Tag: jain

  • ನೂರು ಕೋಟಿ ಆಸ್ತಿ ತ್ಯಜಿಸಿ ಜೈನ ದೀಕ್ಷೆ ಪಡೆದ 24ರ ಯುವಕ!

    ನೂರು ಕೋಟಿ ಆಸ್ತಿ ತ್ಯಜಿಸಿ ಜೈನ ದೀಕ್ಷೆ ಪಡೆದ 24ರ ಯುವಕ!

    ಅಹಮದಾಬಾದ್: ಮುಂಬೈ ಮೂಲದ 24ರ ಹರೆಯದ ಯುವಕ ಮೋಕ್ಷೇಶ್ ಸೇಟ್ ಶುಕ್ರವಾರ ಬೆಳಗ್ಗೆ ಜೈನ ದೀಕ್ಷೆಯನ್ನು ಸ್ವೀಕರಿಸಿದರು.

    ಮೋಕ್ಷೇಶ್ ಕುಟುಂಬಕ್ಕೆ ಜೆ ಕೆ ಕಾರ್ಪೊರೇಷನ್ ಹೆಸರಿನ ವಜ್ರ ಲೋಹದ ಮತ್ತು ಸಕ್ಕರೆ ಉದ್ಯಮಗಳಿವೆ. ಸುಮಾರು ನೂರು ಕೋಟಿ ಆಸ್ತಿಯನ್ನು ತ್ಯಜಿಸಿದ್ದಾರೆ. ಚಾರ್ಟೇಡ್ ಅಕೌಂಟೆಂಟ್ ಆಗಿರುವ ಇವರು ಎಲ್ಲಾ ಆಸ್ತಿಪಾಸ್ತಿಯನ್ನು ಬಿಟ್ಟು ಗಾಂಧಿನಗರ-ಅಹಮದಾಬಾದ್ ರಸ್ತೆಯ ತಪೋವನ ಸರ್ಕಲ್‍ನಲ್ಲಿ ಇಂದು ಜೈನ ದೀಕ್ಷೆ ಸ್ವೀಕರಿಸಿದರು.

    ವಿದ್ಯಾಭ್ಯಾಸದಲ್ಲಿ ಮೊದಲಿಗನಾಗಿದ್ದ ನಾನು ಕಂಪನಿಯ ಲೆಕ್ಕ ಪರಿಶೋಧನೆಗಿಂತ ಧರ್ಮದ ಪರಿಶೋಧನೆಯ ವಿದ್ಯಾರ್ಥಿಯಾಗಲು ಬಯಸುತ್ತೇನೆ. 15 ವರ್ಷ ಇದ್ದಾಗಲೇ ಸನ್ಯಾಸಿಯಾಗಲು ಬಯಸಿದ್ದೆ. ಈ ಪ್ರಪಂಚದಿಂದ ನೆಮ್ಮದಿಯ ಜೀವನ ಸಿಗದ ಕಾರಣ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನೊಬ್ಬನ ಸಂತೋಷಕ್ಕಿಂತ ಎಲ್ಲರ ಸಂತೋಷವನ್ನು ಬಯಸುತ್ತೇನೆ ಎಂದು ಮೋಕ್ಷೇಶ್ ಹೇಳಿದ್ದಾರೆ.

    ಮೋಕ್ಷೇಶ್ ಕುಟುಂಬದವರು ಉತ್ತರ ಗುಜರಾತ್ ನ ಡೀಸಾ ನಿಂದ ವಲಸೆ ಬಂದು ಮಂಬೈನಲ್ಲಿ ನೆಲೆಸಿ 60 ವರ್ಷ ಆಗಿದೆ. ತಂದೆ ಸಂದೀಪ್, ಚಿಕ್ಕಪ್ಪ ಗಿರೀಶ್ ಸೇಟ್ ಒಟ್ಟಿಗೆ ವಾಸಮಾಡುತ್ತಿದ್ದಾರೆ.

    ಮೂರು ಜನ ಅಣ್ಣ ತಮ್ಮಂದಿರಲ್ಲಿ ಮೋಕ್ಷೇಶ್ ಮೊದಲನೆಯವರು. ವಾಲೇಶ್ವರ್‍ನಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದ್ದ ಮೋಕ್ಷೇಶ್ 10ನೇ ತರಗತಿಯಲ್ಲಿ 93.38%, 12 ನೇ ತರಗತಿಯಲ್ಲಿ 85% ಅಂಕವನ್ನು ಪಡೆದ್ದರು.

    ಹೆಚ್‍ಆರ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಓದುತ್ತಿದ್ದಾಗ ಸಿಎ ಆರ್ಹತಾ ಪರೀಕ್ಷೆ ಪಾಸ್ ಮಾಡಿದ್ದ ಮೋಕ್ಷೇಶ್ ನಂತರ ಕುಟುಂಬದ ಲೋಹದ ವ್ಯವಹಾರವನ್ನು ಸಾಂಗ್ಲಿಯಲ್ಲಿ ಮುಂದುವರಿಸಿದರು.

    ಮೋಕ್ಷೇಶ್ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ಸನ್ಯಾಸಿಯಾಗುವ ಬಯಕೆಯನ್ನು 8 ವರ್ಷದ ಕೆಳಗೆ ವ್ಯಕ್ತಪಡಿಸಿದ್ದರು. ಮೊದಲಿಗೆ ವಿದ್ಯಾಭ್ಯಾಸ ಮುಗಿಸಿ ಒಮ್ಮೆ ಪ್ರಪಂಚವನ್ನು ನೋಡಿ ಬಾ ಎಂದಿದ್ದೆವು. 200 ವರ್ಷ ಇತಿಹಾಸ ಇರುವ ನಮ್ಮ ಕುಟುಂಬದ ಪುರುಷ ಸದಸ್ಯರ ಪೈಕಿ ಸನ್ಯಾಸಿ ಆಗುತ್ತಿರುವುದು ಇವನೇ ಮೊದಲನೆಯವನು. ಮಹಿಳೆಯರ ಪೈಕಿ 5 ಜನ ಸಾಧ್ವಿಗಳಾಗಿದ್ದಾರೆ ಎಂದು ಗಿರೀಶ್ ಸೇಟ್ ತಿಳಿಸಿದ್ದಾರೆ.

  • 5 ವರ್ಷ ಪ್ರೀತಿಸಿ, ಸಮುದಾಯಕ್ಕೆ ಸೆಡ್ಡು ಹೊಡೆದು ಮದುವೆಯಾಗಿ 3 ತಿಂಗಳಲ್ಲೇ ಬೇರೆಯಾದ್ರು!

    5 ವರ್ಷ ಪ್ರೀತಿಸಿ, ಸಮುದಾಯಕ್ಕೆ ಸೆಡ್ಡು ಹೊಡೆದು ಮದುವೆಯಾಗಿ 3 ತಿಂಗಳಲ್ಲೇ ಬೇರೆಯಾದ್ರು!

    ಬಳ್ಳಾರಿ: ಪ್ರೀತಿ ಮಾಡಬಾರದು. ಮಾಡಿದರೆ ಜಗಕೆ ಹೆದರಬಾರದು ಅಂತಾರೆ. ಹೀಗೆ ಎಲ್ಲರನ್ನೂ ಎದುರು ಹಾಕಿಕೊಂಡು ಐದು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಎದುರು-ಬದುರು ಮನೆ ಹುಡ್ಗ-ಹುಡ್ಗಿ ಮೂರೇ ತಿಂಗಳಲ್ಲಿ ಬೇರೆಯಾಗಿದ್ದಾರೆ.

    ಬಳ್ಳಾರಿಯ ಯುವ-ಯುವತಿ 5 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ, ಹೊಸಪೇಟೆಯ ಜೈನ್ ಸಮಾಜಕ್ಕೆ ಸಡ್ಡು ಹೊಡೆದು ಜೂನ್ ತಿಂಗಳಿನಲ್ಲಿ ಮನೆ ಬಿಟ್ಟು ಹೋಗಿ ಮದ್ವೆಯಾಗಿದ್ದರು. ಆದ್ರೆ, ಈ ಮದ್ವೆಗೆ ಜೈನ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬಗ್ಗೆ, ಭಾರೀ ಗಲಾಟೆ ಸೃಷ್ಟಿಯಾಗಿ ಪಬ್ಲಿಕ್‍ಟಿವಿಯಲ್ಲಿ ಚರ್ಚೆಯೆಲ್ಲಾ ನಡೆದು ಸಂಧಾನ ನಡೆದಿತ್ತು. ಆದ್ರೆ, ಮದ್ವೆ ನಡೆದ ಮೂರೇ ತಿಂಗಳಲ್ಲಿ ಮುರಿದು ಬಿದ್ದಿದೆ.

    ಸಮಾಜವನ್ನೇ ಮೆಟ್ಟಿನಿಂತು ಮದ್ವೆಯಾಗಿದ್ದ ನನಗೆ ಪತಿ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿದ್ದ. ಆತನ ಪೋಷಕರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ರು. ಜೊತೆಗೆ ಎಲ್ಲದಕ್ಕೂ ಅನುಮಾನ ಪಡುತ್ತಾ ವಿದ್ಯಾಭ್ಯಾಸ ಮಾಡೋಕೂ ಬಿಡದೇ ಟಾರ್ಚರ್ ಮಾಡ್ತಿದ್ರು ಅಂತ ನೊಂದ ಯುವತಿ ದೂರಿದ್ದಾಳೆ.

    ತಂದೆ ತಾಯಿಯ ಮಾತನ್ನೂ ಮೀರಿ ಹೋಗಿದ್ದ ಪುತ್ರಿಯ ಪರಿಸ್ಥಿತಿಗೆ ಹೆತ್ತವರು ಮರುಗಿದ್ದು, ಆಶ್ರಯ ನೀಡಿದ್ದಾರೆ. ಅಲ್ಲದೆ, ನಮ್ಮ ಮಗಳನ್ನು ಹಿಂಸಿಸಿದ ಯುವಕನಿಗೆ ಕಠಿಣ ಶಿಕ್ಷೆಯಾಗಬೇಕು ಅಂತಿದ್ದಾರೆ.

  • ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು

    ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು

    ಬಳ್ಳಾರಿ: ಜೈನ ಸಮಾಜ ಶಾಂತಿ ಅಹಿಂಸೆಗೆ ಹೆಸರು ವಾಸಿ. ಇದಕ್ಕೆ ಅಪವಾದ ಅನ್ನುವಂತೆ ಜೈನ ಸಮುದಾಯದವರೇ ಆದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ, ಹುಡುಗನಿಗೆ ಜೈಲುವಾಸ ಅನುಭವಿಸುತ್ತಿದ್ದ, ಹುಡುಗಿ ನರಕ ಯಾತನೆ ಅನುಭವಿಸುತ್ತಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಬಳ್ಳಾರಿ ಹೊಸಪೇಟೆಯ ನಿವಾಸಿಗಳಾದ, ಜೈನ ಸಮುದಾಯದ ಮಾಹಿನ್ ಮತ್ತು ಮಾನಸಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಯಾವಾಗ ಮಾಹಿನ್ ಮತ್ತು ಮಾನಸಿ ಮದುವೆಯಾದ್ರೋ ಅಂದಿನಿಂದ ಇಂದಿನವರೆಗೆ ಮಾನಸಿ ಮನೆಯವರ ಕಾಟ ಮಾತ್ರ ತಪ್ಪಿಲ್ಲ.

    ಇದಕ್ಕೆ ಮತ್ತೊಂದು ಟ್ವಿಸ್ಟ್ ಏನಪ್ಪಾ ಅಂದ್ರೆ ಹೀಗೆ ಮಾಹಿನ್ ಮೇಲೆ ಹಲ್ಲೆ ಮಾಡೋಕೆ ಬಂದೋರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಮಾಹಿನ್ ವಿರುದ್ಧವೇ 307 ಕೇಸ್ ಬುಕ್ ಮಾಡಿ ಜೈಲಿಗೆ ಕಳಿಸಿದ್ದಾರೆ. ಇದ್ರಿಂದ ನೊಂದಿರುವ ಮಾಹಿನ್ ಪತ್ನಿ ಮಾನ್ಸಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

    ಮಾಹಿನ್‍ನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿರುವ ಪೊಲೀಸರ ವರ್ತನೆಗೆ ಪತ್ನಿ ಮಾನ್ಸಿ ಬೇಸತ್ತಿದ್ದಾರೆ. ಅಲ್ಲದೇ ಜೈನ ಸಮುದಾಯ ಮುಖಂಡರು ಕೂಡ ಮಾನ್ಸಿ ಹಾಗೂ ಅವ್ರ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಮಾನ್ಸಿಗೆ ನ್ಯಾಯ ಕೊಡಿಸಲು ಧರಣಿ ಸಂಸ್ಥೆ ಅವರ ಜೊತೆಗಿದ್ದು, ಪೊಲೀಸರ ನಡವಳಿಕೆ ಬಗ್ಗೆ ಧರಣಿ ಸಂಸ್ಥೆ ಕಾರ್ಯದರ್ಶಿ, ರಮಾ ನಾಗರಾಜ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=H2HNHxPm-LA