Tag: jalandhar

  • ಜಲಂಧರ್‌ನಲ್ಲಿ ನೆರವೇರಿತು ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರನ ಅಂತ್ಯಕ್ರಿಯೆ

    ಜಲಂಧರ್‌ನಲ್ಲಿ ನೆರವೇರಿತು ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರನ ಅಂತ್ಯಕ್ರಿಯೆ

    ಚಂಡೀಗಢ: ಕಾರು ಅಪಘಾತದಲ್ಲಿ (Car Accident) ಸಾವನ್ನಪ್ಪಿದ ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ (Fauja Singh) ಅಂತ್ಯಕ್ರಿಯೆ ಭಾನುವಾರ ಪಂಜಾಬ್‌ನ ಜಲಂಧರ್‌ನಲ್ಲಿ (Jalandhar) ನೆರವೇರಿತು.

    ಅಂತ್ಯಕ್ರಿಯೆಯಲ್ಲಿ (Last Rites) ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಭಾಗವಹಿಸಿ ಗೌರವ ಸಲ್ಲಿಸಿದರು. ‘ಟರ್ಬನ್ಡ್ ಟೊರ್ನಾಡೊ’ ಎಂದು ಜನಪ್ರಿಯವಾಗಿರುವ 114 ವರ್ಷದ ಫೌಜಾ ಸಿಂಗ್ ಜಲಂಧರ್‌ನಲ್ಲಿರುವ ತಮ್ಮ ಮನೆಯ ಬಳಿ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಮೃತಪಟ್ಟಿದ್ದರು. ಇದನ್ನೂ ಓದಿ: ವಿಧಾನಸಭೆ ಅಧಿವೇಶನದಲ್ಲಿ ರಮ್ಮಿ ಗೇಮ್‌ ಆಡಿದ ಕೃಷಿ ಸಚಿವ – ವಿಪಕ್ಷಗಳಿಂದ ಭಾರಿ ಟೀಕೆ

    2000ರಲ್ಲಿ ಮ್ಯಾರಥಾನ್ ಪ್ರಯಾಣ ಆರಂಭಿಸಿದ್ದ ಫೌಜಾ ಸಿಂಗ್, 8 ಮ್ಯಾರಾಥಾನ್‌ಗಳಲ್ಲಿ ಭಾಗವಹಿಸಿದ್ದರು. ಈ ಮೂಲಕ ಅತ್ಯಂತ ಹಿರಿಯ ಮ್ಯಾರಾಥಾನ್ ಓಟಗಾರ ಎಂದು ಪ್ರಸಿದ್ಧಿ ಪಡೆದಿದ್ದರು. ಆದರೆ ಜನನ ಪ್ರಮಾಣಪತ್ರ ಇಲ್ಲದ ಕಾರಣ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಅಧಿಕೃತವಾಗಿ ನೋಂದಾಯಿಸಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಕಾರವಾರ | ಕಾರಿನ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಸಾವು

    ಇನ್ನು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಮಾಡಿದ ಆರೋಪಿ ಅನಿವಾಸಿ ಭಾರತೀಯ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತ್‌ಪಾಲ್ ಸಿಂಗ್ ಧಿಲ್ಲೋನ್ ಬಂಧಿತ ಅನಿವಾಸಿ ಭಾರತೀಯ. ಜಲಂಧರ್‌ನ ಕರ್ತಾರ್‌ಪುರದ ಅಮೃತ್‌ಪಾಲ್ ಸಿಂಗ್ ಧಿಲ್ಲೋನ್ ಕೆನಡಾದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಒಂದು ವಾರದ ಹಿಂದಷ್ಟೇ ಭಾರತಕ್ಕೆ ಬಂದಿದ್ದ. ಸಿಸಿಟಿವಿ ದೃಶ್ಯಗಳನ್ನು ಬಳಸಿಕೊಂಡು ಧಿಲ್ಲೋನ್‌ನ ಕಾರನ್ನು ಗುರುತಿಸಿದ ನಂತರ ಪೊಲೀಸರ ಹಲವಾರು ತಂಡ ಆರೋಪಿಗಾಗಿ ಶೋಧ ನಡೆಸಿತು. ಇದನ್ನೂ ಓದಿ: ವೆಜ್ ಬದಲು ಚಿಕನ್ ಪಿಜ್ಜಾ ಕಳಿಸಿದ ಡಾಮಿನೋಸ್ – 50,000 ರೂ. ದಂಡ

    ಅಪಘಾತ ಮಾಡಿದ ಫಾರ್ಚೂನರ್ ಕಾರು ಕಪುರ್ತಲಾ ನಿವಾಸಿ ವರೀಂದರ್ ಸಿಂಗ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿತ್ತು. ಈ ಹಿನ್ನೆಲೆ ಅವರನ್ನು ವಿಚಾರಿಸಿದಾಗ ಕಾರನ್ನು ಅಮೃತ್‌ಪಾಲ್‌ಗೆ ಮಾರಾಟ ಮಾಡಿರುವುದಾಗಿ ವರೀಂದರ್ ಸಿಂಗ್ ತಿಳಿಸಿದ್ದಾರೆ. ತನಿಖೆ ಬಳಿಕ ಆರೋಪಿ ಅಮೃತ್‌ಪಾಲ್‌ನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್‌ ಗುಂಡೂರಾವ್‌

  • ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ – ಒಂದೇ ಕುಟುಂಬದ ಐವರು ಸಾವು!

    ಫ್ರಿಡ್ಜ್‌ನ ಕಂಪ್ರೆಸರ್ ಸ್ಫೋಟ – ಒಂದೇ ಕುಟುಂಬದ ಐವರು ಸಾವು!

    ಚಂಡೀಗಢ: ಮನೆಯೊಂದರಲ್ಲಿ ಫ್ರಿಡ್ಜ್‌ನ (Fridge) ಕಂಪ್ರೆಸರ್ (Compressor) ಸ್ಫೋಟಗೊಂಡು (Blast) ಮೂವರು ಮಕ್ಕಳು ಸೇರಿಂತೆ ಒಂದೇ ಕುಟುಂಬದ ಒಟ್ಟು ಐವರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಜಲಂಧರ್‌ನಲ್ಲಿ (Jalandhar) ನಡೆದಿರುವುದಾಗಿ ಸೋಮವಾರ ಪೊಲೀಸರು ತಿಳಿಸಿದ್ದಾರೆ.

    ದುರ್ಘಟನೆ ಭಾನುವಾರ ರಾತ್ರಿ ನಡೆದಿದ್ದು, ಸ್ಫೋಟದಿಂದಾಗಿ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮೃತರನ್ನು ಯಶಪಾಲ್ ಘಾಯ್ (70), ರುಚಿ ಘಾಯ್ (40), ಮನ್ಶಾ (14), ದಿಯಾ (12) ಮತ್ತು ಅಕ್ಷಯ್ (10) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಇಸ್ರೇಲ್‍ನಲ್ಲಿ ಸಿಲುಕಿದ್ದ 18,000 ಭಾರತೀಯರು ಸೇಫ್

    ಸ್ಫೋಟಕ್ಕೆ ನಿಖರವಾದ ಕಾರಣ ಕಂಡುಹಿಡಿಯಲು ಮಾದರಿಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರ ತಂಡವನ್ನು ಸ್ಥಳಕ್ಕೆ ಕರೆಯಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ – 7 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

    ಚಂಡೀಗಢ: ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರ (Sisters) ಮೃತದೇಹ ತಮ್ಮ ಮನೆಯಲ್ಲಿಯೇ ಟ್ರಂಕ್‌ನಲ್ಲಿ (Trunk) ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಜಲಂಧರ್ (Jalandhar) ಜಿಲ್ಲೆಯ ಕಾನ್ಪುರ (Kanpur) ಗ್ರಾಮದಲ್ಲಿ ನಡೆದಿದೆ.

    ಮೃತ ಸಹೋದರಿಯರನ್ನು ಕಾಂಚನ್ (4), ಶಕ್ತಿ (7) ಹಾಗೂ ಅಮೃತ (9) ಎಂದು ಗುರುತಿಸಲಾಗಿದೆ. ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಒಟ್ಟು ಐವರು ಮಕ್ಕಳಿದ್ದರು. ಕೆಲಸದಿಂದ ಮನೆಗೆ ಹಿಂತಿರುಗಿದಾಗ ಮೂವರು ಮಕ್ಕಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.

    ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಕ್ಸೂದ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ನೀಡಿದ್ದಾರೆ. ಮರುದಿನ ಬಾಲಕಿಯರ ತಂದೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಎಂದಿಗಿಂತಲೂ ಭಾರವಾಗಿರುವುದು ತಿಳಿದುಬಂದಿದೆ. ಈ ವೇಳೆ ಟ್ರಂಕ್ ಅನ್ನು ತೆರದಾಗ ಮೂವರು ಬಾಲಕಿಯರ ಮೃತದೇಹಗಳು ಅದರಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

    ಬಾಲಕಿಯರ ಸಾವು ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಹೋದರಿಯರ ಸಾವಿನ ಕಾರಣವನ್ನು ತಿಳಿಯಲು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ ಬಾಲಕಿಯರ ತಂದೆಗೆ ಕುಡಿತದ ಚಟವಿದ್ದು, ಮನೆಯ ಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೊದಲ್ಲಿ ಟ್ರಕ್‌ ಅಪಘಾತಕ್ಕೆ 10 ವಲಸಿಗರು ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜಲಂಧರ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಪ್ರಮೋದ್ ಶೆಟ್ಟಿ

    ‘ಜಲಂಧರ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಪ್ರಮೋದ್ ಶೆಟ್ಟಿ

    ಲಂಧರ ಚಿತ್ರತಂಡ ಇತ್ತೀಚೆಗೆ ಪ್ರಮೋದ್ ಶೆಟ್ಟಿ (Pramod Shetty) ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿತ್ತು.  ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ  ಜನಪ್ರಿಯತೆ ಗಳಿಸಿದ ಬೆನ್ನಲ್ಲೆ  ಜಲಂಧರ (Jalandhar) ಚಿತ್ರತಂಡ, ಮಾತಿನ ಮರು ಜೋಡಣೆ ( ಡಬ್ಬಿಂಗ್ ) (Dubbing) ಅನ್ನು  ಯಶಸ್ವಿಯಾಗಿ  ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ.

    ಸ್ಟೇಪ್ ಅಪ್ ಲೋಕೇಶ್ ನಟಿಸಿ, ಕತೆ ಬರೆದು ಸ್ಟೇಪ್ ಅಪ್ ಪಿಚ್ಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ ಜಲಂಧರ ಚಿತ್ರಕ್ಕೆ ಮದನ್ ಎಸ್, ಚಂದ್ರ ಮೋಹನ್.ಸಿ ಎಲ್, ರಮೇಶ್ ರಾಮಚಂದರ್ ಹಾಗೂ ಪದ್ಮನಾಭನ್ ಹಣ ಹಾಕಿ ಕೈ ಜೋಡಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಮೊದಲ ಬಾರಿಗೆ ವಿಷ್ಣು ವಿ ಪ್ರಸನ್ನ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಕಣ್ಮುಂದೆಯೇ ರಶ್ಮಿಕಾ ಇದ್ದರೂ ಮುಖ ತಿರುಗಿಸಿಕೊಂಡು ಹೋದ ಶ್ರದ್ಧಾ ಕಪೂರ್

    ರಶ್ಮಿತ್ ಕುಮಾರ್  ನಿರ್ಮಾಣ ನಿರ್ವಹಣೆಯ ಕಾರ್ಯವನ್ನು  ವಹಿಸಿಕೊಂಡಿದ್ದು ಇನ್ನು ಚಿತ್ರಕ್ಕೆ ನುರಿತ ಸಂಕಲನಕಾರ ವೆಂಕಿ UDV ಕತ್ತರಿ ಹಾಕಿದ್ದಾರೆ. ಕೇರಳ ಮೂಲದ ಛಾಯಾಗ್ರಹಕರಾದ ವಿದ್ಯಾಶಂಕರ್ ಮತ್ತು ಸರಿನ್ ರವೀಂದ್ರನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಯುವ ಸಂಗೀತ ನಿರ್ದೇಶಕ ಜತಿನ್ ದರ್ಶನ್ ಸಂಗೀತ ನೀಡಿರುವ ಜಲಂಧರ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಅಕ್ಷಯ್ ಕುಮಾರ್ ಎಮ್, ಕಲಾ ನಿರ್ದೇಶನ ರಾಜು ವೈವಿಧ್ಯ, ಸಾಹಸ  ನಿರ್ದೇಶಕರಾದ ಕೌರವ ವೆಂಕಟೇಶ್, ಪತ್ರಿಕಾ ಸಂಪರ್ಕ ಸುದೀಂದ್ರ ವೆಂಕಟೇಶ್ ರವರು ಕೈ ಜೋಡಿಸಿದ್ದಾರೆ.

    ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಟಗರು ಖ್ಯಾತಿಯ ರುಷಿಕಾ ರಾಜ್, ರಾಘು ರಾಮನಕೊಪ್ಪ, ಅರೋಹಿತಾ ಗೌಡ, ಬಲ ರಾಜ್ವಡಿ, ಆದಿ ಕೇಶವರೆಡ್ಡಿ, ಭೀಷ್ಮ ರಾಮಯ್ಯ, ಪ್ರತಾಪ ನೆನಪು, ನವೀನ್ ಸಾಗರ್, ವಿಶಾಲ್ ಪಾಟೀಲ್, ಪ್ರಸಾದ್ ಸೂರನಹಳ್ಳಿ, ಅಂಬು, ವಿಜಯ್ ರಾಜ್ ಮತ್ತು ನಂದಿನಿ ರಾಜ್ ಅಭಿನಯಿಸಿದ್ದಾರೆ.  ಜಲಂಧರ ಚಿತ್ರ ತಂಡವೂ ತಮ್ಮ ಚಿತ್ರದ ಪ್ರತಿ ಸಣ್ಣ ತುಣುಕುಗಳನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿಸುತ್ತಾ ಚಿತ್ರದ ಅಂತಿಮ ಘಟ್ಟದತ್ತ ಸಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊರೊನಾ ಪ್ರಕರಣ ಹೆಚ್ಚಳ – ಜಲಂಧರ್‌‌ನಲ್ಲಿ ನೈಟ್ ಕರ್ಫ್ಯೂ

    ಕೊರೊನಾ ಪ್ರಕರಣ ಹೆಚ್ಚಳ – ಜಲಂಧರ್‌‌ನಲ್ಲಿ ನೈಟ್ ಕರ್ಫ್ಯೂ

    ಚಂಡೀಗಢ: ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದಿನಿಂದ ಜಲಂಧರ್ ಜಿಲ್ಲೆಯಲ್ಲಿ ರಾತ್ರಿ 11 ರಿಂದ ಮುಂಜಾನೆ 5ರವರೆಗೂ ನೈಟ್ ಕರ್ಫ್ಯೂ ಮಾಡಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಘನಾಶ್ಯಾಮ್ ಥೋರಿ ತಿಳಿಸಿದ್ದಾರೆ.

    ಶುಕ್ರವಾರ ಜಿಲ್ಲೆಯಲ್ಲಿ ಸುಮಾರು 134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ 856 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕಳೆದ ತಿಂಗಳು ಪಂಜಾಬ್ ಸರ್ಕಾರ ಕೊರೊನಾ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ನಡೆಸಲು ಆದೇಶಿಸಿತ್ತು. ಪಂಜಾಬ್‍ನಲ್ಲಿ ಶುಕ್ರವಾರ 818ಕ್ಕೂ ಹೊಸ ಪ್ರಕರಣಗಳು ದಾಖಲಾಗಿದ್ದು, 1,86,189ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ. ಅಲ್ಲದೆ 11 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 5,898ಕ್ಕೆ ಏರಿಕೆಯಾಗಿದೆ.

    ಮಹಾರಾಷ್ಟ್ರದ ನಂತರ ನಾಲ್ಕು ವಾರಗಳಲ್ಲಿ ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಿದ್ದು, 6,264 ಇದ್ದ ಕೊರೊನಾ ಸಕ್ರಿಯ ಪ್ರಕರಣಗಳು ಇದೀಗ 6661ಕ್ಕೆ ಏರಿಕೆಯಾಗಿದೆ. ಜಲಂಧರ್ ಬಳಿಕ ಲುಧಿನಾದಲ್ಲಿ 105 ಪ್ರಕರಣಗಳು, ಪಟಿಯಾಲದಲ್ಲಿ 104 ಪ್ರಕರಣಗಳು ವರದಿಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡು 400 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಒಟ್ಟಾರೆ ಈವರೆಗೂ 1,73,630 ಸೋಂಕಿನಿಂದ ಗುಣಮುಕ್ತರಾಗಿದ್ದಾರೆ.

    ಇನ್ನೂ ಚಂಡೀಗಢದಲ್ಲಿ 76 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದೀಗ 22,116ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ.

  • ಗಂಡ ಫಾರಿನ್‍ನಲ್ಲಿ, ಹೆಂಡ್ತಿ ಪಕ್ಕದ್ಮನೆಯವನ ತೆಕ್ಕೆಯಲ್ಲಿ!

    ಗಂಡ ಫಾರಿನ್‍ನಲ್ಲಿ, ಹೆಂಡ್ತಿ ಪಕ್ಕದ್ಮನೆಯವನ ತೆಕ್ಕೆಯಲ್ಲಿ!

    – ಸಿಟ್ಟಿಗೆದ್ದವ ಪತ್ನಿ ಮಕ್ಕಳ ಕೊಂದು ತಾನೂ ಸತ್ತ!

    ಕಪುರ್ತಲ (ಪಂಜಾಬ್): ವಿದೇಶದಿಂದ ವಾಪಸ್ಸಾದ ಐದು ಗಂಟೆಯಲ್ಲೇ ಪತಿರಾಯನೊಬ್ಬ ಬೆಂಕಿ ಹಚ್ಚಿ ಪತ್ನಿ ಹಾಗೂ ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಲಸಂಘಿಯಾನ್ ನಲ್ಲಿ ನಡೆದಿದೆ. ಪತ್ನಿಗಿದ್ದ ಅಕ್ರಮ ಸಂಬಂಧವೇ ಘಟನೆಗೆ ಕಾರಣ ಎನ್ನಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಘಟನೆಗೆ ಕಾರಣವೇನು?:
    ಜಲಂಧರ್ ನ ಕಪುರ್ತಲ ಜಿಲ್ಲೆಯ ಆಲಂಗೀರ್ ಮೊಹಲ್ಲಾದ ಕುಲ್ವಿಂದರ್ ಸಿಂಗ್ ಗೆ ಮನ್‍ದೀಪ್ ಕೌರ್ ಜೊತೆ ವಿವಾಹವಾಗಿತ್ತು. ಈ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಕೂಡಾ ಹುಟ್ಟಿದ್ದರು. ಆದರೆ ಗಂಡ ವಿದೇಶಕ್ಕೆ ತೆರಳಿದ್ದ ವೇಳೆ ಅದೇ ನಗರದ ಗುರುಪ್ರೀತ್ ಸಿಂಗ್ ಅಲಿಯಾಸ್ ಸನ್ನಿ ಎಂಬಾತನ ಜೊತೆ ಪತ್ನಿಗೆ ಲವ್ವಿ ಡವ್ವಿ ಶುರುವಾಗಿದೆ. ಇವರಿಬ್ಬರ ಪ್ರಣಯದಾಟ ಮೊಬೈಲಿನಲ್ಲಿ ಸೆರೆಯಾಗಿದೆ. ಅಲ್ಲದೆ ಈ ವೀಡಿಯೋ ಮಾಡಿದವರು ಇದನ್ನು ಪರಸ್ಪರ ಹಂಚಿಕೊಂಡಿದ್ದರು.

    ಜೋರ್ಡಾನ್ ನಲ್ಲಿದ್ದ ಕುಲ್ವಿಂದರ್ ಗೆ ಯಾರೋ ಫೋನ್ ಮಾಡಿ ನಿಮ್ಮ ಪತ್ನಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆ. ಇದರ ವೀಡಿಯೋ ಕೂಡಾ ಇದೆ. ಇದನ್ನೇ ಮುಂದಿಟ್ಟುಕೊಂಡು ಸನ್ನಿ, ಆತನ ತಾಯಿ ಹಾಗೂ ಇನ್ನಿಬ್ಬರು ನಿಮ್ಮ ಪತ್ನಿಯನ್ನು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಪತಿ ಯಾರಿಗೂ ಮಾಹಿತಿ ನೀಡದೇ ವಿದೇಶದಿಂದ ಬುಧವಾರ ವಾಪಸ್ಸಾಗಿದ್ದಾನೆ. ರಾತ್ರಿ 11 ಗಂಟೆಗೆ ಮನೆಗೆ ವಾಪಸ್ಸಾದ ವೇಳೆಯೇ ಈ ವಿಚಾರದಲ್ಲಿ ಪತಿ ಪತ್ನಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದು ಪತ್ನಿ ಹಾಗೂ ಮಕ್ಕಳ ಕೊಲೆಯಲ್ಲಿ ಅಂತ್ಯವಾಗಿದೆ.

    ಪೊಲೀಸರು ಹೇಳಿದ್ದೇನು?:
    ಘಟನೆ ಬಗ್ಗೆ ವಿವರ ನೀಡಿದ ಪೊಲೀಸರು, ಗುರುವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಕುಲ್ವಿಂದರ್ ಈ ಕೃತ್ಯವೆಸಗಿದ್ದಾನೆ. ಕುಲ್ವಿಂದರ್ ಹಾಗೂ 5 ವರ್ಷದ ಪುತ್ರ ಸ್ಥಳದಲ್ಲೇ ಸಾವನ್ನಪ್ಪಿದರೆ, 8 ವರ್ಷದ ಪುತ್ರಿ ಕಪುರ್ತಲ ಆಸ್ಪತ್ರೆಯಲ್ಲಿ ಸಾವನ್ನಪಿದ್ದಾಳೆ. ಪತ್ನಿಯನ್ನು ಜಲಂಧರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪೊಲೀಸರ ಮುಂದೆ ಹೇಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಮನ್‍ದೀಪ್ ಕೂಡಾ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.

    ಅಶ್ಲೀಲ ವೀಡಿಯೋ ಮುಂದಿಟ್ಟುಕೊಂಡು ಸನ್ನಿ ಮತ್ತೆ ಸೆಕ್ಸ್ ಗೆ ಸಹಕರಿಸುವಂತೆ ಆಹ್ವಾನಿಸಿದ್ದಾನೆ. ಈ ವಿಷಯವನ್ನು ನಾನು ನನ್ನ ಪತಿಗೆ ತಿಳಿಸಿದಾಗ ಅವರು ಸಿಟ್ಟಾಗಿದ್ದಾರೆ. ಇದಾದ ಬಳಿಕ ನಾವೆಲ್ಲಾ ಮಲಗಿದ್ದೆವು. ಈ ವೇಳೆ ನನ್ನ ಪತಿ ಕುಲ್ವಿಂದರ್ ನಮ್ಮ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಜೊತೆಗೆ ತಮಗೂ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮನ್‍ದೀಪ್ ಕೌರ್ ತಿಳಿಸಿದ್ದಾಳೆ.

    ಪಕ್ಕದ ಕೊಠಡಿಯಲ್ಲೇ ಮಲಗಿದ್ದ ಕುಲ್ವಿಂದರ್ ಸೋದರಿ ಜಸ್ವಿಂದರ್ ಕೌರ್ ಗೆ ಎಲ್ಲರ ಅರಚಾಟ, ನರಳಾಟ ಕೇಳಿಸಿದೆ. ಇವರ ರಕ್ಷಣೆಗೆ ಮುಂದಾಗಿದ್ದ ಜಸ್ವಿಂದರ್ ಗೂ ಸುಟ್ಟ ಗಾಯಗಳಾಗಿವೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಲಂಧರ್ ಆಸ್ಪತ್ರೆಯ ಮೆಡಿಕಲ್ ಅಧೀಕ್ಷಕ ಎಂ.ಎಸ್.ಬಾವಾ ಹೇಳಿದ್ದಾರೆ.

    ಹಲವು ವರ್ಷಗಳಿಂದ ಜೋರ್ಡಾನ್ ನಲ್ಲಿದ್ದ ಕುಲ್ವಿಂದರ್ ಬುಧವಾರ ರಾತ್ರಿ ಊರಿಗೆ ವಾಪಸ್ಸಾಗಿದ್ದ. ಈ ವೇಳೆ ಪತ್ನಿ ಸ್ಥಳೀಯ ಯುವಕನೊಬ್ಬ ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಸಹಕರಿಸದಿದ್ದರೆ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ತಿಳಿಸಿದ್ದಾಳೆ. ಇದನ್ನು ಕೇಳಿ ಪತಿ ಸಿಟ್ಟಿಗೆದ್ದಿದ್ದಾನೆ ಎಂದು ಎಸ್‍ಪಿ ಜಗಜಿತ್ ಸಿಂಗ್ ಸರೋಯಾ ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸನ್ನಿ, ಸನ್ನಿಯ ತಾಯಿ ಸತ್ಯ ದೇವಿ, ಸ್ನೇಹಿತರಾದ ಬಲ್ಕರ್ ಸಿಂಗ್ ಹಾಗೂ ತೀರ್ಥ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಸದ್ಯ ಪೊಲೀಸರು ಸನ್ನಿ ಹಾಗೂ ಆತನ ಸ್ನೇಹಿತ ಬಲ್ಕರ್ ಸಿಂಗ್ ನನ್ನು ಬಂಧಿಸಿದ್ದಾರೆ. ಈ ವೀಡಿಯೋವನ್ನು ಶೂಟ್ ಮಾಡಿದ್ದು ಸನ್ನಿಯ ತಾಯಿ ಎನ್ನಲಾಗಿದ್ದು, ಈ ವೀಡಿಯೋ ಮುಂದಿಟ್ಟುಕೊಂಡೇ ಆಕೆ ಹಣಕ್ಕಾಗಿ ಬ್ಲ್ಯಾಕ್ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನಿಬ್ಬರ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಅಂತ್ಯಕ್ರಿಯೆಗೆ ಹಣವಿಲ್ಲದೆ 3 ದಿನ ನಾಲ್ಕು ಮೃತದೇಹಗಳ ಪಕ್ಕದಲ್ಲೇ ಮಲಗಿದ ಕುಟುಂಬ

    ಅಂತ್ಯಕ್ರಿಯೆಗೆ ಹಣವಿಲ್ಲದೆ 3 ದಿನ ನಾಲ್ಕು ಮೃತದೇಹಗಳ ಪಕ್ಕದಲ್ಲೇ ಮಲಗಿದ ಕುಟುಂಬ

    ಜಲಂಧರ್: ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಕುಟುಂಬಸ್ಥರು ಮೃತದೇಹದ ಪಕ್ಕದಲ್ಲೇ 3 ದಿನಗಳ ಕಾಲ ಮಲಗಿದ್ದ ಹೃದಯ ವಿದ್ರಾವಕ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಮಹಿಳೆಯೊಬ್ಬರು ಗಂಡನ ಶವದ ಪಕ್ಕದಲ್ಲೇ ಮಲಗಿಕೊಂಡು ಮೂರು ದಿನ ಕಳೆದಿದ್ದಾರೆ. ಡಿಸೆಂಬರ್ 31ರಂದು ಜಲಂಧರ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಲಿಪ್ ಸಿಂಗ್(40) ಸಾವನ್ನಪ್ಪಿದ್ದರು. ಜೊತೆಗೆ ಮೂರು ತಿಂಗಳ ಮಗಳಾದ ಅಂಜಲಿ ಕೂಡ ಸಾವನ್ನಪ್ಪಿದ್ದು, ಅವರ ಶವಗಳನ್ನ ಮೂರು ದಿನಗಳಾದ್ರೂ ಅಂತ್ಯಸಂಸ್ಕಾರ ಮಾಡಿರಲಿಲ್ಲ. ದಲಿಪ್ ಸಿಂಗ್ ಪತ್ನಿ ಪಲಮ್‍ಗೆ ಕಾಲು ಮೂಳೆ ಮುರಿದಿದ್ದು, ಪತಿಯ ಶವದ ಪಕ್ಕದಲ್ಲೇ ಮೂರು ದಿನ ಮಲಗಿದ್ದಾರೆ.

    ಅಂತ್ಯಸಂಸ್ಕಾರ ನೆರವೇರಿಸಲು ನನ್ನ ಬಳಿ ಹಣವಿಲ್ಲ ಎಂದು ಪಲಮ್ ಮಂಗಳವಾರದಂದು ಪತ್ರಿಕೆಯೊಂದಕ್ಕೆ ಹೇಳಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ಎದುರಿಸಿದ್ದು ಪಲಮ್ ಒಬ್ಬರೇ ಅಲ್ಲ. ಅಪಘಾತ ನಡೆದ ವೇಳೆ ನಾನು ನನ್ನ ಗಂಡನ ಜೊತೆ ಇರಬೇಕಿತ್ತು ಎಂದು ಮತ್ತೊಬ್ಬ ಮೃತ ವ್ಯಕ್ತಿ ಮೋಹಿಂದರ್(23) ಪತ್ನಿಯಾದ 7 ತಿಂಗಳ ಗರ್ಭಿಣಿ ನೀಲಮ್(21) ಹೇಳಿದ್ದಾರೆ. ನನ್ನ ಕಣ್ಣ ಮುಂದೆಯೇ ಅವರ ಮೃತದೇಹ ಇದೆ. ಆದ್ರೆ ಅವರ ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಾಗದೇ ಅಸಹಾಯಕಳಾಗಿದ್ದೀನಿ ಎಂದಿದ್ದಾರೆ.

    ಒಟ್ಟು ಐವರು ಮೃತರಲ್ಲಿ ನಾಲ್ವರ ಅಂತ್ಯಸಂಸ್ಕಾರ ನೆರವೇರಿರರಿಲ್ಲ. ವಿಷಯ ತಿಳಿದ ನಂತರ ರೆಡ್ ಕ್ರಾಸ್ ಸಂಸ್ಥೆ ಅಂತ್ಯಸಂಸ್ಕಾರಕ್ಕಾಗಿ ತಲಾ 4 ಸಾವಿರ ರೂ. ನೀಡಿದೆ.

    ಬೀದಿ ನಾಯಿಗಳು ಶವಗಳಿಗೆ ಹಾನಿ ಮಾಡಬಾರದೆಂಬ ಕಾರಣಕ್ಕೆ ಮೂರು ದಿನಗಳಿಂದ ನಾವು ಸಂಬಂಧಿಕರ ಮೃತದೇಹಗಳ ಜೊತೆಯಲ್ಲೇ ಮಲಗುತ್ತಿದ್ದೇವೆ. ನಾವು ತುಂಬಾ ಬಡವರು, ಅಂತ್ಯಕ್ರಿಯೆ ನೆರವೇರಿಸಲು ಹಣವಿಲ್ಲ ಎಂದು ಸಹೋದರನನ್ನು ಕಳೆದುಕೊಂಡಿರೋ ಭೋಲಾ ಹೇಳಿದ್ದಾರೆ.

    ಈ ಕಾರ್ಮಿಕ ಕುಟುಂಬ ಇಲ್ಲಿನ ಲಾಂಬ್ರಾ ಗ್ರಾಮದಲ್ಲಿ ಗುಡಿಸಲು ಹಾಕಿಕೊಂಡು ವಾಸವಿದ್ದರು. ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಇಲ್ಲಿನ ಸ್ಥಳೀಯ ಚರ್ಚ್‍ಗೆ ಹೋಗಿದ್ದರು. ಅಲ್ಲಿಂದ ಆಟೋ ರಿಕ್ಷಾದಲ್ಲಿ ಹಿಂದಿರುಗುವಾಗ ಮತ್ತೊಂದು ವಾಹನಕ್ಕೆ ಆಟೋ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಆಟೋ ಚಾಲಕ ಕೂಡ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಆದ್ರೆ ಉಳಿದವರಾದ ಮೋಹಿಂದರ್, ಧರಮ್ ದೇವಿ, ದಲಿಪ್ ಹಾಗೂ ಮಗಳಾದ ಅಂಜಲಿಯ ಅಂತ್ಯಕ್ರಿಯೆ ನರವೇರಿರಲಿಲ್ಲ.

    ಘಟನೆಯಲ್ಲಿ ಗಾಯಗೊಂಡ 6 ಜನ ಕೂಡ ಯಾವುದೇ ಚಿಕಿತ್ಸೆ ಪಡೆದಿಲ್ಲ. ತಲೆಗೆ ತೀವ್ರವಾಗಿ ಗಾಯವಾಗಿದ್ದ ಜೋಹಿಲ್ ಎಂಬವರು ಮಾತ್ರ ಸ್ಥಳಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಅವರ ಚಿಕಿತ್ಸೆಗೂ ಕೂಡ ಕುಟುಂಬದ ಬಳಿ ಹಣವಿಲ್ಲ. ಕಳೆದ ಮೂರು ದಿನಗಳಿಂದ ಚರ್ಚ್ ಮ್ಯಾನೇಜ್‍ಮೆಂಟ್ ಹಾಗೂ ಕೆಲವು ಗ್ರಾಮಸ್ಥರು ಇವರಿಗೆ ಊಟ ನೀಡಿದ್ದಾರೆ.

    ಮಂಗಳವಾರದಂದು ಸಬ್- ಡಿವಿಷನಲ್ ಮ್ಯಾಜಿಸ್ಟ್ರೇಟ್ ಪರಮ್‍ವೀರ್ ಸಿಂಗ್ ಹಾಗೂ ಲಾಂಬ್ರಾ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಡಿಸಿ ವಾರಿಂದರ್ ಕುಮಾರ್ ಶರ್ಮಾ ಈ ಬಗ್ಗೆ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಮೃತರ ಕುಟುಂಬಕ್ಕೆ ತಲಾ 4 ಸಾವಿರ ರೂ. ನೀಡಿದೆ. ಅಂತ್ಯಸಂಸ್ಕಾರ ನೆರವೇರಿಸಲು ಒಪ್ಪಿದ್ದಾರೆ. ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೂ ಸರ್ಕಾರಿ ವೆಚ್ಚದಲ್ಲಿ ಎಲ್ಲಾ ಅಗತ್ಯ ಚಿಕಿತ್ಸೆ ಒದಗಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.