Tag: Jal Jeevan Mission

  • ಜಲಜೀವನ್ ಮಿಷನ್‌ಗೆ ರಾಜ್ಯಕ್ಕೆ ಘೋಷಿಸಿದ ಹಣ ಬಿಡುಗಡೆ ಮಾಡದೇ ಕೇಂದ್ರ ದ್ರೋಹ: ಸಿಎಂ

    ಜಲಜೀವನ್ ಮಿಷನ್‌ಗೆ ರಾಜ್ಯಕ್ಕೆ ಘೋಷಿಸಿದ ಹಣ ಬಿಡುಗಡೆ ಮಾಡದೇ ಕೇಂದ್ರ ದ್ರೋಹ: ಸಿಎಂ

    – ಕೇಂದ್ರ ವರ್ಸಸ್ ರಾಜ್ಯ ಸರ್ಕಾರದ ನಡುವೆ ಜಲಜೀವನ್ ಮಿಷನ್ ಫೈಟ್

    ಬೆಂಗಳೂರು: ಪ್ರತಿಷ್ಠಿತ ಜಲಜೀವನ್ ಮಿಷನ್‌ಗೆ (Jal Jeevan Mission) ಸಂಬಧಿಸಿ ರಾಜ್ಯಕ್ಕೆ ಘೋಷಿಸಲಾದ ಹಣವನ್ನು ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ದ್ರೋಹ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಗಂಭೀರ ಆರೋಪ ಮಾಡಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿದ ಅವರು, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಸಚಿವ ಸೋಮಣ್ಣರನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಜೆಜೆಎಂ ಅಡಿ ಕರ್ನಾಟಕಕ್ಕೆ 28,623 ಕೋಟಿ ರೂ. ರಿಲೀಸ್ ಮಾಡಿದ್ರೂ, ಅವರು ಖರ್ಚು ಮಾಡಿರೋದು ಬರೀ 11, 760 ಕೋಟಿ ರೂ. ಎಂದು ಸೋಮಣ್ಣ ಲೋಕಸಭೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಸೋಮಣ್ಣ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಆಪಾದಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳದಿಂದ ಬರುತ್ತಿದ್ದಾಗ ಅಪಘಾತ – ರಾಯಚೂರಿನ ವ್ಯಕ್ತಿ ಸಾವು

    ರಾಜ್ಯದಲ್ಲಿ ಜೆಜೆಎಂಗೆ 49,262 ಕೋಟಿ ರೂ. ನಿಗದಿಯಾಗಿದೆ. ಇದರಲ್ಲಿ ಕೇಂದ್ರದ ಪಾಲು 26,119 ಕೋಟಿ ರೂ., ರಾಜ್ಯದ ಪಾಲು 23,142 ಕೋಟಿ. ಇದರಲ್ಲಿ ಬಿಡುಗಡೆ ಆಗಿರೋದು 32,202 ಕೋಟಿ. ಈ ಪೈಕಿ ಕೇಂದ್ರ ಕೊಟ್ಟಿರೋದು ಬರೀ 11,760 ಕೋಟಿ. ಅಂದರೆ ಬರೀ 45% ಮಾತ್ರ. ರಾಜ್ಯ ಕೊಟ್ಟಿರೋದು 20,442 ಕೋಟಿ. ಅಂದರೆ 88%ರಷ್ಟು ಮೊತ್ತ. ಬಿಡುಗಡೆಯಾದ 33,202 ಕೋಟಿಯಲ್ಲಿ ಸರ್ಕಾರ 29,413 ಕೋಟಿ ಖರ್ಚು ಮಾಡಿದೆ ಎಂದು ಸಿಎಂ ವಿವರ ನೀಡಿದ್ದಾರೆ. ಇದನ್ನೂ ಓದಿ: ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ನರೇಂದ್ರ ಮೋದಿ ಅವರ ಸರ್ಕಾರ ತನ್ನ ಬಜೆಟ್‌ನಲ್ಲಿ ಅಗತ್ಯ ಪ್ರಮಾಣದ ಅನುದಾನ ನೀಡದೆ ಜಲಜೀವನ್ ಮಿಷನ್ ಯೋಜನೆಯನ್ನು ಕೊಲ್ಲುತ್ತಿದೆ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಅನ್ಯಾಯವನ್ನು ಪ್ರಶ್ನಿಸಬೇಕಿದ್ದ ಸಚಿವ ಸೋಮಣ್ಣ ಅವರಂತಹ ಬಿಜೆಪಿ ನಾಯಕರು ನಿರ್ಲಜ್ಜರಾಗಿ ತಪ್ಪು ಮಾಹಿತಿಯನ್ನು ಹರಡಿ ಕನ್ನಡಿಗರಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Haveri | ಸತ್ತು ಬದುಕಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

  • 25 ಲಕ್ಷ ಮೌಲ್ಯದ ಜಲ ಜೀವನ್ ಯೋಜನೆ ಪೈಪ್‌ ಸುಟ್ಟು ಹಾಕಿದ ಕಿಡಿಗೇಡಿಗಳು

    25 ಲಕ್ಷ ಮೌಲ್ಯದ ಜಲ ಜೀವನ್ ಯೋಜನೆ ಪೈಪ್‌ ಸುಟ್ಟು ಹಾಕಿದ ಕಿಡಿಗೇಡಿಗಳು

    ಚಿಕ್ಕಮಗಳೂರು:‌ ಕುಡಿಯುವ ನೀರಿನ ಯೋಜನೆಗೆ ತಂದು ಹಾಕಿದ್ದ ನೀರಿನ ಪೈಪ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಮೂಡಿಗೆರೆ (Mudigere) ತಾಲೂಕಿನ ತ್ರಿಪುರ ಗ್ರಾಮದಲ್ಲಿ ನಡೆದಿದೆ.

    ಬೆಂಕಿಯಿಂದ 25 ಲಕ್ಷ ರೂ. ಮೌಲ್ಯದ ನೀರಿನ ಪೈಪ್‌ಗಳು ಸುಟ್ಟು ಕರಕಲಾಗಿವೆ. ಪ್ರಧಾನ ಮಂತ್ರಿಯವರ ಕನಸಿನ ಯೋಜನೆಯಾದ ಹರ್‌ ಘರ್‌ ಜಲ್‌ ಯೋಜನೆಯಡಿ ನೀರಿನ ಪೈಪ್‌ಗಳನ್ನು ತಂದು ಹಾಕಲಾಗಿತ್ತು. ನವೆಂಬರ್ 4ರ ಸೋಮವಾರದಿಂದ ಕೆಲಸ ಕೂಡ ಆರಂಭವಾಗಬೇಕಿತ್ತು. ಆದರೆ ಕಿಡಿಗೇಡಿಗಳು ಪೈಪ್‌ಗಳಿಗೆ ಬೆಂಕಿ ಹಚ್ಚಿದ್ದು, ಎಲ್ಲಾ ಪೈಪ್‌ಗಳು ಸುಟ್ಟು ಕರಕಲಾಗಿವೆ.

    ಹರೀಶ್ ಎಂಬವರು ಯೋಜನೆಯ ಗುತ್ತಿಗೆ ಪಡೆದು ಪೈಪ್‌ಗಳನ್ನು ತಂದು ಹಾಕಿದ್ದರು. ಇದೀಗ 25 ಲಕ್ಷ ರೂ. ಮೌಲ್ಯದ ಪೈಪ್‌ಗಳು ಸುಟ್ಟು ಹೋಗಿದ್ದು, ಗುತ್ತಿಗೆದಾರ ಕಣ್ಣೀರಿಟ್ಟಿದ್ದಾರೆ.

    ಸ್ಥಳಕ್ಕೆ ಬಣಕಲ್‌ ಪೊಲೀಸರು (Police) ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ‌

  • ಜಲ ಜೀವನ್ ಅಕ್ರಮ – ಒಂದೇ ಗ್ರಾಮದಲ್ಲಿ 81 ಲಕ್ಷ ಲೂಟಿ!

    ಜಲ ಜೀವನ್ ಅಕ್ರಮ – ಒಂದೇ ಗ್ರಾಮದಲ್ಲಿ 81 ಲಕ್ಷ ಲೂಟಿ!

    – ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆರೋಪ

    ದಾವಣಗೆರೆ: ಕೇಂದ್ರ ಸರ್ಕಾರ ಪ್ರತಿ ಮನೆಗೂ ನೀರು ತಲುಪಿಸಲು `ಹರ್ ಘರ್ ಜಲ್’ (Har Ghar Jal ) ಎಂಬ ಯೋಜನೆ ಆರಂಭಿಸಿದ್ದು ಇದಕ್ಕಾಗಿ ಕೋಟ್ಯಂತರ ರೂ. ಹಣ ವ್ಯಯಮಾಡಿದೆ. ಈ ಯೋಜನೆಯ ಹಣದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು 81 ಲಕ್ಷ ರೂ. ಲೂಟಿ ಹೊಡೆದ ಆರೋಪ ದಾವಣಗೆರೆಯ (Davanagere) ಅಲೂರು ಹಟ್ಟಿ ಗ್ರಾಮದಲ್ಲಿ ಕೇಳಿಬಂದಿದೆ.

    ಈ ಗ್ರಾಮದಲ್ಲಿ ಮನೆ ಮನೆಗೆ ಗಂಗೆ ಯೋಜನೆ ಕಾಮಗಾರಿ ನಡೆದಿದೆ. ಇಲ್ಲಿಯವರೆಗೂ ನೀರು ಒಂದು ದಿನವೂ ಬಂದಿಲ್ಲ. ಕಳಪೆ ಗುಣಮಟ್ಟದ ನಲ್ಲಿಗಳು, ಮೋಟರ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ಇವು ಕಿತ್ತು ಬಂದಿವೆ. ಇದನ್ನೂ ಓದಿ: ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ: ಪೇಜಾವರ ಶ್ರೀ

    ಈ ಗ್ರಾಮದಲ್ಲಿ 2020-21 ಸಾಲಿನ ಜಲ ಜೀವನ್ ಮಿಷನ್ (Jal Jeevan Mission) ಅಡಿಯಲ್ಲಿ 81 ಲಕ್ಷ ರೂ. ಹಣ ಬಿಡುಗಡೆಯಾಗಿತ್ತು. ಗುತ್ತಿಗೆದಾರ ಗುಂಡಗತ್ತಿ ಎಂಬವರಿಗೆ ಟೆಂಡರ್ ಆಗಿ, ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಲಾಗುತ್ತಿಲ್ಲ.

    ಸರ್ಕಾರದ ಯೋಜನೆ ಅಂದ್ರೆ ಬಹುತೇಕರಲ್ಲಿ ಇದೇ ರೀತಿ ಅಸಡ್ಡೆ ಇರುತ್ತದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರರ ಮತ್ತು ಅಧಿಕಾರಿಗಳು, ಜನ ಪ್ರತಿನಿಧಿಗಳು ಶಾಮೀಲಾಗಿ ಕೊಳ್ಳೆ ಹೊಡೆದಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್‌ ಪಟಾಕಿ ಮಳಿಗೆಯಲ್ಲಿ ಅಗ್ನಿ ದುರಂತ – 10ಕ್ಕೂ ಹೆಚ್ಚು‌ ವಾಹನ ಬೆಂಕಿಗಾಹುತಿ

  • ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ಜಲ ಜೀವನ್ ಮಿಷನ್‌ ಯೋಜನೆಯಲ್ಲೂ ಅಕ್ರಮ ಆರೋಪ – 116 ಟೆಂಡ‌ರ್ ಹಣ ಮುಟ್ಟುಗೋಲು

    ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ (MUDA Scam) ಹಾಗೂ ಕೋವಿಡ್‌ ಹಗರಣ ರಾಜ್ಯದಲ್ಲಿ ಸದ್ದು ಮಾಡುತ್ತಿವೆ. ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ಜಲ್‌ ಜೀವನ್‌ ಮೀಷನ್‌ ಯೋಜನೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.

    ಜಲ ಜೀವನ್ ಮಿಷನ್ (JJM) ಯೋಜನೆಯಲ್ಲಿ ಗುಣಮಟ್ಟದ ಕೆಲಸ ನಿರ್ವಹಿಸದ 116 ಕಾಮಗಾರಿಗಳ ಟೆಂಡ‌ರ್ ಹಣವನ್ನು ಈವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ | ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರ – ಸತತ 1 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ

    ಜೆಜೆಎಂ ಯೋಜನೆಯಲ್ಲಿ ಅಕ್ರಮಗಳು ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಸ್ಪಷ್ಟನೆ ನೀಡಿದ್ದಾರೆ. ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MUDA Scam | ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ – ಕೋವಿಡ್ ಹಗರಣ ವರದಿಗೆ ಉತ್ತರ ಕೊಡ್ತೇವೆ: ಬೊಮ್ಮಾಯಿ

    ಜೆಜೆಎಂ ಯೋಜನೆಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನಿರ್ವಹಿಸಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದ ನಂತರ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜಿನಿಯರುಗಳ ನೇತೃತ್ವದ ತಂಡ ತುಮಕೂರು, ಕೊರಟಗೆರೆ ತಾಲ್ಲೂಕಿಗೆ ಭೇಟಿನೀಡಿ ಪರಿಶೀಲನೆ ನಡೆಸಿದೆ. ತನಿಖೆಯ ವರದಿ ಆಧಾರದ ಮೇಲೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗೋದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ – ಉಪನ್ಯಾಸಕ ವಶಕ್ಕೆ

  • ಜಲ್‍ಜೀವನ್ ಮಿಷನ್ ಹಗರಣ- ರಾಜಸ್ಥಾನದ 25 ಕಡೆಗಳಲ್ಲಿ ಇಡಿ ದಾಳಿ

    ಜಲ್‍ಜೀವನ್ ಮಿಷನ್ ಹಗರಣ- ರಾಜಸ್ಥಾನದ 25 ಕಡೆಗಳಲ್ಲಿ ಇಡಿ ದಾಳಿ

    ಜೈಪುರ: ಇಂದು ಬೆಳ್ಳಂಬೆಳಗ್ಗೆ ರಾಜಸ್ಥಾನದ (Rajasthan) 25 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಜಲ್ ಜೀವನ್ ಮಿಷನ್ ಹಗರಣಕ್ಕೆ (Jal Jeevan Mission Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಚುನಾವಣೆಗೆ ಒಳಪಟ್ಟಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿವೆ.

    ಮನಿ ಲಾಂಡರಿಂಗ್ ತಡೆ ಕಾಯ್ದೆಯ (PMLA) ನಿಬಂಧನೆಗಳ ಅಡಿಯಲ್ಲಿ ಇತರ ಕೆಲವು ಸಂಪರ್ಕಿತ ವ್ಯಕ್ತಿಗಳನ್ನು ಒಳಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಸೆಪ್ಟೆಂಬರ್‍ನಲ್ಲಿ ಇದೇ ರೀತಿಯ ದಾಳಿ ನಡೆಸಿತ್ತು. ಇದನ್ನೂ ಓದಿ: ನಿತ್ಯ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ; ದೀಪಾವಳಿಗೆ ಟಫ್‌ ರೂಲ್ಸ್‌

    ಶ್ಯಾಮ್ ಟ್ಯೂಬ್‍ವೆಲ್ ಕಂಪನಿಯ ಮಾಲೀಕ ಪದ್ಮಚಂದ್ ಜೈನ್, ಗಣಪತಿ ಟ್ಯೂಬ್‍ವೆಲ್ ಕಂಪನಿಯ ಮಾಲೀಕ ಮಹೇಶ್ ಮಿತ್ತಲ್ ಮತ್ತು ಇತರರು ಸಾರ್ವಜನಿಕ ಸೇವಕರಿಗೆ ಲಂಚ ನೀಡುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‍ಐಆರ್ ನಿಂದ ಹಣ ವರ್ಗಾವಣೆ ಪ್ರಕರಣ ಹುಟ್ಟಿಕೊಂಡಿದೆ. ಕಾನೂನುಬಾಹಿರ ರಕ್ಷಣೆ ಪಡೆಯಲು, ಟೆಂಡರ್ ಗಳನ್ನು ಪಡೆಯುವುದು, ಬಿಲ್‍ಗಳನ್ನು ಮಂಜೂರು ಮಾಡುವುದು ಮತ್ತು ಪಿಎಚ್‍ಇಡಿಯಿಂದ ಪಡೆದ ವಿವಿಧ ಟೆಂಡರ್‍ಗಳಿಗೆ ಸಂಬಂಧಿಸಿದಂತೆ ಅವರು ಕಾರ್ಯಗತಗೊಳಿಸಿದ ಕೆಲಸಕ್ಕೆ ಸಂಬಂಧಿಸಿದಂತೆ ಅಕ್ರಮಗಳನ್ನು ಮುಚ್ಚಿಡುವುದು.

    ಶಂಕಿತರು ತಮ್ಮ ಟೆಂಡರ್/ ಗುತ್ತಿಗೆಗಳಲ್ಲಿ ಬಳಸುವುದಕ್ಕಾಗಿ ಹರಿಯಾಣದಿಂದ ಕದ್ದ ಮಾಲುಗಳ ಖರೀದಿಯಲ್ಲಿ ಭಾಗಿಯಾಗಿದ್ದಾರೆ ಮತ್ತು ಪಿಎಚ್‍ಇಡಿ ಗುತ್ತಿಗೆಗಳನ್ನು ಪಡೆಯಲು ಐಆರ್‍ಸಿಒಎನ್ ನಿಂದ ನಕಲಿ ಕೆಲಸ ಪೂರ್ಣಗೊಳಿಸುವ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಇಡಿ ಈ ಹಿಂದೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೀವ ಜಲವನ್ನು ನಿಯಮಿತವಾಗಿ ಬಳಸಿ: ಸಿ.ಸಿ.ಪಾಟೀಲ್

    ಜೀವ ಜಲವನ್ನು ನಿಯಮಿತವಾಗಿ ಬಳಸಿ: ಸಿ.ಸಿ.ಪಾಟೀಲ್

    ಗದಗ: ನೀರು ಜೀವ ಜಲವಾಗಿದ್ದು, ಅದನ್ನು ಗ್ರಾಮಸ್ಥರು ನಿಯಮಿತವಾಗಿ ಬಳಕೆ ಮಾಡಬೇಕು ಎಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್ ಹೇಳಿದರು.

    ತಾಲೂಕಿನ ನೀರಲಗಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಆಯೋಜಿಸಲಾಗಿದ್ದ, ಜಲಜೀವನ್ ಮಿಷನ್ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೀರು ಒದಗಿಸುವ ಉದ್ದೇಶದಿಂದ ಮನೆ ಮನೆಗೂ ಗಂಗೆ ಯೋಜನೆಯಡಿ ದೇಶದ ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ನೀರು ಪೂರೈಸಲಾಗುತ್ತಿದೆ ಎಂದರು.

    ಜಲ ಜೀವನ ಮಿಷನ್ ಯೋಜನೆಯಡಿ ನೀರಲಗಿ ಗ್ರಾಮದ ಪ್ರತಿ ಮನೆಗಳಿಗೂ ನಲ್ಲಿ ಅಳವಡಿಸುವ ಮೂಲಕ ನೀರು ಪೂರೈಕೆಗೆ ಅಂದಾಜು 30 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಸದ್ಭಳಕೆಗೆ ನೀಡಬೇಕು ಎಂದರು. ಇದನ್ನೂ ಓದಿ: ಗಲಾಟೆ ಮಾಡಿ ತಲೆಗೆ ಕಲ್ಲಲ್ಲಿ ಹೊಡೆದು ಹುಡುಗಿಯನ್ನು ದೂರ ಕರೆದೊಯ್ದು ರೇಪ್ ಮಾಡಿದ್ರು: ಯುವಕ

    ಪಂಚಾಯತ್ ರಾಜ್ ಇಂಜನೀಯರಿಂಗ್ ಇಲಾಖೆಯಿಂದ 2019-20ನೇ ಸಾಲಿನ ಸಮಗ್ರ ಶಿಕ್ಷಣ ಯೋಜನೆಯಡಿ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು 33 ಲಕ್ಷ ರೂ.ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಗ್ರಾಮದಲ್ಲಿ ನಿರ್ಮಾಣಗೊಂಡ ಸರ್ಕಾರಿ ಪ್ರೌಢ ಶಾಲೆಯ ಎರಡು ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಸದೃಢ ಸಮಾಜ ನಿರ್ಮಾಣಕ್ಕೆ ಮತ್ತು ವಿದ್ಯಾರ್ಥಿಯ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಣವು ಅತ್ಯಮೂಲ್ಯ ಪಾತ್ರವಹಿಸುತ್ತದೆ. ಶಿಕ್ಷಣ ಪಡೆಯಲು ಮೂಲಸೌಕರ್ಯಗಳು ಅತ್ಯವಶ್ಯಕವಾಗಿವೆ. ಪಾಲಕರು, ಶಿಕ್ಷಕರು ಮಗುವನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತಗೊಳಿಸದೇ ಸಮಾಜದಲ್ಲಿ ಸಮರ್ಥವಾಗಿ ಜೀವನ ನಡೆಸಲು ಮೌಲ್ಯಧಾರಿತ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ದೇಶದ ಆಸ್ತಿಯನ್ನಾಗಿ ರೂಪಿಸಲು ನೀವೆಲ್ಲರು ಶ್ರಮಿಸಬೇಕು ಎಂದರು. ಇದನ್ನೂ ಓದಿ: ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ: ಎಸ್.ಟಿ.ಸೋಮಶೇಖರ್

    ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರೆಡ್ಡೆರ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮದಿನಾಚರಣೆಯ ಅಂಗವಾಗಿ ಸದ್ಭಾವನಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಅಧಿಕಾರಿಗಳು, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು, ಭೂದಾನಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.