Tag: James Cinema

  • ಅಪ್ಪು ಧ್ವನಿಯಲ್ಲಿ `ಜೇಮ್ಸ್’ ರೀ-ಎಂಟ್ರಿ: ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

    ಅಪ್ಪು ಧ್ವನಿಯಲ್ಲಿ `ಜೇಮ್ಸ್’ ರೀ-ಎಂಟ್ರಿ: ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

    ರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ನಟನೆಯ `ಜೇಮ್ಸ್’ ಸಿನಿಮಾ ಅಪ್ಪು ಹುಟ್ಟಿದ ಹಬ್ಬದೆಂದೇ ತೆರೆಗೆ ಅಬ್ಬರಿಸಿತ್ತು. ಪುನೀತ್ ಕಡೆಯ ಚಿತ್ರವನ್ನ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದಲ್ಲದೇ ಯಶಸ್ವಿ ಪ್ರದರ್ಶನ ಕಂಡಿತ್ತು. ಅಪ್ಪು ಅಭಿಮಾನಿಗಳು `ಜೇಮ್ಸ್’ ಚಿತ್ರಕ್ಕೆ ಎಮೋಷನಲಿ ಕನೆಕ್ಟ್ ಆಗಿದ್ರು. ಈಗ ಅಪ್ಪು ಫ್ಯಾನ್ಸ್ಗೆ ಚಿತ್ರತಂಡ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪುನೀತ್ ಧ್ವನಿಯಲ್ಲೇ ಇಂದು ಜೇಮ್ಸ್ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ.

    ಚೇತನ್‌ ಕುಮಾರ್‌ ನಿರ್ದೇಶನದ ಪುನೀತ್‌ ನಟನೆಯ ಕಡೆಯ ಚಿತ್ರವನ್ನು ಜೇಮ್ಸ್ ಜಾತ್ರೆಯಾಗಿ ಮಾಡಿದ್ರು. ಈ ಮೂಲಕ ಅಪ್ಪು ಮೇಲಿನ ಅಭಿಮಾನವನ್ನ ತೋರಿಸಿದ್ರು ಅಭಿಮಾನಿ ದೇವರುಗಳು. ಜೇಮ್ಸ್ ಚಿತ್ರ ನೋಡಿ ಇಷ್ಟಪಟ್ಟಿದ್ದ ಫ್ಯಾನ್ಸ್ಗೆ ಅಪ್ಪು ಧ್ವನಿ ಇರಬೇಕಿತ್ತು ಎಂಬ ಕೊರಗಿತ್ತು. ಇದೀಗ ಅಪ್ಪು ಧ್ವನಿಯಲ್ಲಿ `ಜೇಮ್ಸ್’ ರೀ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಮತ್ತೆ ಜೋಡಿಯಾಗಿ ಮಿಂಚಲು ರೆಡಿಯಾದ್ರು ಡಾಲಿ-ಅಮೃತಾ: `ಹೊಯ್ಸಳ’ನಾಗಿ ಡಾಲಿ ಅಬ್ಬರ!

    `ಜೇಮ್ಸ್’ನಲ್ಲಿ ಪುನೀತ್ ಭಾಗದ ಚಿತ್ರೀಕರಣವಾಗಿದ್ರು, ಅಪ್ಪು ಪಾತ್ರಕ್ಕೆ ಡಬ್ಬಿಂಗ್ ಆಗಿರಲಿಲ್ಲ. ನಂತರ ಪುನೀತ್ ಪಾತ್ರಕ್ಕೆ ಶಿವರಾಜ್‌ಕುಮಾರ್ ಅವರೇ ಧ್ವನಿ ನೀಡಿದ್ರು. ಆದರೆ ಪುನೀತ್ ಧ್ವನಿಯನ್ನು ಅಳವಡಿಸಲು ಚಿತ್ರತಂಡ ಪ್ರಯತ್ನ ಮುಂದುವರೆಸಿತ್ತು. ಈಗ ಯಶಸ್ವಿಯಾಗಿ ರಾಜ್ಯದ 65 ಚಿತ್ರಮಂದಿರಗಳಲ್ಲಿ ತೆರೆಗೆ ಅಬ್ಬರಿಸುತ್ತಿದೆ. ಈಗಾಗಲೇ ಅನುಪಮಾ ಚಿತ್ರಮಂದಿರದಲ್ಲಿ ಮೊದಲ ಫ್ಯಾನ್ಸ್‌ ಶೋ ಆಯೋಜಿಸಲಾಗಿದ್ದು, ಇನ್ನು ಮುಂದೆ ಚಿತ್ರಮಂದಿರಗಳಲ್ಲಿ ಪುನೀತ್ ಧ್ವನಿಯಲ್ಲೇ ಚಿತ್ರವನ್ನ ನೋಡಬಹುದಾಗಿದೆ.

    ಆಧುನಿಕ ತಂತ್ರಜ್ಞಾನದಿಂದ ಜೇಮ್ಸ್ ರೀ-ರಿಲೀಸ್ ಆಗಿದ್ದು, ಸದ್ಯದಲ್ಲೇ ಚಿತ್ರ 50ನೇ ದಿನವನ್ನ ಪೂರೈಸಲಿದೆ. ಕಡೆಗೂ ಅಪ್ಪು ವಾಯ್ಸ್ ಕೇಳಿ ಥ್ರಿಲ್ ಆಗಿರೋ ಫ್ಯಾನ್ಸ್ ಪ್ರೇಕ್ಷಕರಿಗೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಅಪ್ಪು ವಾಯ್ಸ್ ಕೇಳಿ ಥಿಯೇಟರ್‌ನಲ್ಲಿ ಸಂಭ್ರಮಿಸಿ ಸಿನಿಮಾ ನೋಡ್ತಿದ್ದಾರೆ.

  • ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್

    ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಮತ್ತೊಂದು ಸುತ್ತಿನ ರಿ-ರಿಲೀಸ್ ಗೆ ರೆಡಿ ಆಗಿದೆ. ಈ ಬಾರಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಮುಂದೆ ಬರುತ್ತಿದೆ. ಆ ತಂತ್ರಜ್ಞಾನದ ಮೂಲಕ ಸ್ವತಃ ಅಪ್ಪು ಧ್ವನಿಯಲ್ಲಿಯೇ ಜೇಮ್ಸ್ ಸಿನಿಮಾ ನೋಡಬಹುದಾಗಿದೆ ಎಂದಿದ್ದಾರೆ ನಿರ್ದೇಶಕ ಚೇತನ್ ಕುಮಾರ್. ಇದನ್ನೂ ಓದಿ : ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ಹೌದು, ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಧ್ವನಿ ಇರಲಿಲ್ಲ. ಅವರ ಬದಲಾಗಿದೆ, ಅಪ್ಪು ಸಹೋದರ ಶಿವರಾಜ್ ಕುಮಾರ್ ಆ ಪಾತ್ರಕ್ಕೆ ಡಬ್ ಮಾಡಿದ್ದರು. ಇದೀಗ ವಿಶೇಷ ತಂತ್ರಜ್ಞಾನ ಬಳಸಿಕೊಂಡು, ಶೂಟಿಂಗ್ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಹೇಳಿದ ಸಂಭಾಷಣೆಯನ್ನೇ ಉಳಿಸಿಕೊಂಡು  ಅದನ್ನು ರಿ ಗೇಯ್ನ ಮಾಡಿ ಜನರ ಮುಂದೆ ಮತ್ತೆ ಪುನೀತ್ ರಾಜ್ ಕುಮಾರ್ ಅವರನ್ನು ತಂದು ನಿಲ್ಲಿಸುತ್ತಿದ್ದಾರೆ ಚಿತ್ರತಂಡ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

    ಈ ವಿಷಯದ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ‘ಇಂಥದ್ದೊಂದು ತಂತ್ರಜ್ಞಾನ ಇದೆ ಅಂತ ನನಗೆ ಗೊತ್ತೇ ಇರಲಿಲ್ಲ. ವಿಷಯ ಕೇಳಿ ತುಂಬಾ ಸಂತೋಷವಾಯಿತು. ಅಪ್ಪು ಅವರ ವಾಯ್ಸ್ ನಲ್ಲೇ ಸಿನಿಮಾ ನೋಡುವುದು ಇನ್ನೂ ಖುಷಿ ಕೊಡುವ ವಿಚಾರ. ಸಿನಿಮಾ ರಿಲೀಸ್ ಗೂ ಮುನ್ನ ಈ ತಂತ್ರಜ್ಞಾನ ಬಳಸಿಕೊಂಡಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು’ ಎಂದಿದ್ದಾರೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

    ಪುನೀತ್  ರಾಜ್ ಕುಮಾರ್ ಕನಸಿನ ಶಕ್ತಿಧಾಮದಲ್ಲಿ ಮಕ್ಕಳ ಬೇಸಿಗೆ ಶಿಬಿರ ನಡೆಯುತ್ತಿದೆ. ನಿನ್ನೆಯಿಂದ ಬೇಸಿಗೆ ಶಿಬಿರ ಆರಂಭವಾಗಿದೆ. ಈ ಶಿಬಿರಕ್ಕೆ ಚಾಲನೆ ಕೊಡಲು ಶಿವರಾಜ್ ಕುಮಾರ್ ಪತ್ನಿ ಸಮೇತ ಬಂದಿದ್ದರು. ಕೆಲ ಹೊತ್ತು ಮಕ್ಕಳೊಂದಿಗೆ ಮಕ್ಕಳಾಗಿ ಶಿವಣ್ಣ ಸಮಯ ಕಳೆದರು.

  • 80 ಕೋಟಿಗೆ ಜೇಮ್ಸ್ ಟಿವಿ ರೈಟ್ಸ್ ಸೇಲಾಯ್ತಾ? ಡಿಮಾಂಡಪ್ಪೋ ಡಿಮಾಂಡ್

    80 ಕೋಟಿಗೆ ಜೇಮ್ಸ್ ಟಿವಿ ರೈಟ್ಸ್ ಸೇಲಾಯ್ತಾ? ಡಿಮಾಂಡಪ್ಪೋ ಡಿಮಾಂಡ್

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಕುರಿತು ಚಂದನವನ ಅಂಗಳದಿಂದ ಮತ್ತೊಂದು ಭರ್ಜರಿ ಸುದ್ದಿ ಹರಿದಾಡುತ್ತಿದೆ. ಕನ್ನಡದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಜೇಮ್ಸ್ ಚಿತ್ರದ ಟಿವಿ ರೈಟ್ಸ್ ಸೇಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

    ಈಗಾಗಲೇ ಥಿಯೇಟರ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಜೇಮ್ಸ್ ಚಿತ್ರವು, ಮುಂದಿನ ನಾಲ್ಕು ದಿನಗಳ ಟಿಕೆಟ್ ಸೋಲ್ಡೌಟ್ ಆಗಿವೆಯಂತೆ. ಇವತ್ತು ಒಂದೇ ದಿನಕ್ಕೆ ಅಂದಾಜು 20 ಕೋಟಿಗೂ ಅಧಿಕ ಆದಾಯ ಹರಿದು ಬಂದಿದೆ ಎನ್ನುತ್ತಿದೆ ಬಾಕ್ಸ್ ಆಫೀಸ್ ರಿಪೋರ್ಟ್. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ಈ ನಡುವೆ ಜೇಮ್ಸ್ ಸಿನಿಮಾದ ಟಿವಿ ರೈಟ್ಸ್ ಎಲ್ಲ ಭಾಷೆಗೂ ಸೇರಿ ಅಂದಾಜು 80 ಕೋಟಿಗೆ ಸೇಲ್ ಆಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕನ್ನಡದಲ್ಲೇ ಸುವರ್ಣ ವಾಹಿನಿಯು 13.80 ಕೋಟಿಗೆ ಪ್ರಸಾರದ ಹಕ್ಕನ್ನು ಪಡೆದಿದೆಯಂತೆ. ಸೋನಿ ಡಿಜಿಟಲ್ 40 ಕೋಟಿ ಕೊಟ್ಟು ಪ್ರಸಾರದ ಹಕ್ಕನ್ನು ಪಡೆದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ತಮಿಳಿನ ಸನ್ ನೆಟ್ ವರ್ಕ್ 2.17 ಕೋಟಿ, ತೆಲುಗಿನ ಮಾ ಟಿವಿ 5.70 ಕೋಟಿ, ಮಲೆಯಾಳಂ 1.2 ಕೋಟಿ, ಹಿಂದಿ ಸೋನಿ 2.70 ಕೋಟಿ, ಭೋಜಪುರಿ 5.50 ಕೋಟಿ ಹಾಗೂ ಮತ್ತಿತರ ಭಾಷೆಯಲ್ಲೂ ಡಬ್ ಆದ ಚಿತ್ರದಿಂದ ಅಂದಾಜು 10 ಕೋಟಿಯಷ್ಟು ಹಣ ಬಂದಿದೆಯಂತೆ. ಹಾಗಾಗಿ ಥಿಯೇಟರ್ ರಿಲೀಸ್ ಮತ್ತು ಟಿವಿ ರೈಟ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ಬಂದು ಹಣ 100 ಕೋಟಿ ತಲುಪಿದೆ. ಬಿಡುಗಡೆಯ ದಿನವೇ ನೂರು ಕೋಟಿ ಕ್ಲಬ್ ಗೆ ಸೇರಿದ ಸಿನಿಮಾವಿದು ಎನ್ನುವ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ.

    ನಾಲ್ಕು ದಿನಗಳ ಟಿಕೇಟ್ ಈಗಾಗಲೇ ಮಾರಾಟವಾಗಿರುವುದರಿಂದ ಮತ್ತು ಅತೀ ಹೆಚ್ಚು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿರುವುದರಿಂದ ಜೇಮ್ಸ್ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡಿದೆ.

  • ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಧ್ಯೆ ರಾತ್ರಿಯಿಂದಲೇ ತೆರೆಯ ಮೇಲೆ ಅಪ್ಪು ರಾರಾಜಿಸುತ್ತಾ ಇದ್ದಾರೆ. ಇಂದು ಅವರ ಹುಟ್ಟುಹಬ್ಬವೂ ಆಗಿರುವುದರಿಂದ ಒಂದು ರೀತಿಯಲ್ಲಿ ಜಾತ್ರೆಯ ವಾತಾವರಣವೇ ಥಿಯೇಟರ್ ಮುಂದಿದೆ. ಆದರೆ, ಅಪ್ಪು ಇಲ್ಲ ಎನ್ನುವ ಕೊರಗು ಸದಾ ಇದ್ದೇ ಇರುತ್ತದೆ.

    ಜೇಮ್ಸ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ. ಖಂಡಿತಾ ಈ ಸೆಂಟಿಮೆಂಟ್ ಸಿನಿಮಾಗೆ ಬಂದ ಮೇಲೆ ವರ್ಕ್ ಆಗಲ್ಲ. ಸೆಂಟಿಮೆಂಟ್ ಆಚೆಯೂ ಸಿನಿಮಾ ಗೆದ್ದು ನಿಲ್ಲುತ್ತದೆ. ಕಾರಣ ‘ಪವರ್ ಸ್ಟಾರ್’. ಸಾಮಾನ್ಯವಾಗಿ ಕಥೆಯೇ ಇಲ್ಲದೇ ಸ್ಟಾರ್ ನಟರು ಚಿತ್ರ ಮಾಡುತ್ತಾರೆ ಎನ್ನುವ ಆರೋಪವಿದೆ. ಆದರೆ, ಜೇಮ್ಸ್ ಸಿನಿಮಾದಲ್ಲಿ ಭರ್ಜರಿ ಕಥೆಯಿದೆ. ಅದು ಕೇವಲ ನಮ್ಮ ನೆಲದ ಕಥೆ ಮಾತ್ರವಲ್ಲ, ವಿದೇಶಿ ನೆಲದಲ್ಲೂ ಬೇರೂರಿರುವಂತಹ ಕಥಾವಸ್ತುವನ್ನು ಅದು ಹೊಂದಿದೆ. ಇದನ್ನೂ ಓದಿ : ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

    ಅಪ್ಪು ಎಂಟ್ರಿನೇ ಮೈ ಜುಮ್ಮೆನಿಸುತ್ತದೆ. ಅದರಲ್ಲೂ ಕಾರ್ ಚೇಸಿಂಗ್ ದೃಶ್ಯ ನೋಡುಗರ ಎದೆ ನಡುಗಿಸುತ್ತದೆ. ಹೇಳಿ ಕೇಳಿ ಪುನೀತ್ ರಾಜ್ ಕುಮಾರ್ ಆಕ್ಷನ್ ಕಿಂಗ್. ಅವರಿಗೆ ಹೇಳಿ ಮಾಡಿಸಿದಂತೆಯೆ ಸಾಹಸ ದೃಶ್ಯಗಳ ಸಂಯೋಜನೆ. ರವಿವರ್ಮಾ ಅದ್ಭುತವಾಗಿ ಸ್ಟಂಟ್ ಕೊರಿಯೋಗ್ರಫಿ ಮಾಡಿದ್ದಾರೆ. ಅಪ್ಪು ಕಾಲುಗಳು ಬೆಳೆದದ್ದೇ ಡಾನ್ಸ್ ಮಾಡಲು. ಪುನೀತ್ ರಾಜ್ ಕುಮಾರ್ ಸಿನಿಮಾಗಳೆಂದರೆ, ಅಲ್ಲಿ ಹಾಡಿಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಯಾಕೆಂದರೆ, ಹಾಡಿಗೂ ಮತ್ತು ಇವರು ಹಾಕುವ ಸ್ಟೆಪ್ ಗೂ ಒಂದು ರೀತಿಯಲ್ಲಿ ಜುಗಲ್ಬಂದಿಯೇ ಏರ್ಪಾಟಾಗುತ್ತದೆ. ಈ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗದೇ ಇದ್ದರೂ, ಇರೋ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ ಪುನೀತ್ ರಾಜ್ ಕುಮಾರ್. ಚರಣ್ ರಾಜ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಕೂಡ ಕಾಡುತ್ತವೆ. ಹಿನ್ನೆಲೆ ಸಂಗೀತ ಸಂಯೋಜನೆ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ.

    ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಎರಡು ಶೇಡ್ ಇರುವಂತಹ ಪಾತ್ರ ಮಾಡಿದ್ದಾರೆ. ಒಂದು ಸೈನಿಕನಾಗಿ ಮತ್ತೊಂದು ಸೆಕ್ಯುರಿಟಿ ಏಜೆನ್ಸಿ ನಡೆಸುವ ಮುಖ್ಯಸ್ಥನಾಗಿ. ಮೇಜರ್ ಪಾತ್ರಕ್ಕೆ ಪುನೀತ್ ಅವರು ಜೀವ ತುಂಬಿದ್ದಾರೆ. ಫ್ಲ್ಯಾಶ್ ಬ್ಯಾಕ್ ಗೆ ಹೊರಳುವ ಕಥೆಯಲ್ಲಿ ಇನ್ನೂ ಸಖತ್ ಆಗಿ ಕಾಣುತ್ತಾರೆ. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್

    ಮೇಲ್ನೊಟಕ್ಕೆ ಇದೊಂದು ಸೇಡಿನ ಕಥೆ ಅಂತ ಅನಿಸಿದರೂ, ಇಲ್ಲೊಂದು ದೇಶಪ್ರೇಮದ ಟಿಸಿಲಿದೆ. ಗೆಳೆತನದ ಮಹತ್ವ ಸಾರುವ ಸಾಲಿದೆ. ಜಗತ್ತನ್ನೇ ಆತಂಕಕ್ಕೆ ದೂಡಿದ ಡ್ರಗ್ಸ್ ಮಾಫಿಯಾ ಕೂಡ ಕಥೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡುವ ದೃಶ್ಯವೇ ಹೊಸದೆನಿಸುತ್ತದೆ.

    ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಪಾರ್ವತಮ್ಮ ರಾಜ್ ಕುಮಾರ್ ಆಸೆ ಆಗಿತ್ತು. ಆ ಆಸೆಯು ಈ ಸಿನಿಮಾದಲ್ಲಿ ಈಡೇರಿದೆ. ಬಾಲ್ಯದ ಸನ್ನಿವೇಶಕ್ಕೆ ಕಥೆ ತಿರುಗಿದಾಗ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕಾಣಿಸುತ್ತಾರೆ. ಇದನ್ನೂ ಓದಿ : ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    ಪುನೀತ್ ಅವರ ಜತೆ ನಟಿಸಿದ ತಾರಾಬಳಗ ಕೂಡ ದೊಡ್ಡದಿದೆ. ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ಶ್ರೀಕಾಂತ್, ಆದಿತ್ಯ ಮೆನನ್ ಹೀಗೆ ಅನುಭವಿ ಕಲಾವಿದರ ಬಳಗವೇ ಸಿನಿಮಾದಲ್ಲಿದೆ. ಹೀಗೆ ಸಿನಿಮಾ ನೋಡಲು ನೂರಾರು ಕಾರಣಗಳನ್ನು ಕೊಡಬಹುದು.

  • ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ

    ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ

    ಗುರುವಾರ (ಮಾ.17) ಬೆಳಗ್ಗಿನಿಂದಲೇ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧರಾಗಿದ್ದ ಬೆಂಗಳೂರಿನ ಪುನೀತ್ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಪೊಲೀಸ್ ಇಲಾಖೆಯು ಕೆಲವು ಷರತ್ತುಗಳನ್ನು ಹಾಕಿದ್ದು, ಅದರಾಚೆ ಅಭಿಮಾನಿಗಳು ಏನು ಮಾಡುವಂತಿಲ್ಲವೆಂದು ಹೇಳಿದೆ.

    ನಾಳೆ ಬೆಂಗಳೂರಿನ ಚಾಮರಾಜಪೇಟೆಯಿಂದ ಬೃಹತ್ ಮೆರವಣಿಗೆ ಹೊರಟು, ನಾನಾ ಬೀದಿಗಳ ಮೂಲಕ ವೀರೇಶ್ ಚಿತ್ರಮಂದಿರ ಸೇರುವ ಸಿದ್ಧತೆಯಲ್ಲಿದ್ದು ಅಭಿಮಾನಿಗಳು. ಬೈಕ್ ರಾಲಿ ಸೇರಿದಂತೆ ನಕ್ಷತ್ರ ಮೆರವಣಿಗೆಗಳನ್ನೂ ಆಯೋಜನೆ ಮಾಡಲಾಗಿತ್ತು. ಮೆರವಣಿಗೆಯುದ್ದಕ್ಕೂ ಪುನೀತ್ ರಾಜ್ ಕುಮಾರ್ ಅವರ ಹಾಡುಗಳನ್ನು ಬಳಸಿಕೊಂಡು, ನೃತ್ಯ ಮತ್ತಿತರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಮೆರವಣಿಗಾಗಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಅನುಮತಿ ಪಡೆಯಲು ಅಭಿಮಾನಿಗಳು ಪತ್ರವೊಂದನ್ನು ಬರೆದಿದ್ದರು. ಈಗ ಚಾಮರಾಜಪೇಟೆ ಪೊಲೀಸರು ಅನುಮತಿ ಕೊಡಲು ನಿರಾಕರಿಸಿದ್ದಾರೆ. ನಗರದ ಸರಹದ್ದಿಯಲ್ಲಿ ಬೃಹತ್ ಮೆರವಣಿಗೆ ಮತ್ತು ಮುಷ್ಕರ ನಡೆಸದಂತೆ ಉಚ್ಛ ನ್ಯಾಯಾಲಯವು ಆದೇಶಿಸಿರುವ ಹಿನ್ನೆಲೆಯಲ್ಲಿ ಅನುಮತಿಯನ್ನು ಪೊಲೀಸ್ ನವರು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ನಾಳೆ ಮೆರವಣಿಗೆ ಮಾಡುವಂತಿಲ್ಲವಾಗಿದೆ. ಇದನ್ನೂ ಓದಿ : ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?

    ಮತ್ತೊಂದು ಕಡೆ ಹೆಲಿಕಾಪ್ಟರ್ ಮೂಲಕ ಮೊದಲು ಪುನೀತ್ ಸಮಾಧಿಗೆ ನಂತರ ವೀರಭದ್ರೇಶ್ವರ ಥಿಯೇಟರ್, ಪ್ರಸನ್ನ ಮತ್ತು ವೀರೇಶ್ ಚಿತ್ರಮಂದಿರಗಳ ಮೇಲೆ ಪುಷ್ಪಮಳೆ ಸುರಿಸಲು ಕೂಡ ಅಭಿಮಾನಿಗಳು ಸಜ್ಜಾಗಿದ್ದರು. ಅದಕ್ಕೂ ಈಗ ಬ್ರೇಕ್ ಬಿದ್ದಿದೆ. ಭದ್ರತಾ ದೃಷ್ಟಿಯಿಂದ ಹೆಲಿಕ್ಯಾಪ್ಟರ್ ಪುಷ್ಪಮಳೆಗೆ ಅನುಮತಿ ನಿರಾಕರಿಸಲಾಗಿದೆ.  ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಹೆಲಿಕಾಪ್ಟರ್ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ನಾಳೆ ಪುನೀತ್ ಅವರ ಹುಟ್ಟು ಹಬ್ಬ ಮತ್ತು ಸಿನಿಮಾ ಬಿಡುಗಡೆ ಇರುವ ಕಾರಣಕ್ಕಾಗಿ ಸಹಜವಾಗಿ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಹೀಗಾಗಿ ಭದ್ರತೆ ನೀಡುವುದು ಕಷ್ಟವಾಗುತ್ತದೆ. ಹೆಚ್ಚಿನ ಜನ ಸೇರುವುದರಿಂದ ಕಾಲ್ತುಳಿತ ಕೂಡ ಸಂಭವಿಸಬಹುದು. ಹೆಲಿಕಾಪ್ಟರ್ ಗೂ ಭದ್ರತೆ ನೀಡುವುದು ಕಷ್ಟ. ಹೆಲಿಕಾಪ್ಟರ್ ಅತೀ ಕೆಳಗೆ ಹಾರುವುದರಿಂದ ಮತ್ತು ಇಳಿಯುವುದರಿಂದ ಟವರ್, ಬಿಲ್ಡಿಂಗ್ ಗಳು ಅಡ್ಡಿಯಾದರೆ ಅನಾಹುತ ಸಂಭವಿಸಬಹುದು. ಈ ಕಾರಣದಿಂದಾಗಿ ಅನುಮತಿಯನ್ನು ಪೊಲೀಸ್ ಇಲಾಖೆ ನಿರಾಕರಿಸಿದೆ.

  • ಸಲಾಂ ಸೋಲ್ಜರ್ ಬದಲು ಸಲಾಂ ಅಪ್ಪು ಅಂತಿದ್ದಾರೆ ಫ್ಯಾನ್ಸ್ : ಜೇಮ್ಸ್ ಮತ್ತೊಂದು ಹಾಡು ರಿಲೀಸ್

    ಸಲಾಂ ಸೋಲ್ಜರ್ ಬದಲು ಸಲಾಂ ಅಪ್ಪು ಅಂತಿದ್ದಾರೆ ಫ್ಯಾನ್ಸ್ : ಜೇಮ್ಸ್ ಮತ್ತೊಂದು ಹಾಡು ರಿಲೀಸ್

    ದಿನದಿಂದ ದಿನಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ’ಜೇಮ್ಸ್’ ಸಿನಿಮಾದ ಕ್ರೇಜ್ ಹೆಚ್ಚಾಗುತ್ತಿದೆ. ಅಪ್ಪು ಅಭಿಮಾನಿಗಳು ಈ ಸಿನಿಮಾವನ್ನು ಭಾವನಾತ್ಮಕವಾಗಿ ರಿಸೀವ್ ಮಾಡಿರುವುದರಿಂದ ಒಂದು ರೀತಿಯಲ್ಲಿ ಜಾತ್ರೆಯಂತೆ ಸಿನಿಮಾ ರಿಲೀಸ್ಗೆ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ : Breaking- ಉಪೇಂದ್ರ ಹೊಸ ಚಿತ್ರದ ಪೋಸ್ಟರ್ : ನೀವು ಏನ್ ಬೇಕಾದ್ರೂ ಅಂದ್ಕೊಳ್ಳಿ ಎಂದ ಉಪ್ಪಿದಾದ

    ಈಗಾಗಲೇ ರಾಜ್ಯಾದ್ಯಂತ ಸಿನಿಮಾದ ಪೋಸ್ಟರ್ಸ್ ಗೋಡೆಗಳನ್ನು ಅಲಂಕರಿಸಿವೆ. ಚಿತ್ರಮಂದಿರಗಳಲ್ಲಿ ಕಟೌಟ್ ಎದ್ದು ನಿಂತಿವೆ. ಟೀ ಶರ್ಟ್, ಆಟೋಗಳ ಮೇಲೆ ಅಪ್ಪು ರಾರಾಜಿಸುತ್ತಿದ್ದಾರೆ. ಅಲ್ಲದೇ, ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಅಪ್ಪು ಉತ್ಸವವೇ ನಡೆಯುತ್ತಿದೆ. ಅಷ್ಟರ ಮಟ್ಟಿಗೆ ಪುನೀತ್ ಬರ್ತಡೆ ಮತ್ತು ಜೇಮ್ಸ್ ಸಿನಿಮಾದ ರಿಲೀಸ್ ತಯಾರಿ ನಡೆದಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಈ ಹೊತ್ತಿನಲ್ಲಿ ಸಿನಿಮಾದ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ‘ಸಲಾಂ ಸೋಲ್ಜರ್’ ಲಿರಿಕಲ್ ಸಾಂಗ್ ಅನ್ನು ಇಂದು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ನಾಡಿನ ಸಮಸ್ತ ಸೈನಿಕರಿಗೆ ಅರ್ಪಿಸಿರುವುದಾಗಿ ನಿರ್ದೇಶಕ ಚೇತನ್ ತಿಳಿಸಿದ್ದಾರೆ. ಈ ಹಾಡಿನಲ್ಲಿ ಪುನೀತ್ ರಾಜ್ ಕುಮಾರ್ ಅವರು ಸೈನಿಕನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಗೆಟಪ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ಸಲಾಂ ಅಪ್ಪು’ ಎಂದೇ ಜೈಕಾರ ಹಾಕುತ್ತಿದ್ದಾರೆ. ಈ ಗೀತೆಯನ್ನು ಸ್ವತಃ ನಿರ್ದೇಶಕ ಚೇತನ್ ಕುಮಾರ್ ಅವರೇ ಬರೆದದ್ದು, ಸಂಜಿತ್ ಹೆಗಡೆ ಮತ್ತು ಚರಣ್ ರಾಜ್ ಹಾಡಿದ್ದಾರೆ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಇದಾಗಿದ್ದರಿಂದ, ಪ್ರಿ ರಿಲೀಸ್ ಇವೆಂಟ್ ಕೂಡ ಅದ್ಧೂರಿಯಾಗಿ ನಡೆಲಿದೆ. ಬೆಂಗಳೂರಿನಲ್ಲಿ ಇವೆಂಟ್ ಮಾಡಲು ಅರಮನೆ ಮೈದಾನ ಕೂಡ ಸಿದ್ಧವಾಗಿದೆ. ಮಾ.13 ರಂದು ಇಡೀ ಸಿನಿಮಾ ರಂಗವೇ ಅಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದೆ.

  • ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?

    ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಕುರಿತಾದ ಸುದ್ದಿಗಳು ಕ್ಷಣಕ್ಕೊಂದು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿವೆ. ಮಾ.17 ರಂದು ಅಪ್ಪು ಹುಟ್ಟಿದ ದಿನ. ಅಂದೇ ಈ ಸಿನಿಮಾ ರಿಲೀಸ್ ಆಗುತ್ತಿದೆ. ಜತೆಗೆ ಪುನೀತ್ ನಾಯಕನಾಗಿ ನಟಿಸಿರುವ ಕೊನೆಯ ಚಿತ್ರವಿದು. ಅಲ್ಲದೇ, ಮೂವರು ಸಹೋದರರು ಇದೇ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬರುತ್ತಿದೆ. ಇದನ್ನೂ ಓದಿ : ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?

    ಸಿನಿಮಾ ಬಿಡುಗಡೆ ದಿನ ಅಭಿಮಾನಿಯೊಬ್ಬ ಹತ್ತು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಪುನೀತ್ ಹಬ್ಬವನ್ನೇ ಆಚರಿಸುತ್ತಿದ್ದಾನೆ. ರಾಜ್ಯಾದ್ಯಂತ ಅವತ್ತು ಪುನೀತ್ ಕಟೌಟ್ ಗೆ ಹಾರ ಮತ್ತು ಹಾಲಿನ ಅಭಿಷೇಕ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅಲ್ಲದೇ, ಬೃಹತ್ ಕಟೌಟ್ ಗಳು ಕೂಡ ಚಿತ್ರಮಂದಿರದ ಮುಂದೆ ಎದ್ದು ನಿಲ್ಲಲಿವೆ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ: ಐದು ಕಾಂಟ್ರವರ್ಸಿಗಳು

    ಇಷ್ಟೆಲ್ಲದರ ಮಧ್ಯ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ವಿತರಕರು ಮುಗಿಬಿದ್ದು ಸಿನಿಮಾ ಖರೀದಿಸುತ್ತಿದ್ದಾರೆ. ಈಗಾಗಲೇ ಆಯಾ ಭಾಗ ಮತ್ತು ಏರಿಯಾಗಳಲ್ಲಿ ವಿತರಿಸಲು ಹಲವರು ಮುಂದೆ ಬಂದಿದ್ದಾರೆ. ಆದರೆ, ಆ ಏರಿಯಾ ಮಾತ್ರ ಭಾರೀ ಡಿಮಾಂಡ್ ಕ್ರಿಯೇಟ್ ಮಾಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅಂತಾರಾಷ್ಟ್ರೀಯ ಮಹಿಳಾ ದಿನ: ನಟಿಯ ವರ್ಕೌಟ್ ವಿಡಿಯೋ ಗಿಫ್ಟ್ ಕೊಡ್ತಾರಂತೆ ರಾಮ್ ಗೋಪಾಲ್ ವರ್ಮಾ

    ಸಿನಿಮಾ ರಂಗದವರಿಗೆ ಬಿಕೆಟಿ ಏರಿಯಾ ಅಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ವಿತರಕರ ಭಾಷೆಯಲ್ಲಿ ಬಿಕೆಟಿ ಅಂದರೆ ಬೆಂಗಳೂರು-ಕೋಲಾರ ಹಾಗೂ ತುಮಕೂರು ಎಂದರ್ಥ. ಈ ಮೂರು ಏರಿಯಾಗಳಲ್ಲಿ ಚಿತ್ರ ಬಿಡುಗಡೆ ವಿತರಕರೊಬ್ಬರು ನಿರ್ಮಾಪಕರಿಗೆ ಬರೋಬ್ಬರಿ 12 ಕೋಟಿ ಆಫರ್ ಕೊಟ್ಟರಂತೆ. ಆದರೆ, ನಿರ್ಮಾಪಕರು ಈ ಆಫರ್ ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ಪ್ರಮಾಣದಲ್ಲಿ ಇದೊಂದೆ ಏರಿಯಾಗೆ ಇಷ್ಟು ಮೊತ್ತದ ಹಣಕ್ಕೆ ಎಂದೂ ವಿತರಣಾ ಹಕ್ಕು ಹೋಗಿಲ್ಲ. ಆದರೂ, ದಾಖಲೆಯ ಮೊತ್ತಕ್ಕೆ ಕೇಳಿದ್ದರೂ, ನಿರ್ಮಾಪಕರು ಕೊಟ್ಟಿಲ್ಲವಂತೆ. ಇದನ್ನೂ ಓದಿ : ಜೈಲಿನಲ್ಲಿರೋದು ವಾಸಿ ಅಂತಿದ್ದಾಳೆ ಪೂನಂ ಪಾಂಡೆ

    ಜೇಮ್ಸ್ ಬಿಡುಗಡೆ ಆಗುತ್ತಿರುವ ವಾರ ಯಾವುದೇ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಅಲ್ಲದೇ, ಈಗಾಗಲೇ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಒಂದು ರೀತಿಯಲ್ಲಿ ಕ್ರೇಜ್ ಕೂಡ ಕ್ರಿಯೇಟ್ ಆಗಿದೆ. ಹಾಗಾಗಿ ಬಿಕೆಟಿಯಲ್ಲೇ ನಿರ್ಮಾಪಕರಿಗೆ ಅಂದಾಜು 20 ಕೋಟಿ ಬರುವ ಅಂದಾಜಿದೆಯಂತೆ.