Tag: Jains

  • ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ

    ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ

    – ಜನಿವಾರ ಧರಿಸೋದು ಜಾತಿ ವೇಷಕ್ಕಲ್ಲ ಎಂದ ಧರ್ಮಾಧಿಕಾರಿ
    – ಶ್ರೀಕ್ಷೇತ್ರದೊಂದಿಗೆ ನಾವಿದ್ದೇವೆ – ಜೈನ ಮಠಗಳ ಭಟ್ಟಾರಕರಿಂದ ಅಭಯ

    ಮಂಗಳೂರು: ಧರ್ಮಸ್ಥಳದ (Dharmasthala) ಬೆಳವಣಿಗೆಯಿಂದ ಪುರುಷರಿಗಿಂತ, ಮಹಿಳೆಯರೇ ಹೆಚ್ಚಾಗಿ ಕಣ್ಣೀರಿಟ್ಟಿದ್ದಾರೆ, ವೇದನೆ ಪಡ್ತಿದ್ದಾರೆ. ಕೆಲ ಹೆಣ್ಣುಮಕ್ಕಳು ಯಾವುದೇ ರೀತಿಯ ಹೋರಾಟಕ್ಕೆ, ಪ್ರತಿಭಟನೆಗೂ ತಯಾರಿದ್ದಾರೆ. ಆದ್ರೆ ಅಂತಹ ಹೋರಾಟ ಅಗತ್ಯವಿಲ್ಲ. ಎಲ್ಲವೂ ಮಂಜುನಾಥ ಸ್ವಾಮಿಗೆ ಬಿಟ್ಟಿದ್ದೇವೆ ಎಂದು ಧರ್ಮಸ್ಥಳದ‌ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

    ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಇಂದು ನಡೆದ ಜೈನ ಮುನಿಗಳ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜೈನ ಮಠಗಳ ಭಟ್ಟಾರಕರು ಪಾಲ್ಗೊಂಡಿದ್ದರು. ವಿವಿಧ ಜೈನ ಸಂಘ (Jains Union) ಸಂಸ್ಥೆಗಳಿಂದ ನೂರಾರು ಜನ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಧರ್ಮಸ್ಥಳ ಪ್ರವೇಶದ್ವಾರದಿಂದ ದೇಗುಲದ ವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಜೈನ ಸಮುದಾಯದ ಮುನಿಗಳು, ಜೈನ ಮಠಗಳ ಭಟ್ಟಾರಕರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

    ಈ ವೇಳೆ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ (Veerendra Heggade), ಇಂದು ಶ್ರೀ ಕ್ಷೇತ್ರಕ್ಕೆ ಬಹಳ ವಿಶೇಷವಾದ ಕಳೆ ಬಂದಿದೆ. ಇಷ್ಟೊಂದು ಆಶಯಧಾರಿಗಳು, ಆಶೀರ್ವಚನ ನೀಡುತ್ತಿರೋದು ತುಂಬಾ ದೊಡ್ಡದು. ಇಷ್ಟೊಂದು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದಿರೋದು ಸಂತಸ ತಂದಿದೆ. ಇಂದು ಮೂಡಬಿದ್ರೆ ಭಟ್ಟಾರಕರ ಪಟ್ಟಾಭೀಷೇಕದ ದಿನ, ಅವರು ಕೂಡ ನಿಮ್ಮೊಂದಿಗಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ ಇದಕ್ಕಿಂತ ದೊಡ್ಡ ಮಾತು ನನಗೆ ಬೇಡ ಎಂದು ತಿಳಿಸಿದರು.

    ಎಸ್‌ಐಟಿ ತನಿಖೆ ನಡೆಯುತ್ತಿರೋದ್ರಿಂದ ಹೆಚ್ಚು ಮಾತನಾಡಬಾರದು ಅಂತ ಆದೇಶ ಆಗಿದೆ. ಆದ್ರೆ ಭಕ್ತರೊಬ್ಬರು ನನಗೆ ಹೇಳ್ತಿದ್ದರು. ಈ ಬೆಳವಣಿಗೆ ಆದಾಗಿನಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಣ್ಣೀರು ಹಾಕಿದ್ದಾರೆ, ವೇದನೆ ಪಡ್ತಿದ್ದಾರೆ. ನಮಗೆ, ಕುಟುಂಬಕ್ಕೆ ನೆಮ್ಮದಿಯಿಲ್ಲ. ನೀವೇ ಏನಾದ್ರೂ ಮಾಡಿ ಅಂತ ಹೇಳಿಕೊಂಡಿದ್ರು. ಕೆಲ ಹೆಣ್ಣುಮಕ್ಕಳು ಯಾವುದೇ ರೀತಿಯ, ಹೋರಾಟಕ್ಕೆ, ಪ್ರತಿಭಟನೆಗೆ ತಯಾರಿದ್ದಾರೆ. ಆದ್ರೆ ಅಂತಹ ಹೋರಾಟ ಅಗತ್ಯವಿಲ್ಲ. ಎಲ್ಲವೂ ಸ್ವಾಮಿ ಮೇಲೆ ಬಿಟ್ಟದ್ದೇವೆ, ಅದರ ಫಲ ಈಗ ಸಿಗುತ್ತಿದೆ ಎಂದು ತಿಳಿಸಿದರು.

    ನಾವು ಮಾಡುವ ಪ್ರಯತ್ನಗಳಿಗೆ ಸ್ವಾಮಿಯ ಅನುಗ್ರಹ ಇದ್ದೇ ಇದೆ. ನಾವು ಸತ್ಯ ಬಿಟ್ಟು ಹಿಂದೆ ಹೋಗಿಲ್ಲ, ಮುಂದೆಯೂ ಹೋಗಲ್ಲ. ಆದ್ದರಿಂದ ಭಕ್ತರು ತಾಳ್ಮೆಯಿಂದಿರಬೇಕು, ಶಾಂತಿ ಕಾಪಾಡಬೇಕು ಎಂದು ಕರೆ ನೀಡಿದರು.

    ಜನಿವಾರ ಇರೋದು ಜಾತಿ ವೇಷಕ್ಕಲ್ಲ
    ಮುಂದುವರಿದು… ಸತ್ಯಕ್ಕೆ ಎರಡು ಮುಖ ಇಲ್ಲ, ಒಂದೇ ಮುಖ. ವ್ಯಕ್ತಿ ಯಾವುದೇ ಧರ್ಮವಾಗಲಿ, ಆ ಧರ್ಮಕ್ಕೆ ಶರಣಾಗಬೇಕು. ಇಲ್ಲದಿದ್ದರೆ ಅವರು ಅನುಯಾಯಿಗಳೇ ಅಲ್ಲ. ಇಷ್ಟೊಂದು ಜನ ಶ್ರೀಗಳು ನಮಗೆ ಧೈರ್ಯ ಕೊಟ್ಟಿದ್ದಾರೆ. ಎಲ್ಲರ ಮೇಲೂ ಮಂಜುನಾಥನ ಆಶೀರ್ವಾದ ಇಲ್ಲಲಿ ಎಂದರಲ್ಲದೇ ಜನಿವಾರ ಜಾತಿ ವೇಷಕ್ಕಲ್ಲ, ಮೂರು ಧರ್ಮಗಳ ಆಚರಿಸೋದಕ್ಕಾಗಿ ಜನಿವಾರ ಧಾರಣೆ ಮಾಡ್ತೀವಿ. ಅದೇ ರೀತಿ ದಶಲಕ್ಷಣ ಇರೋದು ಪೂಜೆಗಲ್ಲ ಪ್ರಾರ್ಥನೆ ಮಾಡೋಕೆ ಎಂದು ಕಿವಿಮಾತು ಹೇಳಿದರು.

    ಬಳಿಕ ರಾಜ್ಯದ ಜೈನ ಭಟ್ಟಾರಕರು ವೀರೇಂದ್ರ ಹೆಗ್ಗೆಡೆ ಅವರನ್ನ ಸನ್ಮಾನಿಸಿ ಗೌರವಿಸಿದರು.

  • ಕಲಬುರಗಿಯಲ್ಲಿ ಬಿಎಸ್ಸಿ ಪದವೀಧರೆ ನಾಪತ್ತೆ – ಲವ್ ಜಿಹಾದ್ ಆರೋಪ, ಕೇಸ್‌ ದಾಖಲು

    ಕಲಬುರಗಿಯಲ್ಲಿ ಬಿಎಸ್ಸಿ ಪದವೀಧರೆ ನಾಪತ್ತೆ – ಲವ್ ಜಿಹಾದ್ ಆರೋಪ, ಕೇಸ್‌ ದಾಖಲು

    ಕಲಬುರಗಿ: ಕಳೆದ ಜು.30 ರಂದು ಕಲಬುರಗಿಯ (Kalaburagi) ಜೈನ ಸಮುದಾಯದ ಬಿಎಸ್ಸಿ ಪದವೀಧರೆ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಹಿಂದೂ ಸಂಘಟನೆಗಳಿಂದ (Hindu organizations) ವ್ಯಾಪಕ ಖಂಡನೆ ವ್ಯಕ್ತವಾಗಿದೆ.

    ಗೊಬ್ಬುರ ಗ್ರಾಮದ ಮಹಾವೀರ ಜೈನ್ ಎಂಬುವರ ಪುತ್ರಿ ನಾಪತ್ತೆಯಾಗಿದ್ದಾರೆ. ಈಕೆ ನಗರದ ಖಾಸಗಿ ಕಾಲೇಜವೊಂದರಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಜು.30ರಂದು ಬಿಎಸ್ಸಿ ಬರೆಯಲು ಬರೆಯೋದಕ್ಕಾಗಿ ಕಾಲೇಜಿಗೆ ಬಂದಿದ್ದ ಯುವತಿ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದಾಳೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಇಂದು ಕೊನೆಯ ಪಾಯಿಂಟ್‌ನಲ್ಲಿ ಶೋಧ

    ನಾಪತ್ತೆಯಾಗಿರುವ ಯುವತಿ ಗೊಬ್ಬರ ಗ್ರಾಮದ ಮಶಾಕ್ ಎಂಬಾತನೊಂದಿಗೆ ಮೆಸೇಜ್ ಮಾಡ್ತಿದ್ದಳು ಎನ್ನಲಾಗಿದೆ. ಅನ್ಯಕೋಮಿನ ಯುವಕನೊಂದಿಗೆ ಮೆಸೇಜ್ ಮಾಡ್ತಿದ್ದಕ್ಕೆ ಮಗಳಿಗೆ ಬೈದು ಕಾಲೇಜು ಬಿಡಿಸಿ, ಪರೀಕ್ಷೆ ಬರೆಯೋದಕ್ಕೆ ಮಾತ್ರ ಪೋಷಕರು ಕಳುಹಿಸಿದ್ದರು. ಈಗ ಯುವತಿ ಅದೇ ಗ್ರಾಮದ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.

    ಯುವತಿ ನಾಪತ್ತೆಯಾದ ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಭಾರತದ ಎಲ್ಲ ಆಮದುಗಳ ಮೇಲೆ ಸುಂಕ ಗಣನೀಯ ಏರಿಕೆ – ಟ್ರಂಪ್‌ ಮತ್ತೆ ಬೆದರಿಕೆ

  • ಶಾಂತಿ ಸಂದೇಶ, ಸಮಾಜದ ಒಳಿತಿಗಾಗಿ ಹಾಸನದಲ್ಲಿ ಜೈನರ ಶೋಭಾಯಾತ್ರೆ

    ಶಾಂತಿ ಸಂದೇಶ, ಸಮಾಜದ ಒಳಿತಿಗಾಗಿ ಹಾಸನದಲ್ಲಿ ಜೈನರ ಶೋಭಾಯಾತ್ರೆ

    ಹಾಸನ: ಶಾಂತಿ ಸಂದೇಶ ಹಾಗೂ ಸಮಾಜದ ಒಳಿತಿಗಾಗಿ ಮತ್ತು ಸ್ವಯಂ ಸಂಯಮ ಪಾಲನೆ ಸಂದೇಶ ವಿಚಾರವಾಗಿ ಹಾಸನ ನಗರದಲ್ಲಿ ಪ್ರಸಿದ್ಧ ಜೈನಗುರು ಶ್ರೀ ಮಹಾಶ್ರಮಣ್ ಜೀ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.

    ಹಾಸನ ರೈಲ್ವೇ ನಿಲ್ದಾಣದಿಂದ ಎಸ್‍ಡಿಎಂ ಆಯುರ್ವೇದ ಕಾಲೇಜಿನವರೆಗೂ ನಡೆದ ಶೋಭಾಯಾತ್ರೆಯಲ್ಲಿ 150ಕ್ಕೂ ಹೆಚ್ಚು ಜೈನ ಯತಿಗಳ ಜೊತೆ ಸಾವಿರಕ್ಕೂ ಹೆಚ್ಚು ಜೈನ ಸಮಾಜದ ಬಂಧುಗಳು ಹೆಜ್ಜೆ ಹಾಕಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪಾಲ್ಗೊಂಡಿದ್ದರು.

    ದೇಶದಲ್ಲಿ ಹೈದರಾಬಾದ್ ಪಶುವೈದ್ಯೆ ಹತ್ಯೆ ವಿಚಾರ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಹೀಗಾಗಿ ದೇಶದಲ್ಲಿ ಈಗ ಇಂತಹ ಗುರುಗಳ ಸಂದೇಶ ಮತ್ತು ಧರ್ಮದ ಕಾರ್ಯಕ್ರಮಗಳು ಅಗತ್ಯ ಇದೆ. ಮನುಷ್ಯ ಸ್ವಯಂ ಸಂಯಮದಿಂದ ಮಾತ್ರವೇ ಸಮಾಜದಲ್ಲಿ ಶಾಂತಿ ಸಾಧ್ಯ ಎಂದು ಶ್ರೀ ಮಹಾಶ್ರಮಣ್ ಜೀ ಸಂದೇಶ ನೀಡಿದರು.

    ತೇರಾಪಂಥ್ ಸಭಾ ವತಿಯಿಂದ ಆಯೋಜನೆಗೊಂಡಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಮಠದ ಶಂಭುನಾಥ ಸ್ವಾಮೀಜಿ ಹಾಗೂ ನೂರಕ್ಕೂ ಹೆಚ್ಚು ದೇಶದ ವಿವಿಧ ಭಾಗದ ಜೈನ ಯತಿಗಳು ಆಗಮಿಸಿದ್ದರು.