Tag: Jaipur

  • ಪತಿಯೂ ಸೇರಿ ನಾಲ್ವರಿಂದ ಅಪ್ರಾಪ್ತೆಯ ಕಿಡ್ನಾಪ್, ರೇಪ್

    ಪತಿಯೂ ಸೇರಿ ನಾಲ್ವರಿಂದ ಅಪ್ರಾಪ್ತೆಯ ಕಿಡ್ನಾಪ್, ರೇಪ್

    ಜೈಪುರ್: 15 ವರ್ಷದ ಅಪ್ರಾಪ್ತೆಯನ್ನು ಆಕೆಯ ಪತಿ ಸೇರಿ ನಾಲ್ವರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬುಂಡಿಯಲ್ಲಿ ನಡೆದಿದೆ.

    ಸಂತ್ರಸ್ತೆಗೆ ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗಿದೆ ಎಂದು ತಿಳಿದು ಬಂದಿದೆ. ನವೆಂಬರ್ 27 ರಂದು ಸಂತ್ರಸ್ತೆ ತನ್ನ ಸ್ನೇಹಿತರ ಜೊತೆ ಶಾಲೆಗೆ ಹೋಗುತ್ತಿದ್ದಳು. ಆಗ ಒಂದು ವ್ಯಾನಿನಲ್ಲಿ ನಾಲ್ವರು ಅಪರಿಚಿತರು ಬಂದು ಅಪಹರಿಸಿದ್ದಾರೆ. ಅವರಲ್ಲಿ ಒಬ್ಬ ಆಕೆಯ ಪತಿ ಎಂದು ಪೊಲೀಸರು ಶಂಕಿಸಿದ್ದಾರೆ.

    ಸಂತ್ರಸ್ತೆಯ ತಂದೆ ಬಾಬು ಲಾಲ್ ಗುಜ್ಜರ್, ಹಿಂದೋಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ನೀಡಿದ್ದಾರೆ. ತನ್ನ ಮಗಳು ಸ್ನೇಹಿತರೊಂದಿಗೆ ಶಾಲೆಗೆ ಹೋಗುವಾಗ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ. ಅಪಹರಣಕಾರರು ನನ್ನ ಮಗಳ ಜೊತೆಗಿದ್ದ ಇತರರನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಸಂತ್ರಸ್ತೆ ಅಪ್ರಾಪ್ತೆಯಾಗಿರುವುದರಿಂದ ಬಾಲಿಕಾ ಗೃಹದಲ್ಲಿ ಇರಿಸಲಾಗಿದೆ. ಈಗಾಗಲೇ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ಬಾಲಿಕಾ ಗೃಹದಿಂದ ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಸತ್ನಾಮ್ ಸಿಂಗ್ ತಿಳಿಸಿದ್ದಾರೆ.

  • ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಜೈಪುರ: ರಾಜಸ್ಥಾನದ ತಾಯಿಯೊಬ್ಬರು ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ಗುಡ್‍ಬೈ ಹೇಳಿ ಜಮೀನಿನಲ್ಲಿ ದುಡಿಯುತ್ತಿದ್ದಾರೆ.

    ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅವರ ಪತ್ನಿ ಚಂಚಲ್ ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್‍ಗೆ ರೈತನಾಗಲು ತರಬೇತಿ ನೀಡುತ್ತಿದ್ದಾರೆ.

    ನಾವು ದೊಡ್ಡ ನಗರದಲ್ಲಿ ವಾಸಿಸುತ್ತಿರಬಹುದು. ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡುತ್ತಿರಬಹುದು. ದುಡ್ಡು ಇದ್ದರೆ ಏನಂತೆ ನಾವು ಶುದ್ಧ ಗಾಳಿ ಹಾಗೂ ನೀರಿಗಾಗಿ ಹಂಬಲಿಸುತ್ತೇವೆ. ಈ ನಡುವೆ ಮನೆಯೊಳಗೆ ಬಿಸಿಲು ಕೂಡ ಬರುವುದಿಲ್ಲ. ಹೀಗಿರುವಾಗ ಎಷ್ಟು ಸಂಪಾದನೆ ಮಾಡಿದರೂ ಪ್ರಯೋಜನ ಏನು? ಈ ಕಾರಣದಿಂದಾಗಿ ನಾವು ನಮ್ಮ ಮಗನಿಗೆ ಬೇರೆ ಜೀವನ ನೀಡಲು ನಿರ್ಧರಿಸಿ ಇಂದೋರ್ ನಲ್ಲಿ ಜಮೀನು ಖರೀದಿಸಿದ್ದೇವೆ ಎಂದು ದಂಪತಿ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.

    2016ರಲ್ಲಿ ಚಂಚಲ್ 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು “ಇದು ತಪ್ಪು ನಿರ್ಧಾರ” ಎಂದು ಹೇಳಿದರು. ಆದರೆ ಮಗನಿಗೆ ಆರೋಗ್ಯಕರ ಮತ್ತು ಸ್ವಚ್ಛ ಜೀವನವನ್ನು ನೀಡಲು ನಾನು ತೆಗೆದುಕೊಂಡ ನಿರ್ಧಾರ ಸರಿ ಎಂದು ಅವರಿಗೆ ಹೇಳಿದೆ ಎಂಬುದಾಗಿ ಚಂಚಲ್ ಹೇಳಿದರು.

    2017ರಲ್ಲಿ ಚಂಚಲ್ ತಮ್ಮ ಮಗನ ಜೊತೆ ಇಂಧೋರ್ ಶಿಫ್ಟ್ ಆಗಿದ್ದಾರೆ. ಅಲ್ಲಿ ಸಾವಯವ ಕೃಷಿಯಲ್ಲಿ ಪದ್ಮಶ್ರೀ ಡಾ. ಜಾನಕ್ ಪಾಲ್ಟಾ ಅವರಿಂದ ತರಬೇತಿ ಪಡೆದಿದ್ದಾರೆ. ಜೊತೆಗೆ ಸೋಲಾರ್ ಕುಕ್ಕಿಂಗ್, ಸೋಲಾರ್ ಡ್ರೈಯಿಂಗ್ ಕಲಿತಿದ್ದಾರೆ.

    ಈ ಬದಲಾವಣೆಯನ್ನು ಮಗ ಹೇಗೆ ಎದುರಿಸುತ್ತಾನೆ ಎಂದು ರಾಜೇಂದ್ರ ಹಾಗೂ ಚಂಚಲ್ ಚಿಂತಿಸುತ್ತಿದ್ದರು. ಆದರೆ ಗುರುಭಕ್ಷ್ ಈ ಹೊಸ ಜೀವನದಿಂದ ಖುಷಿಯಾಗಿದ್ದ. ಈಗ ಸಾವಯವ ಕೃಷಿಯಿಂದ ಹಿಡಿದು ಎಲ್ಲದರಲ್ಲೂ ಆತ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ಊರಿನಲ್ಲಿ ಆತನಿಗೆ ಸಾಕಷ್ಟು ಸ್ನೇಹಿತರು ಪರಿಚಯವಾಗಿದ್ದು, ಗುರುಭಕ್ಷ್ ಅವರಿಗೆ ಸೋಲಾರ್ ಕುಕ್ಕಿಂಗ್ ಹಾಗೂ ಕೃಷಿ ವಿಧಾನಗಳನ್ನು ಕಲಿಸುತ್ತಾನೆ. ಜೊತೆ ಆಟವಾಡುವಾಗ ಅವರಿಂದಲೂ ಗುರುಭಕ್ಷ್ ಕಲಿಯುತ್ತಿದ್ದಾನೆ.

    ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಮತ್ತು ಜೀವನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ ಈ ಹಣವನ್ನು ಸಂಪಾದಿಸುವಾಗ ಅವರು ತಮ್ಮ ಮಕ್ಕಳಿಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ನಾವು ಯಾವಾಗಲೂ ನಮ್ಮ ಮಗನಿಗೆ ನೀನು ಯಾವುದೇ ರೇಸ್‍ನಲ್ಲಿ ಇಲ್ಲ. ನೀನು ಯಾರಿಂದಲೂ ಮುಂದೆ ಅಥವಾ ಹಿಂದಕ್ಕೆ ನಡೆಯಬೇಕಿಲ್ಲ. ಕೇವಲ ತನ್ನ ವೇಗದಲ್ಲಿ ನಡೆಯಬೇಕು ಎಂದು ಹೇಳುತ್ತಿರುತ್ತೇವೆ ಅಂತಾ ರಾಜೇಂದ್ರ ಹಾಗೂ ಚಂಚಲ್ ತಿಳಿಸಿದ್ದಾರೆ.

    ರಾಜೇಂದ್ರ ಹಾಗೂ ಚಂಚಲ್ ಅವರ ಮನೆಯಲ್ಲಿ ಸೋಲಾರ್ ಕುಕ್ಕಿಂಗ್ ಮೂಲಕ ಅಡುಗೆ ಮಾಡಲಾಗುತ್ತಿದೆ. ಅಲ್ಲದೆ ತಮ್ಮ ಜಮೀನಿನಲ್ಲಿ ಸಾವಯವ ರೀತಿಯಲ್ಲಿ ಬೆಳೆದ ತರಕಾರಿಗಳನ್ನು ಅಡುಗೆ ಮಾಡಲು ಉಪಯೋಗಿಸುತ್ತಾರೆ. ಚಂಚಲ್ ಒಬ್ಬರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ರಾಜೇಂದ್ರ ಉದ್ಯೋಗದಿಂದಾಗಿ ಇಂದೋರ್ ಮನೆಯಲ್ಲಿ ಹೆಚ್ಚು ಸಮಯ ಇರುವುದಿಲ್ಲ. ಪತಿ ಮನೆಯಲ್ಲಿ ಇಲ್ಲದೇ ಇದ್ದರೂ ಚಂಚಲ್, ಗುರುಭಕ್ಷ್‍ಗೆ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯದ ಮಾದರಿ ರೈತನಾಗಲು ಕೃಷಿ ತರಬೇತಿ ನೀಡುತ್ತಿದ್ದಾರೆ.

  • ಮಗ ತಲಾಕ್ ನೀಡಿದ ಕೆಲವೇ ಗಂಟೆಗಳಲ್ಲಿ ಸೊಸೆಯ ಮೇಲೆ ಅತ್ಯಾಚಾರವೆಸಗಿದ ಮಾವ

    ಮಗ ತಲಾಕ್ ನೀಡಿದ ಕೆಲವೇ ಗಂಟೆಗಳಲ್ಲಿ ಸೊಸೆಯ ಮೇಲೆ ಅತ್ಯಾಚಾರವೆಸಗಿದ ಮಾವ

    ಜೈಪುರ: ಮಗ ತಲಾಕ್ ನೀಡಿದ ಕೆಲವೇ ಗಂಟೆಗಳಲ್ಲಿ ಮಾವ ತನ್ನ ಸೊಸೆಯನ್ನು ಅತ್ಯಾಚಾರ ಮಾಡಿದ ಘಟನೆ ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆ 2015ರಲ್ಲಿ ಮದುವೆಯಾಗಿ ಒಂದು ವರ್ಷಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಆಕೆಯ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು.

    ನ. 20ರಂದು ಪತಿಯ ಕುಟುಂಬಸ್ಥರು ಆಕೆಯನ್ನು ರೂಮಿನಲ್ಲಿ ಬಂಧಿಸಿ ವರದಕ್ಷಿಣೆ ತರುವಂತೆ ಹಲ್ಲೆ ಮಾಡಿದ್ದರು. ಬಳಿಕ ನ. 22ರಂದು ಪತಿ ಮನೆಗೆ ಬಂದು ಮಹಿಳೆಗೆ ತಲಾಕ್ ನೀಡಿದ್ದಾನೆ. ತಲಾಕ್ ನೀಡಿದ ದಿನ ರಾತ್ರಿ ಸುಮಾರು 11 ಗಂಟೆಗೆ ಮಾವ ಹಾಗೂ ಸಂಬಂಧಿಕರು ಆಕೆಯ ರೂಮಿಗೆ ಹೋಗಿ ಗನ್ ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

    ಮರುದಿನ ಬೆಳಗ್ಗೆ ಸಂತ್ರಸ್ತೆ ತನ್ನ ತಂದೆಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ ತಂದೆ ಪೊಲೀಸ್ ಠಾಣೆ ಹೋಗಿ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಅಧೀಕ್ಷಕ ಕುಮ್ವತ್, ಐಪಿಸಿ ಸೆಕ್ಷನ್ ಅಡಿಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಪ್ರತಿ ಭಾನುವಾರ 800 ಮಂದಿಗೆ ಊಟ ನೀಡ್ತಿದ್ದಾರೆ ಅಂಗವಿಕಲ

    ಪ್ರತಿ ಭಾನುವಾರ 800 ಮಂದಿಗೆ ಊಟ ನೀಡ್ತಿದ್ದಾರೆ ಅಂಗವಿಕಲ

    ಜೈಪುರ: ರಾಜಸ್ಥಾನದ ಅಂಗವಿಕಲ ವ್ಯಕ್ತಿಯೊಬ್ಬರು ಪ್ರತಿ ಭಾನುವಾರ ಆಸ್ಪತ್ರೆ ಮುಂದೆ ನಿಂತು 700 ರಿಂದ 800 ಮಂದಿಗೆ ಊಟ ಹಾಕುತ್ತಿದ್ದು, ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    40 ವರ್ಷದ ಹಂಸರಾಜ್ ಸಾದ್ ಅವರು ಪ್ರತಿ ಭಾನುವಾರ ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ಹೋಗಿ ಅಲ್ಲಿ 700ರಿಂದ 800 ಮಂದಿಗೆ ಬಿಸಿ ಬಿಸಿ ಊಟವನ್ನು ನೀಡುತ್ತಿದ್ದಾರೆ. ಹಂಸರಾಜ್ 2015ರಲ್ಲಿ ಒಬ್ಬರೇ ಈ ಕೆಲಸವನ್ನು ಶುರು ಮಾಡಿದ್ದರು. ಆಗ ಅವರು ಹೋಟೆಲ್‍ನಿಂದ ಊಟ ಪ್ಯಾಕ್ ಮಾಡಿಸಿ ಜನರಿಗೆ ನೀಡುತ್ತಿದ್ದರು. ಇದನ್ನೂ ಓದಿ: ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

    ಊಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಂಸರಾಜ್ 10 ಜನ ಇರುವ ತಮ್ಮ ತಂಡದ ಜೊತೆ 700ರಿಂದ 800 ಮಂದಿಗೆ ಮನೆಯಲ್ಲಿಯೇ ಅಡುಗೆ ಮಾಡಲು ಶುರು ಮಾಡಿದ್ದರು. ಡಿಸೈನರ್ ಉಡುಪುಗಳ ಅಂಗಡಿ ನಡೆಸುವ ಹಂಸರಾಜ್ ಬಾಲ್ಯದಿಂದಲೂ ಅಂಗವಿಕಲರಾಗಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಅಗತ್ಯವಿರುವವರಿಗೆ ಊಟ ನೀಡುವ ಸಾಮಾಜಿಕ ಕಾರ್ಯಕರ್ತರು ಕಂಡು ಬರುತ್ತಾರೆ. ಆದರೆ ಆಸ್ಪತ್ರೆಗೆ ಬರುವ ಜನರ ಬಳಿ ಔಷಧಿ ಖರೀದಿಸಲು ಹಣವಿರುವುದಿಲ್ಲ. ಹಾಗಾಗಿ ನಾನು ಆಸ್ಪತ್ರೆ ಬಳಿ ಜನರಿಗೆ ಊಟದ ವ್ಯವಸ್ಥೆ ಮಾಡಲು ಶುರು ಮಾಡಿದೆ ಎಂದರು. ಇದನ್ನೂ ಓದಿ: ಕಾಲೇಜಿಗೆ ಹೋಗಿ ಕನಸು ನನಸು ಮಾಡಿಕೊಳ್ಳಲು ಕ್ಯಾಬ್ ಚಲಾಯಿಸುತ್ತಿದ್ದಾಳೆ 19ರ ಯುವತಿ

    ಊಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿ ಆಸ್ಪತ್ರೆಯಲ್ಲಿ ನಾವು ಪ್ರತಿದಿನ ಅವರಿಗೆ ಆಹಾರವನ್ನು ನೀಡಬೇಕು ಎಂಬುದು ನಮ್ಮ ಯೋಜನೆ. ಆಸ್ಪತ್ರೆಗೆ ದೂರ ದೂರದಿಂದ ಶೇ. 50ರಷ್ಟು ಬಡ ಜನರು ಬರುತ್ತಾರೆ. ಹೀಗಿರುವಾಗ ಅವರಿಗೆ ಮನೆಯಿಂದ ಊಟ ತರಲು ಕಷ್ಟವಾಗುತ್ತದೆ ಎಂದು ಹಂಸರಾಜ್ ಹೇಳಿದ್ದಾರೆ.

  • 11 ಹೆಣ್ಣುಮಕ್ಕಳ ನಂತ್ರ ಜನಿಸಿತು ಗಂಡು ಮಗು

    11 ಹೆಣ್ಣುಮಕ್ಕಳ ನಂತ್ರ ಜನಿಸಿತು ಗಂಡು ಮಗು

    – ಕುಟುಂಬದಲ್ಲಿ ಮುಗಿಲುಮುಟ್ಟದ ಸಂಭ್ರಮ

    ಜೈಪುರ: ಒಂದು ಬೇಕು ಎರಡು ಸಾಕು ಹೋಗಿ ಇದೀಗ ಒಂದೇ ಮಗು ಅನ್ನೋ ನಿರ್ಧಾರಕ್ಕೆ ಬಂದ್ರೆ ಜೈಪುರದ ಮಹಿಳೆಯೊಬ್ಬಳು ಗಂಡು ಮಗುವಿಗೋಸ್ಕರ ಬರೋಬ್ಬರಿ 12 ಮಕ್ಕಳಿಗೆ ಜನ್ಮ ನೀಡಿದ್ದಾಳೆ.

    ಹೌದು. ರಾಜಸ್ಥಾನದ ಚುರು ಜಿಲ್ಲೆಯ ನಿವಾಸಿ ಗುಡ್ಡಿ ಕೊನೆಗೂ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ನೆರೆಹೊರೆಯವರ ಬಾಯಿಮುಚ್ಚಿಸಿದ್ದಾಳೆ. ನವೆಂಬರ್ 20ರಂದು ಗಿಡ್ಡು ನಗರ ಆಸ್ಪತ್ರೆಯಲ್ಲಿ 12ನೇ ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿಯವರೆಗೆ ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದು, ಆಘಾತಕಾರಿ ಅನುಭವವಾಗಿದೆ ಎಂದು ಗಿಡ್ಡು ಹೇಳುತ್ತಾಳೆ.

    42 ವರ್ಷದ ಗಿಡ್ಡುವಿನ ಪತಿ ಕೂಡ ಸಂತತಿ ಮುಂದುವರಿಯಲು ಗಂಡು ಮಗು ಬೇಕು ಎಂದು ಆಸೆ ಪಟ್ಟಿದ್ದರು. ಅಲ್ಲದೆ ಪತಿ ಕೃಷ್ಣ ಕುಮಾರ್ ಕೂಡ ಗಂಡು ಮಗು ಇಲ್ಲದೆ ನೊಂದಿದ್ದರು. ಸದ್ಯ ಗಂಡು ಮಗು ಹುಟ್ಟಿರುವುದು ಎಲ್ಲರಿಗೂ ಸಂತಸ ತಂದಿದೆ.

    ನವೆಂಬರ್ 20ರಂದು ಗುಡ್ಡಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಇಬ್ಬರನ್ನು ಬಿಟ್ಟು ಉಳಿದ ಎಲ್ಲಾ ಹೆಣ್ಣು ಮಕ್ಕಳು ಓದುತ್ತಿದ್ದಾರೆ. 11 ಮಂದಿ ಹೆಣ್ಣು ಮಕ್ಕಳಲ್ಲಿ ಮೂವರಿಗೆ ಈಗಾಗಲೇ ಮದುವೆಯಾಗಿದ್ದು ಕಿರಿಯ ಮಗಳಿಗೆ 22 ವರ್ಷ ವಯಸ್ಸಾಗಿದೆ. ಇಷ್ಟೊಂದು ಮಕ್ಕಳನ್ನು ಹೇಗೆ ಸಾಕುತ್ತೀರಿ ಎಂದು ಕೆಲವರು ಗುಡ್ಡಿಯನ್ನು ಪ್ರಶ್ನಿಸಿದರೆ, ಆಕೆ ಒಂದು ಸಣ್ಣ ನಗು ಬೀರುತ್ತಾಳೆ.

    ಹಲವು ಹೆಣ್ಣು ಮಕ್ಕಳ ನಂತರ ಗಂಡು ಮಗು ಜನಿಸಿದ್ದು ಇದೇ ಮೊದಲ ಕೇಸಲ್ಲ. ಈ ಹಿಂದೆ ಅಂದರೆ 2017ರಲ್ಲಿ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು 10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನಿಡಿದ್ದರು.

  • ಹೆಲಿಕಾಪ್ಟರ್ ಮೂಲಕ ಮಗಳನ್ನು ಪತಿಯ ಮನೆಗೆ ಕಳುಹಿಸಿಕೊಟ್ಟ ತಂದೆ

    ಹೆಲಿಕಾಪ್ಟರ್ ಮೂಲಕ ಮಗಳನ್ನು ಪತಿಯ ಮನೆಗೆ ಕಳುಹಿಸಿಕೊಟ್ಟ ತಂದೆ

    ಜೈಪುರ: ತಂದೆಯೊಬ್ಬರು ಹೆಲಿಕಾಪ್ಟರ್ ಮೂಲಕ ತನ್ನ ಮಗಳಿಗೆ ಆಕೆಯ ಪತಿಯ ಮನೆಗೆ ಕಳುಹಿಸಿಕೊಟ್ಟ ಘಟನೆ ರಾಜಸ್ಥಾನದ ಜುಂಜುನುಯಲ್ಲಿ ನಡೆದಿದೆ.

    ಜುಂಜುನು ಜಿಲ್ಲೆಯ ಅಜಿತ್‍ಪುರದ ನಿವಾಸಿಯಾಗಿರುವ ಮಹೇಂದ್ರ ಸಿಂಗ್ ಶ್ಲೋಕ್ ತಮ್ಮ ಮಗಳು ರೀನಾ ಮದುವೆ ಆದ ಬಳಿಕ ಹೆಲಿಕಾಪ್ಟರ್ ಮೂಲಕ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಬೇಕೆಂದು ಒಂದು ವರ್ಷದ ಹಿಂದೆಯೇ ನಿರ್ಧರಿಸಿದ್ದರು. ಮಗಳನ್ನು ಪತಿಯ ಮನೆಗೆ ಕಳುಹಿಸಿಕೊಡುವಾಗ ಆಕೆಗೆ ಹಾಗೂ ಆಕೆಯ ಪೋಷಕರಿಗೆ ಅದು ಅತ್ಯಂತ ಭಾವನಾತ್ಮಕ ಕ್ಷಣ. ಈ ಕ್ಷಣ ಮಗಳ ಜೀವನದಲ್ಲಿ ಸ್ಮರಣೀಯವಾಗಿರಲಿ ಎಂದು ತಂದೆ ಮಹೇಂದ್ರ ಸಿಂಗ್ ಬಯಸಿದ್ದರು.

    ಮದುವೆಯಾದ ತಕ್ಷಣ ವಧು ರೀನಾ ಹಾಗೂ ವರ ಸಂದೀಪ್ ಲಾಂಬಾ ಜುಂಜುನು ಜಿಲ್ಲೆಯ ಚಿದಾವಾ ಪಟ್ಟಣದ ಬಳಿಯಿರುವ ಅಜಿತ್‍ಪುರ ಗ್ರಾಮದಿಂದ ಸುಲ್ತಾನಗೆ ಹೆಲಿಕಾಪ್ಟರ್ ಮೂಲಕ ತೆರಳಿದರು. ಈ ವೇಳೆ ಹೆಲಿಕಾಪ್ಟರ್ ನೋಡಲು ಮುಂಜಾನೆ ಸಾಕಷ್ಟು ಜನ ಸೇರಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಮಹೇಂದ್ರ ಸಿಂಗ್, ನಾನು ಒಂದು ವರ್ಷದ ಹಿಂದೆಯೇ ನನ್ನ ಮಗಳಿಗೆ ಹೆಲಿಕಾಪ್ಟರ್ ಮೂಲಕ ಬೀಳ್ಕೊಡಬೇಕು ಎಂದು ನಿರ್ಧರಿಸಿದ್ದೆ. ಅಲ್ಲದೆ ಮದುವೆಗೆ ಎರಡು ತಿಂಗಳು ಇರುವಾಗ ನಾನು ಈ ವಿಷಯವನ್ನು ಮನೆಯವರ ಬಳಿ ಹಂಚಿಕೊಂಡೆ. ಇದು ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುತ್ತದೆ. ನಾವು ಹೆಣ್ಣು ಮಕ್ಕಳ ಜೊತೆ ಸಾಕಷ್ಟು ಘಟನೆಗಳನ್ನು ಹೊಂದಿದ್ದೇವೆ. ಇದರಿಂದ ನಮಗೆ ಸ್ವಲ್ಪ ಹೆಮ್ಮೆ ಆಗುತ್ತದೆ ಎಂದು ಹೇಳಿದ್ದಾರೆ.

    https://www.youtube.com/watch?v=GAW9NQnE1U0&feature=emb_title

  • ಮೊದಲ ಯತ್ನದಲ್ಲೇ ಅಗ್ರಸ್ಥಾನ- ದೇಶದ ಅತ್ಯಂತ ಕಿರಿಯ ನ್ಯಾಯಾಧೀಶನಾದ ಯುವಕ

    ಮೊದಲ ಯತ್ನದಲ್ಲೇ ಅಗ್ರಸ್ಥಾನ- ದೇಶದ ಅತ್ಯಂತ ಕಿರಿಯ ನ್ಯಾಯಾಧೀಶನಾದ ಯುವಕ

    ಜೈಪುರ್: ರಾಜಸ್ಥಾನದ 21 ವರ್ಷದ ಮಯಾಂಕ್ ಪ್ರತಾಪ್ ಸಿಂಗ್ ಅವರು ದೇಶದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

    ರಾಜಸ್ಥಾನ ನ್ಯಾಯಾಂಗ ಸೇವೆ (ಆರ್‌ಜೆಎಸ್) 2018ರ ಪರೀಕ್ಷೆಯಲ್ಲಿ 197 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮಯಾಂಕ್ ಕೇವಲ 21 ವರ್ಷ 10 ತಿಂಗಳು 9 ದಿನಗಳ ವಯಸ್ಸಿನಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟೇ ಅಲ್ಲದೆ ಮೊದಲ ಪ್ರಯತ್ನದಲ್ಲಿ ಅಗ್ರಸ್ಥಾನದಲ್ಲಿ ಪಾಸಾಗಿದ್ದಾರೆ. ಆರ್‌ಜೆಎಸ್ ಪರೀಕ್ಷೆಗೆ ಹಾಜರಾಗಲು ಈ ಹಿಂದೆ ಕನಿಷ್ಠ ವಯಸ್ಸು 23 ನಿಗದಿಯಾಗಿತ್ತು. ಆದರೆ ಈ ವರ್ಷ ಅದನ್ನು 21 ವಯಸ್ಸಿಗೆ ಇಳಿಸಲಾಗಿದೆ.

    ನ್ಯಾಯಾಂಗ ಸೇವೆಯ ಆರ್‌ಜೆಎಸ್ ಮುಖ್ಯ ಪರೀಕ್ಷೆ 2018ರ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದೆ. ಟಾಪ್-10 ಅಭ್ಯರ್ಥಿಗಳಲ್ಲಿ ಪ್ರಥಮ ಮತ್ತು 10ನೇ ಸ್ಥಾನವನ್ನು ಹೊರತುಪಡಿಸಿ ಉಳಿದ 8 ಸ್ಥಾನಗಳಲ್ಲಿ ಯುವತಿಯರೇ ಇದ್ದಾರೆ. 197 ಅಂಕ ಗಳಿಸಿರುವ ಮಯಾಂಕ್ ಪ್ರಥಮ ಮತ್ತು 187.5 ಅಂಕ ಪಡೆದಿರುವ ತನ್ವಿ ಮಾಥುರ್ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಮಹಿಳಾ ವಿಭಾಗದಲ್ಲಿ ತನ್ವಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಸಂದರ್ಶನದಲ್ಲಿ ಹಾಜರಾದ 499 ಅಭ್ಯರ್ಥಿಗಳ ಪೈಕಿ 197 ಜನರನ್ನು ಆಯ್ಕೆ ಮಾಡಲಾಗಿದೆ.

    ಮಯಾಂಕ್ ತಂದೆ ರಾಜ್‍ಕುಮಾರ್ ಸಿಂಗ್ ಮತ್ತು ತಾಯಿ ಡಾ.ಮಂಜು ಸಿಂಗ್ ಶಿಕ್ಷಕರಾಗಿದ್ದಾರೆ. 2014ರಲ್ಲಿ ರಾಜಸ್ಥಾನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡ ಮಯಾಂಕ್, ಇದೇ ವರ್ಷ ಅವರು 5 ವರ್ಷಗಳ ಎಲ್‍ಎಲ್‍ಬಿ ವ್ಯಾಸಂಗ ಪೂರ್ಣಗೊಳಿಸಿದರು. ಈ ಮಧ್ಯೆ 2018ರಲ್ಲಿ ಆರ್‌ಜೆಎಸ್ ಪರೀಕ್ಷೆ ಬರೆದು, ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಾಧನೆಯು ಮಯಾಂಕ್ ಅವರಿಗೆ ವಿಶೇಷವಾಗಿದೆ. ಏಕೆಂದರೆ ಅವರು ತಮ್ಮ ಕುಟುಂಬದಲ್ಲಿ ಕಾನೂನು ಕ್ಷೇತ್ರಕ್ಕೆ ಹೋದ ಮೊದಲ ವ್ಯಕ್ತಿಯಾಗಿದ್ದಾರೆ.

    ಈ ಕುರಿತು ಮಾತನಾಡಿರುವ ಮಯಾಂಕ್, ಆಯ್ಕೆ ಆಗುತ್ತೇನೆ ಎನ್ನುವ ಭರವಸೆ ಇತ್ತು. ಆದರೆ ಅಗ್ರಸ್ಥಾನದಲ್ಲಿ ಇರುತ್ತೇನೆ ಎಂದು ಯೋಚಿಸಿರಲಿಲ್ಲ. ಆರ್‌ಜೆಎಸ್ ಪರೀಕ್ಷೆ ಬರೆಯಲು ಇದ್ದ ಕನಿಷ್ಠ ವಯಸ್ಸಿನ ಮಿತಿಯನ್ನು 23ರಿಂದ 21ಕ್ಕೆ ಇಳಿಸಿದ್ದರಿಂದ ನನ್ನ ವೃತ್ತಿಜೀವನವನ್ನು ಬಹು ಬೇಗ ಪ್ರಾರಂಭಿಸಲು ಅವಕಾಶ ಸಿಕ್ಕಿತು. ಕಿರಿಯ ವಯಸ್ಸಿನಲ್ಲಿ ಈ ಸೇವೆಗೆ ಬರುವಂತಾಯಿತು ಎಂದು ಹೇಳಿದ್ದಾರೆ.

    ಮಯಾಂಕ್ ಪ್ರತಿದಿನ 5 ರಿಂದ 7 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾರೆ. ಬಿಡುವಿನ ವೇಳೆ ಕಾದಂಬರಿಗಳನ್ನು ಓದುವುದರ ಬಗ್ಗೆಯೂ ಒಲವು ತೋರುತ್ತಾರೆ. ಜೊತೆಗೆ ಅನೇಕ ಎನ್‍ಜಿಓ ಗಳೊಂದಿಗೆ ಗುರುತಿಸಿಕೊಂಡಿದ್ದಾರೆ.

  • ಬಸ್ ಒಳಗಡೆ ನುಗ್ಗಿತು ಲಾರಿ, ರಸ್ತೆಗೆ ಹಾರಿತು ಸೀಟ್‍ಗಳು – ಭೀಕರ ಅಪಘಾತಕ್ಕೆ 14 ಬಲಿ

    ಬಸ್ ಒಳಗಡೆ ನುಗ್ಗಿತು ಲಾರಿ, ರಸ್ತೆಗೆ ಹಾರಿತು ಸೀಟ್‍ಗಳು – ಭೀಕರ ಅಪಘಾತಕ್ಕೆ 14 ಬಲಿ

    ಜೈಪುರ: ಬೆಳ್ಳಂಬೆಳಗ್ಗೆ ಖಾಸಗಿ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ 14 ಮಂದಿ ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಇಂದು ಬೆಳಗ್ಗೆ 7:30ರ ವೇಳೆಗೆ ರಾಜಸ್ಥಾನದ ದಂಗರ್ ಗಢ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಬಸ್ಸು ಬಿಕಾನೆರ್ ನಿಂದ ಜೈಪುರದತ್ತ ಸಾಗುತ್ತಿತ್ತು. ಈ ವೇಳೆ ದಂಗರ್ ಗಢ ಬಳಿ ಏಕಾಏಕಿ ಎದುರಿನಿಂದ ಬರುತ್ತಿದ್ದ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಲಾರಿ ಮುಂಭಾಗ ಬಸ್ ಒಳಗೆ ನುಗ್ಗಿದೆ. ಲಾರಿ ಒಳಗಡೆ ನುಗ್ಗಿದ ಪರಿಣಾಮ ಬಸ್ಸಿನ ಸೀಟ್‍ಗಳು ಹಾರಿ ನೆಲಕ್ಕೆ ಬಿದ್ದಿದೆ. ಸ್ವಲ್ಪ ಸಮಯದ ನಂತರ ಎರಡೂ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

    ಈ ಭೀಕರ ಅಪಘಾತದ ನಂತರ ಪ್ರಯಾಣಿಕರ ಚೀರಾಟ ಕೇಳಿ ಸ್ಥಳೀಯರು ತಕ್ಷಣ ಸಹಾಯಕ್ಕಾಗಿ ಧಾವಿಸಿದರು. ಹಾಗೆಯೇ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಆದರೆ ಅಪಘಾತದಲ್ಲಿ 10 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 20ರಿಂದ 25 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 4 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಹಾಗೆಯೇ ಹಲವರ ಸ್ಥತಿ ಗಂಭಿರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಪಘಾತ ಸಂಭವಿಸಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಸ್ಥಳದಲ್ಲಿ ವಾಹನಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ.

    ಈ ಬಗ್ಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಎನ್‍ಎಚ್ 11ರಲ್ಲಿ ನಡೆದ ಅಪಘಾತದ ವಿಷಯ ತಿಳಿದು ನೋವಾಗಿದೆ. ಅಪಘಾತದಲ್ಲಿ ಪ್ರಯಾಣಿಕರು ಜೀವ ಕಳೆದುಕೊಂಡಿದ್ದಾರೆ. ಇದು ಹೃದಯ ಕದಡುವ ಸಂಗತಿ, ಮೃತರ ಕುಟುಂಬಸ್ಥರ ಸ್ಥಿತಿ ಏನೆಂದು ನನ್ನಿಂದ ಆಲೋಚಿಸಲೂ ಸಾಧ್ಯವಿಲ್ಲ. ಅವರಿಗೆ ಈ ನೋವನ್ನು ತಡೆಯುವ ಶಕ್ತಿ ದೇವರು ಕೊಡಲಿ. ಗಾಯಾಳುಗಳಿಗಾಗಿ ಪ್ರಾರ್ಥಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

  • ಲಕ್ಷ ಲಕ್ಷ ವರದಕ್ಷಿಣೆ ನಿರಾಕರಿಸಿ 11 ರೂ. ಪಡೆದ ಸಿಐಎಸ್ಎಫ್ ಯೋಧ

    ಲಕ್ಷ ಲಕ್ಷ ವರದಕ್ಷಿಣೆ ನಿರಾಕರಿಸಿ 11 ರೂ. ಪಡೆದ ಸಿಐಎಸ್ಎಫ್ ಯೋಧ

    ಜೈಪುರ: ವಧುವಿನ ತಂದೆ ವರನಿಗೆ ಮದುವೆ ಸಮಾರಂಭದಲ್ಲಿ ನೀಡಲು ಬಂದ 11 ಲಕ್ಷ ರೂ. ವರದಕ್ಷಿಣೆಯನ್ನು ವರ ನಿರಾಕರಿಸುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಸಿಐಎಸ್ಎಫ್ ಯೋಧ ಜಿತೇಂದ್ರ ಸಿಂಗ್ ವರದಕ್ಷಿಣೆ ನಿರಾಕರಿಸಿ ಮಾದರಿಯಾಗಿದ್ದು, ಇದೇ ತಿಂಗಳ 8 ರಂದು ಜೈಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಮದುವೆಯ ವೇಳೆ ವಧುವಿನ ತಂದೆ ಸಾಂಪ್ರಧಾಯಿಕವಾಗಿ ನೀಡುವ ತೆಂಗಿನ ಕಾಯಿಯೊಂದಿಗೆ 11 ಲಕ್ಷ ರೂ. ಗಳನ್ನು ವರನಿಗೆ ನೀಡಲು ತಂದಿದ್ದರು. ಆದರೆ ವರದಕ್ಷಿಣೆಯನ್ನು ನಿರಾಕರಿಸಿದ ಜಿತೇಂದ್ರ ಅವರು ಕೇವಲ 11 ರೂ. ಹಾಗೂ ತೆಂಗಿನ ಕಾಯಿಯನ್ನು ಸ್ವೀಕರಿಸಿದ್ದಾರೆ.

    ವರದಕ್ಷಿಣೆ ನಿರಾಕರಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಜಿತೇಂದ್ರ ಸಿಂಗ್, ತಾನು ಮದುವೆಯಾಗುತ್ತಿರುವ ಯುವತಿ ರಾಜಸ್ಥಾನ ನ್ಯಾಯಾಂಗ ಸೇವೆಯಲ್ಲಿ ಕಾರ್ಯನಿರ್ವಹಿಸಲು ಪರೀಕ್ಷೆಯನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ಆಗಲಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಹೆಮ್ಮೆ ಎನಿಸಲಿದ್ದು, ಹಣಕ್ಕಿಂತಲೂ ಹೆಚ್ಚಿನ ಗೌರವವನ್ನು ತಂದುಕೊಡುತ್ತದೆ ಎಂದಿದ್ದಾರೆ.

    ವಧುವಿನ ತಂದೆ ಗೋವಿಂದ್ ಸಿಂಗ್ ಮಾತನಾಡಿ, ಮೊದಲು ವರ ವರದಕ್ಷಿಣೆ ಬೇಡ ಎನ್ನುತ್ತಿದಂತೆ ನನಗೆ ಶಾಕ್ ಆಗಿತ್ತು. ವರನ ಕುಟುಂಬಸ್ಥರಿಗೆ ಮದುವೆ ಕಾರ್ಯಗಳು ಖುಷಿ ಕೊಟ್ಟಿಲ್ಲ ಎನಿಸಿತ್ತು. ಆದರೆ ಆ ಬಳಿಕವೇ ಅವರು ವರದಕ್ಷಿಣೆ ನಿರಾಕರಿಸುತ್ತಿರುವ ಕಾರಣ ತಿಳಿಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಜಿತೇಂದ್ರ ಸಿಂಗ್ ಅವರ ಪತ್ನಿ ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಈಗ ಡಾಕ್ಟರೇಟ್ ಓದುತ್ತಿದ್ದಾರೆ. ಮದುವೆಯಾದ ಬಳಿಕವೂ ವಿದ್ಯಾಭ್ಯಾಸ ಮುಂದುವರಿಸಲು ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದಾರೆ.

  • ವೈದ್ಯ, ರಿಸೆಪ್ಷನಿಸ್ಟ್ ಕಳ್ಳಾಟ – ತಾಯಿ, ಮಗನಿಗೆ ಬೆಂಕಿಯಿಟ್ಟ ಅತ್ತೆ, ಸೊಸೆ

    ವೈದ್ಯ, ರಿಸೆಪ್ಷನಿಸ್ಟ್ ಕಳ್ಳಾಟ – ತಾಯಿ, ಮಗನಿಗೆ ಬೆಂಕಿಯಿಟ್ಟ ಅತ್ತೆ, ಸೊಸೆ

    – ಇಬ್ಬರಿಗೂ ಕೆಮಿಕಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ರು

    ಜೈಪುರ: ಪತಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಕ್ಕೆ ಮಹಿಳೆ ಮತ್ತು ಆಕೆಯ ಪುತ್ರನನ್ನು ತಾಯಿ ಮತ್ತು ಪತ್ನಿ ಸಜೀವವಾಗಿ ಸುಟ್ಟ ಅಮಾನುಷ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಭರತ್‍ಪುರದಲ್ಲಿ ಈ ಘಟನೆ ನಡೆದಿದೆ. ದೀಪಾ ದೇವಿ(25) ಮತ್ತು ಸೂರ್ಯ(6) ಮೃತ ದುರ್ದೈವಿಗಳು. ವೈದ್ಯ ಸಂದೀಪ್ ಗುಪ್ತ ತಾಯಿ ಹಾಗೂ ಪತ್ನಿ ಸೀಮಾ ಗುಪ್ತ ಕೊಲೆ ಮಾಡಿದ ಆರೋಪಿಗಳು.

    ವೈದ್ಯ ಸಂದೀಪ್ ಗುಪ್ತ ನಡೆಸುತ್ತಿದ್ದ ಆಸ್ಪತ್ರೆಯಲ್ಲಿ ದೀಪಾ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳಿಂದ ಸಂದೀಪ್ ಹಾಗೂ ದೀಪಾ ಅನೈತಿಕ ಸಂಬಂಧ ಹೊಂದಿದ್ದರು. ಅಲ್ಲದೆ ದೀಪಾ ರಿಸೆಪ್ಷನಿಸ್ಟ್ ಕೆಲಸ ಬಿಟ್ಟ ಬಳಿಕ ಆಕೆಗೆ ಸಂದೀಪ್ ಒಂದು ಬ್ಯೂಟಿಪಾರ್ಲರ್ ಹಾಗೂ ಮನೆಯನ್ನು ಕೂಡ ಮಾಡಿಕೊಟ್ಟಿದ್ದನು. ಅವರಿಬ್ಬರಿಗೂ ಒಬ್ಬ ಮಗ ಕೂಡ ಇದ್ದನು.

    ಈ ಬಗ್ಗೆ ಪತ್ನಿ ಸೀಮಾಗೆ ವಿಷಯ ತಿಳಿದ ತಕ್ಷಣ ಅತ್ತೆಯ ಬಳಿ ಪತಿಯ ಅಕ್ರಮ ಸಂಬಂಧದ ಗುಟ್ಟು ಬಿಚ್ಚಿಟ್ಟಿದ್ದಾಳೆ. ಮಗನ ಕರ್ಮಕಾಂಡ ಕೇಳಿ ಸಿಟ್ಟಿಗೆದ್ದ ತಾಯಿ ಸೊಸೆ ಜೊತೆ ಸೇರಿ ದೀಪಾಳನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ. ಬುಧವಾರ ದೀಪಾಳ ಮನೆಗೆ ಹೋಗಿ ಆಕೆ ಹಾಗೂ ಸೂರ್ಯ ಮೇಲೆ ಕೆಮಿಕಲ್ ಸ್ಪ್ರೇ ಮಾಡಿ, ಇಬ್ಬರಿಗೂ ಬೆಂಕಿ ಹಚ್ಚಿ ರೂಮ್‍ನಲ್ಲಿ ಕೂಡಿ ಹಾಕಿ ತಮ್ಮ ಮನೆಗೆ ವಾಪಸ್ ಹೋಗಿದ್ದಾರೆ.

    ಇತ್ತ ತಾಯಿ, ಮಗ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ. ಮೊದಲು ತಾಯಿ, ಮಗ ಸಿಲಿಂಡರ್ ಸ್ಫೋಟ ಅಥವಾ ಬೆಂಕಿ ಅವಘಡದಿಂದ ಸಾವನ್ನಪ್ಪಿದ್ದಾರೆ ಎಂದು ನೆರೆಹೊರೆಯವರು ತಿಳಿದಿದ್ದರು. ಆದರೆ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡ ಬಳಿಕ ಸತ್ಯಾಂಶ ಹೊರಬಿದ್ದಿದೆ. ದೀಪಾ ಬಗ್ಗೆ ಅಕ್ಕಪಕ್ಕದ ಮನೆಯವರನ್ನ ವಿಚಾರಿಸಿದಾಗ ವೈದ್ಯನೊಂದಿಗೆ ಆಕೆಯ ಅಕ್ರಮ ಸಂಬಂಧದ ಬಗ್ಗೆ ಬಯಲಾಗಿದೆ.

    ಈ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಸದ್ಯ ಸೀಮಾ ಹಾಗೂ ಸಂದೀಪ್ ತಾಯಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.