Tag: Jaish-e-Mohammad

  • ತ್ರಾಲ್ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೂ ಮುನ್ನ ಮನೆಗೆ ವಿಡಿಯೋ ಕಾಲ್, ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

    ತ್ರಾಲ್ ಸೇನಾ ಕಾರ್ಯಾಚರಣೆ – ಎನ್‌ಕೌಂಟರ್‌ಗೂ ಮುನ್ನ ಮನೆಗೆ ವಿಡಿಯೋ ಕಾಲ್, ಶರಣಾಗುವಂತೆ ಬೇಡಿಕೊಂಡಿದ್ದ ತಾಯಿ

    ಶ್ರೀನಗರ: ಜಮ್ಮು ಕಾಶ್ಮೀರದ (Jammu And Kashmir) ತ್ರಾಲ್ (Tral) ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಈ ಪೈಕಿ ಓರ್ವ ಉಗ್ರ ಸಾಯುವ ಮುನ್ನ ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದು, ಆತನ ತಾಯಿ ಶರಣಾಗುವಂತೆ ಬೇಡಿಕೊಂಡಿದ್ದಾರೆ.

    ಪುಲ್ವಾಮಾ ಜಿಲ್ಲೆಯ ಉಪನಗರವಾದ ಅವಂತಿಪೋರಾದ ನಾಡರ್ ಮತ್ತು ತ್ರಾಲ್ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಮೂವರು ಜೈಶ್ ಉಗ್ರರನ್ನು ಹೊಡೆದುರುಳಿಸಿದೆ. ಈ ಎನ್‌ಕೌಂಟರ್ ಮುನ್ನ ಜೈಶ್ ಎ ಮೊಹಮ್ಮದ್ ಉಗ್ರ ಅಮೀರ್ ನಜೀರ್ (Amir Nazir Wani) ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದು, ಈ ವೇಳೆ ಆತನ ತಾಯಿ ನೀನು ಶರಣಾಗು, ನಿನ್ನ ಜೀವ ಉಳಿಸಿಕೋ ಎಂದು ಬೇಡಿಕೊಂಡಿದ್ದಾರೆ.ಇದನ್ನೂ ಓದಿ: ಮೋದಿಗೆ ಟಕ್ಕರ್‌ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್‌ಫೀಲ್ಡ್‌ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್‌ ಪ್ರಧಾನಿ ಸಂವಾದ

    ವೈರಲ್ ಆಗಿರುವ ವಿಡಿಯೋದಲ್ಲಿ, ಉಗ್ರ ಅಮೀರ್ ನಜೀರ್ ಎಕೆ-47 ಗನ್ ಹಿಡಿದುಕೊಂಡು ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಈ ವೇಳೆ ಮನೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ತಾಯಿ ಹಾಗೂ ಸಹೋದರಿ ಜೊತೆ ಮಾತನಾಡಿದ್ದು, ಸಹೋದರನ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ತಾಯಿ ನೀನು ಶರಣಾಗಿ, ನಿನ್ನ ಜೀವ ಉಳಿಸಿಕೋ ಎಂದು ಬೇಡಿಕೊಂಡಿದ್ದಾರೆ. ಜೊತೆಗೆ ಆತನ ಕುಟುಂಬಸ್ಥರು ಕೂಡ ಮನವಿ ಮಾಡಿಕೊಂಡಿದ್ದಾರೆ. ಆದರೆ ಅಮೀರ್, ಸೇನೆ ಮುಂದೆ ಬರಲಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

    ಕಳೆದ ಮೂರು ದಿನಗಳಲ್ಲಿ ನಡೆದ 2ನೇ ಎನ್‌ಕೌಂಟರ್ ಇದಾಗಿದೆ. ಹತರಾದ ಮೂವರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳಾದ ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಜೊತೆಗೆ ಮೂವರು ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

    ಈ ವಿಡಿಯೋ ಅಲ್ಲದೇ ಉಗ್ರರು ಕಟ್ಟಡದಲ್ಲಿ ಅವಿತಿದ್ದ ಕೊನೆ ಕ್ಷಣದ ವಿಡಿಯೋ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಸೋನು ನಿಗಮ್‍ಗೆ ಬಿಗ್ ರಿಲೀಫ್ – ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್

  • ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

    ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

    – 20 ತಿಂಗಳಿನಲ್ಲಿ 20ನೇ ಉಗ್ರ ನಿಗೂಢ ಸಾವು

    ಕರಾಚಿ: ಭಾರತದಲ್ಲಿ(India) ಉಗ್ರ ಕೃತ್ಯಕ್ಕೆ ನಡೆಸಲು ಪ್ರೋತ್ಸಾಹ ನೀಡುತ್ತಿದ್ದ ಜೈಶ್ ಉಗ್ರ ಮೌಲಾನಾ ರಹೀಂ ಉಲ್ಲಾ ತಾರೀಖ್ (Maulana Raheem Ullah Tariq) ಕರಾಚಿಯ (Karachi) ಒರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತರ ಗುಂಡೇಟಿಗೆ ಬಲಿಯಾಗಿದ್ದಾನೆ.

    ಈ ಮೂಲಕ ಕಳೆದ 20 ತಿಂಗಳಿನಲ್ಲಿ ಪಾಕಿಸ್ತಾನ, ಕೆನಡಾ ಸೇರಿದಂತೆ ದೇಶಗಳಲ್ಲಿ ನಿಗೂಢವಾಗಿ ಹತ್ಯೆಯಾದ ಮೋಸ್ಟ್‌ ವಾಂಟೆಡ್‌ ಉಗ್ರರ ಹತ್ಯಾ ಸರಣಿ ಮುಂದುವರಿದಿದೆ. ಭಾರತಕ್ಕೆ ಬೇಕಾದ 20ನೇ ಉಗ್ರ ತಾರೀಖ್ ಎಂದು ವರದಿಗಳು ಹೇಳಿವೆ.

    ಜೈಶ್-ಇ-ಮೊಹಮ್ಮದ್ (Jaish-e-Mohammad) ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್ ಅಜರ್‌ನ (Masood Azhar) ಆಪ್ತನಾಗಿದ್ದ ತಾರೀಖ್ ಕಾಶ್ಮೀರದಲ್ಲಿ (Kashmir) ಉಗ್ರ ಚಟುವಟಿಕೆಗಳಿಗೆ ಯುವಕರನ್ನು ನೇಮಿಸುತ್ತಿದ್ದ.

     

    ಮಸೀದಿಗೆ ಪ್ರಾರ್ಥನೆ ತೆರಳುವಾಗ ಅಪರಿಚಿತ ವ್ಯಕ್ತಿಗಳು ತಾರೀಖ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಇದನ್ನು ಉದ್ದೇಶಿತ ಹತ್ಯೆ ಎಂದು ಕರೆದಿದ್ದಾರೆ. ವಿಧಿ ವಿಜ್ಞಾನ ತಂದ ತಾರೀಖ್‌ನಿಂದ ಮೊಬೈಲ್‌ ಫೋನ್‌ ಮತ್ತು ಇತರೇ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದೆ.  ಇದನ್ನೂ ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್‌ – ಗುಡ್‌ಬೈ ಹೇಳಿದ ಬೌಲಿಂಗ್‌ ಕೋಚ್‌

    3 ದಿನ ಹಿಂದಷ್ಟೇ ಲಷ್ಕರ್ ಉಗ್ರ ಅಕ್ರಂ ಖಾನ್ ಘಜೈನನ್ನು ಪಾಕ್‌ನ ಬಜ್‌‌ ನಲ್ಲಿ ಅನಾಮಿಕ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 2018ರ ಕಾಶ್ಮೀರದ ಸಂಜುವಾನ್ ಭಯೋತ್ಪಾದಕ ದಾಳಿಯ ರೂವಾರಿ ಸ್ವಾಜಾ ಶಾಹಿದ್, ಕಳೆದ ವಾರವಷ್ಟೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶವವಾಗಿ ಪತ್ತೆಯಾಗಿದ್ದ.

    ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ.

     

  • ಮೋದಿ, ಶಾ ಮೇಲೆ ದಾಳಿಗೆ ಉಗ್ರರ ಸ್ಕೆಚ್- ದೇಶದ 30 ಕಡೆ ಭಾರೀ ದಾಳಿಗೂ ಸಂಚು

    ಮೋದಿ, ಶಾ ಮೇಲೆ ದಾಳಿಗೆ ಉಗ್ರರ ಸ್ಕೆಚ್- ದೇಶದ 30 ಕಡೆ ಭಾರೀ ದಾಳಿಗೂ ಸಂಚು

    -ಗುಪ್ತಚರ ಮಾಹಿತಿ ಬೆನ್ನಲ್ಲೇ ಹೈ ಅಲರ್ಟ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲದ ಜೈಶ್ ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಡುವ 370ನೇ ವಿಧಿ ರದ್ದತಿಯಿಂದ ಪಾಕಿಸ್ತಾನಿ ಉಗ್ರರು ಹತಾಶರಾಗಿದ್ದಾರೆ. ಆದ್ದರಿಂದ 370ನೇ ವಿಧಿ ರದ್ದು ಮಾಡಲು ಆದ್ಯತೆ ನೀಡಿದ ಮೋದಿ, ಶಾ ಹಾಗೂ ದೋವಲ್ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ವಿಮಾನಯಾನ ಭದ್ರತಾ ಬ್ಯೂರೋಗೆ ಉಗ್ರರ ದಾಳಿಯ ಬಗ್ಗೆ ಅನಾಮಿಕ ಪತ್ರ ಬಂದಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

    ಅಷ್ಟೇ ಅಲ್ಲದೆ 370ನೇ ವಿಧಿ ರದ್ಧತಿಗೆ ಉಗ್ರರು ಪ್ರತಿಕಾರ ತೀರಿಸಿಕೊಳ್ಳುವುದಾಗಿ ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಮೋದಿ, ಶಾ ಹಾಗೂ ದೋವಲ್ ಅವರು ಪಾಕಿಸ್ತಾನಿ ಉಗ್ರರ ಹಿಟ್-ಲೀಸ್ಟ್‌ನಲ್ಲಿ ಇದ್ದಾರೆ ಎಂದು ತಿಳಿದ ತಕ್ಷಣ ಅಧಿಕಾರಿಗಳು ಎಲ್ಲೆಡೆ ಹೈ ಅಲರ್ಟ್ ಘೋಷಿಸಿದ್ದಾರೆ.

    30 ನಗರಗಳಲ್ಲಿ ದಾಳಿಗೆ ಉಗ್ರರ ಸ್ಕೆಚ್
    ರಾಷ್ಟ್ರೀಯ ವಿಮಾನಯಾನ ಭದ್ರತಾ ಬ್ಯೂರೋಗೆ ಸಿಕ್ಕಿರುವ ಪತ್ರದಲ್ಲಿ, ಜೈಷ್-ಇ-ಮೊಹ್ಮದ್ ಸಂಘಟನೆ ಉಗ್ರರು ದೇಶದ 30 ನಗರಗಳ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ. ಪಠಾಣ್‍ಕೋಟ್, ಅಮೃತ್‍ಸರ್, ಜೈಪುರ, ಗಾಂಧಿನಗರ, ಲಕ್ನೋ, ಕಾನ್ಪುರ ಸೇರಿದಂತೆ ಜಮ್ಮುವಿನಲ್ಲೂ ದಾಳಿ ನಡೆಸಲು ಸ್ಕೆಚ್ ಹಾಕಿದ್ದಾರೆ. ಜೊತೆಗೆ ದೇಶದ 4 ವಿಮಾನ ನಿಲ್ದಾಣಗಳ ಮೇಲೂ ದಾಳಿ ನಡೆಸಲು ಪ್ಲಾನ್ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇದೆ ಎನ್ನಲಾಗಿದೆ.

    ಈ ಹಿಂದೆ ಲಷ್ಕರ್-ಇ-ತೈಬಾ(ಎಲ್‍ಇಟಿ) ಉಗ್ರ ಸಂಘಟನೆ ಮೋದಿ ಅವರ ಕ್ಷೇತ್ರ ವಾರಣಾಸಿ ಮೇಲೆ ದಾಳಿಗೆ ಸಂಚು ರೂಪಿಸಿತ್ತು ಎಂದು ವರದಿಯಾಗಿತ್ತು. ಅಲ್ಲದೆ ಎಲ್‍ಇಟಿ ಮುಖ್ಯಸ್ಥ ಹಾಫೀಜ್ ಸಯೀದ್ ನಿರಂತರವಾಗಿ ವಾರಣಾಸಿಯಲ್ಲಿ ದಾಳಿ ನಡೆಸಲು ಪ್ರಯತ್ನಿಸಿದ್ದನು ಎನ್ನಲಾಗಿದೆ. ಗುಪ್ತಚರ ಇಲಾಖೆ ವರದಿ ಪ್ರಕಾರ, ಎಲ್‍ಇಟಿ ಉಗ್ರರು ವಾರಣಾಸಿಯಲ್ಲಿ ದಾಳಿ ನಡೆಸಲು ನಿರಂತರ ಪಿತೂರಿ ನಡೆಸುತ್ತಿದ್ದಾರೆ. ಈ ದಾಳಿಗಳ ಮೂಲಕ ವಾರಣಾಸಿಯಲ್ಲಿ ತಮ್ಮ ನೆಲೆ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

  • ಭಾರತಕ್ಕೆ ದೊಡ್ಡ ಜಯ, ಪಾಕಿಗೆ ಮುಖಭಂಗ – ಅಜರ್ ಈಗ ಜಾಗತಿಕ ಉಗ್ರನೆಂದು ಘೋಷಣೆ

    ಭಾರತಕ್ಕೆ ದೊಡ್ಡ ಜಯ, ಪಾಕಿಗೆ ಮುಖಭಂಗ – ಅಜರ್ ಈಗ ಜಾಗತಿಕ ಉಗ್ರನೆಂದು ಘೋಷಣೆ

    ನ್ಯೂಯಾರ್ಕ್: ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ. ಈ ಮೂಲಕ ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಜಯ ಸಿಕ್ಕಿದ್ದು ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

    ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಭಾರತ ವಿಶ್ವಸಂಸ್ಥೆಯಲ್ಲಿ ಬಹಳ ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿತ್ತು. ಭಾರತದ ಈ ನಿರ್ಧಾರಕ್ಕೆ ಚೀನಾ ತನ್ನ ವಿಟೋವನ್ನು ಬಳಸಿ ನಾಲ್ಕು ಬಾರಿ ತಾಂತ್ರಿಕ ನೆಲೆಯಲ್ಲಿ ಅಡ್ಡಗಾಲು ಹಾಕಿತ್ತು. ಆದರೆ ಈಗ ತಾನು ಒಡ್ಡಿದ್ದ ತಾಂತ್ರಿಕ ತಡೆಯನ್ನು ಚೀನಾ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಈಗ ಜಾಗತಿಕ ಉಗ್ರನೆಂದು ಘೋಷಿಸಲ್ಪಟ್ಟಿದ್ದಾನೆ.

    ವಿಶ್ವಸಂಸ್ಥೆಯಲ್ಲಿರುವ ಭಾರತೀಯ ರಾಯಭಾರಿ ಸೈಯ್ಯದ್ ಅಕ್ಬರುದ್ದೀನ್ ಅವರು ಈ ವಿಚಾರವನ್ನು ಖಚಿತ ಪಡಿಸಿದ್ದು, ಭಾರತದ ಪ್ರಸ್ತಾಪಕ್ಕೆ ಎಲ್ಲರು ಬೆಂಬಲ ನೀಡಿದ್ದರಿಂದ ಅಜರ್ ಜಾಗತಿಕ ಉಗ್ರನೆಂದು ಘೋಷಣೆಯಾಗಿದ್ದಾನೆ ಎಂದು ಹೇಳಿದ್ದಾರೆ.

    ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಣೆಯಾದ ಬಳಿಕ ಆತನ ಆಸ್ತಿ, ಪ್ರಯಾಣದ ಮೇಲೆ ನಿರ್ಬಂಧ ಬೀಳಲಿದೆ. ಆತನ ಇಡೀ ಆಸ್ತಿ ಸರ್ಕಾರ ಪಾಲಾಗುತ್ತದೆ. ಬೇರೆ ಯಾವ ರಾಷ್ಟ್ರಗಳು ಕೂಡ ಆತನಿಗೆ ಹಣ ಸಹಾಯ ನೀಡಲು ಸಾಧ್ಯವಿಲ್ಲ.

    ಇಲ್ಲಿಯವರೆಗೆ ಏನಾಗಿತ್ತು?
    ಮುಂಬೈ ದಾಳಿ ಬಳಿಕ ಕಳೆದ 10 ವರ್ಷಗಳಿಂದ ಭಾರತ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ನಿರಂತರ ಪ್ರಯತ್ನ ನಡೆಸುತಿತ್ತು. ಆದರೆ ಪಾಕಿಸ್ತಾನದ ಉಗ್ರವಾದಕ್ಕೆ ಬೆಂಬಲ ನೀಡುವ ಕುತಂತ್ರಿ ಬುದ್ಧಿಯನ್ನು ಚೀನಾ ಪ್ರದರ್ಶನ ಮಾಡಿ ಮಸೂದ್ ಅಜರ್ ನನ್ನು ರಕ್ಷಣೆ ಮಾಡುತ್ತಲೇ ಬರುತಿತ್ತು. ಭದ್ರತಾ ಮಂಡಳಿಯಲ್ಲಿರುವ ಉಳಿದ ರಾಷ್ಟ್ರಗಳು ಒಂದು ನಿಲುವು ಪ್ರದರ್ಶನ ಮಾಡಿದರೆ ಚೀನಾ ಇದಕ್ಕೆ ಅಡ್ಡಗಾಲು ಹಾಕುತಿತ್ತು. ಈ ವರ್ಷದ ಮಾರ್ಚ್ ತಿಂಗಳಿನಲ್ಲೂ ಚೀನಾ ಅಡ್ಡಿ ಪಡಿಸಿತ್ತು. ಈ ವೇಳೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಚೀನಾ ತನ್ನ ನಿಲುವನ್ನು ಮುಂದುವರಿಸಿದರೆ ಬಲವಂತವಾಗಿ ನಾವು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿರುವ ಅಮೆರಿಕದ ರಾಯಭಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು.

    ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ಬಳಿಕ ಮಸೂದ್ ಅಜರ್ ನೇತ್ರತ್ವದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಇದು ತನ್ನ ಕೃತ್ಯ ಎಂದು ಹೊಣೆ ಹೊತ್ತುಕೊಂಡಿತ್ತು. ಪರಿಣಾಮ ಭಾರತದ ಮನವಿಯಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಫೆ.27 ರಂದು ಪ್ರಸ್ತಾವನೆ ರವಾನಿಸಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ಚೀನಾ ಈ ಪ್ರಸ್ತಾವನೆಗೆ ತಡೆ ನೀಡಿತ್ತು.

    ಜೈಶ್-ಇ-ಮೊಹಮ್ಮದ್ ಸಂಘಟನೆ ತನ್ನದೇ ಕೃತ್ಯ ಎಂದು ಒಪ್ಪಿಕೊಂಡ ಬಳಿಕವೂ ಕೂಡ ಚೀನಾ ಅಜರ್‌ಗೆ ಬೆಂಬಲ ನೀಡಿರುವುದರ ವಿರುದ್ಧ ಭದ್ರತಾ ಮಂಡಳಿ ಸದಸ್ಯರು ಟೀಕೆ ಮಾಡಿದ್ದರು.

  • ಲವ್, ಸೆಕ್ಸ್, ದೋಖಾ- ಜೈಷ್ ಎ ಮಹಮ್ಮದ್ ಮುಖ್ಯಸ್ಥ ಖಲೀದ್ ಹತ್ಯೆಗೆ ನೆರವಾಗಿದ್ದು ಆತನ ಗರ್ಲ್ ಫ್ರೆಂಡ್

    ಲವ್, ಸೆಕ್ಸ್, ದೋಖಾ- ಜೈಷ್ ಎ ಮಹಮ್ಮದ್ ಮುಖ್ಯಸ್ಥ ಖಲೀದ್ ಹತ್ಯೆಗೆ ನೆರವಾಗಿದ್ದು ಆತನ ಗರ್ಲ್ ಫ್ರೆಂಡ್

    ಶ್ರೀನಗರ: ಜೈಷ್-ಎ-ಮಹಮ್ಮದ್ ಉಗ್ರ ಸಂಘಟನೆಯ ಆಪರೇಷನಲ್ ಕಮಾಂಡರ್ ಖಲೀದ್‍ನನ್ನು ಉತ್ತರ ಕಾಶ್ಮೀರದಲ್ಲಿ ಇಂದು ಭದ್ರತಾ ಪಡೆ ಹತ್ಯೆ ಮಾಡಿದೆ.

    ಖಲೀದ್‍ನನ್ನು ಟ್ರ್ಯಾಕ್ ಮಾಡಲು ನೆರವಾಗಿದ್ದು ಸ್ವತಃ ಆಕೆಯ ಗರ್ಲ್‍ಫ್ರೆಂಡ್ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಕಳೆದ ವರ್ಷ ಒಂದು ದಿನ ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕಚೇರಿಗೆ 20 ವರ್ಷದ ಯುವತಿಯೊಬ್ಬಳು ಬಂದು “ನನಗೆ ಅತ ಸಾಯಬೇಕಷ್ಟೇ” ಎಂದು ಹೇಳಿದ್ದಳು. ಜೈಷ್ ಎ ಮಹಮ್ಮದ್ ಸಂಘಟನೆಯ ಮುಖ್ಯಸ್ಥ ಖಲೀದ್‍ನನ್ನು ಕೊಲ್ಲಬೇಕು ಎಂದು ಆಕೆ ಹೇಳಿದ್ದಳು. ನಾನು ಆತನ ಜಾಗವನ್ನ ತೋರಿಸ್ತೀನಿ. ಉಳಿದಿದ್ದು ನೀವು ಮಾಡಿ ಎಂದು ಪೊಲೀಸ್ ಅಧಿಕಾರಿಗೆ ಆಕೆ ಹೇಳಿದ್ದಳು. ಇಂದು ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಖಲೀದ್‍ನನ್ನು ಹೊಡೆದುರುಳಿಸಿದೆ.

    ಕಳೆದ ವರ್ಷ ಯುವತಿಗೆ ತಾನು ಗರ್ಭವತಿ ಎಂದು ಗೊತ್ತಾಗಿತ್ತು. ಇದನ್ನ ಅತ್ಯಂತ ಸಂತೋಷದಿಂದ ಆಕೆ ಖಲೀದ್ ಬಳಿ ಹೇಳಿಕೊಂಡಿದ್ದಳು. ಆತ ಕೂಡ ತನ್ನಂತೆಯೇ ಖುಷಿ ಪಡುತ್ತಾನೆ ಎಂದು ನಿರೀಕ್ಷಿಸಿದ್ದಳು. ಆದ್ರೆ ಆತನ ಉತ್ತರ ಆಕೆಯ ಹೃದಯವನ್ನೇ ಒಡೆದಿತ್ತು. ನಿನ್ನಿಂದ ಅಥವಾ ನಿನ್ನ ಗರ್ಭದಲ್ಲಿರೋ ಮಗುವಿಂದ ನನಗೇನೂ ಆಗಬೇಕಿಲ್ಲ ಎಂದು ಆತ ಹೇಳಿದ್ದ. ನಂತರ ಆಕೆ ತನ್ನ ಸಂಬಂಧಿಯೊಬ್ಬರೊಂದಿಗೆ ಪಂಜಾಬ್‍ನ ಜಲಂದರ್‍ಗೆ ಹೋಗಿ ರಹಸ್ಯವಾಗಿ ಅಬಾರ್ಷನ್ ಮಾಡಿಸಿಕೊಂಡಿದ್ದಳು.

    ಖಲೀದ್ ತನ್ನನ್ನು ಬಳಸಿಕೊಂಡು, ಇನ್ನೂ ಜನಿಸದ ತನ್ನ ಮಗುವಿನ ಸಾವಿಗೆ, ತನ್ನ ಅವಮಾನಕ್ಕೆ ಕಾರಣವಾದ ಎಂದು ನಂಬಿದ್ದ ಆಕೆ ಆತನನ್ನು ಮುಗಿಸಲೇಬೇಕೆಂಬ ನಿರ್ಧಾರದೊಂದಿಗೆ ವಾಪಸ್ ಬಂದಿದ್ದಳು.

    ಹಲವು ವರ್ಷಗಳಿಂದ ಖಲೀದ್ ಜೈಷ್ ಎ ಮಹಮ್ಮದ್‍ನ ಆತ್ಮಹತ್ಯಾ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ. ಉತ್ತರದಿಂದ ದಕ್ಷಿಣ ಕಾಶ್ಮೀರಕ್ಕೆ ಉಗ್ರರನ್ನ ಕಳಿಸುತ್ತಿದ್ದ. ಉತ್ತರ ಕಾಶ್ಮೀರದಲ್ಲಿ ಅದರಲ್ಲೂ ಸೋಪೋರ್, ಬರಾಮುಲ್ಲಾ, ಹಂದ್ವಾರಾ ಹಾಗೂ ಕುಪ್ವಾರಾದಲ್ಲಿನ ಸಾಕಷ್ಟು ದಾಳಿಗಳ ಹಿಂದೆ ಖಲೀದ್ ಇದ್ದ. ಈ ಎಲ್ಲದರ ನಡುವೆಯೂ ಖಲೀದ್ ತನ್ನ ಲವರ್-ಬಾಯ್ ಇಮೇಜ್ ಉಳಿಸಿಕೊಂಡಿದ್ದ. ಹತ್ಯೆಯ ಸಮಯದಲ್ಲೂ ಆತನೊಂದಿಗೆ 3-4 ಗರ್ಲ್‍ಫ್ರೆಂಡ್‍ಗಳಿದ್ದರು ಎಂದು ವರದಿಯಾಗಿದೆ.

    ಕೆಲವು ಸಮಯದ ಹಿಂದೆ ಯುವತಿ ಖಲೀದ್ ಇರುವ ನಿರ್ದಿಷ್ಟ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಳು. ಆದ್ರೆ ಪೊಲೀಸರು ಅಲ್ಲಿಗೆ ತಲುಪಿ ಕಾರ್ಯಾಚರಣೆ ಶುರು ಮಾಡುವ ವೇಳೆಗೆ ಆತ ಅಲ್ಲಿಂದ ಆಗಲೇ ಹೊರಟುಹೋಗಿದ್ದ. ಈ ಬಾರಿಯೂ ಕೂಡ ಯುವತಿಯ ಆಪ್ತರಿಂದ ಜಮ್ಮು ಕಾಶ್ಮೀರ ಪೊಲೀಸರಿಗೆ ಖಲೀದ್ ಇರುವ ಸ್ಥಳದ ಬಗ್ಗೆ ಮಾಹಿತಿ ಸಿಕ್ಕಿತ್ತು. ಸೋಪೋರ್‍ಗೆ ಖಲೀದ್ ಪ್ರವೇಶಿಸಲು ರಹಸ್ಯ ತಂಡ ಕಾದು ಕುಳಿತಿತ್ತು. ಮುಖ್ಯವಾದ ವ್ಯಕ್ತಿಯನ್ನ ಭೇಟಿಯಾಗಲು ಖಲೀದ್ ಬಂದಿದ್ದ. ಈ ವೇಳೆ ದಾಳಿ ನಡೆದಿದ್ದು ಖಲೀದ್ ಮನಬಂದಂತೆ ಗುಂಡು ಹಾರಿಸಿದ್ದ. ಆದ್ರೆ ಸ್ಪೆಷಲ್ ಆಪರೇಷನ್ಸ್ ಗ್ರೂಪ್(ಎಸ್‍ಓಜಿ) ಕೂಡ ಪ್ರತಿದಾಳಿ ಮಾಡಿ ಆತನ್ನು ಗಾಯಗೊಳಿಸಿತು. ಗುಂಡಿನ ಚಕಮಕಿ ಕೇವಲ 4 ನಿಮಿಷಗಳವರೆಗೆ ನಡೆಯಿತು.

    ಲಾದೂರಾದ ಸರ್ಕಾರಿ ಶಾಲೆಗೆ ಹತ್ತಿರವಾಗಿದ್ದ ಮನೆಯನ್ನು ಖಲೀದ್ ತಲುಪಿದ್ದ. ಕೊನೆಗೆ ಎಸ್‍ಓಜಿ, ಸಿಆರ್‍ಪಿಎಫ್‍ನ 3 ಬೆಟಾಲಿಯನ್ ಹಾಗೂ 32 ರಾಷ್ಟ್ರೀಯ ರೈಫಲ್ಸ್ ನವರು ಖಲೀದ್‍ನನ್ನು ಹೊಡೆದುರುಳಿಸಿದ್ದಾರೆ.