Tag: jaleel murder case

  • ಕಾಟಿಪಳ್ಳದಲ್ಲಿ ಜಲೀಲ್ ಕೊಲೆ ಪ್ರಕರಣ- ಓರ್ವ ಪರಾರಿ, ಮೂವರು ಆರೋಪಿಗಳ ಬಂಧನ

    ಕಾಟಿಪಳ್ಳದಲ್ಲಿ ಜಲೀಲ್ ಕೊಲೆ ಪ್ರಕರಣ- ಓರ್ವ ಪರಾರಿ, ಮೂವರು ಆರೋಪಿಗಳ ಬಂಧನ

    ಮಂಗಳೂರು: ಇಲ್ಲಿನ ಸುರತ್ಕಲ್‍ (Surathkal) ನ ಕಾಟಿಪಳ್ಳದಲ್ಲಿ ನಡೆದ ಜಲೀಲ್ ಕೊಲೆ ಪ್ರಕರಣದ ಆರೋಪಿಗಳು ಅಂದರ್ ಆಗಿದ್ದಾರೆ. ಕೊಲೆ ಮಾಡಿದ ಇಬ್ಬರು ಸಹಕರಿಸಿದ ಓರ್ವ ಬಂಧನವಾದರೆ, ಮತ್ತೋರ್ವ ಪರಾರಿಯಾಗಿದ್ದಾನೆ.

    ಮಂಗಳೂರು (Mangaluru) ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳ ಎಂಬಲ್ಲಿ ಮೊನ್ನೆ ರಾತ್ರಿ ಭೀಕರ ಹತ್ಯೆ ನಡೆದಿತ್ತು. ಕೃಷ್ಣಾಪುರ ನಿವಾಸಿ ಕಾಟಿಪಳ್ಳ ಬಳಿ ಅಂಗಡಿ ಇಟ್ಟುಕೊಂಡಿದ್ದ ಅಬ್ದುಲ್ ಜಲೀಲ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಹತ್ಯೆ ಪ್ರಕಣ ಸಂಬಂಧ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

    ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ, ಉಡುಪಿ (Udupi) ಜಿಲ್ಲೆ, ಹೆಜಮಾಡಿ ನಿವಾಸಿ ಸವಿನ್ ಕಾಂಚನ್, ಕಾಟಿಪಳ್ಳ ನಿವಾಸಿ ಪವನ್ ಅಲಿಯಾಸ್ ಪಚ್ಚು ಬಂಧಿತರು. ಶೈಲೇಶ್ ಮತ್ತು ಸವಿನ್ ಕೊಲೆ ಮಾಡಿದರೆ ಪವನ್ ಕೊಲೆ ಮಾಡಿದವರಿಗೆ ಬೈಕ್ನಲ್ಲಿ ಡ್ರಾಪ್ ಕೊಟ್ಟಿದ್ದಾನೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಜಲೀಲ್‌ ಹತ್ಯೆ ಕೇಸ್‌ – ಇಬ್ಬರು ಮಹಿಳೆಯರ ವಿಚಾರಣೆ, ಗಾಂಜಾ ಮಾಫಿಯಾದ ವಾಸನೆ

    ಶೈಲೇಶ್ ಮತ್ತು ಸವಿನ್ ಇಬ್ಬರೂ ಕೂಡ ರೌಡಿಶೀಟರ್‍ಗಳಾಗಿದ್ದು 2021ರಲ್ಲಿ ನಟೋರಿಯಸ್ ರೌಡಿಶೀಟರ್ ಪಿಂಕಿ ನವಾಜ್ ಕೊಲೆ ಯತ್ನದ ಆರೋಪಿಗಳಾಗಿದ್ದರು. ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಕಾರಣ ಏನು ಅಂತ ತನಿಖೆ ನಡೆಸುತ್ತಿದ್ದಾರೆ.

    ಬಂಧಿತ ಮೂವರು ಆರೋಪಿಗಳನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಂದಿನ ಹತ್ತು ದಿನಗಳ ಕಾಲ ಪೊಲೀಸರ ಕಷ್ಟಡಿಗೆ ಆರೋಪಿಗಳನ್ನು ನೀಡಲಾಗಿದೆ. ಇನ್ನು ಸುರತ್ಕಲ್ ಭಾಗದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಡಿಸೆಂಬರ್ 29 ಬೆಳಗ್ಗೆ 6 ಗಂಟೆವರೆಗೂ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಮತ್ತು ಮದ್ಯ ಮಾರಾಟವನ್ನೂ ಬಂದ್ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]