Tag: James Film

  • ‘ಜೇಮ್ಸ್’ ಡೈರೆಕ್ಟರ್ ಚೇತನ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್

    ‘ಜೇಮ್ಸ್’ ಡೈರೆಕ್ಟರ್ ಚೇತನ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್

    ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಸಕ್ಸಸ್ ಬಳಿಕ ಗೋಲ್ಡನ್‌ ಸ್ಟಾರ್‌ ಗಣೇಶ್‌ (Golden Star Ganesh) ಅವರು ‘ಜೇಮ್ಸ್’ (James) ಡೈರೆಕ್ಟರ್ ಚೇತನ್ ಕುಮಾರ್ (Chethan Kumar) ನಿರ್ದೇಶನದ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಕಾನ್ 2025: ಸಿಂಧೂರ ಹಣೆಗಿಟ್ಟು ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

    ಗಣೇಶ್ ಈಗೀಗ ಸ್ಕ್ರೀಪ್ಟ್ ಆಯ್ಕೆ ಮಾಡೋದ್ರಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಗಣೇಶ್‌ಗೆ ಒಂದು ವರ್ಷದ ಹಿಂದೆಯೇ ಚೇತನ್ ಕಥೆ ಹೇಳಿದ್ದರು. ಕಥೆ ಇಷ್ಟವಾಗಿ ಸಿನಿಮಾಗೆ ಓಕೆ ಎಂದಿದ್ದರು. ಆದರೆ ನಿರ್ಮಾಣ ಸಂಸ್ಥೆ ಅಂತಿಮಗೊಂಡಿರಲಿಲ್ಲ. ಇದೀಗ ಎಲ್ಲವೂ ಅಂತಿಮವಾಗಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ.

    ಪಿನಾಕ, ಯುವರ್ಸ್ ಸಿನ್ಸಿಯರ್ಲಿ ರಾಮ್, ‘ಹನುಮಾನ್’ ಖ್ಯಾತಿಯ ನಟಿ ಅಮೃತಾ ಅಯ್ಯರ್ ಜೊತೆಗಿನ ಚಿತ್ರದ ಶೂಟಿಂಗ್‌ನಲ್ಲಿ ನಟ ತೊಡಗಿಸಿಕೊಂಡಿದ್ದಾರೆ. ಆ ನಂತರ ಚೇತನ್ ಜೊತೆ ಗಣೇಶ್ ಸಿನಿಮಾ ಮಾಡಲಿದ್ದಾರೆ. ಇತ್ತ ‘ಗಟ್ಟಿಮೇಳ’ ನಟ ರಕ್ಷ್ ಜೊತೆ ಚೇತನ್ ಬರ್ಮ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಮೊದಲ ಸಿನಿಮಾ ರಿಲೀಸ್‌ಗೂ ಮುನ್ನವೇ 2ನೇ ಪ್ರಾಜೆಕ್ಟ್ ಬಗ್ಗೆ ಯಶ್ ತಾಯಿ ಗುಡ್ ನ್ಯೂಸ್

    ಹೀಗಾಗಿ ಒಪ್ಪಿಕೊಂಡ ಚಿತ್ರಗಳು ಇಬ್ಬರೂ ಪೂರ್ಣಗೊಳಿಸಿದ್ಮೇಲೆ ಆಗಸ್ಟ್‌ನಲ್ಲಿ ಚಿತ್ರ ಸೆಟ್ಟೇರಲಿದೆ. ಗಣೇಶ್‌ಗಾಗಿ ವಿಭಿನ್ನ ಕಥೆಯನ್ನೇ ಚೇತನ್ ಬರೆದಿದ್ದಾರೆ. ಇಬ್ಬರ ಕಾಂಬಿನೇಷನ್ ಚಿತ್ರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

  • ‘ಜೇಮ್ಸ್’ ನಿರ್ದೇಶಕನ ಜೊತೆ ಚಂದನ್ ಶೆಟ್ಟಿ ಟೆಂಪಲ್ ರನ್

    ‘ಜೇಮ್ಸ್’ ನಿರ್ದೇಶಕನ ಜೊತೆ ಚಂದನ್ ಶೆಟ್ಟಿ ಟೆಂಪಲ್ ರನ್

    ಸ್ಯಾಂಡಲ್‌ವುಡ್‌ನಲ್ಲಿ ನಾಯಕ ನಟನಾಗಿ ಮಿಂಚುತ್ತಿರುವ ‘ಬಿಗ್ ಬಾಸ್’ (Bigg Boss) ಖ್ಯಾತಿಯ ಚಂದನ್ ಶೆಟ್ಟಿ (Chandan Shetty) ಇದೀಗ ‘ಜೇಮ್ಸ್’ (James) ನಿರ್ದೇಶಕ ಚೇತನ್ ಕುಮಾರ್ ಜೊತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ನಮ್ಮದು, ನಿರ್ಮಾಪಕರದ್ದು ಒಪ್ಪಂದಗಳು ಕಾನೂನಾತ್ಮಕವಾಗಿದೆ- 50 ಲಕ್ಷ ಕಮಿಷನ್ ಆರೋಪಕ್ಕೆ ಎಪಿ ಅರ್ಜುನ್ ಸ್ಪಷ್ಟನೆ

    ನಿರ್ದೇಶಕ ಚೇತನ್ ಕುಮಾರ್ (Chethan Kumar) ಜೊತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಂದನ್ ಶೆಟ್ಟಿ ಭೇಟಿ ನೀಡಿದ ಬೆನ್ನಲ್ಲೇ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡ್ತಿದ್ದಾರಾ ಎಂಬ ಕುತೂಹಲ ಮೂಡಿದೆ. ಈ ಸುದ್ದಿ ನಿಜನಾ? ಮುಂದಿನ ದಿನಗಳಲ್ಲಿ ಸಿನಿಮಾ ಮಾಡ್ತಾರಾ? ಈ ಬಗ್ಗೆ ಗುಡ್‌ ನ್ಯೂಸ್‌ ಸಿಗುತ್ತಾ ಎಂದು ಕಾದುನೋಡಬೇಕಿದೆ.

    ಅಂದಹಾಗೆ, ಚೇತನ್ ಕುಮಾರ್ ಸದ್ಯ ‘ಗಟ್ಟಿಮೇಳ’ (Gattimela) ನಟ ರಕ್ಷ್‌ಗೆ ನಿರ್ದೇಶನ ಮಾಡಿದ್ದಾರೆ. ಇತ್ತ ಚಂದನ್ ಶೆಟ್ಟಿ ನಾಯಕನಾಗಿ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ತಿದ್ದಾರೆ. ನಿವೇದಿತಾ ಗೌಡ ಜೊತೆಗಿನ ‘ಕ್ಯಾಂಡಿ ಕ್ರಶ್’ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿವೆ.

  • ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ  200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಜೇಮ್ಸ್ ಚಿತ್ರದ ಬೆಳಗ್ಗಿನ 6 ಗಂಟೆಯ 200 ಶೋಗಳ ಟಿಕೆಟ್ ಸೋಲ್ಡ್ ಔಟ್: ಏನೆಲ್ಲ ದಾಖಲೆ?

    ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ‘ಜೇಮ್ಸ್’ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ದೇಶಾದ್ಯಂತ ನಾಲ್ಕು ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಕರ್ನಾಟಕದಲ್ಲಂತೂ ಭರ್ಜರಿ ಪ್ರಚಾರ ಸಿಗುತ್ತಿದೆ. ಆದರೆ, ಬೇರೆ ಭಾಷೆಗಳಲ್ಲಿ ಚಿತ್ರತಂಡ ಅಷ್ಟೇನೂ ಪ್ರಚಾರ ಮಾಡದ ಕಾರಣ, ಕ್ರೇಜ್ ಕ್ರಿಯೇಟ್ ಆದಂತೆ ಕಾಣುತ್ತಿಲ್ಲ. ಇದನ್ನೂ ಓದಿ : ರಾಮ್ ಗೋಪಾಲ ವರ್ಮಾ ಡೇಂಜರೆಸ್ ಹುಡುಗಿ ಅಂತ ಹೇಳಿದ್ದು ಯಾರಿಗೆ?

    ನಾಲ್ಕು ದಿನಗಳ ಮೊದಲೇ ಟಿಕೆಟ್ ಬುಕ್ಕಿಂಗ್ ಶುರು ಮಾಡಿದೆ ಚಿತ್ರತಂಡ. ಹಲವು ಕಡೆ ಬೆಳಗ್ಗೆ ನಾಲ್ಕರಿಂದಲೇ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗಿದೆ. ಸದ್ಯ ಬುಕ್ ಮೈ ಶೋ ಆಪ್ ನಲ್ಲಿ ಬೆಳಗ್ಗೆ 6 ಗಂಟೆಯಿಂದ ಪ್ರದರ್ಶನಕ್ಕೆ ಟಿಕೆಟ್ ಬುಕ್ ಮಾಡಬಹುದು. ಇದನ್ನೂ ಓದಿ : ರಣಬೀರ್ ಮತ್ತು ಆಲಿಯಾ ಮದ್ವೆ ಡೇಟ್ ಮತ್ತೆ ಬದಲು: ಪ್ರಣಯ ಹಕ್ಕಿಗಳ ಪ್ರಲಾಪ

    ಬಾಕ್ಸ್ ಆಫೀಸರ್ ರಿಪೋರ್ಟ್ ಪ್ರಕಾರ ಮಾ.17 ರಂದು ಬೆಳಗ್ಗೆ 6 ಗಂಟೆಗೆ 200 ಶೋಗಳು ಜೆಮ್ಸ್ ಗಾಗಿ ಮೀಸಲಿಟ್ಟಿವೆ. ಅಷ್ಟೂ ಶೋಗಳ ಟಿಕೇಟ್ ಸೋಲ್ಡೌಟ್ ಆಗಿರುವುದು ವಿಶೇಷ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತದ್ದು, ಬೆಳಗಿನ ಪ್ರದರ್ಶನಕ್ಕೆ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಬಹುತೇಕ ಸ್ಕ್ರೀನ್ ಗಳನ್ನು ಜೇಮ್ಸ್ ಪ್ರದರ್ಶನಕ್ಕಾಗಿಯೇ ಮೀಸಲಿಡಲಾಗಿದೆಯಂತೆ. ಇದನ್ನೂ ಓದಿ : ನಟ ಚೇತನ್ ಗಡಿಪಾರು? : ಹೋರಾಟಗಳೇ ನಟನಿಗೆ ಮುಳುವಾಗುತ್ತಾ..?

    ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಇದಾಗಿದ್ದರಿಂದ, ಅವರಿಗೆ ಗೌರವ ಸಲ್ಲಿಸುವುದಕ್ಕಾಗಿಯೇ ಆ ವಾರ ಯಾವ ಭಾರೀ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ರಾಜ್ಯ ಶೇ.80ರಷ್ಟು ಚಿತ್ರಮಂದಿರಗಳಲ್ಲಿ ಜೇಮ್ಸ್ ತೆರೆ ಕಾಣುತ್ತಿದೆ. ಕೋವಿಡ್ ಕಾರಣದಿಂದಾಗಿ ಮುಚ್ಚಲಾಗಿದ್ದ ಚಿತ್ರಮಂದಿರಗಳನ್ನೂ ಜೇಮ್ಸ್ ಚಿತ್ರಕ್ಕಾಗಿ ಮತ್ತೆ ತೆರೆದಿರುವುದು ವಿಶೇಷ. ಇದನ್ನೂ ಓದಿ: ಕಂಗನಾಳನ್ನು ಹೀರೋಯಿನ್ ಮಾಡಿದ್ದು ಆ ಜ್ಯೋತಿಷಿ: ಅಸಲಿ ಸತ್ಯ ಬಾಯ್ಬಿಟ್ಟ ನಟ ಪ್ರಭಾಸ್

    ಸಿನಿಮಾ ಬಿಡುಗಡೆಗೂ ನಾಲ್ಕು ದಿನಗಳ ಮುನ್ನ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಒಂದು ವಾರದೊಳಗೆ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದರಲ್ಲಿ ಅಚ್ಚರಿ ಪಡಬೇಕಿಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಅಪ್ಪಿಕೊಂಡಿದ್ದಾಗಿದೆ.

  • ರಾಜಕುಮಾರ ಬೆಡಗಿಯ ದುಡ್ಡಿನ ಗಮ್ಮತ್ತು- ನೋಟಿನ ಹಾರ ಹಾಕ್ಕೊಂಡು ಫೋಟೋ ಶೂಟ್

    ರಾಜಕುಮಾರ ಬೆಡಗಿಯ ದುಡ್ಡಿನ ಗಮ್ಮತ್ತು- ನೋಟಿನ ಹಾರ ಹಾಕ್ಕೊಂಡು ಫೋಟೋ ಶೂಟ್

    ಬೆಂಗಳೂರು: ನಟ, ನಟಿಯರಿಗೆ ಫೋಟೋ ಶೂಟ್ ಎಂದರೆ ಹಬ್ಬವಿದ್ದಂತೆ. ಹಲವರು ವಿವಿಧ ರೀತಿಯ, ಇನ್ನೂ ಹಲವರು ಅಚ್ಚರಿ ಪಡುವ ರೀತಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ರಾಜಕುಮಾರ ಸಿನಿಮಾ ಮೂಲಕ ಪರಿಚಿತರಾಗಿರುವ ತಮಿಳು ನಟಿ ಪ್ರಿಯಾ ಆನಂದ್ ಫೋಟೋ ತಮ್ಮ ವಿಭಿನ್ನ ಫೋಟೋ ಶೂಟ್ ಮೂಲಕ ಸುದ್ದಿಯಾಗಿದ್ದಾರೆ.

     

    View this post on Instagram

     

    A post shared by Priya Anand (@priyawajanand)

    ರಾಜಕುಮಾರ ಸಿನಿಮಾ ಬಳಿಕ ಜೇಮ್ಸ್ ಸಿನಿಮಾ ಮೂಲಕ ಪುನೀತ್ ರಾಜ್‍ಕುಮಾರ್ ಜೊತೆಗೆ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಜೇಮ್ಸ್ ಚಿತ್ರೀಕರಣ ಭರದಿಂದ ಸಾಗಿದ್ದು, ಅಪ್ಪು, ಅನುಪ್ರಭಾಕರ್, ಪ್ರಿಯಾ ಆನಂದ್ ಸೇರಿದಂತೆ ಚಿತ್ರತಂಡ ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದೆ. ಇತ್ತೀಚೆಗೆ ಬಳ್ಳಾರಿಯ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಪಸಿದ್ದಾರೆ.

     

    View this post on Instagram

     

    A post shared by Priya Anand (@priyawajanand)

    ಜೇಮ್ಸ್ ಮಾತ್ರವಲ್ಲದೆ ಪ್ರಿಯಾ ಆನಂದ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಮಾತ್ರವಲ್ಲದೆ ಶಿವರಾಜ್‍ಕುಮಾರ್ ಅವರ ಆರ್‍ಡಿಎಕ್ಸ್ ಸಿನಿಮಾಗೆ ಸಹ ಆಯ್ಕೆಯಾಗಿದ್ದಾರೆ.

    ಇದೀಗ ಎರಡು ಸಾವಿರ ರೂ.ಗಳ ಗರಿ ಗರಿ ನೋಟುಗಳ ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ. ಅಂದಹಾಗೆ ಈ ಫೋಟೋಗಳನ್ನು ಲಾಕ್‍ಡೌನ್ ವೇಳೆ ಹಿಂದಿಯ ‘ಎ ಸಿಂಪಲ್ ಮರ್ಡರ್ ‘ ವೆಬ್ ಸಿರೀಸ್ ಚಿತ್ರೀಕರಣದ ವೇಳೆ ತೆಗೆಯಲಾಗಿದೆ ಎನ್ನಲಾಗಿದೆ.

    ಜೇಮ್ಸ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಈ ಹಿಂದೆ ರಾಜಕುಮಾರ ಬೆಡಗಿ ಟ್ವಿಟ್ಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮೂಲಕ ಅಪ್ಪು ಜೊತೆ ಎರಡನೇ ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದ್ದರು. ಈ ಮೂಲಕ ಕನ್ನಡದಲ್ಲಿ ನಾಲ್ಕನೇ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಜೇಮ್ಸ್ ಚಿತ್ರ ನಿರ್ದೇಶಿಸುತ್ತಿದ್ದು, ಅನು ಪ್ರಭಾಕರ್, ತೆಲುಗು ನಟ ಆದಿತ್ಯ ಮೆನನ್ ಜೇಮ್ಸ್ ಚಿತ್ರ ತಂಡವನ್ನು ಸೇರಿರುವುದು ಕುತೂಹಲ ಕೆರಳಿಸಿದೆ. ಯಾವ ರೀತಿ ಪಾತ್ರ ನಿರ್ವಹಿಸಲಿದ್ದಾರೆ, ಚಿತ್ರ ಯಾವ ರೀತಿ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

  • ಜೇಮ್ಸ್ ಶೂಟಿಂಗ್ ವೇಳೆ ಪೊಲೀಸರ ಜೊತೆ ಕೊರೊನಾ ಜಾಗೃತಿ ಮೂಡಿಸಿದ ಅಪ್ಪು

    ಜೇಮ್ಸ್ ಶೂಟಿಂಗ್ ವೇಳೆ ಪೊಲೀಸರ ಜೊತೆ ಕೊರೊನಾ ಜಾಗೃತಿ ಮೂಡಿಸಿದ ಅಪ್ಪು

    ಕೊಪ್ಪಳ: ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ನಟ ಪುನೀತ್ ರಾಜ್‍ಕುಮಾರ್ ಸಹ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದೇ ಗ್ಯಾಪ್‍ನಲ್ಲಿ ಕೊರೊನಾ ಜಾಗೃತಿಯನ್ನು ಸಹ ಮೂಡಿಸಿದ್ದಾರೆ.

    ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಬಳಿ ಜೇಮ್ಸ್ ಶೂಟಿಂಗ್ ಭರದಿಂದ ಸಾಗಿದ್ದು, ಬೃಹತ್ ಸೆಟ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಇನ್ನೂ ಕೆಲ ದಿನಗಳ ಕಾಲ ಚಿತ್ರ ತಂಡ ಗಂಗಾವತಿಯಲ್ಲಿಯೇ ಬೀಡು ಬಿಡಲಿದೆ. ಇದೇ ಗ್ಯಾಪ್‍ನಲ್ಲಿ ಬಿಡುವು ಮಾಡಿಕೊಂಡ ಅಪ್ಪು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಕೊರೊನಾ ಜಾಥಾದಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದ್ದಾರೆ.

    ಜೇಮ್ಸ್ ಚಿತ್ರೀಕರಣ ನಡೆಯುತ್ತಿರುವುದನ್ನು ಅರಿತ ಪೊಲೀಸರು ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇದು ಕೂಡ ನನ್ನ ಕರ್ತವ್ಯ ಎಂದು ಅಷ್ಟೇ ಖುಷಿಯಿಂದ ಅಪ್ಪು ಕಾರ್ಯಕ್ರಮದಲ್ಲಿ ಹಾಜರಾಗಿ ಜನರಿಗೆ ಕೊರೊನಾ ಬಗ್ಗೆ ತಿಳಿ ಹೇಳಿದ್ದಾರೆ. ಕೊರೊನಾದಿಂದ ಸುರಕ್ಷಿತರಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

    ಪುನೀತ್ ರಾಜ್‍ಕುಮಾರ್ ಆಗಮಿಸುವುದನ್ನು ತಿಳಿದಿದ್ದ ಅಭಿಮಾನಿಗಳು ಹಾಗೂ ಸುತ್ತಲಿನ ಗ್ರಾಮಗಳ ಜನ, ನೆಚ್ಚಿನ ನಟನನ್ನು ಕಂಡು ಕೆಕೆ, ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಖುಷಿಪಟ್ಟರು. ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಭಾಗವಹಿಸುತ್ತಾರೆ. ಸರ್ಕಾರದ ಹಲವು ಜಾಹಿರಾತುಗಳ ಮೂಲಕ ಸಹ ಅಪ್ಪು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಇದೀಗ ಪೊಲೀಸರ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪುನೀತ್ ಜೊತೆ ಅನುಪ್ರಭಾಕರ್ ಸಹ ಮಾತನಾಡಿ, ಕೋವಿಡ್ ಬಗ್ಗೆ ಜನರಿಗೆ ತಿಳಿ ಹೇಳಿದ್ದಾರೆ.

    ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಲಾಕ್‍ಡೌನ್ ವೇಳೆ ಬಿಡುವು ಪಡೆದಿದ್ದರು. ಯುವರತ್ನ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ ಎನ್ನಲಾಗಿದ್ದು, ಹೀಗಾಗಿಯೇ ಜೇಮ್ಸ್ ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ಅಭಿಮಾನಿಗಳು ಯುವರತ್ನ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

    ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್‍ನಲ್ಲಿ ಯುವರತ್ನ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿತು. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ. ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಇದೇ ವೇಳೆ ಜೇಮ್ಸ್ ಚಿತ್ರದ ಶೂಟಿಂಗ್ ಆರಂಭಿಸಲಾಗಿದೆ. ಇತ್ತೀಚೆಗಷ್ಟೇ ಹಿರೋಯಿನ್ ಚಿತ್ರ ತಂಡ ಸೇರಿಕೊಂಡಿದ್ದು, ತಮಿಳು ನಟಿ ಪ್ರಿಯಾ ಆನಂದ್ ಶೂಟಿಂಗ್‍ನಲ್ಲಿ ಭಾಗವಹಿಸಿದ್ದಾರೆ. ಇನ್ನೂ ವಿಶೇಷ ಎಂಬಂತೆ ಟಾಲಿವುಡ್ ನಟ ಶ್ರೀಕಾಂತ್ ಅವರು ಜೇಮ್ಸ್ ಚಿತ್ರ ತಂಡ ಸೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಕುರಿತು ಚಿತ್ರ ತಂಡ ಖಚಿತಪಡಿಸಿಲ್ಲ.

    ಜೇಮ್ಸ್ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದ್ದು, ತೆಲುಗು ಫೈಟ್ ಮಾಸ್ಟರ್ ಗಳಾದ ರಾಮ್-ಲಕ್ಷ್ಮಣ್ ಅವರು ಸಹ ಚಿತ್ರ ತಂಡ ಸೇರಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಂದಹಾಗೆ ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದು, ಕಿಶೋರ್ ಪತಿಕೊಂಡ ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಶ್ರೀಷಾ ಕುದುವಲ್ಲಿ ಛಾಯಾಗ್ರಹಣವಿದೆ.