Tag: Jalebi recipe

  • ಸಿಹಿಯಾದ ಜಿಲೇಬಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ

    ಸಿಹಿಯಾದ ಜಿಲೇಬಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ

    ಸಿಹಿ ತಿಂಡಿಯನ್ನು ಹಲವರು ತುಂಬಾ ಇಷ್ಟ ಪಡುತ್ತಾರೆ. ಅಂತಹವರಿಗಾಗಿ ನಾವು ಇಂದು ಜಿಲೇಬಿ ಮಾಡುವುದನ್ನು ತಿಳಿಸಿಕೊಡುತ್ತೇವೆ. ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಾವು ಇಂದು ಈ ಸಿಹಿಯಾದ ಜಿಲೇಬಿ ಮಾಡಲು ಬೇಕಾಗಿರುವ ಪದಾರ್ಥಗಳ ಪಟ್ಟಿಗಳ ಜೊತೆಗೆ ಮಾಡುವ ಸರಳ ವಿಧಾನವನ್ನು ವಿವರಿಸಿದ್ದೇವೆ.

    ಬೇಕಾಗುವ ಪದಾರ್ಥಗಳು:
    * ಸಕ್ಕರೆ- 2 ಕಪ್
    * ಮೈದಾ ಹಿಟ್ಟು-2 ಕಪ್
    * ಮೊಸರು-1 ಕಪ್
    * ಬೇಕಿಂಗ್ ಸೋಡಾ- ಸ್ವಲ್ಪ
    * ಕೇಸರಿ ದಳ- ಸ್ವಲ್ಪ
    * ಹಾಲು- 1 ಕಪ್
    * ನಿಂಬೆ ರಸ- ಸ್ವಲ್ಪ
    * ಏಲಕ್ಕಿ ಪುಡಿ- ಸ್ವಲ್ಪ
    * ಅಡುಗೆ ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು ಇದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    ಮಾಡುವ ವಿಧಾನ:

    * ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಕೇಸರಿ ದಳವನ್ನು ಹಾಕಿ ನೆನೆಯಲು ಬಿಡಿ.
    * ನಂತರ ಒಂದು ಪಾತ್ರೆಗೆ ಸಕ್ಕರೆ ಹಾಗೂ ನೀರು ಹಾಕಿ ಅಂಟಿನ ಹದಕ್ಕೆ ಪಾಕವಾಗುವಂತೆ ಕಾಯಿಸಿ.

    * ನಂತರ ಈ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಅರ್ಧ ಹಾಕಿ, ಮತ್ತರ್ಧ ತೆಗೆದಿಡಿ.
    * ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು ಸ್ವಲ್ಪ ನೀರು ಹಾಕಿಕೊಂಡು ಇಡ್ಲಿ ಹಿಟ್ಟಿನಂತೆ ಮಾಡಿಕೊಳ್ಳಿ. ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ

    * ನಂತರ ಉಳಿದರ್ಧ ಕೇಸರಿ ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ಒಲೆಯ ಮೇಲೆ ಬಾಣಲೆಯಿಟ್ಟು ಅಡುಗೆ ಎಣ್ಣೆ ಕಾಯಿಸಿಕೊಳ್ಳಿ. ನಂತರ ಹಿಟ್ಟನ್ನು ಖಾಲಿ ಸಾಸ್ ಬಾಟಲಿಗೆ ಹಾಕಿ ಎಣ್ಣೆಗೆ ಸುರುಳಿಯಾಕಾರದಲ್ಲಿ ಬಿಡಿ.

     

    * ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ನಂತರ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಎರಡೂ ಬದಿಯಲ್ಲೂ ಎರಡೆರಡು ನಿಮಿಷ ನೆನೆಸಿ ತೆಗೆದರೆ ರುಚಿಕರವಾದ ಜಿಲೇಬಿ ಸವಿಯಲು ಸಿದ್ಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]