Tag: Jairam Ramesh

  • PM ಕೇರ್ ನಿಧಿಗೆ ಕೊಡುಗೆ ನೀಡಲು ಚೀನಾ ಕಂಪನಿಗಳಿಗೆ ಅನುಮತಿಸಿದ್ದೇಕೆ?- ಕಾಂಗ್ರೆಸ್

    PM ಕೇರ್ ನಿಧಿಗೆ ಕೊಡುಗೆ ನೀಡಲು ಚೀನಾ ಕಂಪನಿಗಳಿಗೆ ಅನುಮತಿಸಿದ್ದೇಕೆ?- ಕಾಂಗ್ರೆಸ್

    ನವದೆಹಲಿ/ಇಟಾನಗರ: ಚೀನಾ ಯುದ್ಧಕ್ಕೆ (China War) ತಯಾರಿ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ ನಂತರ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮುಂದಿಟ್ಟಿದೆ. ಉತ್ತರಕೊಡಿ ಪ್ರಧಾನ ಮಂತ್ರಿ ಎಂದು ಪಟ್ಟು ಹಿಡಿದಿದೆ.

    ಅರುಣಾಚಲ ಪ್ರದೇಶದ (Arunachal Pradesh) ಎಲ್‌ಎಸಿಯಲ್ಲಿ (LAC) ಭಾರತ ಮತ್ತು ಚೀನಾದ ಸೈನಿಕರ ನಡುವೆ ಇದೇ ತಿಂಗಳ ಡಿಸೆಂಬರ್ 9ರಂದು ಘರ್ಷಣೆ ಏರ್ಪಟ್ಟಿತ್ತು. ಮೊದಲು ಚೀನಾ ಪಡೆಗಳು ಗಡಿಯನ್ನು ದಾಟಿ ಬಂದಿದ್ದು, ಭಾರತೀಯ ಸೈನಿಕರು ಪ್ರತಿರೋಧ ಒಡ್ಡಿದ್ದರು. ಈ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕೆನ್ನುವ ಕಾಂಗ್ರೆಸ್ ನಾಯಕರ ಬೇಡಿಕೆಯನ್ನೂ ತಿರಸ್ಕರಿಸಲಾಯಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) 7 ಪ್ರಶ್ನೆಗಳನ್ನ ಪ್ರಧಾನಿ ಅವರ ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು? 

    ಕಾಂಗ್ರೆಸ್ ಪ್ರಶ್ನೆಗಳೇನು?
    2020ರ ಜೂನ್ 20 ರಂದು ಪೂರ್ವ ಲಡಾಖ್‌ನಲ್ಲಿ ಚೀನಾದಿಂದ ಭಾರತದ ಭೂಪ್ರದೇಶದ ಮೇಲೆ ಯಾವುದೇ ಆಕ್ರಮಣ ನಡೆದಿಲ್ಲ ಎಂದು ನೀವು ಏಕೆ ಹೇಳಿದ್ದೀರಿ? ಮೇ 2020ರ ಮೊದಲು ನಾವು ನಿಯಮಿತವಾಗಿ ಗಸ್ತು ತಿರುಗುತ್ತಿದ್ದ ಪೂರ್ವ ಲಡಾಖ್‌ನಲ್ಲಿ ಸಾವಿರಾರು ಚದರ ಕಿಮೀ ಗಳನ್ನು ಪ್ರವೇಶಿಸದಂತೆ ನಮ್ಮ ಸೈನ್ಯವನ್ನೇ ತಡೆಯಲು ಚೀನಿಯರಿಗೇಕೆ ಅನುಮತಿಸಿದ್ದೀರಿ? ಮೌಂಟೇನ್ ಸ್ಟ್ರೈಕ್‌ ಕಾರ್ಪ್ಸ್ ಅನ್ನು ಸ್ಥಾಪಿಸಲು 2013ರ ಜುಲೈ 17 ರಂದು ಕ್ಯಾಬಿನೆಟ್ ಅನುಮೋದಿಸಿದ ಯೋಜನೆಯನ್ನು ನೀವು ಏಕೆ ಕೈಬಿಟ್ಟಿದ್ದೀರಿ? ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ

    ಪಿಎಂ ಕೇರ್ ನಿಧಿಗೆ ಕೊಡುಗೆ ನೀಡಲು ಚೀನಾ ಕಂಪನಿಗಳಿಗೆ ಏಕೆ ಅವಕಾಶ ಕೊಟ್ಟಿದ್ದೀರಿ? ಕಳೆದ 2 ವರ್ಷಗಳಲ್ಲಿ ಚೀನಾದಿಂದ ದಾಖಲೆಯ ಮಟ್ಟದ ಆಮದುಗಳನ್ನು ಏಕೆ ಅನುಮತಿಸಿದ್ದೀರಿ? ಗಡಿ ಪರಿಸ್ಥಿತಿ ಮತ್ತು ಚೀನಾದಿಂದ ಭಾರತ ಎದುರಿಸುತ್ತಿರುವ ಸವಾಲುಗಳನ್ನು ಸಂಸತ್ತಿನಲ್ಲಿ ಚರ್ಚಿಸಬಾರದು ಎಂದು ಏಕೆ ಒತ್ತಾಯಿಸಿದ್ದೀರಿ? ನೀವು 18 ಬಾರಿ ಚೀನಾದ ನಾಯಕನನ್ನು ಭೇಟಿ ಮಾಡಿದ್ದೀರಿ, ಇತ್ತೀಚೆಗೆ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಹಸ್ತಲಾಘವ ಮಾಡಿದ್ದೀರಿ. ಇದಾದ ಕೆಲವೇ ದಿನಗಳಲ್ಲಿ ಚೀನಾ ತವಾಂಗ್‌ಗೆ ಅತಿಕ್ರಮಣ ಪ್ರಾರಂಭಿಸಿತು. ಇಷ್ಟಾದರೂ ನೀವು ದೇಶವನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಜೈರಾಮ್ ರಮೇಶ್ ಅವರು ಈ ಪ್ರಶ್ನೆಗಳ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್‌

    Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್‌

    ಭಾರತೀಯ ರಾಷ್ಟ್ರೀಯ ಕಾಂಗ್ರಸ್ ಪಕ್ಷದ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವಿಡಿಯೋಗಳಿಗೆ ‘ಕೆಜಿಎಫ್’ (KGF) ಸಿನಿಮಾದ ಹಾಡೊಂದರ ಮ್ಯೂಸಿಕ್ ಬಳಸಿರುವ ಆರೋಪ ಕೇಳಿ ಬಂದಿದ್ದು, ಕಾಪಿ ರೈಟ್ಸ್ ಉಲ್ಲಂಘನೆಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಎಮ್.ಆರ್.ಟಿ ಸಂಸ್ಥೆಯು ಕಾನೂನು ಸಮರಕ್ಕೆ ಮುಂದಾಗಿದೆ. ತಮ್ಮ ಸಂಸ್ಥೆಯ ಅನುಮತಿ ಇಲ್ಲದೇ, ಕೆಜಿಎಫ್ ಸಿನಿಮಾದ ಸಂಗೀತವನ್ನು ಬಳಸಿಕೊಂಡಿದ್ದಕ್ಕಾಗಿ ಸಂಸ್ಥೆಯು ದೂರು ದಾಖಲಿಸಿದೆ.

    MRT ಸಂಸ್ಥೆಗೆ ಸೇರಿದ ಹಾಡುಗಳನ್ನು ಬಳಸಿದ ಆರೋಪ ಹೊತ್ತಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು, ಸಂಸ್ಥೆಯ ಅನುಮತಿ ಇಲ್ಲದೇ ಹಾಡುಗಳನ್ನು ಯಾತ್ರೆಯಲ್ಲಿ ಬಳಸಿದ್ದಾರೆ. ಕೆಜಿಎಫ್ ಸಿನಿಮಾದ ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ  ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವರ MRT ಸಂಸ್ಥೆಯು ರಾಹುಲ್ ಗಾಂಧಿ (Rahul Gandhi) , ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ (Supriya) ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ (Jairam Ramesh) ವಿರುದ್ಧ ದೂರು ದಾಖಲಾಗಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ (FIR) ದಾಖಲಾಗಿದೆ. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

    ದೇಶಾದ್ಯಂತ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಮತ್ತು ಆಯಾ ರಾಜ್ಯಗಳ ಮುಖಂಡರು ಭಾಗಿಯಾಗಿದ್ದು, ಹಿಂದಿಯಲ್ಲಿ ತಯಾರಾದ ವಿಡಿಯೋಗಳಿಗೆ ಕೆಜಿಎಫ್ ಮ್ಯೂಸಿಕ್ ಅಳವಡಿಸಲಾಗಿತ್ತು. ಆ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಪೇಸ್ ಗಳಾದ ಟ್ವಿಟರ್ ಅಕೌಂಟ್, ಯ್ಯೂಟ್ಯಬ್  ಹಾಗೂ ಯಾತ್ರೆಯಲ್ಲೂ ಬಳಸಲಾಗಿತ್ತು. ಹಾಗಾಗಿ ಸಂಸ್ಥೆಯ ಅನುಮತಿ ಪಡೆಯದೇ ಇರುವ ಕಾರಣಕ್ಕಾಗಿ ಕಾನೂನು ಕ್ರಮಕ್ಕೆ ಮುಂದಾಗಿದೆ ಎಮ್.ಆರ್.ಟಿ ಸಂಸ್ಥೆ.

    ಯಶ್ ನಟನೆಯ ಕೆಜಿಎಫ್ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲೇ ಹೊಸ ದಾಖಲೆಯನ್ನು ಬರೆದಂತಹ ಚಿತ್ರ. ಈ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. ರಿಲೀಸ್ ಆದ ಎಲ್ಲಾ ಭಾಷೆಗಳಲ್ಲೂ ಚಿತ್ರ ಕೋಟಿ ಕೋಟಿ ಬಾಚಿದೆ. ಅಲ್ಲದೇ, ಈ ಸಿನಿಮಾದ ಸುಲ್ತಾನ ಹಾಡು ಕೂಡ ಅಷ್ಟೇ ಫೇಮಸ್ ಆಗಿತ್ತು. ಸಿನಿಮಾದ ಹೀರೋನನ್ನು ವೈಭವೀಕರಿಸುವ ಹಾಡು ಇದಾಗಿತ್ತು. ಇದೇ ಹಾಡನ್ನು ಕಾಂಗ್ರೆಸ್ ತನ್ನ ಯಾತ್ರೆಗೆ ಬಳಸಿಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್

    ನಮ್ಮ ಪ್ರಯತ್ನದಿಂದಾಗಿ ಚೀತಾ ಭಾರತಕ್ಕೆ ಬಂದಿವೆ: ಕಾಂಗ್ರೆಸ್

    ನವದೆಹಲಿ: ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ತರಲಾದ 8 ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಡಿಗೆ ಬಿಡುವುದಕ್ಕೂ ಮುಂಚೆ, ಮನಮೋಹನ್ ಸಿಂಗ್ ಅವರು 2008-2009ರಲ್ಲಿಯೇ ಆಪರೇಷನ್ ಚೀತಾ ಪ್ರಸ್ತಾವನೆಯನ್ನು ಮಾಡಿದ್ದರು ಎಂದು ಎಐಸಿಸಿ ಮಾಧ್ಯಮ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಮಾಷೆ ಮಾಡುತ್ತಿದ್ದಾರೆ. 2009-11ರಲ್ಲಿಯೇ ಚೀತಾ ಪ್ರಾಜೆಕ್ಟ್ ಅನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿತ್ತು. 2010ರ ಏಪ್ರಿಲ್ 25ರಂದು ಕೇಪ್ ಟೌನ್ ಹೋಗಿ ಚೀತಾಗಳನ್ನು ಭಾರತಕ್ಕೆ ತರಲು ಮಾತುಕತೆ ನಡೆಸಿತ್ತು. ಕಾಂಗ್ರೆಸ್ ಪ್ರಯತ್ನದ ಭಾಗವಾಗಿ ಭಾರತಕ್ಕೆ ಚೀತಾಗಳು ಬಂದಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಇದೊಂದು ಅನಗತ್ಯ ತಮಾಷೆ ಆಗಿದೆ. ರಾಷ್ಟ್ರೀಯ ಸಮಸ್ಯೆಗಳು, ಭಾರತ್ ಜೋಡೋ ಅಭಿಯಾನ ಮರೆಮಾಚಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅವರಿಗೆ 72ರ ಸಂಭ್ರಮ – ನಮೀಬಿಯಾದಿಂದ ಭಾರತಕ್ಕೆ 8 ಚೀತಾ

    ಇಂದು ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ತರಲಾಗಿದೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಸೋನಿಯಾ ಗಾಂಧಿಗೆ ಕೊರೊನಾ- ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿ ಸೋಂಕು

    ಸೋನಿಯಾ ಗಾಂಧಿಗೆ ಕೊರೊನಾ- ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿ ಸೋಂಕು

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿ ಸೋಂಕು ತಗುಲಿದೆ.

    ಈ ಬಗ್ಗೆ ಕಾಂಗ್ರೆಸ್ ಮುಖಂಡರಾದ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಜೊತೆಗೆ ಸರ್ಕಾರ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಸೋನಿಯಾ ಗಾಂಧಿಗೆ ಜೂ.8ರಂದು ಕೊರೊನಾ ಸೋಂಕು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೇ ಆಸ್ಪತ್ರೆಗೂ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಇಡಿ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಸಮಯವನ್ನು ಕೋರಿದ್ದರು. ಆ ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಜೊತೆಗೆ ಇಡಿ ವಿಚಾರಣೆಯಲ್ಲೂ ಭಾಗಿ ಆಗಿದ್ದರು. ಇದನ್ನೂ ಓದಿ: ಮಡಿಕೇರಿಗೆ ತೆರಳುತ್ತಿದ್ದ KSRTC ಬಸ್ ಅಪಘಾತ – ಜನರ ರಕ್ಷಣೆಗೆ ಮುಂದಾದ ಅಪ್ಪಚ್ಚು ರಂಜನ್

    ಈ ವಾರದ ಆರಂಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಕೊರೊನಾ ಸೋಂಕು ದೃಢವಾಗಿತ್ತು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಕೊರೊನಾ – ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಪಾಸಿಟಿವ್

    Live Tv
    [brid partner=56869869 player=32851 video=960834 autoplay=true]

  • ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು, ಇಷ್ಟೇ ಕಾಂಗ್ರೆಸ್ ಅಜೆಂಡಾ: ಜೋಶಿ ಟೀಕೆ

    ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು, ಇಷ್ಟೇ ಕಾಂಗ್ರೆಸ್ ಅಜೆಂಡಾ: ಜೋಶಿ ಟೀಕೆ

    ನವದೆಹಲಿ: ಸಂಸತ್‍ನಲ್ಲಿ ಚರ್ಚೆ ನಡೆಯದಂತೆ ಅಡ್ಡಿಪಡಿಸುವುದು ನಂತರ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್‍ನ ಸಿಂಗಲ್ ಪಾಯಿಂಟ್ ಅಜೆಂಡಾ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರತಿಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

    ರಾಜ್ಯಸಭೆ ಕಲಾಪದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಸದಸ್ಯ, ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್, ಆಹಾರ ಪದಾರ್ಥಗಳ ಮೇಲಿನ ಜಿಎಸ್‍ಟಿ ದರ ಹೆಚ್ಚಳ ಒಮ್ಮತದ ನಿರ್ಧಾರವಲ್ಲ ಅಂತ ಟ್ವಿಟ್ಟರ್‌ನಲ್ಲಿ ಟೀಕಿಸಿದರು.

    ಈ ಬಗ್ಗೆ ಸುದೀರ್ಘ ಟ್ವೀಟ್ ಮಾಡಿರುವ ಜೈರಾಂ ರಮೇಶ್, ಜಿಎಸ್‍ಟಿ ಕೌನ್ಸಿಲ್‍ನಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದು ಸರ್ವಸಮ್ಮತದ ನಿರ್ಧಾರವಲ್ಲ. ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರ ಜೊತೆ ಚರ್ಚೆ ನಡೆಸಿಲ್ಲ ಎಂದು ಆಪಾದಿಸಿದರು. ಇದನ್ನೂ ಓದಿ: Sena Vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್

    ಸರಣಿ ಟ್ವೀಟ್ ಮಾಡಿದ ಜೈರಾಮ್ ರಮೇಶ್‍ಗೆ ಟ್ವಿಟ್ಟರ್‌ನಲ್ಲೇ ತಿರುಗೇಟು ನೀಡಿದ ಅವರು, ಚರ್ಚೆಗೆ ನಾವು ಸಿದ್ಧ, ಸದನದಲ್ಲಿ ಯಾವುದೇ ವಿಷಯಗಳ ಚರ್ಚೆಗೆ ಸದನದ ನೀತಿ ನಿಯಮಾವಳಿಗಳಿವೆ. ಪ್ರತಿಪಕ್ಷಗಳು ಸಭಾಧ್ಯಕ್ಷರಿಗೆ ನೋಟಿಸ್ ಕೊಟ್ಟು ಚರ್ಚೆಗೆ ಅವಕಾಶ ಕೋರಬೇಕು. ಆ ಬಳಿಕ ಅದು ಕಲಾಪ ಸಲಹಾ ಸಮಿತಿಯಲ್ಲಿ ಚರ್ಚೆಯಾಗಿ ಸಮಯ ನಿಗದಿಯಾಗಬೇಕು. ಆದರೆ ಕಾಂಗ್ರೆಸ್‍ಗೆ ಚರ್ಚಿಸುವುದು ಬೇಕಿಲ್ಲ, ಸದನದೊಳಗೆ ಕಲಾಪಕ್ಕೆ ಅಡ್ಡಿಪಡಿಸುವುದು. ಸದನದ ಹೊರಗೆ ಬಂದು ಸುಳ್ಳು ಹೇಳುವುದೇ ಕಾಂಗ್ರೆಸ್ ಕೆಲಸ ಎಂದು ಕಿಡಿಕಾರಿದರು.

    ಪ್ರತಿಯೊಬ್ಬ ಸಂಸದರಿಗೂ ಪ್ರಶ್ನೋತ್ತರ ಅವಧಿ ಬಹಳ ಮುಖ್ಯ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಪ್ರಶ್ನೋತ್ತರ ಅವಧಿಯನ್ನೇ ನಡೆಸಲು ಅವಕಾಶವಾಗದಂತೆ ಸದನದ ಕಲಾಪಕ್ಕೆ ಅಡ್ಡಿ ಮಾಡುತ್ತಿದೆ ಎಂದು ಜೋಶಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    ಟ್ವೀಟ್‍ನಲ್ಲಿ ಏನಿದೆ?
    ಆಹಾರ ಪದಾರ್ಥಗಳ ಮೇಲಿನ ಜಿಎಸ್‍ಟಿ ದರಗಳ ಕುರಿತು ಮುಕ್ತ ಮನಸ್ಸಿನಿಂದ ಚರ್ಚಿಸಲು ನಾವು ತಯಾರಿದ್ದೇವೆ. ಆದರೆ ಕೇಂದ್ರ ವಿತ್ತ ಸಚಿವರು ಕೋವಿಡ್‍ಗೆ ತುತ್ತಾಗಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಂಡ ತಕ್ಷಣ ಮತ್ತು ಸಂಸದೀಯ ಕಲಾಪ ಸಲಹಾ ಸಮಿತಿ ನಿರ್ಧರಿಸಿದ ತಕ್ಷಣ ವಿತ್ತ ಸಚಿವರು ಉತ್ತರಿಸುತ್ತಾರೆ.

    ಇಂದು ರಾಜ್ಯಸಭೆಯ ಗೌರವಾನ್ವಿತ ಸಭಾಧ್ಯಕ್ಷರು ಚರ್ಚೆಗೂ ಅವಕಾಶ ನೀಡೋದಾಗಿ ಹೇಳಿದರು. ಸದನದ ವಿಷಯ ಪಟ್ಟಿಯಂತೆ ಚರ್ಚೆಯ ಪ್ರಕ್ರಿಯೆಗಳು ಆರಂಭವಾಗಬೇಕು. ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರಿಗೆ ಸದನದ ಪದ್ದತಿ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

    prahlad joshi

    ಕಾಂಗ್ರೆಸ್ ಪಕ್ಷದ ಉದ್ದೇಶ ಸಂಸತ್ತಿನ ಕಲಾಪ ಅಡ್ಡಿಪಡಿಸೋದು ಮಾತ್ರ, ಚರ್ಚೆ ನಡೆಸೋದಲ್ಲ. ವಾಸ್ತವವನ್ನು ಎದುರಿಸಲು ಸಾಧ್ಯವಾಗದ ಕಾರಣ ಸರ್ಕಾರದ ಉದ್ದೇಶದ ಬಗ್ಗೆ ಕಾಂಗ್ರೆಸ್ ಮುಖಂಡರು ಸುಳ್ಳು ಹೇಳುತ್ತಿದ್ದಾರೆ. ಕಲಾಪ ಅಡ್ಡಿಪಡಿಸುವುದು ಮತ್ತು ಪ್ರಪಂಚದ ಮುಂದೆ ಸುಳ್ಳು ಹೇಳುವುದು ಇದು ಕಾಂಗ್ರೆಸ್ ನೀತಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:  16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ 

    ಪ್ರಪಂಚದ ಬೇರೆ-ಬೇರೆ ರಾಷ್ಟ್ರಗಳಲ್ಲಿ ಹಣದುಬ್ಬರ ಎಲ್ಲಿಗೆ ತಲುಪಿದೆ ಎನ್ನುವುದು ಕಾಂಗ್ರೆಸ್‍ಗೂ ಗೊತ್ತಿದೆ. ಭಾರತ ಹಣದುಬ್ಬರವನ್ನು ಕಂಟ್ರೋಲ್ ಮಾಡುವಲ್ಲಿ ದಿಟ್ಟ ಹೆಜ್ಜೆಗಳನ್ನ ತೆಗೆದುಕೊಂಡಿದೆ. ಹೀಗಾಗಿ ಸದನದಲ್ಲಿ ಕಾಂಗ್ರೆಸ್ ಚರ್ಚಿಸಲು ತಯಾರಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

    Live Tv
    [brid partner=56869869 player=32851 video=960834 autoplay=true]

  • ಮಣಿಪುರದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ – ಸಿಎಂ ಬಿರೇನ್ ಸಿಂಗ್ ವಿರುದ್ಧ ಜೈರಾಮ್ ರಮೇಶ್ ಕಿಡಿ

    ಮಣಿಪುರದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ – ಸಿಎಂ ಬಿರೇನ್ ಸಿಂಗ್ ವಿರುದ್ಧ ಜೈರಾಮ್ ರಮೇಶ್ ಕಿಡಿ

    ಇಂಫಾಲ್: ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಭಾರತೀಯ ನಿರ್ಮಿತ ವಿದೇಶಿ ಮದ್ಯ (ಐಎಂಎಫ್‍ಎಲ್) ಅಂಗಡಿಗಳನ್ನು ತೆರೆಯಲಾಗುವುದು ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ್ದರು. ಸದ್ಯ ಈ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಇದು ಮಣಿಪುರದ ಮಹಿಳೆಯರಿಗೆ ಅವಮಾನ ಎಂದು ಕಿಡಿಕಾರಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ಜೈರಾಮ್ ರಮೇಶ್ ಅವರು, ಪ್ರಚಾರ ಮುಕ್ತಾಯವಾಗುವ 48 ಗಂಟೆಗಳ ಮುನ್ನ ಭಾರತೀಯ ನಿರ್ಮಿತ ವಿದೇಶಿ ಮದ್ಯದ ಅಂಗಡಿಗಳನ್ನು ತೆರೆಯಲಾಗುವುದು ಎಂದು ಬಿಜೆಪಿ ಸಿಎಂ ಘೋಷಿಸಿರುವುದು ಆಘಾತಕಾರಿಯಾಗಿದೆ. ತಕ್ಷಣವೇ ಈ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಬಿರೇನ್ ಸಿಂಗ್ ಅವರು ರಾಜ್ಯದ ಮಹಿಳೆಯರು, ಸಾಮಾಜಿಕ ಕಾರ್ಯಕರ್ತರ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನೀವು ಇರುವಲ್ಲಿಯೇ ಸುರಕ್ಷಿತವಾಗಿರಿ, ಬಾರ್ಡರ್ ದೇಶಗಳಿಗೆ ಹೋಗಬೇಡಿ: ಸುಧಾಕರ್

     Jairam Ramesh

    ನಿಷೇಧಿತ ಭೂಗತ ಗುಂಪು ಕ್ರಾಂತಿಕಾರಿ ಪೀಪಲ್ಸ್ ಫ್ರಂಟ್ 1991ರ ಜನವರಿ 1 ರಿಂದ ಎಲ್ಲಾ ವಿದೇಶಿ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿತು. ಮಣಿಪುರ ಮದ್ಯ ನಿಷೇಧ ಕಾಯಿದೆ 1991ರ ನಂತರ ರಾಜ್ಯವನ್ನು ಮದ್ಯ ಮುಕ್ತ ರಾಜ್ಯ ಎಂದು ಘೋಷಿಸಲಾಗಿತ್ತು.  ಆದರೆ ಎಸ್‍ಸಿ ಮತ್ತು ಎಸ್‍ಟಿ ಸಮುದಾಯಗಳಿಗೆ ವಿನಾಯಿತಿ ನೀಡಲಾಗಿದ್ದು, ಇವರು ದೇಶದ ನಿರ್ಮಿತ ಮದ್ಯವನ್ನು ತಯಾರಿಸಲು ಹೆಚ್ಚಾಗಿ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ

    ಗುರುವಾರ ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ನಡೆದ ಸಭೆ ವೇಳೆ ಈ ಹಿಂದೆ ಜನರು ವಿಷಪೂರಿತ ಹಳ್ಳಿಗಾಡಿನ ಮದ್ಯವನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಹಾಗಾಗಿ ಬಿಜೆಪಿ ಜನರನ್ನು “ಉಳಿಸಲು” ಅಂಗಡಿಗಳಿಂದ ಐಎಂಎಫ್‍ಎಲ್ ಮಾರಾಟ ಮಾಡಲು ಅವಕಾಶ ನೀಡುತ್ತದೆ ಎಂದು ಬಿರೇನ್ ಸಿಂಗ್ ಹೇಳಿದ್ದರು.

  • ಗುಲಾಂ ನಬಿಗೆ ಪದ್ಮಭೂಷಣ: ಕೈ ನಾಯಕರ ಮಧ್ಯೆ ಈಗ ಬಹಿರಂಗ ತಿಕ್ಕಾಟ

    ಗುಲಾಂ ನಬಿಗೆ ಪದ್ಮಭೂಷಣ: ಕೈ ನಾಯಕರ ಮಧ್ಯೆ ಈಗ ಬಹಿರಂಗ ತಿಕ್ಕಾಟ

    ನವದೆಹಲಿ: ಜಮ್ಮು ಕಾಶ್ಮೀರದ ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಈಗ ಕಾಂಗ್ರೆಸ್‌ ನಾಯಕರ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ.

    ಬಿಜಿಪಿ ಸರ್ಕಾರ ಆಜಾದ್‌ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರೆ ಜಿ-23 ನಾಯಕರು ಅಭಿನಂದಿಸಿದ್ದಾರೆ. ಈ ಮೂಲಕ ಮತ್ತೆ ಕಾಂಗ್ರೆಸ್‌ ನಾಯಕರ ಕಚ್ಚಾಟ ಸಾರ್ವಜನಿಕವಾಗಿ ಪ್ರಕಟವಾಗಿದೆ.

    ಕಾಂಗ್ರೆಸ್ ನಾಯಕತ್ವದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗಬೇಕು ಎಂದು ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಿ-23 ನಾಯಕರುಗಳ ಪೈಕಿ ಗುಲಾಂ ನಬಿ ಆಜಾದ್ ಪ್ರಮುಖರಾಗಿದ್ದರು. ಜಿ-23 ನಾಯಕ ಪಟ್ಟಿಯಲ್ಲಿದ್ದ ಕಪಿಲ್ ಸಿಬಲ್, ಆನಂದ್ ಶರ್ಮ ಹಾಗೂ ಶಶಿ ತರೂರ್ ಅವರು ಗುಲಾಂ ನಬಿ ಆಜಾದ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಜೈರಾಮ್ ರಮೇಶ್ ಈ ಪ್ರಶಸ್ತಿಯನ್ನು ತಿರಸ್ಕರಿಸಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ.

    ಮಾಜಿ ಕೆಂದ್ರ ಸಚಿವ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಗೆ ಅಭಿನಂದನೆ ಸಲ್ಲಿಸಿ ಕಾಂಗ್ರೆಸ್‌ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಹೋದರನಿಗೆ ಅಭಿನಂದನೆಗಳು ಸಾರ್ವಜನಿಕ ಜೀವನದಲ್ಲಿ ಗುಲಾಂ ನಬಿ ಆಜಾದ್ ಅವರ ಸೇವೆಯನ್ನು ರಾಷ್ಟ್ರ ಗುರುತಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್‌ಗೆ ಮಾತ್ರ ಇವರ ಸೇವೆ ಅಗತ್ಯವಿಲ್ಲ ಎನ್ನುವ ರೀತಿ ಇದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಅಧಿಕಾರದಲ್ಲಿ ಬೇರೆ ಪಕ್ಷ ಇದ್ದ ನಡುವೆಯೂ ವ್ಯಕ್ತಿಯೊಬ್ಬರ ಸಾರ್ವಜನಿಕ ಸೇವೆಯನ್ನು ಗುರುತಿಸಿರುವುದು ಒಳ್ಳೆಯ ವಿಚಾರ ಎಂದು ಶಶಿ ತರೂರ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಸಂಸತ್ತಿನ ಪ್ರಜಾಪ್ರಭುತ್ವ ಹಾಗೂ ಸಾರ್ವಜನಿಕ ಸೇವೆಯಲ್ಲಿ ತಮ್ಮ ಜೀವಮಾನ ಪೂರ್ತಿ ಕಳೆದ ಗುಲಾಂ ನಬಿ ಆಜಾದ್ ಅವರಿಗೆ ಅರ್ಹವಾಗಿ ಸಿಕ್ಕಿರುವ ಗೌರವ ಎಂದು ಆನಂದ್ ಶರ್ಮ ಟ್ವೀಟ್ ಮಾಡಿದ್ದಾರೆ.

    ಮಾಜಿ ಸಚಿವ ಜೈರಾಮ್ ರಮೇಶ್ ಅವರು ಪದ್ಮ ಪ್ರಶಸ್ತಿಯನ್ನು ತಿರಸ್ಕರಿಸಿದ ಪಶ್ಚಿಮ ಬಂಗಾಳದ ಬುದ್ಧದೇವ್ ಭಟ್ಟಾಚಾರ್ಯ ಅವರ ಉದಾಹರಣೆಯನ್ನು ಉಲ್ಲೇಖಿಸಿ, ಬುದ್ಧದೇವ್ ಅವರು ಸರಿಯಾದುದನ್ನೇ ಮಾಡಿದ್ದಾರೆ, ಅವರಿಗೆ ಆಜಾದಿ ಬೇಕಾಗಿದೆ. ಗುಲಾಮಗಿರಿಯಲ್ಲ ಎಂದು ಬರೆಯುವ ಮೂಲಕ ಟಾಂಗ್‌ ನೀಡಿದ್ದಾರೆ.

    ಜಮ್ಮು ಕಾಶ್ಮೀರದ 7ನೇ ಮುಖ್ಯಮಂತ್ರಿಯಾಗಿರುವ ಗುಲಾಂ ನಬಿ ಆಜಾದ್ ಐದು ಬಾರಿ ರಾಜ್ಯಸಭಾ, ಎರಡು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 2021ರ ಫೆಬ್ರವರಿ 16 ರಂದು ಆಜಾದ್ ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಂಡಿತ್ತು. ಪ್ರತಿ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಬೀಳ್ಕೊಡುಗೆ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆಜಾದ್ ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಿರಲಿಲ್ಲ. ದೇಶ ಮತ್ತು ಸದನದ ಬಗ್ಗೆ ಕಾಳಜಿ ಹೊಂದಿದ್ದರು ಎಂದು ಹೇಳಿ ಭಾವುಕರಾಗಿದ್ದರು. ಇದನ್ನೂ ಓದಿ: ಗುಲಾಂ ನಬಿ ಆಜಾದ್‌ ಕಾರ್ಯ ನೆನೆದು ಭಾವುಕರಾದ ಪ್ರಧಾನಿ ಮೋದಿ

  • ಅಜಿತ್ ದೋವಲ್ ಪುತ್ರನಲ್ಲಿ ಕ್ಷಮೆಯಾಚಿಸಿದ ಕೈ ನಾಯಕ ಜೈರಾಮ್ ರಮೇಶ್

    ಅಜಿತ್ ದೋವಲ್ ಪುತ್ರನಲ್ಲಿ ಕ್ಷಮೆಯಾಚಿಸಿದ ಕೈ ನಾಯಕ ಜೈರಾಮ್ ರಮೇಶ್

    ನವದೆಹಲಿ: ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್‍ಎಸ್‍ಎ) ಅಜಿತ್ ದೋವಲ್ ಪುತ್ರ ವಿವೇಕ್ ದೋವಲ್ ಅವರ ಬಳಿ ಕ್ಷಮೆಯಾಚಿಸಿದ್ದಾರೆ. 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಿದ್ದು, ದೋವಲ್ ಅವರು ಕ್ಷಮೆಯನ್ನು ಮನ್ನಿಸಿ, ಪ್ರಕರಣದಿಂದ ರಮೇಶ್ ಹೆಸರನ್ನು ಕೈಬಿಟ್ಟಿದ್ದಾರೆ.

    ಲೇಖನದಲ್ಲಿ ಮಾನಹಾನಿಯಾಗುವಂತೆ ಪ್ರಕಟಿಸಿದ್ದಕ್ಕೆ ಕಳೆದ ವರ್ಷ ವಿವೇಕ್ ದೋವಲ್ ಅವರು ಕಾಂಗ್ರೆಸ್ ನಾಯಕ ಹಾಗೂ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜೈರಾಮ್ ರಮೇಶ್ ಅವರು ಕ್ಷಮೆಯಾಚಿಸಿದ್ದು, ಅವರ ಕ್ಷಮೆಯನ್ನು ಸ್ವೀಕರಿಸಲಾಗಿದೆ ಎಂದು ವಿವೇಕ್ ದೋವಲ್ ಹೇಳಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದ್ದಂತೆ ಅದೇ ಭರದಲ್ಲಿ ವಿವೇಕ್ ದೋವಲ್ ವಿರುದ್ಧ ಹೇಳಿಕೆ ನೀಡಿದ್ದೆ. ಅಲ್ಲದೆ ಹಲವು ಆರೋಪಗಳನ್ನು ಸಹ ಮಾಡಿದ್ದೆ. ಈ ಕುರಿತು ನಾನು ಅದನ್ನು ಪರಿಶೀಲಿಸಬೇಕು ಎಂದು ತಮ್ಮ ಕ್ಷಮೆಯಲ್ಲಿ ವಿವರಿಸಿದ್ದಾರೆ.

    ಜನವರಿ 2019ರಂದು ವಿವೇಕ್ ದೋವಲ್ ಅವರು ದೆಹಲಿ ಹೈಕೋರ್ಟ್‍ನಲ್ಲಿ ಮಾನಹಾನಿ ವರದಿ ಪ್ರಕಟಿಸಿದ್ದಕ್ಕೆ ಕ್ಯಾರವನ್ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಲ್ಲದೆ ಸುದ್ದಿಗೋಷ್ಠಿಯಲ್ಲಿ ಇದೇ ವಿಚಾರವನ್ನು ಒತ್ತಿ ಹೇಳಿದ್ದಕ್ಕೆ ಹಾಗೂ ಮತ್ತೊಮ್ಮೆ ಇದೇ ರೀತಿಯ ಮಾನಹಾನಿ ಬರಹಗಳನ್ನು ಬರೆದಿದ್ದಕ್ಕೆ ಜೈರಾಮ್ ರಮೇಶ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.

    ತಮ್ಮ ತಂದೆ ಅಜಿತ್ ದೋವಲ್ ಅವರೊಂದಿಗೆ ಸೇರಿ ವಿವೇಕ್ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆಂದು ಪತ್ರಿಕೆ ವರದಿ ಮಾಡಿತ್ತು. ಆದರೆ ಉದ್ದೇಶಪೂರ್ವಕವಾಗಿ ನಿಂದನೆ ಹಾಗೂ ಅಪಚಾರ ಮಾಡಲಾಗಿದೆ ಎಂದು ದೋವಲ್ ಆರೋಪಿಸಿದ್ದರು. ಈಗ ಕ್ಯಾರವಾನ್ ಪತ್ರಿಕೆ ವಿರುದ್ಧ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.

  • ಶಶಿ ತರೂರ್ ಅಪ್ರಬುದ್ಧ ರಾಜಕಾರಣಿ, ಯುಪಿಎ-2 ಅವಧಿಯ ಎಡವಟ್ಟುಗಳಿಗೆ ರಮೇಶ್ ಕಾರಣ: ಮೊಯ್ಲಿ

    ಶಶಿ ತರೂರ್ ಅಪ್ರಬುದ್ಧ ರಾಜಕಾರಣಿ, ಯುಪಿಎ-2 ಅವಧಿಯ ಎಡವಟ್ಟುಗಳಿಗೆ ರಮೇಶ್ ಕಾರಣ: ಮೊಯ್ಲಿ

    ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ನಾಯಕ ಮಧ್ಯೆ ವಾಗ್ದಾಳಿ ನಡೆದಿದ್ದು, ಪರಸ್ಪರ ಕೆಸರೆರಚಾಟ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದ ಮಾಜಿ ಸಚಿವರಾದ ಜೈರಾಮ್ ರಮೇಶ್ ಹಾಗೂ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

    ಶಶಿ ತರೂರ್ ಅವರ ಬೆಂಬಲಕ್ಕೆ ನಿಂತು ಪ್ರಧಾನಿ ಮೋದಿ ಪರ ಕಾಂಗ್ರೆಸ್‍ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಬ್ಯಾಟ್ ಬೀಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವೀರಪ್ಪ ಮೊಯ್ಲಿ ಅವರು, ಯುಪಿಎ-2 ಅವಧಿಯ ನೀತಿ ನಿರೂಪಣೆಯ ಎಡವಟ್ಟುಗಳಿಗೆ ಜೈರಾಮ್ ಅವರೇ ಕಾರಣ. ಹಲವು ಸಂದರ್ಭದಲ್ಲಿ ಸರ್ಕಾರ ತನ್ನ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಲು ಕಾರಣವಾದರು. ಈಗ ಪ್ರಧಾನಿ ಮೋದಿ ಪರ ಹೇಳಿಕೆ ಮೂಲಕ ಜೈರಾಮ್ ರಮೇಶ್ ಅವರು ಬಿಜೆಪಿ ಜೊತೆಯೂ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ಕಚೇರಿಗೆ ಕಾಲಿಡ್ಬಾರ್ದು: ಮುನಿಯಪ್ಪ ಆಕ್ರೋಶ

    ಶಶಿ ತರೂರ್ ಅವರು ಪ್ರಬುದ್ಧ ರಾಜಕಾರಣಿ ಎಂದು ನಾನು ಪರಿಗಣಿಸಿಲ್ಲ. ಮಾಧ್ಯಮಗಳಲ್ಲಿ ಗುರುತಿಸಿಕೊಳ್ಳಲು ಆಗಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಹೀಗಾಗಿ ಶಶಿ ತರೂರ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಅವರು ಗಂಭೀರ ರಾಜಕಾರಣಿಯಾಗಬೇಕು ಎಂಬುದು ನಮ್ಮ ಪ್ರಾರ್ಥನೆ ಎಂದು ವ್ಯಂಗ್ಯವಾಡಿದ್ದಾರೆ.

    ಜೈರಾಮ್ ರಮೇಶ್ ಹಾಗೂ ಶಶಿ ತರೂರ್ ಅವರ ಹೇಳಿಕೆ ದುರದೃಷ್ಟಕರ. ಅಷ್ಟೇ ಅಲ್ಲದೆ ಈ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಹೈಕಮಾಂಡನ್ನು ಆಗ್ರಹಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಹಿಂದೆ ಆಗಿದ್ದೇನು?:
    ಸರಿಯಾದ ನಿರ್ಧಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಬೇಕು. ಇದರಿಂದ ಅವರ ಬಗೆಗಿನ ವಿರೋಧ ಪಕ್ಷಗಳ ಟೀಕೆಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆ ಸಿಗುತ್ತದೆ ಎಂದು ಶಶಿ ತರೂರ್ ಹೇಳಿದ್ದರು. ಈ ಬೆನ್ನಲ್ಲೆ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ ಜೈರಾಮ್ ರಮೇಶ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಗುರುತಿಸಬೇಕಾಗಿದೆ. ಈ ಬಗ್ಗೆ ಟೀಕೆ ಮಾಡುವ ಬದಲು ಅವುಗಳ ಅಧ್ಯಯನ ಮಾಡಬೇಕಾಗಿದೆ. ಅವರು ಜನರಿಗೆ ಹತ್ತಿರವಾಗುವ ಕೆಲಸ ಮಾಡಿದ್ದಾರೆ. ಹೀಗಾಗಿಯೇ 2019ರಲ್ಲಿ ಶೇಕಡ 30ರಷ್ಟು ಹೆಚ್ಚು ಮಂದಿ ಮೋದಿ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದ್ದರು.

    ಪ್ರಧಾನಿ ಮೋದಿ ಅವರನ್ನು ಸದಾ ಟೀಕಿಸುತ್ತಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರು ಮಾಡಿರುವ ಕೆಲಸಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಅಧ್ಯಯನ ಮಾಡಬೇಕಾಗಿದೆ. ಜನರನ್ನು ಸೆಳೆಯುವ ಕಲೆ ಮೋದಿ ಅವರಲ್ಲಿ ಮನೆ ಮಾಡಿದೆ. ಹೀಗಾಗಿ ಅವರನ್ನು ಜನ ವಿಶ್ವಾಸದಿಂದ ಕಾಣುತ್ತಾರೆ, ನಂಬುತ್ತಾರೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದರು.

  • ಮೋದಿ ವಿರುದ್ಧ ವ್ಯಕ್ತಿಗತ ನಿಂದನೆ ಬೇಡ: ‘ಕೈ’ ಮುಖಂಡ ಸಿಂಘ್ವಿ

    ಮೋದಿ ವಿರುದ್ಧ ವ್ಯಕ್ತಿಗತ ನಿಂದನೆ ಬೇಡ: ‘ಕೈ’ ಮುಖಂಡ ಸಿಂಘ್ವಿ

    ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಬೆನ್ನಲ್ಲೇ ಮತ್ತೊಬ್ಬ ‘ಕೈ’ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದಾರೆ.

    ಕಾಂಗ್ರೆಸ್‍ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವುದು ಸರಿಯಲ್ಲ. ಅವರು ರಾಷ್ಟ್ರದ ಪ್ರಧಾನಿಯಾಗಿದ್ದು, ಪ್ರತಿ ನಡೆಯಲ್ಲೂ ಉತ್ತಮ, ಕಳಪೆ, ವಿರೋಧಗಳಿರುತ್ತವೆ. ಆದರೆ ಅದನ್ನು ವ್ಯಕ್ತಿಗತವಾಗಿ ನೋಡದೆ, ವಿಷಯಾಧಾರಿತವಾಗಿ ವಿಮರ್ಶಿಸಬೇಕಾಗಿದೆ. ಪಕ್ಷದ ಮುಖಂಡ ಜೈರಾಮ್ ರಮೇಶ್ ಹೇಳಿರುವ ಮಾತಿನಲ್ಲಿ ಅರ್ಥವಿದೆ. ನರೇಂದ್ರ ಮೋದಿ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದ ಉಜ್ವಲ ಯೋಜನೆ ನಿಜಕ್ಕೂ ಉತ್ತಮ ಕಾರ್ಯ. ಮೋದಿ ಅವರ ವಿರುದ್ಧ ಮಾತನಾಡುವುದರಿಂದ ಅವರಿಗೆ ಮತ್ತಷ್ಟು ಪ್ರಚಾರ ಸಿಕ್ಕಂತೆ ಆಗುತ್ತೆ  ಎಂದು ಟ್ವೀಟ್ ಮಾಡಿದ್ದಾರೆ.

    ಜೈರಾಮ್ ರಮೇಶ್ ಅವರ ಮಾತುಗಳನ್ನು ಸಮರ್ಥಿಸಿಕೊಂಡು ಅಭಿಷೇಕ್ ಮನು ಸಿಂಘ್ವಿ ಅವರು ಪ್ರಧಾನಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೈರಾಮ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಅವರ ನಡೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಹಿಂದೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಜಮ್ಮು-ಕಾಶ್ಮೀರ ವಿಶೇಷ ಸ್ಥಾನವನ್ನು ರದ್ದು ಮಾಡಿದ್ದಕ್ಕೆ ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಜೈರಾಮ್ ಹೇಳಿದ್ದೇನು?:
    ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಗುರುತಿಸಬೇಕಾಗಿದೆ. ಈ ಬಗ್ಗೆ ಟೀಕೆ ಮಾಡುವ ಬದಲು ಅವುಗಳ ಅಧ್ಯಯನ ಮಾಡಬೇಕಾಗಿದೆ. ಅವರು ಜನರಿಗೆ ಹತ್ತಿರವಾಗುವ ಕೆಲಸ ಮಾಡಿದ್ದಾರೆ. ಹೀಗಾಗಿಯೇ 2019ರಲ್ಲಿ ಶೇಕಡ 30ರಷ್ಟು ಹೆಚ್ಚು ಮಂದಿ ಮೋದಿ ಮೆಚ್ಚಿಕೊಂಡಿದ್ದಾರೆ ಎಂದು ಜೈರಾಮ್ ರಮೇಶ್  ತಿಳಿಸಿದ್ದರು.

    ಪ್ರಧಾನಿ ಮೋದಿ ಅವರನ್ನು ಸದಾ ಟೀಕಿಸುತ್ತಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರು ಮಾಡಿರುವ ಕೆಲಸಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಅಧ್ಯಯನ ಮಾಡಬೇಕಾಗಿದೆ. ಜನರನ್ನು ಸೆಳೆಯುವ ಕಲೆ ಮೋದಿ ಅವರಲ್ಲಿ ಮನೆ ಮಾಡಿದೆ. ಹೀಗಾಗಿ ಅವರನ್ನು ಜನ ವಿಶ್ವಾಸದಿಂದ ಕಾಣುತ್ತಾರೆ, ನಂಬುತ್ತಾರೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದರು.