Tag: jalajivan Mission Pipeline

  • ಅಜ್ಜಿ ಮನೆಗೆ ಬಂದಿದ್ದ ಬಾಲಕಿ ಕಾಮಗಾರಿಗೆ ಅಗೆದ ಗುಂಡಿಯಲ್ಲಿ ಬಿದ್ದು ಸಾವು

    ಅಜ್ಜಿ ಮನೆಗೆ ಬಂದಿದ್ದ ಬಾಲಕಿ ಕಾಮಗಾರಿಗೆ ಅಗೆದ ಗುಂಡಿಯಲ್ಲಿ ಬಿದ್ದು ಸಾವು

    ಕೊಪ್ಪಳ: ಜಲಜೀವನ್ ಮಿಶನ್ ಪೈಪಲೈನ್ ಕಾಮಗಾರಿಗೆಂದು ಅಗೆದಿದ್ದ ಗುಂಡಿಯಲ್ಲಿ ಬಾಲಕಿಯೊಬ್ಬಳು ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದಲ್ಲಿ ನಡೆದಿದೆ.

    ಮೂಲತಃ ಕೊಪ್ಪಳ ತಾಲೂಕಿನ ಶಿವಪುರ ನಿವಾಸಿಯಾಗಿರುವ ಅನುಪಮ (13) ಮೃತ ಬಾಲಕಿ. ಕಳೆದ ಒಂದು ತಿಂಗಳ ಹಿಂದೆ ಈ ಗುಂಡಿಯನ್ನು ಅಗೆಯಲಾಗಿತ್ತು. ಅಗೆದಿದ್ದ ಗುಂಡಿಯ ಹತ್ತಿರ ಬಾಲಕಿಯು ಆಟವಾಡಲು ತೆರಳಿದ್ದ ವೇಳೆ ಅವಳು ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಗುಂಡಿಯನ್ನು ಅಗೆದು ಮುಚ್ಚದೆ ಇರುವುದೇ ಈ ದುರಂತಕ್ಕೆ ಕಾರಣವಾಗಿದೆ. ಇದನ್ನೂ ಓದಿ: ತಂದೆ ಎನ್ನುವುದನ್ನು ನೋಡದೆ ಕೇವಲ 900 ರೂ. ಆಸೆಗೆ ಕೊಂದೇ ಬಿಟ್ಟ!

    ಅನುಪಮ ಗುಂಡಿಯಲ್ಲಿ ಬಿದ್ದ ಕಾರಣ ಅವಳ ಉಸಿರು ಗಟ್ಟಿತ್ತು. ಆಸ್ಪತ್ರೆಗೆ ಸಾಗಿಸುವ ರಸ್ತೆ ಮಧ್ಯೆಯೇ ಬಾಲಕಿಯು ಸಾವನ್ನಪ್ಪಿದ್ದಾಳೆ. ಅನು ಸಾವಿಗೆ ಕಾಮಗಾರಿಯ ಗುತ್ತಿಗೆದಾರನೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅಜ್ಜಿ ಮನೆಗೆ ಬಂದಿದ್ದ ಆ ಪುಟ್ಟ ಬಾಲಕಿಯು ಗುಂಡಿಗೆ ಬಿದ್ದು ಸಾವನ್ನಪಿದ್ದಾಳೆ.

    ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.