Tag: Jaipur

  • ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ

    ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ

    – ಅಂದು ಮೋದಿ ಅಭಿಮಾನಿ, ಇಂದು ಎದುರಾಳಿಯಾಗಿದ್ದೇಕೇ?

    ಜೈಪುರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಹಾಸ್ಯನಟ ಶ್ಯಾಮ್ ರಂಗೀಲಾ (Shyam Rangeela) ಘೋಷಿಸಿದ್ದಾರೆ.

    ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ವಾರಣಾಸಿಯಿಂದ (Varanasi) ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದೇನೆ. ನಿಮ್ಮಲ್ಲರಿಂದ ನನಗೆ ಸಿಗುತ್ತಿರುವ ಪ್ರೀತಿ, ಬೆಂಬಲದಿಂದ ನಾನು ಉತ್ಸುಕನಾಗಿದ್ದೇನೆ. ನಾಮಪತ್ರ ಸಲ್ಲಿಕೆ ಹಾಗೂ ಮುಂದಿನ ಮಾಹಿತಿಗಳ ಬಗ್ಗೆ ವೀಡಿಯೋ ಸಂದೇಶಗಳ ಮೂಲಕ ನಿಮಗೆ ತಿಳಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತವರಲ್ಲಿ ಚೆನ್ನೈಗೆ ಹೀನಾಯ ಸೋಲು – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ಅಂದು ಅಭಿಮಾನಿ – ಇಂದು ಎದುರಾಳಿ:
    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2014ರಲ್ಲಿ ನಾನು ಮೋದಿ ಅಭಿಮಾನಿಯಾಗಿದ್ದೆ. ಪ್ರಧಾನಿಗಳನ್ನು ಬೆಂಬಲಿಸುವ ಹಲವು ವೀಡಿಯೋಗಳನ್ನು ಶೇರ್‌ ಮಾಡಿದ್ದೆ. ರಾಹುಲ್‌ ಗಾಂಧಿ (Rahul Gandhi), ಅರವಿಂದ್‌ ಕೇಜ್ರಿವಾಲ್‌ ಅವರಿಗೆ ವಿರುದ್ಧವಾದ ವೀಡಿಯೋಗಳನ್ನು ಶೇರ್‌ ಮಾಡಿದ್ದೆ. ನಾನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಲ್ಲ ಎಂದು ಶಪಥ ಮಾಡಿದ್ದೆ. ಆದ್ರೆ ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಆದ್ದರಿಂದಲೇ ನಾನು ಈ ಬಾರಿ ವಾರಣಾಸಿಯಿಂದ ಪ್ರಧಾನಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಇದೇ ವಾರ ನಾನು ನಾಮಪತ್ರ ಸಲ್ಲಿಸುತ್ತೇನೆ, ನನ್ನ ನಾಮಪತ್ರ ಸಲ್ಲಿಕೆಯು ವಿಭಿನ್ನವಾಗಿ ಇರಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

  • ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

    ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

    ಜೈಪುರ್: ಉದ್ಯೋಗ ಕೊಡಿಸುವ ನೆಪದಲ್ಲಿ ಸುಮಾರು 20 ಮಹಿಳೆಯರನ್ನು ವಂಚಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    ರಾಜಸ್ಥಾನದ (Rajastan) ಸಿರೋಹಿ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷ ಮಹೇಂದ್ರ ಮೇವಾಡ ಮತ್ತು ಮಾಜಿ ಪುರಸಭೆಯ ಆಯುಕ್ತ ಮಹೇಂದ್ರ ಚೌಧರಿ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆರೋಪಿಗಳು ಸುಮಾರು 20 ಕ್ಕೂ ಹೆಚ್ಚು ಮಹಿಳೆಯರಿಗೆ ಅಂಗನವಾಡಿ (Aganvadi) ಕೇಂದ್ರಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈತ್ರಿ ಧರ್ಮ ಪಾಲಿಸಿ: ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ

    ದೂರುದಾರರ ಪ್ರಕಾರ, ಸಂತ್ರಸ್ತೆ ಇತರ ಮಹಿಳೆಯರೊಂದಿಗೆ ಅಂಗನವಾಡಿಯಲ್ಲಿ ಕೆಲಸಕ್ಕಾಗಿ ಕೆಲವು ತಿಂಗಳ ಹಿಂದೆ ಸಿರೋಹಿಗೆ ಪ್ರಯಾಣಿಸಿದ್ದರು. ಸಂತ್ರಸ್ತೆಗೆ, ಆರೋಪಿಗಳು ವಸತಿ ಮತ್ತು ಊಟದ ಸೌಕರ್ಯವನ್ನು ಒದಗಿಸಿದ್ದಾರೆ. ಆದರೆ ಆರೋಪಿಗಳು ನೀಡಿದ ಊಟದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟಿದ್ದು, ಅದನ್ನು ಸೇವಿಸಿದ ನಂತರ ಮಹಿಳೆ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಆರೋಪಿಗಳು ಆಕೆಯ ಮೇಲೆ ಆತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ: ಪ್ರಧಾನಿ ಮೋದಿ

    ಸಂಸ್ರಸ್ತೆಗೆ ಪ್ರಜ್ಞೆ ಬಂದ ನಂತರ ಆರೋಪಿಗಳನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಮಹಿಳೆಯರ ಮೇಲೆ ಆತ್ಯಾಚಾರವೆಸಗಿ ಅದನ್ನು ವೀಡಿಯೋ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿ ಸಂತ್ರಸ್ತೆಯರಿಂದ ತಲಾ 5 ಲಕ್ಷ ರೂ. ನೀಡುವಂತೆ ಹೇಳಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ನಾಳೆ ಅರವಿಂದ್‌ ಕೇಜ್ರಿವಾಲ್‌ ಭೇಟಿ

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸುಳ್ಳು ದೂರುಗಳನ್ನು ಮಹಿಳೆಯರು ದಾಖಲಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಪರಾಸ್ ಚೌಧರಿ ಹೇಳಿದ್ದರು. ಇದೀಗ ಎಂಟು ಮಹಿಳೆಯರ ಅರ್ಜಿಯ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ:  ನನಗೆ ನಾನೇ ಹೈಕಮಾಂಡ್: ಕೆ.ಎನ್ ರಾಜಣ್ಣ

  • ರಾಮಮಂದಿರ ಉದ್ಘಾಟನೆಯಂದು ಪಿಂಕ್‌ ಸಿಟಿ ಜೈಪುರದಲ್ಲಿ ಮಾಂಸ, ಮದ್ಯದಂಗಡಿ ಬಂದ್‌

    ರಾಮಮಂದಿರ ಉದ್ಘಾಟನೆಯಂದು ಪಿಂಕ್‌ ಸಿಟಿ ಜೈಪುರದಲ್ಲಿ ಮಾಂಸ, ಮದ್ಯದಂಗಡಿ ಬಂದ್‌

    ಅಯೋಧ್ಯೆ (ಉತ್ತರ ಪ್ರದೇಶ): ರಾಮಮಂದಿರ (Ram Mandir) ಉದ್ಘಾಟನೆ ದಿನವಾದ ಜ.22 ರಂದು ಪಿಂಕ್‌ ಸಿಟಿ ಜೈಪುರದಲ್ಲಿ (Jaipur) ಎಲ್ಲಾ ಮಾಂಸ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚುವ ನಿರ್ಧಾರವನ್ನು ಮುನ್ಸಿಪಲ್‌ ಕಾರ್ಪೊರೇಷನ್‌ ತೆಗೆದುಕೊಂಡಿದೆ.

    ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆಗೆ ಇಡೀ ದೇಶದಲ್ಲಿ ಸಂತಸದ ವಾತಾವರಣವಿದೆ. ಅದೇ ಸಮಯದಲ್ಲಿ ಜೈಪುರ ಹೆರಿಟೇಜ್ ಮುನ್ಸಿಪಲ್ ಕಾರ್ಪೊರೇಷನ್ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಪಿಂಕ್ ಸಿಟಿ ಜೈಪುರದಲ್ಲಿ ಎಲ್ಲಾ ಮಾಂಸ ಮತ್ತು ಮದ್ಯದ ಅಂಗಡಿಗಳು ಜನವರಿ 22 ರಂದು ಬಂದ್‌ ಆಗಲಿವೆ. ಇದನ್ನೂ ಓದಿ: ಶ್ರೀರಾಮ ಮಾಂಸಾಹಾರಿಯಾಗಿದ್ದ.. ಬೇಟೆಯಾಡಿ ತಿನ್ನುವ ರಾಮ ನಮ್ಮವ: ಎನ್‌ಸಿಪಿ ನಾಯಕ ವಿವಾದಾತ್ಮಕ ಹೇಳಿಕೆ

    ಸಿವಿಲ್ ಲೈನ್ಸ್ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ್ ಶರ್ಮಾ ಅವರು ಮೇಯರ್ ಮುನೇಶ್ ಗುರ್ಜಾರ್ ಅವರಿಗೆ ಈ ನಿರ್ಧಾರ ಕೈಗೊಳ್ಳಲು ಮನವಿ ಮಾಡಿದ್ದರು. ಇದೇ ವೇಳೆ ಮೇಯರ್ ಅನುಮೋದನೆ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಜ.22 ರಂದು ಜೈಪುರದಲ್ಲಿ ಮಹಾದೀಪೋತ್ಸವ
    ಜನವರಿ 22 ರಂದು ಜೈಪುರದಲ್ಲಿ ಮಹಾದೀಪೋತ್ಸವ ಆಯೋಜಿಸಲಾಗಿದೆ. ಶಾಸಕ ಬಲ್ಮುಕುಂದಾಚಾರ್ಯ ಬಳಿಕ ಇದೀಗ ಮತ್ತೊಬ್ಬ ಶಾಸಕ ಜೈಪುರದಲ್ಲಿ ಅಕ್ರಮ ಮಾಂಸದ ಅಂಗಡಿಗಳು ನಡೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುಧವಾರ ಜೈಪುರದ ಮುನ್ಸಿಪಲ್ ಕಾರ್ಪೊರೇಷನ್ ಹೆರಿಟೇಜ್‌ನಲ್ಲಿ ನಡೆದ ಸಭೆಯಲ್ಲಿ ಸಿವಿಲ್ ಲೈನ್ಸ್ ಶಾಸಕ ಗೋಪಾಲ್ ಶರ್ಮಾ ಅವರು, ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮಮಂದಿರ ಉದ್ಘಾಟನೆ ದಿನದಲ್ಲಿ ಜೈಪುರದಲ್ಲಿ ಮಹಾದೀಪೋತ್ಸವ ಆಚರಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಬಾಂಬ್ ಬೆದರಿಕೆ – ಇಬ್ಬರ ಬಂಧನ

    ಮದ್ಯ, ಮಾಂಸದ ಅಂಗಡಿ ಬಂದ್‌
    ಜೈಪುರದಲ್ಲಿ ಮಹಾದೀಪೋತ್ಸವಕ್ಕಾಗಿ ಧಾರ್ಮಿಕ ಸ್ಥಳಗಳನ್ನು ರಂಗೋಲಿ, ದೀಪಗಳಿಂದ ಅಲಂಕಾರ ಮಾಡಲಾಗುವುದು. ಈ ದಿನ ಕಮಿಷನರ್ ಹಾಗೂ ಇತರೆ ಅಧಿಕಾರಿಗಳು ಧಾರ್ಮಿಕ ಸ್ಥಳಗಳಲ್ಲಿ ಆರತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಈ ದಿನ ಜೈಪುರದಲ್ಲಿ ಮದ್ಯ ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚಲಾಗುವುದು. ಮೇಯರ್ ಮುನೇಶ್ ಗುರ್ಜರ್, ಜ.22 ರಂದು ಎಲ್ಲಾ ಧಾರ್ಮಿಕ ಸ್ಥಳಗಳು, ದೇವಾಲಯಗಳು ಮತ್ತು ಗುರುದ್ವಾರಗಳಲ್ಲಿ ಮಹಾದೀಪೋತ್ಸವ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

  • ಇಂಡಿಯಾ- ಪಾಕ್ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು-  ಉತ್ತರ ಪತ್ರಿಕೆ ಫುಲ್ ವೈರಲ್

    ಇಂಡಿಯಾ- ಪಾಕ್ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು- ಉತ್ತರ ಪತ್ರಿಕೆ ಫುಲ್ ವೈರಲ್

    ಜೈಪುರ: ಕೆಲ ತಿಂಗಳ ಹಿಂದೆ ಸೀಮಾ ಹೈದರ್ (Seema Haider) ಎನ್ನುವ ಹೆಸರು ಭಾರೀ ಸುದ್ದಿಯಲ್ಲಿತ್ತು. ತನ್ನ ಪ್ರೇಮಿ ಸಚಿನ್‍ಗಾಗಿ ಪಾಕಿಸ್ತಾನದಿಂದ (Pakistan) ಭಾರತಕ್ಕೆ ಬಂದಿರುವ ಸೀಮಾ ಹೈದರ್ ಸಾಕಷ್ಟು ಗಮನ ಸೆಳೆದಿದ್ದಳು. ಆದರೆ ಈ ಬಾರಿ ಅವರಿಬ್ಬರ ಪ್ರಕರಣ ಅಲ್ಲ ಬದಲಾಗಿ ಸೆಕೆಂಡ್ ಪಿಯುಸಿಯ ಪ್ರಶ್ನೆ ಪತ್ರಿಕೆಯಿಂದಾಗಿ ಸುದ್ದಿಯಾಗಿದ್ದಾಳೆ.

    ಹೌದು. 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ಬರೆದಿರುವ ಕುತೂಹಲಕಾರಿ ವಿಚಾರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ರಾಜಸ್ಥಾನದ (Rajasthan) ಧೋಲ್ಪುರ್ ಜಿಲ್ಲೆಯ ಬಸೇರಿಯಲ್ಲಿರುವ ಬಗ್ತಾರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಉತ್ತರ ಪತ್ರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    ಪ್ರಶ್ನೆ- ಉತ್ತರ ಏನು..?: ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಮತ್ತು ಅದರ ಉದ್ದದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ವಿದ್ಯಾರ್ಥಿ ನೀಡಿರುವ ಉತ್ತರ ಎಲ್ಲರ ಗಮನಸೆಳೆದಿದೆ. ಅಲ್ಲದೆ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ನೋಡಿದ ಶಿಕ್ಷಕರೇ ಒಂದು ಬಾರಿ ದಂಗಾಗಿ ಹೋಗಿದ್ದಾರಂತೆ. ಭಾರತ ಮತ್ತು ಪಾಕಿಸ್ತಾನದ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು ಎಂದು ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಸದ್ಯ ಈ ಉತ್ತರ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೆಂಡಿಂಗ್ ಆಗಿದೆ.

    ಪಾಕಿಸ್ತಾನಿ ಪ್ರಜೆಯಾಗಿರುವ ಸೀಮಾ ಹೈದರ್ ಕಳೆದ ತಿಂಗಳಷ್ಟೇ ಭಾರತೀಯ ಪತಿ ಸಚಿನ್ ಜೊತೆ ತನ್ನ ಮೊದಲ ‘ಕರ್ವಾ ಚೌತ್’ ಅನ್ನು ಆಚರಿಸಿ ಸುದ್ದಿಯಲ್ಲಿದ್ದಳು. ಈ ಹಿಂದೆ ಸೀಮಾ ಅವರು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದ ಧ್ವಜಾರೋಹಣ ಮಾಡಿ ಸುದ್ದಿ ಮಾಡಿದ್ದಳು.

    ಪಾಕಿಸ್ತಾನದ ಸಿಂಧ್ ಪ್ರ್ಯಾಂತದ ನಿವಾಸಿಯಾಗಿರುವ ಸೀಮಾ ಹೈದರ್ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ತಾನು ತನ್ನ ಧರ್ಮವನ್ನು ಪರಿವರ್ತಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸದ್ಯ ಈಕೆ ಸನಾತನ ಧರ್ಮವನ್ನು ಅನುಸರಿಸುತ್ತಿದ್ದಾಳೆ. ಅಲ್ಲದೇ ಈಕೆ ತನ್ನ ಮಕ್ಕಳ ಹೆಸರನ್ನೂ ಬದಲಾಯಿಸಿದ್ದಾಳೆ. ಪಾಕಿಸ್ತಾನಿ ಪ್ರಜೆ ತನ್ನ ಗೆಳೆಯ ಸಚಿನ್ ಮೀನಾ ಜೊತೆ ಗ್ರೇಟರ್ ನೋಯ್ಡಾದಲ್ಲಿ ಇರಲು ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದ ನಂತರ ಸುದ್ದಿ ಮಾಡಿದಳು.

  • ಚಲಿಸುತ್ತಿದ್ದ ಬಸ್ಸಿನಲ್ಲೇ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

    ಲಕ್ನೋ: ಉತ್ತರ ಪ್ರದೇಶದಿಂದ (Uttar Pradesh) ಜೈಪುರಕ್ಕೆ (Jaipur) ಬರುತ್ತಿದ್ದ ಬಸ್ಸಿನಲ್ಲಿ 20 ವರ್ಷದ ದಲಿತ ಯುವತಿ (Dalit Girl) ಮೇಲೆ ಇಬ್ಬರು ಚಾಲಕರು ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಡಿಸೆಂಬರ್ 9ರ ಮಧ್ಯರಾತ್ರಿ ಖಾಸಗಿ ಬಸ್ ಉತ್ತರ ಪ್ರದೇಶದಿಂದ ಜೈಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾನ್ಪುರದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಸಂತ್ರಸ್ತೆ ಕ್ಯಾಬಿನ್‌ನಲ್ಲಿ ಕುಳಿತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್‌ನೊಳಗೆ ಆರಿಫ್ ಮತ್ತು ಲಲಿತ್ ಎಂದು ಗುರುತಿಸಲಾದ ಚಾಲಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೋರ್ಟ್‌ ಆವರಣದಲ್ಲೇ ಭೀಕರ ಗುಂಡಿನ ದಾಳಿ – ವಿಚಾರಣಾಧೀನ ಕೈದಿಯ ಹತ್ಯೆ, ಇಬ್ಬರು ಅರೆಸ್ಟ್‌

    ಆರೋಪಿಗಳ ಪೈಕಿ ಆರಿಫ್‌ನನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಕನೋಟಾ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಭಗವಾನ್ ಸಹಾಯ್ ಮೀನಾ ತಿಳಿಸಿದ್ದಾರೆ. ಘಟನೆಯ ಬಳಿಕ ಇನ್ನೋರ್ವ ಆರೋಪಿ ಲಲಿತ್ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಲಲಿತ್ ಝಾ 7 ದಿನ ಪೊಲೀಸ್ ಕಸ್ಟಡಿಗೆ

    ಸಂತ್ರಸ್ತೆ ಕ್ಯಾಬಿನ್‌ನಲ್ಲಿದ್ದಾಗ ಬಸ್‌ನೊಳಗೆ ಕೆಲವು ಪ್ರಯಾಣಿಕರಿದ್ದರು. ಆದರೆ ಕ್ಯಾಬಿನ್ ಅನ್ನು ಒಳಗಡೆಯಿಂದ ಲಾಕ್ ಮಾಡಲಾಗಿತ್ತು. ಈ ಘಟನೆ ಸಂಭವಿಸಿದ ಸಂದರ್ಭ ಯುವತಿ ಎಮರ್ಜೆನ್ಸಿ ಅಲಾರಾಂ ಒತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕರು ಬಸ್ ನಿಲ್ಲಿಸಿ ಆರಿಫ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಲಲಿತ್ ತಪ್ಪಿಸಿಕೊಂಡು ಹೋಗಿದ್ದಾನೆ ಎಂದು ಎಸ್‌ಹೆಚ್‌ಒ ಹೇಳಿದ್ದಾರೆ.  ಇದನ್ನೂ ಓದಿ: ಸೆಕ್ಸ್‌ಗೆ ನಿರಾಕರಿಸಿದ ಲಿವ್-ಇನ್-ಪಾರ್ಟ್ನರ್‌ನ ಕುತ್ತಿಗೆಗೆ ಕತ್ತರಿಯಿಂದ ಇರಿದ!

  • ರಾಜಸ್ಥಾನದಲ್ಲಿ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ – ಸಿಎಂ ಪಟ್ಟದ ಕುತೂಹಲಕ್ಕೆ ತೆರೆ ಸಾಧ್ಯತೆ

    ರಾಜಸ್ಥಾನದಲ್ಲಿ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ – ಸಿಎಂ ಪಟ್ಟದ ಕುತೂಹಲಕ್ಕೆ ತೆರೆ ಸಾಧ್ಯತೆ

    ಜೈಪುರ: ಛತ್ತೀಸ್‌ಗಢ (Chattisgarh) ಮತ್ತು ಮಧ್ಯಪ್ರದೇಶದ (Madhya Pradesh) ಬಳಿಕ ರಾಜಸ್ಥಾನದಲ್ಲಿ (Rajasthan) ಮುಖ್ಯಮಂತ್ರಿ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಕುತೂಹಲಕ್ಕೆ ಇಂದು ತೆರೆ ಬೀಳುವ ನಿರೀಕ್ಷೆಗಳಿದೆ.

    ರಾಜಸ್ಥಾನದಲ್ಲಿ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ (BJP) ಶಾಸಕರು ಇಂದು ಜೈಪುರದಲ್ಲಿ (Jaipur) ಸಭೆ ಸೇರಿ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಮಾಜಿ ಸಿಎಂ ವಸುಂಧರಾ ರಾಜೇ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅಶ್ವಿನಿ ವೈಷ್ಣವ್ ಮೊದಲಾದ ನಾಯಕರು ಸಿಎಂ ರೇಸ್‌ನಲ್ಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಅವರನ್ನು ಪಕ್ಷವು ವೀಕ್ಷಕರನ್ನಾಗಿ ನೇಮಿಸಿದೆ. ಇದನ್ನೂ ಓದಿ: ಹೊಸ ಟ್ರಕ್‌ಗಳಲ್ಲಿ ಚಾಲಕರಿಗೆ ಎಸಿ ಕ್ಯಾಬಿನ್‌ ಕಡ್ಡಾಯ – ಅಧಿಸೂಚನೆ ಪ್ರಕಟ

    ಇಂದು ವೀಕ್ಷಕರು ಜೈಪುರಕ್ಕೆ ತೆರಳಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯ ಕುರಿತು ಸೋಮವಾರ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಬಿಜೆಪಿಯ ಕೇಂದ್ರ ನಾಯಕತ್ವವು ಈ ಸಭೆಯಲ್ಲಿ ನೂತನ ಸಿಎಂ ಆಯ್ಕೆ ಮಾಡಲಿದೆ. ಊಟದ ಬಳಿಕ ಔಪಚಾರಿಕ ಸಭೆ ನಡೆಯಲಿದ್ದು, ಇದರಲ್ಲಿ ಶಾಸಕರು ಶಾಸಕಾಂಗ ಪಕ್ಷದ ನಾಯಕ ಅಥವಾ ನಿಯೋಜಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಈಗಾಗಲೇ ವಸುಂಧರ ರಾಜೇ ಸೇರಿದಂತೆ ಹಲವು ನಾಯಕರು ಹೈಕಮಾಂಡ್ ಭೇಟಿಯಾಗಿ ಲಾಬಿ ಮಾಡಿದ್ದಾರೆ. ಇದನ್ನೂ ಓದಿ: ಶಿವರಾಜ್‌ಸಿಂಗ್‌ ರಾಜ್ಯ ರಾಜಕೀಯ ಅಂತ್ಯ – ಲೋಕಸಭೆಗೆ ಸ್ಪರ್ಧೆ?

  • ಜೀವ ಬೆದರಿಕೆ ಇದ್ದರೂ ಗೆಹ್ಲೋಟ್, ಪೊಲೀಸರು ಭದ್ರತೆ ನೀಡಲಿಲ್ಲ: ಕರ್ಣಿ ಸೇನಾ ಮುಖ್ಯಸ್ಥನ ಪತ್ನಿ ಆರೋಪ

    ಜೀವ ಬೆದರಿಕೆ ಇದ್ದರೂ ಗೆಹ್ಲೋಟ್, ಪೊಲೀಸರು ಭದ್ರತೆ ನೀಡಲಿಲ್ಲ: ಕರ್ಣಿ ಸೇನಾ ಮುಖ್ಯಸ್ಥನ ಪತ್ನಿ ಆರೋಪ

    ಜೈಪುರ: ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಮತ್ತು ಪೊಲೀಸ್ ಮಹಾನಿರ್ದೇಶಕರು ಸುಖದೇವ್ ಸಿಂಗ್ ಗೊಗಮೇಡಿಗೆ (Sukhdev Singh Gogamedi) ಜೀವ ಬೆದರಿಕೆ ಇದ್ದರೂ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂದು ಸುಖದೇವ್ ಸಿಂಗ್ ಪತ್ನಿ ಆರೋಪಿಸಿದ್ದಾರೆ.

    ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಮಂಗಳವಾರ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಘಟನೆಯ ಸಿಸಿಟಿವಿ ವೀಡಿಯೋದಲ್ಲಿ ಬಂದೂಕುಧಾರಿಗಳು ಗೊಗಮೆಡಿಗೆ ಗುಂಡು ಹಾರಿಸಿ ನಂತರ ಸ್ಥಳದಿಂದ ಪರಾರಿಯಾಗುವುದನ್ನು ತೋರಿಸುತ್ತದೆ. ಈ ಕುರಿತು ಅವರ ಪತ್ನಿ ದೂರು ದಾಖಲಿಸಿದ್ದು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪೊಲೀಸ್ ಮಹಾನಿರ್ದೇಶಕರು ಗೋಗಮೆಡಿಗೆ ಜೀವ ಬೆದರಿಕೆಯ ನಡುವೆಯೂ ಭದ್ರತೆ ನೀಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: POK ನಮ್ಮದೇ, 24 ಅಸೆಂಬ್ಲಿ ಸೀಟ್‌ಗಳನ್ನು ಮೀಸಲಿಟ್ಟಿದ್ದೇವೆ: ಅಮಿತ್‌ ಶಾ

     

    ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಕೊಲ್ಲಲು ಯೋಜನೆ ರೂಪಿಸಲಾಗಿದೆ ಎಂದು ಮಾರ್ಚ್‌ನಲ್ಲಿ ರಾಜಸ್ಥಾನ ಡಿಜಿಪಿ ಉಮೇಶ್ ಮಿಶ್ರಾ ಅವರಿಗೆ ಪತ್ರವೊಂದನ್ನು ಕಳುಹಿಸಲಾಗಿತ್ತು ಎಂದು ಸುಖದೇವ್ ಸಿಂಗ್ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗೊಗಮೆಡಿಗೆ ಕೊಲೆ ಬೆದರಿಕೆಗಳ ಕುರಿತು ಮಾಹಿತಿ ನೀಡಿದರೂ ಗೆಹ್ಲೋಟ್ ಮತ್ತು ಮಿಶ್ರಾ ಅವರು ಕರ್ಣಿ ಸೇನಾ ಮುಖ್ಯಸ್ಥರಿಗೆ ಭದ್ರತೆಯನ್ನು ನೀಡಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವೈದ್ಯ

    ಘಟನೆಯ ಕುರಿತು ಪೊಲೀಸರು ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

    ಇಬ್ಬರು ಆರೋಪಿಗಳ ಗುರುತು ಪತ್ತೆ:
    ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಯ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ರೋಹಿತ್ ರಾಥೋಡ್ ಎಂದು ಗುರುತಿಸಲಾಗಿದೆ. ಈತ ಮಕ್ರಾನಾ ನಾಗೌರ್ ಮೂಲದವನಾಗಿದ್ದು, ಮತ್ತೊಬ್ಬನನ್ನು ಹರಿಯಾಣದ ಮಹೇಂದ್ರಗಾತ್ ಮೂಲದ ನಿತಿನ್ ಫೌಜಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ

    ಆರೋಪಿಗಳಾದ ನವೀನ್ ಶೇಖಾವತ್, ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಅವರು ಮದುವೆ ಕಾರ್ಡ್ ನೀಡುವ ನೆಪದಲ್ಲಿ ಕರ್ಣಿ ಸೇನಾ ಮುಖ್ಯಸ್ಥರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ವರದಿಯ ಪ್ರಕಾರ, ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರು ರೋಹಿತ್ ಗೋಡಾರಾ ಅವರ ಭೂ ವಿವಾದಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಜಮೀನು ವಿವಾವದವೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಗೆ ಕಾರಣವಾಯ್ತಾ?

  • ಜಮೀನು ವಿವಾವದವೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಗೆ ಕಾರಣವಾಯ್ತಾ?

    ಜಮೀನು ವಿವಾವದವೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಗೆ ಕಾರಣವಾಯ್ತಾ?

    – ಹತ್ಯೆಗೈದ ಇಬ್ಬರ ಗುರುತು ಪತ್ತೆ

    ಜೈಪುರ: ರಜಪೂತ್ ಕರ್ಣಿ ಸೇನಾ ಮುಖ್ಯಸ್ಥ ಸುಖ್ ದೇವ್ ಸಿಂಗ್ ಗೋಮೆದಿ (Karni Sena chief Sukhdev Singh Gogamedi) ಬರ್ಬರವಾಗಿ ಹತ್ಯೆಗೈದ ನಾಲ್ವರಲ್ಲಿ ಇಬ್ಬರ ಗುರುತು ಪತ್ತೆಯಾಗಿದೆ.

    ಆರೋಪಿಗಳನ್ನು ಮಕ್ರಾನಾ ನಾಗೌರ್ ಮೂಲದ ರೋಹಿತ್ ರಾಥೋಡ್ ಹಾಗೂ ಹರಿಯಾಣದ ಮಹೇಂದ್ರಗಾತ್ ಮೂಲದ ನಿತಿನ್ ಫೌಜಿ ಎಂದು ಗುರುತಿಸಲಾಗಿದೆ. ಆರೋಪಿಗಳಾದ ನವೀನ್ ಶೇಖಾವತ್, ರೋಹಿತ್ ರಾಥೋಡ್ ಮತ್ತು ನಿತಿನ್ ಫೌಜಿ ಈ ಮೂವರು ಮದುವೆ ಕಾರ್ಡ್ ನೀಡುವ ನೆಪದಲ್ಲಿ ಕರ್ಣಿ ಸೇನಾ ಮುಖ್ಯಸ್ಥರ ಮನೆಗೆ ತೆರಳಿ ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

    ಸುಖ್ ದೇವ್ ಸಿಂಗ್ ಹತ್ಯೆಗಾಗಿ ಆರೋಪಿ ನವೀನ್ ಮೂರು ದಿನಗಳ ಹಿಂದೆ ದಿನಕ್ಕೆ 5,000 ರೂ. ನಂತೆ ಎಸ್‍ಯುವಿ ಕಾರನ್ನು ಬಾಡಿಗೆಗೆ ತೆಗೆದುಕೊಂಡಿದ್ದ. ಆರೋಪಿಗಳು ಕಾರನ್ನು ಗೋಮೆದಿ ಅವರ ನಿವಾಸದಲ್ಲಿ ಬಿಟ್ಟು ಹೋಗಿದ್ದರು. ಕಾರಿನಲ್ಲಿ ಮದ್ಯದ ಬಾಟ್ಲಿಗಳು ಪತ್ತೆಯಾಗಿವೆ ಎಂದು ಮೂಲಗಳು ಖಚಿತಪಡಿಸಿವೆ. ಇದನ್ನೂ ಓದಿ: ರಜಪೂತ್‌ ಕರ್ಣಿ ಸೇನಾ ಮುಖ್ಯಸ್ಥನ ಹಣೆಗೆ ಗುಂಡಿಟ್ಟು ಹತ್ಯೆ – ರೊಚ್ಚಿಗೆದ್ದ ಬೆಂಬಲಿಗರಿಂದ ರಾಜಸ್ಥಾನ ಬಂದ್‌ಗೆ ಕರೆ

    ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಬ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ಸುಖದೇವ್ ಸಿಂಗ್ ಗೋಮೆದಿಯವರು ರೋಹಿತ್ ಗೋದಾರಾ ಅವರ ಭೂ ವಿವಾದಗಳಲ್ಲಿ ಭಾಗಿಯಾಗಿದ್ದರು.

    ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯನಾಗಿದ್ದು, ಕರ್ಣಿ ಸೇನಾ ಮುಖ್ಯಸ್ಥರ ಕೊಲೆಯ ನಂತರ ಹತ್ಯೆಯ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಇದಾಗ್ಯೂ ಪೊಲೀಸರು ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

    ಸುಖ್‍ದೇವ್ ಸಿಂಗ್ ಕೊಲೆ: ಮಂಗಳವಾರ ಹಾಡಹಗಲೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಯಾಗಿತ್ತು. ನಾಲ್ವರು ಏಕಾಏಕಿ ಮನೆಗೆ ನುಗ್ಗಿ ಸುಖ್ ದೇವ್ ಸಿಂಗ್ ಅವರನ್ನು ಶೂಟೌಟ್ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದರು. ಅಂತೆಯೇ ನಡೆದ ನಡೆದ ಸುತ್ತಮುತ್ತಲಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದರು. ಇತ್ತ ದುಷ್ಕರ್ಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗೋಮೆದಿಯವರ ಭದ್ರತಾ ಸಿಬ್ಬಂದಿಯೊಬ್ಬರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದರು.

  • ಗೆದ್ದ ಮರುದಿನವೇ ರಸ್ತೆಬದಿಯಲ್ಲಿನ ಮಾಂಸದಂಗಡಿಗಳ ತೆರವಿಗೆ ಬಿಜೆಪಿ ನೂತನ ಶಾಸಕ ಆದೇಶ

    ಗೆದ್ದ ಮರುದಿನವೇ ರಸ್ತೆಬದಿಯಲ್ಲಿನ ಮಾಂಸದಂಗಡಿಗಳ ತೆರವಿಗೆ ಬಿಜೆಪಿ ನೂತನ ಶಾಸಕ ಆದೇಶ

    ಜೈಪುರ: ಚುನಾವಣಾ ಫಲಿತಾಂಶದಲ್ಲಿ ಗೆದ್ದ ಮರುದಿನವೇ ಬಿಜೆಪಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಬಲ್ಮುಕುಂದ್ ಆಚಾರ್ಯ (Balmukundachary) ಅವರು ಅಧಿಕಾರಿಗಳಿಗೆ ಆದೇಶವೊಂದನ್ನು ಹೊರಡಿಸಿದ್ದಾರೆ.

    ರಾಜಧಾನಿ ಜೈಪುರದ ಹವಾಮಹಲ್‍ನಿಂದ ಚುನಾವಣೆಯಲ್ಲಿ (Hawa Mahal Assembly Election) ಗೆಲುವು ಕಾಣುತ್ತಿದ್ದಂತೆಯೇ ನೂತನ ಶಾಸಕರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆ ಪ್ರದೇಶದ ರಸ್ತೆಬದಿಯಲ್ಲಿ ಅನಧಿಕೃತವಾಗಿ ನಾನ್ ವೆಜ್ ಮಾರುವ ಗಾಡಿಗಳನ್ನು, ಅಂಗಡಿಗಳನ್ನು ತೆಗೆದುಹಾಕುವಂತೆ ಆದೇಶಿಸಿದ್ದಾರೆ. ಆಚಾರ್ಯ ಅವರ ಈ ಆದೇಶವು ಮಾಂಸ ಮಾರಾಟಗಾರರಲ್ಲಿ ತಲ್ಲಣ ಮೂಡಿಸಿದೆ.

    ಹವಾಮಹಲ್‍ನಿಂದ ವಿಧಾನಸಭೆಗೆ ಗೆಲುವು ಸಾಧಿಸಿದ ಬಳಿಕ ಬಲ್ಮುಕುಂದ್ ಆಚಾರ್ಯ ಇಂದು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡರು. ಈ ವೇಳೆ ಅವರ ಬೆಂಬಲಿಗರು ಹೂಮಾಲೆ ಹಾಕಿ ಸ್ವಾಗತಿಸಿದರು. ಪ್ರವಾಸದ ವೇಳೆ ಮಾಂಸಾಹಾರಿ ಗಾಡಿಗಳ ಬಗ್ಗೆ ಸ್ಥಳೀಯ ನಿವಾಸಿಗಳು ದೂರು ನೀಡಿದರು. ಈ ಹಿನ್ನೆಲೆಯಲ್ಲಿ ಶಾಸಕರು ಕೂಡಲೇ ಆಡಳಿತಾಧಿಕಾರಿಗಳನ್ನು ಕರೆಸಿ ಸಂಜೆ ವೇಳೆಗೆ ರಸ್ತೆ ಬದಿ ಹಾಕಿರುವ ಅನಧಿಕೃತ ಮಾಂಸಾಹಾರಿ ಗಾಡಿಗಳನ್ನು ತೆಗೆಯುವಂತೆ ಆದೇಶಿಸಿದರು. ಸಂಜೆಯ ವೇಳೆಗೆ ಒಂದೇ ಒಂದು ನಾನ್ ವೆಜ್ ಸ್ಟಾಲ್ ಕೂಡ ಇರಬಾರದು ಎಂದರು. ಅಲ್ಲದೆ ಈ ಸಂಪೂರ್ಣ ಪ್ರಕರಣದ ವರದಿಯನ್ನೂ ಶಾಸಕರು ಕೇಳಿದ್ದಾರೆ. ಇದನ್ನೂ ಓದಿ: 4 ರಾಜ್ಯಗಳ ವಿಚಿತ್ರ ಫಲಿತಾಂಶ ಜನರಿಗೆ ಆಘಾತವುಂಟು ಮಾಡಿದೆ: ಮಾಯಾವತಿ

    ಸದ್ಯ ನೂತನ ಶಾಸಕರ ಆದೇಶದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಬಲ್ಮುಕುಂದ್ ಆಚಾರ್ಯ ಅವರು ಮೊಬೈಲ್‍ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ನಾನ್ ವೆಜ್ ಅನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ ಎಂದು ಅವರು ಆಡಳಿತಾಧಿಕಾರಿಗಳನ್ನು ಕೇಳುತ್ತಿದ್ದಾರೆ. ಅಲ್ಲದೆ ರಸ್ತೆ ಬದಿಯಲ್ಲಿರುವ ನಾನ್ ವೆಜ್ ಮಾರಾಟ ಮಾಡುವ ಗಾಡಿಗಳನ್ನು ತೆಗೆಯುವಂತೆಯೂ ಆದೇಶಿಸಿದ್ದಾರೆ. ಸಂಜೆಯವರೆಗೂ ನಾನ್ ವೆಜ್ ಗಾಡಿಗಳು (Non Veg Vehicle) ರಸ್ತೆಯಲ್ಲಿ ಕಾಣಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಂಜೆ ವರದಿ ತರುತ್ತೇನೆ. ಈಗ ಇದೆಲ್ಲ ಹೇಗೆ ನಡೆಯುತ್ತದೆ ಎಂಬುದು ನಿಮ್ಮ ಜವಾಬ್ದಾರಿಯಾಗಿದೆ ಮತ್ತು ಯಾರು ಉಸ್ತುವಾರಿ ವಹಿಸುತ್ತಾರೆ ಎಂಬುದರ ಬಗ್ಗೆ ವರದಿ ನೀಡುವಂತೆ ನೂತನ ಶಾಸಕರು ಸೂಚನೆ ಕೊಟ್ಟಿದ್ದಾರೆ.

    ಈ ವೀಡಿಯೋವನ್ನು ಶೇರ್‌ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಸರ್ಕಾರ ರಚನೆಗೂ ಮುನ್ನವೇ ಶಾಸಕರು ತಮ್ಮ ಕೆಲಸ ಆರಂಭಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

  • ಟ್ರ್ಯಾಕ್ ಮೇಲೆ ಕಲ್ಲು, ರಾಡ್‌ಗಳನ್ನಿಟ್ಟ ಕಿಡಿಗೇಡಿಗಳು – ವಂದೇ ಭಾರತ್ ರೈಲು ತುರ್ತು ನಿಲುಗಡೆ

    ಟ್ರ್ಯಾಕ್ ಮೇಲೆ ಕಲ್ಲು, ರಾಡ್‌ಗಳನ್ನಿಟ್ಟ ಕಿಡಿಗೇಡಿಗಳು – ವಂದೇ ಭಾರತ್ ರೈಲು ತುರ್ತು ನಿಲುಗಡೆ

    ಜೈಪುರ: ರೈಲ್ವೆ ಹಳಿಯ (Railway Track) ಮೇಲೆ ದುಷ್ಕರ್ಮಿಗಳು ಕಲ್ಲು (Stones) ಹಾಗೂ ರಾಡ್‌ಗಳನ್ನಿಟ್ಟು (Rod) ಅಡಚಣೆಗೆ ಪ್ರಯತ್ನಿಸಿದ್ದು, ತಕ್ಷಣವೇ ಎಚ್ಚೆತ್ತುಕೊಂಡ ವಂದೇ ಭಾರತ್ ರೈಲಿನ (Vande Bharat Express Train) ಪೈಲಟ್‌ಗಳು ರೈಲನ್ನು ತುರ್ತಾಗಿ ನಿಲ್ಲಿಸಿ (Emergency Stop) ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

    ಘಟನೆ ಸೋಮವಾರ ಬೆಳಗ್ಗೆ 9:55ರ ವೇಳೆಗೆ ನಡೆದಿದೆ. ಉದಯಪುರದಿಂದ ಜೈಪುರಕ್ಕೆ ವಂದೇ ಭಾರತ್ ರೈಲು ಚಲಿಸುತ್ತಿತ್ತು. ಈ ವೇಳೆ ಹಳಿಯ ಮೇಲೆ ಕೆಲವು ಕಲ್ಲುಗಳನ್ನಿಟ್ಟಿರುವುದನ್ನು ಪೈಲಟ್‌ಗಳು ಗಮನಿಸಿದ್ದಾರೆ. ದೊಡ್ಡ ಅಪಘಾತವನ್ನು ತಡೆಯಲು ಪೈಲಟ್‌ಗಳು ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಭಾರತದ 74 ಲಕ್ಷ ವಾಟ್ಸಪ್ ಖಾತೆಗಳು ನಿಷೇಧ

    ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ. ಹಳಿಯ ಮೇಲೆ ಹಲವಾರು ಕಲ್ಲುಗಳು, ಕಬ್ಬಿಣದ ರಾಡ್‌ಗಳನ್ನು ಇಟ್ಟಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]