Tag: Jaipur

  • ಬ್ಲೂಟೂತ್ ಇಯರ್ ಫೋನ್ ಸ್ಫೋಟ- ಯುವಕ ಸಾವು

    ಬ್ಲೂಟೂತ್ ಇಯರ್ ಫೋನ್ ಸ್ಫೋಟ- ಯುವಕ ಸಾವು

    ಜೈಪುರ್: ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡು ಯುವಕ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರ್ ಜಿಲ್ಲೆಯಲ್ಲಿ ನಡೆದಿದೆ.

    ರಾಕೇಶ್ ನಗರ್ ಮೃತನಾಗಿದ್ದಾನೆ. ಈತ ಉದಯ್‍ಪುರ ನಿವಾಸಿಯಾಗಿದ್ದಾರೆ. ಇದ್ದಕ್ಕಿದ್ದಂತೆ ವೈರ್‍ಲೆಸ್ ಇಯರ್ ಫೋನ್ ಸ್ಫೋಟಗೊಂಡು ರಾಕೇಶ್ ಪ್ರಜ್ಞಾಹೀನನಾದ. ಸ್ಫೋಟದಲ್ಲಿ ಯುವಕನ ಎರಡೂ ಕಿವಿಗಳಿಗೆ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

    ಯುವಕ ಬ್ಲೂಟೂತ್ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಮಾತನಾಡುತ್ತಿದ್ದನು. ಇದ್ದಕ್ಕಿದ್ದಂತೆ ಇಯರ್ ಫೋನ್ ಸ್ಫೋಟಗೊಂಡಿದೆ. ಇದರಿಂದ ಆಘಾತಕ್ಕೊಳಗಾದ ಯುವಕನಿಗೆ ಹೃದಾಯಾಘಾತವಾಗಿದೆ. ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಇಯರ್ ಫೋನ್ ಸ್ಫೋಟದಿಂದಾಗಿ ಯುವಕನ 2 ಕಿವಿಗಳೂ ಗಾಯಗೊಂಡಿದ್ದವು.

  • ಕುಡಿಯಲು ನೀರು ಸಿಗದೆ ಬಾಲಕಿ ಸಾವು

    ಕುಡಿಯಲು ನೀರು ಸಿಗದೆ ಬಾಲಕಿ ಸಾವು

    ಜೈಪುರ್: ಜಗತ್ತು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ ಕೆಲವೊಮ್ಮೆ ಮನುಷ್ಯನಿಗೆ ಬೇಕಾದ ಮೂಲಭೂತ ಅಗತ್ಯತೆಗಳೇ ಸಿಗದೇ ಪರದಾಡುವಂತಾಗುತ್ತದೆ. ಹೀಗೆ ನೀರು ಸಿಗದೇ ಬಾಲಕಿ ಸಾವನ್ನಪಿರುವ ಮನಕಲಕುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಅಂಜಲಿ(6) ಮೃತ ಬಾಲಕಿ. ಈಕೆ ಅಜ್ಜಿಯೊಂದಿದೆ ರಾಜಸ್ಥಾನದ ಜೌಲೌರ್ ಜಿಲ್ಲೆಯ ಸುಡುಬಿಸಿಲಿನಲ್ಲಿ ಹತ್ತಾರು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಬಂದಿದ್ದಳು. ಕುಡಿಯಲು ನೀರು ಸಿಗದೆ ಮೃತಪಟ್ಟಿರುವ ಘಟನೆ ರಾಣಿವಾಡಾದ ರೋಡಾ ಎಂಬ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ವಿಶ್ವ ಪರಿಸರ ದಿನದಂದು ಗಾಂಜಾ ಗಿಡ ನೆಟ್ಟ ಪುಂಡರು


    60 ವರ್ಷ ಸುಖಿ ದೇವಿ, ತಮ್ಮ ಮೊಮ್ಮಗಳು ಅಂಜಲಿಯೊಂದಿಗೆ ಸಿರೋಹಿ ಬಳಿಯ ರಾಯ್‍ಪುರ್‍ದಿಂದ ಮಧ್ಯಾಹ್ನ ರಾಣಿವಾಡ ಪ್ರದೇಶದ ಡುಂಗ್ರಿಯಲ್ಲಿರುವ ತನ್ನ ಮನೆಗೆ ಬರುತ್ತಿದ್ದರು ಎನ್ನಾಗಿದೆ. ಕೊರೊನಾ ಹಿನ್ನೆಲೆ ವಾಹನಗಳು ಲಭ್ಯವಿಲ್ಲದ ಕಾರಣ ಬೇರೆ ದಾರಿಯಿಲ್ಲದೆ ಕಾಲ್ನಡಿಗೆಯಲ್ಲೇ ಬಾಲಕಿ ಹಾಗೂ ಅಜ್ಜಿ ಸುಮಾರು 20 ರಿಂದ 25 ಕಿಲೋಮೀಟರ್ ದೂರ ನಡೆದುಕೊಂಡು ಬಂದಿದ್ದಾರೆ. ಇದನ್ನೂ ಓದಿ: ಬೆಳಗ್ಗಿನ ಟಿಫಿನ್‌ಗೆ ಮಾಡಿ ಬಿಸಿ ಬೇಳೆ ಬಾತ್

    ರಾಣಿವಾಡ ತಲುಪಿ ಮರಳಿ ದಿಬ್ಬಗಳ ಬಳಿ ಸಾಗುವ ವೇಳೆಗೆ ಇಬ್ಬರೂ ನಿತ್ರಾಣಗೊಂಡಿದ್ದರು. ಈ ವೇಳೆ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದ ಕಾರಣ ಸುಸ್ತಾಗಿ ಕುಡಿಯಲು ನೀರು ಬೇಕೆಂದು ಹಪಹಪಿಸುತ್ತಿದ್ದರು. ಆದರೆ ಕೊರೊನಾ ಸೋಂಕು ಇರುವ ಕಾರಣ ಆ ಪ್ರದೇಶದಲ್ಲಿ ಜನರ ಓಡಾಟ ವಿರಳವಾಗಿತ್ತು., ಯಾರೂ ಈ ಕಡೆ ಹಾದುಹೋಗಿಲ್ಲ ಎನ್ನಲಾಗಿದೆ. ಕೊನೆಗೆ ವೃದ್ಧೆ ಸುಸ್ತಾಗಿ ಮೂರ್ಛೆ ತಪ್ಪಿದ್ದಾರೆ. ಬಾಲಕಿ ನಿತ್ರಾಣಗೊಂಡು ಕೊನೆಯುಸಿರೆಳೆದಿದ್ದಾಳೆ. ನಂತರ ಅಜ್ಜಿಯ ಸ್ಥಿತಿ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವೃದ್ಧೆಗೆ ನೀರು ಕುಡಿಸಿ, ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಬಾಲಕಿಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆದಿದ್ದಾರೆ. ಕುಡಿಯಲು ನೀರು ಸಿಗದಿರುವುದೇ ಬಾಲಕಿಯ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.

  • ಬೆಡ್ ವ್ಯವಸ್ಥೆಗೆ 1.30 ಲಕ್ಷ ಲಂಚ ಪಡೆದವ ಅರೆಸ್ಟ್

    ಬೆಡ್ ವ್ಯವಸ್ಥೆಗೆ 1.30 ಲಕ್ಷ ಲಂಚ ಪಡೆದವ ಅರೆಸ್ಟ್

    ರಾಜಸ್ಥಾನ: ಜೈಪುರದ ಕೋವಿಡ್-19 ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗೆ ಐಸಿಯುವಿನಲ್ಲಿ ಬೆಡ್ ವ್ಯವಸ್ಥೆ ಮಾಡುವುದಕ್ಕಾಗಿ ಲಂಚ ಪಡೆದ ಪುರುಷ ನರ್ಸ್ ನನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದೆ.

    ಆರೋಪಿಯನ್ನು ಅಶೋಕ್ ಕುಮಾರ್ ಗುರ್ಜರ್ ಎಂದು ಗುರುತಿಸಲಾಗಿದ್ದು, ಈತ ಜೈಪುರದ ಮೆಟ್ರೋ ಮಾಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾನೆ. ಕೋವಿಡ್-19 ಸೋಂಕಿತನಿಗೆ ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ(ಆರ್‍ಯುಎಚ್‍ಎಸ್)ನಲ್ಲಿ ಐಸಿಯು ಬೆಡ್ ಮತ್ತು ಇತರ ಸೌಲಭ್ಯಗಳ ವ್ಯವಸ್ಥೆಗೊಳಿಸುವುದಕ್ಕಾಗಿ ರೋಗಿಯ ಬಳಿ 1.30 ಕ್ಷ ನೀಡವಂತೆ ಬೇಡಿಕೆ ಇಟ್ಟಿದ್ದಾನೆ.

    ಆರೋಪಿ ಈಗಾಗಲೇ ರೋಗಿಯ ಬಳಿ 95, 000 ರೂ. ತೆಗೆದುಕೊಂಡಿದ್ದು, ಉಳಿದ 23,000 ರೂ ಸ್ವೀಕರಿಸುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸಿಬಿ ಪೊಲೀಸ್ ಅಧಿಕಾರಿ ಬಿ.ಎಲ್. ಸೋನಿ ತಿಳಿಸಿದ್ದಾರೆ. ಇದೀಗ ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅವನ ನಿವಾಸದಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

  • 18 ಯುವಕರನ್ನು ಮದುವೆಯಾಗಿ ಹಣ ದೋಚಿ ಯುವತಿ ಪರಾರಿ

    18 ಯುವಕರನ್ನು ಮದುವೆಯಾಗಿ ಹಣ ದೋಚಿ ಯುವತಿ ಪರಾರಿ

    ಜೈಪುರ್: ಪ್ರೀತಿಸಿ 18 ಯುವಕರನ್ನು ಮದುವೆಯಾದ ಯುವತಿ ಹಣ, ಆಭರಣ ದೋಚಿ ಪರಾರಿಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಭಾಗವತಿ ಅಲಿಯಾಸ್ ಅಂಜಲಿ ಹಾಗೂ ಈಕೆಯೊಂದಿಗೆ ಐವರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದನ್ನೆ ಬಂಡವಾಳ ಮಾಡಿಕೊಂಡ ಅಂಜಲಿ ಸರಿಸುಮಾರು 18 ಯುವಕರನ್ನು ಮದುವೆಯಾಗಿ ಅವರಿಂದ ಹಣ, ಆಭರಣವನ್ನು ಪಡೆದು ಮೋಸ ಮಾಡಿದ್ದಾಳೆ.

    ಜುನಾಗಢದ ಅಂಬಾಲಿ ಯುವಕನನ್ನು ಮದುವೆ ಆಗಿದ್ದ ಅಂಜಲಿ ಆತನ ಮನೆಯಲ್ಲಿ ಆಭರಣ ಮತ್ತು 5 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಳು. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಕುರಿತಾಗಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅಂಜಲಿ ಗ್ಯಾಂಗ್ ಸಮೇತವಾಗಿ ಸಿಕ್ಕಿ ಬಿದ್ದಿದ್ದಾಳೆ.

    ಅಂಜಲಿ ಜೊತೆಗೆ ಒಂದು ಗ್ಯಾಂಗ್‍ಗೆ ಈ ಒಂದು ಕೆಲಸಕ್ಕೆ ಇಳಿದಿತ್ತು. ಗುಜರಾತ್, ಮಧ್ಯಪ್ರದೇಶ ಹಾಗೂ ಇತರೆ ರಾಜ್ಯದ ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದರು. ಅಂಜಲಿ ಪ್ರೀತಿಸುವಂತೆ ನಟಿಸಿ ನಂಬಿಸಿ ಮದುವೆಯಾಗಿ ಅವರಿಂದ ಹಣ, ಆಭರಣವನ್ನು ಪಡೆದು ಪರಾರಿಯಾಗುತ್ತಿದ್ದರು. ಮದುವೆ ಮಾಡಿಕೊಂಡು ದೋಚುವುದನ್ನೇ ಇವರ ಕಸುಬನ್ನಾಗಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

  • ಒಂದೇ ಹುಡುಗಿಯನ್ನ ಪ್ರೀತಿಸಿ ಪ್ರಾಣ ಕಳೆದುಕೊಂಡ ಅಣ್ಣ-ತಮ್ಮ

    ಒಂದೇ ಹುಡುಗಿಯನ್ನ ಪ್ರೀತಿಸಿ ಪ್ರಾಣ ಕಳೆದುಕೊಂಡ ಅಣ್ಣ-ತಮ್ಮ

    ಜೈಪುರ್: ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಸಹೋದರರಿಬ್ಬರು ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಗುಡ್ಲಾ ಪ್ರದೇಶದ ಬಳಿ ನಡೆದಿದೆ.

    ಮೃತರನ್ನು ಮಹೇಂದ್ರ ಗುರ್ಜಾರ್(23) ಹಗೂ ದೇವರಾಜ್ ಗುರ್ಜಾರ್(23) ಎಂದು ಗುರುತಿಸಲಾಗಿದೆ. ಕೇಶವರಪುರ ನಿವಾಸಿಗಳಾದ ಈ ಇಬ್ಬರು ಯುವಕರು ಒಂದೇ ಹುಡುಗಿಯನ್ನು ಪ್ರೀತಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣ ಡಬ್ಲಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಈ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ನಮ್ಮಿಬ್ಬರ ಸಾವಿಗೆ ಯಾರು ಕಾರಣರಲ್ಲ. ನಮ್ಮ ಸಾವಿನ ಕುರಿತಾಗಿ ಯಾವುದೇ ಗೊಂದಲ ಮೂಡುವುದು ಬೇಡ. ನೀವು ಮೊದಲಿನಂತೆ ಎಲ್ಲರೂ ಚೆನ್ನಾಗಿರಿ. ನಾವಿಬ್ಬರು ಪ್ರಿತಿಸುತ್ತಿದ್ದ ಹುಡುಗಿಗೆ ಒಳ್ಳೆ ಸಂಬಂಧವನ್ನು ನೋಡಿ ವಿವಾಹವಾಗುವಂತೆ ಹೇಳಿ. ಯಾರ ಒತ್ತಡದಿಂದ ನಾವು ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಈ ನಿರ್ಧಾರವನ್ನು ನಾವಿಬ್ಬರು ವೈಯಕ್ತಿಕವಾಗಿ ಯೋಚಿಸಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿ ಆತ್ಮಹತ್ಯೆಗೂ ಮುನ್ನ ವೀಡಿಯೋ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಸಹೋದರರಿಬ್ಬರ ಆತ್ಮಹತ್ಯೆ ಪ್ರಕರಣ ಮೇಲ್ನೋಟಕ್ಕೆ ಖಚಿತವಾಗಿದೆಯಾದರೂ ಸಾವಿಗೆ ಸಂಬಂಧಿಸಿದಂತೆ ಯಾವುದೇ ಪತ್ರ ವಿವರ ಸಿಕ್ಕಿಲ್ಲ. ಈ ಸಂಬಂದ ಪ್ರಕರಣವನ್ನು ದಾಖಲಿಸಿಕೊಂಡು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಐವರು ಪುತ್ರಿಯರು ಪ್ರೇರಣೆ – 62ನೇ ವಯಸ್ಸಲ್ಲಿ ಬಿಎ ಪರೀಕ್ಷೆ ಬರೆದ ಶಾಸಕ

    ಐವರು ಪುತ್ರಿಯರು ಪ್ರೇರಣೆ – 62ನೇ ವಯಸ್ಸಲ್ಲಿ ಬಿಎ ಪರೀಕ್ಷೆ ಬರೆದ ಶಾಸಕ

    ಜೈಪುರ್: ಐವರು ಪುತ್ರಿಯರ ಪ್ರೇರಣೆಯಿಂದ ರಾಜಸ್ಥಾನದ ಶಾಸಕರೊಬ್ಬರು 40 ವರ್ಷಗಳ ನಂತರ ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ.

    ಉದಯಪುರ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ(62) ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ. ಮಕ್ಕಳಿಂದ ಹೊಸ ಹುಮ್ಮಸ್ಸು ಪಡೆದಿರುವ ಇವರು ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ.

    ಯಾವುದೇ ಡಿಗ್ರಿ ಇಲ್ಲದಿರುವುದರಿಂದ ಮುಜುಗರ ಅನುಭವಿಸುತ್ತಿದ್ದೆನು. ರಾಜಕೀಯ ಕ್ಷೇತ್ರದಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿದ್ದೇನೆ. ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಹತ್ವ ಕುರಿತು ಸರಿಯಾದ ಭಾಷಣ ಮಾಡಲು ಕೂಡಾ ಆಗುತ್ತಿರಲಿಲ್ಲ. ಇದನ್ನು ಮನಗೊಂಡು ವಿದ್ಯಾಭ್ಯಾಸ ಪುನರ್ ಆರಂಭಿಸಿದ್ದೇನೆ ಎಂದು ಮೀನಾ ಹೇಳಿದ್ದಾರೆ.

    ಚಿಕ್ಕವನಿದ್ದಾಗಲೇ 7ನೇ ತರಗತಿವರೆಗೆ ಓದಿದ್ದ ನನ್ನ ವಿದ್ಯಾಭ್ಯಾಸವನ್ನ ಬಳಿಕ ಮೊಟಕುಗೊಳಿಸಿದ್ದರು. ಇದೀಗ ಮಕ್ಕಳಿಂದ ಹೊಸ ಹುಮ್ಮಸ್ಸು ಬಂದಿದೆ ಎಂದಿದ್ದಾರೆ. 2013 ರಿಂದ ಶಾಸಕರಾಗಿರುವ ಇವರು, ಡಿಗ್ರಿ ಪಾಸ್ ಮಾಡಿದ ಮೇಲೆ ಮಾಸ್ಟರ್ ಡಿಗ್ರಿ ಮುಗಿಸಿ, ಪಿಹೆಚ್‍ಡಿ ಮಾಡುತ್ತಾರೆ ಎಂದು ತಿಳಿದು ಬಂದಿದೆ.

  • ದೇವರಿಗೆ ಮೇಕೆ ಬಲಿಕೊಟ್ಟ ಪೊಲೀಸ್- ಕೆಲಸದಿಂದ ಅಮಾನತ್ತು

    ದೇವರಿಗೆ ಮೇಕೆ ಬಲಿಕೊಟ್ಟ ಪೊಲೀಸ್- ಕೆಲಸದಿಂದ ಅಮಾನತ್ತು

    ಜೈಪುರ: ದೇವರ ಹರಕೆ ತೀರಿಸಲು ಮೇಕೆ ಬಲಿ ಕೊಟ್ಟ ಎಸ್‍ಐ ತನ್ನ ಕೆಲಸಕ್ಕೆ ಕುತ್ತು ತಂದುಕೊಂಡಿರುವ ಘಟನೆ ರಾಜಸ್ಥಾನದ ಬರಾನ್ ಜಿಲೆಯಯಲ್ಲಿ ನಡೆದಿದೆ.

    ಭನ್ವರ್ ಸಿಂಗ್ ಅಮಾನತ್ತಯಗೊಂಡ ಅಧಿಕಾರಿಯಾಗಿದ್ದಾರೆ. ಮನೆಯಲ್ಲಿನ ದೇವರ ಕಾರ್ಯಕ್ಕೆ ದೇವಿಗೆ ಹರಕೆ ತೀರಿಸಲು ಮೇಕೆ ಬಲಿಕೊಟ್ಟು ಅಧಿಕಾರ ಕೆಲಸ ಕಳೆದುಕೊಂಡಿದ್ದಾರೆ.


    ಫೆ.19 ರಂದು ಮನೆಯಲ್ಲಿ ನಡೆಯುವ ದೇವ ಕಾರ್ಯಕ್ರಮಕ್ಕೆಂದು ಭನ್ವಾರ್ ಸಿಂಗ್ ರಜೆ ಮೇಲೆ ಹೋಗಿದ್ದರು. ಈ ವೇಳೆ ಸಿಂಗ್ ಮೇಕೆಯ ಕುತ್ತಿಗೆಯನ್ನು ಕತ್ತರಿಸಿ ದೇವರಿಗೆ ಬಲಿ ಕೊಟ್ಟಿದ್ದಾರೆ. ಈ ವೀಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ದಯಾ ಸಂಘ ಮತ್ತು ಸಾರ್ವಜನಿಕರು ಸಿಂಗ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.

    ಭನ್ವಾರ್ ಸಿಂಗ್‍ನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಪ್ರಕರಣವನ್ನು ದಾಖಲಿಸಿ ವಿಚಾರಣೆಯನ್ನು ಆರಂಭಿಸಿದ್ದೇವೆ ಎಂದು ಕೋಟಾ ಗ್ರಾಮೀಣ ಠಾಣೆಯ ಪೊಲೀಸ್ ವರಿಷ್ಟಾಧಿಕಾರಿ ಶರದ್ ಚೌದ್ರಿಯಾ ಹೇಳಿದ್ದಾರೆ.

  • ಮಗನ ಅಗಲಿಕೆಯಿಂದ ಆತ್ಮಹತ್ಯೆಗೆ ಶರಣಾದ ಇಡೀ ಕುಟುಂಬ

    ಮಗನ ಅಗಲಿಕೆಯಿಂದ ಆತ್ಮಹತ್ಯೆಗೆ ಶರಣಾದ ಇಡೀ ಕುಟುಂಬ

    ಜೈಪುರ: 45 ವರ್ಷದ ವ್ಯಕ್ತಿಯೊರ್ವ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ಪಟ್ಟ ವ್ಯಕ್ತಿ ಹನುಮಾನ್ ಪ್ರಸಾದ್(45), ಪತ್ನಿ ತಾರಾ(40), ಇಬ್ಬರು ಮಕ್ಕಳಾದ ಪೂಜಾ(22) ಹಾಗೂ ಅನು(22) ಎಂದು ಗುರುತಿಸಲಾಗಿದೆ.

    ಈ ಘಟನೆ ಉದ್ಯೋಗ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಈ ಕುರಿತಂತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಕುನ್ವರ್ ರಾಷ್ಟ್ರದೀಪ್, ಐದು ತಿಂಗಳ ಹಿಂದೆ ಹನುಮಾನ್ ಪ್ರಸಾದ್‍ರವರ ಏಕೈಕ ಪುತ್ರ ಹೃದಯಾಘಾತದಿಂದ ಅಗಲಿದ್ದಾರೆ. ಇದರಿಂದ ಇಡೀ ಕುಟುಂಬ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

    ಸೂಸೈಡ್ ಡೆತ್ ನೋಟ್‍ವೊಂದು ಪತ್ತೆಯಾಗಿದ್ದು, ಇದರಲ್ಲಿ ಹನುಮಾನ್ ಪ್ರಸಾದ್, ನಮ್ಮ ಮಗನ ಮರಣದ ನಂತರ ಇನ್ನುಮುಂದೆ ನಾವು ಬದುಕಲು ಇಚ್ಛಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

  • ಮದುವೆಗೆ ಒಪ್ಪದ ಬಾಲಕಿಯನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿದ ಹೆತ್ತವರು!

    ಮದುವೆಗೆ ಒಪ್ಪದ ಬಾಲಕಿಯನ್ನು 1 ಲಕ್ಷ ರೂ.ಗೆ ಮಾರಾಟ ಮಾಡಿದ ಹೆತ್ತವರು!

    ಜೈಪುರ್: ಅಪ್ರಾಪ್ತ ವಯಸ್ಸಿನ ಬಾಲಕಿ ಮದುವೆಯಾಗಲು ನಿರಾಕರಿಸಿದಾಗ, ಹೆತ್ತವರು 1 ಲಕ್ಷರೂಪಾಯಿಗೆ ಮಗಳನ್ನು ಮಾರಾಟ ಮಾಡಿರುವ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನೆಡೆದಿದೆ.

    13 ವರ್ಷದ ಅಪ್ರಾಪ್ತ ಬಾಲಕಿ ಬಿಹಾರ ಮೂಲದವಳಾಗಿದ್ದಾಳೆ. ಮದುವೆ ನೆಪದಲ್ಲಿ ಬಾಲಕಿಯನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾನವ ಕಳ್ಳಸಾಗಣೆ ಆರೋಪದ ಮೇಲೆ ಬಾಲಕಿಯ ತಾಯಿ ಸೇರಿದಂತೆ ಐವರನ್ನು ಬಂಧಿಸಿದ್ದೇವೆ. ಕಳೆದ ಮಂಗಳವಾರ ಬಾಲಕಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿಯನ್ನು ತಿಳಿದ ನಾವು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದೇವೆ. ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಬಾರನ್ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಜಯ್ ಸ್ವರೂಪ್ ಅವರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಬಾಲಕಿ ಕುಟುಂಬ 1ಲಕ್ಷ ರೂಪಾಯಿಗೆ ಆಕೆಯನ್ನು ಮಾರಿದೆ. ಡಿಸೆಂಬರ್ಡಲು ನಿಶ್ಚಯಿಸಿದ್ದರು. ಆದರೆ ಬಾಲಕಿ ಮದುವೆಗೆ ಒಪ್ಪಿಲ್ಲ. ಆಗ ಆಕೆಯನ್ನು ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

    ಮದುವೆಯಾಗಲು ನಾನು ಒಪ್ಪದೇ ಇದ್ದಾಗ ನನ್ನನ್ನು ಹೆತ್ತವರು ಚಂಡಿಕೇಡಿಯಲ್ಲಿ ವಾಸಿಸುತ್ತಿದ್ದ ಗೀತಾ ಸಿಂಗ್ ಅವರ ಬಳಿಗೆ ಕರೆತಂದರು. ಆಗ ಅಲ್ಲಿ 1 ಲಕ್ಷದ 21 ಸಾವಿರ ರೂ.ಗೆ ನನ್ನ ಮಾರಿದ್ದಾರೆ. ನಂತರ ಡಿಸೆಂಬರ್ 24 ರಂದು ಮುಖೇಶ್ ಎಂಬ ವ್ಯಕ್ತಿಯೊಂದಿಗೆ ನನ್ನ ಮದುವೆ ಮಾಡಿದ್ದಾರೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು 8 ಜನರ ವಿರುದ್ಧ ಪ್ರಕರಣವಾನ್ನು ದಾಖಲಿಸಿಕೊಂಡಿದ್ದಾರೆ. 5 ಜನರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • 100 ಮಂದಿಯಿಂದ ಅಪಹರಣಕ್ಕೊಳಗಾದ 38 ಮಹಿಳೆಯರು, ಮಕ್ಕಳ ರಕ್ಷಣೆ

    100 ಮಂದಿಯಿಂದ ಅಪಹರಣಕ್ಕೊಳಗಾದ 38 ಮಹಿಳೆಯರು, ಮಕ್ಕಳ ರಕ್ಷಣೆ

    ಜೈಪುರ: ರಾಜಸ್ಥಾನದ ಜಲ್ವಾರ್‍ನಲ್ಲಿ ಅಪಹರಣಕ್ಕೊಳಗಾದ 38 ಜನ ಮಹಿಳೆಯರು ಹಾಗೂ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.

    ರಾಜಸ್ಥಾನದ ಜಲ್ವಾರ್ ಬಾಮನ್ ದೇವರಿಯನ್ ಗ್ರಾಮಕ್ಕೆ ಖಡ್ಗ, ಚಾಕು ಮುಂತಾದ ಮಾರಕಾಸ್ತ್ರಗಳೊಂದಿಗೆ ಗ್ರಾಮಕ್ಕೆ ಬಂದಿರುವ 100 ಮಂದಿ ದುಷ್ಕರ್ಮಿಗಳು, ಮಹಿಳೆಯರು ಮತ್ತು ಮಕ್ಕಳನ್ನು ಟೆಂಪೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೆವು ಎಂದು ಜಲ್ವಾರ್ ಎಸ್.ಪಿ ಡಾ.ಕಿರಣ್ ಕಾಂಗ್ ಸಿಂಧು ಹೇಳಿದ್ದಾರೆ.

    ತನಿಖೆ ನಡೆಸುತ್ತಿರುವ ನಮಗೆ ಆರೋಪಿಗಳು ಹೇಗೆ ಬಂದರು ಎಂಬ ಸುಳಿವು ಸಿಕ್ಕಿತ್ತು. ಮಧ್ಯಪ್ರದೇಶದ ರಟ್ಲಾಂ ಜಿಲ್ಲೆಯಿಂದ ಬಸ್ ಹಾಗೂ ಇತರ ವಾಹನಗಳ ಮೂಲಕವಾಗಿ ಗ್ರಾಮವನ್ನು ಪ್ರವೇಶಿಸಿದ್ದರು. ಅವರ ಬಳಿ ಚಾಕು, ಕತ್ತಿ ಸೇರಿದಂತೆ ಹಲವು ಮಾರಕಾಸ್ತ್ರಗಳು ಇದ್ದವು ಎಂದು ಮೂಲಗಳಿಂದ ತಿಳಿದುಬಂದಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.

    ಅಪಹರಣ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿರುವ ನಮಗೆ ಅರೋಪಿಗಳ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ನಮ್ಮ ತಂಡದೊಂದಿಗೆ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದ್ದೇವೆ. ಈ ವೇಳೆ 38 ಜನ ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಿದ್ದೇವೆ. ಈ ಪ್ರಕರಣದಲ್ಲಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ. ಪರಾರಿಯಾಗಿರುವ ಇನ್ನು ಕೆಲವು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.