Tag: Jaipur

  • 20ರ ಯುವತಿಯ ಮೇಲೆ ಡಾಕ್ಟರ್, ಪೇದೆ ಸೇರಿದಂತೆ ಐವರಿಂದ ಗ್ಯಾಂಗ್‍ರೇಪ್

    20ರ ಯುವತಿಯ ಮೇಲೆ ಡಾಕ್ಟರ್, ಪೇದೆ ಸೇರಿದಂತೆ ಐವರಿಂದ ಗ್ಯಾಂಗ್‍ರೇಪ್

    ಜೈಪುರ: ಡಾಕ್ಟರ್, ಅಮಾನತುಗೊಂಡ ಪೊಲೀಸ್ ಪೇದೆ 20 ವರ್ಷದ ಯುವತಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು ಯುವತಿಗೆ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿ ಆ ಯುವತಿಯನ್ನು ಬುಧವಾರ ಜೈಪುರದ ಆಗ್ರ ರಸ್ತೆಯಲ್ಲಿ ಅರೆ ಬೆತ್ತಲೆ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆ.

    ಈ ಯುವತಿಯನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಈ ವಿಚಾರಣೆ ವೇಳೆ ಯುವತಿ, ಜ್ಯೋತಿ ನಗರ್ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿದ್ದ ಕಪಿಲ್ ಶರ್ಮಾ ಅತ್ಯಾಚಾರ ಮಾಡಿದ್ದಾನೆ ಎಂದು ರಾಜ್ಯ ಮಾನವ ಹಕ್ಕು ಆಯೋಗ ಅಧಿಕಾರಿಯಾಗಿದ್ದ ದೀಪೇಶ್ ಚತುರ್ವೇದಿಗೆ ದೂರು ನೀಡಿದ್ದೆ. ಈ ದೂರನ್ನು ಪಡೆದ ಚತುರ್ವೇದಿ ಶರ್ಮಾನನ್ನು ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಇದನ್ನು ಪ್ರಶ್ನೆ ಮಾಡಲು ಮಂಗಳವಾರ ದೀಪೇಶ್ ಚತುರ್ವೇದಿ ನಿವಾಸಕ್ಕೆ ಹೋಗಿದ್ದೆ. ಈ ವೇಳೆ ಅಲ್ಲಿ ಐದು ಜನರ ಗುಂಪೊಂದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿಸಿದ್ದಾಳೆ.

    ಈ ವಿಚಾರವಾಗಿ ಯುವತಿ ಕಪಿಲ್ ಶರ್ಮಾ, ದೀಪೇಶ್ ಚತುರ್ವೇದಿ, ಡಾ ಅನುರಾಗ್, ಮತ್ತು ಇನ್ನಿಬ್ಬರು ಅನಾಮಧೇಯ ವ್ಯಕ್ತಿಗಳು ಮೇಲೆ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ವಿಚಾರಣೆ ಮಾಡುತ್ತಿರುವ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಜೈನ್ ಅವರು, ಅಮಾನತುಗೊಂಡ ಪೊಲೀಸ್ ಪೇದೆ ಕಪಿಲ್ ಶರ್ಮಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಕೋನಗಳಿಂದಲೂ ತನಿಖೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧಕಾರ್ಯ ಮಾಡುತ್ತಿದ್ದಾರೆ.

  • ಬೈಕ್‍ಗಾಗಿ ಮದ್ವೆ ಮಂಟಪದಿಂದ ವರ ಎಸ್ಕೇಪ್!

    ಬೈಕ್‍ಗಾಗಿ ಮದ್ವೆ ಮಂಟಪದಿಂದ ವರ ಎಸ್ಕೇಪ್!

    ಜೈಪುರ: 22 ವರ್ಷದ ವರ ವರದಕ್ಷಿಣೆಯಾಗಿ ಬೈಕ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ಅರ್ಧಕ್ಕೆ ನಿಲ್ಲಿಸಿ ಮಂಟಪದಿಂದಲೇ ಓಡಿಹೋಗಿರುವ ಘಟನೆ ಜೈಪುರದ ಬಾರನ್ ಜಿಲ್ಲೆಯಲ್ಲಿ ನಡೆದಿದೆ.

    ಇದೀಗ ವಧು,  ವರ ಮತ್ತು ಆತನ ತಂದೆಯ ವಿರುದ್ಧ ವರದಕ್ಷಿಣೆ ಕೇಸನ್ನು ಬಾರನ್ ಜಿಲ್ಲೆಯ ಹರ್ನಾವಾಡಾ ಶಹಾಜಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

    ಘಟನೆ ವಿವರಣೆ?
    ಝಾಲಾವಾರ್ ಜಿಲ್ಲೆಯ ವರ ಮೇಘರಾಜ್ ಲೋಧಾನಿಗೆ ದಿಗೋದಜಾಗೀರ್ ಗ್ರಾಮದ ವಧು ಮೋನಾ ಕುಮಾರಿ ಜೊತೆ ಶುಕ್ರವಾರ ಮದುವೆ ನಿಶ್ಚಯವಾಗಿತ್ತು. ಅದರಂತೆಯೇ ವರ ಮತ್ತು ಕುಟುಂಬದವರು ಮದುವೆ ಮಂಟಪಕ್ಕೆ ಬಂದು ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದರು. ಇದೇ ವೇಳೆ ವರ ಉದ್ದೇಶ ಪೂರ್ವಕವಾಗಿಯೇ ತನಗೆ ಬೈಕ್ ಬೇಕೆಂದು ಹಠ ಹಿಡಿದಿದ್ದಾನೆ.

    ಇತ್ತ ವಧುವಿನ ಪೋಷಕರು ಬೈಕ್ ಕೊಡಲು ನಿರಾಕರಿಸಿದರು. ಇದರಿಂದ ಕೋಪಕೊಂಡ ವರ ಲೋಧಾ ಮದುವೆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ ಮಂಟಪದಿಂದಲೇ ಪರಾರಿಯಾಗಿದ್ದಾನೆ. ಪರಿಣಾಮ ಗಾಬರಿಯಾದ ವಧು, ಪೋಷಕರು ಮತ್ತು ಸಂಬಂಧಿಕರು ಹರ್ನಾವಾಡಾ ಶಹಾಜಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ನಂತರ ವರ ಮತ್ತು ಆತನ ತಂದೆಯ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸಿದ್ದಾರೆ ಎಂದು ರಾಮೇಶ್ವರ್ ಚೌಧರಿ ತಿಳಿಸಿದ್ದಾರೆ.

    ಪೊಲೀಸರು ವಧು ನೀಡಿದ ದೂರಿನ ಅನ್ವಯ ವರ ಮತ್ತು ಆತನ ತಂದೆಯ ವಿರುದ್ಧ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದು, ಅವರಿಗಾಗಿ ಹುಡುಕಾಟ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ವರ ಶನಿವಾರ ಮುಂಜಾನೆ ವಧುನಿನ ಮನೆಯ ಬಳಿ ಬಂದಿದ್ದು, ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ನಂತರ ಎರಡು ಕುಟುಂಬದವರು ಮಾತುಕತೆ ನಡೆಸಿ ಮದುವೆ ಕಾರ್ಯಕ್ರಮ ಮುಂದುವರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಹೆರಿಗೆ ನೋವು ಕಡಿಮೆಯಾಗಲು ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರ ಪ್ಲೇ!

    ಹೆರಿಗೆ ನೋವು ಕಡಿಮೆಯಾಗಲು ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರ ಪ್ಲೇ!

    – ಚರ್ಚೆಗೆ ಗ್ರಾಸವಾದ ರಾಜಸ್ಥಾನ ಜಿಲ್ಲಾಸ್ಪತ್ರೆ ನಡೆ
    – ಗಾಯತ್ರಿ ಮಂತ್ರವನ್ನು ನಿಲ್ಲಿಸುವಂತೆ ಮುಸ್ಲಿಮರಿಂದ ಆಗ್ರಹ

    ಜೈಪುರ: ಹೆರಿಗೆ ನೋವು ಕಡಿಮೆಯಾಗಲು ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರದ ಆಡಿಯೋ ಪ್ಲೇ ಮಾಡುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

    ಮಹಿಳೆಯು ಗಾಯತ್ರಿ ಮಂತ್ರವನ್ನು ಆಲಿಸಿದರೆ ಆಕೆಯ ಹೆರಿಗೆ ನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆಯನ್ನು ಆಸ್ಪತ್ರೆಯ ಸಿಬ್ಬಂದಿ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸಿರೋಹಿ ಜಿಲ್ಲಾಸ್ಪತ್ರೆಯ ಹೆರಿಗೆ ಕೋಣೆಯಲ್ಲಿ ಕಳೆದ ಒಂದು ವರ್ಷದಿಂದಲೂ ಗಾಯತ್ರಿ ಮಂತ್ರವನ್ನು ಪ್ಲೇ ಮಾಡಲಾಗುತ್ತಿದೆ.

    ಸರ್ಕಾರಿ ಆಸ್ಪತ್ರೆಗೆ ಕೇವಲ ಹಿಂದೂ ರೋಗಿಗಳು ಮಾತ್ರ ಬರುವುದಿಲ್ಲ. ಮುಸ್ಲಿಂ ಹಾಗೂ ಇತರೇ ಧರ್ಮದವರು ಕೂಡ ಬರುತ್ತಾರೆ. ಹೀಗೆ ಗಾಯತ್ರಿ ಮಂತ್ರವನ್ನು ಮಾತ್ರ ಪ್ಲೇ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ಕೇಳಿಬಂದಿದೆ.

    ಮುಸ್ಲಿಂ ಸಮುದಾಯದ ಕೆಲವು ಮಂದಿ ಆಸ್ಪತ್ರೆಯ ನಿರ್ಧಾರದ ವಿರುದ್ಧ ಪ್ರತಿಭಟನೆಗೆ ನಿಂತಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ, ಹುಟ್ಟುವ ಮಗುವಿನ ಕಿವಿಗೆ ಮೊದಲು ಆಜಾನ್ ಎಂಬ ಪದ ಬೀಳಬೇಕು ಎಂದು ಪ್ರತಿಭಟನಾಕಾರ ಆಶ್ಫಾಕ್ ಕಾಯಂಖಾನಿ ಹೇಳಿದ್ದಾರೆ.

    ಜಿಲ್ಲಾಸ್ಪತ್ರೆಗಳ ಹೆರಿಗೆ ಕೊಠಡಿಗಳಲ್ಲಿ ನಾವು ಗಾಯತ್ರಿ ಮಂತ್ರವನ್ನು ಪ್ಲೇ ಮಾಡುತ್ತೇವೆ. ಜಿಲ್ಲೆಯ ಇತರ 20 ಆರೋಗ್ಯ ಕೇಂದ್ರಗಳ ಹೆರಿಗೆ ಕೊಠಡಿಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುತ್ತೇವೆ ಎಂದು ಸವಾಯ್ ಮಾಧೋಪುರದ ಮುಖ್ಯ ವೈದ್ಯಾಧಿಕಾರಿ ಡಾ.ತೇಜರಾಮ್ ಮೀನಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಜಿಲ್ಲಾ ಶಿಶು ಆರೋಗ್ಯಾಧಿಕಾರಿ ಡಾ.ಅಶೋಕ್ ಆದಿತ್ಯ ಅವರು ಉದಯಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೂ ಈ ವ್ಯವಸ್ಥೆ ತರಲು ಸಿದ್ಧತೆಗಳು ನಡೆದಿದೆ ಎಂದು ತಿಳಿಸಿದ್ದಾರೆ.

    ಜಿಲ್ಲಾ ವೈದ್ಯಾಧಿಕಾರಿಗಳಿಗೆ ಆಸ್ಪತ್ರೆಗಳಲ್ಲಿ ಈ ರೀತಿ ಹಾಡನ್ನು ಪ್ಲೇ ಮಾಡಿ ಎಂಬ ಯಾವುದೇ ಸೂಚನೆ ನೀಡಿಲ್ಲ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಆದರೆ ಹೆರಿಗೆ ಕೊಠಡಿಗಳಲ್ಲಿ ನೋವು ಕಡಿಮೆ ಮಾಡುವುದಕ್ಕೆ ಪೂರಕವಾದ ಹಾಡನ್ನು ಅಥವಾ ಆಡಿಯೋವನ್ನು ಮಾತ್ರವೇ ಪ್ಲೇ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿರುವುದಾಗಿ ಆರೋಗ್ಯ ಇಲಾಖೆ ವಿಶೇಷ ಕಾರ್ಯದರ್ಶಿ ಡಾ.ಸಮಿತ್ ಶರ್ಮಾ ಹೇಳಿದ್ದಾರೆ.

    ಈ ನಿಟ್ಟಿನಲ್ಲಿ ಕೆಲವೊಂದು ಆಡಿಯೋಗಳನ್ನು ನಾವೇ ಕಳುಹಿಸಿದ್ದೇವೆ. ಅದನ್ನು ಬಳಸುವುದು ಅಥವಾ ಬಿಡುವುದು ಆಸ್ಪತ್ರೆ ಸಿಬ್ಬಂದಿಗೆ ಬಿಟ್ಟ ವಿಷಯ. ಆದರೆ, ಗಾಯತ್ರಿ ಮಂತ್ರ ಪ್ಲೇ ಮಾಡಿರುವ ವಿಷಯದ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

  • ವ್ಯಕ್ತಿ ಹೊಟ್ಟೆಯಲ್ಲಿ ಬರೋಬ್ಬರಿ 116 ಕಬ್ಬಿಣದ ಮೊಳೆ ಪತ್ತೆ!

    ವ್ಯಕ್ತಿ ಹೊಟ್ಟೆಯಲ್ಲಿ ಬರೋಬ್ಬರಿ 116 ಕಬ್ಬಿಣದ ಮೊಳೆ ಪತ್ತೆ!

    ಜೈಪುರ: ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಇದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

    ಹೌದು. ಅಚ್ಚರಿ ಎನಿಸಿದರು ಇದು ನಿಜ. ರಾಜಸ್ಥಾನದ ಬುಂಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ಆಪರೇಷನ್ ನಡೆದಿದೆ. ಭೋಲಾ ಶಂಕರ್(42) ಅವರ ಹೊಟ್ಟೆಯಲ್ಲಿದ್ದ 116 ಕಬ್ಬಿಣದ ಮೊಳೆಗಳು ಹಾಗೂ ಕೆಲವು ವೈರ್ ಗಳನ್ನು ವೈದ್ಯ ಡಾ. ಅನೀಲ್ ಸೈನಿ ಅವರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ರೋಗಿಯೂ ಭಾನುವಾರದಂದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರು ಅವರ ಎಕ್ಸ್-ರೇ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಹಾಗೂ ವೈರ್ ಗಳು ಇರುವುದು ತಿಳಿದಿದೆ. ಆದರೆ ಇದನ್ನು ಕಂಡ ವೈದ್ಯರು ಅಚ್ಚರಿಗೊಂಡು ಮತ್ತೆ ರೋಗಿಯ ಸಿಟಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಇರುವುದು ಖಚಿತಪಟ್ಟಿದೆ. ಅದಾದ ಬಳಿಕ ಸೋಮವಾರದಂದು ರೋಗಿಯ ಶಸ್ತ್ರಚಿಕಿತ್ಸೆ ಮಾಡಿ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಹೊರತೆಗೆದಿದ್ದಾರೆ.

    ರೋಗಿಯು ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿಚಿತ್ರವೆಂದರೆ ರೋಗಿಗೆ ತನ್ನ ಹೊಟ್ಟೆಯಲ್ಲಿ ಈ ಕಬ್ಬಿಣದ ವಸ್ತುಗಳು ಹೇಗೆ ಸೇರಿತು ಎನ್ನುವ ಬಗ್ಗೆ ಗೊತ್ತಿರಲಿಲ್ಲ. ಅಲ್ಲದೆ ರೋಗಿಯ ಮನೆಯವರಿಗೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

    ಈ ಬಗ್ಗೆ ಮಾತನಾಡಿರುವ ವೈದ್ಯರು, ರೋಗಿಯ ಹೊಟ್ಟೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮೊಳೆಗಳು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಈ ಮೊಳೆಗಳು ಕರಳುಗಳನ್ನು ಪ್ರವೇಶಿಸಿರಲಿಲ್ಲ. ಏನಾದರೂ ಮೊಳೆಗಳು ಕರಳುಗಳಲ್ಲಿ ಹೊಕ್ಕಿದ್ದರೆ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಕಷ್ಟವಾಗುತಿತ್ತು. ರೋಗಿಯ ಹೊಟ್ಟೆಯಿಂದ ಎಲ್ಲಾ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ಹೊರತೆಗೆಯುವುದಕ್ಕೆ ಒಂದೂವರೆ ಗಂಟೆ ಸಮಯ ಬೇಕಾಯ್ತು. ಅದರಲ್ಲಿ ಬಹುತೇಕ ಮೊಳೆಗಳು 6.5 ಸೆ.ಮೀ ಉದ್ದವಿತ್ತು ಎಂದು ತಿಳಿಸಿದರು.

    ಈ ಹಿಂದೆ ಕೂಡ ಇಂತಹ ಪ್ರಕರಣಗಳು ನಡೆದಿತ್ತು. ಕೋಲ್ಕತ್ತಾದಲ್ಲಿ ಸುಮಾರು 2.5 ಸೆ.ಮೀ ಉದ್ದದ ಕಬ್ಬಿಣದ ಮೊಳೆಗಳು ರೋಗಿಯೊಬ್ಬರ ಹೊಟ್ಟೆಯಲ್ಲಿ ಪತ್ತೆಯಾಗಿತ್ತು. ಅಲ್ಲದೆ 2017ರ ಜುಲೈನಲ್ಲಿ ಬುಂಡಿ ನಿವಾಸಿ ಭದ್ರಿಲಾಲ್(56) ಅವರ ದೇಹದಿಂದ ಬರೋಬ್ಬರಿ 150 ಸೂಜಿಗಳು ಹಾಗೂ ಮೊಳೆಗಳನ್ನು ಫರಿದಾಬಾದ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದರು.

  • ಕುಡಿದ ಮತ್ತಿನಲ್ಲಿ ಎಸಗಿದ್ದ ಭಯಾನಕ ತಪ್ಪಿಗೆ ಆತ್ಮಹತ್ಯೆಗೆ ಶರಣಾದ ತಂದೆ

    ಕುಡಿದ ಮತ್ತಿನಲ್ಲಿ ಎಸಗಿದ್ದ ಭಯಾನಕ ತಪ್ಪಿಗೆ ಆತ್ಮಹತ್ಯೆಗೆ ಶರಣಾದ ತಂದೆ

    ಜೈಪುರ: ತಂದೆಯೊಬ್ಬ 14 ವರ್ಷದ ಅಪ್ರಾಪ್ತ ಮಗಳ ಮೇಲೆ ಕುಡಿದ ಮತ್ತಿನಲ್ಲಿ ಅತ್ಯಾಚಾರ ಎಸಗಿ, ಒಂದು ವಾರದ ಬಳಿಕ ಶಿಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಉದಯ್‍ಪುರದಲ್ಲಿ ನಡೆದಿದೆ.

    ಮೃತ ವ್ಯಕ್ತಿ ಪ್ರತಾಪಗಡ್ ಜಿಲ್ಲೆಯ ಧರಿಯಾವಾಡ್ ಬ್ಲಾಕ್‍ನ ಸಿಹಾದ್ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಕಟ್ಟಿಗೆ ತರಲೆಂದು ಮಗಳನ್ನು ಕಾಡಿಗೆ ಕರೆದುಕೊಂಡು ಹೋಗಿದ್ದನು. ಕಾಡಿಗೆ ಹೋಗುವ ಮೊದಲೇ ಅತಿಯಾಗಿ ಕುಡಿದಿದ್ದು, ಬೆದರಿಕೆವೊಡ್ಡಿ ಮಗಳನ್ನೇ ಅತ್ಯಾಚಾರ ಮಾಡಿದ್ದಾನೆ. ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ತಾಯಿಯ ಬಳಿ ಹೇಳಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ತಾಯಿ ಈ ಬಗ್ಗೆ ಪತಿಯನ್ನು ಕೇಳಿದಾಗ ಆಕೆಗೂ ಬೆದರಿಕೆವೊಡ್ಡಿದ್ದು, ಮನೆಯಲ್ಲಿಯೇ ಇರುವಂತೆ ಕೂಡಿ ಹಾಕಿದ್ದಾನೆ. ನಂತರ ಮಹಿಳೆ ಮನೆಯಿಂದ ತಪ್ಪಿಸಿಕೊಂಡು ತನ್ನ ಸಹೋದರನ ಮನೆಗೆ ಹೋಗಿದ್ದಾರೆ. ಅಲ್ಲಿ ಪತಿಯ ಕೃತ್ಯದ ಬಗ್ಗೆ ತಿಳಿಸಿದ್ದು, ತಕ್ಷಣ ಈ ಕುರಿತು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಸದ್ಯಕ್ಕೆ ನಾವು ಸಂತ್ರಸ್ತೆ ತಾಯಿ ನೀಡಿದ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ಡೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇತ್ತ ಆರೋಪಿ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ ಆತನಿಗೆ ಎರಡು ದಿನಗಳಿಂದ ಪೊಲೀಸರು ಹುಡುಕಾಟ ಮಾಡುತ್ತಿದ್ದರು. ಆರೋಪಿ ಎರಡು ದಿನಗಳ ನಂತರ ತನ್ನ ಮನೆಗೆ ಹಿಂದಿರುಗಿ ಬಂದಿದ್ದಾನೆ. ಆದರೆ ಪೊಲೀಸರು ಬಂಧಿಸಲು ಹೋಗುವ ಮೊದಲೇ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು ಎಂದು ಇನ್ಸ್ ಪೆಕ್ಟರ್ ಭವಾನಿ ಸಿಂಗ್ ಹೇಳಿದ್ದಾರೆ.

    ಮೃತ ವ್ಯಕ್ತಿಯ ಪತ್ನಿ ಪೊಲೀಸರಿಗೆ ದೂರು ನೀಡಿದ ಬಳಿಕ ತಲೆಮರೆಸಿಕೊಂಡಿದ್ದನು. ಪೊಲೀಸರು ಮನೆಯೊಳಗೆ ಹೋದಾಗ ಆರೋಪಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಬಹುಶಃ ಅಪರಾಧ ಪಶ್ಚಾತ್ತಾಪದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಡಿವೈಎಸ್‍ಪಿ ಸುರೇಂದ್ರ ಕುಮಾವತ್ ಶಂಕೆ ವ್ಯಕ್ತಪಡಿಸಿದ್ದಾರೆ.

  • ಅತ್ತೆ, ನಾದಿನಿ ಕಾಟ ತಡೆಯಲಾರದೇ ನಗ್ನವಾಗಿ ಠಾಣೆಗೆ ಬಂದ ಮಹಿಳೆ!

    ಅತ್ತೆ, ನಾದಿನಿ ಕಾಟ ತಡೆಯಲಾರದೇ ನಗ್ನವಾಗಿ ಠಾಣೆಗೆ ಬಂದ ಮಹಿಳೆ!

    ಜೈಪುರ: ಅತ್ತೆ ಮತ್ತು ನಾದಿನಿಯ ಕಿರುಕುಳ ತಾಳಲಾರದೇ ಮಹಿಳೆಯೊಬ್ಬರು ನಗ್ನವಾಗಿಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಬಂದ ಮನಕಲಕುವ ಘಟನೆಯೊಂದು ರಾಜಸ್ಥಾನದ ಚಿರು ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಚುರು ಜಿಲ್ಲೆಯ ಬಿದಸರ್ ಪ್ರದೇಶದಲ್ಲಿ ನಡೆದಿದೆ. ಮಹಿಳೆ ಮಹಾರಾಷ್ಟ್ರದ ಅಕೋಲ ನಿವಾಸಿಯಾಗಿದ್ದು, ಮದುವೆಯ ಬಳಿಕ ಚುರುವಿನಲ್ಲಿ ಪತಿ ಜೊತೆ ನೆಲೆಸಿದ್ದರು. ಪತಿ ಅಸ್ಸಾಮಿನಲ್ಲಿ ಕಾರ್ಮಿಕರಾಗಿದ್ದಾರೆ. ಸದ್ಯ ಸಂತ್ರಸ್ತೆ ನೀಡಿದ ದೂರಿನಂತೆ ಎಫ್‍ಐಆರ್ ದಾಖಲಾಗಿದ್ದು, ಸಂಬಂಧಿಕರನ್ನು ಬಂಧಿಸಲಾಗಿದೆ.

    ಪತಿ ಮನೆಯಲ್ಲಿ ಇಲ್ಲದಾಗ ಸಂತ್ರಸ್ತೆಗೆ ಅತ್ತೆ, ಸೊಸೆ ಕಿರುಕುಳ ನೀಡುತ್ತಿದ್ದರು. ಇದೇ ವೇಳೆ ಅಲ್ಲಿದ್ದ ಇತರರು ಸಂತ್ರಸ್ತೆಗೆ ಸಹಾಯ ಮಾಡಲು ಬದಲು ತಮ್ಮ ಮೊಬೈಲ್ ನಲ್ಲಿ ಆಕೆಯ ಫೋಟೋ ಮತ್ತು ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗುತ್ತಿದ್ದರು.

    ಅತ್ತೆ ಹಾಗೂ ನಾದಿನಿ ಮಹಿಳೆ ಜೊತೆ ಕ್ಲುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ತಗಾದೆ ತೆಗೆದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಗಲಾಟೆ ತಾರಕಕ್ಕೇರಿ ಇಬ್ಬರು ಸೇರಿ ಸಂತ್ರಸ್ತೆಯ ಬಟ್ಟೆ ಬಿಚ್ಚಿದ್ದಾರೆ. ಇದರಿಂದ ನೊಂದ ಸಂತ್ರಸ್ತೆ ನಗ್ನವಾಗಿಯೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾರೆ.

    ಮಹಿಳೆಯನ್ನು ಕಂಡ ಪೊಲೀಸರು ಗಾಬರಿಯಾಗಿದ್ದು, ಆಕೆಗೆ ರಕ್ಷಣೆ ನೀಡಿ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈಕೆ ನಗ್ನವಾಗಿ ಪೊಲೀಸ್ ಠಾಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಸಿಕ್ಕವರು ತಮ್ಮ ಮೊಬೈಲ್ ನಲ್ಲಿ ಮಹಿಳೆಯ ಫೋಟೋ ಹಾಗೂ ವಿಡಿಯೋ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಎಸ್‍ಪಿ ಸೀತಾರಾಮ್ ತಿಳಿಸಿದ್ದಾರೆ.

    ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾದ ಸಂತ್ರಸ್ತೆಯ ದೃಶ್ಯವನ್ನು ಡಿಲೀಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಿಕ್ಕಿ ಹರಿದಾಡಬಾರದೆಂಬ ಉದ್ದೇಶದಿಂದ ಅದನ್ನು ಡಿಲೀಟ್ ಮಾಡಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದವರ ಹಾಗೂ ಆಕೆಯ ಫೋಟೋ ಹಾಗೂ ವಿಡಿಯೋ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‍ಪಿ ಎಚ್ಚರಿಕೆ ನೀಡಿದ್ದಾರೆ.

  • 6 ವರ್ಷಗಳ ನಂತರ ಪಾಕಿಸ್ತಾನದ ಜೈಲಿನಿಂದ ಯುವಕ ವಾಪಸ್!

    6 ವರ್ಷಗಳ ನಂತರ ಪಾಕಿಸ್ತಾನದ ಜೈಲಿನಿಂದ ಯುವಕ ವಾಪಸ್!

    ಜೈಪುರ: ಆರು ವರ್ಷಗಳ ಕಾಲ ಪಾಕಿಸ್ತಾನದ ಕರಾಚಿ ಜೈಲಿನಲ್ಲಿದ್ದ ರಾಜಸ್ಥಾನದ ಬುಂಡಿ ಜಿಲ್ಲೆಯ ಯುವಕ ಭಾರತಕ್ಕೆ ಮರಳಿದ್ದಾನೆ.

    ತನಗೆ ಗೊತ್ತಿಲ್ಲದೆ ಜೂಗ್ರಾಜ್ ಭೀಲ್ ಪಾಕಿಸ್ತಾನದ ಗಡಿಭಾಗವನ್ನು ದಾಟಿದ್ದ ಕಾರಣ ಆತನನ್ನು ಬಂಧಿಸಲಾಗಿತ್ತು. ಆರು ವರ್ಷದ ಜೈಲುವಾಸದ ನಂತರ ರಾಜಸ್ಥಾನದ ಬುಂಡಿ ಜಿಲ್ಲೆಯಾ ರಾಮ್‍ಪುರಿಯಗೆ ವಾಪಸ್ ಬಂದಿದ್ದಾನೆ.

    ಆರು ವರ್ಷಗಳ ಹಿಂದೆ ಕಾಡಿನಲ್ಲಿರುವ ರಾಮದೇವರ ಪ್ರಾರ್ಥನೆಗೆ ಎಂದು ಜೂಗ್ರಾಜ್ ಭೀಲ್ ಹೋಗಿದ್ದ. ದೇವಾಲಯದ ದರ್ಶನ ಮುಗಿಸಿ ಕಾಡಿನಿಂದ ವಾಪಸ್ ಬರುವಾಗ ದಾರಿ ತಪ್ಪಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ಪಾಕ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಕಳೆದ ವರ್ಷದ ಜೂನ್ ತಿಂಗಳವರೆಗೆ ಆತ ಎಲ್ಲಿದ್ದಾನೆ ಎಂಬ ಸುಳಿವು ಸಿಕ್ಕಿರಲಿಲ್ಲ. ಆದರೆ ಅವನು ಪಾಕಿಸ್ತಾನದ ಕರಾಚಿ ಜೈಲಿನಲ್ಲಿ ಇದ್ದಾನೆ ಎಂದು ತಿಳಿದ ಬುಂಡಿ ಜಿಲ್ಲೆಯ ಸ್ಥಳೀಯರು ಕೇಂದ್ರ ಸರ್ಕಾರಕ್ಕೆ ಆತನನ್ನು ಬಿಡುಗಡೆ ಮಾಡಿಸುವಂತೆ ಒತ್ತಾಯ ಮಾಡಿದ್ದರು.

    ಅದರಂತೆ ಭಾರತ ಸರ್ಕಾರ ಜೂಗ್ರಾಜ್‍ನನ್ನು ಬಿಡುಗಡೆ ಮಾಡಿಸಿದೆ. ಸಾಮಾಜಿಕ ಕಾರ್ಯಕರ್ತ ಧರ್ಮೇಶ್ ಯಾದವ್ ಮತ್ತು ಜೂಗ್ರಾಜ್ ಭೀಲ್ ಅಣ್ಣ ಬಾಬುಲಾಲ್ ಭೀಲ್ ಅವರು ವಾಘಾ ಗಡಿಯಿಂದ ಆತನನ್ನು ಕರೆದುಕೊಂಡು ಬಂದಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಧರ್ಮೇಶ್ ಯಾದವ್ ಅವರು, ವಾಘಾ ಗಡಿಗೆ ಬಂದ ಜೂಗ್ರಾಜ್ ಕೇವಲ ಅಣ್ಣನನ್ನು ಮಾತ್ರ ಗುರುತಿಸಿದ್ದ. ಆತ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮನೆಗೆ ಬಂದು 2 ದಿನವಾದರೂ ಒಂದು ಮಾತನ್ನು ಮಾತನಾಡಿರಲಿಲ್ಲ. ಈಗ ಸ್ವಲ್ಪ ಸುಧಾರಿಸಿದ್ದಾನೆ. ಆತ ಕ್ಷೇಮವಾಗಿ ಮರಳಿ ಬಂದಿರುವುದು ದೇವರ ಆಶೀರ್ವಾದ ಎಂದು ಹೇಳಿದ್ದಾರೆ.

  • ಕ್ಯಾನ್ಸರ್ ಪೀಡಿತ ಅಪ್ಪಟ ಅಭಿಮಾನಿಯಿಂದ ನಟ ಅಜಯ್ ದೇವಗನ್‍ಗೆ ಮನವಿ

    ಕ್ಯಾನ್ಸರ್ ಪೀಡಿತ ಅಪ್ಪಟ ಅಭಿಮಾನಿಯಿಂದ ನಟ ಅಜಯ್ ದೇವಗನ್‍ಗೆ ಮನವಿ

    ಜೈಪುರ: ಸಮಾಜದ ಏಳಿಗೆಗೋಸ್ಕರ ದಯಮಾಡಿ ತಂಬಾಕು ಉತ್ಪನ್ನದ ಬಗ್ಗೆ ಜಾಹೀರಾತು ನೀಡಬೇಡಿ ಎಂದು ಕಟ್ಟ ಅಭಿಮಾನಿಯೊಬ್ಬರು ಬಾಲಿವುಡ್ ನಟ ಅಜಯ್ ದೇವಗನ್ ಬಳಿ ಮನವಿ ಮಾಡಿದ್ದಾರೆ.

    ಅಭಿಮಾನಿಯಾಗಿರುವ 40 ವರ್ಷದ ನನಕ್ರಮ್ ಜಾಹೀರಾತುಗಳಲ್ಲಿ ಅಭಿನಯಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೂಲತಃ ರಾಜಸ್ಥಾನದವರಾಗಿರುವ ಇವರು ಜೈಪುರದ ಸಂಗನೆರ್ ಪಟ್ಟಣದಲ್ಲಿ ವಾಸವಾಗಿದ್ದು, ಸದ್ಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

    ನನಕ್ರಮ್ ಅವರು ಅಜಯ್ ದೇವಗನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ನಟ ನೀಡುತ್ತಿರುವ ತಂಬಾಕು ಜಾಹೀರಾತು ನೋಡಿ ಅದನ್ನು ಪ್ರತಿನಿತ್ಯ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಇದು ಅವರ ದೇಹದ ಮೇಲೆ ಪರಿಣಾಮ ಬೀರಿದೆ ಎಂದು ರೋಗಿಯ ಕುಟುಂಬಸ್ಥರು ತಿಳಿಸಿದ್ದಾರೆ.

    ನಟ ದೇವಗನ್ ಅವರು ಜಾಹೀರಾತು ನೀಡುತ್ತಿರುವ ತಂಬಾಕನ್ನೇ ಕಳೆದ ಕೆಲ ವರ್ಷಗಳ ಹಿಂದೆಯಿಂದ ನನ್ನ ತಂದೆ ಸೇವನೆ ಮಾಡಲು ಆರಂಭಿಸಿದ್ದಾರೆ. ದೇವಗನ್ ಅವರು ನೀಡುತ್ತಿರುವ ಜಾಹೀರಾತಿನಿಂದ ತಂದೆ ಪ್ರಭಾವಿತರಾಗಿದ್ದರು. ಆದರೆ ಇದೀಗ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹೀಗಾಗಿ ಒಬ್ಬ ದೊಡ್ಡ ನಟ ಮನುಷ್ಯನ ಜೀವನಕ್ಕೆ ಕುತ್ತು ತರುವಂತಹ ಜಾಹೀರಾತುಗಳನ್ನು ನೀಡಿ ಜನರನ್ನು ಪ್ರೇರೇಪಣೆಗೊಳಿಸಬಾರದು ಅಂತ ತಂದೆ ಹೇಳುತ್ತಿದ್ದಾರೆಂದು ಮಗ ದಿನೇಶ್ ಮೀನಾ ತಿಳಿಸಿದ್ದಾರೆ.

    ಮದ್ಯಪಾನ, ಸಿಗರೇಟ್ ಹಾಗೂ ತಂಬಾಕು ಮನುಷ್ಯನ ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಹೀಗಾಗಿ ಕುತ್ತು ತರುವಂತಹ ಉತ್ಪನ್ನಗಳ ಜಾಹೀರಾತುಗಳನ್ನು ನಟರು ಕೊಡಬಾರದೆಂದು ನನಕ್ರಮ್ ಮೀನಾ ಮನವಿ ಮಾಡಿಕೊಂಡಿದ್ದಾರೆ.

    ಒಟ್ಟಿನಲ್ಲಿ ಇಬ್ಬರು ಮಕ್ಕಳ ತಂದೆಯಾಗಿರುವ ನನಕ್ರಮ್ ಅವರು ಟೀ ಸ್ಟಾಲ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಅವರು ಕ್ಯಾನ್ಸರ್ ರೋಗಿಯಾಗಿದ್ದು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.

  • ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

    ವಿಶ್ವಕಪ್ ನೋವು ಇನ್ನು ದೂರವಾಗಿಲ್ಲ: ರಿಷಬ್ ಪಂತ್

    – ಅಂಕ ಪಟ್ಟಿಯಲ್ಲಿ ಡೆಲ್ಲಿ ನಂ.1

    ಜೈಪುರ: 2019ರ ವಿಶ್ವಕಪ್ ಟೂರ್ನಿಗೆ ತಮ್ಮನ್ನು ಕೈಬಿಟ್ಟ ಪ್ರಕ್ರಿಯೆ ನೋವು ಇನ್ನು ದೂರವಾಗಿಲ್ಲ ಎಂದು ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಹೇಳಿದ್ದಾರೆ.

    ಡೆಲ್ಲಿ ಕ್ಯಾಪಿಟಲ್, ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ 36 ಎಸೆತಗಳಲ್ಲಿ ಸ್ಫೋಟಕ 78 ರನ್ (36 ಎಸೆತ, 8 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡ 6 ವಿಕೆಟ್ ಗೆಲುವು ಪಡೆಯಲು ಪಂತ್ ಕಾರಣರಾಗಿದ್ದರು.

    ಪಂದ್ಯದ ಬಳಿಕ ಮಾತನಾಡಿದ ಪಂತ್, ಇಂದಿನ ಪ್ರದರ್ಶನ ನನಗೆ ಖುಷಿ ತಂದಿದೆ. ತಂಡಕ್ಕೆ ಈ ಪಂದ್ಯ ಬಹುಮುಖ್ಯವಾದದ್ದು ಎಂಬ ಅರಿವು ನನಗಿತ್ತು. ಆದರೆ ನಾನು ಸುಳ್ಳು ಹೇಳಲು ಬಯಸುವುದಿಲ್ಲ. ಈಗಲೂ ವಿಶ್ವಕಪ್ ಆಯ್ಕೆ ಪ್ರಕ್ರಿಯೆಯ ನೋವು ನನ್ನ ಮನಸ್ಸಿನಲ್ಲಿದೆ ಎಂದರು.

    ರಾಜಸ್ಥಾನ್ ರಾಯಲ್ಸ್ ಮಾಜಿ ನಾಯಕ ರಹಾನೆ ಶತಕ (105 ರನ್, 63 ಎಸೆತ, 11 ಬೌಂಡರಿ, 3 ಸಿಕ್ಸರ್)ದ ನೆರವಿನಿಂದ ಡೆಲ್ಲಿಗೆ 192 ರನ್ ಟಾರ್ಗೆಟ್ ನೀಡಿತ್ತು. ಡೆಲ್ಲಿ ಪರ ರಿಷಬ್ ಪಂತ್ 78 ರನ್, ಪೃಥ್ವಿ ಶಾ 42 ರನ್, ಅನುಭವಿ ಆಟಗಾರ ಶಿಖರ್ ಧವನ್ 54 ರನ್‍ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ 4 ಎಸೆತ ಬಾಕಿ ಇರುವಂತೆಯೇ ಗೆಲುವು ಪಡೆಯಿತು. ರಿಷಬ್ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದರು.

    ಈ ಬಾರಿಯ ವಿಶ್ವಕಪ್ ಆಯ್ಕೆ ಪ್ರಕ್ರಿಯೆಲ್ಲಿ ರಿಷಬ್ ಪಂತ್ ಕೈ ಬಿಟ್ಟು ದಿನೇಶ್ ಕಾರ್ತಿಕ್‍ರನ್ನು ಆಯ್ಕೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

    https://twitter.com/cricketfeverrr/status/1120396549115338752

    ಡೆಲ್ಲಿ ಸಾಧನೆ: ಇತ್ತ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಡೆಲ್ಲಿ ತಂಡದ ಯುವ ನಾಯಕ ಶ್ರೇಯಸ್ ಅಯ್ಯರ್ ತಂಡದ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಈ ಬಾರಿ ಹೆಸರು ಬದಲಿಸಿಕೊಂಡು ಕಣಕ್ಕೆ ಇಳಿದಿತ್ತು. ಆರಂಭದಿಂದಲೂ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿರುವ ಯಂಗ್ ಕ್ಯಾಪ್ಟನ್ ನೇತೃತ್ವದ ತಂಡ ಅಂಕಪಟ್ಟಿಯಲ್ಲಿ ಮೊಲದ ಸ್ಥಾನ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ 10 ಪಂದ್ಯದಲ್ಲಿ 14 ಅಂಕಗಳಿಸಿ 2ನೇ ಸ್ಥಾನ ಪಡೆದಿದ್ದು, 11 ಪಂದ್ಯಗಳಿಂದ ಡೆಲ್ಲಿ 14 ಅಂಕ ಪಡೆದಿದೆ. ಕಳೆದ 11 ಆವೃತ್ತಿ ಗಳಲ್ಲಿ ಡೆಲ್ಲಿ ಮೊದಲ ಸ್ಥಾನವನ್ನು ಪಡೆದಿರಲಿಲ್ಲ.

    ಡೆಲ್ಲಿ ತಂಡದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಗ್ಗೆ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ. ಡೆಲ್ಲಿ ನಂ.1 ಸ್ಥಾನ ಪಡೆದಿರುವುದನ್ನು ನಂಬಲು ಆಗುತ್ತಿಲ್ಲ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಈ ಹಿಂದೆ ಡೆಲ್ಲಿ ವಾಯಮಾಲಿನ್ಯದಲ್ಲಿ ನಂ.1 ಪಟ್ಟ ಪಡೆದಿತ್ತು, ಆದರೆ ಈಗ ಐಪಿಎಲ್ ನಲ್ಲಿ ನಂ.1 ಎಂದರೆ ಅಚ್ಚರಿ ತಂದಿದೆ ಎಂದು ಕಾಲೆಳೆದಿದ್ದಾರೆ.

  • ಮದ್ವೆಯಾಗಿ ಪತಿಯ ಮನೆಗೆ ಹೋಗುತ್ತಿದ್ದ ವರನ ಕಾರಿನಲ್ಲೇ ವಧು ಕಿಡ್ನಾಪ್

    ಮದ್ವೆಯಾಗಿ ಪತಿಯ ಮನೆಗೆ ಹೋಗುತ್ತಿದ್ದ ವರನ ಕಾರಿನಲ್ಲೇ ವಧು ಕಿಡ್ನಾಪ್

    ಜೈಪುರ: ಮದುವೆಯಾಗಿ ಪತಿಯ ಮನೆಗೆ ಹೋಗುತ್ತಿದ್ದ ನವವಿವಾಹಿತೆಯನ್ನು ಅಪರಿಚಿತ ದುಷ್ಕರ್ಮಿಗಳು ಕಾರಿನಿಂದಲೇ ಅಪಹರಿಸಿರುವ ಘಟನೆ ರಾಜಸ್ಥಾನದ ಸಿಖರ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಎಸ್‍ಪಿ ಅಮರ್ ಪಾಲ್ ಸಿಂಗ್ ಕಪೂರ್ ಅವರ ಕಚೇರಿಗೆ ಜನರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ಅವರಿಗೆ ಸಮಾಧಾನ ಮಾಡಿ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.

    ಘಟನೆ ವಿವರ:
    ನಾಗಾ ಗ್ರಾಮದ ಗಿರಿಧಾರಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರಿಬ್ಬರಿಗೂ ಒಂದೇ ದಿನ ಮದುವೆ ನಿಶ್ಚಯ ಮಾಡಿದ್ದರು. ಅದರಂತೆಯೇ ಮದುವೆ ಮಾಡಿ ಅವರನ್ನು ತಮ್ಮ ಅತ್ತೆ ಮನೆಗೆ ಪತಿಯ ಕಾರಿನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಆದರೆ ಅವರು ಪತಿಯ ಮನೆಗೆ ಹೋಗುವ ಮೊದಲೇ ಮಾರ್ಗ ಮಧ್ಯೆ ಎರಡು ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರಿನ ಸುತ್ತ ಸುತ್ತುವರಿದಿದ್ದು, ರಾಡ್‍ನಿಂದ ದಾಳಿ ಮಾಡಿದ್ದಾರೆ. ಮೊದಲು ಅವರು ದರೋಡೆಕೋರರು ಎಂದು ತಿಳಿದ ಭಯದಿಂದ ಕಾರಿನ ಬಾಗಿಲು ತೆರೆಯಲಿಲ್ಲ. ಆದರೆ ದುಷ್ಕರ್ಮಿಗಳು ಶಸ್ತ್ರಾಸ್ತಗಳನ್ನು ತೋರಿಸಿ ನವವಿವಾಹಿತೆಯರನ್ನು ಬೆದರಿಸಿ ಬಲವಂತವಾಗಿ ಕಾರಿನ ಬಾಗಿಲು ತೆಗೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ದುಷ್ಕರ್ಮಿಗಳು ಇಬ್ಬರಲ್ಲಿ ಓರ್ವ ನವ ವಿವಾಹಿತೆಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಇಬ್ಬರು ವರರಿಗೆ ಮತ್ತು ಮತ್ತೊಬ್ಬ ಸಹೋದರಿಗೆ ಗಾಯವಾಗಿದೆ. ತಕ್ಷಣ ಸಹೋದರಿ ಪೋಷಕರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಪೋಷಕರಿಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಬಿಎಸ್‍ಪಿ ಮುಖಂಡ ರಾಜೇಂದ್ರ ಗುದಾ ಅವರ ಸಹಾಯ ಪಡೆದು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

    ಈ ಘಟನೆ ರಾಜಕೀಯ ಪ್ರೇರಿತವಾಗಿದ್ದು, ನಮ್ಮ ಸಮುದಾಯದ ಹುಡುಗಿಯನ್ನು ಅಪಹರಣ ಮಾಡಿದವರನ್ನು ಕೂಡಲೇ ಬಂಧಿಸಿ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ವಿವಾಹಿತೆ ಸುರಕ್ಷಿತವಾಗಿ ಮನೆಗೆ ಹಿಂದಿರುಗಿ ಬಂದಿಲ್ಲ ಎಂದರೆ ಠಾಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರಾಜೇಂದ್ರ ಗುದಾ ಬೆದರಿಕೆ ಕೂಡ ಹಾಕಿದ್ದಾರೆ.

    ಅಷ್ಟೇ ಅಲ್ಲದೇ ನಮ್ಮ ಸಮುದಾಯದ ಹುಡುಗಿಯನ್ನು ಕಿಡ್ನಾಪ್ ಮಾಡಲಾಗಿದೆ. ಆಕೆಗೆ ಯಾವುದೇ ತೊಂದರೆ ಆಗದೇ ಕ್ಷೇಮವಾಗಿ ವಾಪಸ್ ಬರಬೇಕು. ಇಲ್ಲವಾದರೆ ಲೋಕಸಭಾ ಚುನಾವಣೆ ಮತದಾನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ರಾಜೇಂದ್ರ ಗುದಾ ಹೇಳಿದ್ದಾರೆ.

    ಸದ್ಯಕ್ಕೆ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಈ ಘಟನೆ ಸಂಬಂಧಿಸಿದಂತೆ ಅನುಮಾನದ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಆದರೆ ಇದುವರೆಗೂ ನವವಿವಾಹಿತೆ ಪತ್ತೆಯಾಗಿಲ್ಲ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.