Tag: jallikattu

  • ತ.ನಾಡಲ್ಲಿ ಜಲ್ಲಿಕಟ್ಟುಗೆ ಚಾಲನೆ; 1,100 ಹೋರಿಗಳು ಭಾಗಿ – ಕಾರು ಬಂಪರ್‌ ಬಹುಮಾನ

    ತ.ನಾಡಲ್ಲಿ ಜಲ್ಲಿಕಟ್ಟುಗೆ ಚಾಲನೆ; 1,100 ಹೋರಿಗಳು ಭಾಗಿ – ಕಾರು ಬಂಪರ್‌ ಬಹುಮಾನ

    ಚೆನ್ನೈ: ತಮಿಳುನಾಡಿನ (Tamil Nadu) ಮಧುರೈನಲ್ಲಿ ನಡೆಯುವ ವಿಶ್ವಪ್ರಸಿದ್ಧ ಮೂರು ದಿನಗಳ ಜಲ್ಲಿಕಟ್ಟು (Jallikattu) ಸ್ಪರ್ಧೆಗೆ ಮಂಗಳವಾರ ಚಾಲನೆ ದೊರಕಿದೆ. ಅವನಿಯಪುರಂ ಗ್ರಾಮದಲ್ಲಿ ಮೊದಲ ದಿನದ ಸ್ಪರ್ಧೆಯಲ್ಲಿ 1,100 ಎತ್ತುಗಳು ಭಾಗವಹಿಸಿವೆ.

    ಅತ್ಯುತ್ತಮ ಹೋರಿಗೆ 11 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಮತ್ತು ಅತ್ಯುತ್ತಮ ಹೋರಿ ಪಳಗಿಸುವವರಿಗೆ 8 ಲಕ್ಷ ರೂ. ಮೌಲ್ಯದ ಕಾರು ಹಾಗೂ ಇತರ ಬಹುಮಾನಗಳನ್ನು ನೀಡಲಾಗುವುದು. ಇತರ ಎರಡು ಜಲ್ಲಿಕಟ್ಟು ಕಾರ್ಯಕ್ರಮಗಳು ಕ್ರಮವಾಗಿ ಜ.15 ಮತ್ತು 16 ರಂದು ಪಲಮೇಡು ಮತ್ತು ಅಲಂಗನಲ್ಲೂರಿನಲ್ಲಿ ನಡೆಯಲಿವೆ. ಇದನ್ನೂ ಓದಿ: ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ‘ಅಮೃತ ಸ್ನಾನ’ ಮಾಡಿದ 1 ಕೋಟಿ ಭಕ್ತರು

    ಕಾರ್ಯಕ್ರಮಗಳ ನಿರ್ವಹಣೆಗೆ ಕಟ್ಟುನಿಟ್ಟಿನ ನಿಯಮಗಳು ಮತ್ತು ಭದ್ರತಾ ಕ್ರಮಗಳು ಜಾರಿಯಲ್ಲಿವೆ. ಮಧುರೈ ಜಿಲ್ಲಾಡಳಿತ ಹೊರಡಿಸಿರುವ ನಿರ್ದೇಶನಗಳ ಪ್ರಕಾರ, ಪ್ರತಿ ಹೋರಿಯು ಜಿಲ್ಲೆಯಲ್ಲಿ ನಡೆಯುವ ಮೂರು ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ ಒಂದರಲ್ಲಿ ಮಾತ್ರ ಭಾಗವಹಿಸಬಹುದು. ಪ್ರತಿ ಹೋರಿಯೊಂದಿಗೆ ಅದರ ಮಾಲೀಕರು ಮತ್ತು ಹೋರಿಯೊಂದಿಗೆ ಪರಿಚಿತರಾಗಿರುವ ತರಬೇತುದಾರ ಮಾತ್ರ ಹೋಗಬಹುದು.

    ಹೋರಿ ಪಳಗಿಸುವವರು ಮತ್ತು ಹೋರಿಗಳ ಮಾಲೀಕರು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ madurai.nic.in ಮೂಲಕ ನೋಂದಾಯಿಸಿಕೊಳ್ಳಬೇಕು. ಸಲ್ಲಿಸಿದ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಅರ್ಹರೆಂದು ಪರಿಗಣಿಸಲ್ಪಟ್ಟವರು ಮಾತ್ರ ಡೌನ್‌ಲೋಡ್ ಮಾಡಬಹುದಾದ ಟೋಕನ್ ಅನ್ನು ಪಡೆಯುತ್ತಾರೆ. ಈ ಟೋಕನ್ ಇಲ್ಲದೆ, ಹೋರಿ ಪಳಗಿಸುವವರು ಅಥವಾ ಹೋರಿಗಳು ಈವೆಂಟ್‌ಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ‘ನಂದಿನಿ’ ಕಮಾಲ್ – ಕೆಎಂಎಫ್ ಸಹಭಾಗಿತ್ವದಲ್ಲಿ 10 ಚಾಯ್ ಪಾಯಿಂಟ್

    2025 ರ ತಮಿಳುನಾಡಿನ ಮೊದಲ ಜಲ್ಲಿಕಟ್ಟು ಕಾರ್ಯಕ್ರಮವು ಪುದುಕೊಟ್ಟೈ ಜಿಲ್ಲೆಯ ತಚಂಕುರಿಚಿ ಗ್ರಾಮದಲ್ಲಿ ಶನಿವಾರ ನಡೆಯಿತು. ಪುದುಕ್ಕೊಟ್ಟೈ ಜಿಲ್ಲೆಯು ಅತಿ ಹೆಚ್ಚು ವಾಡಿವಾಸಲ್ (ಹೋರಿಗಳಿಗೆ ಪ್ರವೇಶ ಬಿಂದುಗಳು) ಮತ್ತು ತಮಿಳುನಾಡಿನಲ್ಲಿ ಅತಿ ಹೆಚ್ಚು ಜಲ್ಲಿಕಟ್ಟು ಸ್ಪರ್ಧೆಗಳನ್ನು ಆಯೋಜಿಸುವುದಕ್ಕೆ ಹೆಸರುವಾಸಿಯಾಗಿದೆ. ಜನವರಿ ಮತ್ತು ಮೇ 31 ರ ನಡುವೆ, ಜಿಲ್ಲೆಯಲ್ಲಿ 120 ಕ್ಕೂ ಹೆಚ್ಚು ಜಲ್ಲಿಕಟ್ಟು ಸ್ಪರ್ಧೆಗಳು, 30 ಕ್ಕೂ ಹೆಚ್ಚು ಎತ್ತಿನ ಬಂಡಿ ಓಟಗಳು ಮತ್ತು 50 ಕ್ಕೂ ಹೆಚ್ಚು ವಡಮಡು (ಕಟ್ಟಿದ ಹೋರಿ) ಸ್ಪರ್ಧೆಗಳನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ.

  • 9.20 ಲಕ್ಷ ರೂ. ದಾಖಲೆ ಬೆಲೆಗೆ ʻಜಾಗ್ವಾರ್‌ʼ ಎತ್ತು ಮಾರಾಟ – ಮಂಡ್ಯದ ರೈತ ಫುಲ್‌ ಖುಷ್‌

    9.20 ಲಕ್ಷ ರೂ. ದಾಖಲೆ ಬೆಲೆಗೆ ʻಜಾಗ್ವಾರ್‌ʼ ಎತ್ತು ಮಾರಾಟ – ಮಂಡ್ಯದ ರೈತ ಫುಲ್‌ ಖುಷ್‌

    ಮಂಡ್ಯ: ಶ್ರೀರಂಗಪಟ್ಟಣ ಶ್ರೀನಿವಾಸ ಅಗ್ರಹಾರ ಗ್ರಾಮದ ರೈತ (Farmer) ನವೀನ್ ಸಾಕಿದ್ದ ಹಳ್ಳಿಕಾರ್ ತಳಿಯ ಒಂಟಿ ಎತ್ತು 9.20 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದು ರೈತ ನವೀನ್‌ ಹರ್ಷಗೊಂಡಿದ್ದಾರೆ.

    ಹಳ್ಳಿಕಾರ್ ತಳಿಯ ಎರಡು ಹಲ್ಲಿನ ಒಂಟಿ ಎತ್ತನ್ನು (Ox) ತಮಿಳುನಾಡು (Tamilnadu) ಮೂಲದ ಸರವಣಪಟ್ಟಿ ಗ್ರಾಮದ ಸಿರವೈ ತಂಬಿ 9.20 ಲಕ್ಷ ರೂ.ಗಳಿಗೆ ಖರೀದಿಸಿದ್ದಾರೆ. ಇದನ್ನೂ ಓದಿ: ಇನ್‍ಸ್ಪೆಕ್ಟರ್, ಮೇಲಧಿಕಾರಿಗಳಷ್ಟೇ ಡ್ರಂಕ್ & ಡ್ರೈವ್ ತಪಾಸಣೆ ಮಾಡ್ಬೇಕು – ಸುಲಿಗೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕ್ರಮ

    ʻಜಾಗ್ವಾರ್‌ʼ ಹೆಸರಿನ ಈ ಎತ್ತು ಹೊರ ರಾಜ್ಯಗಳಲ್ಲೂ ಎತ್ತಿನಗಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನ ಬಾಚಿಕೊಂಡಿತ್ತು. ತಮಿಳುನಾಡಿನಲ್ಲೂ ಪ್ರಶಸ್ತಿ ಗೆದ್ದು ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು. ರೇಸ್‌ನಲ್ಲಿ ಕಣಕ್ಕಿಳಿದರೆ ಅಬ್ಬರಿಸುತ್ತಿದ್ದ ಜಾಗ್ವಾರ್‌ ವೇಗಕ್ಕೆ ಮನಸೋತ ತಮಿಳುನಾಡಿನ ವ್ಯಕ್ತಿ 9.20 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ – ಒಂದು ವಾರದಲ್ಲಿ 70 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ

    ಈ ಹಿಂದೆ ಶ್ರೀರಂಗಪಟ್ಟಣದ ನವೀನ್‌ ಮಂಡ್ಯದ ಇಂಡವಾಳು ಗ್ರಾಮದ ಅಜಿತ್ ಅವರಿಂದ 1.20 ಲಕ್ಷ ರೂ.ಗೆ ಈ ಎತ್ತನ್ನು ಖರೀದಿಸಿದ್ದರು. ಸದ್ಯ 9.20 ಲಕ್ಷಕ್ಕೆ ಮಾರಾಟವಾಗಿದ್ದು, ಬರೋಬ್ಬರಿ 8 ಲಕ್ಷ ರೂ. ಲಾಭ ಗಳಿಸಿದ್ದಾರೆ. ಎತ್ತು ದಾಖಲೆ ಬೆಲೆಗೆ ಮಾರಾಟವಾದ ಬಳಿಕ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಬೀಳ್ಕೊಡಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್

    ನವದೆಹಲಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (PCA Act) ತಮಿಳುನಾಡು ಸರ್ಕಾರ ಮಾಡಿರುವ ತಿದ್ದುಪಡಿಯ ಸಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಈ ಮೂಲಕ ಎತ್ತುಗಳನ್ನು ಬಳಸಿ ನಡೆಸಲಾಗುವ ಜಲ್ಲಿಕಟ್ಟು (Jallikattu) ಕ್ರೀಡೆಯ ಜೊತೆಗೆ ಕಂಬಳಕ್ಕೂ (Kambala) ಇದ್ದ ಕಂಟಕ ನಿವಾರಣೆಯಾಗಿದೆ.

    ನ್ಯಾಯಮೂರ್ತಿ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಸಂವಿಧಾನ ಪೀಠವು (Constitution Bench) ಎತ್ತುಗಳ ನೋವು ಮತ್ತು ಸಂಕಟವನ್ನು ಕಡಿಮೆ ಮಾಡಲು ಕಾಯ್ದೆಯ ತಿದ್ದುಪಡಿ ಮಾಡಲಾಗಿದೆ. ನಿಯಮದ ಅನುಸಾರ ಜಲ್ಲಿಕಟ್ಟು ಮುಂದುವರೆಸಬಹುದು ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಮಾಡೆಲ್ ಹೇರ್‌ಸ್ಟೈಲ್‌ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ

     

    ರಾಜ್ಯದ ಕಾಯ್ದೆಯಲ್ಲಿ ಯಾವುದೇ ಲೋಪವಿಲ್ಲ. ನಿಯಮಗಳ ಪ್ರಕಾರ ಭಾಗವಹಿಸುವಿಕೆಯನ್ನು ಅನುಮತಿಸಲಾಗುವುದು. ಕಾಯ್ದೆಯೂ ಸಂವಿಧಾನದ 48 ನೇ ವಿಧಿ ಗೋಹತ್ಯೆ ವಿಚಾರಕ್ಕೆ ಇದು ಸಂಬಂಧಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರದಲ್ಲಿ (Maharashtra) ನಡೆಸಲಾಗುವ ಕಂಬಳ ಮತ್ತು ಎತ್ತಿನ ಬಂಡಿ (Bull cart racing) ಓಟಕ್ಕೂ ಅನುಮತಿಸುವ ಕಾನೂನನ್ನು ನ್ಯಾಯಾಲಯ ಎತ್ತಿಹಿಡಿದಿದೆ.

    ಈ ಮೇಲೆ ಉಲ್ಲೇಖಿಸಲಾದ ಕ್ರೀಡೆಗಳು, ಆರ್ಟಿಕಲ್ 51ಎ(ಜಿ) ಎಲ್ಲಾ ಜೀವಿಗಳ ಮೇಲೆ ಸಹಾನೂಭೂತಿ ಹೊಂದಿರುವುದು ಮತ್ತು 51ಎ(ಹೆಚ್) ಹಿಂಸೆಯನ್ನು ನಡೆಸದೇ ಇರುವುದನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳಲ್ಲಿನ ಮೂಲಭೂತ ಹಕ್ಕುಗಳನ್ನು ಇದು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ ತಿದ್ದುಪಡಿ ಮಾಡಲಾದ ಕಾಯಿದೆಗಳು ಹಾಗೂ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಈ ಅನುಷ್ಠಾನ ಜಿಲ್ಲಾಧಿಕಾರಿಗಳ ಜವಬ್ದಾರಿಯಾಗಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

    ತಮಿಳುನಾಡಿನಲ್ಲಿ (Tamil Nadu) ಜನಪ್ರಿಯವಾಗಿರುವ ಜಲ್ಲಿಕಟ್ಟು ಪ್ರಾಣಿಗಳ ಹಕ್ಕುಗಳು ಹಾಗೂ ಕ್ರೌರ್ಯ ತಡೆ (ಪಿಸಿಎ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು 2014ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ನಿರ್ದಿಷ್ಟವಾಗಿ ಕ್ರೀಡೆಯ ಸಾಂಸ್ಕøತಿಕ ಅಂಶಕ್ಕೆ ಸಂಬಂಧಿಸಿದ ಆಚರಣೆಯಲ್ಲಿರುವಂತೆ ಜಲ್ಲಿಕಟ್ಟು ತಮಿಳುನಾಡಿನ ಸಂಸ್ಕೃತಿ ಅಥವಾ ಸಂಪ್ರದಾಯವಾಗಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದ್ದರಿಂದ ಆಚರಣೆಯನ್ನು ನಿಯಂತ್ರಿಸುವ ತಮಿಳುನಾಡು ಜಲ್ಲಿಕಟ್ಟು ನಿಯಂತ್ರಣ ಕಾಯಿದೆ 2009ನ್ನು ರದ್ದುಪಡಿಸಿತ್ತು.

    ಜನವರಿ 2016 ರಲ್ಲಿ, ಕೇಂದ್ರ ಸರ್ಕಾರವು (Central government) ಪಿಸಿಎ ಕಾಯ್ದೆಯ ವ್ಯಾಪ್ತಿಯಿಂದ ಜಲ್ಲಿಕಟ್ಟು ಮತ್ತು ಎತ್ತಿನ ಬಂಡಿ ಓಟಗಳಿಗೆ ವಿನಾಯಿತಿ ನೀಡುವ ಹೊಸ ಅಧಿಸೂಚನೆಯನ್ನು ಹೊರಡಿಸಿತು. ನಂತರ ರಾಜ್ಯ ಸರ್ಕಾರವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಿದ್ದುಪಡಿ) ಕಾಯಿದೆ 2017 ಅನ್ನು ಜಾರಿಗೊಳಿಸಿತು. ಈ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂನಲ್ಲಿ ಪ್ರಶ್ನಿಸಲಾಗಿತ್ತು. ಇದನ್ನೂ ಓದಿ: ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

  • ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ – ಓರ್ವ ಸಾವು, ಆರು ಮಂದಿಗೆ ಗಂಭೀರ ಗಾಯ

    ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ – ಓರ್ವ ಸಾವು, ಆರು ಮಂದಿಗೆ ಗಂಭೀರ ಗಾಯ

    ಆನೆಕಲ್: ಜಲ್ಲಿಕಟ್ಟು (Jallikattu) ಆಚರಣೆ ವೇಳೆ ಓರ್ವ ಸಾವನ್ನಪ್ಪಿ ಆರು ಮಂದಿ ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

    ತಮಿಳುನಾಡಿನ ಕೆಲವರಪಲ್ಲಿ ಸಮೀಪದಲ್ಲಿ ಸಪ್ಲಮ್ಮ ದೇವಿ ಜಾತ್ರಾ ಅಂಗವಾಗಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಗೂಳಿಯೊಂದು ಜನರ ಮೇಲೆ ದಾಳಿ ನಡೆಸಿ, ಸೂಳಗಿರಿ ಸಮೀಪದ ಆರೋಪಲ್ಲಿ ಗ್ರಾಮದ ಮಂಜು (25) ಸಾವನ್ನಪ್ಪಿದ್ದಾರೆ. ಗೂಳಿ ದಾಳಿಯಿಂದಾಗಿ ಆರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಪೊಂಗಲ್ ಹಬ್ಬದ ಬಳಿಕ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಈ ಸ್ಪರ್ಧೆಯನ್ನು ವೀಕ್ಷಿಸುವ ಸಲುವಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಈ ಸ್ಪರ್ಧೆಗೆ ಜನರು ಹೊಸೂರು, ಡೆಂಕಣಿಕೋಟೆ, ಥಳಿ, ಬಾಗಲೂರು ಸೇರಿದಂತೆ ಹಲವು ಕಡೆಗಳಿಂದ ಸುಮಾರು 500ಕ್ಕೂ ಹೆಚ್ಚು ಹೋರಿಗಳನ್ನು ಕರೆತರುತ್ತಾರೆ. ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನ ಸಿಕ್ಕಿಬಿದ್ರೆ 5 ಸಾವಿರ ದಂಡ

    ತಮಿಳುನಾಡು ಅಲ್ಲದೇ ಕರ್ನಾಟಕ, ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳಿಂದ ಗೂಳಿಗಳು ಆಗಮಿಸುತ್ತವೆ. ಕಾಲಿಗೆ ಗೆಜ್ಜೆ, ಕುತ್ತಿಗೆಗೆ ಗೆಜ್ಜೆಸರ, ಕೊಂಬಿಗೆ ಬಣ್ಣ ಬಣ್ಣದ ತಡಿಕೆಯಿಂದ ಸಿಂಗರಿಸುತ್ತಾರೆ. ಸಿಂಗಾರದ ಜೊತೆಗೆ ನಶೆಯಲ್ಲಿ ಗೂಳಿಗಳು ಹದ್ದಿನಂತೆ ಮುನ್ನುಗುತ್ತವೆ. ಗೂಳಿಗಳ ಮುಡಿಗೆ ಕಟ್ಟುವ ಬಹುಮಾನಕ್ಕಾಗಿ ಅವುಗಳನ್ನು ಹಿಡಿಯಲು ಯುವಕರು ಹೋರಾಟವನ್ನು ನಡೆಸುತ್ತಾರೆ. ಈ ವೇಳೆ ಗೂಳಿಗಳು ದಾಳಿ ನಡೆಸಿ ಅನೇಕ ಸಾವು ನೋವುಗಳು ಸಂಭವಿಸುತ್ತವೆ.

    ಈ ಅಪಾಯಕಾರಿ ಜಲ್ಲಿಕಟ್ಟು ಕರ್ನಾಟಕ ರಾಜ್ಯದಲ್ಲಿ ಬ್ಯಾನ್ ಮಾಡಲಾಗಿದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಸಾಹಸ ಕ್ರೀಡೆಯಾಗಿ ಮುಂದುವರೆಯುತ್ತಿದೆ. ಈ ಅಪಾಯಕಾರಿ ಜಲ್ಲಿಕಟ್ಟು ಸ್ಪರ್ಧೆಗೆ ಎಲ್ಲಿಲ್ಲದ ಕ್ರೇಜ್. ಇದನ್ನೂ ಓದಿ: ದೆಹಲಿ ಪಾಲಿಕೆಯಲ್ಲಿ ಹೈಡ್ರಾಮಾ – ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ, ಆಪ್ ಸದಸ್ಯರು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಲ್ಲಿಕಟ್ಟು ಸ್ಪರ್ಧೆ – ಹೋರಿ ತಿವಿದು ಮೃತಪಟ್ಟ ಬಾಲಕ

    ಜಲ್ಲಿಕಟ್ಟು ಸ್ಪರ್ಧೆ – ಹೋರಿ ತಿವಿದು ಮೃತಪಟ್ಟ ಬಾಲಕ

    ಚೆನ್ನೈ: ಜಲ್ಲಿಕಟ್ಟು (Jallikattu) ಸ್ಪರ್ಧೆ ನೋಡಲು ಬಂದಿದ್ದ ಬಾಲಕನಿಗೆ ಹೋರಿ ತಿವಿದು ಬಾಲಕ (Boy) ಮೃತಪಟ್ಟ ಘಟನೆ ಧರ್ಮಪುರಿಯ (Dharmapuri) ತಡಂಗಂ ಗ್ರಾಮದಲ್ಲಿ ನಡೆದಿದೆ.

    ಮೃತಪಟ್ಟ ಬಾಲಕನನ್ನು ಗೋಕುಲ್ (14) ಎಂದು ಗುರುತಿಸಲಾಗಿದೆ. ಗೋಕುಲ್ ಸಂಬಂಧಿಕರೊಂದಿಗೆ ತಡಂಗಂ ಗ್ರಾಮದಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಸ್ವರ್ಧೆಗೆ ಆಗಮಿಸಿದ್ದ. ಈ ವೇಳೆ ಸ್ಪರ್ಧೆಯಲ್ಲಿದ್ದ ಹೋರಿಯೊಂದು ಕೂತಿದ್ದ ಗೋಕುಲ್ ಹೊಟ್ಟೆಗೆ ತಿವಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗೋಕುಲ್‍ನನ್ನು ಧರ್ಮಪುರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ಬಾಲಕ ಮೃತಪಟ್ಟಿದ್ದ. ಇದನ್ನೂ ಓದಿ: ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡೋ ಮುನ್ನ ಹುಷಾರ್ – ಹಣದ ಜೊತೆಗೆ ಓನರ್ ಎಸ್ಕೇಪ್

    ಈ ಬಗ್ಗೆ ಧರ್ಮಪುರಿ ಠಾಣೆ ಪೊಲೀಸರು ಗೋಕುಲ್ ಗಾಯಗೊಂಡ ಬಗ್ಗೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ವರ್ಷ ಜಲ್ಲಿಕಟ್ಟು ಸ್ವರ್ಧೆಗೆ ತಮಿಳುನಾಡಿನಲ್ಲಿ ಈವರೆಗೆ ನಾಲ್ಕು ಜನ ಬಲಿಯಾಗಿದ್ದಾರೆ. ಇದನ್ನೂ ಓದಿ: ಕೆಎಂಎಫ್ ಹಾಲು ಪೂರೈಕೆದಾರರಿಂದ ಮುಷ್ಕರ – ನಂದಿನಿ ಬೂತ್‌ಗಳಲ್ಲಿ ಹಾಲು, ಮೊಸರು ಸಿಗದೇ ಜನ ವಾಪಸ್

    ತಮಿಳುನಾಡಿನ ಜನತೆಗೆ ಬಹು ದೊಡ್ಡ ಹಬ್ಬ ಅಂದರೆ ಪೊಂಗಲ್. ವರ್ಷದ ಆರಂಭದಲ್ಲಿ ಬರುವ ಪೊಂಗಲ್ ಹಬ್ಬದ ವೇಳೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಏರ್ಪಡಿಸಲಾಗುತ್ತದೆ. ಆ ಬಳಿಕ ಜಲ್ಲಿಕಟ್ಟು ಸ್ವರ್ಧೆ ನಡೆಯುತ್ತಿರುತ್ತದೆ. ತಮಿಳುನಾಡಿನ ದೇಸಿ ಕ್ರೀಡೆಯಾದ ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿಹಿಂಸೆ ಕಾರಣದಿಂದ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಆ ಬಳಿಕ ತಮಿಳುನಾಡು ಸರ್ಕಾರದ ಕಾನೂನು ಹೋರಾಟದ ಬಳಿಕ ಇದೀಗ ಮತ್ತೆ ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನಲ್ಲಿ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸೀಸನ್ ಆರಂಭ – ಪೊಲೀಸರು ಸೇರಿ 35ಕ್ಕೂ ಹೆಚ್ಚು ಜನರಿಗೆ ಗಾಯ

    ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸೀಸನ್ ಆರಂಭ – ಪೊಲೀಸರು ಸೇರಿ 35ಕ್ಕೂ ಹೆಚ್ಚು ಜನರಿಗೆ ಗಾಯ

    ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಜಲ್ಲಿಕಟ್ಟು (Jallikattu) ಸ್ಪರ್ಧೆಯ ಸೀಸನ್ ಆರಂಭಗೊಂಡಿದೆ. ಪುದುಕ್ಕೂಟ್ಟೈನಲ್ಲಿ (Pudukkottai) ಆರಂಭಗೊಂಡ ಈ ವರ್ಷದ ಮೊದಲ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಪೊಲೀಸರು ಸೇರಿದಂತೆ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ತಮಿಳುನಾಡಿನ ಜನತೆಗೆ ಬಹು ದೊಡ್ಡ ಹಬ್ಬ ಅಂದರೆ ಪೊಂಗಲ್. ವರ್ಷದ ಆರಂಭದಲ್ಲಿ ಬರುವ ಪೊಂಗಲ್ ಹಬ್ಬದ ವೇಳೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಏರ್ಪಡಿಸಲಾಗುತ್ತದೆ. ಈ ಬಾರಿ ವರ್ಷದ ಮೊದಲ ಜಲ್ಲಿಕಟ್ಟು ಸ್ಪರ್ಧೆ ಪುದುಕ್ಕೂಟ್ಟೈನ ತಚ್ಚಂಕುರಿಚಿಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸ್ಪರ್ಧೆ ವೀಕ್ಷಿಸಲು ಬಂದವರು, ಸ್ಫರ್ಧಿಗಳು ಮತ್ತು ಪೊಲೀಸರು ಸೇರಿದಂತೆ ಈವರೆಗೆ 35ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು. ಜನ ಕೂಡ ಕಿಕ್ಕಿರಿದು ತುಂಬಿಕೊಂಡು ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆ ವೀಕ್ಷಿಸಿದರು. ಇದನ್ನೂ ಓದಿ: ಕೊಳದಲ್ಲಿ ಸ್ನಾನ ಮಾಡ್ತಿದ್ದ ಮಹಿಳೆ ವಿರುದ್ಧ DMK ಸದಸ್ಯನಿಂದ ಜಾತಿ ನಿಂದನೆ

    ಹೋರಿಯನ್ನು ಪಳಗಿಸುವ ಸ್ಪರ್ಧೆಯ ವಿಜೇತರಿಗೆ ಬೈಕ್, ಕುಕ್ಕರ್ ಸಹಿತ ಹಲವು ಪ್ರಶಸ್ತಿಗಳನ್ನು ನೀಡಲಾಯಿತು. ಈ ಬಾರಿ ವಿಶೇಷವಾಗಿ ಸೂಕ್ತ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಸ್ಪರ್ಧೆಯನ್ನು ಏರ್ಪಡಿಸಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಟಿಪ್ಪು ನಿಜಕನಸುಗಳು ಮಾದರಿಯಲ್ಲಿ ಸಿದ್ದು ನಿಜಕನಸುಗಳು ಪುಸ್ತಕ ಇಂದು ಬಿಡುಗಡೆ

    ತಮಿಳುನಾಡಿನ ದೇಸಿ ಕ್ರೀಡೆಯಾದ ಜಲ್ಲಿಕಟ್ಟು ಕ್ರೀಡೆಯನ್ನು ಪ್ರಾಣಿಹಿಂಸೆ ಕಾರಣದಿಂದ ಸುಪ್ರೀಂ ಕೋರ್ಟ್ ನಿಷೇಧ ಹೇರಿತ್ತು. ಆ ಬಳಿಕ ತಮಿಳುನಾಡು ಸರ್ಕಾರದ ಕಾನೂನು ಹೋರಾಟದ ಬಳಿಕ ಇದೀಗ ಮತ್ತೆ ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನಲ್ಲಿ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಲ್ಲಿಕಟ್ಟು ಸ್ಪರ್ಧೆ – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಜಲ್ಲಿಕಟ್ಟು ಸ್ಪರ್ಧೆ – 30ಕ್ಕೂ ಹೆಚ್ಚು ಮಂದಿಗೆ ಗಾಯ

    ಹೈದರಾಬಾದ್: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಜನವರಿ 16 ರಂದು ಭಾನುವಾರ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 30 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಲಾಕ್‍ಡೌನ್ ಬೇಡ- ಸರ್ಕಾರಕ್ಕೆ ಪ್ರತಾಪ್ ಸಿಂಹ ಒತ್ತಾಯ

    ಈ ಕ್ರೀಡೆಯಲ್ಲಿ ಭಾಗವಹಿಸಲು ನೆರೆಯ ನೆಲ್ಲೂರು, ಕಡಪ ಜಿಲ್ಲೆಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಅಲ್ಲದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ, 500 ಕ್ಕೂ ಹೆಚ್ಚು ಹೋರಿಗಳು ಮತ್ತು ನೂರಾರು ಗ್ರಾಮಸ್ಥರು ಇದರಲ್ಲಿ ಪಾಲ್ಗೊಂಡಿದ್ದರು.

    (ಟಿಡಿಪಿ) ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಕುಪ್ಪಂ ವಿಧಾನಸಭಾ ಕ್ಷೇತ್ರದ ಗುಂಡುಪಲ್ಲಿ ಮಂಡಲದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದನ್ನೂ ಓದಿ: Happy Birthday To My Love – ಬಾಲಿವುಡ್ ನಟನಿಗೆ ಸುದೀಪ್ ಪುತ್ರಿ ವಿಶ್

  • ಜಲ್ಲಿಕಟ್ಟು ಸ್ಪರ್ಧೆಯಲ್ಲಿ 46 ಮಂದಿಗೆ ತೀವ್ರ ಗಾಯ

    ಜಲ್ಲಿಕಟ್ಟು ಸ್ಪರ್ಧೆಯಲ್ಲಿ 46 ಮಂದಿಗೆ ತೀವ್ರ ಗಾಯ

    ಚೆನ್ನೈ:  ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 300 ಗೂಳಿಗಳನ್ನು ಬೆದರಿಸಲು ಅಖಾಡಕ್ಕೆ ಬಿಡಲಾಗಿತ್ತು. ಈ ವೇಳೆ 46 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

    ಗೂಳಿಗಳನ್ನು ಪಳಗಿಸುವ ಪ್ರಯತ್ನದಲ್ಲಿ ಅನೇಕ ಮಂದಿ ವಿಫಲರಾದರು. ಈ ಸ್ಪರ್ಧೆಯಲ್ಲಿ 46 ಮಂದಿ ತೀವ್ರವಾಗಿ ಗಾಯಗೊಂಡಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.   ಕೊರೊನಾ ನಿಯಮ ಪಾಲನೆಯೊಂದಿಗೆ ಜಲ್ಲಿಕಟ್ಟು ಸ್ಪರ್ಧೆ ನಡೆಸಲು ಸರ್ಕಾರ ನಿರ್ಧರಿಸಿದ ನಂತರ ಸುಮಾರು 4,544 ಗೂಳಿಗಳ ಮಾಲೀಕರು ಹಾಗೂ 2001 ಗೂಳಿ ಪಳಗಿಸುವವರು ಸ್ಪರ್ಧೆಗಾಗಿ ಆನ್ ಲೈನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಇದನ್ನೂ ಓದಿ: ಗೂಳಿಗಳ ಗುದ್ದಿಗೆ ಸೈಲೆಂಟ್ ಆದ ಗುಜರಾತ್ ಜೈಂಟ್ಸ್

    ಪ್ರತಿ ವರ್ಷ ಪೊಂಗಲ್ ಸಂದರ್ಭದಲ್ಲಿ ತಮಿಳುನಾಡಿನ ಹಳ್ಳಿಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.  ಕೊರೊನಾ ಸೋಂಕಿನಿಂದಾಗಿ ಈ ಬಾರಿ ವಿಶೇಷ ಅತಿಥಿ ಪಾಲ್ಗೊಂಡಿರಲಿಲ್ಲ. ಜಲ್ಲಿಕಟ್ಟು ಸ್ಪರ್ಧೆ ಆಯೋಜಕರು ಚಿನ್ನದ ನಾಣ್ಯ, ವಾಷಿಂಗ್ ಮೆಷಿನ್, ಕಾರು, ಬೈಕ್ ಮತ್ತಿತರ ಕೊಡುಗೆಗಳನ್ನು ಘೋಷಿಸುತ್ತಾರೆ. ಇದನ್ನೂ ಓದಿ: ಜಲ್ಲಿಕಟ್ಟು ಕ್ರೀಡೆಗೆ ಕೊರೊನಾ ಮಾರ್ಗಸೂಚಿ ಜಾರಿಗೊಳಿಸಿದ ತಮಿಳುನಾಡು ಸರ್ಕಾರ

    ತಮಿಳುನಾಡಿನ ಜನತೆಗೆ ಬಹು ದೊಡ್ಡ ಹಬ್ಬ ಅಂದರೆ ಪೊಂಗಲ್. ವರ್ಷದ ಆರಂಭದಲ್ಲಿ ಬರುವ ಪೊಂಗಲ್ ಹಬ್ಬದ ವೇಳೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಏರ್ಪಡಿಸಲಾಗುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ಜಲ್ಲಿಕಟ್ಟು ಕ್ರೀಡೆಯನ್ನು ನಿಲ್ಲಿಸಲಾಗಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಮತ್ತೆ ಜಲ್ಲಿಕಟ್ಟು ಕ್ರೀಡಾಕೂಟವನ್ನು ಆಯೋಜಿಸಿರುವ ಸರ್ಕಾರ ಕೊರೊನಾ ನಿಯಮಗಳನ್ನು ಜಾರಿಗೊಳಿಸಿದ್ದು, ಗೂಳಿ ಪಳಗಿಸುವವರು ಸೇರಿ 300 ಜನ ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಗೂಳಿ ಪಳಗಿಸುವ 150 ಮಂದಿ 48 ಗಂಟೆಗಳೊಳಗೆ ಕೊರೊನಾ ನೆಗಟಿವ್ ವರದಿ ಸಲ್ಲಿಸಬೇಕು ಮತ್ತು ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಲು 150 ಮಂದಿ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದ್ದು, ಅಲ್ಲರಿಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಖಡ್ಡಾಯ ಎಂದು ಸರ್ಕಾರ ಸೂಚನೆ ನೀಡಿತ್ತು.

  • ಜಲ್ಲಿಕಟ್ಟು ಕ್ರೀಡೆಗೆ ಕೊರೊನಾ ಮಾರ್ಗಸೂಚಿ ಜಾರಿಗೊಳಿಸಿದ ತಮಿಳುನಾಡು ಸರ್ಕಾರ

    ಜಲ್ಲಿಕಟ್ಟು ಕ್ರೀಡೆಗೆ ಕೊರೊನಾ ಮಾರ್ಗಸೂಚಿ ಜಾರಿಗೊಳಿಸಿದ ತಮಿಳುನಾಡು ಸರ್ಕಾರ

    ಚೆನ್ನೈ: ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ವೇಳೆ ನಡೆಯುವ ಜಲ್ಲಿಕಟ್ಟು ಕ್ರೀಡಾಕೂಟಕ್ಕೆ ಸರ್ಕಾರ ಅನುಮತಿ ನೀಡಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು 300 ಜನರಿಗೆ ಅವಕಾಶ ನೀಡಿದ್ದು, ಎಲ್ಲರಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ.

    ತಮಿಳುನಾಡಿನ ಜನತೆಗೆ ಬಹು ದೊಡ್ಡ ಹಬ್ಬ ಅಂದರೆ ಪೊಂಗಲ್. ವರ್ಷದ ಆರಂಭದಲ್ಲಿ ಬರುವ ಪೊಂಗಲ್ ಹಬ್ಬದ ವೇಳೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಏರ್ಪಟಡಿಸಲಾಗುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ಜಲ್ಲಿಕಟ್ಟು ಕ್ರೀಡೆಯನ್ನು ನಿಲ್ಲಿಸಲಾಗಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಮತ್ತೆ ಜಲ್ಲಿಕಟ್ಟು ಕ್ರೀಡಾಕೂಟವನ್ನು ಆಯೋಜಿಸಿರುವ ಸರ್ಕಾರ ಕೊರೊನಾ ನಿಯಮಗಳನ್ನು ಜಾರಿಗೊಳಿಸಿದ್ದು, ಗೂಳಿ ಪಳಗಿಸುವವರು ಸೇರಿ 300 ಜನ ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದೆಂದು ಸೂಚಿಸಿದೆ. ಇದನ್ನೂ ಓದಿ: 1000ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಪಾಸಿಟಿವ್

    ಗೂಳಿ ಪಳಗಿಸುವ 150 ಮಂದಿ 48 ಗಂಟೆಗಳೊಳಗೆ ಕೊರೊನಾ ನೆಗಟಿವ್ ವರದಿ ಸಲ್ಲಿಸಬೇಕು ಮತ್ತು ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಲು 150 ಮಂದಿ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದ್ದು, ಅಲ್ಲರಿಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಖಡ್ಡಾಯಗೊಳಿಸಿದೆ.

    ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕ್ರೀಡಾಕೂಟವನ್ನು ವೀಕ್ಷಿಸಲು ಟಿವಿ ವಾಹಿನಿಗಳನ್ನು ನೇರ ಪ್ರಸಾರ ವ್ಯವಸ್ಥೆಗೊಳಿಸಲಾಗಿದ್ದು, ಯಾವುದೇ ಕಾರಣಕ್ಕೂ ಜನ ಗುಂಪು ಸೇರದಂತೆ ಸರ್ಕಾರ ಮನವಿ ಮಾಡಿದೆ. ಇದನ್ನೂ ಓದಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಕೊರೊನಾ ಪಾಸಿಟಿವ್

    ಈ ಸ್ಪರ್ಧೆಯಲ್ಲಿ ಸ್ಥಳೀಯ ತಳಿಯ ಹೋರಿಗಳನ್ನು ಬಳಸಬಹುದು ಆದರೆ ವಿದೇಶಿ ಹೋರಿಗಳನ್ನು ಬಳಸುವಂತಿಲ್ಲ ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.

  • ಜಲ್ಲಿಕಟ್ಟು ಮಾರಾಮಾರಿ – ಪೊಲೀಸರನ್ನೇ ಓಡಿಸಿ ಹಲ್ಲೆಗೈದ ಗ್ರಾಮಸ್ಥರು

    ಜಲ್ಲಿಕಟ್ಟು ಮಾರಾಮಾರಿ – ಪೊಲೀಸರನ್ನೇ ಓಡಿಸಿ ಹಲ್ಲೆಗೈದ ಗ್ರಾಮಸ್ಥರು

    – ಪೊಲೀಸ್ ಸಿಬ್ಬಂದಿ ಸೇರಿ 10 ಜನರಿಗೆ ಗಾಯ
    – ಅಂಬುಲೆನ್ಸ್, ಅಗ್ನಿಶಾಮಕ ದಳದ ವಾಹನ, ಪೊಲೀಸ್ ಜೀಪ್ ಜಖಂ

    ಬೆಂಗಳೂರು: ಜಲ್ಲಿಕಟ್ಟು ನಿಲ್ಲಿಸುವಂತೆ ವಾರ್ನಿಂಗ್ ನೀಡಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಕರ್ನಾಟಕ ತಮಿಳುನಾಡು ಗಡಿಭಾಗದ ಮದಗೊಂಡಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಈ ಘಟನೆಯಲ್ಲಿ 5 ಜನ ಪೊಲೀಸ್ ಸಿಬ್ಬಂದಿ, ಐವರು ಸಾರ್ವಜನಿಕರು ಗಾಯಗೊಂಡಿದ್ದು, ಆಂಬುಲೆನ್ಸ್, ಅಗ್ನಿಶಾಮಕ ದಳದ ವಾಹನ, ಪೊಲೀಸ್ ಜೀಪ್ ಸೇರಿದಂತೆ ಸ್ಥಳದಲ್ಲಿದ್ದ ವಾಹನಗಳು ಜಖಂಗೊಂಡಿವೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    ಘಟನೆಯ ಹೇಗಾಯ್ತು?:
    ಜಲ್ಲಿಕಟ್ಟು ನಡೆಸಲು ಆಯೋಜಕರು ಅನುಮತಿ ಪಡೆದಿದ್ದರು. ಆದರೆ ನಿರೀಕ್ಷೆಗೂ ಮೀರಿ ಸುತ್ತಮುತ್ತಲಿನ ಊರುಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಬಂದಿದ್ದರು. ಹೋರಿಗಳನ್ನು ಒಟ್ಟಾಗಿ ಬಿಟ್ಟರೆ ಸಾವು, ನೋವು ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಒಂದೊಂದೇ ಹೋರಿಗಳನ್ನು ಬಿಡುವಂತೆ ಪೊಲೀಸರು, ಜಲ್ಲಿಕಟ್ಟು ಆಯೋಜಕರಲ್ಲಿ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಚರ್ಚೆ ನಡೆಯುತ್ತಿದ್ದಾಗ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ.

    ಕಲ್ಲೇಟು ಬಿದ್ದ ಕೂಡಲೇ ಪೊಲೀಸರು ಕೆಲ ಯುವಕರ ಮೇಲೆ ಲಘು ಲಾಠಿ ಚಾರ್ಜ್ ಮಾಡಿದ್ದಾರೆ. ಪೊಲೀಸ್ ಲಾಠಿ ಚಾರ್ಜ್ ನಿಂದ ಕೋಪಗೊಂಡ ಜನರು, ಸ್ಥಳದಲ್ಲಿ ನಿಂತಿದ್ದ ಪೊಲೀಸ್ ಜೀಪ್, ಅಗ್ನಿಶಾಮಕ ದಳದ ವಾಹನ, ಅಂಬ್ಯುಲೆನ್ಸ್ ಮೇಲೆ ಕಲ್ಲು ತೂರಿದ್ದಾರೆ. ಇದರಿಂದಾಗಿ ಅಲ್ಲಿದ್ದ ವಾಹನಗಳ ಗಾಜುಗಳು ಜಖಂಗೊಂಡಿದ್ದು, 5 ಜನ ಪೊಲೀಸರು ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರನ್ನೇ ಗ್ರಾಮಸ್ಥರು ಓಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    https://www.youtube.com/watch?v=golpEw7LHlM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv