Tag: Jaipur

  • ಸಂಚಾರಿ ನಿಯಮ ಉಲ್ಲಂಘನೆ- 1.41 ಲಕ್ಷ ದಂಡ ಕಟ್ಟಿದ ಲಾರಿ ಚಾಲಕ

    ಸಂಚಾರಿ ನಿಯಮ ಉಲ್ಲಂಘನೆ- 1.41 ಲಕ್ಷ ದಂಡ ಕಟ್ಟಿದ ಲಾರಿ ಚಾಲಕ

    ಜೈಪುರ್: ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ವಾಹನ ಸವಾರರು ದುಬಾರಿ ದಂಡ ಕಟ್ಟಲು ಪರದಾಡುತ್ತಿದ್ದು, ರಾಜಸ್ಥಾನದ ಲಾರಿ ಚಾಲಕನೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿ ಬರೋಬ್ಬರಿ 1.41 ಲಕ್ಷ ರೂ. ದಂಡ ಕಟ್ಟಿದ್ದಾನೆ.

    ಹೌದು. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಭಾರೀ ಮೊತ್ತದ ದಂಡವನ್ನು ಹಾಕಲಾಗುತ್ತದೆ. ಈ ಹಿಂದೆ ಒಡಿಶಾದಲ್ಲಿ ಲಾರಿ ಚಾಲಕರೊಬ್ಬರಿಗೆ 86,000 ರೂ. ದಂಡ ಹಾಕಿದ್ದು ದೇಶದಲ್ಲಿಯೇ ದುಬಾರಿ ದಂಡ ಎನ್ನಲಾಗಿತ್ತು. ಆದರೆ ಈಗ ರಾಜಸ್ಥಾನದಲ್ಲಿ ಲಾರಿ ಚಾಲಕನೊಬ್ಬ ಸಂಚಾರ ನಿಯಮ ಉಲ್ಲಂಘನೆ ಮಾಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಬರೋಬ್ಬರಿ 1,41,700 ರೂ. ದಂಡ ಕಟ್ಟಿದ್ದಾನೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಬಂದ ಬಳಿಕ ಇದು ದೇಶದಲ್ಲಿಯೇ ದುಬಾರಿ ಮೊತ್ತದ ದಂಡ ಎಂದು ಹೇಳಲಾಗಿದೆ. ಇದನ್ನೂ ಓದಿ:ಸ್ಲಿಪ್ಪರ್ ಹಾಕಿ ಬೈಕ್ ಓಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ಈ ಲಾರಿ ಚಾಲಕ ಓವರ್ ಲೋಡ್ ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದು, ಸಂಚಾರಿ ಪೊಲೀಸರು 1,41,700 ರೂ. ದಂಡ ಹಾಕಿದ್ದಾರೆ. ಆತ ಕೋರ್ಟಿಗೆ ಹಾಜರಾಗಿ ಈ ದಂಡವನ್ನು ಕಟ್ಟಿದ್ದಾನೆ ಎಂದು ಮೂಲಗಳು ತಿಳಿಸಿದೆ.

    ಇತ್ತೀಚೆಗೆ ಉತ್ತರ ಪ್ರದೇಶದ ಆಲಿಘರ್‍ನಲ್ಲಿ ಟ್ರಾಫಿಕ್ ಪೊಲೀಸರು ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು, ಆ ಚಾಲಕ ಹೆಲ್ಮೆಟ್ ಹಾಕಿಕೊಂಡೇ ಕಾರು ಚಲಾಯಿಸುತ್ತಿರುವ ಪ್ರಕರಣ ಕೂಡ ಸಖತ್ ಸುದ್ದಿಯಾಗಿತ್ತು. ಆಲಿಘರ್‍ನ ಪಿಯುಷ್ ವಶ್ರ್ನಿ ಅವರು ಕಾರಿನಲ್ಲಿ ಹೆಲ್ಮೆಟ್ ಹಾಕದಿದ್ದಕ್ಕೆ ದಂಡ ಕಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಗಸ್ಟ್ 27ರಂದು ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲವೆಂದು ಟ್ರಾಫಿಕ್ ಪೊಲೀಸರು ನನಗೆ 500 ರೂ. ದಂಡ ವಿಧಿಸಿ, ಇ-ಚಲನ್ ನೀಡಿದ್ದರು. ಇ-ಚಲನ್‍ನಲ್ಲಿ ನನ್ನ ಕಾರಿನ ಸಂಖ್ಯೆ ಇತ್ತು. ಆದ್ದರಿಂದ ಮತ್ತೆ ದಂಡ ಹಾಕಬಹುದೆಂಬ ಭಯದಿಂದ ನಾನು ಹೆಲ್ಮೆಟ್ ಹಾಕಿಕೊಂಡೇ ಕಾರು ಒಡಿಸುತ್ತಿದ್ದೇನೆ ಎಂದು ಹೇಳಿದ್ದರು.  ಇದನ್ನೂ ಓದಿ:ಸಂಚಾರ ನಿಯಮ ಉಲ್ಲಂಘಿಸಿ 86,500 ರೂ. ದಂಡ ತೆತ್ತ ಲಾರಿ ಚಾಲಕ

    ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ಸಂಚಾರಿ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಇ-ಚಲನ್ ಮೇಲೆ ತನ್ನ ಕಾರಿನ ಸಂಖ್ಯೆ ಇದೆ ಎಂದು ಪಿಯೂಷ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಂಚಾರಿ ಪೊಲೀಸರಿಂದ ಎಡವಟ್ಟಾಗಿದ್ದು, ಚಲನ್ ಪರಿಶೀಲನೆ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದರು.

  • ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ರಷ್ಯಾ ಯುವಕನ ಗೆಳೆತನ

    ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ರಷ್ಯಾ ಯುವಕನ ಗೆಳೆತನ

    – ರಾಜಸ್ಥಾನಕ್ಕೆ ಬಂದು ಅತ್ಯಾಚಾರಗೈದು ಪರಾರಿ

    ಜೈಪುರ: ರಷ್ಯಾ ಯುವಕನೊಬ್ಬ ಅಪ್ರಾಪ್ತೆ ಜೊತೆ ಫೇಸ್‍ಬುಕ್‍ನಲ್ಲಿ ಗೆಳೆತನ ಮಾಡಿಕೊಂಡು ಬಳಿಕ ಆಕೆ ಇರುವ ಸ್ಥಳಕ್ಕೆ ಬಂದು ಅತ್ಯಾಚಾರ ಮಾಡಿ ಪರಾರಿಯಾದ ಘಟನೆ ರಾಜಸ್ಥಾನದ ದುಂಗರಪುರ ಜಿಲ್ಲೆಯ ಸಾಗ್ವಾರಾದಲ್ಲಿ ನಡೆದಿದೆ.

    ಆರೋಪಿ ಮೂಲತಃ ರಾಜಸ್ಥಾನದವನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ರಷ್ಯಾಗೆ ತೆರಳಿದ್ದನು. ಈ ವೇಳೆ ಆರೋಪಿ ಅಪ್ರಾಪ್ತೆಯನ್ನು ಫೇಸ್‍ಬುಕ್‍ನಲ್ಲಿ ಫ್ರೆಂಡ್ ಮಾಡಿಕೊಂಡಿದ್ದಾನೆ. ಬಳಿಕ ಇಬ್ಬರು ಪರಸ್ಪರ ಇಷ್ಟಪಡಲು ಶುರು ಮಾಡಿದ್ದು, ಮದುವೆ ಆಗಲು ನಿರ್ಧರಿಸಿದ್ದರು.

    ನನ್ನನ್ನು ಮದುವೆ ಆಗಲು ಆತ ಸಾಗ್ವಾರಾಕ್ಕೆ ಬಂದಿದ್ದು, ಭೇಟಿ ಮಾಡಲು ಹತ್ತಿರದ ಹೋಟೆಲಿನಲ್ಲಿ ರೂಂ ಬುಕ್ ಮಾಡಿದ್ದನು. ಬಳಿಕ ಮದುವೆ ಆಗುತ್ತೇನೆ ಎಂದು ಸುಳ್ಳು ಭರವಸೆ ನೀಡಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಆರೋಪಿ ಅತ್ಯಾಚಾರ ಮಾಡಿದ ನಂತರ ರಷ್ಯಾಗೆ ಪರಾರಿ ಆಗಿದ್ದಾನೆ. ಅಲ್ಲಿ ಆರೋಪಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಸದ್ಯ ಆತನ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಅಪ್ರಾಪ್ತೆ ಮೊದಲು ಆರೋಪಿಯನ್ನು ಫೇಸ್‍ಬುಕ್ ಫ್ರೆಂಡ್ ಮಾಡಿಕೊಂಡಿದ್ದಳು. ಬಳಿಕ ಫೇಸ್‍ಬುಕ್ ಅಲ್ಲದೆ ಕಳೆದ ಒಂದು ವರ್ಷದಿಂದ ಆರೋಪಿ ಜೊತೆ ಇನ್‍ಸ್ಟಾಗ್ರಾಂ ಹಾಗೂ ವಾಟ್ಸಾಪ್‍ನಲ್ಲಿ ಚಾಟಿಂಗ್ ಮಾಡುತ್ತಿದ್ದಳು ಎಂಬ ವಿಷಯ ತನಿಖೆ ವೇಳೆ ತಿಳಿದು ಬಂದಿದೆ.

    ಅಲ್ಲದೆ ಆರೋಪಿ ಮುಂದಿನ ಬಾರಿ ಭಾರತಕ್ಕೆ ಬಂದಾಗ ಮದುವೆ ಆಗುತ್ತೇನೆ ಎಂದು ಹೇಳಿ ಅತ್ಯಾಚಾರ ಮಾಡಿದ್ದಾನೆ. ರಷ್ಯಾಗೆ ತೆರಳುತ್ತಿದ್ದಂತೆ ಆರೋಪಿ ಸಂತ್ರಸ್ತೆ ಜೊತೆಗಿನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿದ್ದಾನೆ. ಹೀಗಾಗಿ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸುವಂತೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿಕೊಂಡಿದ್ದಾರೆ.

  • ಪತ್ನಿಯನ್ನು ಅತ್ಯಾಚಾರಗೈದ ಆರೋಪಿ ಮೇಲೆ ಆ್ಯಸಿಡ್ ಎಸೆದ ಪತಿ

    ಪತ್ನಿಯನ್ನು ಅತ್ಯಾಚಾರಗೈದ ಆರೋಪಿ ಮೇಲೆ ಆ್ಯಸಿಡ್ ಎಸೆದ ಪತಿ

    ಜೈಪುರ: ಪತ್ನಿಯನ್ನು ಅತ್ಯಾಚಾರ ಮಾಡಿದ ಆರೋಪಿ ಮೇಲೆ ಪತಿ ಆ್ಯಸಿಡ್ ದಾಳಿ ಮಾಡಿದ ಘಟನೆ ರಾಜಸ್ಥಾನದ ಅಜ್ಮೇರ್ ನಲ್ಲಿ ನಡೆದಿದೆ.

    ಸಂಜಯ್ ಅರೆಸ್ಟ್ ಆದ ಪತಿ. ಸಂಜಯ್ ಹಾಗೂ ಆರೋಪಿ ಖಿನ್ವರಾಜ್ ಇಬ್ಬರು ಸ್ನೇಹಿತರು. ಕಳೆದ ವರ್ಷ ಸಂಜಯ್ ಪತ್ನಿ ಖಿನ್ವರಾಜ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ನ್ಯಾಯಾಲಯಕ್ಕೆ ಹಾಜರಾದ ಬಳಿಕ ಇಬ್ಬರ ನಡುವೆ ಜಗಳವಾಯಿತು.

    ಜಗಳವಾದ ಬಳಿಕ ಅಲ್ಲಿಂದ ಹೊರಟು ಹೋದ ಖಿನ್ವರಾಜ್ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ನಿಂತಿದ್ದನು. ಈ ವೇಳೆ ಸಂಜಯ್ ಆತನನ್ನು ಹಿಂಬಾಲಿಸಿ ಏಕಾಏಕಿ ಆತನ ಮೇಲೆ ಆ್ಯಸಿಡ್ ಹಾಕಿದ್ದಾನೆ. ಆ್ಯಸಿಡ್ ಎಸೆದಿದ್ದಕ್ಕೆ ಪೊಲೀಸರು ಸಂಜಯ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಈ ಘಟನೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಜಯ್ ಆ್ಯಸಿಡ್ ಬಾಟಲ್‍ನ ಕ್ಯಾಪ್ ತೆರೆಯುತ್ತಿರುವುದು ಕಂಡ ಖಿನ್ವರಾಜ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ಸಂಜಯ್ ಆ್ಯಸಿಡ್ ಅನ್ನು ಆತನ ಮೇಲೆ ಎಸೆದಿದ್ದಾನೆ.

    ಆ್ಯಸಿಡ್ ಬಿದ್ದ ಕಾರಣ ಖಿನ್ವರಾಜ್ ಬೆನ್ನಿಗೆ ಗಂಭೀರ ಗಾಯವಾಗಿದ್ದು, ಪೆಟ್ರೋಲ್ ಬಂಕ್‍ನಲ್ಲಿದ್ದ ಜನರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಖಿನ್ವರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಕಮಾಂಡೋ ಲುಕ್‍ನಲ್ಲಿ ಧೋನಿ ಮಿಂಚಿಂಗ್

    ಕಮಾಂಡೋ ಲುಕ್‍ನಲ್ಲಿ ಧೋನಿ ಮಿಂಚಿಂಗ್

    ಜೈಪುರ್: ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿದಿದ್ದರೂ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಸುದ್ದಿಯಾಗುತ್ತಲ್ಲೇ ಇದ್ದಾರೆ. ಭಾರತೀಯ ಸೇನೆಯೊಂದಿಗೆ 15 ದಿನಗಳ ಕಾಲ ಕಾರ್ಯನಿರ್ವಹಿಸಿ ದೆಹಲಿಗೆ ವಾಪಸ್ ಆಗಿದ್ದಾರೆ.

    ಎಂ.ಎಸ್.ಧೋನಿ ಇತ್ತೀಚೆಗಷ್ಟೇ ಜಾಹೀರಾತು ಚಿತ್ರೀಕರಣ ವೇಳೆ ಕಾಣಿಸಿಕೊಂಡಿದ್ದರು. ಸದ್ಯ ಕಮಾಂಡೋ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

    https://www.instagram.com/p/B1lEVq3AeAk/?utm_source=ig_embed

    ಕಾರ್ಯಕ್ರಮದ ಧೋನಿ ನಿಮಿತ್ತ ಶನಿವಾರ ಜೈಪುರಕ್ಕೆ ಭೇಟಿ ನೀಡಿದ್ದರು. ವಿಮಾನ ನಿಲ್ದಾಣದಲ್ಲಿ ಧೋನಿ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ಕಿಕ್ಕಿಸಿಕೊಳ್ಳು ಮುಗಿಬಿದ್ದರು. ಕೆಲವರು ತಮ್ಮ ಮೊಬೈಲ್‍ನಲ್ಲಿ ಧೋನಿಯ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಸೈನಿಕನಂತೆ ಧೋನಿ ತಲೆಗೆ ಕಪ್ಪು ಬಟ್ಟೆಯನ್ನು ಧರಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರು ಜೈಪುರದಲ್ಲಿ ಸುಮಾರು ಆರು ಗಂಟೆಗಳ ಕಾಲ ಇದ್ದರು. ಈ ಸಮಯದಲ್ಲಿ ಅವರು ಕುಕುಸ್‍ನ ಹೋಟೆಲ್‍ನಲ್ಲಿ ತಂಗಿದ್ದರು. ನಂತರ ಸಂಜೆ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

    https://www.instagram.com/p/B1ihLwcgA6p/

    ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ಧೋನಿ 2 ತಿಂಗಳ ವಿರಾಮ ತೆಗೆದುಕೊಂಡಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅವರು ಅಲಭ್ಯವಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ, ಲೆಫ್ಟಿನೆಂಟ್ ಕರ್ನಲ್ ಧೋನಿ ಅವರನ್ನು ಜುಲೈ 30ರಿಂದ ಆಗಸ್ಟ್ 15 ರವರೆಗೆ ಕಾಶ್ಮೀರದ ಭಯೋತ್ಪಾದನಾ ನಿಗ್ರಹ ಘಟಕದಲ್ಲಿ ನೇಮಿಸಲಾಗಿತ್ತು. ಅವರು ಪ್ಯಾರಾ ಕಮಾಂಡೋಗಳ ಬೆಟಾಲಿಯನ್‍ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ಧೋನಿ, ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದು ದೊಡ್ಡ ಸುದ್ದಿಯಾಗಿತ್ತು.

  • ಮತ್ತು ಬರೋ ಜ್ಯೂಸ್ ಕೊಟ್ಟು ಕಾಂಪೌಂಡರ್ ರೇಪ್ – ವಿಡಿಯೋ ನೋಡಿದ್ದೇವೆಂದು ಮತ್ತಿಬ್ಬರು ಗ್ಯಾಂಗ್‍ರೇಪ್

    ಮತ್ತು ಬರೋ ಜ್ಯೂಸ್ ಕೊಟ್ಟು ಕಾಂಪೌಂಡರ್ ರೇಪ್ – ವಿಡಿಯೋ ನೋಡಿದ್ದೇವೆಂದು ಮತ್ತಿಬ್ಬರು ಗ್ಯಾಂಗ್‍ರೇಪ್

    ಜೈಪುರ್: ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮೇಲೆ ಆಸ್ಪತ್ರೆಯ ಮೂವರು ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.

    ಆಸ್ಪತ್ರೆಯ ಕಾಂಪೌಂಡರ್ ಅಶೋಕ್, ವೈದ್ಯ ಡಾ.ಸುರೇಂದ್ರ ಮಹರ್ಷಿ ಮತ್ತು ಆತನ ಸಹೋದರ ಮೂವರೂ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದರು. ಸಂತ್ರಸ್ತೆಯ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆಗೆ ಮದುವೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ರಾತ್ರಿ ಸಹೋದ್ಯೋಗಿ ಅಶೋಕ್ ಆಕೆಯ ರೂಮಿಗೆ ಬಂದು ಒಂದು ಗ್ಲಾಸ್ ಜ್ಯೂಸ್ ಕೊಟ್ಟಿದ್ದಾನೆ. ಅದನ್ನು ಕುಡಿದು ಸಂತ್ರಸ್ತೆ ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ಆರೋಪಿ ಕಾಂಪೌಂಡರ್ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು. ಆ ವಿಡಿಯೋ ಮೂಲಕ ಸಂತ್ರಸ್ತೆಗೆ ಬ್ಲ್ಯಾಕ್‍ಮೇಲ್ ಮಾಡಿ ನಿರಂತರವಾಗಿ ರೇಪ್ ಮಾಡುತ್ತಿದ್ದನು.

    ಕೆಲವು ತಿಂಗಳುಗಳ ನಂತರ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ಡಾ.ಸುರೇಂದ್ರ ಮಹರ್ಷಿ, ಕಾಂಪೌಂಡರ್ ಜೊತೆಯಲ್ಲಿ ನೀನು ಸೆಕ್ಸ್ ಮಾಡಿರುವ ವಿಡಿಯೋ ಬಗ್ಗೆ ನನಗೆ ತಿಳಿದಿದೆ ಎಂದು ಸಂತ್ರಸ್ತೆಯನ್ನು ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಿ ವೈದ್ಯನೂ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೆಲವು ದಿನಗಳ ನಂತರ ವೈದ್ಯನ ಸಹೋದರ ನಡೆದಿರುವ ಘಟನೆಯ ಬಗ್ಗೆ ತಿಳಿದುಕೊಂಡು ಆತನೂ ನರ್ಸ್ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಮೂವರೂ ಆರೋಪಿಗಳು ವಿಡಿಯೋ ಮೂಲಕ ಬ್ಲ್ಯಾಕ್‍ಮೇಲ್ ಮಾಡುತ್ತಾ ನರ್ಸ್ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು. ಕೊನೆಗೆ ಸಂತ್ರಸ್ತೆ ನಡೆದ ಘಟನೆಯನ್ನು ಕುಟುಂಬದವರಿಗೆ ತಿಳಿಸಿದ್ದಾರೆ. ನಂತರ ಸಂತ್ರಸ್ತೆ  ಪೊಲೀಸ್ ಠಾಣೆಗೆ ತೆರಳಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಜಿಂಕೆಮರಿಗೆ ಸ್ತನ್ಯಪಾನ ಮಾಡಿಸಿದ ಮಹಿಳೆ: ಫೋಟೋ ವೈರಲ್

    ಜಿಂಕೆಮರಿಗೆ ಸ್ತನ್ಯಪಾನ ಮಾಡಿಸಿದ ಮಹಿಳೆ: ಫೋಟೋ ವೈರಲ್

    ಜೈಪುರ: ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಜಿಂಕೆ ಮರಿಗೆ ಸ್ತನ್ಯಪಾನ ಮಾಡಿಸಿದ ಫೋಟೋವೊಂದು ವೈರಲ್ ಆಗುತ್ತಿದೆ.

    ಐಎಫ್‍ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ತಮ್ಮ ಟ್ವಿಟ್ಟರಿನಲ್ಲಿ ಮಹಿಳೆ ಜಿಂಕೆಮರಿಗೆ ಸ್ತನ್ಯಪಾನ ಮಾಡಿಸುವ ಫೋಟೋ ಹಾಕಿದ್ದಾರೆ. “ಬಿಷ್ಣೋಯಿ ಸಮುದಾಯ ಈ ರೀತಿ ಪ್ರಾಣಿಗಳನ್ನು ನೋಡಿಕೊಳ್ಳುತ್ತೆ. ಈ ಪ್ರಾಣಿಗಳು ಅವರಿಗೆ ತಮ್ಮ ಮಕ್ಕಳಿಗಿಂತ ಕಡಿಮೆ ಇಲ್ಲ. ಮಹಿಳೆ ಜಿಂಕೆಗೆ ಹಾಲು ಉಣಿಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

    ಪ್ರವೀಣ್ ಕಾಸ್ವಾನ್ ಅವರು ಈ ಫೋಟೋವನ್ನು ಟ್ವೀಟ್ ಮಾಡುತ್ತಿದ್ದಂತೆ 1 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಅಲ್ಲದೆ 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಈ ಫೋಟೋಗೆ ಜನರು ಕಮೆಂಟ್ ಮಾಡುವ ಮೂಲಕ ಮಹಿಳೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಈ ಫೋಟೋ ನೋಡಿ ಕೆಲವರು, ಹಳ್ಳಿಯಲ್ಲಿ ಇರುವ ಜನರು ತಮ್ಮ ಸಾಕು ಪ್ರಾಣಿಗಳಾದ ಮೇಕೆ, ಹಸು, ಎಮ್ಮೆ, ಮೊಲ, ನಾಯಿ, ಬೆಕ್ಕು ಎಲ್ಲವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅಲ್ಲದೆ ಅವರಿಗೆ ಹೆಸರನ್ನು ಕೂಡ ಇಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

    ಮತ್ತೆ ಕೆಲವರು, “ಇದು ನಿಜವಾಗಿಯೂ ಸುಂದರವಾಗಿದೆ. ಆ ಮಹಿಳೆಗೆ ನಾವು ಪ್ರಶಂಸೆ ನೀಡಬೇಕು. ಗ್ರೇಟ್ ಮದರ್” ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಮಂದಿ ‘ತಾಯಿ ಪ್ರೀತಿ ಎಂದಿಗೂ ಕೊನೆಯಾಗುವುದಿಲ್ಲ” ಎಂದು ಕಮೆಂಟ್ ಮಾಡಿದ್ದಾರೆ.

  • ದೊಣ್ಣೆಗಳಿಂದ ಥಳಿಸಿ ಹೆಡ್ ಕಾನ್‍ಸ್ಟೇಬಲ್‍ನ ಬರ್ಬರ ಹತ್ಯೆ

    ದೊಣ್ಣೆಗಳಿಂದ ಥಳಿಸಿ ಹೆಡ್ ಕಾನ್‍ಸ್ಟೇಬಲ್‍ನ ಬರ್ಬರ ಹತ್ಯೆ

    ಜೈಪುರ: ಪೊಲೀಸ್ ಹೆಡ್ ಕಾನ್‍ಸ್ಟೇಬಲ್‍ನನ್ನು ಜನರ ಗುಂಪೊಂದು ದೊಣ್ಣೆಗಳಿಂದ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ರಾಜ್ಸಾಮಂಡ್ ಜಿಲ್ಲೆಯಲ್ಲಿ ನಡೆದಿದೆ.

    ಕುನ್ವಾರಿಯಾ ನಿವಾಸಿ ಅಬ್ದುಲ್ ಗಣಿ(48) ಮೃತ ಹೆಡ್ ಕಾನ್‍ಸ್ಟೇಬಲ್. ಆಸ್ತಿ ವಿವಾದದ ಬಗ್ಗೆ ತನಿಖೆ ಮುಗಿಸಿಕೊಂಡು ವಾಪಸ್ ಹೋಗುತ್ತಿದ್ದಾಗ ಅನೇಕರು ಬೈಕ್‍ನಲ್ಲಿ ಬಂದು ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಕಾನ್‍ಸ್ಟೇಬಲ್‍ಗೆ ಗಂಭೀರವಾಗಿ ಗಾಯಗಳಾಗಿದ್ದು, ತಕ್ಷಣ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.

    ತೀವ್ರವಾಗಿ ರಸ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಅಬ್ದುಲ್ ಗಣಿ ಮೃತಪಟ್ಟಿದ್ದಾರೆ. ಈ ಘಟನೆ ರಾಜ್ಯದ ಪೊಲೀಸ್ ಇಲಾಖೆಗೆ ಆಘಾತವನ್ನುಂಟು ಮಾಡಿದ್ದು, ಮಾಹಿತಿ ತಿಳಿದು ದಾಳಿಕೋರರ ಬಗ್ಗೆ ತಿಳಿಯಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

    ಇತ್ತೀಚೆಗೆ ರಾಜಸ್ಥಾನದಲ್ಲಿ ಜನಸಮೂಹದ ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿದ್ದು, ಕಳೆದ ವರ್ಷ ರಕ್ಬರ್ ಖಾನ್ (28) ದನ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂದು ಅನುಮಾನದ ಮೇರೆಗೆ ಜನಸಮೂಹ ಥಳಿಸಿದ್ದತ್ತು. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಪರಿಣಾಮ ಆತ ಮೃತಪಟ್ಟಿದ್ದನು.

  • ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ – ಕ್ರಿಕೆಟ್ ಆಡ್ತಿದ್ದ ಯುವಕರಿಂದ ರಕ್ಷಣೆ

    ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ – ಕ್ರಿಕೆಟ್ ಆಡ್ತಿದ್ದ ಯುವಕರಿಂದ ರಕ್ಷಣೆ

    – ಯುವಕರ ಕೆಲಸಕ್ಕೆ ಎಡಿಜಿಪಿ ಮೆಚ್ಚುಗೆ

    ಜೈಪುರ್: ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಅಪ್ರಾಪ್ತೆಯನ್ನು ಕ್ರಿಕೆಟ್ ಆಡುತ್ತಿದ್ದ ಯುವಕರು ರಕ್ಷಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಗುರುವಾರ ಯುವಕರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಾಲಕಿ ಕಿರುಚಿಕೊಳ್ಳುತ್ತಿದ್ದಳು. ಬಾಲಕಿಯ ಕಿರುಚಾಟದ ಸದ್ದು ಕೇಳಿ ಯುವಕರು ಅಲ್ಲಿಗೆ ಓಡಿ ಹೋಗಿದ್ದಾರೆ. ಆಗ ಆರೋಪಿ ಅಪ್ರಾಪ್ತ ಬಾಲಕಿ ಮೇಲೆ ಯತ್ನಿಸುತ್ತಿದ್ದನು. ಬಳಿಕ ಯುವಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಕ್ಕೆ ಎಡಿಜಿಪಿ ಬಿ.ಕೆ ಸೋನಿ ಯುವಕರಿಗೆ ಸರ್ಟಿಫಿಕೇಟ್ ಹಾಗೂ ನಗದನ್ನು ಬಹುಮಾನವಾಗಿ ನೀಡಿದ್ದಾರೆ. ಜವಹಾರ್ ನಗರ ಕಚ್ಚಿ ಬಸ್ತಿಯ ನಿವಾಸಿಯಾಗಿರುವ ಮನೀಶ್(15), ಅಮೀತ್(18), ರೋಹಿತ್ (18) ಹಾಗೂ ಬಾದಲ್ (14) ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಎಡಿಜಿಪಿ ಬಿ.ಕೆ ಸೋನಿ ಯುವಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಯುವಕರ ಈ ಕೆಲಸವನ್ನು ಎಲ್ಲರೂ ಮಾಡಬೇಕು. ದೇಶದ ಪ್ರಜೆಯಾಗಿ ಯುವಕರು ತಮ್ಮ ಕೆಲಸವನ್ನು ಮಾಡಿದ್ದಾರೆ. ಆ ಯುವಕರ ಭವಿಷ್ಯಕ್ಕೆ ನಾನು ಶುಭ ಕೋರುತ್ತೇನೆ” ಎಂದು ತಿಳಿಸಿದ್ದಾರೆ.

  • ಮೊದಲ ಸಾಲಿನಲ್ಲಿ ಮಹಿಳೆಯರಿದ್ದ ಕಾರಣಕ್ಕೆ ಭಾಷಣ ತೊರೆದ ಸ್ವಾಮೀಜಿ

    ಮೊದಲ ಸಾಲಿನಲ್ಲಿ ಮಹಿಳೆಯರಿದ್ದ ಕಾರಣಕ್ಕೆ ಭಾಷಣ ತೊರೆದ ಸ್ವಾಮೀಜಿ

    ಜೈಪುರ: ಕಾರ್ಯಕ್ರಮವೊಂದರಲ್ಲಿ ಮೊದಲ ಸಾಲಿನಲ್ಲಿ ಮಹಿಳೆಯರು ಕುಳಿತಿದ್ದ ಕಾರಣಕ್ಕೆ ಪ್ರೇರಕ ಗುರು ಭಾಷಣ ಮಾಡದೇ ಸ್ಥಳದಿಂದ ಹೊರನಡೆದ ವಿಲಕ್ಷಣ ಘಟನೆ ನದೆದಿದೆ.

    ರಾಜ್ ಮೆಡಿಕಾನ್ 2019ರ ಕೊನೆಯ ದಿನವಾದ ಭಾನುವಾರದಂದು ದಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮತ್ತು ಆಲ್ ರಾಜಸ್ಥಾನ್ ಇನ್ ಸರ್ವಿಸ್ ಡಾಕ್ಟರ್ಸ್ ಅಸೋಸಿಯೇಶನ್ (ಎಆರ್‍ಐಎಸ್‍ಡಿಎ) ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಸ್ವಾಮಿ ಜ್ಞಾನವತ್ಸಲ್ಯ ಅವರನ್ನು ಆಹ್ವಾನಿಸಲಾಗಿತ್ತು.

    ಜೈಪುರದ ಬಿರ್ಲಾ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವೇಳೆ ಸ್ವಾಮಿ ಜ್ಞಾನವತ್ಸಲ್ಯ ಅವರು ಭಾಷಣ ಮಾಡಲು ಬಂದಾಗ, ಮೊದಲ ಮೂರು ಸಾಲಿನಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕುಳಿತಿದ್ದ ಕಾರಣಕ್ಕೆ ಭಾಷಣ ಮಾಡದೆ ಹಾಗೆಯೇ ಹೊರ ನಡೆದರು. ಪ್ರೇರಕ ಗುರುಗಳು ನಂತರ ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಯರು ಕುಳಿತುಕೊಳ್ಳುವಂತಿಲ್ಲ ಎಂದು ಘೋಷಿಸಲು ಸಂಘಟಕರನ್ನು ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.

    ಗುರುಗಳ ಈ ವರ್ತನೆ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳಾ ವೈದ್ಯೆ ಡಾ.ರುತು ಚೌಧರಿ, ಕೆಲವು ಮಹಿಳಾ ವೈದ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮೊದಲ ಮೂರು ಸಾಲುಗಳಲ್ಲಿ ಬಹುತೇಕ ಮಹಿಳೆಯರು ಕುಳಿತು, ಸ್ವಾಮಿ ಜ್ಞಾನವತ್ಸಲ್ ಅವರ ಭಾಷಣ ಕೇಳಲು ಉತ್ಸಾಹದಿಂದ ಕಾಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮೊದಲ ಏಳು ಸಾಲುಗಳಲ್ಲಿ ಮಹಿಳೆಯರು ಕೂರಬಾರದು ಎಂದು ಘೋಷಿಸಲಾಯಿತು. ಬಳಿಕ ಕೆಲವು ಸಮಯದ ನಂತರ, ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಯರು ಕುಳಿತುಕೊಳ್ಳಬಾರದು ಎಂದು ಘೋಷಿಸಲಾಯಿತು.

    ಯಾಕೆಂದರೆ ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಗೆ ಕುಳಿತುಕೊಳ್ಳಲು ಅವಕಾಶ ನೀಡದಂತೆ ಸ್ವಾಮಿ ಜ್ಞಾನವತ್ಸಲ್ಯ ಸಂಘಟಕರನ್ನು ಕೇಳಿಕೊಂಡಿದ್ದರು ಎನ್ನಲಾಗಿದ್ದು, ಮಹಿಳಾ ವೈದ್ಯರು ಈ ಆಜ್ಞೆಯ ಹಿಂದಿನ ಕಾರಣವನ್ನು ಕೇಳಿದಾಗ, ಇದು ಸ್ವಾಮಿಜಿಯವರ ಪ್ರೋಟೋಕಾಲ್ ಎಂದು ಅವರಿಗೆ ತಿಳಿಸಲಾಗಿದೆ.

    ಗುರುಗಳ ಈ ಷರತ್ತಿನ ಬಗ್ಗೆ ಮಹಿಳಾ ವೈದ್ಯರು ತಿಳಿದಾಗ, ಈ ನಡೆಯನ್ನು ವಿರೋಧಿಸಲು ಪ್ರಾರಂಭಿಸಿದರು. ಅಲ್ಲದೆ ಕೆಲವು ವೈದ್ಯರು ಸೇರಿಕೊಂಡು ಸ್ವಾಮಿ ಜ್ಞಾನವತ್ಸಲ್ಯ ಅವರ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದರು. ಈ ವೇಳೆ ವೈದ್ಯರು ಮತ್ತು ಸಂಘಟಕರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಸಂಘಟಕರು ಮೊದಲ ಎರಡು ಸಾಲುಗಳನ್ನು ಖಾಲಿ ಬಿಡುವಂತೆ ನಿರ್ಧರಿಸಿದರು. ಆ ನಂತರ ಕಾರ್ಯಕ್ರಮ ನಡೆಸಲಾಯಿತು ಎನ್ನಲಾಗಿದೆ.

  • ಆಸ್ಪತ್ರೆಯಲ್ಲೇ ಬೆಂಕಿ ಹಚ್ಚಿಕೊಂಡ ನರ್ಸ್

    ಆಸ್ಪತ್ರೆಯಲ್ಲೇ ಬೆಂಕಿ ಹಚ್ಚಿಕೊಂಡ ನರ್ಸ್

    ಜೈಪುರ್: ಮಹಿಳಾ ನರ್ಸ್ ಒಬ್ಬರು ಎಐಐಎಂಎಸ್(ಏಮ್ಸ್) ಆಸ್ಪತ್ರೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಜೋಧಪುರ್‌ನಲ್ಲಿ ನಡೆದಿದೆ.

    ಕೇರಳ ಮೂಲದ ಬಿಜು ಪುನೋಜ್ ಆತ್ಮಹತ್ಯೆಗೆ ಶರಣಾದ ನರ್ಸ್. ಬಿಜು ಕಳೆದ ಎರಡು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದರು. ಕಟ್ಟಡದ ಮೂರನೇ ಮಹಡಿಯಲ್ಲಿರುವ ರೂಮಿನಿಂದ ಹೊಗೆ ಬರುತ್ತಿದ್ದಾಗ ದಾರಿಹೋಕರೊಬ್ಬರು ಗಮನಿಸಿ ತಕ್ಷಣ ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಆಡಳಿತಕ್ಕೆ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಅಧಿಕಾರಿಯನ್ನು ಪರಿಶೀಲಿಸಲು ರೂಮಿನ ಬಳಿ ಕಳುಹಿಸಿದ್ದಾರೆ.

    ನರ್ಸ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರೂಮಿನ ಬಾಗಿಲುಗಳನ್ನು ಲಾಕ್ ಮಾಡಿಕೊಂಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಅಧಿಕಾರಿ ಬಾಗಿಲನ್ನು ಮುರಿದು ರೂಮಿನ ಒಳಗೆ ಹೋಗಿದ್ದಾರೆ. ಆಗ ಬೆಂಕಿಯಲ್ಲಿ ಸುಟ್ಟಿದ್ದ ಮಹಿಳೆಯ ಶವ ಪತ್ತೆಯಾಗಿದೆ. ನಂತರ ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಶನಿವಾರ ರಾತ್ರಿ ಸುಮಾರು 8:30ಕ್ಕೆ ಏಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಮಗೆ ಮಾಹಿತಿ ಸಿಕ್ಕಿತು. ತಕ್ಷಣ ನಾವು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಕಟ್ಟಡದ ಮೂರನೇ ಮಹಡಿಯಲ್ಲಿ ಆಪರೇಷನ್ ಥಿಯೇಟರ್ ಬಳಿಯ ರೂಮಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚೈನ್ ಸಿಂಗ್ ಮಹೇಚಾ ತಿಳಿಸಿದ್ದಾರೆ.

    ಇತ್ತೀಚೆಗೆ ಕುಟುಂಬದ ಸಮಸ್ಯೆಗಳ ಬಗ್ಗೆ ಬಿಜು ಪುನೋಜ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಮಹಿಳೆಯ ರೂಮ್‍ಮೇಟ್ ಹೇಳಿದ್ದಾರೆ. ಆದರೆ ಆಸ್ಪತ್ರೆಯ ರೂಮಿನೊಳಗೆ ಪ್ಲಾಸ್ಟಿಕ್ ಬಾಟಲ್ ನಲ್ಲಿ ಬೆಂಕಿ ತಗಲುವ ವಸ್ತು (inflammable material) ವನ್ನು ಮೊದಲೇ ತೆಗೆದುಕೊಂಡು ಹೋಗಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದವರಿಸಿದ್ದಾರೆ.