್ಲಿ ಜಾಮಿಯಾ ಮಸೀದಿ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಸೇರಿದ್ದು, ಈ ಕಟ್ಟಡದಲ್ಲಿ ಮದರಸಾದಂತಹ ಚಟುವಟಿಕೆಗಳನ್ನು ನಡೆಸಲು ಅವಕಾಶವಿಲ್ಲ. ಹೀಗಿದ್ದರೂ ಕೂಡಾ ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ನಡೆಸಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಹಿಂದೂಪರ ಸಂಘಟನೆಗಳು ಅಕ್ರಮ ಮದರಸಾ ತೆರವು ಮಾಡಬೇಕೆಂದು ಆಗ್ರಹ ಮಾಡುತ್ತಿವೆ. ಇಷ್ಟಾದರೂ ಕೂಡಾ ಕ್ರಮ ಕೈಗೊಳ್ಳದ ಹಿನ್ನೆಲೆ ಹಿಂದೂ ಜಾಗರಣಾ ವೇದಿಕೆ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಗಡುವು ನೀಡಿದೆ. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿದ ಬಿಜೆಪಿ – ಸಭಾಪತಿ ಸ್ಥಾನಕ್ಕೆ ಹೊರಟ್ಟಿ ನಾಮಪತ್ರ ಸಲ್ಲಿಕೆ

    ಜಾಮಿಯಾ ಮಸೀದಿಯಲ್ಲಿ ನಡೆಯುತ್ತಿರುವ ಅಕ್ರಮ ಮದರಸಾವನ್ನು 10 ದಿನಗಳ ಒಳಗೆ ತೆರವು ಮಾಡಬೇಕು. ಇಲ್ಲವಾದಲ್ಲಿ ನಮಗೂ ಪ್ರತಿ ಶನಿವಾರ ಹನುಮಾನ್ ಚಾಲೀಸ ಹಾಗೂ ಭಜನೆಗೆ ಅವಕಾಶ ನೀಡಬೇಕು. ಇವೆರಡೂ ಆಗಲಿಲ್ಲ ಎಂದರೆ ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆ ಎದುರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಆರೋಪ – ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ FIR

    ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಆರೋಪ – ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ FIR

    ಮಂಡ್ಯ: ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಸೇರಿದಂತೆ 7 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

    ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿಯ (Jamia Masjid) ಹೋರಾಟ ಇದೀಗ ಮತ್ತೊಂದು ಆಯಾಮವನ್ನು ಪಡೆದುಕೊಂಡಿದೆ. ಇದುವರೆಗೆ ಜಾಮಿಯಾ ಮಸೀದಿ ವಿರುದ್ಧ ಹೋರಾಟ ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರು ಇದೀಗ ಪೊಲೀಸರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಕೇಸರಿ ರಣಕಹಳೆ- ಜಾಮಿಯಾ ಮಸೀದಿ ಸ್ಥಳದಲ್ಲೇ ಹನುಮ ದೇಗುಲಕ್ಕೆ ಸಂಕಲ್ಪ

    ಕಳೆದ ಭಾನುವಾರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಜಾಮಿಯಾ ಮಸೀದಿ ಅಲ್ಲ ಮಂದಿರ ಎಂದು ಸಾವಿರಾರು ಹಿಂದೂ ಕಾರ್ಯಕರ್ತರು ಸಂಕೀರ್ತನಾ ಯಾತ್ರೆಯ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ರು.. ನಿಮಿಷಾಂಭ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ನಡೆದ ಸಂಕೀರ್ತನಾ ಯಾತ್ರೆ ಮೆರವಣಿಗೆಯ ವೇಳೆ ಗಂಜಾಂ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತನೋರ್ವ ಬಾಳೆದಿಂಡನ್ನು ಅನ್ಯಕೋಮಿನವರ ಮನೆಯ ಮೇಲೆ ಎಸೆದಿದ್ದ. ಇದು ಈಗ ವಿವಾದಕ್ಕೆ ಕಾರಣವಾಗಿದೆ.

    ಪಾಂಡವಪುರ ಮೂಲದ ಶಶಾಂಕ್ ಎಂಬಾತ ಬಾಳೆದಿಂಡನ್ನು ಎಸೆದಿದ್ದು, ಸಿಸಿಟಿವಿ ಆಧರಿಸಿ ಶ್ರೀರಂಗಪಟ್ಟಣ ಪೊಲೀಸರು ಶಶಾಂಕ್‌ನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಪೊಲೀಸರು ಶಶಾಂಕ್‌ಗೆ 53 ಮುಸ್ಲಿಂ ರಾಷ್ಟ್ರಗಳಿವೆ.. ನಿನ್ನ ರುಂಡ-ಮುಂಡ ಕತ್ತರಿಸುತ್ತಾರೆ ಎಂದು ಬೆದರಿಸಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಹೀಗೆ ಬೆದರಿಕೆ ಹಾಕಿರುವ ಪೊಲೀಸ್‌ನನ್ನು ಸಸ್ಪೆಂಡ್ ಮಾಡುವುದರ ಜೊತೆಗೆ ಆತನ ಮೇಲೆ ಎಫ್‌ಐಆರ್ ದಾಖಲು ಮಾಡಬೇಕೆಂದು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂಭಾಗ ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಹೆಡ್ ಕಾನ್ಸ್‌ಟೇಬಲ್ ಮನೆಗೆ ಕನ್ನ

    ಪೊಲೀಸರ ವಿರುದ್ಧ ಜಾಮಿಯಾ ಮಸೀದಿ ಎದುರು ರಾತ್ರಿ ಇಡೀ ಪೆಂಡಾಲ್ ಹಾಕಿಕೊಂಡು ಹಿಂದೂ ಕಾರ್ಯಕರ್ತರು ಪ್ರತಿಭಟಿಸಿದರು. ಜೊತೆಗೆ ಜಾಮಿಯಾ ಮಸೀದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಪ್ರತಿಭಟನಾನಿರತ ಕಾರ್ಯಕರ್ತರನ್ನು ಮನವೊಲಿಸುವ ಕೆಲಸಕ್ಕೆ ಎಸ್ಪಿ ಯತೀಶ್ ಮುಂದಾದ್ರು. ಆದ್ರೆ ಹಿಂದೂ ಕಾರ್ಯಕರ್ತರು ಬೆದರಿಕೆ ಹಾಕಿದ ಪೊಲೀಸ್‌ನನ್ನು ಸಸ್ಪೆಂಡ್ ಮಾಡಿ ಆತನ ಮೇಲೆ ಎಫ್‌ಐಆರ್ ದಾಖಲು ಮಾಡುವವರೆಗೆ ನಾವು ಪ್ರತಿಭಟನೆ ಕೈ ಬಿಡಲ್ಲ ಎಂದು ಪಟ್ಟು ಹಿಡಿದು ಮಳೆಯಲ್ಲೇ ಪ್ರತಿಭಟನೆ ಮುಂದುವರೆಸಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ ಸರ್ಕಲ್ ಇನ್‌ಸ್ಪೆಕ್ಟರ್‌ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಿಂದೂ ಕಾರ್ಯಕರ್ತರ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ. ದೂರು ದಾಖಲಾದ ಹಿನ್ನೆಲೆ ಹಿಂದೂ ಸಂಘಟನೆಗಳು ಪ್ರತಿಭಟನೆ ಕೈ ಬಿಟ್ಟಿವೆ. ಇದನ್ನೂ ಓದಿ: ಮಳೆ ಕಾರಣ ಪಂಚರತ್ನ ರಥಯಾತ್ರೆ 4 ದಿನ ಮುಂದೂಡಿಕೆ – ಹೆಚ್‌ಡಿಕೆ

    Live Tv
    [brid partner=56869869 player=32851 video=960834 autoplay=true]

  • ಶ್ರೀರಂಗಪಟ್ಟಣದಲ್ಲಿ ಕೇಸರಿ ರಣಕಹಳೆ- ಜಾಮಿಯಾ ಮಸೀದಿ ಸ್ಥಳದಲ್ಲೇ ಹನುಮ ದೇಗುಲಕ್ಕೆ ಸಂಕಲ್ಪ

    ಶ್ರೀರಂಗಪಟ್ಟಣದಲ್ಲಿ ಕೇಸರಿ ರಣಕಹಳೆ- ಜಾಮಿಯಾ ಮಸೀದಿ ಸ್ಥಳದಲ್ಲೇ ಹನುಮ ದೇಗುಲಕ್ಕೆ ಸಂಕಲ್ಪ

    ಮಂಡ್ಯ: ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿ (Jamia Masjid) ಬಳಿ ಇವತ್ತು ಕೇಸರಿ ಕಹಳೆ ಮೊಳಗಿತ್ತು. ಜಾಮಿಯಾ ಮಸೀದಿ ಸ್ಥಳದಲ್ಲೇ ಮೂಡಲಬಾಗಿಲು ಆಂಜನೇಯ ದೇಗುಲ (Anjaneya Temple) ಪ್ರತಿಷ್ಠಾಪನೆಗೆ ಹಕ್ಕೊತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಹನುಮ ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿತ್ತು. ಯಾತ್ರೆಯಲ್ಲಿ ಸಾವಿರಾರು ಹನುಮ ಮಾಲಾಧಾರಿಗಳು `ಜೈ ಶ್ರೀರಾಮ್.. ಜೈ ಹನುಮಾನ್’ ಘೋಷಣೆ ಮೊಳಗಿಸಿದರು.

    ನಿಮಿಷಾಂಭ ದೇಗುಲ, ಗಂಜಾಂ ಬೇಸಿಗೆ ಅರಮನೆ, ಶ್ರೀರಂಗಪಟ್ಟಣ ಬಸ್ ನಿಲ್ದಾಣ, ಜಾಮೀಯಾ ಮಸೀದಿ, ಪೇಟೆ ಬೀದಿ ಮೂಲಕ ರಂಗನಾಥ ಸ್ವಾಮಿ ದೇಗುಲ ಆವರಣದಲ್ಲಿ ಯಾತ್ರೆ ಅಂತ್ಯವಾಯಿತು. ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಾರಿಗಳ ಜೊತೆ ಆಂಜನೇಯ, ರಾಮ ವೇಷಧಾರಿಗಳೂ ಪ್ರತ್ಯಕ್ಷರಾದರು. ಜಾಮಿಯಾ ಮಸೀದಿ ಬಳಿ ಬಂದಾಗ ಹಿಂದೂ ಕಾರ್ಯಕರ್ತರು ನುಗ್ಗಲು ಯತ್ನಿಸಿದರು. ಇದು ಜಾಮಿಯಾ ಮಸೀದಿ ಅಲ್ಲ; ಮೂಡಲಬಾಗಿಲು ಆಂಜನೇಯನ ದೇಗುಲ. ಹನುಮನ ಪಾದದ ಮೇಲಾಣೆ, ಮಂದಿರವಿಲ್ಲೇ ಕಟ್ಟುವೆವು, ಅಯೋಧ್ಯೆಯಲ್ಲಿ ರಾಮ ಮಂದಿರ. ಇಲ್ಲಿ ಹನುಮ ಮಂದಿರ ಎಂದು ಮುಗಿಲು ಮುಟ್ಟುವಂತೆ ಘೋಷಣೆ ಮೊಳಗಿಸಿದರು.

    ಸಾವಿರಾರು ಹನುಮ ಭಕ್ತರು ಜಮಾಯಿಸಿದ್ದರಿಂದ ಜಾಮಿಯ ಮಸೀದಿ ಸಮೀಪ ಇಡೀ ದಿನ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ವಿಷಮ ಆಗಲು 1,500ಕ್ಕೂ ಹೆಚ್ಚು ಪೊಲೀಸರು ಅರೆ ಕ್ಷಣವೂ ಅವಕಾಶ ಕೊಡಲಿಲ್ಲ. ಡ್ರೋಣ್ ಕ್ಯಾಮೆರಾ, ಸಿಸಿಟಿವಿಗಳ ಮೂಲಕವೂ ನಿಗಾ ಇಟ್ಟಿದ್ದರು. ಆದರೂ ಹನುಮ ಮಾಲಾಧಾರಿಗಳು ಪೊಲೀಸರ ಮಧ್ಯೆ ತಳ್ಳಾಟ-ನೂಕಾಟ ಸಂಭವಿಸಿತ್ತು. ಪ್ರತಿ ಕಡೆಯೂ ಹಂತದಲ್ಲೂ ಸಾರ್ವಕರ್ ಸೇರಿದಂತೆ ಹಿಂದೂ ಹೋರಾಟಗಾರರ ಭಾವಚಿತ್ರ ರಾರಾಜಿಸಿತು. ಇದನ್ನೂ ಓದಿ: ಮೊಬೈಲ್‌ನಲ್ಲೇ ಕ್ರೆಡಿಟ್ ಕಾರ್ಡ್ ಮಾಡಿಕೊಡೋದಾಗಿ ನಂಬಿಸಿ 1.13 ಲಕ್ಷ ಪಂಗನಾಮ

    ಸಂಜೆ ಹೊತ್ತಿಗೆ ಸಂಕೀರ್ತನಾ ಯಾತ್ರೆ ರಂಗನಾಥ ದೇಗುಲದ ಬಳಿ ಅಂತ್ಯವಾಯಿತು. ಜಾಮಿಯಾ ಮಸೀದಿ ಇರುವ ಸ್ಥಳದಲ್ಲೇ ಮೂಡಲಬಾಗಿಲ ಆಂಜನೇಯನ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡ್ತೇವೆ ಅಂತ ಸಾವಿರಾರು ಹನುಮ ಮಾಲಾಧಾರಿಗಳು, ಹಿಂದೂ ಕಾರ್ಯಕರ್ತರು ಹನುಮಂತನ ಹೆಸರಿನಲ್ಲಿ ಸಂಕಲ್ಪ ಮಾಡಿದ್ದಾರೆ. ಇನ್ನು, ರಾಜಕೀಯಕ್ಕಾಗಿ ಬಿಜೆಪಿ ಬೆಂಬಲ ಕೊಟ್ಟಿಲ್ಲ. ಹಿಂದುತ್ವಕ್ಕಾಗಿ ಬಿಜೆಪಿ ಸಂಕೀರ್ತನಾ ಯಾತ್ರೆಗೆ ಬೆಂಬಲ ನೀಡಿದೆ. ಟಿಪ್ಪು, ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದಾನೆ. ಇದನ್ನು ವಿರೋಧಿಸಿ ಸಂಕೀರ್ತನಾ ಯಾತ್ರೆ ನಡೆಯುತ್ತಿದೆ. ಮಂದಿರ ಆಗುವವರೆಗೆ ನಾವು ಈ ರೀತಿ ಹೋರಾಟ ಮಾಡುತ್ತೇವೆ ಅಂತ ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ ಮತ್ತು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಹೇಳಿದರು. ಇದನ್ನೂ ಓದಿ: ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಜನರ ಮೇಲೆ ಹರಿದ ಟ್ರಕ್‌ – 6 ಮಂದಿ ದುರ್ಮರಣ, 10 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಮಂಡ್ಯದಲ್ಲಿ ಇಂದಿನಿಂದ ಸಂಕೀರ್ತನಾ ಯಾತ್ರೆ- ಆಂಜನೇಯ ದೇಗುಲ ಪುನರ್ ಸ್ಥಾಪನೆಗೆ ಆಗ್ರಹ

    ಮಂಡ್ಯದಲ್ಲಿ ಇಂದಿನಿಂದ ಸಂಕೀರ್ತನಾ ಯಾತ್ರೆ- ಆಂಜನೇಯ ದೇಗುಲ ಪುನರ್ ಸ್ಥಾಪನೆಗೆ ಆಗ್ರಹ

    ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Jamia Masjid) ವಿವಾದ ಸದ್ಯ ತಣ್ಣಗೆ ಆಗುವಂತೆ ಕಾಣುತ್ತಿಲ್ಲ. ಪ್ರತಿ ವರ್ಷದ ರೀತಿ ಈ ಬಾರಿಯೂ ಸಹ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ (AanjaneyaSwami Temple) ಪುನರ್ ಪ್ರತಿಷ್ಠಾಪನೆಗೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆಯಿಂದ ಇಂದು ಬೃಹತ್ ಸಂಕೀರ್ತನಾ ಯಾತ್ರೆ ಜರುಗಲಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಸದ್ಯ ಹೈಕೋರ್ಟ್ ಅಂಗಳದಲ್ಲಿ ಇದ್ರಯ ಸಹ ಪ್ರತಿ ವರ್ಷದ ರೀತಿ ಹಿಂದೂ ಜಾಗರಣ ವೇದಿಕೆ ಭಾನುವಾರ ಹನುಮ ಮಾಲಧಾರಿಗಳ ಬೃಹತ್ ಸಂಕೀರ್ತನಾ ಯಾತ್ರೆ ನಡೆಸಲು ಸಿದ್ಧತೆಯನ್ನು ಮಾಡಿಕೊಂಡಿದೆ. ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಹೊಡೆದು ಟಿಪ್ಪು ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಮತ್ತೆ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಮರು ಪ್ರತಿಷ್ಠಪನೆಯಾಗಬೇಕೆಂದು ಹಲವು ವರ್ಷಗಳಿಂದ ಹಿಂದೂ ಜಾಗರಣ ವೇದಿಕೆ ಈ ಸಂಕೀರ್ತನಾ ಯಾತ್ರೆಯನ್ನೂ ಮಾಡಿಕೊಂಡು ಬಂದಿದೆ. ಅದೇ ರೀತಿ ಭಾನುವಾರ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆಯನ್ನು ನಡೆಸಲು ನಿರ್ಧಾರ ಮಾಡಿದ್ದು, ಈ ಕುರಿತು ಸಿದ್ಧತೆಗಳು ಭರ್ಜರಿಯಾಗಿ ಜರುಗುತ್ತಿವೆ. ಇಡೀ ಶ್ರೀರಂಗಪಟ್ಟಣ ಕೇಸರಿ ಮಯದಿಂದ ಕಂಗೊಳಿಸುತ್ತಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ವೇದ‌ ಟೀಸರ್ ಬಿಡುಗಡೆ – ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು

    ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಿಂದ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಈ ಸಂಕೀರ್ತನಾ ಯಾತ್ರೆಯ ಮೆರವಣಿಗೆ ಜರುಗಲಿದೆ. ಪ್ರತಿ ವರ್ಷ ಈ ಯಾತ್ರೆಯಲ್ಲಿ ಮೂರರಿಂದ ಐದು ಸಾವಿರ ಮಂದಿ ಹನುಮ ಮಾಲಾಧಾರಿಗಳು ಭಾಗಿಯಾಗುತ್ತಿದ್ದರು. ಆದರೆ ಈ ಬಾರಿ ಒಂದು ಲಕ್ಷ ಮಂದಿ ಹನುಮ ಮಾಲಾಧಾರಿಗಳನ್ನು ಸೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಸಂಕೀರ್ತನಾ ಯಾತ್ರೆಯನ್ನು ಹಿಂದೂ ಜಾಗರಣ ವೇದಿಕೆ ಮಾಡುತ್ತಿದ್ರು ಸಹ, ಹಿಂದೂ ಸಂಘಟನೆಗಳಿಗೆ ಬಲ ತುಂಬಲು ಬಿಜೆಪಿ ಮುಂದಾಗಿದೆ. ಹೀಗಾಗಿ ಮಂಡ್ಯದ ಪ್ರತಿ ಕ್ಷೇತ್ರದಿಂದ 8 ರಿಂದ 10 ಸಾವಿರ ಮಂದಿ ಹನುಮ ಮಾಲಾಧಾರಿಗಳನ್ನು ಕರೆತರಲು ನಿರ್ಧಾರ ಮಾಡಿದೆ. ಮಂಡ್ಯ ಮಾತ್ರವಲ್ಲದೇ ಅಕ್ಕ-ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಮಂದಿ ಹನುಮ ಮಾಲಾಧಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.

    ನಾಳೆ ಶ್ರೀರಂಗಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ ಇರುವ ಕಾರಣ ಇಡೀ ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮಂಡ್ಯ ಎಸ್ಪಿ ಯತೀಶ್ ನೇತೃತ್ವದಲ್ಲಿ 7 ಮಂದಿ ಡಿವೈಎಸ್‍ಪಿ, 15 ಮಂದಿ ಸಿಪಿಐ, ,9 ಡಿಎಆರ್ ಹಾಗೂ 6 ಕೆಎಸ್‍ಆರ್ ಪಿ ತುಕಡಿ ಸೇರಿದಂತೆ 1500 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದಲ್ಲದೇ ಎರಡು ಡ್ರೋಣ್ ಕ್ಯಾಮೆರಾ, 20 ಮೂವಿಂಗ್ ಕ್ಯಾಮೆರಾ, ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಲಾಗಿದೆ.

    ಒಟ್ಟಾರೆ ಜಾಮಿಯಾ ಮಸೀದಿಯ ವಿವಾದ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಂಕೀರ್ತನಾ ಯಾತ್ರೆಯ ಮೂಲಕ ಹಿಂದೂ ಸಂಘಟನೆಗಳು ಜಾಮಿಯಾ ಮಸೀದಿಯಲ್ಲಾ ಮಂದಿರ ಎಂದು ಸಾರಲು ಹೊರಟಿದ್ದು, ನಾಳೆ ಒಂದು ಲಕ್ಷ ಮಂದಿ ಹನುಮ ಭಕ್ತರ ಈ ಸಂಕೀರ್ತನಾ ಯಾತ್ರೆ ಹೇಗೆ ಇರುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಧಗ ಧಗನೆ ಹೊತ್ತಿ ಉರಿದ ಜಮ್ಮು-ಕಾಶ್ಮೀರದ ಜಾಮಿಯಾ ಮಸೀದಿ

    ಧಗ ಧಗನೆ ಹೊತ್ತಿ ಉರಿದ ಜಮ್ಮು-ಕಾಶ್ಮೀರದ ಜಾಮಿಯಾ ಮಸೀದಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ದ್ರಾಸ್‌ನಲ್ಲಿರುವ ಜಾಮಿಯಾ ಮಸೀದಿಯಲ್ಲಿ (Jamia Masjid) ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಮಸೀದಿ ಅಪಾರ ಹಾನಿಗೊಳಗಾಗಿದೆ.

    ಭಾರತೀಯ ಸೇನೆ (Indian Army), ಪೊಲೀಸ್ (Police), ಅಗ್ನಿಶಾಮಕ ಹಾಗೂ ತುರ್ತು ವಿಭಾಗದ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಮೂಲಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಂಬಳ ನೀಡದಿದ್ದರೆ 108 ಅಂಬುಲೆನ್ಸ್ ಸೇವೆ ಸ್ಥಗಿತ – GVK ಹೊಣೆ ಎಂದ ಚಾಲಕರು

    ಈ ಕುರಿತು ಮಾಹಿತಿ ನೀಡಿರುವ ಜಾಮಿಯಾ ಮಸೀದಿಯ (Jamia Masjid) ಉಸ್ತುವಾರಿ, ದ್ರಾಸ್‌ನ ಅತ್ಯಂತ ಹಳೆಯ ಮಸೀದಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ದುರದೃಷ್ಟಕರ ಸಂಗತಿ. ದ್ರಾಸ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಆದರೆ ಇಲ್ಲಿ ಒಂದೇ ಒಂದು ಅಗ್ನಿಶಾಮಕ ಸೇವೆಯೂ ಇಲ್ಲ. ಇಂತಹ ಘಟನೆಗಳು ಅನೇಕ ಬಾರಿ ನಡೆದಿದ್ದರೂ ಕೇಂದ್ರಾಡಳಿತ ಪ್ರದೇಶ ಇನ್ನೂ ಬುದ್ದಿ ಕಲಿತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ವಿಚಾರಣೆಗೆ ಹೆದರಿ 3 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    Live Tv
    [brid partner=56869869 player=32851 video=960834 autoplay=true]

  • ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಅಂಗಳಕ್ಕೆ

    ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಅಂಗಳಕ್ಕೆ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Jamia Masjid) ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ವಿವಾದ ಹೈಕೋರ್ಟ್ (Highcourt) ಅಂಗಳದಲ್ಲಿ ಮಂದಿರವೋ ಅಥವಾ ಮಸೀದಿಯೋ ಇತ್ಯರ್ಥಕ್ಕೆ ಕೊನೆಯ ಸಿದ್ಧತೆಗಳು ನಡೆದಿದೆ. ಇನ್ನೆರಡು ದಿನಗಳಲ್ಲಿ ಹೈಕೊರ್ಟ್‍ನಲ್ಲಿ 108 ಹನುಮ ಭಕ್ತರು ದಾವೆ ಹೂಡಲಿದ್ದಾರೆ.

    karnataka highcourt

    5 ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಜಾಮಿಯಾ ಮಸೀದಿಯಲ್ಲ ಹನುಮ ಮಂದಿರ ಎಂದು ಹೋರಾಟ ನಡೆಸಿತ್ತು. ಮಸೀದಿ ಜಾಗ ಹಿಂದೂಗಳಿಗೆ ಮರಳಿ ನೀಡುವಂತೆ ಸರ್ಕಾರಕ್ಕೆ ಗಡುವು ನೀಡಿದ್ದವು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಕೋರ್ಟ್ ಮೊರೆ ಹೋಗಲಾಗಿದೆ. ಅಯೋಧ್ಯೆ ಶ್ರೀರಾಮ ಮಂದಿರ ರೀತಿ ಹನುಮ ಮಂದಿರಕ್ಕಾಗಿ ನ್ಯಾಯಾಂಗ ಹೋರಾಟ ನಡೆಸಲು ಕೊನೆಯ ಹಂತದ ತಯಾರಿಗಳು ಸಹ ಇದೀಗ ಮುಕ್ತಾಯಗೊಂಡಿವೆ. 108 ಹನುಮ ಭಕ್ತರಿಂದ ಹೈಕೋರ್ಟ್‍ಗೆ ದಾವೆ ಹೂಡಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    ವಕೀಲ ರವಿಶಂಕರ್ ಮೂಲಕ ದಾವೆ ಹೂಡಲು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ದಾಖಲಾತಿಗಳನ್ನು ಭಜರಂಗ ಸೇನೆ ಸಿದ್ಧಪಡಿಸಿಕೊಂಡಿದೆ. ದಾಖಲೆ ಸಮೇತ ಕೋರ್ಟ್ ಮೆಟ್ಟಿಲೇರಲು ಭಜರಂಗಸೇನೆ (Bhajarangdal) ರಾಜ್ಯಾಧ್ಯಕ್ಷ ಮಂಜುನಾಥ್ ಸಿದ್ಧತೆ ಮಾಡಿಕೊಂಡಿದ್ದಾರೆ. ಹಿಂದೂಗಳ ಮಂಗಳಕರ ಸಂಖ್ಯೆ ಎಂಬ ಕಾರಣಕ್ಕೆ 108 ಪಿಐಎಲ್ ಸಲ್ಲಿಕೆ ಮಾಡಲಾಗುತ್ತಿದೆ. ಇದರಲ್ಲಿ ಹನುಮಂತನನ್ನೇ ಪ್ರತಿವಾದಿ ಮಾಡಿ ಮಂದಿರಕ್ಕಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ – 20ಕ್ಕೂ ಅಧಿಕ ಹೋರಾಟಗಾರರು ಪೊಲೀಸರ ವಶಕ್ಕೆ

    ಮೈಸೂರು ಗೆಜೆಟಿಯರ್, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಮೂರ್ತಿ ಕೆತ್ತನೆ, ಕಂಬಗಳ ಮೇಲಿನ ದೇವರ ಚಿತ್ರಕಲೆ, ಕಲ್ಯಾಣಿ ಸೇರಿದಂತೆ ಕೆಲ ಬ್ರಿಟಿಷ್ ಅಧಿಕಾರಿಗಳು ಉಲ್ಲೇಖಿಸಿರುವ ದಾಖಲೆಗಳ ಸಂಗ್ರಹ ಮಾಡಲಾಗಿದೆ. ಮೂರು ದಿನಗಳ ಒಳಗಡೆ ದಾಖಲೆ ಹಾಗೂ ಸಾಕ್ಷಿಗಳ ಸಮೇತ ಹೈಕೋರ್ಟ್ ದಾವೆ ಹೂಡಲು 108 ಹನುಮ ಭಕ್ತರು ಸಿದ್ಧರಾಗಿದ್ದು, ಹನುಮ ಮಂದಿರ ಕೆಡವಿ ಟಿಪ್ಪು ಮಸೀದಿ ಕಟ್ಟಿರುವುದಾಗಿ ಆರೋಪಿಸಿ ಈ ನ್ಯಾಯಾಂಗ ಹೋರಾಟ ನಡೆಯಲಿದೆ ಎಂದು ಭಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.


    Live Tv

    [brid partner=56869869 player=32851 video=960834 autoplay=true]

  • ಆಂಜನೇಯಸ್ವಾಮಿ ದೇವಾಲಯವನ್ನು ಕೆಡವಿ ವಿಗ್ರಹವನ್ನು ಕಾವೇರಿಗೆ ಎಸೆಯಲಾಗಿತ್ತು – ಶತಮಾನದ ಹಿಂದಿನ ದಾಖಲೆ ಬಿಡುಗಡೆ

    ಆಂಜನೇಯಸ್ವಾಮಿ ದೇವಾಲಯವನ್ನು ಕೆಡವಿ ವಿಗ್ರಹವನ್ನು ಕಾವೇರಿಗೆ ಎಸೆಯಲಾಗಿತ್ತು – ಶತಮಾನದ ಹಿಂದಿನ ದಾಖಲೆ ಬಿಡುಗಡೆ

    – ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯ ವಿವಾದಕ್ಕೆ ಮತ್ತೊಂದು ಟ್ವಿಸ್ಟ್‌
    – ಆರ್ಕಿಯಾಲಜಿ ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಉಲ್ಲೇಖ
    – ದಾಖಲೆಯೊಂದಿಗೆ ಕಾನೂನು ಹೋರಾಟಕ್ಕೆ ಮುಂದಾದ ಹಿಂದೂ ಸಂಘಟನೆಗಳು

    ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ವಿವಾದಕ್ಕೆ ದಿನಕ್ಕೊಂದು ತಿರುವು ದೊರೆಯುತ್ತಿದೆ. ಮೊನ್ನೆ ಈ ವಿವಾದದ ಸಂಬಂಧ ದಶಕಗಳ ಹಿಂದಿನ ಪುಸ್ತಕವೊಂದು ಪತ್ತೆಯಾಗಿತ್ತು. ಇದೀಗ ಈ ವಿಚಾರ ಸಂಬಂಧ ಪುರಾತ್ವ ಇಲಾಖೆಗೆ ಸಂಬಂಧಿಸಿದ ದಾಖಲೆಯೊಂದು ಲಭ್ಯವಾಗಿದ್ದು ಹಿಂದೂ ಸಂಘಟನೆಗಳಿಗೆ ಪ್ರಮುಖ ಅಸ್ತ್ರ ಸಿಕ್ಕಿದಂತಾಗಿದೆ.

    ಮೊನ್ನೆಯಷ್ಟೇ ದಶಕಗಳ ಹಿಂದೆ ಬಾಲಗಣಪತಿ ಭಟ್ಟ ಎಂಬವರು ಬರೆದಿದ್ದ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ಸುಪ್ರಭಾತ ಎಂಬ ಪುಸ್ತಕ ದೊರೆತಿತ್ತು. ಈ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಕೆಡವಿ ಅಲ್ಲಿದ್ದ ವಿಗ್ರಹವನ್ನು ಕಾವೇರಿ ನದಿಗೆ ಎಸೆದು ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂದು ಉಲ್ಲೇಖವಾಗಿತ್ತು. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!

    ಈ ಪುಸ್ತಕ ದೊರೆತ ನಂತರ ಇದೀಗ ಪ್ರಧಾನಿ ಮೋದಿ ಮಂಚ್ ವಿಚಾರ ವೇದಿಕೆ ಇನ್ನೊಂದು ಅಧಿಕೃತ ದಾಖಲೆಯನ್ನು ಬಿಡುಗಡೆ ಮಾಡಿದೆ. 1912ರಲ್ಲಿ ಪ್ರಕಟವಾದ ಆರ್ಕಿಯಾಲಜಿ(ಪುರಾತತ್ತ್ವ ಶಾಸ್ತ್ರ) ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಜಾಮಿಯಾ ಮಸೀದಿ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಲಾಗಿದೆ.

    ಪುಸ್ತಕದಲ್ಲಿ ಏನಿದೆ?
    ಟಿಪ್ಪು ಸುಲ್ತಾನ್ ಮಸೀದಿ ಮತ್ತು ಮಿನಾರ್ ನಿರ್ಮಾಣದ ಉದ್ದೇಶದಿಂದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶಪಡಿಸಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇಲ್ಲಿದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ವಿಗ್ರಹವನ್ನು ಕಾವೇರಿ ನದಿಯ ಗೌರಿಘಡ ಎಂಬಲ್ಲಿ ಎಸೆಯಲಾಗಿತ್ತು. ಟಿಪ್ಪು ಸುಲ್ತಾನ್ ನಿಧನದ ನಂತರ ದಳವಾಯಿ ದೊಡ್ಡಯ್ಯ ದೇಣಿಗೆ ಸಂಗ್ರಹಿಸಿ ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಮರುಸ್ಥಾಪನೆ ಮಾಡಿದ್ದಾನೆ ಎಂಬ ಅಂಶವಿದೆ.

    ಪಠ್ಯದಿಂದ ಕೈಬಿಡಿ:
    ಈ ಪುಸ್ತಕದಿಂದ ಟಿಪ್ಪು ಸುಲ್ತಾನ್ ವಿಗ್ರಹ ಭಂಜಕ ಎಂದು ರುಜುವಾತು ಮಾಡುತ್ತದೆ. ಹೀಗಾಗಿ ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯ ಪುಸ್ತಕದ ವಿಚಾರಗಳನ್ನು ಕೈ ಬಿಡಬೇಕೆಂದು ಮೋದಿ ವಿಚಾರ ಮಂಚ್ ವೇದಿಕೆಯ ಪದಾಧಿಕಾರಿಗಳು ಈಗ ಸರ್ಕಾರವನ್ನು ಆಗ್ರಹ ಮಾಡುತ್ತಿದ್ದಾರೆ.

    ಕಾನೂನು ಹೋರಾಟ:
    ಆರ್ಕಿಯಾಲಜಿ ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಇರುವ ದಾಖಲೆಯನ್ನು ಇಟ್ಟುಕೊಂಡು ಕಾನೂನು ಹೋರಾಟ ಮಾಡಲು ಈಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದಾರೆ.

  • ಜಾಮಿಯಾ ಮಸೀದಿ ವಿವಾದಕ್ಕೆ ದಿನಕ್ಕೊಂದು ಟ್ವಿಸ್ಟ್ – ವೀಡಿಯೋ ಸತ್ಯ ಬಯಲು

    ಜಾಮಿಯಾ ಮಸೀದಿ ವಿವಾದಕ್ಕೆ ದಿನಕ್ಕೊಂದು ಟ್ವಿಸ್ಟ್ – ವೀಡಿಯೋ ಸತ್ಯ ಬಯಲು

    ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಅಲ್ಲದೇ ಈ ಮಸೀದಿಯ ವಿಚಾರದಲ್ಲಿ ಮತ್ತಷ್ಟು ತಿರುವು ತೆಗೆದುಕೊಳ್ಳುತ್ತಿದೆ.

    ಜಾಮಿಯಾ ಮಸೀದಿ ಮಂದಿರವೋ ಅಥವಾ ಮಸೀದಿಯೋ ಎಂದು ನಾವು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಆದ್ರೆ ಪುರಾತತ್ವ ಇಲಾಖೆಗೆ ಸೇರಿದ ಜಾಮಿಯಾ ಮಸೀದಿಯ ಕಟ್ಟಡದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಮದರಸವನ್ನು ನಿಲ್ಲಿಸಿಸಬೇಕೆಂದು ಹಿಂದೂಪರ ಸಂಘಟನೆಗಳು ಇದೀಗ ತೀವ್ರತರದಲ್ಲಿ ಹೋರಾಟ ಆರಂಭಿಸವೆ. ಶನಿವಾರ ಶ್ರೀರಂಗಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಈ ಅಕ್ರಮ ಮದರಸದ ವಿರುದ್ಧ ಗುಡುಗಿದರು. ಇದನ್ನೂ ಓದಿ:  ಗ್ಯಾಂಗ್ ರೇಪ್: ಅಪ್ರಾಪ್ತ ಆರೋಪಿ ಫೋಟೋ ರಿಲೀಸ್ – ಬಿಜೆಪಿ ಶಾಸಕನ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ 

    ವೀಡಿಯೋ ಟ್ವಿಸ್ಟ್
    ಶನಿವಾರ ಹಿಂದೂಪರ ಸಂಘಟನೆಗಳು ವೈರಲ್ ಮಾಡಿದ್ದ ಜಾಮಿಯಾ ಮಸೀದಿ ಒಳಭಾಗದಲ್ಲಿ ಕುಳಿತು ಇಬ್ಬರು ಹನುಮ ಭಕ್ತರು ಮಾಡಿದ್ದ ಹನುಮ ಮತ್ತು ರಾಮನ ಭಜನೆಯ ವೀಡಿಯೋ ಅಸಲಿಯತ್ತು ಸಹ ಇಂದು ಗೊತ್ತಾಗಿದೆ. ಈ ವೀಡಿಯೋವನ್ನು ಜೂನ್ 3 ರ ಸಂಜೆ 4 ಗಂಟೆಯ ವೇಳೆಯಲ್ಲಿ ಮಾಡಿರುವುದಾಗಿ ಜಾಮಿಯಾ ಮಸೀದಿ ಸಿಸಿಟಿವಿ ವೀಡಿಯೋ ಪರಿಶೀಲಿಸಿದಾಗ ತಿಳಿದುಬಂದಿದೆ.

    ಶ್ರೀರಂಗಪಟ್ಟಣದಲ್ಲಿ ಇಂದು 144 ಸೆಕ್ಷನ್ ಮುಗಿದ್ರು ಸಹ ಪಟ್ಟಣದ್ಯಾಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಜರುಗ ಬಾರದೆಂದು ಜಾಮಿಯಾ ಮಸೀದಿಗೆ ಇಂದು ಸಹ ಪ್ರವಾಸಿಗರ ನಿರ್ಬಂಧವನ್ನು ಜಿಲ್ಲಾಡಳಿತ ಏರಿದ್ದು, ಜಾಮಿಯಾ ಮಸೀದಿಯ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಸಲಾಗಿದೆ.

    ಶ್ರೀರಂಗಪಟ್ಟಣ ಚಲೋ ನಡೆಸಲು ಬಂದ ನೂರಾರು ಮಂದಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರು. ನಂತರ ಕಿರಂಗೂರು ಸರ್ಕಲ್‍ನ ಬನ್ನಿಮಂಟಪದಲ್ಲಿ ಹನುಮಾನ್ ಚಾಲಿಸ್ ಪಠಣೆ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮದರಸ ತೆರವು ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಅಧಿಕಾರಿಗಳಿಗೆ 25 ದಿನಗಳ ಗಡುವನ್ನು ನೀಡಿದ್ದಾರೆ. ಒಂದು ಕಡೆ ಜಾಮಿಯಾ ಮಸೀದಿ ವಿವಾದ ತಾರಕಕ್ಕೆ ಏರುತ್ತಿದ್ದು, ಇನ್ನೊಂದು ಕಡೆ ಹೋರಾಟದ ಸ್ವರೂಪಗಳು ತೀವ್ರತೆ ಪಡೆದುಕೊಳ್ಳುತ್ತಿದೆ.

    20 ವರ್ಷಗಳಿಂದ ಹೋರಾಟ
    ಈ ಹೋರಾಟ ನಿನ್ನೆ, ಮೊನ್ನೆಯಿಂದ ನಡೆಯುತ್ತಿರುವುದಲ್ಲ. 20 ವರ್ಷಗಳಿಂದ ಈ ಹೋರಾಟ ನಡೆಯುತ್ತಿದೆ ಎಂದು ಗೋತ್ತಾಗಿದೆ. 2004 ಜುಲೈ 1 ರಂದು ಹಿಂದೂ ಮುಖಂಡ ಗಿರೀಶ್ ಹಾಗೂ ಅವರ ಜೊತೆಯಲ್ಲಿದ್ದವರು ಮೈಸೂರಿನ ವಕೀಲ ಕೇಶವಮೂರ್ತಿ ಅವರ ಮೂಲಕ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಪುರಾತತ್ವ ಇಲಾಖೆ, ಕೇಂದ್ರ ಸರ್ಕಾರಗಳಿಗೆ ನೋಟಿಸ್ ನೀಡಿದ್ದಾರೆ.

    ನೋಟಿಸ್‍ನಲ್ಲಿ ಏನಿದೆ?
    ಜಾಮಿಯಾ ಮಸೀದಿಯಲ್ಲಿ ಅಕ್ರಮವಾಗಿ ಮದರಸ ಮಾಡಲಾಗುತ್ತಿದೆ. ಇಲ್ಲಿ ಗೋಮಾಂಸವನ್ನು ಬೇಯಿಸಿ ತಿನ್ನುತ್ತಿದ್ದಾರೆ. ಈ ಅಕ್ರಮ ಮದರಸವನ್ನು ತೆರವು ಮಾಡಬೇಕೆಂದು ಉಲ್ಲೇಖಿಸುವುದರ ಜೊತೆಗೆ, ಜಾಮಿಯಾ ಮಸೀದಿಯಲ್ಲಿರುವ ದೇವಸ್ಥಾನದ ಕುರುಹುಗಳನ್ನು ನಾಶ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕೆಂದು ನೋಟಿಸ್ ನೀಡಲಾಗಿತ್ತು. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ 

    ಈ ವೇಳೆ ಪುರಾತತ್ವ ಇಲಾಖೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಜಾಮಿಯಾ ಮಸೀದಿಯಲ್ಲಿ ನಡೆಯುತ್ತಿರುವ ಮದರಸ ತೆರವು ಮಾಡಬೇಕೆಂದು ಪತ್ರಬರೆಯಲಾಗಿತ್ತು. ಆದ್ರೆ ಸರ್ಕಾರ ಮತ್ತು ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.