Tag: Jameer Ahmed

  • ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರಕ್ಕೆ ನೂರರಷ್ಟು ನೀರು ಸಿಗಲಿದೆ: ಮುನಿಯಪ್ಪ ವಿಶ್ವಾಸ

    ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರಕ್ಕೆ ನೂರರಷ್ಟು ನೀರು ಸಿಗಲಿದೆ: ಮುನಿಯಪ್ಪ ವಿಶ್ವಾಸ

    ಕೋಲಾರ : ಎತ್ತಿನಹೊಳೆ ಯೋಜನೆಯಲ್ಲಿ (Ettinahole Scheme) ಕೋಲಾರಕ್ಕೆ ನೂರಕ್ಕೆ ನೂರರಷ್ಟು ನೀರು ಸಿಗುತ್ತದೆ. ಯೋಜನೆಗಾಗಿ ಅನೇಕ ಹೋರಾಟಗಳು ಆಗಿವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

    ಕೋಲಾರದ (Kolar) ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಅಹ್ಮದ್ (Jameer Ahmed) ಮನೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ 20 ರಿಂದ 24 ಟಿಎಂಸಿ ನೀರು ಸಿಗಲಿದ್ದು, ಸಿಎಂ ಸಹ ಆಶ್ವಾಸನೆ ನೀಡಿದ್ದಾರೆ. ಮೊದಲು ಕುಡಿಯುವ ನೀರಿಗೆ ನೀರು ಹರಿಸಿ ಎರಡನೇ ಹಂತದಲ್ಲಿ ಕೆರೆಗಳಿಗೆ ಹರಿಸುವುದಾಗಿ, ಒಂದು ವರ್ಷದಲ್ಲಿ ಕೋಲಾರದ ನಂಗಲಿಯವರೆಗೂ ನೀರು ಹರಿಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ: ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ

    ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯಲು ನೀರು ಹರಿಸಲಾಗುವುದು ಎಂದರು. ಅಲ್ಲದೆ ಹಾಸನದಿಂದ ನಮಗೆ ನೀರು ಹರಿಸಲು 16 ಟಿಎಂಸಿ ನೀರು ಸಾಕು, ಬಯಲು ಸೀಮೆಯ 7 ಜಿಲ್ಲೆಗಳಿಗೆ ಮೊದಲು ಕುಡಿಯುವ ನೀರು ಪೂರೈಕೆ, ಉಳಿದ ನೀರು ಕೆರೆಗೆ ಹರಿಸಲಾಗುವುದು, ಹೇಮಾವತಿಯಿಂದ ನೀರು ಆರಂಭವಾಗಲಿದ್ದು, ದಾರಿಯಲ್ಲಿ ಸಿಗುವ ಊರುಗಳಿಗೆ ನೀರು ಕೊಡಬೇಕಾಗಿದೆ, ಕೋಲಾರಕ್ಕೆ 3 ರಿಂದ 4 ಟಿಎಂಸಿ ನೀರು ಬರಲಿದೆ ಎಂದರು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ ಕೇಸನ್ನ ಆತ್ಮಹತ್ಯೆ ಅಂತ ಬಿಂಬಿಸಲು ಯತ್ನಿಸಿದ್ದರು: ಸಿಬಿಐ ರಿಮ್ಯಾಂಡ್‌ ಕಾಪಿಯಲ್ಲಿ ರಹಸ್ಯ ಸ್ಫೋಟ!

    ಕೊರಟಗೆರೆವರೆಗೂ ಕಾಲುವೆ ಮುಖಾಂತರ ನೀರು ಬರುತ್ತದೆ. ನಂತರ ದೊಡ್ಡಬಳ್ಳಾಪುರದಿಂದ ಪೈಪ್ ಲೈನ್ ಮಾಡಲಾಗುವುದು, ನೀರು ಕದಿಯುವರಿಗೆ ಕಠಿಣ ಶಿಕ್ಷೆ ನೀಡಲಾಗುವುದೆಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಯುವಕರ ಬೈಕ್‌ ರ‍್ಯಾಲಿಗೆ ಅನುಮತಿ – ಬಿ.ಸಿ ರೋಡ್‌ನಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ

  • ಧಮ್‌ ಇದ್ರೆ ನನ್‌ ಬಗ್ಗೆ ಒಂದು ಮಾತಾಡಲಿ; ಮನೆಗೆ ನುಗ್ತೀನಿ – ಬಿಜೆಪಿ ಸಚಿವರೊಬ್ಬರ ವಿರುದ್ಧ ನಾಲಿಗೆ ಹರಿಬಿಟ್ಟ ಜಮೀರ್‌

    ಧಮ್‌ ಇದ್ರೆ ನನ್‌ ಬಗ್ಗೆ ಒಂದು ಮಾತಾಡಲಿ; ಮನೆಗೆ ನುಗ್ತೀನಿ – ಬಿಜೆಪಿ ಸಚಿವರೊಬ್ಬರ ವಿರುದ್ಧ ನಾಲಿಗೆ ಹರಿಬಿಟ್ಟ ಜಮೀರ್‌

    ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವ್ಯಂಗ್ಯವಾಡಿದ್ದ ಬಿಜೆಪಿ ಸಚಿವರೊಬ್ಬರನ್ನು ಟೀಕಿಸೋ ಭರದಲ್ಲಿ ಶಾಸಕ ಜಮೀರ್‌ ಅಹ್ಮದ್‌ (Jameer Ahmed) ನಾಲಿಗೆ ಹರಿಬಿಟ್ಟಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapura) ನಗರದ ನಕ್ಕಲಕುಂಟೆ ಬಡಾವಣೆಯಲ್ಲಿ ಮತಯಾಚನೆ ವೇಳೆ ಸಚಿವ ಡಾ. ಕೆ.ಸುಧಾಕರ್‌ (Sudhakar) ವಿರುದ್ಧ ಜಮೀರ್‌ ವಾಗ್ದಾಳಿ ನಡೆಸಿದ್ದಾರೆ. “ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯ ಮಾಡಿದ್ದಲ್ಲ. ಧಮ್‌ ಇದ್ರೆ ನನ್ನ ಮೇಲೆ ಒಂದು ಮಾತು ಮಾತಾಡಲಿ. ಮನೆಗೆ ನುಗ್ಲಿಲ್ಲ ಅಂದ್ರೆ ನನ್ನ ಹೆಸರು ಜಮೀರ್‌ ಅಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕುಟುಂಬದ ನಡುವೆ ಬೇರೆ ಒಂದು ಮುಖವಿರಲಿ ಎಂದು ಇಬ್ರಾಹಿಂಗೆ ಮಣೆ: ಈಶ್ವರಪ್ಪ ವ್ಯಂಗ್ಯ

    ನಕ್ಕಲಕುಂಟೆ ಬಡಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಜಮೀರ್‌ ಪ್ರಚಾರ ನಡೆಸುತ್ತಿದ್ದರು. ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದಾರೆ.

    ಇದೇ ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ರಾಜಕೀಯ ನಾಯಕರು ಪರಸ್ಪರ ವಾಕ್ಸಮರ ನಡೆಸುತ್ತಿದ್ದಾರೆ. ರಾಜಕೀಯ ವಿಚಾರವಾಗಿ ಒಬ್ಬರಿಗೊಬ್ಬರು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: `ಮೋದಿ ವಿಷ ಸರ್ಪ, ಸೋನಿಯಾ ವಿಷಕನ್ಯೆ’ ಹೇಳಿಕೆ – ಖರ್ಗೆ, ಯತ್ನಾಳ್ ವಿರುದ್ಧ ದೂರು

  • ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು: ಬಿ.ಸಿ.ನಾಗೇಶ್ ಟಾಂಗ್

    ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು: ಬಿ.ಸಿ.ನಾಗೇಶ್ ಟಾಂಗ್

    ರಾಯಚೂರು: ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು ಎಂದು ಸಚಿವ ಬಿ.ಸಿ.ನಾಗೇಶ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.

    ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ವೇಳೆ ಗಲಾಟೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ನಾಯಕರ ಮೇಲೆಯೂ ದಾಳಿಗಳು ನಡೆದಿದೆ. ನಮ್ಮ ವಿಚಾರಣೆ ಬಂದಾಗ ಕಲ್ಲು ಹೊಡೆಯಿರಿ, ಬಂದ್ ಮಾಡಿ ಅಂತ ಹೇಳಿಲ್ಲ. ಇಷ್ಟು ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷ ದೇಶವನ್ನ ಈ ಸ್ಥಿತಿಗೆ ತಂದಿದೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಪಾಪುವಿನಂತೆ ರಾಹುಲ್ ಗಾಂಧಿಯನ್ನು ಮುದ್ದು ಮಾಡಿದ ಅಜ್ಜಿ

    ಸಂವಿಧಾನದ ಪ್ರಕಾರ ರಚನೆಯಾದ ಸಂಸ್ಥೆಗಳಿಗೆ ತನ್ನದೇ ಆದ ಕೆಲಸಗಳು ನೀಡಿದೆ. ಎಸಿಬಿ, ಇಡಿ ರಚನೆ ಮಾಡಿದ್ದು, ಬಿಜೆಪಿ ಸರ್ಕಾರದಲ್ಲಿ ಅಲ್ಲ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿಯೂ ಅಲ್ಲ. ವಿಚಾರಣೆಗಳು ನಡೆಸಿದ್ದು, ಬಿಜೆಪಿ ಬಂದ ಮೇಲೆಯೂ ಅಲ್ಲ. ಅನೇಕ ವರ್ಷಗಳಿಂದ ವಿಚಾರಗಳು ನಡೆದಿವೆ. ಅನೇಕ ನಾಯಕರು ಇಡಿ ಮತ್ತು ಎಸಿಬಿ ವಿಚಾರಣೆಗಳಿಗೆ ಹಾಜರ್ ಆಗುತ್ತಿದ್ದಾರೆ. ಎಸಿಬಿ ರೆಡ್ ಆಗಿದ್ದಾಗ ಅವರು ಶುದ್ಧರಾಗಿದ್ರೆ ಏಕೆ ಹೆದರಬೇಕು ಎಂದು ಸವಾಲು ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಬಹುಶಃ ಬೆಂಗಳೂರು ಗಲಭೆಯ ಡೈರಕ್ಟ್ರು-ಪ್ರೊಡ್ಯೂಸರ್ ಜಮೀರ್ ಅನ್ಸುತ್ತೆ: ಸಿ.ಟಿ.ರವಿ

    ಬಹುಶಃ ಬೆಂಗಳೂರು ಗಲಭೆಯ ಡೈರಕ್ಟ್ರು-ಪ್ರೊಡ್ಯೂಸರ್ ಜಮೀರ್ ಅನ್ಸುತ್ತೆ: ಸಿ.ಟಿ.ರವಿ

    ಚಿಕ್ಕಮಗಳೂರು: ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು. ಅವರೇ ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ರೆ ನಟರು ಯಾರೆಂದು ಗೊತ್ತೇ ಗೊತ್ತಿರುತ್ತೆ ಅದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಮೀರ್ ಅಹಮದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಮೀರ್ ಅಹಮದ್ ಗೋಲಿಬಾರ್ ನಲ್ಲಿ ಮೃತರಾದವರ ಮನೆಗೆ ಹೋಗಿ ಚೆಕ್ ನೀಡಿ ಬಂದಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು ಎಂದು ಕಿಡಿಕಾರಿದ್ದಾರೆ. ಈಗ ಜಮೀರ್ ಅಹಮದ್ ಎಲ್ಲ ಜಿಪಿಎ ತೆಗೆದುಕೊಂಡಿರುವುದರಿಂದ ಏನ್ ನಷ್ಟ ಆಗಿದೆ ಅದನ್ನು ಜಮೀರ್ ಅಹಮದ್‍ರಿಂದ ವಸೂಲಿ ಕ್ರಮ ತೆಗೆದುಕೊಳ್ಳೋಣ ಎಂದರು.

    ನೀವು ಸಹಾಯ ಮಾಡುವುದು ಮಾನವೀಯ ಧರ್ಮ ಇರಬಹುದು. ಯಾವ ಸಂದರ್ಭದಲ್ಲಿ ಸಹಾಯ ಮಾಡ್ತಿದ್ದೀರಾ, ಯಾರಿಗೆ ಸಹಾಯ ಮಾಡ್ತಿದ್ದೀರಾ ಎಂಬುದು ಮುಖ್ಯವಾಗುತ್ತೆ. ಅದು ಕೊಡುವ ಮೆಸೇಜ್ ಮಾನವೀಯ ಮೆಸೇಜ್ ಕೊಡುವುದಿಲ್ಲ. ಯಾರು ಏನೇ ಮಾಡಿದರು, ನಾನು ನಿಮ್ಮ ಜೊತೆ ಇದ್ದೀನಿ ಎಂಬ ಮೇಸೆಜ್ ಕೊಡುತ್ತೆ. ಇದರ ಬಗ್ಗೆ ಅವರ ಪಕ್ಷ ಯೋಚಿಸಬೇಕು ಎಂದರು. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರು ಜೈಲಿನಿಂದ ಬಂದರೆ ಅವರಿಗೆ ಹಾರ ಹಾಕಿ ಸನ್ಮಾನ ಮಾಡುತ್ತಾರೆ. ಅವರಿಗೆ ಪ್ರಚೋದಿಸುವ ಕೆಲಸವನ್ನು ಜಮೀರ್ ಮಾಡುತ್ತಿದ್ದಾರೆ ಎಂದರು.

    ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರಲ್ಲ. ಅಮಾಯಕರಾಗಿದ್ದರೆ ಮನೆಯಲ್ಲಿ ಮಲಗಿರೋರು. 300ಕ್ಕೂ ಹೆಚ್ಚು ವಾಹನ ಸುಟ್ಟಿದ್ದಾರೆ. ಆ ವಾಹನ ಸುಟ್ಟವರು ಯಾರು ಹೇಳಲಿ ಹಾಗಾದರೆ. ಇವರು ಅಮಾಯಕರಾದರೆ ಆ ಕಿರಾತಕರು ಯಾರು. ಜಮೀರ್ ಅಹಮದ್ ಖಾನ್‍ಗೆ ಚೆನ್ನಾಗಿ ಗೊತ್ತಿರುತ್ತೆ ಎಂದಿದ್ದಾರೆ. ನಷ್ಟ ವಸೂಲಿ ಕೆಲಸ ಆಗಲೇಬೇಕು. ಈಗಿನ ಕಾಂಗ್ರೆಸ್ ಒಳ ರಾಜಕಾರಣ ನೋಡಿದರೆ ಅವರು ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸದರು.

    ಬೆಂಗಳೂರು ಗಲಭೆಯನ್ನು ಲೀಡ್ ಮಾಡಿರೋದು ಎಸ್.ಡಿ.ಪಿ.ಐ. ಅದರಲ್ಲಿ ನಟನೆ ಮಾಡಿ 300ಕ್ಕೂ ಹೆಚ್ಚು ವಾಹನ ಸುಟ್ಟಿರೋರು ಈ ಜನ. ಅವರಿಗೆ ಗೊತ್ತಿರುತ್ತೆ ಸ್ಪಷ್ಟಪಡಿಸಲಿ ಎಂದಿದ್ದಾರೆ. ನಾನು ಆರಂಭದಿಂದ ಹೇಳಿದ್ದೇನೆ. ಕಾಂಗ್ರೆಸ್ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟೋ ಕೆಲಸ ಮಾಡುತ್ತಿದೆ. ಜಮೀರ್ ಅಹಮದ್ ಮಾಡುತ್ತಿರುವುದು ಅದನ್ನೇ ಎಂದು ಕಾಂಗ್ರೆಸ್ ಹಾಗೂ ಜಮೀರ್ ಅಹಮದ್ ವಿರುದ್ಧ ಕಿಡಿಕಾರಿದ್ದಾರೆ.

  • ರೇವಣ್ಣನ ಜ್ಯೋತಿಷ್ಯ, ಯಾವ ನಿಂಬೆ ಹಣ್ಣು ನಡೆಯಲ್ಲ : ರೇಣುಕಾಚಾರ್ಯ ಸವಾಲು

    ರೇವಣ್ಣನ ಜ್ಯೋತಿಷ್ಯ, ಯಾವ ನಿಂಬೆ ಹಣ್ಣು ನಡೆಯಲ್ಲ : ರೇಣುಕಾಚಾರ್ಯ ಸವಾಲು

    ಹುಬ್ಬಳ್ಳಿ: ರೇವಣ್ಣನ ಜ್ಯೋತಿಷ್ಯ, ಯಾವ ನಿಂಬೆ ಹಣ್ಣು ನಡೆಯುವುದಿಲ್ಲ. ಯಡಿಯೂರಪ್ಪನವರು ಸಿಎಂ ಆಗೇ ಆಗುತ್ತಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬಿಎಸ್‍ವೈ ಸಿಎಂ ಆಗುವುದಿಲ್ಲ ಎನ್ನುವ ರೇವಣ್ಣ ಹೇಳಿಕೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಎಸ್‍ವೈ ಸಿಎಂ ಆಗಿಯೇ ಆಗುತ್ತಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಸಿಎಂ ಆಗದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ತಡೆಯಲಿ ನೋಡೋಣ ಎಂದು ಅವರು ಸವಾಲು ಹಾಕಿದರು.

    ಡಿಕೆಶಿ ಅವರು ಮಹಾ ಚತುರ. ಅವರು ಕುಂದಗೋಳಕ್ಕೆ ಬಂದು ಬೂಟಾಟಿಕೆ ಮಾಡುತ್ತಿದ್ದಾರೆ. ಭ್ರಷ್ಟದ ಹಣವನ್ನು ಇಲ್ಲಿ ನೀರು ಸುರಿಯುವ ರೀತಿ ಮತತದಾರನ್ನು ಖರೀದಿಸಲು ಸುರಿಯುತ್ತಿದ್ದಾರೆ. ಆದರೆ ಇಲ್ಲಿ ಇದ್ಯಾವುದು ನಡೆಯುವುದಿಲ್ಲ ಎಂದು ಕಿಡಿಕಾರಿದರು.

    ಜಮೀರ್ ಅಹ್ಮದ್ ಅವರ ಬಗ್ಗೆ ಮಾತನಾಡಿ, ಜಮೀರ್ ಏನು ಎಂದು ನನಗೆ ಚೆನ್ನಾಗಿ ಗೊತ್ತು. ಅವರ ನಾಲಿಗೆಗೆ ಲಗಾಮು ಇಲ್ಲ. ಅವರು ಒಬ್ಬ ಕೋಮುವಾದಿ. ಕೇವಲ ಮುಸ್ಲಿಂ ಪರ ಮಾತ್ರ ಇರುವವರು. ಏನೋ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿಬಿಟ್ಟಿದ್ದಾರೆ. ಮೊದಲು ಸಿಎಂ ಕುಮಾರಸ್ವಾಮಿ ವಿರುದ್ಧ ಇದ್ದವರು ಇಂದು ಅಧಿಕಾರಕ್ಕಾಗಿ ಅವರನ್ನು ಹೊಗಳುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

    ಕುಂದಗೋಳ ಕ್ಷೇತ್ರದಲ್ಲಿ ಮತದಾರರಿಗೆ ಬಿಜೆಪಿ ಪರ ಒಲವು ಇದೆ. ಪ್ರಧಾನಿ ನರೇಂದ್ರ ಮೋದಿ ಎರಡನೆ ಬಾರಿ ಪ್ರಧಾನಿಯಾಗಿ, ಮತ್ತೆ ಪ್ರಹ್ಲಾದ ಜೋಶಿ ಅವರು ಸಂಸದರಾಗುತ್ತಾರೆ ಎಂಬ ನಂಬಿಕೆ ಇದೆ ಎಂದರು.

    ಬಳಿಕ ಕಾಂಗ್ರೆಸ್ಸಿನವರು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಡಿಕೆಶಿ ಇಲ್ಲಿ ಅಭಿವೃದ್ಧಿಪರವಾಗಿ ಮತಯಾಚನೆ ಮಾಡುತ್ತಿಲ್ಲ. ಇಂದು ಇಲ್ಲಿಗೆ ಬಂದು ಬೂಟಾಟಿಕೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಣದ ಆಮಿಷವೊಡ್ಡಿ ಮತದಾರರನ್ನು ಒಲಿಸಲು ಪ್ರಯತ್ನಿಸುತ್ತಿದ್ದಾರೆ. ಒಂದೆಡೆ ಡಿಕೆಶಿ ಸಿಎಂ ಆಗಬೇಕು ಎಂದು ಕೋಟಿಗಟ್ಟೆಲೆ ಹಣವನ್ನು ಖರ್ಚು ಮಾಡಿದ್ದಾರೆ. ಇನ್ನೊಂದೆಡೆ ಚಿಂಚೊಳ್ಳಿಯಲ್ಲಿ ಸಚಿವ ಎಂ.ಬಿ ಪಾಟೀಲ್ ಕೂಡ ಸಿಎಂ ಸ್ಥಾನಕ್ಕಾಗಿ ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡಿದ್ದಾರೆ ಎಂದು ಆರೋಪಿಸಿದರು.

  • ಶೋಭಕ್ಕನಿಗೆ ತಲೆಕೆಟ್ಟಿದ್ದು, ಕರೆದ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು: ಜಮೀರ್

    ಶೋಭಕ್ಕನಿಗೆ ತಲೆಕೆಟ್ಟಿದ್ದು, ಕರೆದ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು: ಜಮೀರ್

    ಹುಬ್ಬಳ್ಳಿ: ಮೊದಲು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು. ಅವರ ತಲೆ ಕೆಟ್ಟಿದೆ ಎಂದು ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.

    ಜಮೀರ್ ಅವರನ್ನು ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕೆಂಬ ಎಂದು ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಶೋಭಕ್ಕನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು. ಅವರ ತಲೆ ಕೆಟ್ಟು ಹೋಗಿದೆ. ಅವರಿಗೇನಾಗಿದೆ? ಅವರು ಶಾಸಕರಾಗಿ ಇಲ್ಲಿ ಇರಬೇಕಾಗಿತ್ತು. ಆದರೆ ಕೇಂದ್ರಕ್ಕೆ ಹೋಗಿರುವುದರಿಂದ ಅವರ ತಲೆ ಕೆಟ್ಟಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ:ಸಚಿವ ಜಮೀರ್ ತಲೆಕೆಟ್ಟಿದೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು: ಕರಂದ್ಲಾಜೆ ಕಿಡಿ

    ಜಮೀರ್ ಹಿಂಗೆ ಹೇಳಿದರು ಹಂಗೆ ಹೇಳಿದರು ಎಂದು ನಿನ್ನೆ ಶೋಭಕ್ಕ ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಆದರೆ ತಲೆ ಬೋಳಿಸಿಕೊಳ್ತೀನಿ ಎಂದು ಪೊಳ್ಳು ಹೇಳಿಕೆ ಕೊಡುತ್ತೇನೆ ಎಂದು ಆರೋಪಿಸಿದ್ದಾರೆ. ಯಾವತ್ತು ಮಾತಿನ ಪ್ರಕಾರ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ. ಹೀಗಾಗಿ ಶೋಭಾ ಅವರಿಗೆ ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ. ನಾನು ಅವತ್ತು ಹೇಳಿದ್ದು ನಿಜ. ಅವರಿಗೆ 113 ಸೀಟ್ ಬರಲ್ಲ, ಸಂಪೂರ್ಣ ಬಹುಮತ ಬಂದು ಕುಮಾರಸ್ವಾಮಿ ಅವರು ಸಿಎಂ ಆದರೆ ಒಂದು ಕಡೆ ತಲೆ ಹಾಗೂ ಮೀಸೆ ಬೋಳಿಸಿಕೊಂಡು ಒಂದು ತಿಂಗಳು ಹಾಗೆ ಇರುತ್ತೇನೆ ಎಂದು ಹೇಳಿದ್ದೆ. ಆದ್ರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

  • ‘ಕೈ’ ನಿಂದ ನಮ್ಗೆ ಟಿಕೆಟ್, ಜೆಡಿಎಸ್ 120 ಸ್ಥಾನ ಗೆದ್ದರೆ ರಾಜಕೀಯ ಸನ್ಯಾಸ: ಜಮೀರ್ ಅಹಮದ್

    ‘ಕೈ’ ನಿಂದ ನಮ್ಗೆ ಟಿಕೆಟ್, ಜೆಡಿಎಸ್ 120 ಸ್ಥಾನ ಗೆದ್ದರೆ ರಾಜಕೀಯ ಸನ್ಯಾಸ: ಜಮೀರ್ ಅಹಮದ್

    ರಾಮನಗರ: ನಾವು ಇರುವುದು ಏಳು ಜನರಲ್ಲ 14 ಜನರಿದ್ದೇವೆ. ಮುಂದಿನ ಚುನಾವಣೆಯಲ್ಲಿ ನಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ ಎಂದು ಜೆಡಿಎಸ್‍ನ ಬಂಡಾಯ ಶಾಸಕ ಜಮೀರ್ ಅಹಮದ್ ಹೇಳಿದ್ದಾರೆ.

    ಜಿಲ್ಲೆಯ ಮಾಗಡಿಯಲ್ಲಿ ಇಂದು ನಡೆದ ಶ್ರೀ ಶಿವಕುಮಾರ ಸ್ವಾಮೀಜಿಯವರ 110ನೇ ಗುರುವಂದನ ಕಾರ್ಯಕ್ರಮದಲ್ಲಿ ಜಮೀರ್ ಅಹಮದ್ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು ನಾವು 15 ಜನ ಜೆಡಿಎಸ್ ಶಾಸಕರು ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇವೆ. ಜೆಡಿಎಸ್ ಪಕ್ಷ ಮುಂದಿನ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುತ್ತದೆ ಎನ್ನುವುದು ಸುಳ್ಳು. ಒಂದು ವೇಳೆ 120 ಸ್ಥಾನಗಳನ್ನು ಗೆದ್ದರೆ ತಾವು ರಾಜಕೀಯವಾಗಿ ಸನ್ಯಾಸ ತೆಗೆದುಕೊಳ್ಳುವುದಲ್ಲದೇ ರಾಜ್ಯವನ್ನೇ ತೊರೆಯುವುದಾಗಿ ಅವರು ತಿಳಿಸಿದರು.

    ಇನ್ನೂ ತಮಗೆ ಕಾಂಗ್ರೆಸ್‍ನಿಂದ ಟಿಕೆಟ್ ಸಿಗಲಿದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ನೀಡಿದೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಹೊಂದಾಣಿಕೆ ಮಾಡಿಕೊಂಡ್ರೂ ನಾವು ಜೆಡಿಎಸ್ ಪಕ್ಷಕ್ಕೆ ಹೋಗುವುದಿಲ್ಲವೆಂದು ಜಮೀರ್ ಅಹಮದ್ ಹೇಳಿದರು.