Tag: jain monk

  • ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ನಿಧನ- ಪ್ರಧಾನಿ ಸಂತಾಪ

    ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ನಿಧನ- ಪ್ರಧಾನಿ ಸಂತಾಪ

    ನವದೆಹಲಿ: ಖ್ಯಾತ ಜೈನ ಮುನಿಗಳಾದ ಆಚಾರ್ಯ ವಿದ್ಯಾಸಾಗರ ಮಹಾರಾಜ್ (Jain Muni Acharya Vidhyasagar Maharaj) ಅವರು ಇಂದು ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಿಸಿದ್ದಾರೆ.

    ಆಚಾರ್ಯ ವಿದ್ಯಾಸಾಗರ ಮಹಾರಾಜರಿಗೆ 77 ವರ್ಷ ವಯಸ್ಸಾಗಿತ್ತು. ಇವರು ಛತ್ತೀಸ್‌ಗಢದ ಡೊಂಗರ್‌ಗಢ್‌ನ ಚಂದ್ರಗಿರಿ ತೀರ್ಥದಲ್ಲಿ ಭಾನುವಾರ ಮುಂಜಾನೆ ನಿಧನರಾದರು. ವಿದ್ಯಾಸಾಗರ ಮಹಾರಾಜರ ನಿಧನದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅರ್ಧ ದಿನ ರಜೆ ಘೋಷಿಸಲಾಗಿದೆ.

    ಪ್ರಧಾನಿ ಟ್ವೀಟ್:‌ ಆಚಾರ್ಯ ಶ್ರೀ 108 ವಿದ್ಯಾಸಾಗರ್ ಜಿ ಮಹಾರಾಜ್ ಅವರು ಸಮಾಜಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ ಅವರು ಮಾಡಿದ ಪ್ರಯತ್ನಗಳು, ಬಡತನ ನಿವಾರಣೆ, ಆರೋಗ್ಯ ರಕ್ಷಣೆ, ಶಿಕ್ಷಣ ಹೀಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ. ಹೀಗೆ ಅವರು ಮಾಡಿದ ಉತ್ತಮ ಕೆಲಸಗಳಿಂದಾಗಿ ಅವರನ್ನು ಮುಂದಿನ ಪೀಳಿಗೆಯವರು ನೆನಪಿಸಿಕೊಳ್ಳುತ್ತಾರೆ.

    ವರ್ಷಗಳ ಕಾಲ ಅವರ ಆಶೀರ್ವಾದ ಪಡೆಯುವ ಗೌರವ ನನಗಿತ್ತು. ಕಳೆದ ವರ್ಷದ ಕೊನೆಯಲ್ಲಿ ಛತ್ತೀಸ್‌ಗಢದ ಡೊಂಗರ್‌ಗಢ್‌ನಲ್ಲಿರುವ ಚಂದ್ರಗಿರಿ ಜೈನ ಮಂದಿರಕ್ಕೆ ನಾನು ಭೇಟಿ ನೀಡಿದ್ದು, ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ ನಾನು ಆಚಾರ್ಯ ಶ್ರೀ 108 ವಿದ್ಯಾಸಾಗರ್ ಮಹಾರಾಜ್  ಅವರೊಂದಿಗೆ ಸಮಯ ಕಳೆದಿದ್ದೇನೆ ಮತ್ತು ಅವರ ಆಶೀರ್ವಾದವನ್ನು ಸಹ ಪಡೆದಿದ್ದೇನೆ ಎಂದು ಅವರು ಹೇಳಿದರು.

    ಜೈನ ಸಮುದಾಯದವರು ಹೇಳಿದ್ದೇನು?: ವಿದ್ಯಾಸಾಗರ ಅವರು 2020 ರಲ್ಲಿ ಇಂದೋರ್‌ಗೆ ಬಂದಾಗ ಕೊರೊನಾದಿಂದ ಲಾಕ್‌ಡೌನ್ ಇತ್ತು. ಇದರಿಂದಾಗಿ ಇಂದೋರ್‌ನ ಜನರು ಈ ಪ್ರೀತಿಯನ್ನು ಪಡೆಯಲು ಸಾಧ್ಯವಾಯಿತು. ಗುರುಗಳ ಮೇಲಿನ ಅಪಾರವಾದ ಮಮತೆಯಿಂದಲೇ ಇಂದೋರ್‌ಗೆ ಈ ಸೌಭಾಗ್ಯ ಸಿಕ್ಕಿದೆ ಎಂದು ಜೈನ ಸಮುದಾಯದವರು ಹೇಳುತ್ತಾರೆ.  ಇದನ್ನೂ ಓದಿ: ಆಕೆ ಧೈರ್ಯಶಾಲಿ – ನೂಪುರ್‌ ಶರ್ಮಾ ಬೆಂಬಲಿಸಿ ವೈಯಕ್ತಿಕ ಸಂದೇಶ ಕಳಿಸಿದ್ದೇನೆಂದ ಡಚ್‌ ನಾಯಕ

    ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ತಮ್ಮ ಸಂತ ಜೀವನದಲ್ಲಿ ಹೆಚ್ಚಿನ ಸಮಯವನ್ನು ಇಂದೋರ್ ನಲ್ಲಿ ಕಳೆದಿದ್ದಾರೆ. ಅವರ 56 ವರ್ಷಗಳ ತಪಸ್ವಿ ಜೀವನದಲ್ಲಿ ಅವರು ಇಂದೋರ್‌ನಲ್ಲಿ 10 ತಿಂಗಳುಗಳಿಗಿಂತ ಹೆಚ್ಚು ಕಾಲ ಕಳೆದರು. ಈ ಅವಧಿಯಲ್ಲಿ 300 ದಿನಗಳಿಗೂ ಹೆಚ್ಚು ಕಾಲ ಗುರುವಿನ ಸಾಂಗತ್ಯ ಸಿಕ್ಕಿರುವುದು ಇಂದೋರ್ ನ ಭಕ್ತರ ಸೌಭಾಗ್ಯವಾಗಿದೆ.

  • ಜೈನಮುನಿಗಳ ಹತ್ಯೆ ಪ್ರಕರಣ – ಸ್ವಾಮೀಜಿ ಪರ್ಸನಲ್ ಡೈರಿ ಪತ್ತೆ

    ಜೈನಮುನಿಗಳ ಹತ್ಯೆ ಪ್ರಕರಣ – ಸ್ವಾಮೀಜಿ ಪರ್ಸನಲ್ ಡೈರಿ ಪತ್ತೆ

    ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ (Kamkumar Nandi Maharaj) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪರ್ಸನಲ್ ಡೈರಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾಗಿ ಮೂಲಗಳು ಖಚಿತ ಪಡಿಸಿವೆ.

    ಜೈನಮುನಿಗಳ (Jain Monk) ಡೈರಿಯನ್ನು ಸುಟ್ಟು ಹಾಕಿದ್ದಾಗಿ ಬಂಧಿತ ಆರೋಪಿಗಳು ಕಥೆ ಕಟ್ಟಿದ್ದರು. ಆದರೆ ಇದೀಗ ಪೊಲೀಸರ ಕೈಗೆ ಜೈನಮುನಿಗಳ ಡೈರಿ ಲಭ್ಯವಾಗಿದೆ. ಡೈರಿಯಲ್ಲಿ ಉಲ್ಲೇಖವಿರುವವರನ್ನು ಠಾಣೆಗೆ ಕರೆಸಿ ತನಿಖೆ ಮಾಡಲಾಗುತ್ತಿದೆ. ಇದರಿಂದಾಗಿ ಸ್ವಾಮೀಜಿ ಬಳಿ ಹಣ ಪಡೆದಿದ್ದವರಲ್ಲಿ ಆತಂಕ ಶುರುವಾಗಿದೆ. ಇದನ್ನೂ ಓದಿ: ಹೀರೆಕೋಡಿ ಜೈನಮುನಿ ಹತ್ಯೆ ಪ್ರಕರಣ – ಸ್ವಾಮೀಜಿಯ ಡೈರಿ ರಹಸ್ಯ ಕೆದಕುತ್ತಿರುವ ಪೊಲೀಸರು

    ಪೊಲೀಸರ (Police) ದಿಕ್ಕು ತಪ್ಪಿಸುತ್ತಿದ್ದ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನ್ ಸಾಬ್ ದಲಾಯತ್, ತಮ್ಮ ರಕ್ತಸಿಕ್ತ ಬಟ್ಟೆ ಜೊತೆ ಜೈನಮುನಿಗಳ ಪರ್ಸನಲ್ ಡೈರಿಯನ್ನು ಸುಟ್ಟು ಹಾಕಿದ್ದಾಗಿ ಹೇಳಿದ್ದರು. ಅಲ್ಲದೇ ಪೊಲೀಸರಿಗೆ ಬೂದಿಯನ್ನು ಸಹ ತೋರಿಸಿದ್ದರು. ಬಳಿಕ ಪೊಲೀಸರು ಎಫ್‍ಎಸ್‍ಎಲ್‍ಗೆ ಬೂದಿಯನ್ನು ರವಾನಿಸಿದ್ದರು. ಈಗ ಡೈರಿಯ ಬೂದಿ ಅಲ್ಲ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಡೈರಿ ಪತ್ತೆಯಾಗುತ್ತಿದ್ದಂತೆ ತನಿಖೆ ಚುರುಕುಗೊಂಡಿದೆ. ಇದನ್ನೂ ಓದಿ: ಹಿರೇಕೋಡಿ ಜೈನಮುನಿಗಳ ಮೃತದೇಹ ಸಾಗಿಸಿದ್ದ ಬೈಕ್ ಜಪ್ತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರೇಕೋಡಿ ಜೈನಮುನಿಗಳ ಮೃತದೇಹ ಸಾಗಿಸಿದ್ದ ಬೈಕ್ ಜಪ್ತಿ

    ಹಿರೇಕೋಡಿ ಜೈನಮುನಿಗಳ ಮೃತದೇಹ ಸಾಗಿಸಿದ್ದ ಬೈಕ್ ಜಪ್ತಿ

    ಚಿಕ್ಕೋಡಿ (ಬೆಳಗಾವಿ): ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ (Acharya Kam Kumar Nandi)  ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನಮುನಿಗಳ ಮೃತದೇಹ ಸಾಗಿಸಿದ್ದ ಬೈಕ್ ಅನ್ನು ಚಿಕ್ಕೋಡಿ ಪೊಲೀಸರು ಜಪ್ತಿ ಮಾಡಿದ್ದಾರೆ.

    ಹತ್ಯೆಗೂ ಮುನ್ನ ಅಂದರೆ ಜುಲೈ 5 ರ ರಾತ್ರಿ ಹಂತಕ ನಾರಾಯಣ ಮಾಳಿಯು (Narayana Maali) ಚಿಕ್ಕೋಡಿಯಲ್ಲಿ ಹಸನಸಾಬ್ ದಲಾಯತ್ ಸಂಪರ್ಕಿಸಿದ್ದನು. ಅಲ್ಲಿ ಹಸನಸಾಬ್ ದಲಾಯತ್‍ನ ಜೊತೆ ಮದ್ಯಪಾನ ಮಾಡಿ ಗೋಣಿ ಚೀಲ ಹಾಗೂ ಮಾರಕಾಸ್ತ್ರ ತೆಗೆದುಕೊಂಡು ಚಿಕ್ಕೋಡಿಯಲ್ಲಿ ಬೈಕ್‍ಗೆ ಪೆಟ್ರೋಲ್ ಹಾಕಿಸಿಕೊಂಡು ಹಂತಕರು ಆಶ್ರಮದತ್ತ ತೆರಳಿದ್ದರು.

    ಆಶ್ರಮದಲ್ಲಿ ಮೊದಲು ಜೈನಮುನಿಗಳಿಗೆ ಕರೆಂಟ್ ಶಾಕ್ ನೀಡಿ ಕೊಲ್ಲಲು ಯತ್ನಿಸಲಾಯಿತು. ಬಳಿಕ ಟವೆಲ್‍ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಲಾಯಿತು. ಕೊಲೆಯ ಬಳಿಕ ಚೀಲದಲ್ಲಿ ಮೃತದೇಹ ಕಟ್ಟಿ ಬೈಕ್‍ನಲ್ಲಿ ಹೊತ್ತೊಯ್ದಿದ್ದರು. ಸುಮಾರು 39 ಕಿಮೀ ಬೈಕ್‍ನಲ್ಲಿ ಜೈನಮುನಿಗಳ ಮೃತದೇಹ ಹೊತ್ತೊಯ್ದಿದ್ದರು. ಇದನ್ನೂ ಓದಿ: ಹೀರೆಕೋಡಿ ಜೈನಮುನಿ ಹತ್ಯೆ ಪ್ರಕರಣ – ಸ್ವಾಮೀಜಿಯ ಡೈರಿ ರಹಸ್ಯ ಕೆದಕುತ್ತಿರುವ ಪೊಲೀಸರು

    ನಂದಿಪರ್ವತ ಆಶ್ರಮದಿಂದ ಪರ್ಯಾಯ ಮಾರ್ಗವಾಗಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ಗುಡ್ಡಗಾಡು ಪ್ರದೇಶದಲ್ಲಿ ಮೃತದೇಹವನ್ನು ಹಂತಕರು ಕತ್ತರಿಸಿದ್ದರು. ಮೃತದೇಹ ಕತ್ತರಿಸಿ ಚೀಲದಲ್ಲಿ ಕಟ್ಟಿಕೊಂಡು ಕಟಕಬಾವಿಯಲ್ಲಿರುವ ಸ್ವಂತ ಗದ್ದೆಗೆ ಹೋಗಿದ್ದರು. ಅಲ್ಲಿ ಬೋರ್‍ವೆಲ್‍ನಲ್ಲಿ ಮೃತದೇಹದ ತುಂಡು ಎಸೆದು ವಾಪಸ್ ಆಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡದಿದ್ರೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ: ಈಶ್ವರಪ್ಪ

    ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡದಿದ್ರೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ: ಈಶ್ವರಪ್ಪ

    ಶಿವಮೊಗ್ಗ: ಜೈನ ಮುನಿ (Jain Monk) ಹತ್ಯೆಯನ್ನು ಕೇವಲ ಒಬ್ಬರು, ಇಬ್ಬರು ಮಾಡಿರಲು ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S. Eshwarappa) ಭವಿಷ್ಯ ನುಡಿದಿದ್ದಾರೆ.

    ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ದೇಶದ ನಾಗರೀಕರ ಅಭಿಪ್ರಾಯವಾಗಿದೆ. ರಾಜ್ಯದ ಪೊಲೀಸರ ಬಗ್ಗೆ ಗೌರವ ಇದೆ. ಪೊಲೀಸ್ ತನಿಖೆ ಒಂದು ಕಡೆ ನಡೆಯಲಿ. ಅದರಂತೆ ಸಿಬಿಐ ತನಿಖೆ ಸಹ ನಡೆಯಲಿ. ಸಿಬಿಐ ತನಿಖೆ ನಡೆದರೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ, ಪ್ರೇಮ್ ಸಿಂಗ್‍ಗೆ ಚಾಕು ಇರಿತ ಪ್ರಕರಣ ನಡೆದಾಗ ಪೊಲೀಸ್ ತನಿಖೆ ನಡೆಯುವಾಗಲೇ ಎನ್‍ಐಎ ತನಿಖೆಗೆ ವಹಿಸಲಾಗಿತ್ತು. ಎನ್‍ಐಎ ತನಿಖೆ ನಂತರ ದೇಶದಲ್ಲಿ ದುಷ್ಕøತ್ಯ ನಡೆಸುವ ಸಂಘಟನೆಗಳ ಹುನ್ನಾರ ಬಹಿರಂಗವಾಗಿತ್ತು. ಈ ಎರಡೂ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಿಬಿಐ ತನಿಖೆಗೆ ಒತ್ತಾಯಿಸಲಾಗುತ್ತಿದೆ ಎಂದಿದ್ದಾರೆ.

    ಅನೇಕ ಬಾರಿ ಪೊಲೀಸ್ ಇಲಾಖೆ ತನಿಖೆ ಮಾಡಿ ಯಶಸ್ವಿಯಾಗಿದೆ. ಆದರೆ ಕೆಲವು ಪ್ರಕರಣಗಳಲ್ಲಿ ಸಿಬಿಐಗೆ ಕೊಟ್ಟ ನಂತರ ನ್ಯಾಯ ಸಿಕ್ಕಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸಿಬಿಐ ತನಿಖೆಗೆ ವಹಿಸುವುದಿಲ್ಲ ಎನ್ನುತ್ತಿದ್ದಾರೆ. ಸಿಬಿಐ ತನಿಖೆಗೆ ವಹಿಸದಿದ್ದರೆ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಆಪಾದನೆ ರಾಜ್ಯ ಸರ್ಕಾರದ ಮೇಲೆ ಬರಲಿದೆ ಎಂದು ಹೇಳಿದ್ದಾರೆ.

    ಸಿಬಿಐ ತನಿಖೆಗೆ ವಹಿಸಲು ಏಕೆ ಮೀನಾ ಮೇಷ ಎಣಿಸುತ್ತಿದ್ದೀರಾ? ಸಿಬಿಐ ತನಿಖೆಗೆ ಕೊಡದಿದ್ದರೆ, ದೇಶದ ಜನರ ಆಕ್ರೋಶ ಕಾಂಗ್ರೆಸ್ ವಿರುದ್ಧ ಸ್ಫೋಟವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಡ್ಯಾಂ ಕಾಮಗಾರಿಯಲ್ಲಿ ಅಕ್ರಮ – ತನಿಖೆಗೆ ಸಿಎಂ ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿಯ ಜೈನಮುನಿ ಹತ್ಯೆ ಪ್ರಕರಣಕ್ಕೆ (Jain Monk Murder Case) ಸಂಬಂಧಿಸಿದಂತೆ ಹಂತಕನ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಅಲ್ಲದೆ ನಾರಾಯಣ ಮಾಳಿ (Narayana Maali) ಮನೆಯಲ್ಲಿರುವ ಮೂಕಪ್ರಾಣಿಗಳನ್ನು ಪೊಲೀಸರು ಪಾಲನೆ ಮಾಡುತ್ತಿದ್ದಾರೆ.

    ಹೌದು. ಹಿರೆಕೋಡಿಯ ಕಾಮಕುಮಾರ ನಂದಿ ಜೈನಮುನಿಯ ಹತ್ಯೆಗೈದ ಹಂತಕ ನಾರಾಯಣ ಮಾಳಿ ಈಗ ಜೈಲು ಸೇರಿದ್ದಾನೆ. ನಾರಾಯಣ ಮಾಳೆ ಅರೆಸ್ಟ್ ಆಗುತ್ತಿದ್ದಂತೆ ಆತನ ಕುಟುಂಬಸ್ಥರನ್ನ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಆತನ ಮನೆ ಖಾಲಿಯಾಗಿದ್ದು, ಅವರ ಕುಟುಂಬ ಸಾಕಿ ಸಲಹಿದ್ದ ಜಾನುವಾರುಗಳು ಅನಾಥವಾಗಿವೆ.

    ಕೊಲೆ ಆರೋಪದಲ್ಲಿ ಮಾಳಿ ಜೈಲು ಸೇರಿದ್ರೆ ಆತನ ಕುಟುಂಬಸ್ಥರು 2 ಆಕಳು ಹಾಗೂ 2 ಎಮ್ಮೆ ಮತ್ತು 40ಕ್ಕೂ ಹೆಚ್ಚು ಮೇಕೆಗಳನ್ನು ಶೆಡ್ ನಲ್ಲಿಯೇ ಬಿಟ್ಟು ಹೊರಟು ಹೋಗಿದ್ದಾರೆ. ಮಾಳೆ ಮನೆಗೆ ಭದ್ರತೆಗೆ ಅಂತ ಜುಲೈ 7 ರಂದು ನಿಯೋಜನೆಗೊಂಡಿದ್ದ ಕೆಎಸ್‍ಆರ್ ಪಿ ಪೊಲೀಸರು ಹಾಗೂ ಚಿಕ್ಕೋಡಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಮಾಳೆ ಸಾಕಿದ್ದ ಮೇಕೆ ಹಾಗೂ ಹಸು, ಎಮ್ಮೆಗಳಿಗೆ ತಾವೇ ಮೇವು ಹಾಕಿ ನಿರುಣಿಸಿ ನೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಜೈನಮುನಿ ಹತ್ಯೆ ಕೇಸ್ ತನಿಖೆ ಚುರುಕು- 7 ದಿನ ಹಂತಕರು ಪೊಲೀಸ್ ಕಸ್ಟಡಿಗೆ

    ಮಾಳೆ ಪಾಪಿಯಾದರೂ ಸಹ ಆತ ತನ್ನ ಮನೆಯಲ್ಲಿ ಕಟ್ಟಿದ್ದ ಮೂಕ ಪ್ರಾಣಿಗಳ ರೋಧನೆ ನೋಡಲಾಗದೆ ಪೊಲೀಸರು ಅವುಗಳ ಲಾಲನೆ-ಪಾಲನೆ ಮಾಡುತ್ತಿದ್ದಾರೆ. ಪೊಲೀಸರ ಈ ಮಾನವೀಯ ಕೆಲಸಕ್ಕೆ ಈಗ ಮೆಚ್ಚುಗೆ ವ್ಯಕ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈನಮುನಿ ಹತ್ಯೆ ಕೇಸ್ ತನಿಖೆ ಚುರುಕು- 7 ದಿನ ಹಂತಕರು ಪೊಲೀಸ್ ಕಸ್ಟಡಿಗೆ

    ಜೈನಮುನಿ ಹತ್ಯೆ ಕೇಸ್ ತನಿಖೆ ಚುರುಕು- 7 ದಿನ ಹಂತಕರು ಪೊಲೀಸ್ ಕಸ್ಟಡಿಗೆ

    ಬೆಳಗಾವಿ: ಚಿಕ್ಕೋಡಿ ಹಿರೇಕೋಡಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ (Kama Kumara Nandi Maharaj) ಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು 7 ದಿನ ಕಸ್ಟಡಿಗೆ ಪಡೆದಿದ್ದಾರೆ. ಇದಕ್ಕೂ ಮುನ್ನ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ಆರೋಪಿ ನಾರಾಯಣ ಮಾಳಿ, ಮತ್ತೊಬ್ಬ ಆರೋಪಿ ಹಸನಸಾಬ್ ದಲಾಯತ್‍ನಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯ್ತು ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯ್ತು.

    ಇಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ (Nalin Kumar Kateel) ನೇತೃತ್ವದ ಬಿಜೆಪಿ ಸಮಿತಿ ಹಿರೇಕೋಡಿ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ರಾಜ್ಯ ಸರ್ಕಾರದ ವಿರುದ್ಧ ಕಟೀಲ್ ವಾಗ್ದಾಳಿ ನಡೆಸಿದ್ರು. ಈ ಪ್ರಕರಣದಲ್ಲಿ ಕೇವಲ ಇಬ್ಬರಲ್ಲ, ಇನ್ನಷ್ಟು ಮಂದಿ ಇರುವ ಶಂಕೆ ಇದೆ ಅಂದ್ರು. ಎಲ್ಲವೂ ಸಂಶಯಾಸ್ಪದವಾಗಿದ್ದಾಗ ಪ್ರಕರಣವನ್ನು ಸಿಬಿಐಗೆ ವಹಿಸೋದ್ರಲ್ಲಿ ತಪ್ಪೇನಿದೆ. ಒಬ್ಬ ಆರೋಪಿ ಹೆಸರನ್ನು ಕೊನೆಯವರೆಗೂ ಮುಚ್ಚಿಟ್ಟಿದ್ದು ಏಕೆ ಎಂದು ಕಟೀಲ್ ಪ್ರಶ್ನಿಸಿದ್ರು.

    ಈ ಪ್ರಕರಣ ಸಂಬಂಧ ಸದನಕ್ಕೆ ಉತ್ತರ ನೀಡಿದ ಗೃಹ ಸಚಿವ ಪರಮೇಶ್ವರ್ (G Parameshwar), ಇದು 6 ಲಕ್ಷ ರೂಪಾಯಿ ವ್ಯವಹಾರ. ಹಣ ವಾಪಸ್ ಕೇಳಿದಾಗ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ಸರಿಯಾಗಿಯೇ ನಡೆಯುತ್ತಿದೆ. ಇದನ್ನು ಸಿಬಿಐಗೆ ಒಪ್ಪಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ನಮ್ ಪೊಲೀಸ್ರು ದೇಶದಲ್ಲೇ ಬೆಸ್ಟ್ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಜೈನ ಮುನಿ ಕೊಲೆ ಕೇಸ್‌ – ಸಿಬಿಐ ತನಿಖೆಗೆ ಆಗ್ರಹಿಸಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

    ನಮ್ಮ ಕಾಲದಲ್ಲಿ ಮಾತ್ರ ಕೊಲೆ ನಡೆದಿಲ್ಲ. ಎಲ್ಲರ ಕಾಲದಲ್ಲೂ ನಡೆದಿದೆ ಎಂಬ ಗೃಹ ಸಚಿವರ ಮಾತು ಬಿಜೆಪಿಗರನ್ನು ಸಿಟ್ಟಿಗೆಬ್ಬಿಸಿತು. ಈ ವೇಳೆ ಪೊಲೀಸರನ್ನು ಸಿಎಂ ಸಮರ್ಥಿಸಿಕೊಂಡರು. ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಮತ್ತೆ ಸದನದ ಬಾವಿಗೆ ಇಳಿಯಿತು. ಪರಸ್ಪರ ವಾಕ್ಸಮರ ನಡೆದವು. ಸರಣಿ ಹತ್ಯೆಗಳನ್ನು ಖಂಡಿಸಿ ಬುಧವಾರ ಬಿಜೆಪಿ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈನಮುನಿ ಹತ್ಯೆ ಪ್ರಕರಣವನ್ನು CBI ತನಿಖೆಗೆ ಕೊಡಲ್ಲ: ಜಿ. ಪರಮೇಶ್ವರ್

    ಜೈನಮುನಿ ಹತ್ಯೆ ಪ್ರಕರಣವನ್ನು CBI ತನಿಖೆಗೆ ಕೊಡಲ್ಲ: ಜಿ. ಪರಮೇಶ್ವರ್

    ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI)ಗೆ ಕೊಡುವ ಅಗತ್ಯವಿಲ್ಲ, ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G. Parameshwar) ಹೇಳಿದ್ದಾರೆ.

    ಜೈನಮುನಿ ಹತ್ಯೆ ಪ್ರಕರಣವನ್ನು (Jain Monk Murder Case) ಶೂನ್ಯ ವೇಳೆಯಲ್ಲಿ ಬಿಜೆಪಿ (BJP)ಸೋಮವಾರ ಪ್ರಸ್ತಾಪ ಮಾಡಿತ್ತು. ಸಿಬಿಐಗೆ ನೀಡುವಂತೆ ಬಿಜೆಪಿ ಶಾಸಕರು ಆಗ್ರಹಿಸಿದ್ದರು. ಇದಕ್ಕೆ ಇಂದು ಸದನದಲ್ಲಿ ಉತ್ತರ ನೀಡಿದ ಪರಮೇಶ್ವರ್, ಇಂತಹ ಘೋರ ಹತ್ಯೆಯನ್ನು ಕಂಡಿರಲಿಲ್ಲ. ಇದು ಅತ್ಯಂತ ನೋವು ತಂದ ಘಟನೆ ಎಂದರು.

    ಆಚಾರ್ಯ ಕಾಮಕುಮಾರ ನಂದಿ (Acharya Kamakumar Nandi Maharaj) ಜೈನಮುನಿ ಅವರ ಹಿರೇಕೋಡಿ ಆಶ್ರಮಕ್ಕೆ 4 ಎಕರೆ ಜಮೀನು ಇದೆ. ಹತ್ಯೆ ಆರೋಪಿಗಳಾದ ನಾರಾಯಣ ಬಸಣ್ಣ ಮಾಳಿ, ಹಸನ್ ಸಾಬಾ ಮಕ್ಬೂಲ್ ದಲಾಯಿತಗೆ 6 ಲಕ್ಷ ರೂ. ಸಾಲ ನೀಡಿದ್ದು, ಅದನ್ನು ಮರಳಿಸುವಂತೆ ಕೇಳಿದ್ದರು. ಆ ಕಾರಣಕ್ಕಾಗಿ ಕೊಲೆ ಮಾಡಿ ದೇಹವನ್ನು ತುಂಡು ಮಾಡಿ ಕೊಳವೆ ಬಾವಿಯಲ್ಲಿ ಹಾಕಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ವರ್ಗಾವಣೆ ‘ವ್ಯಾಪಾರ’ದ ಕಿಚ್ಚು ; ಕಾಂಗ್ರೆಸ್-ಬಿಜೆಪಿ ಮಧ್ಯೆ ಜಟಾಪಟಿ, ಕಲಾಪ ಮುಂದೂಡಿಕೆ

    ಪೊಲೀಸರು ಘಟನೆ ನಡೆದ 6 ಗಂಟೆಯಲ್ಲಿ ಆರೋಪಿಗಳನ್ನು ಹಿಡಿದಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಮಾತ್ರ ಹತ್ಯೆ ನಡೆದಿಲ್ಲ. ಎಲ್ಲಾ ಸಂದರ್ಭದಲ್ಲೂ ಹತ್ಯೆಗಳು ನಡೆದಿವೆ. ಆದರೆ ತಾವು ಸಿಬಿಐಗೆ ತನಿಖೆಗೆ ಕೊಡಲು ಬೇಡಿಕೆ ಇಡುತ್ತೀರಿ. ಹಾಗಾದರೆ ನಮ್ಮ ಪೊಲೀಸರಿಗೆ ಸಾಮರ್ಥ್ಯ ಇಲ್ಲವೇ? ನಿಮ್ಮ ಸರ್ಕಾರದ ಅವಧಿಯಲ್ಲಿ ಇದ್ದ ಬೆಸ್ಟ್ ಪೊಲೀಸ್ ಇವಾಗ ಅಸಮರ್ಥರಾದರೇ? ನಮ್ಮ ಪೊಲೀಸರ ಮೇಲೆ ನಮಗೆ ನಂಬಿಕೆ ವಿಶ್ವಾಸ ಇಲ್ಲವೇ? ಕರ್ನಾಟಕ ಪೊಲೀಸ್ ವನ್ ಆಫ್ ದಿ ಬೆಸ್ಟ್ ಪೊಲೀಸ್ ಎಂದು ತಿರುಗೇಟು ಕೊಟ್ಟರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈನ ಮುನಿ ಹತ್ಯೆ ಪ್ರಕರಣ ಸಿಬಿಐಗೆ ನೀಡಲ್ಲ: ಗೃಹ ಸಚಿವ

    ಜೈನ ಮುನಿ ಹತ್ಯೆ ಪ್ರಕರಣ ಸಿಬಿಐಗೆ ನೀಡಲ್ಲ: ಗೃಹ ಸಚಿವ

    ಬೆಳಗಾವಿ: ಹಿರೇಕೋಡಿಯ ಜೈನ ಮುನಿಗಳ (Jain Monk) ಬರ್ಬರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ (G.Parameshwara) ಹೇಳಿದ್ದಾರೆ.

    ಬೆಳಗಾವಿ (Belagavi) ತಾಲೂಕಿನ ಹಲಗಾ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದುರ್ಘಟನೆ ನಡೆಯಬಾರದಿತ್ತು. ಇದರಿಂದ ನನಗೆ ಬಹಳ ನೋವಾಗಿದೆ. ಒಬ್ಬ ಸ್ವಾಮೀಜಿ, ಸಂತ ಯಾವುದೇ ಅಪೇಕ್ಷೆ ಇಲ್ಲದೇ ಜೀವನ ನಡೆಸುತ್ತಾರೆ. ಅಂಥವರಿಗೆ ಯಾವುದೇ ಕಾರಣಕ್ಕೂ ಹೀಗೆ ಆಗಬಾರದು ಎಂದಿದ್ದಾರೆ. ಇದನ್ನೂ ಓದಿ: ಇಸ್ರೋ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್‍ಗೆ ಹೃದಯಾಘಾತ

    ನಮ್ಮ ರಾಜ್ಯದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಬಂಧಿಸಿತರ ವಿರುದ್ಧ ಈಗಾಗಲೇ ತನಿಖೆ ಆರಂಭವಾಗಿದೆ. ಯಾರೂ ಉದ್ರೇಕಗೊಳ್ಳಬಾರದು. ಎಲ್ಲವನ್ನೂ ಕಾನೂನು ನೋಡಿಕೊಳ್ಳಲಿದೆ ಎಂದಿದ್ದಾರೆ.

    ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ನಮ್ಮ ಸರ್ಕಾರ ಎಲ್ಲರಿಗೂ ರಕ್ಷಣೆ ಕೊಡುತ್ತದೆ. ಹುಬ್ಬಳ್ಳಿಯ ಗುಣಧರನಂದಿ ಮಹಾರಾಜರ ಎಲ್ಲಾ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೇನೆ. ಈ ಮೂಲಕ ಎಲ್ಲಾ ಸಮುದಾಯದ ಸಾಧು ಸಂತರಿಗೆ ನಾನು ಭರವಸೆ ನೀಡುತ್ತೇನೆ. ಮುನಿಗಳು ಧರ್ಮಪ್ರಚಾರಕ್ಕೆ ನಡೆದುಕೊಂಡು ಹೋಗುವ ವೇಳೆ ಭದ್ರತೆ ನೀಡುತ್ತೇವೆ. ಜೈನ ಸಮುದಾಯಕ್ಕೆ ಮಂಡಳಿ ಮಾಡಿಕೊಳ್ಳಲು ಕೋರಿದ್ದಾರೆ. ಅದಕ್ಕೂ ನಮ್ಮ ಸರ್ಕಾರ ಬದ್ಧವಿದೆ. ನಾನು ಕೂಡ ಹಿರೇಕೋಡಿಯ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ.

    ಚಿಕ್ಕೋಡಿಗೆ ಎಡಿಜಿಪಿ ಆರ್. ಹಿತೇಂದ್ರ ಅವರನ್ನು ಕಳುಹಿಸಲಾಗಿದೆ. ಅವರೂ ಘಟನೆಯ ಎಲ್ಲಾ ಮಾಹಿತಿ ಪಡೆದಿದ್ದಾರೆ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ, ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ ಚರ್ಚಿಸಿ ತೀರ್ಮಾನ: ಮಧು ಬಂಗಾರಪ್ಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಪಾಕಿಸ್ತಾನ ಬಾವುಟ ಹಾರಾಡ್ತಿದೆ: ಯತ್ನಾಳ್ ಕಿಡಿ

    ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಪಾಕಿಸ್ತಾನ ಬಾವುಟ ಹಾರಾಡ್ತಿದೆ: ಯತ್ನಾಳ್ ಕಿಡಿ

    – ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ. ಹಿಂದೂಗಳ ಹತ್ಯೆ ಹತ್ಯೆ ನಡೆಯುತ್ತಿದ್ದು, ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.

    ವಿಧಾನಸಭೆಯಲ್ಲಿ (Vidhanasabha Session) ಮಾತನಾಡಿದ ಅವರು, ಈ ಸರ್ಕಾರ ಬಂದ್ಮೇಲೆ ಹಿಂದೂಗಳ ಕೊಲೆ ನಡೆಯುತ್ತಿದೆ. ಟೀ.ನರಸೀಪುರದಲ್ಲಿ ಹನುಮಜಯಂತಿ ವಿಚಾರದಲ್ಲಿ ಯುವ ಬ್ರಿಗೇಡ್ (Yuvara Brigade) ಯುವಕನ ಕೊಲೆ ಆಗಿದೆ. ಈ ಸರ್ಕಾರ ಬಂದ್ಮೇಲೆ ಪಾಕಿಸ್ತಾನ ಬಾವುಟ (Pakistan Flag) ಹಾರಾಡ್ತಿದೆ ಎಂದಾಗ ಕಾಂಗ್ರೆಸ್ ಶಾಸಕರು (Congress MLA) ಆಕ್ರೋಶ ಹೊರಹಾಕಿದ್ದಾರೆ., ಇದೇನಿದು..!? ಏನೇನೋ ಹೇಳ್ತಾರೆ. ಜೈನಮುನಿಗಳ ಬಗ್ಗೆ ಚರ್ಚೆ ಬಗ್ಗೆ ಮಾತಾಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಜೈನ ಮುನಿಗಳು (Jain Monk) ಎಲ್ಲವನ್ನೂ ತ್ಯಾಗ ಮಾಡ್ತಾರೆ ಇಂತಹವರ ಹತ್ಯೆಯಿಂದ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕ ರಾಜ್ಯಕ್ಕೆ ಮುನಿಗಳ ಹತ್ಯೆ ಕಳಂಕವಾಗಿದೆ. ಈ ಹತ್ಯೆ ಹಿಂದೆ ಹಲವು ಅನುಮಾನಗಳಿದ್ದಾವೆ. ಬೆಂಗಳೂರಿನಿಂದ ಪೊಲೀಸರ ಮೇಲೆ ಏನ್ ಒತ್ತಡ ಬಂದಿದೇಯೋ..!?. ಪೊಲೀಸರ ಮೇಲೆ ಒತ್ತಡ ಬರುತ್ತೆ. ಬೆಳಗ್ಗೆ ಚೆನ್ನಾಗಿ ಇರುತ್ತಾರೆ, ರಾತ್ರಿ ಒಳಗಾಗಿ ಪೊಲೀಸರು ಬದಲಾಗ್ತಾರೆ ಎಂದರು. ಇದನ್ನೂ ಓದಿ: ಬೆಳಗಾವಿ ಜೈನಮುನಿ ಕೊಲೆ ಪ್ರಕರಣ- ಸಿಬಿಐ ತನಿಖೆಗೆ ಒಪ್ಪದ ಸರ್ಕಾರ

    ಹಸನ್ ಎಂಬ ಹೆಸರನ್ನ ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದ ಶಾಸಕರು, ರಾಜ್ಯದ ಪೊಲೀಸರ ಮೇಲೆ ಭರವಸೆ ಇಲ್ಲ. ಸಿಬಿಐ ತನಿಖೆಗೆ (CBI Investigation) ಈ ಕೇಸ್ ಕೊಡಬೇಕು. ಒಂದು ಕೋಮಿನ ತೃಪ್ತಿಪಡಿಸುವ ಕೆಲಸ ಆಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಒಂದು ಸಂತಾಪವನ್ನ ಕೂಡ ಹೇಳಲಿಲ್ಲ. ಬೇರೆ ಯಾರಾದರೂ ಸತ್ತಿದ್ರೆ ಸಂತಾಪ ಸೂಚಿಸುತ್ತಿದ್ದರು ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈನ ಮುನಿ ಹತ್ಯೆ ಹಿಂದೆ ಐಸಿಸ್‌ ಚಿತಾವಣೆಯಿದೆ – ಶಾಸಕ ಸಿದ್ದು ಸವದಿ

    ಜೈನ ಮುನಿ ಹತ್ಯೆ ಹಿಂದೆ ಐಸಿಸ್‌ ಚಿತಾವಣೆಯಿದೆ – ಶಾಸಕ ಸಿದ್ದು ಸವದಿ

    ಬೆಂಗಳೂರು: ಜೈನ ಮುನಿಗಳ (Jain Monk) ಹತ್ಯೆ ಪ್ರಕರಣದ ಹಿಂದೆ ಐಸಿಸ್‌ (ISIS) ಚಿತಾವಣೆ ಇದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ(Siddu Savadi) ಗಂಭೀರ ಆರೋಪ ಮಾಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಚಿತ್ರಹಿಂಸೆ ನೀಡಿ ಕರೆಂಟ್ ಶಾಕ್ ಕೊಟ್ಟು ಕೊಂದಿದ್ದಾರೆ. ಇದರ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ ಎಂದು ಹೇಳಿದರು. ಇದನ್ನೂ ಓದಿ: ಆರ್‌ಎಂಸಿ ಯಾರ್ಡ್‌ನಲ್ಲಿ ಟೊಮೆಟೊ ಕಳ್ಳತನ ಪ್ರಕರಣ – ಖದೀಮರು ಯಾಮಾರಿಸಿದ್ದು ಹೇಗೆ?

    ಇನ್ನು ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದೆ. ಈ ಕೃತ್ಯದ ಹಿಂದೆ ಹಿಂದೆ ಐಸಿಸ್ ಉಗ್ರರ ಚಿತಾವಣೆ ಇದೆ. ಆದರೆ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ. ಸರ್ವ ಸಂಗತ್ಯಾಗ ಮಾಡಿದ ಮುನಿಗಳ ಹತ್ಯೆಯ ಹಿಂದೆ ಪಿತೂರಿ ಇದೆ. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು.

     

    ಭಕ್ತರು ಆರ್ಥಿಕ ವ್ಯವಹಾರ ಮಾಡಿರಬಹುದು. ಸಂಸ್ಕಾರ ಕೊಡುವ ಮುನಿಗಳು ಆರ್ಥಿಕ ವ್ಯವಹಾರ ಮಾಡಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸರ್ಕಾರ ಮುಚ್ಚಿಡುವ ಯತ್ನ ಮಾಡುತ್ತಿದೆ ಎಂದು ದೂರಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]