Tag: Jaipur

  • ದೇಶದ ಅತಿದೊಡ್ಡ ಮುಂಬೈ- ದೆಹಲಿ ಎಕ್ಸ್‌ಪ್ರೆಸ್‌ವೇಗೆ ಮೋದಿ ಚಾಲನೆ

    ದೇಶದ ಅತಿದೊಡ್ಡ ಮುಂಬೈ- ದೆಹಲಿ ಎಕ್ಸ್‌ಪ್ರೆಸ್‌ವೇಗೆ ಮೋದಿ ಚಾಲನೆ

    ಜೈಪುರ: ರಾಜಸ್ಥಾನ  ಚುನಾವಣೆಯ ಸನಿಹದಲ್ಲಿ ದೇಶದ ಅತಿದೊಡ್ಡ ಮುಂಬೈ-ದೆಹಲಿ ಎಕ್ಸ್‌ಪ್ರೆಸ್‌ವೇಯ (Delhi-Mumbai Expressway) ಮೊದಲ ಹಂತವನ್ನು ಪ್ರಧಾನಿ ಮೋದಿ (PM Narendra Modi) ಲೋಕಾರ್ಪಣೆ ಮಾಡಿದ್ದಾರೆ.

    ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1,386 ಕಿಲೋಮೀಟರ್‌ಗಳ ಎಕ್ಸ್‌ಪ್ರೆಸ್‌ ಹೈವೇಯನ್ನು ಅತ್ಯಂತ  ವೇಗವಾಗಿ ಪೂರ್ಣಗೊಳಿಸುತ್ತಿದೆ. ಇದರ ಮೊದಲ ಹಂತವಾಗಿ ಸಾಹ್ನಾ – ದೌಸಾ ಮಧ್ಯೆ ನಿರ್ಮಿಸಲಾದ ಹೆದ್ದಾರಿಯನ್ನು ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ.

    ಇದರಿಂದಾಗಿ ದೆಹಲಿ-ಜೈಪುರ (Delhi-Jaipur) ನಡುವಿನ ಅಂತರ ಎರಡು ಗಂಟೆಗೆ ಇಳಿದಿದೆ. ಸದ್ಯ ದೆಹಲಿಯಿಂದ ಜೈಪುರಕ್ಕೆ ತೆರಳಲು ನಾಲ್ಕರಿಂದ ಐದು ಗಂಟೆ ಹಿಡಿಯುತ್ತಿದೆ. ಈ ಎಂಟು ಲೇನ್‍ಗಳ ಸಾಹ್ನಾ -ದೌಸಾ 246 ಕಿಲೋಮೀಟರ್ ಹೆದ್ದಾರಿಯನ್ನು 10,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನೂ ಓದಿ: ʼಸುಪ್ರೀಂʼ ನಿವೃತ್ತ ನ್ಯಾಯಾಧೀಶ ಕನ್ನಡಿಗ ಅಬ್ದುಲ್‌ ನಜೀರ್‌ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕ

    ರಾಜಸ್ಥಾನ-ಹರಿಯಾಣ-ಮಧ್ಯಪ್ರದೇಶ-ಗುಜರಾತ್-ಮಹಾರಾಷ್ಟ್ರ ರಾಜ್ಯಗಳನ್ನು ಈ ಎಕ್ಸ್‌ಪ್ರೆಸ್‌ವೇ ಸಂಪರ್ಕಿಸುತ್ತದೆ. 2019ರ ಮಾರ್ಚ್ 9ರಂದು ಆರಂಭಗೊಂಡಿದ್ದು ಈ ವರ್ಷಾಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

    ಈ ಯೋಜನೆಗೆ 5 ಸಾವಿರ ಹೆಕ್ಟೇರ್ ಭೂ ಸ್ವಾಧೀನ ಮಾಡಲಾಗಿದ್ದು 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಪ್ರಯಾಣದ ಅವಧಿ 24 ಗಂಟೆಯಿಂದ 12 ಗಂಟೆಗೆ ಇಳಿಕೆಯಾಗಲಿದ್ದು ಈಗ ಇರುವುದಕ್ಕಿಂತ 180 ಕಿ.ಮೀ ಕಡಿಮೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 55 ಸಾವಿರ ರೂ.ಗೆ ಖರೀದಿಸಿ, 13ರ ಬಾಲಕಿ ಮೇಲೆ ನಿರಂತರ ಅತ್ಯಾಚಾರ – ಓರ್ವ ಅರೆಸ್ಟ್

    ಜೈಪುರ: ಮಹಿಳೆಯೊಬ್ಬಳು (Women) 55 ಸಾವಿರ ರೂ.ಗೆ ಬಾಲಕಿಯನ್ನು ಖರೀದಿಸಿ ತನ್ನ ಮಗ ಹಾಗೂ ಪತಿಯಿಂದ ನಿರಂತರವಾಗಿ ಅತ್ಯಾಚಾರ ಮಾಡಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ.

    ಜಾರ್ಖಂಡ್‌ನ (Jharkhand) 13 ವರ್ಷದ ಬಾಲಕಿ ನಗರದ ಮನಕ್ ಚೌಕ್ ಪೊಲೀಸ್ ಠಾಣೆಗೆ (Manak Chowk Police Station) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿ ವಿಕಾಸ್ ರಾಣಾ (27) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Cyber Crimeː 1 ತಿಂಗಳಲ್ಲಿ 1,228 ಕೇಸ್ – ಪರಿಹರಿಸಲು ಪೊಲೀಸ್ ಸಿಬ್ಬಂದಿ ಕೊರತೆ

    ತನ್ನನ್ನು ಜೈಪುರದಿಂದ 55 ಸಾವಿರ ರೂ.ಗೆ ಖರೀದಿಸಿ ಕರೆತಂದು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿಸಿದ್ದಾಳೆ ಎಂದು ಬಾಲಕಿ ಆರೋಪಿಸಿದ್ದಾರೆ.

    ಏನಿದು ಘಟನೆ?
    ಸುಮಾರು 2 ತಿಂಗಳಿನಿಂದ ಜಾರ್ಖಂಡ್ ನಗರದಲ್ಲಿ ತರಕಾರಿ ಮಾರಾಟ ಮಾಡಿಕೊಂಡಿದ್ದ ಮಹಿಳೆ ಬಾಲಕಿಯನ್ನ ನೋಡಿದ್ದಾಳೆ. ಈ ವೇಳೆ ಮದುವೆ ಪ್ರಸ್ತಾಪದೊಂದಿಗೆ ಬಾಲಕಿ ಕುಟುಂಬವನ್ನ ಸಂಪರ್ಕಿಸಿದ್ದಾಳೆ. ಬಾಲಕಿ ಮನೆಗೆ ಬಂದು ಜೈಪುರದ ಉತ್ತಮ ಕುಟುಂಬಕ್ಕೆ ನಿಮ್ಮ ಹುಡುಗಿಯನ್ನು ಮದುವೆ ಮಾಡಿಸಿಕೊಡುವುದಾಗಿ ಆಕೆಯ ತಾಯಿ ಹಾಗೂ ಅಜ್ಜಿಗೆ ಹೇಳಿದ್ದಾಳೆ. ಅಲ್ಲದೇ ಹುಡುಗಿಯನ್ನು ತನ್ನೊಂದಿಗೆ ಕಳುಹಿಸಿಕೊಟ್ಟರೆ 55 ಸಾವಿರ ರೂ. ನೀಡುವುದಾಗಿ ಆಸೆ ತೋರಿಸಿದ್ದಾಳೆ. ಇದರಿಂದ ಬಾಲಕಿಯ ಅಜ್ಜಿ ಮರುದಿನವೇ ರೈಲಿನಲ್ಲಿ ಜೈಪುರಕ್ಕೆ ಕರೆತಂದಿದ್ದಾರೆ.

    ನಂತರ ಬಾಲಕಿಯನ್ನು ಮಹಿಳೆಯ ಕುಟುಂಬದೊಂದಿಗೆ ಇರಲು ಬಿಡಲಾಗಿದೆ. ಈ ವೇಳೆ ಖರೀದಿಸಿದ ಮಹಿಳೆ ತನ್ನ ಮಗನಿಂದ ಅತ್ಯಾಚಾರ ಮಾಡಿಸಿದ್ದಾಳೆ. ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ಸಹ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 58ರ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಹೊಡೆದು ಸಾಯಿಸಿದ 16ರ ಬಾಲಕ

    ಮನಕ್ ಚೌಕ್ ಪೊಲೀಸ್ ಠಾಣೆಯ ಬಳಿ ಬಾಲಕಿ ಅಳುತ್ತಾ ತಿರುಗಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಆಕೆಯನ್ನ ಪ್ರಶ್ನಿಸಿದ್ದಾರೆ. ನಂತರ ಬಾಲಕಿ ವಿಷಯ ಬಾಯ್ಬಿಟ್ಟಿದ್ದಾಳೆ.

    ಬಾಲಕಿ ನೀಡಿದ ದೂರಿನ ಆಧಾರದ ಮೇರೆಗೆ ಐಪಿಸಿ (IPC) ಹಾಗೂ ಪೋಕ್ಸೊ ಕಾಯ್ದೆಯ (POCSO Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿಕಾಸ್ ರಾಣಾ (27) ನನ್ನ ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರಿ ಆಸ್ಪತ್ರೆ ಬಳಿ ಸತ್ತ ಭ್ರೂಣ ಕಚ್ಚಿಕೊಂಡು ತಿರುಗಾಡಿದ ನಾಯಿ – ತೀವ್ರ ತನಿಖೆ

    ಸರ್ಕಾರಿ ಆಸ್ಪತ್ರೆ ಬಳಿ ಸತ್ತ ಭ್ರೂಣ ಕಚ್ಚಿಕೊಂಡು ತಿರುಗಾಡಿದ ನಾಯಿ – ತೀವ್ರ ತನಿಖೆ

    ಜೈಪುರ: ರಾಜಸ್ಥಾನದ (Rajasthan) ರಾಜಧಾನಿ ಜೈಪುರದ (Jaipur) ಸರ್ಕಾರಿ ಆಸ್ಪತ್ರೆಯಲ್ಲಿ (Hospital) ತೀವ್ರ ನಿರ್ಲಕ್ಷ್ಯದ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಯಿಯೊಂದು (Dog) ಸತ್ತ ಭ್ರೂಣವನ್ನು (Fetus) ಕಚ್ಚಿಕೊಂಡು ತಿರುಗಾಡುತ್ತಿದ್ದುದು ಕಂಡುಬಂದಿದ್ದು, ಘಟನೆಯ ಬಗ್ಗೆ ತೀವ್ರವಾಗಿ ತನಿಖೆ ನಡೆಯುತ್ತಿದೆ.

    ಭಾನುವಾರ ಸಂಜೆ ಜೈಪುರ ಜಿಲ್ಲೆಯ ಸಂಗನೇರಿ ಗೇಟ್‌ನಲ್ಲಿರುವ ಮಹಿಳಾ ಆಸ್ಪತ್ರೆಯ ಗೇಟ್ ನಂ.1 ರ ಹೊರಗೆ ಬಾಯಲ್ಲಿ ಭ್ರೂಣವನ್ನು ಕಚ್ಚಿಕೊಂಡು ತಿರುಗಾಡುತ್ತಿದ್ದ ನಾಯಿಯನ್ನು ಸ್ಥಳೀಯರು ಗಮನಿಸಿದ್ದಾರೆ. ಜನರು ನಾಯಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಅದು ಭ್ರೂಣವನ್ನು ಆಮ್ಲಜನಕ ಘಟಕದ ಬಳಿ ಬಿಟ್ಟು, ಆಸ್ಪತ್ರೆಯ ಗೋಡೆಯ ಮೇಲೆ ಹೋಗಿ ಕುಳಿತಿದೆ.

    ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಲಾಲ್ ಕೋಠಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಸೋಮವಾರ ಭ್ರೂಣದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭ್ರೂಣ 8 ತಿಂಗಳದ್ದಾಗಿದ್ದು, ಗಂಡು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ- 15ರ ಬಾಲಕಿ ಸಾವು

    ಮೃತ ಭ್ರೂಣದ ಕುಟುಂಬದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಭ್ರೂಣ ಆಸ್ಪತ್ರೆಯಲ್ಲಿ ಸತ್ತಿದ್ದು, ಅದನ್ನು ಕೊಂಡೊಯ್ಯಲು ಹಿಂಜರಿದ ಕುಟುಂಬದವರು ರಸ್ತೆಯಲ್ಲಿ ಎಸೆದು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    dog

    ಘಟನಾ ಸ್ಥಳದ ಸುತ್ತಮುತ್ತ ಯಾವುದೇ ಸಿಸಿಟಿವಿ ಅಳವಡಿಸಲಾಗಿಲ್ಲ. ಅಧಿಕಾರಿಗಳು ನವೆಂಬರ್ 15ರಿಂದ ಆಸ್ಪತ್ರೆಯಲ್ಲಿ ಜನಿಸಿರುವ ಮಕ್ಕಳ ಮಾಹಿತಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನನ್ನು ಹತ್ಯೆಗೈದು ಮೃತದೇಹದ ಜೊತೆ ಠಾಣೆಗೆ ಆಗಮಿಸಿದ ಭೂಪ

    Live Tv
    [brid partner=56869869 player=32851 video=960834 autoplay=true]

  • ವೃದ್ಧೆಯ ಕಾಲು ಕತ್ತರಿಸಿ ಆಭರಣ ಕದ್ದೊಯ್ದ ದುಷ್ಕರ್ಮಿಗಳು

    ವೃದ್ಧೆಯ ಕಾಲು ಕತ್ತರಿಸಿ ಆಭರಣ ಕದ್ದೊಯ್ದ ದುಷ್ಕರ್ಮಿಗಳು

    ಜೈಪುರ: ಬೆಳ್ಳಿ ಕಡಗವನ್ನು ಕದಿಯಲು ಬಂದಿದ್ದ ಗುಂಪೊಂದು ವೃದ್ಧೆಯ ಕಾಲನ್ನು (Leg) ಕತ್ತರಿಸಿದ ಅಮಾನವೀಯ ಘಟನೆ ಜೈಪುರದಲ್ಲಿ ನಡೆದಿದೆ.

    ಜೈಪುರದ (Jaipur) ಪಟ್ಲಾ ಪೊಲೀಸ್ ಠಾಣೆ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಸುಮಾರು 100 ವರ್ಷ ವಯಸ್ಸಿನ ವೃದ್ಧೆಯ (Old Woman) ಕಾಲಿನಲ್ಲಿರುವ ಬೆಳ್ಳಿಯ ಕಡಗವು ಕಳ್ಳರ ಗುಂಪಿನ ಕಣ್ಣಿಗೆ ಬಿದ್ದಿದೆ. ಮನೆಯಲ್ಲಿ ವೃದ್ಧೆಯೊಬ್ಬಳೇ ಇದ್ದುದ್ದನ್ನು ಗಮನಿಸಿದ್ದ ಗುಂಪು ವೃದ್ಧೆಯ ಕಾಲನ್ನು ಕತ್ತರಿಸಿ ಕಡಗವನ್ನು ಕದ್ದೊಯ್ದಿದ್ದಾರೆ.

    crime

    ಘಟನೆಗೆ ಸಂಬಂಧಿಸಿ ವೃದ್ಧೆಯ ಕಾಲು ಕತ್ತರಿಸಿರುವುದನ್ನು ನೋಡಿ ಮನೆ ಮಾಲೀಕರು ಕೂಡಲೇ ವೃದ್ಧೆಯ ಮೊಮ್ಮಗಳಿಗೆ ತಿಳಿಸಿದ್ದಾರೆ. ಮೊಮ್ಮಗಳು ಆಕೆಯ ತಾಯಿಗೆ ತಿಳಿಸಿ ಇಬ್ಬರು ಆ ಸ್ಥಳಕ್ಕೆ ಹೋಗುವ ವೇಳೆಗೆ ವೃದ್ಧೆಯು ರಕ್ತದ ಮಡಿಲಿನಲ್ಲಿ ಬಿದ್ದಿದ್ದಳು.

    ಘಟನೆಗೆ ಸಂಬಂಧಿಸಿದಂತೆ ವೃದ್ಧೆಯು ಚಿಂತಾಜನಕ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ವೃದ್ಧೆಯ ಕುತ್ತಿಗೆ ಮೇಲೆ ಗಾಯದ ಗುರುತುಗಳಿದ್ದು, ಆಕೆಯ ಕಾಲುಗಳನ್ನು ಕತ್ತರಿಸಿದ್ದರು. ಇದನ್ನೂ ಓದಿ: ಹಿರಿಯರಿಗೆ ಸಹಾಯ ಮಾಡೋ ನೆಪದಲ್ಲಿ ಪಿನ್ ನಂಬರ್ ತಿಳಿದುಕೊಂಡು ಹಣ ಲಪಟಾಯಿಸುತ್ತಿದ್ದಾತ ಅಂದರ್ 

    POLICE JEEP

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ಕೈಗೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಮೀನು ವಿವಾದ- ಮಾತುಕತೆಗೆ ಬಂದಾತನ ಕಾಲಿಗೆ ಗುಂಡು ಹೊಡೆದ ರೈತ ಸಂಘದ ಜಿಲ್ಲಾಧ್ಯಕ್ಷ

    Live Tv
    [brid partner=56869869 player=32851 video=960834 autoplay=true]

  • ಸ್ಥಳೀಯ ಕಲಾವಿದರೊಂದಿಗೆ ನೃತ್ಯ ಮಾಡಿದ ಬಾಂಗ್ಲಾ ಪ್ರಧಾನಿ – ವೀಡಿಯೋ ವೈರಲ್

    ಸ್ಥಳೀಯ ಕಲಾವಿದರೊಂದಿಗೆ ನೃತ್ಯ ಮಾಡಿದ ಬಾಂಗ್ಲಾ ಪ್ರಧಾನಿ – ವೀಡಿಯೋ ವೈರಲ್

    ಜೈಪುರ: ಬಾಂಗ್ಲಾದೇಶದ(Bangladesh) ಪ್ರಧಾನಿ ಶೇಖ್ ಹಸೀನಾ ಅವರು ಜೈಪುರ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಲಾವಿದರೊಂದಿಗೆ ನೃತ್ಯ ಮಾಡಿದ್ದಾರೆ.

    ನಾಲ್ಕು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿರುವ ಪ್ರಧಾನಿ ಶೇಖ್ ಹಸೀನಾ(PM Sheikh Hasina) ಅವರು ಸೆಪ್ಟೆಂಬರ್ 8 ರಂದು ಜೈಪುರಕ್ಕೆ ಬಂದಿಳಿದರು. ಜೈಪುರ ವಿಮಾನ ನಿಲ್ದಾಣದಲ್ಲಿ(Jaipur airport) ಅವರನ್ನು ಸ್ವಾಗತಿಸಲು ಜಮಾಯಿಸಿದ್ದ ಹಲವಾರು ರಾಜಸ್ಥಾನಿ ಕಲಾವಿದರು(Rajasthani artists) ನೃತ್ಯ ಪ್ರದರ್ಶಿಸುವ ಮೂಲಕ ಆತ್ಮೀಯವಾಗಿ ಸ್ವಾಗತ ಕೋರಿದರು. ಈ ವೇಳೆ ಶೇಖ್ ಹಸೀನಾ ಅವರು ಕೂಡ ಕಲಾವಿದರೊಂದಿಗೆ ಸೇರಿಕೊಂಡು ಹೆಜ್ಜೆ ಹಾಕಿದ್ದಾರೆ.

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ವಿಮಾನದಿಂದ ಇಳಿದ ಬಾಂಗ್ಲಾದೇಶದ ಪ್ರಧಾನಿಯನ್ನು ಅಧಿಕಾರಿಗಳು ಮತ್ತು ಸ್ಥಳೀಯರು ಸ್ವಾಗತಿಸಿದರು. ನಂತರ ನೃತ್ಯ ಮಾಡುತ್ತಿದ್ದ ಕಲಾವಿದರೊಂದಿಗೆ ಸೇರಿಕೊಂಡು ಕುಣಿದು ಕುಪ್ಪಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಇಬ್ಬರು ಉಗ್ರರ ಅರೆಸ್ಟ್‌ ಕೇಸ್‌ ಎನ್‌ಐಎಗೆ ವರ್ಗಾವಣೆ

    ಸೆಪ್ಟೆಂಬರ್ 6ರ ಮಂಗಳವಾರದಂದು ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಿದರು. ಅವರನ್ನು ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಸ್ವಾಗತಿಸಿದರು, ಅಲ್ಲಿ ಅವರಿಗೆ ತ್ರಿ-ಸೇವಾ ಗಾರ್ಡ್ ಆಫ್ ಗೌರವವನ್ನು ನೀಡಲಾಯಿತು. ಇದನ್ನೂ ಓದಿ: ಸುವೆಂದು ಅಧಿಕಾರಿಗೆ ಕಪ್ಪು ಬಾವುಟ ಪ್ರದರ್ಶನ – ಟಿಎಂಸಿ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

    Live Tv
    [brid partner=56869869 player=32851 video=960834 autoplay=true]

  • ಜೈಪುರ ಕ್ಯಾಸಿನೊ ಪ್ರಕರಣ- ಕೋಲಾರದ CPI ಆಂಜಪ್ಪ ಅಮಾನತು

    ಜೈಪುರ ಕ್ಯಾಸಿನೊ ಪ್ರಕರಣ- ಕೋಲಾರದ CPI ಆಂಜಪ್ಪ ಅಮಾನತು

    ಕೋಲಾರ/ಜೈಪುರ: ಜೈಸಿಂಗ್‌ಪುರ ಖೋರ್ ಪ್ರದೇಶದಲ್ಲಿ ನಡೆದ ಜೂಟಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ CPI ಆಂಜಪ್ಪನನ್ನು ಅಮಾನತು ಮಾಡಲಾಗಿದೆ.

    ಆಂಜಪ್ಪನನ್ನು ಅಮಾನತು ಮಾಡಿರುವುದಾಗಿ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಆದೇಶಿಸಿದ್ದಾರೆ ಎಂದು ಕೋಲಾರದ ಎಸ್‌ಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 8 ತಿಂಗಳ ಗರ್ಭಿಣಿಯನ್ನು ಒದ್ದ ಟಿಎಂಸಿ ಶಾಸಕನ ಬೆಂಬಲಿಗರು

    ಜೈಪುರದ ಜೈಸಿಂಗ್‌ಪುರ ಖೋರ್ ಪ್ರದೇಶದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಅಕ್ರಮ ಜೂಜಾಟದಲ್ಲಿ ತೊಡಗಿದ್ದ 13 ಮಹಿಳೆಯರು ಸೇರಿದಂತೆ 84 ಮಂದಿಯನ್ನು ನಿನ್ನೆ ಬಂಧಿಸಲಾಗಿದೆ. ಇದರಲ್ಲಿ ಕೋಲಾರದ CPI ಆಂಜಪ್ಪ, ಬೆಂಗಳೂರು ಗ್ರಾಮಾಂತರ ಸಬ್ ರಿಜಿಸ್ಟರ್ ಶ್ರೀನಾಥ್, ತೆರಹಳ್ಳಿ ಸರ್ಕಾರಿ ಶಾಲೆ ಶಿಕ್ಷಕ ಕೆ.ಎನ್.ರಮೇಶ್, ಬಿಜೆಪಿ ಮುಖಂಡ ರಾಜೇಶ್ ಹಾಗೂ ವ್ಯಾಪಾರಿ ಸುಧಾಕರ್ ಸೇರಿ ಕರ್ನಾಟಕದ 7 ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: `ಜೈಲರ್’ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್: ಹೇಗಿರಲಿದೆ ಶಿವಣ್ಣನ ಲುಕ್?

    ಜೈಪುರ ಪೊಲೀಸರ ತಂಡ ಶನಿವಾರ ರಾತ್ರಿ ಆರೋಪಿಗಳು ಜೂಜಾಡುತ್ತಿದ್ದ ಸಾಯಿಪುರ ಬಾಗ್ ರೆಸಾರ್ಟ್ ಮೇಲೆ ದಾಳಿ ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ. 9 ಹುಕ್ಕಾ, ಐಎಂಎಫ್‌ಎಲ್‌ನ 44 ಬಾಟಲಿಗಳು, 66 ಬಿಯರ್ ಬಾಟಲಿಗಳು, 14 ಐಷಾರಾಮಿ ಕಾರುಗಳು, ಒಂದು ಟ್ರಕ್ ಮತ್ತು 23.78 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜೈಪುರ ಪೊಲೀಸ್ ಹೆಚ್ಚುವರಿ ಆಯುಕ್ತ ಅಜಯ್‌ಪಾಲ್ ಲಂಬಾ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

    ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

    ಜೈಪುರ: ಮದ್ಯದ ಅಮಲಿನಲ್ಲಿ ಜೈಪುರದ ರೆಸ್ಟೋರೆಂಟ್‍ನಲ್ಲಿ ರಂಪಾಟ ನಡೆಸಿದ ಗಗನಸಖಿ ಹಾಗೂ ಆಕೆಯ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

    ಬುಧವಾರ ಪ್ರಾಚಿ ಸಿಂಗ್ ಮತ್ತು ಆಕೆಯ ಸ್ನೇಹಿತರು ರೆಸ್ಟೋರೆಂಟ್‍ನಲ್ಲಿ ಕುಟುಂಬಸ್ಥರೊಂದಿಗೆ ಜಗಳವಾಡಿದ್ದಾರೆ. ನಂತರ ರೆಸ್ಟೋರೆಂಟ್‍ನಿಂದ ಹೊರಬಂದು, ಬಿಯರ್ ಬಾಟಲಿಯಿಂದ ಕುಟುಂಬಸ್ಥರ ಕಾರಿನ ಗಾಜನ್ನು ಒಡೆದು ಹಾಕಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಿಜೆಪಿ, ಆರ್‌ಎಸ್‍ಎಸ್‍ನ ಯಾವುದೇ ಪಾತ್ರವಿಲ್ಲ: ಸತೀಶ್ ಜಾರಕಿಹೊಳಿ

    ಈ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದು, ಇದೀಗ ಪ್ರಾಚಿ ಸಿಂಗ್ ಮತ್ತು ಅವರ ಪತಿ ಕಾರ್ತಿಕ್ ಚೌಧರಿ, ವಿಕಾಸ್ ಖಂಡೇಲ್ವಾಲ್ ಮತ್ತು ನೇಹಾ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆದರೆ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶಾಂತಿ ಭಂಗದ ಆರೋಪದಡಿ ಎದುರಿನ ಗುಂಪಿನ ವಿಶಾಲ್ ದುಬೆ ಮತ್ತು ಆರ್ಯ ಎಂಬವರನ್ನು ಕೂಡ ಪೊಲೀಸರು ಬಂಧಿಸಿದ್ದರು. ಆದರೆ ಅವರು ಸಹ ಜಾಮೀನಿನ ಆಧಾರದ ಮೇಲೆ ಹೊರಗಿದ್ದಾರೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀ ಕಡೆಯಿಂದ ಮೇಕಪ್ ಮಾಡಿಸಿಕೊಂಡ ಆರ್ಯವರ್ಧನ್ ಗುರೂಜಿ

    Live Tv
    [brid partner=56869869 player=32851 video=960834 autoplay=true]

  • ದೇಗುಲದ ಅರ್ಚಕರ ತಲೆ ಕಡಿಯೋದಾಗಿ ಬೆದರಿಕೆ ಪತ್ರ – ಉದಯಪುರ ಮತ್ತೆ ಉದ್ವಿಗ್ನ

    ದೇಗುಲದ ಅರ್ಚಕರ ತಲೆ ಕಡಿಯೋದಾಗಿ ಬೆದರಿಕೆ ಪತ್ರ – ಉದಯಪುರ ಮತ್ತೆ ಉದ್ವಿಗ್ನ

    ಜೈಪುರ್: 10 ದಿನಗಳಲ್ಲಿ ದೇವಸ್ಥಾನ ಖಾಲಿ ಮಾಡದಿದ್ದರೆ ತಲೆ ಕಡಿಯಲಾಗುವುದು ಎಂದು ರಾಜಾಸ್ಥಾನದ ಭರತಪುರ್ ಜಿಲ್ಲೆಯ ಎಂಎಸ್‌ಜೆ ಕಾಲೇಜಿನಲ್ಲಿರುವ ದೇವಸ್ಥಾನದ ಅರ್ಚಕರಿಗೆ ಬೆದರಿಕೆ ಪತ್ರವೊಂದು ರವಾನೆಯಾಗಿದೆ.

    ಅರ್ಚಕರಿಗೆ ಸಾರ್ವಜನಿಕವಾಗಿ ಬೆದರಿಕೆ ನೀಡಿದ್ದನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸಿದೆ. ಈಗಾಗಲೇ ಉದಯಪುರ್‌ದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಬಳಿಕ ಮತ್ತೊಂದು ಬೆದರಿಕೆ ಪತ್ರ ರವಾನೆಯಾಗಿದೆ ಇಂತಹ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಅರ್ಚಕರಿಗೆ ಬಿಗಿ ಭದ್ರತೆ ನೀಡಬೇಕೆಂದು ಒತ್ತಾಯಿಸಲಾಗಿದೆ.

    Udaipur

    ಹಿಂದಿನ ಅರ್ಚಕರ ಮೇಲೆಯೇ ಅನುಮಾನ: ಈ ದೇವಸ್ಥಾನಲ್ಲಿ ಮೊದಲಿದ್ದ ಅರ್ಚಕರು ಹಾಗೂ ಈಗಿನ ಅರ್ಚಕರ ನಡುವೆ ಮನಸ್ತಾಪಗಳಿದ್ದು, ಮೊದಲಿನ ಅರ್ಚಕರೇ ಬೆದರಿಕೆ ಪತ್ರ ರವಾನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಕನ್ಹಯ್ಯ ಲಾಲ್ ಹತ್ಯೆ: ಕೆಲ ದಿನಗಳ ಹಿಂದೆ ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರನ್ನು ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದ ಕಾರಣಕ್ಕಾಗಿಯೇ ಉದಯ್‌ಪುರದಲ್ಲಿ ಕನ್ಹಯ್ಯ ಲಾಲ್ ಶಿರಚ್ಛೇದ ಮಾಡಲಾಗಿತ್ತು. ಇದಕ್ಕೂ ಮುನ್ನ ಆತನಿಗೆ ಅನೇಕ ಬೆದರಿಕೆ ಕರೆಗಳೂ ಬಂದಿದೆ ಎಂಬುದು ತನಿಖೆ ವೇಳೆ ಬಯಲಾಗಿತ್ತು.

    ಕನ್ಹಯ್ಯಲಾಲ್‌ಗೆ ರಕ್ಷಣೆ ನೀಡದ ಪೊಲೀಸರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದರು. ಹತ್ಯೆ ಬಳಿಕ ವೀಡಿಯೋ ಮಾಡಿ ಹರಿಬಿಟ್ಟ ಮುಸ್ಲಿಂ ಯುವಕರು, ಪ್ರಧಾನಿ ಮೋದಿ ಹಾಗೂ ಹಿಂದೂ ಸಮುದಾಯಕ್ಕೂ ಎಚ್ಚರಿಕೆ ನೀಡಿದ್ದರು. ಈ ಹತ್ಯೆ ಉದಯಪುರದಲ್ಲಿ ಉದ್ವಿಗ್ನ ವತಾವರಣ ಸೃಷ್ಟಿಸಿತ್ತು. ಅಲ್ಲದೆ ಇಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

    ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

    ಜೈಪುರ: ಕೊನೆ ಕ್ಷಣದಲ್ಲಿ ಬಿಜೆಪಿ ತನ್ನ ಶಾಸಕರನ್ನು ಸೆಳೆಯಬಹುದು ಎಂಬ ಭೀತಿಯಿಂದ ರಾಜಸ್ಥಾನ ಸರ್ಕಾರ ಜೈಪುರ ಜಿಲ್ಲೆಯ ಅಮೇರ್ ಪ್ರದೇಶದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

    ಉದಯಪುರದಿಂದ ಹಿಂದಿರುಗಿದ ನಂತರ ಕೆಲ ಕಾಂಗ್ರೆಸ್ ಶಾಸಕರು ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಜೈಪುರದ ಅಮೇರ್ ಪ್ರದೇಶದಲ್ಲಿ ತಂಗಿದ್ದಾರೆ. ಹೀಗಾಗಿ ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

    ಶುಕ್ರವಾರ ಸಂಸತ್ತಿನ ಮೇಲ್ಮನೆಗೆ ಮತದಾನ ನಡೆಯಲಿದೆ. ಹೀಗಾಗಿ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಅಮೇರ್ ಪ್ರದೇಶದ ಹೋಟೆಲ್ ಲೀಲಾಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಧ್ವನಿ ಕರೆಗಳು ಮತ್ತು ಬ್ರಾಡ್‍ಬ್ಯಾಂಡ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

    ಶುಕ್ರವಾರ ನಡೆಯಲಿರುವ ರಾಜ್ಯಸಭಾ ಚುನಾವಣೆ ಮತದಾನಕ್ಕೂ ಮುನ್ನ ರಾಜಸ್ಥಾನದ ಕಾಂಗ್ರೆಸ್ ಶಾಸಕರನ್ನು ಉದಯಪುರದಿಂದ ಜೈಪುರಕ್ಕೆ ಸ್ಥಳಾಂತರಿಸಲಾಯಿತು ಮತ್ತು ಸಂಸತ್ತಿನ ಮೇಲ್ಮನೆಯಲ್ಲಿ ಮೂರು ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ಸರ್ಕಸ್ ನಡೆಸುತ್ತಿದೆ.

    ಬಲಾಬಲ ಹೇಗಿದೆ?
    ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಶಾಸಕರ ಬಲವನ್ನು ಹೊಂದಿದ್ದು ನಾಲ್ಕು ಸ್ಥಾನಗಳ ಪೈಕಿ ಎರಡನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅಭ್ಯರ್ಥಿ ಗೆಲ್ಲಲು 41 ಮತಗಳ ಅಗತ್ಯವಿದ್ದು 26 ಹೆಚ್ಚುವರಿ ಮತಗಳಿದ್ದು 3ನೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು 15 ಮತಗಳ ಕೊರತೆಯಿದೆ. ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಬಿಎಸ್‍ವೈ ಆಪ್ತ ಎದುರೇ ಕಲ್ಲುತೂರಾಟ

    ಬಿಜೆಪಿ 71 ಶಾಸಕರ ಬಲವನ್ನು ಹೊಂದಿದ್ದು 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ನಂತರ 30 ಹೆಚ್ಚುವರಿ ಮತಗಳಿವೆ. ಹೀಗಾಗಿ ಅಡ್ಡ ಮತದಾನ ಭೀತಿ ಕಾಂಗ್ರೆಸ್ಸಿಗಿದೆ. 13 ಪಕ್ಷೇತರ ಶಾಸಕರ ಪೈಕಿ 10 ಮಂದಿ ಜೊತೆ ಸಿಎಂ ಗೆಹ್ಲೋಟ್ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

  • ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ದುರ್ಮರಣ

    ಮದುವೆಗೆ ಹೋಗುತ್ತಿದ್ದವರು ಮಸಣಕ್ಕೆ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 8 ಮಂದಿ ದುರ್ಮರಣ

    ಜೈಪುರ: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಟ್ರಕ್ ಮತ್ತು ಎಸ್‍ಯುವಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಂಭೀರವಾಗಿ ಗಾಯವಾಗಿದೆ.

    ಗುಡಾ ಮಲಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಮೆಗಾ ಹೈವೇ ಬಳಿ ಈ ಘಟನೆ ನಡೆದಿದೆ. ಒಟ್ಟು ಒಂಬತ್ತು ಜನರು ಎಸ್‍ಯುವಿ ಕಾರಿನಲ್ಲಿ ಜಲೋರ್ ಜಿಲ್ಲೆಯ ಸೇಡಿಯಾದಿಂದ ಗುಡಾ ಮಲಾನಿಯ ಕಂಧಿ ಕಿ ಧನಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿಬಂದ ಟ್ರಕ್ ಎಸ್‍ಯುವಿಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಹೊಸ ತಕರಾರು 

    ಡಿಕ್ಕಿ ಹೊಡೆದ ರಭಸಕ್ಕೆ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಎಸ್‍ಯುವಿ ಒಂದು ಭಾಗ ಸಂಪೂರ್ಣವಾಗಿ ನಾಶವಾಗಿದೆ. ವಾಹನದಿಂದ ದೇಹಗಳನ್ನು ಹೊರತೆಗೆಯಲು ಸುಮಾರು ಎರಡು ಗಂಟೆ ಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತರನ್ನು ಪುನ್ಮಾ ರಾಮ್(45), ಪ್ರಕಾಶ್ ಬಿಷ್ಣೋಯ್(28), ಮನೀಶ್ ಬಿಷ್ಣೋಯ್(12), ಪ್ರಿನ್ಸ್ ಬಿಷ್ಣೋಯ್(5), ಭಾಗೀರಥ್ ರಾಮ್(38), ಪುನ್ಮಾ ರಾಮ್(48), ಮಂಗಿಲಾಲ್ ಬಿಷ್ಣೋಯ್(38) ಮತ್ತು ಬುಧರಾಮ್ ಬಿಷ್ಣೋಯ್(38) ಎಂದು ಗುರುತಿಸಲಾಗಿದೆ.

    Rajasthan: A fierce collision between the car and truck of the wedding processions in Barmer, 8 people of the same family died

    ಪ್ರತ್ಯಕ್ಷದರ್ಶಿ ಭೋಮಾ ರಾಮ್ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದು, ನನಗೆ ಘಟನೆ ನಡೆದ ಸ್ಥಳದಿಂದ ದೊಡ್ಡ ಶಬ್ದ ಕೇಳಿಸಿತು. ತಕ್ಷಣ ನಾನು ಸ್ಥಳಕ್ಕೆ ಧಾವಿಸಿ ನೋಡಿದಾಗ ವಾಹನದಲ್ಲಿದ್ದವರು ಸಹಾಯಕ್ಕಾಗಿ ಕಿರುಚುತ್ತಿದ್ದರು. ಟ್ರಕ್‍ನ ಚಾಲಕ ಗಾಯಗೊಂಡಿದ್ದ. ನಾನು ಮತ್ತು ಸ್ಥಳೀಯರು ಪೊಲೀಸರಿಗೆ ತಿಳಿಸಿ ದೇಹಗಳನ್ನು ಹೊರತೆಗೆದೆವು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: RSS ಚಡ್ಡಿ ಬಗ್ಗೆ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ 

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.