Tag: James Anderson

  • ಟೆಸ್ಟ್‌ಗೆ ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಜೇಮ್ಸ್ ಆಂಡರ್ಸನ್ ನಿವೃತ್ತಿ

    ಟೆಸ್ಟ್‌ಗೆ ಇಂಗ್ಲೆಂಡ್ ಕ್ರಿಕೆಟ್ ದಂತಕಥೆ ಜೇಮ್ಸ್ ಆಂಡರ್ಸನ್ ನಿವೃತ್ತಿ

    ಲಂಡನ್: ಇಂಗ್ಲೆಂಡ್ (England) ಕ್ರಿಕೆಟ್‍ನ ದಂತಕಥೆ ವೇಗಿ ಜೇಮ್ಸ್ ಆಂಡರ್ಸನ್ (James Anderson) ಟೆಸ್ಟ್ ಕ್ರಿಕೆಟ್‍ಗೆ (Cricket) ವಿದಾಯ ಘೋಷಣೆ ಮಾಡಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಅವರು ನಿವೃತ್ತಿಯಾಗಲಿದ್ದಾರೆ.

    ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು `ಎಲ್ಲರಿಗೂ ನಮಸ್ಕಾರ. ಲಾರ್ಡ್ಸ್‌ನಲ್ಲಿ ಬೇಸಿಗೆ ಋತುವಿನ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಎಂದು ಹೇಳಲು ಬಯಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ಪಂತ್‌ ಔಟ್‌; ಡೆಲ್ಲಿ ತಂಡಕ್ಕೆ ಹೊಸ ನಾಯಕ – ಬೆಂಗಳೂರು ಬಾಯ್ಸ್‌ ಕೈಹಿಡಿಯುತ್ತಾ ಲಕ್‌?

    ನನ್ನ ಬಾಲ್ಯದಿಂದಲೂ ನನ್ನಿಷ್ಟದ ಕ್ರಿಕೆಟ್‍ನ್ನು ಆಡುತ್ತಿದ್ದೆ. 20 ವರ್ಷಗಳ ಸುದೀರ್ಘ ಕಾಲ ಇಂಗ್ಲೆಂಡ್ ಪರ ಆಡಿದ್ದೇನೆ. ಇನ್ನು ಮುಂದೆ ಇಂಗ್ಲೆಂಡ್ ತಂಡದ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿಯುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇನೆ. ನಾನು ತಂಡದಿಂದ ಹಿಂದೆ ಸರಿಯಲು ಮತ್ತು ನೂತನ ಆಟಗಾರರ ಕನಸುಗಳನ್ನು ನನಸಾಗಿಸಲು ಇದು ಸೂಕ್ತ ಸಮಯ ಮತ್ತು ನಿರ್ಧಾರ ಎಂದು ಅವರು ಹೇಳಿಕೊಂಡಿದ್ದಾರೆ.

    ತಮ್ಮ ಕ್ರಿಕೆಟ್ ಜೀವನಕ್ಕೆ ಅಚಲ ಬೆಂಬಲ ನೀಡಿದ ತಮ್ಮ ಕುಟುಂಬಕ್ಕೂ ಆಂಡರ್ಸನ್ ಈ ವೇಳೆ ಕೃತಜ್ಞತೆ ಸಲ್ಲಿಸಿದ್ದಾರೆ. ಡೇನಿಯೆಲ್ಲಾ, ಲೋಲಾ, ರೂಬಿ ಮತ್ತು ನನ್ನ ಹೆತ್ತವರ ಬೆಂಬಲವಿಲ್ಲದೆ ನಾನು ಕ್ರಿಕೆಟ್‍ನಲ್ಲಿ ತೊಡಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಜೊತೆ ಆಡಿದ ಆಟಗಾರರು ಹಾಗೂ ಕೋಚ್‍ಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ಆಂಡರ್ಸನ್ 400 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಅಲ್ಲದೇ ವಿವಿಧ ಸ್ವರೂಪಗಳಲ್ಲಿ 987 ವಿಕೆಟ್‍ಗಳನ್ನು ಕಬಳಿಸಿದ್ದಾರೆ. 2015ರ ವಿಶ್ವಕಪ್‍ನಲ್ಲಿ ಅವರು ತಮ್ಮ ಕೊನೆಯ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರೂ. ಇದನ್ನೂ ಓದಿ: ರಿಷಭ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ – ಪಂತ್‌ ಒಂದು ಪಂದ್ಯದಿಂದ ಅಮಾನತು!

  • ತನ್ನ ದಾಖಲೆ ಮುರಿದ ಆಂಗ್ಲ ವೇಗಿಗೆ ಶುಭ ಹಾರೈಸಿದ ಕುಂಬ್ಳೆ

    ತನ್ನ ದಾಖಲೆ ಮುರಿದ ಆಂಗ್ಲ ವೇಗಿಗೆ ಶುಭ ಹಾರೈಸಿದ ಕುಂಬ್ಳೆ

    ಬೆಂಗಳೂರು: ಭಾರತ ತಂಡದ ಮಾಜಿ ದಿಗ್ಗಜ ಆಟಗಾರ ಕನ್ನಡಿಗ ಅನಿಲ್ ಕುಂಬ್ಳೆ ಅವರ ದೀರ್ಘ ಕಾಲದ ದಾಖಲೆಯೊಂದನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಮುರಿದಿದ್ದಾರೆ. ತನ್ನ ದಾಖಲೆ ಮುರಿದ ಜೇಮಿಗೆ ಕುಂಬ್ಳೆ ಶುಭಾಶಯವನ್ನು ಕೋರಿದ್ದಾರೆ.

    ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಕಬಳಿಸುವುದರೊಂದಿಗೆ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್‍ನಲ್ಲಿ 620 ವಿಕೆಟ್ ಕಿತ್ತರು. ಈ ವೇಳೆ ಕುಂಬ್ಳೆ ಅವರ 619 ವಿಕೆಟ್‍ಗಳ ಈ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಕುಂಬ್ಳೆ ತನ್ನ ದಾಖಲೆಯನ್ನು ಮುರಿದ ಆ್ಯಂಡರ್ಸನ್ ಅವರಿಗೆ ಧನ್ಯವಾದಗಳು ಒಬ್ಬ ವೇಗದ ಬೌಲರ್ ಈ ಸಾಧನೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ಟ್ಟಿಟ್ಟರ್‍ ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.  ಇದನ್ನೂ ಓದಿ: ಕುಂಬ್ಳೆ 10 ವಿಕೆಟ್ ವಿಶ್ವದಾಖಲೆ ನೆನಪಿಸಿದ ಬಿಸಿಸಿಐ

    ಆ್ಯಂಡರ್ಸನ್ 163 ಪಂದ್ಯಗಳಿಂದ 620 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ 132 ಪಂದ್ಯಗಳಿಂದ 619 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದರು ಇದೀಗ ಒಂದು ಸ್ಥಾನ ಕೆಳಗಿಳಿದು ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ 133 ಪಂದ್ಯಗಳಿಂದ 800 ವಿಕೆಟ್ ಪಡೆದು ಮೊದಲನೇ ಸ್ಥಾನವನ್ನು ಅಲಂಕರಿಸಿದ್ರೆ, ಆಸ್ಟ್ರೇಲಿಯಾದ ಶೇನ್ ವಾರ್ನ್ 145 ಪಂದ್ಯಗಳಿಂದ 708 ವಿಕೆಟ್ ಕಿತ್ತು ಎರಡನೇ ಸ್ಥಾನದಲ್ಲಿದ್ದಾರೆ.

  • ಅಂಪೈರ್ ಬಳಿ ಓವರ್ ಥ್ರೋ ರನ್ ರದ್ದುಮಾಡಿ ಎಂದು ಮನವಿ ಮಾಡಿದ್ದ ಬೆನ್ ಸ್ಟೋಕ್ಸ್

    ಅಂಪೈರ್ ಬಳಿ ಓವರ್ ಥ್ರೋ ರನ್ ರದ್ದುಮಾಡಿ ಎಂದು ಮನವಿ ಮಾಡಿದ್ದ ಬೆನ್ ಸ್ಟೋಕ್ಸ್

    ಲಂಡನ್: ಅಂಪೈರ್ ಬಳಿ ಓವರ್ ಥ್ರೋ ರನ್ ರದ್ದು ಮಾಡಿ ಎಂದು ಬೆನ್ ಸ್ಟೋಕ್ಸ್ ಮನವಿ ಮಾಡಿದ್ದರು ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ವೇಗದ ಬೌಲರ್ ಜೇಮ್ಸ್ ಅಂಡರ್ಸನ್ ಹೇಳಿದ್ದಾರೆ.

    ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 241 ರನ್ ಬೆನ್ನಟ್ಟಿದ ಇಂಗ್ಲೆಂಡ್ ಇನ್ನಿಂಗ್ಸ್‍ನ ಕೊನೆಯ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಡೀಪ್ ಮಿಡ್ ವಿಕೆಟ್ ಕಡೆಗೆ ಬಾಲನ್ನು ತಳ್ಳಿ ಎರಡು ರನ್ ಓಡಲು ಮುಂದಾದರು. ಈ ಸಮಯದಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಕಿವೀಸ್‍ನ ಮಾರ್ಟಿನ್ ಗುಪ್ಟಿಲ್ ಚೆಂಡನ್ನು ಹಿಡಿದು ವಿಕೆಟ್ ಕೀಪರ್ ಕಡೆಗೆ ಎಸೆದಿದ್ದರು.

    ಹೀಗೆ ಎಸೆದ ಚೆಂಡು ಎರಡು ರನ್ ಕದಿಯುವ ಯತ್ನದಲ್ಲಿ ಡೈವ್ ಹೊಡೆದ ಬೆನ್ ಸ್ಟೋಕ್ಸ್ ಅವರ ಬ್ಯಾಟ್‍ಗೆ ತಗಲಿ ಬೌಂಡರಿ ಸೇರಿತ್ತು. ನಂತರ ಈ ರನ್ ಬಗ್ಗೆ ಚರ್ಚೆ ನಡೆಸಿದ ಅನ್ ಫೀಲ್ಡ್ ಅಂಪೈರ್‍ ಗಳಾದ ಮಾರೈಸ್ ಎರಾಸ್ಮಸ್ ಮತ್ತು ಕುಮಾರ್ ಧರ್ಮಸೇನಾ ಅವರು ಇಂಗ್ಲೆಂಡ್‍ಗೆ ಆರು ರನ್ ನೀಡಿದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ.

    ಈ ವಿಚಾರವಾಗಿ ಮಾತನಾಡಿರುವ ಜೇಮ್ಸ್ ಅಂಡರ್ಸನ್ ಬೆನ್ ಸ್ಟೋಕ್ಸ್ ಘಟನೆ ನಡೆದ ತಕ್ಷಣವೇ ಅಂಪೈರ್ ಬಳಿ ಕ್ಷಮೆಯಾಚಿಸಿದ್ದರು. ತಮ್ಮ ನಿರ್ಧಾರವನ್ನು ರದ್ದುಗೊಳಿಸುವಂತೆ ಅಂಪೈರ್‍ ಗಳಿಗೆ ಮನವಿ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

    ಅಪೈರ್ ಅವರು ನೀಡಿದ ತೀರ್ಮಾನವನ್ನು ಸಮರ್ಥನೆ ಮಾಡಿಕೊಂಡಿರುವ ಜೇಮ್ಸ್ ಅಂಡರ್ಸನ್ ಥ್ರೋ ಮಾಡಿದಾಗ ಬಾಲು ಬ್ಯಾಟ್‍ಗೆ ಬಡಿದು ಅದು ಬೌಂಡರಿಗೆ ಹೋದರೆ ನಿಯಮಗಳ ಪ್ರಕಾರ ಅದು ಫೋರ್ ಎಂದೇ ಪರಿಗಣಿಸಲಾಗುತ್ತದೆ. ಅದಕ್ಕೆ ನಾವು ಏನೂ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.

    ಅಂಪೈರ್ ನಿರ್ಣಯದ ಬಗ್ಗೆ ಸೋಮವಾರವೇ ಪ್ರತಿಕ್ರಿಯೆ ನೀಡಿದ್ದ ಆಸ್ಟ್ರೇಲಿಯಾದ ಖ್ಯಾತ ಮಾಜಿ ಅಂಪೈರ್ ಸೈಮನ್ ಟಫೆಲ್ ಅವರು, ಫೈನಲ್ ಪಂದ್ಯದಲ್ಲಿ ಆನ್ ಫೀಲ್ಡ್ ಅಂಪೈರ್‍ ಗಳು ಓವರ್ ಥ್ರೋ ಕಾರಣಕ್ಕೆ 6 ರನ್ ನೀಡಿದ್ದು ತಪ್ಪು. ನಿಯಮಗಳ ಅನ್ವಯ ಅಲ್ಲಿ 5 ರನ್ ಮಾತ್ರ ನೀಡಬೇಕಿತ್ತು ಎಂದು ಹೇಳಿದ್ದರು.

    ಓವರ್ ಥ್ರೋ ಕುರಿತು ಫಾಕ್ಸ್ ನ್ಯೂಸ್‍ಗೆ ಪ್ರತಿಕ್ರಿಯೆ ನೀಡಿದ್ದ ಐಸಿಸಿಯ ವಕ್ತಾರರು, ಮೈದಾನದಲ್ಲಿರುವ ಅಂಪೈರ್ ಗಳು ಐಸಿಸಿಯ ನಿಯಮಗಳ ಪುಸ್ತಕವನ್ನು ಆಧಾರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಅಂಪೈರ್‍ ಗಳು ತೆಗೆದುಕೊಳ್ಳುವ ಈ ತೀರ್ಮಾನಗಳ ಬಗ್ಗೆ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದರು.

    ಕಾನೂನು ಏನು ಹೇಳುತ್ತೆ?
    ಓವರ್ ಥ್ರೋಗೆ ಸಂಬಂಧಿಸಿದ ಐಸಿಸಿಯ 19.8 ಕಾನೂನು ಪ್ರಕಾರ ಫೀಲ್ಡರ್ ಎಸೆದ ಬಾಲ್ ಓವರ್ ಥ್ರೋ ಅಥವಾ ಉದ್ದೇಶಪೂರ್ವಕವಾಗಿ ಬಾಲ್ ಎಸೆದಾಗ ಇಬ್ಬರು ಬ್ಯಾಟ್ಸ್ ಮನ್ ಗಳು ಪಿಚ್ ಮಧ್ಯದಲ್ಲಿ ಒಬ್ಬರನ್ನೊಬ್ಬರು ದಾಟಿದ್ದರೆ ಮಾತ್ರ ರನ್ ಪರಿಗಣಿಸಬೇಕು.

    ವಿವಾದ ಏನು?
    ಗುಪ್ಟಿಲ್ ಚೆಂಡನ್ನು ಎಸೆಯುವ ವೇಳೆ ಸ್ಟೋಕ್ಸ್ ಹಾಗೂ ಆದಿಲ್ ರಶೀದ್ ಒಬ್ಬರನ್ನೊಬ್ಬರನ್ನು ದಾಟಿರಲಿಲ್ಲ. ಎರಡನೇ ರನ್ ಪೂರ್ಣಗೊಳಿಸುವ ಸಂದರ್ಭದಲ್ಲಿ ಬಾಲ್ ಬ್ಯಾಟಿಗೆ ಬಡಿದ ಕಾರಣ ಚೆಂಡು ಬೌಂಡರಿಗೆ ಹೋಗಿದೆ. ಈ ಕಾರಣಕ್ಕೆ ಎರಡನೇಯ ರನ್ ಪರಿಗಣಿಸಬಾರದು. ಆದರೆ ಬೌಂಡರಿ ಜೊತೆಗೆ 2 ರನ್ ನೀಡಿದ ಪರಿಣಾಮ ಪಂದ್ಯ ಟೈ ಆಗಿದೆ. 5 ರನ್ ಮಾತ್ರ ನೀಡಿದ್ದರೆ ನ್ಯೂಜಿಲೆಂಡ್ ಜಯಗಳಿಸುತಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ವಾದಿಸುತ್ತಿದ್ದಾರೆ.

  • ಗಾಲ್ಫ್ ಆಡುವಾಗ ಎಡವಟ್ಟು ಮಾಡ್ಕೊಂಡ ಜೇಮ್ಸ್ ಆ್ಯಂಡರಸನ್

    ಗಾಲ್ಫ್ ಆಡುವಾಗ ಎಡವಟ್ಟು ಮಾಡ್ಕೊಂಡ ಜೇಮ್ಸ್ ಆ್ಯಂಡರಸನ್

    -ಸ್ಮೈಲಿ ಎಮೋಜಿ ಹಾಕಿದ ಸ್ಟುವರ್ಟ್ ಬ್ರಾಡ್

    ಲಂಡನ್: ಇಂಗ್ಲೆಂಡ್ ಬೌಲರ್ ಜೇಮ್ಸ್ ಆ್ಯಂಡರಸನ್ ಗಾಲ್ಫ್ ಆಡುವ ವೇಳೆ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ಜೇಮ್ಸ್ ಗಾಲ್ಫ್ ಆಡುವ ಆಟದ ವಿಡಿಯೋವನ್ನು ಬೌಲರ್ ಸ್ಟುವರ್ಟ್ ಬ್ರಾಡ್ ತಮ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ತುಂಬಾ ಮರಗಳ ಮಧ್ಯದಲ್ಲಿ ಜೇಮ್ಸ್ ಆ್ಯಂಡರಸನ್ ಗಾಲ್ಫ್ ಆಡುವ ಸಾಹಸಕ್ಕೆ ಮುಂದಾಗಿದ್ದಾರೆ. ಚೆಂಡನ್ನು ಸ್ಟಿಕ್‍ನಿಂದ ಹೊಡೆದಾಗ ಅದು ಎದುರಿಗೆ ಮರಕ್ಕೆ ತಾಗಿ ಜೇಮ್ಸ್ ಮುಖಕ್ಕೆ ತಗುಲಿದೆ. ಈ ಎಲ್ಲ ದೃಶ್ಯಗಳಿರುವ ವಿಡಿಯೋವನ್ನು ಬ್ರಾಡ್ ತಮ್ಮ ಟ್ವಿಟ್ಟರ್ ಹಾಕಿಕೊಂಡು, ಜೇಮ್ಸ್ ಚೆನ್ನಾಗಿದ್ದು, ಹೆಚ್ಚಿನ ಗಾಯಗಳಾಗಿಲ್ಲ ಎಂದು ಹೇಳುತ್ತಾ ಕೊನೆಗೆ ನಗುತ್ತಿರುವ ಎಮೋಜಿಗಳನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಜೇಮ್ಸ್, ನನಗೆ ಏನೂ ಆಗಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಎಜ್‍ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟದ ಬಳಿಕವೂ ಇಂಗ್ಲೆಂಡ್ 31 ರನ್ ರೋಚಕ ಗೆಲುವು ಪಡೆದಿತ್ತು. ಈ ಮೂಲಕ ಐತಿಹಾಸಿಕ 1000 ನೇ ಟೆಸ್ಟ್ ಪಂದ್ಯ ಗೆದ್ದು ಇಂಗ್ಲೆಂಡ್ ಡಬಲ್ ಸಂಭ್ರಮವನ್ನು ಆಚರಿಸಿತ್ತು.

    110ಕ್ಕೆ 5 ವಿಕೆಟ್ ಕಳೆದು ಕೊಂಡು ನಾಲ್ಕನೇಯ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಗೆಲ್ಲಲು 84 ರನ್ ಗಳು ಮಾತ್ರ ಅಗತ್ಯವಿತ್ತು. ಆದರೆ ದಿನದಾಟದ ಆರಂಭದಲ್ಲೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (20) ಔಟಾಗುವ ಮೂಲಕ ಟೀಂ ಇಂಡಿಯಾ ಆಘಾತ ಎದುರಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕ ವಿರಾಟ್ ಕೊಹ್ಲಿ 2ನೇ ಇನ್ನಿಂಗ್ಸ್ ನಲ್ಲೂ ದಿಟ್ಟ ಹೋರಾಟ ನಡೆಸಿ ಅರ್ಧಶತಕ ಗಳಿಸಿದ್ದರು. ಆದರೆ ಈ ವೇಳೆ 51 ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ತಂಡಕ್ಕೆ ಆಘಾತ ನೀಡಿದ್ದರು. ಕೊಹ್ಲಿ ವಿಕೆಟ್ ಕಳೆದುಕೊಂಡ ವೇಳೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಆದರೆ ಅದೇ ಓವರ್ ನಲ್ಲಿ ಮಹಮ್ಮದ್ ಶಮಿ ವಿಕೆಟ್ ಪಡೆದ ಬೆನ್ ಸ್ಟೋಕ್ಸ್ ತಂಡಕ್ಕೆ ಡಬಲ್ ಅಘಾತ ನೀಡಿದ್ದರು.

    ಮೊದಲ ಟೆಸ್ಟ್ ಪಂದ್ಯದ ಆರಂಭದಿಂದಲೂ ಏಳು ಬೀಳು ಕಂಡ ವಿರಾಟ್ ಬಳಗ ಕೊನೆಗೂ ಸೋಲುಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಪಂದ್ಯದ ನಂತರ ಮಾತನಾಡಿದ ಟೀಂ ಇಂಡಿಯಾ ಕ್ಯಾಪ್ಟನ್ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಸೋಲಲು ತಂಡದ ಆಟಗಾರರ ಕಳಪೆ ಬ್ಯಾಟಿಂಗ್ ಕಾರಣ. ಆದರೆ ರೋಚಕ ಪಂದ್ಯದಲ್ಲಿ ಭಾಗವಹಿಸಿದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews