Tag: Jaipur

  • ಗುಜರಿ ಅಂಗಡಿಯಲ್ಲಿ ಸಾವಿರಾರು ಆಧಾರ್ ಕಾರ್ಡ್ ಪತ್ತೆ!

    ಗುಜರಿ ಅಂಗಡಿಯಲ್ಲಿ ಸಾವಿರಾರು ಆಧಾರ್ ಕಾರ್ಡ್ ಪತ್ತೆ!

    ಜೈಪುರ್: ಆಧಾರ್ ಕಾರ್ಡ್‍ಗಳು ಗ್ರಾಹಕರ ಕೈ ಸೇರುವ ಮುನ್ನವೆ ಗುಜರಿ ಅಂಗಡಿ ಸೇರಿರುವ ಘಟನೆ ರಾಜಸ್ಥಾನದ ಜೈಪುರ್ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಗುರುವಾರ ಜೈಪುರದ ಗುಜರಿ ಅಂಗಡಿ ಸಮೀಪ ಮಕ್ಕಳು ಹೋಗುತ್ತಿದ್ದಾಗ ಅಂಗಡಿಯಲ್ಲಿ ಆಧಾರ್ ಕಾರ್ಡ್ ಗಳನ್ನು ನೋಡಿದ್ದಾರೆ. ಕೂಡಲೇ ಸ್ಥಳೀಯ ಪಾಲಿಕೆ ಸದಸ್ಯರಿಗೆ ವಿಷಯ ಮುಟ್ಟಿಸಿದಾಗ ವಿಷಯ ಬೆಳಕಿಗೆ ಬಂದಿದೆ.

    ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಿಮಿಸಿದ ಕೌನ್ಸಿಲರ್ ಇಕ್ರಾಮುದ್ದೀನ್, ಗುಜರಿ ಅಂಗಡಿಯಲ್ಲಿ ಸಿಕ್ಕ ಆಧಾರ್ ಕಾರ್ಡ್‍ನಲ್ಲಿದ್ದ ಮೊಬೈಲ್ ನಂಬರ್‍ಗಳಿಗೆ ಕರೆ ಮಾಡಿದ್ದಾರೆ. ಆದರೆ ವಾರಸುದಾರರು ಆಧಾರ್ ಕಾರ್ಡ್ ಇನ್ನೂ ತಮ್ಮ ಕೈ ಸೇರಿಲ್ಲವೆಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಸ್ಥಳೀಯ ಅಂಚೆ ಕಚೇರಿ ಹಾಗೂ ಜುಲುಪುರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.

    ಚೀಲಗಳಲ್ಲಿ ತುಂಬಿದ್ದ ಆಧಾರ್ ಕಾರ್ಡ್‍ಗಳಿಗೆ 5 ರೂ. ಅಂಚೆ ಚೀಟಿ ಲಗತ್ತಿಸಿ, ಸಂಬಂಧಪಟ್ಟ ಅಂಚೆ ಕಚೇರಿಗೆ ತಲುಪಿಸುವ ಮುದ್ರೆಯನ್ನು ಕೂಡ ಹಾಕಲಾಗಿದೆ. ಆಧಾರ್ ಕಾರ್ಡ್‍ಗಳನ್ನು ತಲುಪಿಸುವ ವಿಚಾರದಲ್ಲಿ ಭದ್ರತಾ ಲೋಪ ಎದುರಾಗಿದೆ ಎಂದು ಹೇಳಿದ್ದಾರೆ.

    ಚೀಲದಲ್ಲಿ ಸುಮಾರು 4 ರಿಂದ 5 ಸಾವಿರ ಮಂದಿಯ ಆಧಾರ್ ಕಾರ್ಡ್ ಸಿಕ್ಕಿದೆ. ಮಕ್ಕಳು, ಮಹಿಳೆಯರು ಹಾಗೂ ಇನ್ನೂ ಅನೇಕರಿಗೆ ಸೇರಿದ ಆಧಾರ್ ಕಾರ್ಡ್ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಇವುಗಳನ್ನು ತುಂಬಿ ಗುಜರಿ ಅಂಗಡಿಗೆ ಮಾರಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಜುಲುಪುರ ಪೊಲೀಸ್ ಠಾಣಾ ಅಧಿಕಾರಿ ಲಿಖ್ಮ ರಾಮ್‍ರವರು, ಗುಜರಿ ಅಂಗಡಿಯಲ್ಲಿ ಆಧಾರ್ ಕಾರ್ಡ್ ಗಳು ಸಿಕ್ಕ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಅಲ್ಲದೇ ಸಂಬಂಧಪಟ್ಟ ಅಂಚೆ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

  • ಕೆಎಲ್ ರಾಹುಲ್‍ಗೆ ಪಾಕ್ ಮಹಿಳಾ ಆ್ಯಂಕರ್ ಕ್ಲೀನ್ ಬೌಲ್ಡ್!

    ಕೆಎಲ್ ರಾಹುಲ್‍ಗೆ ಪಾಕ್ ಮಹಿಳಾ ಆ್ಯಂಕರ್ ಕ್ಲೀನ್ ಬೌಲ್ಡ್!

    ಜೈಪುರ: ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ ಕನ್ನಡಿಗ ಕೆಎಲ್ ರಾಹುಲ್ ಆಟಕ್ಕೆ ಪಾಕ್ ಮೂಲದ ನಿರೂಪಕಿ ಕ್ಲೀನ್ ಬೌಲ್ಡ್ ಆಗಿದ್ದು, ಟ್ವಿಟ್ಟರ್ ನಲ್ಲಿ ವಿಶೇಷ ಸಂದೇಶ ಕಳುಹಿಸಿದ್ದಾರೆ.

    ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 95 ರನ್ ಗಳಿಸಿದ್ದ ಬಳಿಕ ಆರೆಂಜ್ ಕ್ಯಾಪ್ ಪಡೆದಿದ್ದು, ಈ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವೇಳೆಯೇ ರಾಹುಲ್ ಬ್ಯಾಟಿಂಗ್ ಗೆ ಪ್ರಶಂಸೆ ವ್ಯಕ್ತಪಡಿಸಿರುವ ಪಾಕ್ ನಿರೂಪಕಿ ಝೈನಭ್ ಅಬ್ಬಾಸ್, ಕೆಎಲ್ ರಾಹುಲ್ ಪ್ರಭಾವಶಾಲಿ, ಅತ್ಯುತ್ತಮ ಟೈಮಿಂಗ್ ಹೊಂದಿದ್ದು ಬ್ಯಾಟಿಂಗ್ ಶೈಲಿ ನನಗಿಷ್ಟ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಟೂರ್ನಿಯಲ್ಲಿ ಇದುವರೆಗೂ ಒಟ್ಟಾರೆ 10 ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್ 58.88 ರ ಸರಾಸರಿಯಲ್ಲಿ 471 ರನ್ ಗಳಿಸಿದ್ದಾರೆ. ಅತೀ ಹೆಚ್ಚು ರನ್  ಗಳಿಸಿದ ಪಟ್ಟಿಯ ನಂತರದ ಸ್ಥಾನದಲ್ಲಿ 423 ರನ್ ಗಳೊಂದಿಗೆ ಅಂಬಟಿ ರಾಯುಡು 2ನೇ ಸ್ಥಾನಕ್ಕೆ ಪಡೆದಿದ್ದಾರೆ.

    ಮೇ 6 ರಂದು ನಡೆದ ರಾಜಸ್ಥಾನದ ವಿರುದ್ಧ ಪಂದ್ಯದಲ್ಲೂ ರಾಹುಲ್ ಕೇವಲ 54 ಎಸೆತಗಳಲ್ಲಿ 84 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು. ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ರಾಹುಲ್ ಪಂಜಾಬ್ ತಂಡದ ಕೀ ಬ್ಯಾಟ್ಸ್ ಮನ್ ಆಗಿದ್ದು, ಪ್ರತಿ ಪಂದ್ಯದಲ್ಲೂ ತಂಡದ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ. ಟೂರ್ನಿಯ ಆರಂಭದ ಡೆಲ್ಲಿ ವಿರುದ್ಧ ಏಪ್ರಿಲ್ 8 ರಂದು ನಡೆದ ಪಂದ್ಯದಲ್ಲಿ ಕೇವಲ 14 ಎಸೆಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದರು.

    https://www.instagram.com/p/BiAZygxlFyz/?taken-by=zabbasofficial

    https://www.instagram.com/p/BhHSya2lHnV/?taken-by=zabbasofficial

  • ಒಬ್ಬ ಬಾಲಕ, ಇಬ್ಬರು ಬಾಲಕಿಯರು ಒಂದೇ ಮರಕ್ಕೆ ನೇಣು ಹಾಕ್ಕೊಂಡ್ರು!

    ಒಬ್ಬ ಬಾಲಕ, ಇಬ್ಬರು ಬಾಲಕಿಯರು ಒಂದೇ ಮರಕ್ಕೆ ನೇಣು ಹಾಕ್ಕೊಂಡ್ರು!

    ಜೈಪುರ: ಸಂಶಯಾಸ್ಪದ ರೀತಿಯಲ್ಲಿ ಮೂವರು ಅಪ್ರಾಪ್ತರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.

    ಮುಸ್ಲಿಂ ಬಾಲಕ ದೇಶಾಲ್ ಖಾನ್(17), ಶಾಂತಿ(13) ಮತ್ತು ಮಧು(12) ಆತ್ಮಹತ್ಯೆಗೆ ಶರಣಾದ ಅಪ್ರಾಪ್ತರು. ಶನಿವಾರ ಬೆಳಗ್ಗೆ ಮೂವರು ಮನೆ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದನ್ನು ಸ್ಥಳೀಯರು ನೋಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನೆರೆಹೊರೆಯವರನ್ನು ವಿಚಾರಣೆ ನಡೆಸಿದ್ದಾರೆ. ಇಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಶಾಂತಿ ತಂದೆ ಭೈರು ಮೆಗ್ವಾಲ್ ಆರೋಪಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಮುಸ್ಲಿಂ ಬಾಲಕ ಕೆಟ್ಟವನು ಎಂಬ ಅಭಿಪ್ರಾಯ ಬಂದಿದೆ. ಅಷ್ಟೇ ಅಲ್ಲದೇ ಈ ಮೂವರ ಮಧ್ಯೆ ಪ್ರೀತಿಯ ಸಂಬಂಧವಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

    ದೇಶಾಲ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಆದ್ದರಿಂದ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ. ಆತ್ಮಹತ್ಯೆಯ ಸ್ಥಳದಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ಮತ್ತು ಇತರ ವೈದ್ಯಕೀಯ ವರದಿಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ಅಂತಾ ಬಾರ್ಮರ್ ಪೊಲೀಸರು ತಿಳಿಸಿದ್ದಾರೆ.

    ಇದೀಗ ಆತ್ಮಹತ್ಯೆ ಪ್ರಕರಣ ಎರಡು ಸಮುದಾಯದ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿಬರುತ್ತಿದೆ. ಆದರೆ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಎರಡು ಸಮುದಾಯದವರು ಸತ್ಯವನ್ನು ಹೇಳುತ್ತಿಲ್ಲ. ಆದ್ದರಿಂದ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    https://www.youtube.com/watch?v=ypsbB065Pww

  • ಪ್ರೀತಿಸಿ ಮದ್ವೆಯಾಗಿ ಸಾಲಕ್ಕಾಗಿ ಸ್ನೇಹಿತನಿಗೆ ಪತ್ನಿಯನ್ನೇ ನೀಡಿದ

    ಪ್ರೀತಿಸಿ ಮದ್ವೆಯಾಗಿ ಸಾಲಕ್ಕಾಗಿ ಸ್ನೇಹಿತನಿಗೆ ಪತ್ನಿಯನ್ನೇ ನೀಡಿದ

    ಜೈಪುರ: ಮದ್ಯವ್ಯಸನಿ ಪತಿಯೊಬ್ಬ ಸಾಲ ತೀರಿಸಲು ಪತ್ನಿಯನ್ನೇ ಸ್ನೇಹಿತರಿಗೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆ ರಾಜಸ್ಥಾನದ ಸಿಖರ್ ನಗರದಲ್ಲಿ ನಡೆದಿದೆ.

    ಈಗ ಸಂತ್ರಸ್ತೆ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಹಲ್ಲೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. 2010ರಲ್ಲಿ ಜೈಪುರ ಯುವಕನ ಜೊತೆ ಮಹಿಳೆಗೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಸುಮಾರು ಐದು ಲಕ್ಷ ರೂಪಾಯಿ ನಗದು ಹಾಗೂ ಬಂಗಾರವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.

    ಮದುವೆಯ ನಂತರ ಪತಿ ಕುಟುಂಬಸ್ಥರು ವರದಕ್ಷಿಣೆಗಾಗಿ ಪ್ರತಿದಿನ ಆಕೆಗೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೆ ರೂಮಿನಲ್ಲಿ ಕೂಡಿ ಹಾಕಿ ಪತಿ, ಅತ್ತೆ, ಮಾವ, ಮೈದುನ ಸೇರಿದಂತೆ ಮನೆಯವರೆಲ್ಲ ಹೊಡೆಯುತ್ತಿದ್ದರು ಅಂತಾ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನು ಮದ್ಯವ್ಯಸನಿ ಪತಿ ಮೈತುಂಬ ಸಾಲ ಮಾಡಿಕೊಂಡಿದ್ದನು. ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಬದಲಿಗೆ ನನ್ನನ್ನು ಸ್ನೇಹಿತರಿಗೆ ನೀಡಿದ್ದಾನೆ. ಸ್ನೇಹಿತರಿಂದ ಅತ್ಯಾಚಾರವೆಸಗಿಸಿದ್ದಾನೆ. ನನಗೆ ನಶೆ ಬರುವ ಪದಾರ್ಥವನ್ನು ತಿನ್ನಿಸುತ್ತಿದ್ದನು ಎಂದು ಸಂತ್ರಸ್ತೆ ದೂರಿದ್ದಾರೆ.

    ಇಷ್ಟು ಮಾಡಿದರೂ ಪತ್ನಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅನಾಥಾಶ್ರಮದಲ್ಲಿ ಬಿಟ್ಟು ಹೋಗಿದ್ದನು. ನಂತರ ಸಂತ್ರಸ್ತೆ ಎಲ್ಲ ವಿಚಾರವನ್ನೂ ಪೋಷಕರಿಗೆ ತಿಳಿಸಿದ್ದು, ಬಳಿಕ ಪೋಷಕರು ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಪೊಲೀಸ್ ಠಾಣೆ ಟೆರೇಸ್ ಮೇಲೆಯೇ ವಿದೇಶಿ ಜೋಡಿಯ ಸೆಕ್ಸ್

    ಪೊಲೀಸ್ ಠಾಣೆ ಟೆರೇಸ್ ಮೇಲೆಯೇ ವಿದೇಶಿ ಜೋಡಿಯ ಸೆಕ್ಸ್

    ಜೈಪುರ: ಪೊಲೀಸ್ ಠಾಣೆಯೊಂದರ ಟೆರೇಸ್ ಮೇಲೆ ವಿದೇಶಿ ಜೋಡಿ ಸೆಕ್ಸ್ ಮಾಡುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ರಾಜಾಸ್ಥಾನದ ಉದೈಪುರನಲ್ಲಿರೋ ಘಂತಘರ್ ಪೊಲೀಸ್ ಠಾಣೆಯ ಟೆರೇಸ್ ಮೇಲೆ ವಿದೇಶಿ ಜೋಡಿಯೋಂದು ಸೆಕ್ಸ್ ಮಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಠಾಣೆ ಪಕ್ಕದ ಕಟ್ಟಡದ ಮೇಲೆ ನಿಂತು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿರುವ ಯುವಜೋಡಿ ಯಾರೆಂದು ಈವರೆಗೂ ಪತ್ತೆಯಾಗಿಲ್ಲ.

    ಈ ಪೊಲೀಸ್ ಠಾಣೆಯ ಟೆರೇಸ್ ಗೆ ಹೋಗಲು ಠಾಣೆಯ ಒಳಭಾಗದಿಂದ ಮಾತ್ರ ಸಾಧ್ಯವಾಗುವುದು. ಆದ್ದರಿಂದ ಈ ವಿದೇಶಿ ಜೋಡಿ ಟೆರೇಸ್ ಮೇಲಕ್ಕೆ ಹೋಗಿದ್ದು ಹೇಗೆ ಎಂಬ ಅನುಮಾನಗಳು ವಿಡಿಯೋ ನೋಡಿದ ಜನಸಾಮಾನ್ಯರಲ್ಲಿ ಮೂಡಿದೆ.

    ಘಟನೆಯಲ್ಲಿ ಪೊಲೀಸರ ಪಾತ್ರವಿಲ್ಲ. ಈ ವಿಡಿಯೋ ನಿಜವೆಂದು ಪೊಲೀಸ್ ಠಾಣೆಯ ಎಸ್ ಪಿ ರಾಜೇಂದ್ರ ಪ್ರಸಾದ್ ಗೋಯಲ್ ಮಾಧ್ಯಮಗಳಿಗೆ ಹೇಳಿದ್ದಾರೆ. ಏಪ್ರಿಲ್ 2017 ರಲ್ಲಿ ನವದೆಹಲಿಯ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ನಲ್ಲಿ ಇದೇ ರೀತಿ ಪೋರ್ನ್ ವಿಡಿಯೋ ಪ್ರಸಾರವಾಗಿತ್ತು.

    ಸದ್ಯ ವಿದೇಶಿ ಜೋಡಿ ಸೆಕ್ಸ್ ಮಾಡುತ್ತಿರುವ 25 ಸೆಕೆಂಡ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಜನರನ್ನು ರೊಚ್ಚಿಗೆಬ್ಬಿಸಿದೆ.

  • ನೇಣಿಗೆ ಶರಣಾಗಲು ಮುಂದಾಗಿದ್ದ ಮಾತು ಬಾರದ ಮೂಕಿ – ವಿಡಿಯೋ ಕಾಲ್ ಮೂಲಕ ಆತ್ಮಹತ್ಯೆ ತಪ್ಪಿಸಿದ್ರು

    ನೇಣಿಗೆ ಶರಣಾಗಲು ಮುಂದಾಗಿದ್ದ ಮಾತು ಬಾರದ ಮೂಕಿ – ವಿಡಿಯೋ ಕಾಲ್ ಮೂಲಕ ಆತ್ಮಹತ್ಯೆ ತಪ್ಪಿಸಿದ್ರು

    ಜೈಪುರ: ತಂದೆ ಹಾಗೂ ಪತಿ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಾಜಸ್ಥಾನದ ಇಂದೋರ್ ನಲ್ಲಿರುವ ಸಂಸ್ಥೆಯೊಂದು ವಿಡಿಯೋ ಕರೆ ಮಾಡಿ ರಕ್ಷಿಸಿದ್ದಾರೆ.

    ಇಂದೋರ್ ನಲ್ಲಿರುವ ಸಂಕೇತ ಭಾಷಾ ತಜ್ಞರಾದ ಜ್ಞಾನೇಂದ್ರ ಪುರೋಹಿತ್ ಬಳಿ ವಿಡಿಯೋ ಕಾಲ್ ಒಂದು ಬಂದಿದೆ. ಅದರಲ್ಲಿ ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಸಂತ್ರಸ್ತೆಯ ಪತಿ ಹಾಗೂ ತಂದೆ ಹಿಂಸೆಗೆ ಮತ್ತು ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಸಂಜ್ಞೆ ಮೂಲಕ ತನ್ನ ಮೇಲೆ ಹಿಂದಿನ ದಿನ ಕೂಡ ತಂದೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಮಾಡಿದ್ದಳು.

    ನೇಣಿಗೆ ಕೊರಳೊಡ್ಡಿ ನಿಂತಿದ್ದ ಮಹಿಳೆಯನ್ನು ನೋಡಿ ಜ್ಞಾನೇಂದ್ರ ಕಂಗಾಲಾಗಿದ್ದು, ಸಂತ್ರಸ್ತೆ ತನ್ನ ಕುತ್ತಿಗೆಗೆ ಸೀರೆಯಲ್ಲಿ ನೇಣು ಹಾಕಿಕೊಳ್ಳುತ್ತಿದ್ದಳು. ಇದನ್ನು ನೋಡಿದ ಜ್ಞಾನೇಂದ್ರ ಆಕೆಯ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಜ್ಞಾನೇಂದ್ರ ಪುರೋಹಿತ್ ತಂಡದವರು ಈ ರೀತಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಆದರೆ ಎಷ್ಟು ಹೇಳಿದರೂ ಆಕೆ ಕುತ್ತಿಗೆಯಿಂದ ಬಟ್ಟೆ ತೆಗೆಯಲಿಲ್ಲ. ಕೂಡಲೇ ಜ್ಞಾನೇಂದ್ರ ಅವರ ಸಂಸ್ಥೆಯಲ್ಲಿರುವ ಸಿಬ್ಬಂದಿ ಫೋನ್ ನಂಬರನ್ನು ರಾಜಸ್ಥಾನ ಪೊಲೀಸರಿಗೆ ನೀಡಿದ್ದಾರೆ.

    ಪ್ರಕರಣದ ಗಂಭೀರತೆ ಅರಿತ ಪೊಲೀಸರು ಮಹಿಳೆಯ ವಿಳಾಸ ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ಪ್ರಾಣ ಉಳಿಸಿದ್ದಾರೆ. ಪೊಲೀಸರು ಮಹಿಳೆಯ ಮನೆ ವಿಳಾಸ ಪತ್ತೆ ಮಾಡಿ ಅಲ್ಲಿಗೆ ಹೋಗುವಷ್ಟರಲ್ಲಿ ಸುಮಾರು 4 ಗಂಟೆ ಆಗಿತ್ತು. ಅಲ್ಲಿಯವರೆಗೆ ಜ್ಞಾನೇಂದ್ರ ಮತ್ತು ತಂಡ ಸಂಜ್ಞೆಯ ಮೂಲಕ ಆಕೆಯ ಮನವೊಲಿಸುವ ಯತ್ನ ನಡೆಸುತ್ತಿದ್ದರು ಎಂದು ವರದಿಯಾಗಿದೆ.

    ಸಂತ್ರಸ್ತೆ ಕೆಲವು ದಿನಗಳ ಹಿಂದೆ ಮಾತು ಬಾರದ ಹುಡುಗನೊಂದಿಗೆ ಮದುವೆಯಾಗಿದ್ದಳು. ಮದುವೆಯಾದ ನಂತರ ಪತಿ ಆಕೆಯನ್ನು ಹಿಂಸುತ್ತಿದ್ದನು. ಅಷ್ಟೇ ಅಲ್ಲದೇ ನನ್ನನ್ನು ನೋಡಲು ಮನೆಗೆ ಬಂದಿದ್ದ ತಂದೆಯೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಜ್ಞಾನೇಂದ್ರ ಅವರ ಬಳಿ ಹೇಳಿಕೊಂಡಿದ್ದಳು.

    ಈ ಪ್ರಕರಣ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಈ ಬಗ್ಗೆ ಸಾಕ್ಷ್ಯಧಾರಗಳು ಲಭಿಸಿಲ್ಲ. ಆದ್ದರಿಂದ ಆರೋಪಿ ತಂದೆ ಮತ್ತು ಪತಿಗೆ ವಿರುದ್ಧವಾಗಿ ಮಾಡಿರುವ ಆರೋಪ ದೃಢವಾಗಿಲ್ಲ. ಈ ಬಗ್ಗೆ ಸತ್ಯಾಂಶ ತಿಳಿಯಲು ನಮ್ಮ ಇಲಾಖೆಯಲ್ಲಿ ಮೂಕ-ಕಿವುಡ ತಜ್ಞರನ್ನು ಇಲ್ಲ. ಆದ್ದರಿಂದ ಸಂತ್ರಸ್ತೆಯನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    https://www.facebook.com/Jansatta/videos/1904947196191866/

  • ‘ತೇರಿ ಬಾಹೋ ಮೇ ಮರ್ ಜಾಯೇ ಹಮ್’ ಎಂದು ಪತ್ನಿ ಜೊತೆ ಕುಣಿಯುತ್ತಲೇ ಪ್ರಾಣಬಿಟ್ಟ: ವಿಡಿಯೋ

    ‘ತೇರಿ ಬಾಹೋ ಮೇ ಮರ್ ಜಾಯೇ ಹಮ್’ ಎಂದು ಪತ್ನಿ ಜೊತೆ ಕುಣಿಯುತ್ತಲೇ ಪ್ರಾಣಬಿಟ್ಟ: ವಿಡಿಯೋ

    ಜೈಪುರ್: ಮದುವೆ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ಸಿನಿಮಾ ದಿಲ್‍ವಾಲೆ ದುಲ್ಹನಿಯಾ ಲೇ ಜಾಯೇಂಗೆ ಯ “ತೇರಿ ಬಾಹೋ ಮೇ ಮರ್ ಜಾಯೇ ಹಮ್…” ಹಾಡಿಗೆ ಡ್ಯಾನ್ಸ್ ಮಾಡುತ್ತಲೇ ವ್ಯಕ್ತಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬಾಡ್‍ಮೇರ್ ಜಿಲ್ಲೆಯ ಜಸೋಲ್‍ನಲ್ಲಿ ನಡೆದಿದೆ.

    ವಿಜಯ್ ದೇದಿಯಾ ಮೃತ ದುದೈವಿ. ವಿಜಯ್ ತನ್ನ ಪತ್ನಿ ಜೊತೆ ವೇದಿಕೆ ಮೇಲೆ ಡಿಡಿಎಲ್‍ಜೆಯ ಸೂಪರ್ ಹಿಟ್ ಹಾಡಿಗೆ ಕುಣಿಯುತ್ತಿದ್ದರು. ತೇರಿ ಬಾಹೋ ಮೇ ಮರ್ ಜಾಯೇ ಹಮ್ ಸಾಲು ಬರುತ್ತಿದ್ದಂತೆ ವಿಜಯ್ ಕುಸಿದು ಬಿದ್ದಿದ್ದಾರೆ.

    ವಿಜಯ್ ಡ್ಯಾನ್ಸ್ ಮಾಡುವಾಗ ಅವರಿಗೆ ಹೃದಯ ಸ್ತಂಭನವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಜಯ್ ಬಿದ್ದಿದ್ದನ್ನು ಗಮನಿಸಿದ ಪತ್ನಿ ಇದು ಒಂದು ಡ್ಯಾನ್ಸ್ ನ ಭಾಗವೆಂದು ತಿಳಿದುಕೊಂಡು ಒಬ್ಬರೇ ಕುಣಿಯುತ್ತಿದ್ದರು. ಆಗ ಅಲ್ಲಿದ್ದ ಜನರು ನಗಲಾರಂಭಿಸಿದ್ದರು.

    ನಂತರ ಪತ್ನಿ ತನ್ನ ಪತಿಯನ್ನು ಕರೆದಾಗ ವಿಜಯ್ ಯಾವುದೇ ಪ್ರತಿಕ್ರಿಯೇ ನೀಡಲಿಲ್ಲ. ನಂತರ ವಿಜಯ್‍ನನ್ನು ಮೇಲೆತ್ತಲು ಹೋದಾಗಲೂ ಅವರು ಏಳಲಿಲ್ಲ. ಆ ವೇಳೆ ವಿಜಯ್ ಗೆ ಹೃದಯಸ್ತಂಭನವಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ದಂಗುಬಡಿಸುವಂತೆ ಮಾಡಿದೆ. ಹಾಡಿನಲ್ಲಿ ಬರುವ ತೇರಿ ಬಾಹೋ ಮೇ ಮರ್ ಜಾಯೇ ಹಮ್ (ನಿನ್ನ ತೋಳುಗಳಲ್ಲೇ ನಾನು ಜೀವಬಿಡ್ತೀನಿ) ಸಾಲಿನಂತೆಯೇ ಕಾಕತಾಳಿಯವಾಗಿ ವಿಜಯ್ ಸಾವನ್ನಪ್ಪಿದಾರೆ.

    https://www.youtube.com/watch?v=VJGcAaLfloc

  • ತನಗಿಂತ 53 ವರ್ಷ ಚಿಕ್ಕವಳಾದ ಮಹಿಳೆಯನ್ನ ಪತ್ನಿಯ ಮುಂದೆಯೇ ಮದ್ವೆಯಾದ 83ರ ತಾತ

    ತನಗಿಂತ 53 ವರ್ಷ ಚಿಕ್ಕವಳಾದ ಮಹಿಳೆಯನ್ನ ಪತ್ನಿಯ ಮುಂದೆಯೇ ಮದ್ವೆಯಾದ 83ರ ತಾತ

    ಜೈಪುರ: 83 ವರ್ಷದ ವೃದ್ಧನೊಬ್ಬ ತನಗಿಂತ 53 ವರ್ಷ ಚಿಕ್ಕವಳಾದ ಮಹಿಳೆಯನ್ನ ಪತ್ನಿಯ ಮುಂದೆಯೇ ಮದುವೆಯಾಗಿರುವ ಘಟನೆ ರಾಜಸ್ತಾನದ ಕರೌಲಿಯಲ್ಲಿ ನಡೆದಿದೆ.

    ಕರೌಲಿ ಜಿಲ್ಲೆಯ ಸೌಮರದಾ ನಿವಾಸಿ ಸುಖಾರಾಮ್ ತನ್ನ 83ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಅದು ತನಗಿಂತ 53 ವರ್ಷ ಚಿಕ್ಕ ಮಹಿಳೆಯನ್ನ ಮದುವೆಯಾಗಿದ್ದಾರೆ. ಆದರೆ ಇಲ್ಲಿ ವಿಶೇಷವೆಂದರೆ 83ರ ತಾತ 30ರ ಮಹಿಳೆಯನ್ನು ಮದುವೆಯಾಗಿದ್ದು, ಅದು ತನ್ನ ಮೊದಲ ಪತ್ನಿ ಎದುರಲ್ಲೇ ಎರಡನೇ ಮದುವೆಯನ್ನ ಅದ್ಧೂರಿಯಾಗಿ ಮಾಡಿಕೊಂಡಿದ್ದಾರೆ.


    ಗ್ರಾಮದ ಮುಖ್ಯಸ್ಥರು ಸೇರಿದತೆ ಸುಖಾರಾಮ್ ಮೊದಲ ಪತ್ನಿಯಾದ ಬಾಟು ಹಾಗೂ ಇಬ್ಬರು ಮಕ್ಕಳು, ಅವರ ಪತಿಯರು ಸೇರಿ ಮದುವೆ ಮಾಡಿಸಿದ್ದಾರೆ. ವರನ ಮೆರವಣಿಗೆ ವೇಳೆ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಸುಖಾರಾಮ್ ಅಕ್ಕಪಕ್ಕದ ಐದು ಗ್ರಾಮಗಳಿಗೆ ಮದುವೆಗೆ ಆಹ್ವಾನ ನೀಡಿದ್ದು, ಹಿಂದೂ ಪದ್ಧತಿಯಂತೆ ಮದುವೆ ಮಾಡಿಕೊಂಡಿದ್ದಾರೆ. ಸುಖಾರಾಮ್ ಗೆ ಇಬ್ಬರು ಪುತ್ರಿಯರು. ಇವರ ಪುತ್ರ 30 ವರ್ಷದಲ್ಲಿಯೇ ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದನು. ಸುಖಾರಾಮ್ ಶ್ರೀಮಂತರಾಗಿದ್ದು, ದೆಹಲಿಯಲ್ಲೂ ಆಸ್ತಿಯಿದೆ. ಆದ್ದರಿಂದ ಇವರ ಆಸ್ತಿಯನ್ನು ನೋಡಿಕೊಳ್ಳಲು ಮತ್ತು ಕೊನೆಗಾಲದಲ್ಲಿ ತಮ್ಮನ್ನು ನೋಡಿಕೊಳ್ಳಲು ಮಗಬೇಕೆಂದು ಮೊದಲ ಪತ್ನಿಯ ಒಪ್ಪಿಗೆ ಪಡೆದು ಎರಡನೇ ಮದುವೆಯಾಗಿದ್ದಾರೆ.

    ಸುಖಾರಾಮ್ ಮದುವೆಯಾದ ವಧು ರಮೇಶಿ ಇವರಿಗೆ 30 ವರ್ಷ ವಯಸ್ಸಾಗಿದ್ದು, ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. ಆಕೆಗೂ ಸಹೋದರಿಯರಿದ್ದು ಅವರೆಲ್ಲರಿಗೂ ಮದುವೆಯಾಗಿದೆ. ಬಡ ಹುಡುಗಿಗೆ ಬಾಳು ನೀಡಲು ಉದ್ದೇಶದಿಂದಲೂ ಸುಖಾರಾಮ್ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

  • 925 ಕೋಟಿ ರೂ. ಬ್ಯಾಂಕ್ ದರೋಡೆಯನ್ನು ತಡೆದ ಪೇದೆ!

    925 ಕೋಟಿ ರೂ. ಬ್ಯಾಂಕ್ ದರೋಡೆಯನ್ನು ತಡೆದ ಪೇದೆ!

    ಜೈಪುರ: ಪೇದೆಯೊಬ್ಬರು ದೇಶದ ಅತೀ ದೊಡ್ಡ ಬ್ಯಾಂಕ್ ದರೋಡೆಯನ್ನು ತಡೆದ ಘಟನೆ ರಾಜಸ್ಥಾನದ ಜೈಪುರ್‍ನಲ್ಲಿ ನಡೆದಿದೆ.

    ಸೀತಾರಾಮ್ (27) ದರೋಡೆ ಆಗುವುದನ್ನು ತಡೆದ ಪೇದೆ. ಸೀತಾರಾಮ್ ಅವರು ಸರಿಯಾದ ಸಮಯದಲ್ಲಿ ದರೋಡೆಕೋರರ ಮೇಲೆ ಗುಂಡು ಹಾರಿಸಿಲ್ಲ ಎಂದರೆ 925 ಕೋಟಿ ರೂ. ದರೋಡೆ ಆಗುತಿತ್ತು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ.

    ಮಧ್ಯರಾತ್ರಿ ಸುಮಾರು 2.30ಕ್ಕೆ 13 ಜನ ದರೋಡೆಕೋರರು ಮಾಸ್ಕ್ ಧರಿಸಿ ಆಕ್ಸಿಸ್ ಬ್ಯಾಂಕಿನ ಸಿ-ಸ್ಕೀಮ್ ಏರಿಯಾ ತಲುಪಿದ್ದರು. ಆಗ ಅಲ್ಲಿದ್ದ ಖಾಸಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಶಟ್ಟರ್ ಬೀಗ ಮುರಿಯಲು ಪ್ರಯತ್ನಿಸಿದ್ದಾರೆ. ತಕ್ಷಣ ಸೈರನ್ ಹೊಡೆದಾಗ ಬ್ಯಾಂಕಿನೊಳಗೆ ಇದ್ದ ಪೇದೆ ದರೋಡೆಕೋರರ ಮೇಲೆ ಗುಂಡು ಹಾರಿಸಿದ್ದರು.

    ದರೋಡೆಕೋರರು ಶಟರ್ ಮುರಿಯುವುದ್ದನ್ನು ಸೀತರಾಮ್ ಬ್ಯಾಂಕಿನೊಳಗೆ ಇದ್ದು ಗಮನಿಸಿದ್ದರು. ತಕ್ಷಣ ಒಂದು ಸೆಕೆಂಡ್ ಕೂಡ ವ್ಯರ್ಥ ಮಾಡದೇ ಅವರ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಪೇದೆ ತನ್ನ ಸಿಬ್ಬಂದಿಗೆ ಮಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ವಲ್ಪ ಸಮಯದಲ್ಲೇ ಹಲವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಅವರು ಸಿಸಿಟಿವಿ ವಿಡಿಯೋ ಪರಿಶೀಲಿಸುತ್ತಿದ್ದಾರೆ ಎಂದು ಎಸಿಪಿ ಪ್ರಫುಲ್ ಕುಮರ್ ತಿಳಿಸಿದ್ದಾರೆ.

    ಅದು ಒಂದು ಮುಖ್ಯ ಬ್ಯಾಂಕ್ ಎಂದರೆ ಚೆಸ್ಟ್ ಬ್ಯಾಂಕ್ ಆಗಿದ್ದು, ಮೊದಲು ಹಣ ಅಲ್ಲಿ ಇಡಲಾಗುತ್ತದೆ. ನಂತರ ಬೇರೆ ಬೇರೆ ಬ್ರ್ಯಾಂಚ್‍ಗಳಿಗೆ ಹಣವನ್ನು ರವಾನಿಸಲಾಗುತ್ತದೆ. ದರೋಡೆಕೋರರು ಮೊದಲೇ ಈ ವಿಚಾರವನ್ನು ತಿಳಿದುಕೊಂಡು ದರೋಡೆ ಮಾಡಲು ಯತ್ನಿಸಿದ್ದರು. ಅಷ್ಟೇ ಅಲ್ಲದೇ ಆರ್‍ಬಿಐ ನಿಯಮಗಳನ್ನು ಆ ಬ್ಯಾಂಕ್ ಪಾಲಿಸುತ್ತಿರಲಿಲ್ಲ. ಆ ಬ್ಯಾಂಕಿನಲ್ಲಿ ಟೈಂ ಲಾಕ್ ಕೂಡ ಇರಲಿಲ್ಲ ಹಾಗೂ ಶಟರ್ ಕೂಡ ಸರಿಯಾಗಿ ಮುಚ್ಚಿರಲಿಲ್ಲ ಎಂದು ಪ್ರಫುಲ್ ಕುಮಾರ್ ಹೇಳಿದ್ದಾರೆ.

  • ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತ

    ಪ್ರಧಾನಿ ಮೋದಿ ಪತ್ನಿ ಜಶೋದಾ ಬೆನ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತ

    ಜೈಪುರ: ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರ್ ಅಪಘಾತಕ್ಕೊಳಗಾದ ಘಟನೆ ರಾಜಸ್ತಾನದಲ್ಲಿ ನಡೆದಿದೆ.

    ಈ ಘಟನೆ ಕೋಟಾ- ಚಿತ್ತೂರ್ ಹೆದ್ದಾರಿಯಿಂದ ಸುಮಾರು 55 ಕಿ.ಮೀ ದೂರದಲ್ಲಿ ನಡೆದಿದ್ದು, ಘಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪತ್ನಿ ಜಶೋದಾ ಬೆನ್ ಅಪಾಯದಿಂದ ಪಾರಾಗಿದ್ದಾರೆ.

    ಘಟನೆ ನಡೆದ ಕೂಡಲೇ ಜಶೋದಾ ಬೆನ್ ಅವರನ್ನು ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದ್ದಾರೆ ಅಂತ ಚಿತ್ತೋರ್ ಗಢ್ ನ ಉಪವಿಭಾಗೀಯ ಮ್ಯಾಜಿಸ್ಟ್ರೇಟರ್ ಸುರೇಶ್ ಕಾರ್ತಿಕ್ ತಿಳಿಸಿದ್ದಾರೆ.

    ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಸಂಬಂಧಿಕರೆಂದು ತಿಳಿದುಬಂದಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ಜಯೇಂದ್ರ ಸಣ್ಣಪುಟ್ಟ ಗಾಯಗಳಾಗಿವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲರೂ ಗುಜರಾತ್ ನ ಬರನ್ ಎಂಬಲ್ಲಿನ ಅತ್ರು ಗೆ ಪ್ರವಾಸ ಬೆಳೆಸಿದ್ದರು ಎಂಬುದಾಗಿ ವರದಿಯಾಗಿದೆ.

    ಘಟನೆ ಕುರಿತು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಾರೆ. ಜಶೋದಾ ಬೆನ್ ಅವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.