Tag: Jameer Ahamed

  • ಶೇ.90ರಷ್ಟು ಮುಸ್ಲಿಮರು ಮತ ಹಾಕಿದ್ರೆ ರಾಹುಲ್ ಗಾಂಧಿಯೇ ಪ್ರಧಾನಿ: ಜಮೀರ್

    ಶೇ.90ರಷ್ಟು ಮುಸ್ಲಿಮರು ಮತ ಹಾಕಿದ್ರೆ ರಾಹುಲ್ ಗಾಂಧಿಯೇ ಪ್ರಧಾನಿ: ಜಮೀರ್

    ಚಿಕ್ಕಬಳ್ಳಾಪುರ: ದೇಶದಲ್ಲಿನ ಶೇ.90ರಷ್ಟು ಮುಸ್ಲಿಮ್ ಬಾಂಧವರು ಮತದಾನ ಮಾಡಿದರೆ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಆಗಲಿದ್ದಾರೆ. ಅದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನೂತನ ಶಾದಿಮಹಲ್ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈಗ ಶೇ.50ರಷ್ಟು ಮುಸ್ಲಿಮ್ ಬಾಂಧವರು ಮಾತ್ರ ಮತದಾನ ಮಾಡುತ್ತಿದ್ದಾರೆ. ಉಳಿದ ಶೇ.50 ರಷ್ಟು ಮಂದಿ ಮತದಾನ ಮಾಡುವುದಿಲ್ಲ. ಹೀಗಾಗಿಯೇ ಕಳೆದ ಬಾರಿ ಮೋದಿ ಈ ದೇಶದ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ ಎಂದು ಹೇಳಿದರು.

    ಈ ಬಾರಿ ಶೇ.90ರಷ್ಟು ಮುಸ್ಲಿಂ ಬಾಂಧವರು ಮತದಾನ ಮಾಡಿದರೆ ಈ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಲ್ಲದೇ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

    ಮುಂದಿನ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲು ತಯಾರಾಗಿರುವ ಸಂಸದ ವೀರಪ್ಪ ಮೊಯ್ಲಿಗೆ ಅವರಿಗೆ ಮತ ನೀಡುವಂತೆ ಜಮೀರ್ ಅವರು ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಈ ಜಮೀರ್ ಅಹಮದ್‍ಗೆ ಏನೂ ಗೊತ್ತಿಲ್ಲ ಅಂತ ಕೆಲವರು ಹೇಳುತ್ತಾರೆ. ಹೌದು ನನಗೆ ಏನೂ ಗೊತ್ತಿಲ್ಲ, ನಾನೊಬ್ಬ ಹೆಬ್ಬೆಟ್ಟು ಎಂದರು.

    ಪುಲ್ವಾಮಾ ಉಗ್ರರ ದಾಳಿಯನ್ನು ಖಂಡಿಸಿದ ಜಮೀರ್ ಅಹಮದ್, ಮೃತಪಟ್ಟವರಲ್ಲಿ ಮುಸ್ಲಿಂ ಇದ್ದಾರಾ? ಹಿಂದೂಗಳು ಇದ್ದಾರಾ? ಕ್ರಿಶ್ಚಿಯನ್, ಸಿಖ್ ಇದ್ದರಾ? ಅಂತ ನೋಡಿದ್ರ ಇಲ್ಲವಲ್ಲ. ಹುತಾತ್ಮ ಯೋಧರಲ್ಲಿ ಓರ್ವ ಮುಸ್ಲಿಂ ಯೋಧನೂ ಸಹ ಇದ್ದ. ಹೀಗಾಗಿ ನಾವೆಲ್ಲರೂ ಹಿಂದೂಸ್ತಾನದವರು ಎಂದು ಸಂದೇಶ ಸಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನ್ನಭಾಗ್ಯ ಅಕ್ಕಿ ಮತ್ತೆ 7 ಕೆಜಿಗೆ – ಬುಧವಾರ ಘೋಷಣೆ?

    ಅನ್ನಭಾಗ್ಯ ಅಕ್ಕಿ ಮತ್ತೆ 7 ಕೆಜಿಗೆ – ಬುಧವಾರ ಘೋಷಣೆ?

    ಬೆಂಗಳೂರು: ಬಜೆಟ್ ನಲ್ಲಿ 2 ಕೆಜಿ ಕಡಿತಗೊಂಡಿದ್ದ ಅನ್ನಭಾಗ್ಯ ಅಕ್ಕಿ ಮತ್ತೆ 7 ಕೆಜಿಗೆ ಏರಿಕೆಯಾಗಲಿದ್ದು, ಬುಧವಾರ ಸಿಎಂ ಕುಮಾರಸ್ವಾಮಿ ಅವರು ಸದನದಲ್ಲಿ ಘೋಷಣೆ ಮಾಡುವ ಸಾಧ್ಯತೆಯಿದೆ.

    ಹೌದು. ಅನ್ನಭಾಗ್ಯ ಅಕ್ಕಿ ಕಡಿತದಿಂದಾಗಿ ಸಮ್ಮಿಶ್ರ ಸರ್ಕಾರದಲ್ಲೇ ಅಸಮಾಧಾನ ಹೊರಬಿದ್ದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ರವರು ಸಿಎಂ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ.

    ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು ಕಡಿತಗೊಳಿಸಬಾರದು. 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಿರುವುದು ಸರಿಯಲ್ಲ, ಕೂಡಲೇ ನೂತನ ಬಜೆಟ್‍ನಲ್ಲಿ ಹಳೇ ಯೋಜನೆಯನ್ನೇ ಮುಂದುವರಿಸಬೇಕೆಂದು ಸಿಎಂಗೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಸಮ್ಮಿಶ್ರ ಸರ್ಕಾರದ ನೂತನ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿಯವರು ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ 7 ಕೆಜಿ ಅಕ್ಕಿಯನ್ನು 5 ಕೆಜಿ ಇಳಿಸಿದ್ದಕ್ಕೆ ಕೈ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಶಾಸಕ ಸುಧಾಕರ್ ಅವರು ಸದನದಲ್ಲೇ ಬಹಿರಂಗವಾಗಿ ಅಸಮಾಧಾನ ಪ್ರಕಟಿಸಿ ಈ ನಿರ್ಧಾರ ಬದಲಾಯಿಸಬೇಕೆಂದು ಎಂದು ಕೇಳಿಕೊಂಡಿದ್ದರು.

    ಸಾರ್ವಜನಿಕರ ಜೊತೆ ಮೈತ್ರಿ ಪಕ್ಷದಲ್ಲೇ ಈ ನಿರ್ಧಾರಕ್ಕೆ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬಜೆಟ್ ಕುರಿತ ಚರ್ಚೆಯ ವೇಳೆ ಕುಮಾರಸ್ವಾಮಿಯವರು 5 ಕೆಜಿಯಿಂದ 7 ಕೆಜಿಗೆ ಅನ್ನ ಭಾಗ್ಯದ ಅಕ್ಕಿ ಏರಿಕೆ ಮಾಡುತ್ತಿರುವ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.