Tag: Jaipur

  • ಮೋದಿ ಕ್ರಿಯಾಶೀಲತೆಯ ವ್ಯಕ್ತಿ: ಕಾಂಗ್ರೆಸ್ ನಾಯಕ ಶಶಿ ತರೂರ್

    ಮೋದಿ ಕ್ರಿಯಾಶೀಲತೆಯ ವ್ಯಕ್ತಿ: ಕಾಂಗ್ರೆಸ್ ನಾಯಕ ಶಶಿ ತರೂರ್

    ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಂಡ ಚೈತನ್ಯ ಹಾಗೂ ಕ್ರಿಯಾಶೀಲತೆಯ ವ್ಯಕ್ತಿಯಾಗಿದ್ದಾರೆ. ವಿಶೇಷವಾಗಿ ರಾಜಕೀಯವಾಗಿ ಪ್ರಭಾವಶಾಲಿ ಕೆಲವು ಕೆಲಸಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಶ್ಲಾಘಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮುಕ್ತಾಯಗೊಂಡ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು. ಬಿಜೆಪಿಯು ಇಷ್ಟು ಅಂತರದಿಂದ ಗೆಲ್ಲುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆದರೆ ಅವರು ಗೆಲುವು ಸಾಧಿಸಿದ್ದಾರೆ ಎಂದರು.

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಭಾರತೀಯ ಮತದಾರರು ಅಚ್ಚರಿಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಮುಂದೊಂದು ದಿನ ಬಿಜೆಪಿಯನ್ನು ಅಚ್ಚರಿಗೊಳಿಸುತ್ತಾರೆ. ಆದರೆ ಇಂದು ಜನರು ಬಿಜೆಪಿಗೆ ಬಯಸಿದ್ದನ್ನು ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ಪ್ರಧಾನಿ ನರೇಂದ್ರ ಮೋದಿ ಅವರು ಕೋಮು ಮತ್ತು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಶಕ್ತಿಗಳನ್ನು ಸಮಾಜದಲ್ಲಿ ಬಿಚ್ಚಿಟ್ಟಿದ್ದಾರೆ. ಇದು ದುರಾದೃಷ್ಟಕರ ವಿಷಯವಾಗಿದೆ ಎಂದು ಕಿಡಿಕಾರಿದರು.

    ಎಕ್ಸಿಟ್ ಪೋಲ್‍ಗಳು ಹೊರಬರುವವರೆಗೂ ನನ್ನ ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಇರಲಿಲ್ಲ. ಹೆಚ್ಚಿನ ಜನರು ಬಹಳ ನಿಕಟ ಹೋರಾಟವನ್ನು ನಿರೀಕ್ಷಿಸುತ್ತಿದ್ದರು. ಕೆಲವರು ಸಮಾಜವಾದಿ ಪಕ್ಷವು ಮುಂದಿದೆ ಎಂದು ಹೇಳಿದ್ದರು ಎಂದು ಹೇಳಿದರು. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

  • ಪಬ್ ಜಿ ಆಡಲು ಹೊಸ ಮೊಬೈಲ್ ಕೊಡಿಸಿಲ್ಲವೆಂದು ಯುವತಿ ಆತ್ಮಹತ್ಯೆ!

    ಪಬ್ ಜಿ ಆಡಲು ಹೊಸ ಮೊಬೈಲ್ ಕೊಡಿಸಿಲ್ಲವೆಂದು ಯುವತಿ ಆತ್ಮಹತ್ಯೆ!

    ಜೈಪುರ: ಹುಟ್ಟುಹಬ್ಬದಂದು ತಂದೆ ಹೊಸ ಮೊಬೈಲ್ ಕೊಡಿಸಿಲ್ಲವೆಂದು ಮನನೊಂದು 18 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಈ ಘಟನೆ ಜೈಪುರ ಸೊಡಲ ಪ್ರದೇಶದಲ್ಲಿ ನಡೆದಿದೆ. ಪಬ್ ಜಿ ಆಡಲು ಹೊಸ ಮೊಬೈಲ್ ಕೊಡಿಸಿಲ್ಲವೆಂಬ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.

    ಈ ಸಂಬಂಧ ಜೈಪುರ ಪೊಲೀಸ್ ಆಯುಕ್ತ ರಾಜ್ ಕುಮಾರ್ ಗುಪ್ತಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, 12ನೇ ತರಗತಿಯ 18 ವರ್ಷದ ಯುವತಿ ಫೆಬ್ರವರಿ 13ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ತನ್ನ ಬರ್ತ್ ಡೇ ಯಂದು ಪಬ್ ಜಿ ಆಡಲು ತನಗೆ ಹೊಸ ಮೊಬೈಲ್ ಕೊಡಿಸಬೇಕೆಂದು ಪೋಷಕರ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾಳೆ. ಅಂತೆಯೇ ತಂದೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಹೊಸ ಫೋನ್ ಕೊಡಿಸುವುದಾಗಿ ಭರವಸೆ ಕೂಡ ನೀಡಿದ್ದರು ಎಂದರು.

    ಆದರೆ ಕೆಲ ದಿನಗಳೇ ಕಳೆದರೂ ತಂದೆ ಹೊಸ ಫೋನ್ ಕೊಡಿಸಲಿಲ್ಲ. ಇದರಿಂದ ಯುವತಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಗನ ಪ್ರಿಯತಮೆಗೆ ರೌಡಿಗಳಿಂದ ಧಮ್ಕಿ ಹಾಕಿಸಿದ ಪ್ರಭಾವಿ ರಾಜಕಾರಣಿ

  • ಹಿಜಬ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ – ಇಬ್ಬರು ಪೊಲೀಸರು ಅಮಾನತು

    ಹಿಜಬ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ – ಇಬ್ಬರು ಪೊಲೀಸರು ಅಮಾನತು

    ಜೈಪುರ: ಹಿಜಬ್‍ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದ ಮೇಲೆ ರಾಜಸ್ಥಾನ ಪೊಲೀಸ್ ಪೇದೆ ಮತ್ತು ಟ್ರಾಫಿಕ್ ಪೊಲೀಸ್ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

    ಜವಾಹರ್ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೆಬಲ್ ರಮೇಶ್ ಅವರು ಹಿಜಬ್‍ಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಎಎಸ್‍ಐ ಸತ್ವೀರ್ ಸಿಂಗ್ ಅದನ್ನು ಬೇರೆ ಅವರಿಗೂ ಶೇರ್ ಮಾಡಿದ್ದರು ಎಂದು ಆರೋಪ ಕೇಳಿಬರುತ್ತಿತ್ತು.

    ಸಮಾನತೆ, ಶಾಂತಿ ಕಾಪಾಡಬೇಕಾದ ಪೊಲೀಸರೇ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಫೋಟೋ ಹಂಚಿಕೊಂಡಿದ್ದು, ಕಮೆಂಟ್ ಮಾಡಿದ್ದಕ್ಕಾಗಿ ಇಬ್ಬರು ಪೊಲೀಸರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಪೊಲೀಸ್ ಅಧಿಕಾರಿಗಳಾಗಿದ್ದು, ಅವರೇ ಹೀಗೆ ಮಾಡಿರುವುದು ಅಪರಾಧವಾಗಿದೆ. ಅದಕ್ಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅನಿಲ್ ಪ್ಯಾರಿಸ್ ದೇಶಮುಖ ಹೇಳಿದರು. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

    ಕಾನ್‍ಸ್ಟೆಬಲ್ ರಮೇಶ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದಾರೆ. ಅದೇ ಪೋಸ್ಟ್‍ನನ್ನು ಸತ್ವೀರ್ ಸಿಂಗ್ ಇತರ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಮನಕ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ವ್ಯಕ್ತಿಗೂ ಶೇರ್ ಆಗಿದೆ. ಪರಿಣಾಮ ಈ ಅವಹೇಳನಕಾರಿಯಾದ ಪೋಸ್ಟ್ ನೋಡಿದ ವ್ಯಕ್ತಿ ಪೊಲೀಸರಿಗೆ ದೂರು ಕೊಟ್ಟಿದ್ದು, ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಗಮನಿಸಿದ್ದು, ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

  • ಜೈಪುರಕ್ಕೆ ಕಾಲಿಟ್ಟ ಹಿಜಬ್ ವಿವಾದ – ಬುರ್ಕಾ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ನೋ ಎಂಟ್ರಿ ಎಂದ ಕಾಲೇಜ್

    ಜೈಪುರಕ್ಕೆ ಕಾಲಿಟ್ಟ ಹಿಜಬ್ ವಿವಾದ – ಬುರ್ಕಾ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ನೋ ಎಂಟ್ರಿ ಎಂದ ಕಾಲೇಜ್

    ಜೈಪುರ: ಕರ್ನಾಟಕದಲ್ಲಿ ಹುಟ್ಟಿಕೊಂಡ ಹಿಜಬ್ ವಿವಾದ ಇದೀಗ ಜೈಪುರಕ್ಕೆ ಕಾಲಿಟ್ಟಿದೆ. ಬುರ್ಕಾ ಧರಿಸಿ ಕಾಲೇಜ್‍ಗೆ ಬಂದ ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿ ಪ್ರವೇಶ ನಿಷೇಧಿಸಿರುವ ಘಟನೆ ರಾಜಸ್ಥಾನದ  ಜೈಪುರದಲ್ಲಿರುವ ಕಸ್ತೂರಿ ದೇವಿ ಕಾಲೇಜಿನಲ್ಲಿ ನಡೆದಿದೆ.

    ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಕಾಲೇಜ್‍ಗೆ ಬರುತ್ತಿದ್ದಂತೆ, ಆಡಳಿತ ಮಂಡಳಿ ಪ್ರವೇಶ ನಿಷೇಧಿಸಿದೆ. ಈ ವೇಳೆ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ. ನಾವು 3 ವರ್ಷದಿಂದ ಕಾಲೇಜಿಗೆ ಬುರ್ಕಾ ಧರಿಸಿ ಬರುತ್ತಿದ್ದೆವು ಆಗ ನಮ್ಮನ್ನು ಯಾರು ಪ್ರಶ್ನಿಸಿಲ್ಲ ಈಗ ಯಾಕೆ ನಿರ್ಬಂಧ ವಿಧಿಸಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ: ಕಾಲೇಜುಗಳಿಗೆ ಫೆ.16ರವರೆಗೂ ರಜೆ ಘೋಷಿಸಿದ ಸರ್ಕಾರ

    ಕಾಲೇಜಿನ ಆಡಳಿತ ಮಂಡಳಿ ಪ್ರಕಾರ, ವಿದ್ಯಾರ್ಥಿಗಳು ಕಳೆದ 4-5 ದಿನಗಳಿಂದ ಬುರ್ಕಾ ಧರಿಸಿ ಬರುತ್ತಿದ್ದಾರೆ. ಹಾಗಾಗಿ ನಿರ್ಬಂಧ ವಿಧಿಸಿದ್ದೇವೆ ಎಂದಿದ್ದಾರೆ. ಈ ಮಾತನ್ನು ಸುಳ್ಳು ಎನ್ನುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜ್ ಆಡಳಿತ ಮಂಡಳಿ ಏಕಾಏಕಿ ಈರೀತಿ ನಿರ್ಬಂಧ ವಿಧಿಸಲಾಗಿದೆ ಎಂದು ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದದ ಹಿಂದೆ ಇರುವುದು ಕಾಂಗ್ರೆಸ್ ಪಕ್ಷ ಎನ್ನುವುದಕ್ಕೆ ಈಗ ಇನ್ನೊಂದು ಸಾಕ್ಷ್ಯ ಲಭಿಸಿದೆ: ಬಿಜೆಪಿ

    ಕಾಲೇಜ್ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆಗೆ ವಿದ್ಯಾರ್ಥಿನಿಯರ ಪೋಷಕರು ಮುಂದಾಗಿದ್ದಾರೆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.

  • 1.80 ಲಕ್ಷ ಲೀಟರ್ ಡೀಸೆಲ್ ಕಳ್ಳತನ – ಮೂವರ ಬಂಧನ

    1.80 ಲಕ್ಷ ಲೀಟರ್ ಡೀಸೆಲ್ ಕಳ್ಳತನ – ಮೂವರ ಬಂಧನ

    ಜೈಪುರ: ಬರೋಬ್ಬರಿ 1.80 ಲಕ್ಷ ಲೀಟರ್ ಡೀಸೆಲ್ ಕಳ್ಳತನದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡೀಸೆಲ್ ದರೋಡೆಯಿಂದ 1.45 ಕೋಟಿ ರೂ. ನಷ್ಟವಾಗಿದೆ ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿಗಳಾದ ಕಾಲು ಖಾನ್ (50), ವಿಜೇಂದ್ರ ಮೀನಾ (25) ಹಾಗೂ ರಾಜು ಕುಮಾವತ್ (35) ಪೆಟ್ರೋಲ್ ಪಂಪ್ ಹಾಗೂ ರೈಲ್ವೆಗಳಿಗೆ ತೈಲ ಸಾಗಿಸುವ ಟ್ರಂಕ್‍ಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದರು. ಇದರ ಬಗ್ಗೆ ಪೊಲೀಸರು ಹಲವು ಬಾರಿ ದೂರುಗಳನ್ನು ದಾಖಲಿಸಿಕೊಂಡಿದ್ದು, ಇದೀಗ ಕಳ್ಳತನದ ಗ್ಯಾಂಗ್‍ನಿಂದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಚ್ಚಾ ಬದಾಮ್ ಹಾಡಿ ಟ್ರೋಲಾದ ರಾನು ಮಂಡಲ್

    POLICE JEEP

    ಡೀಸೆಲ್ ದರೋಡೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಹೊಟೇಲ್‍ನಿಂದ ಟ್ಯಾಂಕರ್‌ವೊಂದರ ಡೀಸೆಲ್ ಕದಿಯುತ್ತಿದ್ದ ಆರೋಪಿಯೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವೇಳೆ ಆರೋಪಿ ಕದ್ದಿರುವ 1,700 ಲೀಟರ್ ಡೀಸೆಲ್, ಎರಡು ವಾಹನ ಹಾಗೂ ಅನೇಕ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವಕನ ದಾರುಣ ಅಂತ್ಯ!

    ಒಬ್ಬ ಆರೋಪಿಯ ಬಂಧನದ ಬಳಿಕ ಪೊಲೀಸರು ತನಿಖೆ ತೀವ್ರಗೊಳಿಸಿ ಇನ್ನಿಬ್ಬರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

  • ಪ್ರಿಯತಮೆಯ ಗಂಡನಿಂದ ತಪ್ಪಿಸಿಕೊಳ್ಳಲು ಹೋಗಿ 5ನೇ ಮಹಡಿಯಿಂದ ಜಿಗಿದ!

    ಪ್ರಿಯತಮೆಯ ಗಂಡನಿಂದ ತಪ್ಪಿಸಿಕೊಳ್ಳಲು ಹೋಗಿ 5ನೇ ಮಹಡಿಯಿಂದ ಜಿಗಿದ!

    ಜೈಪುರ: ವಿವಾಹಿತ ಮಹಿಳೆಯ ಗಂಡನ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಐದನೇ ಮಹಡಿಯಿಂದ ಯುವಕನೊಬ್ಬ ಜಿಗಿದು ಪ್ರಾಣ ಕಳೆದುಕೊಂಡ ಘಟನೆ ಜೈಪುರದಲ್ಲಿ ನಡೆದಿದೆ.

    ಮೊಹಿನ್ಸ್(29) ಮೃತ ಯುವಕ. ಮೂಲತಃ ಉತ್ತರಪ್ರದೇಶದವನಾಗಿರುವ ಈತನೊಂದಿಗೆ ಮಹಿಳೆಯು ಎರಡು ವರ್ಷಗಳ ಹಿಂದೆ ಓಡಿ ಹೋಗಿದ್ದು, ಲೀವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಈ ವಿಚಾರ ತಿಳಿದ ಪತಿ ಆಕೆಯನ್ನು ಹುಡುಕಿಕೊಂಡು ಹೋಗುವಾಗ ಇಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ತಂದೆ ಸಾವಿನಿಂದ ಮನನೊಂದು 4 ತಿಂಗಳ ಬಳಿಕ ಮಗಳು ಆತ್ಮಹತ್ಯೆ

    ಇತ್ತ ತನ್ನನ್ನು ಹಿಂಬಾಲಿಸಿಕೊಂಡು ಮಹಿಳೆಯ ಪತಿ ಬಂದಿರುವ ವಿಚಾರ ತಿಳಿದ ಮೊಹಿನ್ಸ್ ಗಾಬರಿಗೊಂಡು ಮನೆಯ ಬಾಲ್ಕನಿಯಿಂದ ಜಿಗಿದಿದ್ದಾನೆ. ಬಳಿಕ ಮಹಿಳೆಯು ಅವನನ್ನು ಎಸ್‌ಎಂಎಸ್ ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!

    ಮೃತ ವ್ಯಕ್ತಿ ವಿವಾಹಿತ ಮಹಿಳೆಯೊಂದಿಗೆ ಲೀವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಹಾಗೂ ಆಕೆಯ ಪತಿಯನ್ನು ಕಂಡು ಭಯಬೀತನಾದ ಕಾರಣ ಈ ಘಟನೆ ನಡೆದಿದೆ ಎಂದು ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಬಲ್ವೀರ್ ಸಿಂಗ್ ಹೇಳಿದ್ದಾರೆ.

  • 16.8 ಕೆಜಿ ತೂಕದ ಗೆಡ್ಡೆಯನ್ನ ಹೊರತೆಗೆದ ವೈದ್ಯರು

    16.8 ಕೆಜಿ ತೂಕದ ಗೆಡ್ಡೆಯನ್ನ ಹೊರತೆಗೆದ ವೈದ್ಯರು

    ಜೈಪುರ: ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಶಸ್ತ್ರಚಿಕಿತ್ಸೆಯಲ್ಲಿ 16.8 ಕೆಜಿ ತೂಕದ ಗೆಡ್ಡೆಯನ್ನು ವೈದ್ಯರ ತಂಡ ಹೊರತೆಗೆದಿರುವ ಘಟನೆ ಜೈಪುರದಲ್ಲಿ ನಡೆದಿದೆ.

    ಜುಂಜುನು ಜಿಲ್ಲೆಯ ನಿವಾಸಿಯಾಗಿರುವ 55 ವರ್ಷದ ಮಹಿಳೆ ಕಳೆದ ಮೂರು ವರ್ಷಗಳಿಂದ ಅಂಡಾಶಯದ ಗೆಡ್ಡೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಗಡ್ಡೆಯು ಕ್ರಮೇಣ ಬೆಳೆಯುತ್ತಲೇ ಇದ್ದು, ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿತು. ಅಂತಿಮವಾಗಿ ಐದು ತಿಂಗಳ ಹಿಂದೆ ಮಹಿಳೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಮಸ್ಯೆ ಬಗ್ಗೆ ತಿಳಿದುಬಂದಿದೆ. ಇದನ್ನೂ ಓದಿ: ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪುಟ ಸೇರಿದ 5 ವರ್ಷದ ಪೋರಿ

    ಮಹಿಳೆಯ ಸಮಸ್ಯೆ ತಿಳಿದ ತಕ್ಷಣ ವೈದ್ಯರ ತಂಡ ಆಕೆಗೆ ಮ್ಯಾರಥಾನ್ ಶಸ್ತ್ರಚಿಕಿತ್ಸೆಯ ಮಾಡಿಸುವಂತೆ ತಿಳಿಸಲಾಗಿದೆ. ನಂತರ ಮಹಿಳೆ ಚಿಕಿತ್ಸೆ ಪಡೆದುಕೊಂಡಿದ್ದು, ಚಿಕಿತ್ಸೆ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಪೊಲೀಸ್ ಬಸ್ ಮೇಲೆ ಭಯೋತ್ಪಾದಕರ ದಾಳಿ – ಮೂವರು ಹುತಾತ್ಮ, 14 ಜನರಿಗೆ ಗಾಯ 

    ಈ ಕುರಿತು ಭಗವಾನ್ ಮಹಾವೀರ್ ಕ್ಯಾನ್ಸರ್ ಆಸ್ಪತ್ರೆಯ ಆಂಕೊಲಾಜಿಸ್ಟ್ ಡಾ.ಪ್ರಶಾಂತ್ ಶರ್ಮಾ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದು, ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಮಹಿಳೆಯ ಹೊಟ್ಟೆಯಿಂದ 23 ಸೆಂ.ಮೀ ಗಾತ್ರದ ಗಡ್ಡೆಯನ್ನು ಹೊರತೆಗೆಯಲಾಗಿದೆ ಎಂದು ಹೇಳಿದರು.

  • ಪ್ರಾಂಶುಪಾಲ, ಶಿಕ್ಷಕರು ಸೇರಿ 9 ಮಂದಿಯಿಂದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ರೇಪ್

    ಪ್ರಾಂಶುಪಾಲ, ಶಿಕ್ಷಕರು ಸೇರಿ 9 ಮಂದಿಯಿಂದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ರೇಪ್

    ಜೈಪುರ: ನಾಲ್ವರು ವಿದ್ಯಾರ್ಥಿನಿಯರ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಹಾಗೂ ಒಂಬತ್ತು ಶಿಕ್ಷಕರು ಕಿರುಕುಳ ನೀಡಿ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ತಂದೆ ಶಾಲೆಗೆ ಹೊಗದ ಕಾರಣವನ್ನು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ 10ನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ ಒಂದು ವರ್ಷದಿಂದ ಆಕೆಯ ಮೇಲೆ ಪ್ರಾಂಶುಪಾಲರು ಹಾಗೂ ಶಿಕ್ಷಕರು ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದಾರೆ. ಜೊತೆಗೆ ಇಬ್ಬರು ಮಹಿಳಾ ಶಿಕ್ಷಕರು ಘಟನೆಯ ವೀಡಿಯೋಗಳನ್ನು ಚಿತ್ರೀಕರಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

    ಈ ಬಗ್ಗೆ ಪೊಲೀಸರಿಗೆ ಸಂತ್ರಸ್ತೆಯ ತಂದೆ ದೂರು ನೀಡಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಿದ ಸಂದರ್ಭದಲ್ಲಿ ಇನ್ನೂ ಮೂವರು ವಿದ್ಯಾರ್ಥಿನಿಗಳು ಅತ್ಯಾಚಾರಕ್ಕೆ ಒಳಗಾಗಿರುವುದು ತಿಳಿದುಬಂದಿದೆ. ಇವರು 6ನೇ ತರಗತಿ, 4ನೇ ತರಗತಿ ಮತ್ತು 3ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗಳಾಗಿದ್ದಾರೆ. ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ರಸ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಖ್ಯಾತ ಫೋಟೋಗ್ರಾಫರ್ ತೆಗೆದಿರುವ ಸೂರ್ಯನ ಒಂದು ಫೋಟೋಗೆ 3766ರೂ.!

    ಮಹಿಳಾ ಶಿಕ್ಷಕರಿಗೆ ಈ ವಿಷಯವನ್ನು ತಿಳಿಸಿದಾಗ ಅವರು ಶಾಲಾ ಶುಲ್ಕ ಹಾಗೂ ಪುಸ್ತಕಗಳ ಹಣವನ್ನು ಪಾವತಿಸುವುದಾಗಿ ಆಮಿಷ ನೀಡಿದ್ದರು. ಜೊತೆಗೆ ದೂರು ನೀಡದಂತೆಯೂ ತಿಳಿಸಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.

    RAPE CASE

    ಮೂವರು ಶಿಕ್ಷಕರು ಹಾಗೂ ಪ್ರಿನ್ಸಿಪಾಲ್‌ರು ಹಲವಾರು ಬಾರಿ ಸಂತ್ರಸ್ತರನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರು ಮದ್ಯ ಸೇವಿಸಿ ಅತ್ಯಾಚಾರವನ್ನು ಎಸಗಿದ್ದಾರೆ ಎಂದು ವಿಚಾರಣೆ ವೇಳೆ ಸಂತ್ರಸ್ತೆ ತಿಳಿಸಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದಾಗ ಪ್ರಾಂಶುಪಾಲರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ. ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ ಪ್ರಾಂಶುಪಾಲರು, ಅಂತಹ ಯಾವುದೇ ಪ್ರಕರಣದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

    ಅಲ್ವಾರ್‌ನ ಸರ್ಕಾರಿ ಶಾಲೆಯ ನಾಲ್ವರು ವಿದ್ಯಾರ್ಥಿನಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲರು ಮತ್ತು ಒಂಬತ್ತು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ, ಸಂತ್ರಸ್ತರು ಶಿಕ್ಷಕರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಮಾಡಿದ್ದಾರೆ. ಮಂಧಾನ ಪೊಲೀಸ್ ಠಾಣಾಧಿಕಾರಿ ಮುಖೇಶ್ ಯಾದವ್ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಮೂರು ವಿಭಿನ್ನ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಪೊಲೀಸರು ಪ್ರಕರಣದ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ: ಆರತಿ ಬೆಳಗಿ ಮುದ್ದಿನ ಶ್ವಾನದ ಹುಟ್ಟುಹಬ್ಬ ಆಚರಿಸಿದ ಸುಧಾಮೂರ್ತಿ!

  • ಆಭರಣ ತಯಾರಿಕಾ ಕಂಪನಿಯ ಮೇಲೆ ಐಟಿ ದಾಳಿ-500 ಕೋಟಿ ಕಪ್ಪು ಹಣ ವಶ

    ಆಭರಣ ತಯಾರಿಕಾ ಕಂಪನಿಯ ಮೇಲೆ ಐಟಿ ದಾಳಿ-500 ಕೋಟಿ ಕಪ್ಪು ಹಣ ವಶ

    ನವದೆಹಲಿ: ರಾಜಸ್ಥಾನದ ಜೈಪುರ ಮೂಲದ ಆಭರಣ ತಯಾರಿಕೆ ಮತ್ತು ರಫ್ತು ಸಮೂಹವೊಂದರ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ನಡೆಸಿ 500 ಕೋಟಿ ರೂ. ಕಪ್ಪು ಹಣ ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

    ತೆರಿಗೆ ವಂಚಿಸಿದ ಕಂಪನಿ ಯಾವುದು ಎಂದು ಇನ್ನೂ ಬಹಿರಂಗವಾಗಿಲ್ಲ. ದೇಶಾದ್ಯಂತ ಏಕಕಾಲದಲ್ಲಿ 50 ಕಡೆ ನಡೆದ ದಾಳಿಯಲ್ಲಿ ತೆರಿಗೆ ವಂಚಿಸಿದ ಹಣ ಪತ್ತೆಯಾಗಿದೆ.

    ದಾಳಿ ವೇಳೆ 4 ಕೋಟಿ ರೂ. ನಗದು ಹಾಗೂ 9 ಕೋಟಿ ರೂ. ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಅನೇಕ ದಾಖಲೆ ಪತ್ರಗಳು ದೊರೆತಿದೆ. ಕಂಪನಿಯವರು 72 ಕೋಟಿ ರೂ.ನಷ್ಟು ಹಣಕ್ಕೆ ತೆರಿಗೆ ಪಾವತಿಸದೆ ವಂಚಿಸಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್

    ಆಫ್ರಿಕನ್ ದೇಶದಿಂದ ಈ ಕಂಪನಿ ಕಚ್ಚಾ ರೂಪದ ಅಮೂಲ್ಯ ಆಭರಣ ಹರಳುಗಳನ್ನು ತಂದು ಜೈಪುರದಲ್ಲಿ ಸಂಸ್ಕರಣೆ ಮಾಡುತ್ತಿತ್ತು. ಅದರಿಂದ ಬಂದ ಆದಾಯವನ್ನು ಬಚ್ಚಿಡುತ್ತಿತ್ತು ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಅಮ್ಮ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್

  • ಮಾವ ಕೊಟ್ಟ 75 ಲಕ್ಷ ರೂ. ವರದಕ್ಷಿಣೆ ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ದೇಣಿಗೆ ಕೊಟ್ಟ ಅಳಿಯ

    ಮಾವ ಕೊಟ್ಟ 75 ಲಕ್ಷ ರೂ. ವರದಕ್ಷಿಣೆ ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ದೇಣಿಗೆ ಕೊಟ್ಟ ಅಳಿಯ

    ಜೈಪುರ್: ಮದುವೆಯಲ್ಲಿ ವರದಕ್ಷಿಣೆ ನೀಡಿದ್ದ 75 ಲಕ್ಷ ರೂಪಾಯಿ ಹಣದಲ್ಲಿ ವಧು, ವರ ಬಾಲಕಿಯರ ವಿದ್ಯಾರ್ಥಿನಿಲಯ (ಹಾಸ್ಟೆಲ್) ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಉದ್ಯಮಿ ಕಿಶೋರ್ ಸಿಂಗ್ ಕನೋದ್ ಇದೇ 21ರಂದು ತಮ್ಮ ಮಗಳಾದ ಅಂಜಲಿ ಕನ್ವಾರ್ ಅವರ ವಿವಾಹವನ್ನು ನೆರವೇರಿಸಿದ್ದರು. ಮದುವೆ ಸಂದರ್ಭದಲ್ಲಿ, ವರ ಪ್ರವೀಣ್ ಸಿಂಗ್‍ಗೆ ವರದಕ್ಷಿಣೆ ನೀಡಲು ಎಂದು ಕಿಶೋರ್ ಅವರು 75 ಲಕ್ಷವನ್ನು ತೆಗೆದಿರಿಸಿದ್ದರು. ಆದರೆ ಮದುವೆಯ ಮುನ್ನಾದಿನ ಅಂಜಲಿ, ವರದಕ್ಷಿಣೆ ನೀಡಲು ತೆಗೆದಿರಿಸಿರುವ ಹಣವನ್ನು ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ನೀಡಿ ಎಂದು ತಮ್ಮ ತಂದೆಯನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ಕಿಶೋರ್ ಸಹ ಸಮ್ಮತಿ ಸೂಚಿಸಿದ್ದಾರೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

    MONEY

    ಮದುವೆಯ ದಿನ ಮಂಟಪದಲ್ಲಿಯೇ ಈ ಬಗ್ಗೆ ಕಿಶೋರ್ ಘೋಷಣೆ ಮಾಡಿದ್ದಾರೆ. ತಮ್ಮ ಮಗಳಿಗೆ ಖಾಲಿ ಚೆಕ್ ನೀಡಿ, ಎಷ್ಟು ದೇಣಿಗೆ ನೀಡಬೇಕೊ ಅದನ್ನು ಚೆಕ್‍ನಲ್ಲಿ ನಮೂದಿಸು ಎಂದು ಹೇಳಿದ್ದಾರೆ. ಅಂಜಲಿ ಆ ಚೆಕ್‍ನಲ್ಲಿ 75 ಲಕ್ಷ ನಮೂದಿಸಿದ್ದಾರೆ. ಆ ಚೆಕ್ ಅನ್ನು ತಾರಾತರ ಮಠದ ಮುಖ್ಯಸ್ಥರಿಗೆ ಮಂಟಪದಲ್ಲಿಯೇ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

    BRIBE

    ನಾವು ನಿರ್ಮಿಸುತ್ತಿರುವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಿಶೋರ್ ಅವರು ಈ ಮೊದಲೇ 1 ಕೋಟಿ ದೇಣಿಗೆ ನೀಡಿದ್ದರು. ಕಾಮಗಾರಿ ಪೂರ್ಣಗೊಳಿಸಲು ಇನ್ನೂ 50,75 ಲಕ್ಷದ ಅಗತ್ಯವಿತ್ತು. ಕಿಶೋರ್ ಅವರು ಈಗ ಅದನ್ನೂ ಒದಗಿಸಿದ್ದಾರೆ ಎಂದು ತಾರಾತರ ಮಠದವರು ಹೇಳಿದ್ದಾರೆ.