Tag: Jaipur

  • ರಸಗೊಬ್ಬರ ಹಗರಣ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಗಳ ಮೇಲೆ ಇಡಿ ದಾಳಿ

    ರಸಗೊಬ್ಬರ ಹಗರಣ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಗಳ ಮೇಲೆ ಇಡಿ ದಾಳಿ

    ಜೈಪುರ: ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರ ನಿವಾಸ ಹಾಗೂ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಚಿನ್ ಪೈಲಟ್ ಬಂಡಾಯದ ನಡುವೆ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಸಂದರ್ಭದಲ್ಲೇ ಇಡಿ ಅಧಿಕಾರಿಗಳು ಅಗ್ರಸೈನ್ ಗೆಹ್ಲೋಟ್ ಆಸ್ತಿಗಳ ಮೇಲೆ ದಾಳಿ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

    ಹಗರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಡಿ ದಾಳಿ ನಡೆಸಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿ ಸೇರಿದಂತೆ ದೇಶದ 13 ಕಡೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

    ಇಡಿ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ಸಬ್ಸಿಡಿ ದರದಲ್ಲಿ ಇಂಡಿಯನ್ ಪೊಟಾಷ್ ಲಿಮಿಟೆಡ್ ಅಧಿಕೃತವಾಗಿ ರಸಗೊಬ್ಬರಗಳನ್ನು ಪೂರೈಸುತ್ತದೆ. ಈ ಗೊಬ್ಬರವನ್ನು ರೈತರು ಸಬ್ಸಿಡಿ ದರದಲ್ಲಿ ಖರೀದಿ ಮಾಡುತ್ತಾರೆ. ಆದರೆ ಅಗ್ರಸೈನ್ ಗೆಹ್ಲೋಟ್ ಸೇರಿದ ಅನುಪಮ್ ಕೃಷಿ ಸಂಸ್ಥೆ 2007 ರಿಂದ 2009ರ ನಡುವೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಖರೀದಿ ಮಾಡಿ ಅದನ್ನು ರೈತರಿಗೆ ಮಾರಾಟ ಮಾಡದೆ ಬೇರೆ ಕಂಪನೆಗಳಿಗೆ ಮಾರಾಟ ಮಾಡಿದೆ. ಆ ಸಂಸ್ಥೆಗಳು ಗೊಬ್ಬರವನ್ನು ಮಲೇಷಿಯಾ, ಸಿಂಗಪೂರಕ್ಕೆ ಅಕ್ರಮವಾಗಿ ರಪ್ತು ಮಾಡಿವೆ.

    2013-13 ರಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳು ಈ ಹಗರಣವನ್ನು ಬೆಳಕಿಗೆ ತಂದಿದ್ದರು. ಆ ವೇಳೆ ಹಗರಣದ ಕುರಿತು ಪ್ರತಿಕ್ರಿಯೆ ನೀಡಿದ್ದ ಅಗ್ರಸೈನ್ ಗೆಹ್ಲೋಟ್, ತಮ್ಮಿಂದ ಕೆಲ ಮಧ್ಯವರ್ತಿಗಳು ರೈತರಿಗೆ ರಸಗೊಬ್ಬರ ನೀಡುವುದಾಗಿ ಖರೀದಿ ಮಾಡಿ ಅದನ್ನು ರಪ್ತು ಮಾಡಿದ್ದಾರೆ ಎಂದು ಹೇಳಿದ್ದರು. ಸಬ್ಸಿಡಿಯುಕ್ತ ಪೊಟ್ಯಾಷ್ ರಫ್ತು ಮಾಡುವುದರ ಮೇಲೆ ನಿಷೇಧ ವಿದ್ದರು ಅಗ್ರಸೈನ್ ಸಂಸ್ಥೆ ರಫ್ತು ಮಾಡಿದೆ ಎಂದು ಬಿಜೆಪಿ 2017ರಲ್ಲಿ ಆರೋಪ ಮಾಡಿತ್ತು.

  • ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿ ಬಾಗಿಲು ತೆರೆದಿದೆ ಎಂದ ಕಾಂಗ್ರೆಸ್

    ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿ ಬಾಗಿಲು ತೆರೆದಿದೆ ಎಂದ ಕಾಂಗ್ರೆಸ್

    -ಪೈಲಟ್ ಮನವೊಲಿಸಲು ಹಿರಿಯ ನಾಯಕರ ಯತ್ನ

    ಜೈಪುರ: ರಾಜಸ್ಥಾನದ ರಾಜಕೀಯದ ಬಿಕ್ಕಟ್ಟು ಮುಂದುವರಿದಿದ್ದು, ಸೋಮವಾರವಷ್ಟೇ ರಾಜಸ್ಥಾನ ಕಾಂಗ್ರೆಸ್ ಪಕ್ಷ ತನ್ನ ಶಾಸಕಾಂಗ ಸಭೆ ನಡೆಸಿ ಬಳಿಕ ಶಾಸಕರನ್ನು ರೆಸಾರ್ಟ್‍ಗೆ ಶಿಫ್ಟ್ ಮಾಡಿತ್ತು. ಆದರೆ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಭಾವುಟ ಹರಿಸಿರುವ ಸಚಿನ್ ಪೈಲಟ್‍ಗೆ ಇನ್ನು ಪಕ್ಷದ ಬಾಗಿಲುಗಳು ತೆರೆದಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಚಿನ್ ಪೈಲಟ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಸದ್ಯ ಲಭಿಸಿದೆ. ಇದಕ್ಕೆ ಪೂರಕ ಎಂಬಂತೇ ಅವಿನಾಶ್ ಪಾಂಡೆ ಕೂಡ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಅಹ್ಮದ್ ಪಟೇಲ್‍ರಂತಹ ನಾಯಕರು ಸಚಿನ್ ಪೈಲಟ್‍ರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

    ಇತ್ತ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ 18 ಶಾಸಕರಿಗೆ ನೋಟಿಸ್ ನೀಡಲಾಗಿದ್ದು, 2 ದಿನಗಳ ಒಳಗೆ ಶಾಸಕರು ನೋಟಿಸ್‍ಗೆ ಉತ್ತರಿಸಿಬೇಕು ಎಂದು ತಿಳಿಸಿದ್ದು, ಇಲ್ಲವಾದರೆ ಅನರ್ಹತೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಕೆಲ ಶಾಸಕರು ನಿವಾಸದಲ್ಲಿ ಇಲ್ಲದ ಕಾರಣ ಅವರ ನಿವಾಸಗಳ ಗೋಡೆಗೆ ನೋಟಿಸ್ ಅಂಟಿಸಲಾಗಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಸಭೆಗೆ ಗೈರಾಗಿದ್ದ ಶಾಸಕರ ವಿರುದ್ಧ ಕ್ರಮಕೈಗೊಳ್ಳಲು ಸ್ಪೀಕರ್‍ಗೆ ಮನವಿ ಸಲ್ಲಿಸಿದೆ. ಮುಂದಿನ ಎರಡು ದಿನಗಳಲ್ಲಿ ಶಾಸಕರು ಸಭೆಗೆ ಗೈರಾದ ಬಗ್ಗೆ ವಿವರಣೆ ನೀಡದಿದ್ದರೆ ಸಿಎಲ್‍ಪಿಗೆ ರಾಜೀನಾಮೆ ನೀಡಿರುವುದಾಗಿ ಪರಿಗಣಿಸಲಾಗುತ್ತದ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಷ್ ಪಾಂಡೆ ತಿಳಿಸಿದ್ದಾರೆ.

    ಇತ್ತ ಪಕ್ಷದಲ್ಲಿ ಉಂಟಾಗಿರುವ ಬಂಡಾಯದ ಕಾರಣ ಬಿಜೆಪಿ ಅಧ್ಯಕ್ಷ ಸತೀಶ್ ಪುನಿಯಾ ಪಕ್ಷದ ಹಿರಿಯ ನಾಯಕರೊಂದಿಗೆ ಜೈಪುರದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೈಲಟ್ ಬಂಡಾಯದ ಕಾರಣದ ಉಂಟಾಗಿರುವ ರಾಜಕೀಯ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಲ್ಲದೇ ಸದ್ಯದ ಸ್ಥಿತಿಯಲ್ಲಿ ಅಶೋಕ್ ಗೆಹ್ಲೋಟ್ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಭಾವಿಸುತ್ತಿಲ್ಲ. ಅಂತಹ ಸಂದರ್ಭ ಎದುರಾದರೆ ಬಿಜೆಪಿ ಖಂಡಿತ ಬಹುಮತ ಸಾಬೀತು ಮಾಡಲು ಡಿಮಾಂಡ್ ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಹೇಳಿದ್ದಾರೆ.

  • ಸಚಿನ್ ಪೈಲಟ್ ನೆಪ ಮಾತ್ರಕ್ಕೆ, ಭಿನ್ನಮತದ ಹಿಂದೆ ಬಿಜೆಪಿ ನಾಯಕರಿದ್ದಾರೆ: ಗೆಹ್ಲೋಟ್ ಆರೋಪ

    ಸಚಿನ್ ಪೈಲಟ್ ನೆಪ ಮಾತ್ರಕ್ಕೆ, ಭಿನ್ನಮತದ ಹಿಂದೆ ಬಿಜೆಪಿ ನಾಯಕರಿದ್ದಾರೆ: ಗೆಹ್ಲೋಟ್ ಆರೋಪ

    ಜೈಪುರ್: ರಾಜಸ್ಥಾನ ಸರ್ಕಾರದ ಭಿನ್ನಮತ ಚಟುವಟಿಕೆಯ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರ ಕೈವಾಡವಿದೆ. ಸಚಿನ್ ಪೈಲಟ್ ತೋರಿಕೆಗೆ ಮಾತ್ರ. ಅವರ ಕೈಯಲ್ಲಿ ಏನೂ ಇಲ್ಲ ಎಂದು ಸಿಎಂ ಅಶೋಕ್ ಗೆಹ್ಲೋಟ್ ಗಂಭೀರವಾಗಿ ಆರೋಪಿಸಿದ್ದಾರೆ.

    ಖಾಸಗಿ ಹೋಟೇಲಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿ, ಡಿಸಿಎಂ ಮತ್ತು ಇಬ್ಬರು ಮಂತ್ರಿಗಳನ್ನು ಸಂಪುಟದಿಂದ ಕೈ ಬಿಟ್ಟು ಬದಲಿ ಶಾಸಕರನ್ನು ಸಚಿವರನ್ನಾಗಿ ಮಾಡುವ ಬಗ್ಗೆ ಚರ್ಚಿಸಿದರು. ಇದೇ ವೇಳೆ ಶಾಸಕರ ಪರೇಡ್ ನಡೆಸುವ ಬಗ್ಗೆಯೂ ತಿಳಿಸಿದ್ದಾರೆ ಎನ್ನಲಾಗಿದೆ.

    ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಗೆಹ್ಲೋಟ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಸಂಚು ರೂಪಿಸುತ್ತಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಸಾಕಷ್ಟು ಬಾರಿ ಈ ಪ್ರಯತ್ನಗಳು ನಡೆದಿದೆ ಎಂದು ಗೆಹ್ಲೋಟ್ ಆರೋಪಿಸಿದರು. ಇದನ್ನೂ ಓದಿ: ಪಕ್ಷದಿಂದ ಉಚ್ಛಾಟನೆ – ಸತ್ಯಕ್ಕೆ ಸೋಲಿಲ್ಲ ಎಂದ ಸಚಿನ್ ಪೈಲಟ್

    ಕುದುರೆ ವ್ಯಾಪಾರದ ಭಾಗವಾಗಿ ಹಲವು ಶಾಸಕರೊಂದಿಗೆ ಸಚಿನ್ ಪೈಲಟ್ ದೆಹಲಿಗೆ ತೆರಳಿದ್ದರು. ಇಲ್ಲಿ ಸಚಿನ್ ಪೈಲಟ್ ತೋರಿಕೆಗೆ ಮಾತ್ರವಿದ್ದು, ಶಾಸಕರಿಗೆ ರೆಸಾರ್ಟ್ ವ್ಯವಸ್ಥೆಯನ್ನು ಬಿಜೆಪಿ ನಾಯಕರು ಮಾಡಿಕೊಟ್ಟಿದ್ದಾರೆ. ಮಧ್ಯಪ್ರದೇಶದಲ್ಲೂ ಇದೇ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸಚಿವರು ಸೇರಿ ಸಚಿನ್ ಪೈಲಟ್ ಅವರನ್ನು ಸ್ಥಾನದಿಂದ ಕೆಳಗಿಳಿಸಿ ಬೇರೆಯವರನ್ನು ನೇಮಿಸಿದೆ ಎಂದು ಗೆಹ್ಲೋಟ್ ಹೇಳಿದರು.

  • ಮಗನ ಮದ್ವೆಗೆ 50ಕ್ಕಿಂತ ಹೆಚ್ಚಿನ ಅತಿಥಿಗಳ ಆಹ್ವಾನ- 6.26 ಲಕ್ಷ ದಂಡ

    ಮಗನ ಮದ್ವೆಗೆ 50ಕ್ಕಿಂತ ಹೆಚ್ಚಿನ ಅತಿಥಿಗಳ ಆಹ್ವಾನ- 6.26 ಲಕ್ಷ ದಂಡ

    – ಅತಿಥಿಗಳಲ್ಲಿ 15 ಮಂದಿಗೆ ಕೊರೊನಾ ದೃಢ
    – ಸೋಂಕಿತರ ಖರ್ಚಿಗಾಗಿ ರಾಜ್ಯ ಸರ್ಕಾರ ದಂಡ

    ಜೈಪುರ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಅನೇಕ ನಿರ್ಬಂಧವನ್ನು ಹೇರಿದೆ. ಆದರೂ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕುಟುಂಬವೊಂದು ಮದುವೆಗೆ 50ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಇದಕ್ಕಾಗಿ 6.26 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಡಾಡಾ ಮೊಹಲ್ಲಾ ನಿವಾಸಿ ಘಿಸುಲಾಲ್ ರತಿ ಜೂನ್ 13 ರಂದು ತಮ್ಮ ಮಗನ ಮದುವೆಗೆ ಒಂದು ಸಮಾರಂಭವನ್ನು ಏರ್ಪಡಿಸಿದ್ದರು. ಈ ಸಮಾರಂಭಕ್ಕೆ 50ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಈ ಮೂಲಕ ಘಿಸುಲಾಲ್ ರತಿ ಸರ್ಕಾರ ಕೋವಿಡ್-19 ನಿರ್ವಹಣೆಗೆ ಆದೇಶಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

    ಕಾರ್ಯಕ್ರಮದ ನಂತರ 15 ಅತಿಥಿಗಳಲ್ಲಿ ಕೊರೊನಾ ಇರುವುದು ದೃಢವಾಗಿದೆ. ಅಲ್ಲದೇ ಅವರಲ್ಲಿ ಒಬ್ಬ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭಟ್ ತಿಳಿಸಿದ್ದಾರೆ.

    ಈ ಸಂಬಂಧ ಜೂನ್ 22 ರಂದು ರತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

    ಕೊರೊನಾ ಪಾಸಿಟಿವ್ ಬಂದ ರೋಗಿಗಳಿಗೆ ಐಸೋಲೇಷನ್ ವಾರ್ಡ್, ಕ್ವಾರಂಟೈನ್ ಸೌಲಭ್ಯ, ಆಹಾರ, ಅಂಬುಲೆನ್ಸ್ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರವು 6,26,600 ರೂಪಾಯಿಯನ್ನು ದಂಡವಾಗಿ ವಿಧಿಸಲಾಗಿದೆ. ಆ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವಂತೆ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಭಟ್ ಹೇಳಿದ್ದಾರೆ.

  • ಪತ್ನಿಯ ಮೇಲೆ ಸ್ನೇಹಿತ ಅತ್ಯಾಚಾರ- ಲಾಠಿ ಹಿಡಿದು ರೂಮಿನ ಹೊರಗೆ ಪತಿ ಕಾವಲು

    ಪತ್ನಿಯ ಮೇಲೆ ಸ್ನೇಹಿತ ಅತ್ಯಾಚಾರ- ಲಾಠಿ ಹಿಡಿದು ರೂಮಿನ ಹೊರಗೆ ಪತಿ ಕಾವಲು

    – ಗೆಳೆಯನ ಮುಂದೆಯೇ ರೂಮಿಗೆ ಎಳೆದ್ಕೊಂಡು ಹೋದ

    ಜೈಪುರ: ವ್ಯಕ್ತಿಯೊಬ್ಬ ಪತ್ನಿಯ ಮೇಲೆ ತನ್ನ ಸ್ನೇಹಿತ ಅತ್ಯಾಚಾರ ಎಸಗುತ್ತಿದ್ದರೆ ರೂಮಿನ ಹೊರಗೆ ಲಾಠಿ ಹಿಡಿದು ಕಾವಲು ಕಾಯುತ್ತಿದ್ದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್ಪುರ ಪ್ರದೇಶದಲ್ಲಿ ನಡೆದಿದೆ.

    ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆ 18 ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ಸಂತ್ರಸ್ತೆ ಜೂನ್ 4 ರಂದು ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಮೇ 31 ರಂದು ಮಾರುಕಟ್ಟೆಗೆ ಹೋಗುವ ನೆಪದಲ್ಲಿ ಪತಿ ಸಂತ್ರಸ್ತೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದನು. ದಾರಿಯಲ್ಲಿ ಆರೋಪಿ ತನ್ನ ಸ್ನೇಹಿತ ಮಿಚ್ಚು ಅಲಿಯಾಸ್ ಬಲ್ವಂತ್ ಧಾನಕ್‍ನನ್ನು ಅದೇ ಬೈಕ್‍ನಲ್ಲಿ ತನ್ನೊಂದಿಗೆ ಬರಲು ಕೇಳಿಕೊಂಡಿದ್ದಾನೆ ಎಂದು ಸ್ಟೇಷನ್ ಹೌಸ್ ಆಫೀಸರ್ ಸುರೇಂದ್ರ ಸಿಂಗ್ ರಾವತ್ ಹೇಳಿದರು.

    ಪತಿ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದನು. ಬೈಕಿನಿಂದ ಇಳಿದು ಸ್ವಲ್ಪ ಸಮಯ ಅಲ್ಲೆ ಕುಳಿತ್ತಿದ್ದೆವು. ಆಗ ಧಾನಕ್ ಬಂದು ನನ್ನನ್ನು ಹತ್ತಿರದಲ್ಲಿದ್ದ ರೂಮಿಗೆ ಎಳೆದುಕೊಂಡು ಹೋದ. ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದಾಗ ಪತಿ ಲಾಠಿ ಹಿಡಿದು ರೂಮಿನ ಹೊರಗೆ ಕಾವಲು ನಿಂತಿದ್ದನು. ಹೀಗಾಗಿ ತನ್ನ ಸ್ನೇಹಿತ ನನ್ನ ಮೇಲೆ ಅತ್ಯಾಚಾರ ನಡೆಸಲು ಅವಕಾಶ ನೀಡಲು ಪತಿ ಸಂಚು ರೂಪಿಸಿದ್ದನು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

    ಘಟನೆಯ ನಂತರ ಆರೋಪಿ ಧಾನಕ್ ಮತ್ತು ಸಂತ್ರಸ್ತೆಯ ಪತಿ ಕೂಡ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆ ನಂತರ ತನ್ನ ಪೋಷಕರ ಮನೆಗೆ ಹೋದಾಗ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಆಗ ಸಂತ್ರಸ್ತೆಯ ತಂದೆ ಮಗಳ ಜೊತೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿದ್ದಾರೆ.

    ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ತನಿಖೆ ನಡೆಸಿದ್ದಾರೆ. ಇದೀಗ ಈ ಪ್ರಕರಣವನ್ನು ಡಿಎಸ್‍ಪಿ ಲೋಕೇಶ್ ಮೀನಾ ಅವರಿಗೆ ಹಸ್ತಾಂತರಿಸಲಾಗಿದೆ.

  • ವಿವಾಹಿತೆ ಜೊತೆ ಅಕ್ರಮ ಸಂಬಂಧ- ಬಲವಂತವಾಗಿ ಮೂತ್ರ ಕುಡಿಸಿ, ವಿಡಿಯೋ ರೆಕಾರ್ಡ್

    ವಿವಾಹಿತೆ ಜೊತೆ ಅಕ್ರಮ ಸಂಬಂಧ- ಬಲವಂತವಾಗಿ ಮೂತ್ರ ಕುಡಿಸಿ, ವಿಡಿಯೋ ರೆಕಾರ್ಡ್

    – ಸಿಎಂ, ಪೊಲೀಸರಿಗೆ ವಿಡಿಯೋ ಟ್ಯಾಗ್

    ಜೈಪುರ: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಸ್ಥಳೀಯ ಗುಂಪೊಂದು ಯುವಕನಿಗೆ ಬಲವಂತವಾಗಿ ಮೂತ್ರ ಕುಡಿಸಿ, ಥಳಿಸಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ 8 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಯುವಕನನ್ನು ಸಿರೋಹಿ ಜಿಲ್ಲೆಯ ಭೇವ್ ಪಲಾಡಿ ಗ್ರಾಮದ ನಿವಾಸಿ ಕಲುರಾಮ್ (24) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಗ್ರಾಮಸ್ಥರು ಶಿಕ್ಷೆಯನ್ನು ವಿಧಿಸಿದ್ದಾರೆ. ಅದರಂತೆಯೇ ಶಿಕ್ಷೆಯ ಭಾಗವಾಗಿ ಜನಸಮೂಹದ ಮುಂದೆ ಮೂತ್ರ ಮತ್ತು ಶೂನಿಂದ ನೀರನ್ನು ಕುಡಿಯುವಂತೆ ಒತ್ತಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸುಮೇರ್ ಪುರ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ತನ್ನ ಗ್ರಾಮದ 8 ಮಂದಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾನೆ. ಎಫ್‍ಐಆರ್ ಪ್ರಕಾರ, ಜೂನ್ 11ರಂದು ನಾನು ನನ್ನ ಚಿಕ್ಕಪ್ಪನನ್ನು ಭೇವ್‍ನಿಂದ ಭರೋಂಡಾ ಗ್ರಾಮಕ್ಕೆ ಬಿಡಲು ಹೋಗಿದ್ದೆ. ಈ ವೇಳೆ ಪುರುಷರ ಗುಂಪೊಂದು ನನ್ನನ್ನು ಅಪಹರಿಸಿ ಬಲವಂತವಾಗಿ ಮದ್ಯದ ಬಾಟಲಿನಲ್ಲಿದ್ದ ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಆರೋಪಿಗಳು ನನಗೆ ಥಳಿಸಿದ್ದು, ಅದನ್ನು ವಿಡಿಯೋ ಕೂಡ ಮಾಡಿದ್ದಾರೆ ಎಂದು ಕಲುರಾಮ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

    ಎಸ್‍ಪಿ ರಾಹುಲ್ ಕೊಟೆಕಿ ಮಾತನಾಡಿ, ಯುವಕ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಈ ವಿಚಾರ ತಿಳಿದ ಗ್ರಾಮದ ಕೆಲ ಜನರು ಕೋಪಗೊಂಡು ಆತನನ್ನು ಅಪಹರಿಸಿ ಮೂತ್ರ ಕುಡಿಯುವಂತೆ ಒತ್ತಾಯಿಸಿದ್ದಾರೆ. ನಾವು ಈ ಕುರಿತು ಎಫ್‍ಐಆರ್ ದಾಖಲಿಸಿದ್ದೇವೆ. 8 ಪ್ರಮುಖ ಆರೋಪಿಗಳಲ್ಲಿ 6 ಮಂದಿಯನ್ನು ಬಂಧಿಸಿದ್ದೇವೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಕಲುರಾಮ್‍ಗೆ ಬಲವಂತವಾಗಿ ಮೂತ್ರ ಕುಡಿಯುವ ವಿಡಿಯೊಗಳನ್ನು ಯುವರಾಜ್ ರಾಕೇಶ್ ಎಂಬಾತ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಈ ವಿಡಿಯೋವನ್ನು ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಜಸ್ಥಾನ ಪೊಲೀಸ್ , ಅನೇಕ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಿರೋಹಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ತನಿಖೆ ಮಾಡುವಂತೆ ರಾಜಸ್ಥಾನ ಗೃಹ ಇಲಾಖೆ ಆದೇಶಿಸಿದೆ.

  • ಗರ್ಭಿಣಿ ಮೇಲೆ ಸನ್ಯಾಸಿ ರೇಪ್- ಕಾಂಡೋಮ್, 19 ಮೊಬೈಲ್, 33 ಪೆನ್‍ಡ್ರೈವ್ ಪತ್ತೆ

    ಗರ್ಭಿಣಿ ಮೇಲೆ ಸನ್ಯಾಸಿ ರೇಪ್- ಕಾಂಡೋಮ್, 19 ಮೊಬೈಲ್, 33 ಪೆನ್‍ಡ್ರೈವ್ ಪತ್ತೆ

    – ದೊಡ್ಡ ಬ್ಯಾಗಿನಲ್ಲಿ 2 ಲ್ಯಾಪ್‍ಟಾಪ್, 4 ಹಾರ್ಡ್ ಡಿಸ್ಕ್ ಪತ್ತೆ

    ಜೈಪುರ: ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜೈನ ಸನ್ಯಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ಜೈನ ಸನ್ಯಾಸಿ ಮನೆಯಲ್ಲಿ ಪೆನ್ ಡ್ರೈವ್, ಕಾಂಡೋಮ್ ಪ್ಯಾಕೆಟ್ ಮತ್ತು ಎರಡು ಲ್ಯಾಪ್‍ಟಾಪ್, ಮೊಬೈಲ್ ಫೋನ್‍ಗಳು ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

    ಬಂಧಿತ ಆರೋಪಿಯನ್ನು 38 ವರ್ಷದ ಜೈನ ಸನ್ಯಾಸಿ ಸುಕುಮಾಲ್ ನಂದಿ ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳು ಆರೋಪಿ ವಾಸಿಸುತ್ತಿದ್ದ ಸಮುದಾಯದ ಆಶ್ರಯ ಮನೆಯೊಂದರಲ್ಲಿ ದೊಡ್ಡ ಬ್ಯಾಗ್‍ನಲ್ಲಿ ಪತ್ತೆಯಾಗಿವೆ.

    ಬಂಧಿತ ಆರೋಪಿ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಕರೌಲಿಗೆ ನಿಯೋಜಿಸಲಾಗಿತ್ತು. ಈ ತಂಡವು ಶುಕ್ರವಾರ ಬೆಳಗ್ಗೆ ಆರೋಪಿ ಸನ್ಯಾಸಿ ವಾಸಿಸುತ್ತಿದ್ದ ಮನೆಗೆ ಹೋಗಿದೆ. ಅಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ದೊಡ್ಡ ಬ್ಯಾಗ್‍ಯೊಂದು ಪತ್ತೆಯಾಗಿದೆ.

    ಆ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ 19 ಮೊಬೈಲ್ ಫೋನ್, ಎರಡು ಲ್ಯಾಪ್‍ಟಾಪ್, ನಾಲ್ಕು ಹಾರ್ಡ್ ಡಿಸ್ಕ್, ಕಾಂಡೋಮ್ ಪ್ಯಾಕೆಟ್‍ಗಳು ಮತ್ತು 33 ಪೆನ್ ಡ್ರೈವ್‍ಗಳನ್ನು ಪತ್ತೆಯಾಗಿದೆ. ತನಿಖಾ ಅಧಿಕಾರಿಗಳು ಹಾರ್ಡ್ ಡಿಸ್ಕ್ ಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಅದರಲ್ಲಿ ಅನೇಕ ಅಶ್ಲೀಲ ವಿಡಿಯೋ ಇರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಸಂತ್ರಸ್ತೆ ಗರ್ಭಿಣಿ ತನ್ನ ಅತ್ತಿಗೆಯೊಂದಿಗೆ ಗುರುವಾರ ಆಶೀರ್ವಾದ ಪಡೆಯಲು ಆರೋಪಿ ಸನ್ಯಾಸಿಯನ್ನು ಭೇಟಿ ಮಾಡಲು ಹೋಗಿದ್ದರು. ಮೊದಲು ಸಂತ್ರಸ್ತೆಯ ಅತ್ತಿಗೆ ರೂಮಿಗೆ ಹೋಗಿದ್ದಾರೆ. ಆಗ ಸನ್ಯಾಸಿ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ನಂತರ ಸಂತ್ರಸ್ತೆ ರೂಮಿಗೆ ಹೋಗಿದ್ದು, ಈ ವೇಳೆ ಆರೋಪಿ ನಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಒಂದು ವೇಳೆ ಈ ವಿಚಾರವನ್ನು ಕುಟುಂಬದವರಿಗೆ ಹೇಳಿದರೆ ನನ್ನ ಅಧಿಕಾರವನ್ನು ಬಳಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಇನ್ಸ್‌ಪೆಕ್ಟರ್ ಲಕ್ಷ್ಮಣ್ ಗೌರ್ ಹೇಳಿದರು.

    ಸಂತ್ರಸ್ತೆ ಮನೆಗೆ ಹಿಂದಿರುಗಿದ ನಂತರ ನಡೆದ ಘಟನೆಯನ್ನು ಕುಟುಂಬದವರ ಬಳಿ ಹೇಳಿದ್ದಾರೆ. ತಕ್ಷಣ ಕುಟುಂಬದವರು ಪೊಲೀಸ್ ಠಾಣೆಗೆ ಬಂದು ಸನ್ಯಾಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಆರೋಪಿ ಸನ್ಯಾಸಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು ಎಂದು ಲಕ್ಷ್ಮಣ್ ಗೌಡರ್ ತಿಳಿಸಿದರು.

  • ಮುಂಜಾನೆ 3 ಗಂಟೆವರೆಗೂ ಅಣ್ಣನ ರೂಮಿನಲ್ಲಿ ಗೇಮ್- ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕ ಪತ್ತೆ

    ಮುಂಜಾನೆ 3 ಗಂಟೆವರೆಗೂ ಅಣ್ಣನ ರೂಮಿನಲ್ಲಿ ಗೇಮ್- ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕ ಪತ್ತೆ

    – 3 ದಿನದ ಹಿಂದೆ ಅಮ್ಮನ ಫೋನಿನಲ್ಲಿ ಗೇಮ್ ಡೌನ್‍ಲೌಡ್

    ಜೈಪುರ: ರಾತ್ರಿಯಿಡೀ ಪಬ್‍ಜಿ ಆಡುತ್ತಿದ್ದ ಅಪ್ರಾಪ್ತ ಬಾಲಕ ಶವನ ಶನಿವಾರ ಮುಂಜಾನೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

    14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇನೆಯ ವ್ಯಕ್ತಿಯೊಬ್ಬರ ಮಗನಾಗಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಶನಿವಾರ ಮುಂಜಾನೆ ತನ್ನ ಬೆಡ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ರೈಲ್ವೆ ಕಾಲೋನಿ ಪೊಲೀಸ್ ಠಾಣೆ ಉಸ್ತುವಾರಿ ಹನ್ಸ್ ರಾಜ್ ಮೀನಾ ಹೇಳಿದರು.

    ಬಾಲಕ ಮೂರು ದಿನಗಳ ಹಿಂದೆ ತನ್ನ ತಾಯಿಯ ಮೊಬೈಲ್ ಫೋನ್‍ನಲ್ಲಿ ಪಬ್‍ಜಿ ಗೇಮ್ ಡೌನ್‍ಲೋಡ್ ಮಾಡಿಕೊಂಡಿದ್ದನು. ಅಂದಿನಿಂದಲೂ ನಿರಂತರವಾಗಿ ಪಬ್‍ಜಿ ಗೇಮ್ ಆಡುತ್ತಿದ್ದನು ಎಂದು ಕುಟುಂಬದವರು ತಿಳಿಸಿದ್ದಾರೆ.

    ಶುಕ್ರವಾರ ರಾತ್ರಿ ಬಾಲಕ ತನ್ನ ಸಹೋದರ ವ್ಯಾಸಂಗ ಮಾಡುತ್ತಿದ್ದ ರೂಮಿನಲ್ಲಿದ್ದನು. ಸುಮಾರು ಶನಿವಾರ ಮುಂಜಾನೆ 3 ಗಂಟೆಯವರೆಗೆ ಪಬ್‍ಜಿ ಗೇಮ್ ಆಡುತ್ತಿದ್ದನು. ನಂತರ ಬಾಲಕ ತನ್ನ ಬೆಡ್ ರೂಮಿನಲ್ಲಿ ಮಲಗು ಹೋಗಿದ್ದಾನೆ. ಆದರೆ ಬೆಳಗ್ಗೆ ಬಾಲಕ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಆತನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಬಾಲಕ ಮೃತಪಟ್ಟಿದ್ದನು ಎಂದು ಮೀನಾ ಹೇಳಿದರು.

    ಬಾಲಕ ತನ್ನ ತಾಯಿ ಮತ್ತು ಸಹೋದರನೊಂದಿಗೆ ಕೋಟಾದ ಗಾಂಧಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಅವನ ತಂದೆ ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ. ಬಾಲಕನ ಶವವನ್ನು ಮರಣೋತ್ತರ ಆಸ್ಪತ್ರೆಯ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನಾದಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ- ಪತಿಯನ್ನೇ ಕೊಂದ ತುಂಬು ಗರ್ಭಿಣಿ

    ನಾದಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ- ಪತಿಯನ್ನೇ ಕೊಂದ ತುಂಬು ಗರ್ಭಿಣಿ

    – ಮೃತದೇಹವನ್ನ ಹಗ್ಗದಿಂದ ಕಟ್ಟಿ ಎಳೆದ್ಕೊಂಡು ಹೋದ್ಲು
    – ಮನೆ ಹಿಂದೆ ಸಮಾಧಿ ಮಾಡಿ, ಪೊಲೀಸರಿಗೆ ಶರಣು

    ಜೈಪುರ: ತನ್ನ ಸಹೋದರಿಯನ್ನ ಅತ್ಯಾಚಾರ ಮಾಡಲು ಯತ್ನಿಸಿದ ಪತಿಯನ್ನು ತುಂಬು ಗರ್ಭಿಣಿಯೊಬ್ಬಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ನಡೆದಿದೆ.

    ಮಹಾವೀರ್ ಬಾಲೈ (30) ಮೃತ ಪತಿ. ಆರೋಪಿ ಸರೋಜಾ (27) ಪತ್ನಿಯನ್ನು ಕೊಂದು ಮನೆಯ ಹಿಂದೆ ಸಮಾಧಿ ಮಾಡಿದ್ದಾಳೆ. ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಪತಿಯನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದಾರೆ.

    ಏನಿದು ಪ್ರಕರಣ?
    ಭೈರಂಪುರ ಜಾಗೀರ್ ಗ್ರಾಮದ ನಿವಾಸಿ ಸರೋಜಾ ತುಂಬು ಗರ್ಭಿಣಿಯಾಗಿದ್ದರು. ಆದರೆ ಮೃತ ಪತಿ ಮಹಾವೀರ್ ಪತ್ನಿಯ ಸೋದರಿ ಅಂದರೆ ನಾದಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಸಹೋದರಿಯ ಕಿರುಚಾಟ ಕೇಳಿ ಪತ್ನಿ ಮನೆಗೆ ಬಂದು ನೋಡಿದ್ದಾಳೆ. ಇದರಿಂದ ಕೋಪಗೊಂಡ ಸರೋಜಾ ಕೊಡಲಿಯಿಂದ ಪತಿಯನ್ನು ಕೊಲೆ ಮಾಡಿದ್ದಾಳೆ. ನಂತರ ಪತಿಯ ಮೃತದೇಹವನ್ನು ಹಗ್ಗದಿಂದ ಕಟ್ಟಿ ಅದನ್ನು ಮನೆ ಹಿಂದೆ ಎಳೆದುಕೊಂಡು ಹೋಗಿದ್ದಾಳೆ. ಬಳಿಕ ತಾನೇ ಆತನನ್ನು ಸಮಾಧಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮರುದಿನ ಆರೋಪಿ ಸರೋಜಾ ಪೊಲೀಸ್ ಠಾಣೆಗೆ ಹೋಗಿ ಪತಿಯನ್ನು ಹತ್ಯೆ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಸಮಾಧಿ ಮಾಡಿದ್ದ ಮಹಾವೀರ್ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಗರ್ಭಿಣಿ ಸರೋಜಾ ಪತಿ ಮಹಾವೀರ್ ನನ್ನು ಕೊಡಲಿಯಿಂದ ಕೊಂದಿದ್ದು, ಪತಿಯ ಮೃತದೇಹವನ್ನು ಮನೆಯ ಹಿಂದೆ ಸಮಾಧಿ ಮಾಡಿದ್ದಾಳೆ. ನಂತರ ಆಕೆಯೇ ಬಂದು ಪೊಲೀಸರಿಗೆ ಶರಣಾಗಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗಗನ್‍ದೀಪ್ ಸಿಂಗ್ ಹೇಳಿದ್ದಾರೆ.

    ಆರೋಪಿ ಸರೋಜಾ ತುಂಬು ಗರ್ಭಿಣಿಯಾಗಿದ್ದು, ತನ್ನ ಸಹಾಯಕ್ಕಾಗಿ ಕೆಲವು ದಿನಗಳ ಹಿಂದೆ ಸಹೋದರಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಳು. ಆದರೆ ಈ ವೇಳೆ ಆಕೆಯ ಪತಿ ನಾದಿನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಸರೋಜಾ ಕೋಪಗೊಂಡು ಕೊಲೆ ಮಾಡಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.

  • ಕೊರೊನಾ ನಿಯಂತ್ರಣದಲ್ಲಿ ಬೆಂಗ್ಳೂರು ರೋಲ್ ಮಾಡೆಲ್- ಕೇಂದ್ರ ಸರ್ಕಾರ

    ಕೊರೊನಾ ನಿಯಂತ್ರಣದಲ್ಲಿ ಬೆಂಗ್ಳೂರು ರೋಲ್ ಮಾಡೆಲ್- ಕೇಂದ್ರ ಸರ್ಕಾರ

    – ಚೆನ್ನೈ, ಜೈಪುರ, ಇಂದೋರ್ ಬಗ್ಗೆಯೂ ಮೆಚ್ಚುಗೆ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಣದಲ್ಲಿ ಬೆಂಗಳೂರು (ಆದರ್ಶಪ್ರಾಯ) ರೋಲ್ ಮಾಡೆಲ್ ಎಂದು ಕೇಂದ್ರ ಸರ್ಕಾರವು ಹೊಗಳಿದೆ. ಜೊತೆಗೆ ಚೆನ್ನೈ, ಜೈಪುರ, ಇಂದೋರ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ.

    ಆರ್ಥಿಕತೆಯನ್ನು ಪುನರಾರಂಭಿಸುವ ಹಂತದಲ್ಲಿ ಜೈಪುರ, ಇಂದೋರ್, ಚೆನ್ನೈ ಮತ್ತು ಬೆಂಗಳೂರು ನಾಲ್ಕು ನಗರಗಳು ಕೋವಿಡ್-19 ನಿಯಂತ್ರಿಸುವಲ್ಲಿ ಇತರ ನಗರಗಳಿಗೆ ಆದರ್ಶಪ್ರಾಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಕಳೆದ ಕೆಲವು ದಿನಗಳಿಂದ ಸಭೆ ನಡೆಸಿ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ತಡೆಯುವುದು ಮತ್ತು ಮರಣ ಪ್ರಮಾಣವನ್ನು ಕಡಿಮೆಗೊಳಿಸುತ್ತಿರುವ ಪುರಸಭೆಗಳ ಮಾಹಿತಿಯನ್ನು ಕಲೆ ಹಾಕಲಾಗಿದೆ. ಈ ಎರಡು ಪ್ರಮುಖ ವಿಚಾರದಲ್ಲಿ ಶ್ರಮಿಸುತ್ತಿರುವ ಪುರಸಭೆಗಳ ಬಗ್ಗೆ ಕೇಂದ್ರವು ಮೆಚ್ಚುಗೆ ವ್ಯಕ್ತಪಡಿಸಿದೆ.  ಇದನ್ನೂ ಓದಿ: ವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ಎರಡನೇ ರಾಷ್ಟ್ರ ಭಾರತ- ಬೆಂಗಳೂರು ಈಗ ಪಿಪಿಇ ಹಬ್

    ಜೈಪುರ ಮತ್ತು ಇಂದೋರ್ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಸೊಂಕಿತರ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇತ್ತ ಚೆನ್ನೈ ಮತ್ತು ಬೆಂಗಳೂರು ಮಹಾ ನಗರಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ. ಆದರೆ ಭಾರತದ ಅನೇಕ ಪುರಸಭೆಗಳಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಅಷ್ಟೇ ಅಲ್ಲದೆ ಹೆಚ್ಚಿನ ಮರಣ ಪ್ರಮಾಣಗಳಂತಹ ಸವಾಲುಗಳನ್ನು ಎದುರಿಸುತ್ತಿವೆ. ಕೊಳಗೇರಿಗಳು, ಕಂಟೈನ್‍ಮೆಂಟ್ ಝೋನ್‍ಗಳು ಮಹಾನಗರಗಳಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಯಪಟ್ಟಿದೆ.

    ಇಂದೋರ್ ಮತ್ತು ಜೈಪುರ ಎರಡೂ ಪುರಸಭೆಗಳು ಮನೆ-ಮನೆಗೆ ಸಮೀಕ್ಷೆ ಮತ್ತು ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ವೇಗವಾಗಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಇಂದೋರ್ ಪುರಸಭೆ ವಿಶೇಷ ತಂಡಗಳನ್ನು ರಚಿಸಿದರೆ, ಜೈಪುರವು ವಿವಿಧ ಪ್ರದೇಶಗಳಲ್ಲಿ ಸೀಮಿತ ದಿನಸಿ ಅಥವಾ ತರಕಾರಿ ಮಾರಾಟಗಾರಕ್ಕೆ ಅನುಮತಿ ನೀಡಿದೆ. ಈ ಮೂಲಕ ವೇಗವಾಗಿ ಕೊರೊನಾ ಹರಡದಂತೆ ತಡೆಗಟ್ಟಲಾಗಿದೆ.

    ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ಮರಣ ಪ್ರಮಾಣವು ಕೇವಲ ಶೇ.1ರಷ್ಟ ಮಾತ್ರವೇ ಇದೆ. ಈ ಪ್ರಮಾಣವು ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸರಾಸರಿ ಶೇ.3ಕ್ಕಿಂತ ಕಡಿಮೆಯಾಗಿದೆ. ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ದಕ್ಷಿಣ ಭಾರತದ ಈ ಎರಡು ನಗರಗಳು ಆದರ್ಶವಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಚೆನ್ನೈ ಮತ್ತು ಬೆಂಗಳೂರು ಎರಡೂ ನಗರದಲ್ಲಿ ವೆಂಟಿಲೇಟರ್ ಗಳ ಬಳಕೆಯನ್ನು ಉತ್ತಮಗೊಳಿಸಲಾಗಿದೆ. ವೆಂಟಿಲೇಟರ್ ಗಳನ್ನು ಹೆಚ್ಚಾಗಿ ಬಳಸಿದ ಕೆಲವು ನಗರಗಳನ್ನು ನಾವು ನೋಡಿದ್ದೇವೆ. ಆದರೆ ದಕ್ಷಿಣ ರಾಜ್ಯಗಳಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ರೋಗಿಗಳ ನಿರ್ವಹಣೆ ಹೆಚ್ಚು ಉತ್ತಮವಾಗಿದೆ” ಎಂದು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

    ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಳವಡಿಸಿಕೊಂಡ ಕಾರ್ಯತಂತ್ರವನ್ನು ಇತ್ತೀಚಿನ ಸಭೆಗಳಲ್ಲಿ ಶ್ಲಾಘಿಸಲಾಯಿತು. ಆರೋಗ್ಯ ಮೂಲಸೌಕರ್ಯಗಳನ್ನು ಸಂಗ್ರಹಿಸಲು ನಗರವು ಖಾಸಗಿ ಆಸ್ಪತ್ರೆಗಳು ಮತ್ತು ಪುರಸಭೆ ಅಧಿಕಾರಿಗಳ ಜಾಲವನ್ನು ಸ್ಥಾಪಿಸಿದೆ.