Tag: jain

  • ದಾವಣಗೆರೆ | ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಯುವತಿಯರು

    ದಾವಣಗೆರೆ | ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಯುವತಿಯರು

    ದಾವಣಗೆರೆ: ಮದುವೆ ಸಂಭ್ರಮದಲ್ಲಿರಬೇಕಾದ 26 ವರ್ಷದ ಇಬ್ಬರು ಜೈನ ಸಮುದಾಯದ ಯುವತಿಯರು ಸನ್ಯಾಸತ್ವ ಸ್ವೀಕಾರಕ್ಕೆ (Sanyas Deeksha) ಮುಂದಾಗಿದ್ದಾರೆ.

    ದಾವಣಗೆರೆ (Davanagere) ಮೂಲದ ಯುವತಿ ಮಾನಸಿ ಕುಮಾರಿ ಹಾಗೂ ಗೋಕಾಕ್‍ನ (Gokak) ಮುಮುಕ್ಷ ಭಕ್ತಿ ಕುಮಾರಿಯವರು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ. ಮಾನಸಿ ಕುಮಾರಿ ಎಂಎ ಸೈಕಾಲಜಿ ವ್ಯಾಸಾಂಗ ಮಾಡಿದ್ದು, ಮುಮುಕ್ಷ ಭಕ್ತಿ ಕುಮಾರಿ ಎಲ್‍ಎಲ್‍ಬಿ ವ್ಯಾಸಾಂಗ ಮಾಡಿದ್ದಾರೆ.

    ಮುಂದಿನ ತಿಂಗಳು 17ರಂದು ಜಾರ್ಖಂಡ್‌ ರುಜುಬಾಲಿಕ ಎಂಬಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ನಡೆದಿದೆ. ಲೌಕಿಕ ಜೀವನ ತೊರೆದು ಅಲೌಕಿಕ ಜೀವನದತ್ತ ಮುಖ ಮಾಡಿದ ಯುವತಿಯರನ್ನು ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಇಬ್ಬರು ಕುಟುಂಬಸ್ಥರಿಂದ ಹಾಗೂ ಜೈನ ಸಮುದಾಯದಿಂದ ಔತಣ ಕೂಟ ಏರ್ಪಡಿಸಲಾಗಿತ್ತು.

    ದಾವಣಗೆರೆಯಲ್ಲಿ ಇದುವರೆಗೂ 64 ಜನ ಯುವಕ- ಯುವತಿಯರು ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.

  • ಹರ್ಷ ಕೊಲೆ ಪ್ರಕರಣದ ಆರೋಪಿಗಳಿಂದ ಜೈಲಿನಲ್ಲಿ ಗಲಾಟೆ- ಮಾರಾಕಾಸ್ತ್ರ, ಮೊಬೈಲ್, ನಗದು ವಶಕ್ಕೆ

    ಹರ್ಷ ಕೊಲೆ ಪ್ರಕರಣದ ಆರೋಪಿಗಳಿಂದ ಜೈಲಿನಲ್ಲಿ ಗಲಾಟೆ- ಮಾರಾಕಾಸ್ತ್ರ, ಮೊಬೈಲ್, ನಗದು ವಶಕ್ಕೆ

    ಕಲಬುರಗಿ: ಶಿವಮೊಗ್ಗದ ಹರ್ಷ (Harsha, Shivamogga) ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.

    ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಶಿವಮೊಗ್ಗ ಹರ್ಷ ಕೊಲೆಯ ಪ್ರಕರಣದ ಆರೋಪಿಗಳು ಮತ್ತು ಇತರೆ ಆರೋಪಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಟ ನಡೆದಿದೆ.

    ಈ ಗಲಾಟೆಯಲ್ಲಿ ಎರಡು ಗುಂಪಿನ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಯ ಬಳಿಕ ಡಿಸಿಪಿ ಕ್ರೈಂ ನೇತೃತ್ವದಲ್ಲಿ ಜೈಲಿನ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಮಾರಾಕಾಸ್ತ್ರ 10 ಸಾವಿರ ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಖಾಸಗಿ ಬಸ್ ಹರಿದು ಬೈಕ್ ಸವಾರ ದಾರುಣ ಸಾವು

    ಹರ್ಷ ಕೊಲೆ: ಫೆಬ್ರವರಿ 20ರಂದು ರಾತ್ರಿ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿತ್ತು. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿತ್ತು. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಹತ್ಯೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳು ಜೈಲಿನಲ್ಲಿದ್ದಾರೆ.

  • ಬೆಳಗಾವಿ ಜೈನಮುನಿ ಕೊಲೆ ಪ್ರಕರಣ- ಸಿಬಿಐ ತನಿಖೆಗೆ ಒಪ್ಪದ ಸರ್ಕಾರ

    ಬೆಳಗಾವಿ ಜೈನಮುನಿ ಕೊಲೆ ಪ್ರಕರಣ- ಸಿಬಿಐ ತನಿಖೆಗೆ ಒಪ್ಪದ ಸರ್ಕಾರ

    – ಪೊಲೀಸರಿಂದ ತನಿಖೆ ಎಚ್.ಕೆ. ಪಾಟೀಲ್

    ಬೆಂಗಳೂರು: ಬೆಳಗಾವಿ ಜೈನಮುನಿ (Belagavi Jain Monk) ಕೊಲೆ ಪ್ರಕರಣ ವಿಧಾನ ಪರಿಷತ್‍ನಲ್ಲಿ  (Vidhana Parishad) ಸದ್ದು ಮಾಡಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಅಂತ ವಿಪಕ್ಷ ಬಿಜೆಪಿ ಪಟ್ಟು ಹಿಡೀತು. ಆದರೆ ಸರ್ಕಾರ ಮಾತ್ರ ಸಿಬಿಐ ತನಿಖೆ (CBI Investigation) ಇಲ್ಲ ಅಂತ ಹೇಳಿ ಪೊಲೀಸರ ತನಿಖೆ ಮಾಡಿಸಲಾಗುತ್ತೆ ಅಂತ ತಿಳಿಸಿತು.

    ಬೆಳಗ್ಗೆ ಅಧಿವೇಶನ ಪ್ರಾರಂಭ ಆದ ಕೂಡಲೇ ಬಿಜೆಪಿ (BJP) ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ನಿಲುವಳಿ ಸೂಚನೆಗೆ ಮುಂದಾದರು. ಕೂಡಲೇ ಸಭಾಪತಿಗಳು ನಿಯಮ 68ರ ಅಡಿ ಚರ್ಚೆಗೆ ಅವಕಾಶ ಕೊಡೋದಾಗಿ ಹೇಳಿದ್ರು. ಬಳಿಕ ಪ್ರಶ್ನೋತ್ತರ ಕಲಾಪದ ವೇಳೆ ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡಲಾಯ್ತು.

    ಈ ವೇಳೆ ಮಾತನಾಡಿದ ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ, ಜೈನ ಮುನಿ ಕೊಲೆ ಪ್ರಕರಣ ತಲ್ಲಣಗೊಳಿಸಿದೆ. ಅಹಿಂಸೆ ಧರ್ಮ ಅನ್ನೋರ ಕೊಲೆ ಆಗಿದೆ.ವಿದ್ಯುತ್ ಶಾಕ್ ಕೊಟ್ಟು, 9 ತುಂಡು ಮಾಡಿದ್ದಾರೆ. ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿಲ್ಲ. ನಿನ್ನೆಯವರೆಗೂ ಸಿಎಂ, ಗೃಹ ಸಚಿವರು ಸ್ಥಳಕ್ಕೆ ಹೋಗಿಲ್ಲ. ಜೈನಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು ಅಂತ ಒತ್ತಾಯ ಮಾಡಿದರು.

    ಬಿಜೆಪಿ ರವಿಕುಮಾರ್ (Ravi kumar) ಮಾತನಾಡಿ, ಅತ್ಯಂತ ಸರಳ ಸ್ವಾಮಿಗಳು ಇವರು. ಇಂತಹ ಜೈನಮುನಿ ಬರ್ಬರ ಹತ್ಯೆ ಆಗಿದೆ. 6 ಲಕ್ಷ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಆಗಿದೆ ಅಂತ ಪೊಲೀಸ್ ಹೇಳಿದ್ದಾರೆ. ಇದನ್ನ ನಾವು ಒಪ್ಪಲ್ಲ. ತನಿಖೆ ಆಗದೇ ಹೀಗೆ ಪೊಲೀಸರು ಹೇಳೋದು ಎಷ್ಟು ಸರಿ. ಪೊಲೀಸರ ಈ ಹೇಳಿಕೆ ಎಷ್ಟು ಸರಿ? ಸ್ನೇಹಿತರು ಕೊಲೆಗೆ ಸಹಾಯ ಮಾಡಿದ್ದಾರೆ ಅಂತ ಆರೋಪಿ ಹೇಳಿದ್ದಾನೆ. ಅವರ ಬಂಧನ ಕೂಡಾ ಆಗಬೇಕು ಎಂದರು. ಇದನ್ನೂ ಓದಿ: ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು: ಸುನಿಲ್ ಕುಮಾರ್ ಒತ್ತಾಯ

    ತೆಲಂಗಾಣ ಸಿಎಂ ಅತ್ಯಾಚಾರಕ್ಕೆ ಸಂಬಂಧಿಸಿದ ಒಂದು ಕೇಸ್ ನಲ್ಲಿ ಕ್ರಮ ತೆಗೆದುಕೊಂಡಿದ್ರು. ಯಾರು ಕೊಲೆ ಮಾಡಿದ್ದಾರೆ ಅವರನ್ನ ಹ್ಯಾಂಗ್ ಮಾಡಬೇಕು. ಸಿಎಂ ಸ್ಥಳಕ್ಕೆ ಹೋಗಬೇಕು. ಕೇವಲ 6 ಲಕ್ಷ ಕೇಳಿದ್ದಕ್ಕೆ ಈ ಕೊಲೆ ಆಗಿಲ್ಲ. ಹೀಗಾಗಿ ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕು. ರಾಜಕೀಯ ಬಿಟ್ಟು ಸರ್ಕಾರ ಕ್ರಮವಹಿಸಬೇಕು. ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕಾದ್ರೆ ಸಿಬಿಐ ತನಿಖೆ ಆಗಬೇಕು ಆಗ್ರಹಿಸಿದರು.

    ಬಳಿಕ ಬಿಜೆಪಿಯ ವೈಎ ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಹನುಮಂತ ನಿರಾಣಿ, ಸೇರಿ ಹಲವರು ಮಾತನಾಡಿ ಸಿಬಿಐ ತನಿಖೆಗೆ ಒತ್ತಾಯಿಸಿದರು. ಜೆಡಿಎಸ್ ನ ಶರವಣ, ಮರಿತಿಬ್ಬೇಗೌಡ, ಭೋಜೇಗೌಡ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದರು. ಕಾಂಗ್ರೆಸ್ ನ ಜಗದೀಶ್ ಶೆಟ್ಟರ್, ಪ್ರಕಾಶ್ ಹುಕ್ಕೇರಿ ಪ್ರಕರಣದಲ್ಲಿ ರಾಜಕೀಯ ಬೇಡ ಅಂತ ಪೊಲೀಸರಿಂದಲೇ ತನಿಖೆ ನಡೆಸಿ ಅಂತ ಸರ್ಕಾರದ ಪರ ಮಾತನಾಡಿದ್ರು.

    ಚರ್ಚೆಗೆ ಸರ್ಕಾರದ ಪರ ಉತ್ತರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್ (H. K Patil), ಇದೊಂದು ಹೇಯಕೃತ್ಯ. ನಾಗರೀಕ ಸಮಾಜ ತಲೆ ತಗ್ಗಿಸೋ ಘಟನೆ. 6 ಲಕ್ಷ ಸಾಲದ ವಿಚಾರ ಆರೋಪಿ ಪೊಲೀಸರಿಗೆ ಹೇಳಿದ್ದು. ಅದನ್ನ ಪೊಲೀಸರು ಹೇಳಿದ್ದಾರೆ. ತನಿಖೆ ಸರ್ಕಾರ ಮಾಡಿಸುತ್ತಿದೆ. ಇದನ್ನ ಗಂಭೀರ, ವಿಶೇಷ ಪ್ರಕರಣ ಅಂತ ಡಿಎಸ್‍ಪಿ ನೇತೃತ್ವದ ತನಿಖೆ ಮಾಡಿಸಲಾಗ್ತಿದೆ ಅಂತ ತಿಳಿಸಿದರು.

    ಈ ಕೃತ್ಯ ಮಾಡಿದ ವ್ಯಕ್ತಿಗೆ ವಿಕೃತ ಮನಸು. ಮೃತ ದೇಹವನ್ನ ಕಟ್ ಮಾಡ್ತಾರೆ ಅಂದರೆ ಅವರಿಗೆ ಮನುಷ್ಯತ್ವದ ಗುಣ ಇಲ್ಲ. ಸಿಬಿಐಗೆ ಕೊಡಬೇಕು ಅಂತ ಹೇಳಿದ್ರು. ಯಾವ ಕಾರಣಕ್ಕೆ ಸಿಬಿಐಗೆ ಕೊಡಬೇಕು ಅಂತ ಪ್ರಶ್ನೆ ಮಾಡಿದ್ರು. ನಾವು ಯಾರ ರಕ್ಷಣೆ ಮಾಡುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಇದ್ದ ಅಧಿಕಾರಿಗಳೇ ತನಿಖೆ ಮಾಡ್ತಿದ್ದಾರೆ. ರಾಜಕೀಯ ಬೆರೆಸದೇ ಪ್ರಕರಣವನ್ನ ಖಂಡಸಬೇಕು. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೆ. ಟೆಕ್ನಾಲಜಿ ಬಳಸಿಕೊಂಡು, ನಿಷ್ಠಾವಂತ ಅಧಿಕಾರಿ ನೇಮಕ ಮಾಡಿ ಪ್ರಕರಣ ತನಿಖೆ ಮಾಡಿಸುತ್ತೇವೆ. ಯಾರನ್ನೂ ನಮ್ಮ ಸರ್ಕಾರ ರಕ್ಷಣೆ ಮಾಡಲ್ಲ. ಯಾರೇ ವ್ಯಕ್ತಿಗಳು ಇದ್ದರೂ ತನಿಖೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡಿಸ್ತೀವಿ ಅಂತ ಸಿಬಿಐ ತನಿಖೆ ನಿರಾಕರಿಸಿದರು. ಬಳಿಕ ನಾಳೆ ಗೃಹ ಸಚಿವರು ಸ್ಪಷ್ಟ ಉತ್ತರ ಕೊಡೋದಾಗಿ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

    ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

    ಹಾಸನ: ಶ್ರವಣಬೆಳಗೊಳ ಮಠದ ಸ್ವಸ್ತಿಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ (Charukeerthi Bhattaraka Swamiji) ವಿಧಿವಶರಾಗಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಶ್ರೀ ಕ್ಷೇತ್ರ ಶ್ರವಣಬೆಳಗೊಳ (Shravanabelagola) ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಕಳೆದ 4 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ಭಂಡಾರ ಭವನದಲ್ಲಿ ಬಿಪಿ, ಶುಗರ್ ಏರುಪೇರಿನಿಂದ ಅಸ್ವಸ್ಥಗೊಂಡು ಸ್ವಾಮೀಜಿ ಕೆಳಗೆ ಬಿದ್ದಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಅಂಜನಮೂರ್ತಿ ನಿಧನ

     ಕೂಡಲೇ ಮಠದಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್‌ ಮೂಲಕ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕ್ಷೇತ್ರ ಆಯ್ಕೆಯಲ್ಲಿ ಗೊಂದಲ: ಸಿದ್ದು ಪತ್ನಿ ಹೇಳಿದ್ದೇನು? ಪುತ್ರ ಹೇಳಿದ್ದೇನು?

  • ಜೈನ ಸನ್ಯಾಸ ದೀಕ್ಷೆ ಪಡೆದ ಶ್ರೀಮಂತ ಕುಟುಂಬಕ್ಕೆ ಸೇರಿದ 20ರ ಯುವತಿ

    ಜೈನ ಸನ್ಯಾಸ ದೀಕ್ಷೆ ಪಡೆದ ಶ್ರೀಮಂತ ಕುಟುಂಬಕ್ಕೆ ಸೇರಿದ 20ರ ಯುವತಿ

    ವಿಜಯನಗರ: ಶ್ರೀಮಂತ ಕುಟುಂಬಕ್ಕೆ ಸೇರಿದ 20 ವರ್ಷದ ಯುವತಿಯೊಬ್ಬಳು ಹೊಸಪೇಟೆಯಲ್ಲಿ (Hospet) ಜೈನ (Jain) ಸನ್ಯಾಸತ್ವ ಸ್ವೀಕರಿಸಿದ್ದಾಳೆ.

    ಹೊಸಪೇಟೆ ಮೂಲದ ಶ್ರೀಮಂತ ಕುಟುಂಬಕ್ಕೆ ಸೇರಿದ ಜೈನ ಸಮುದಾಯದ ಯುವತಿ ಮುಮುಕ್ಷಾ ವಿಧಿ ಕುಮಾರಿ ಮಹಾವೀರ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ವತಿಯಿಂದ ದೀಕ್ಷಾ ಕಾರ್ಯಕ್ರಮ‌ ಮಲ್ಲಿಗೆ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?

    ಹೊಸಪೇಟೆಯ ಉದ್ಯಮಿಯಾದ ದಿವಂಗತ ಕಾಂತಿಲಾಲಾ ಜಿ. ಜಿರಾವಲಾ ಮತ್ತು ರೇಖಾದೇವಿ ಜಿರಾವಲಾ ದಂಪತಿಯ ನಾಲ್ವರು ಪುತ್ರಿಯರಲ್ಲಿ ಮುಮುಕ್ಷಾ ಮೂರನೇಯವರು. 10ನೇ ತರಗತಿಯಲ್ಲಿ ಶೇ.94ರಷ್ಟು ಮತ್ತು ಪಿಯುಸಿಯಲ್ಲಿ ಶೇ.99ರಷ್ಟು ಫಲಿತಾಂಶ ಪಡೆದಿರುವ, ಪ್ರತಿಭಾನ್ವಿತ ವಿದ್ಯಾರ್ಥಿಯಾನಿಯಾಗಿದ್ದರು.‌

    ತಮ್ಮ ಬಾಲ್ಯದಿಂದಲೇ ಜೈನ ಸನ್ಯಾಸ ತತ್ವದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಮುಮುಕ್ಷು ಅಂತಿಮವಾಗಿ ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಇನ್ನೂ ಮುಮುಕ್ಷು ಅವರು ತಮ್ಮ 10 ಮತ್ತು 12ನೇ ವಯಸ್ಸಿನಲ್ಲಿ ಎರಡು ಬಾರಿ 48 ದಿನಗಳ ಉಪಧ್ಯಾನ ತಪ ಸಂಪನ್ನಗೊಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ತಟ್ಟಲಿದೆ ಇನ್ನೂ 10 ದಿನ ಕೊರೆಯುವ ಚಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಯಚೂರಿನಲ್ಲಿ ಜೈನ ದೀಕ್ಷೆ ಪಡೆದ 25ರ ಯುವತಿ!

    ರಾಯಚೂರಿನಲ್ಲಿ ಜೈನ ದೀಕ್ಷೆ ಪಡೆದ 25ರ ಯುವತಿ!

    ರಾಯಚೂರು: ಜಿಲ್ಲೆಯ ಯುವತಿಯೊಬ್ಬಳು ತನ್ನ ಪಾಲಿನ ಆಸ್ತಿ ಸಂಪತ್ತನ್ನೆಲ್ಲಾ ಬಿಟ್ಟು ಅತ್ಯಂತ ಕಠಿಣ ಆಚರಣೆಯ ಜೈನ್ (Jain) ಭಗವತಿ ದೀಕ್ಷೆ ಪಡೆದಿದ್ದಾಳೆ. ತಂದೆ ವ್ಯಾಪಾರಿಯಾಗಿದ್ದರೂ ಮಗಳು ಮಾತ್ರ ಅಲೌಕಿಕ ಜಗತ್ತಿನ ಕಡೆ ಒಲವು ತೋರಿದ್ದಾಳೆ.

    ಈಕೆ ರಾಯಚೂರು (Raichur) ನಗರದ ವ್ಯಾಪಾರಿ ಜ್ಞಾನಚಂದ್ ಭಂಡಾರಿ ಪುತ್ರಿ 25 ವರ್ಷದ ಸ್ನೇಹ ಭಂಡಾರಿ. ಈಗ ಅಲೌಕಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿ.ಕಾಂ (B.Com) ಪದವೀಧರೆ ಆಗಿರುವ ಸ್ನೇಹಾ ಭಂಡಾರಿ, ಅದ್ಧೂರಿ ಮೆರವಣಿಗೆ ಮೂಲಕ ನಗರದ ಎಸ್‍ಆರ್‍ಪಿಎಸ್ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೈನ್ ಭಗವತಿ ದೀಕ್ಷೆ ಪಡೆದ್ರು. ಸ್ನೇಹ ಭಂಡಾರಿ ದೀಕ್ಷೆ ಪಡೆದ ಬಳಿಕ ಸಾದ್ವಿ ಚೇಷ್ಟಾಶ್ರೀ ಆಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ

    ಜೈನ ದೀಕ್ಷೆಯನ್ನ ಪಡೆಯಬೇಕು ಅಂದ್ರೆ ಆಧ್ಯಾತ್ಮದ ಆಳವನ್ನು ಅರಿತಿರಲೇಬೇಕು. ದೀಕ್ಷೆ ಪಡೆದವರು ಸದಾ ಬರಿಗಾಲಿನಲ್ಲೇ ನಡೆಯಬೇಕು. ತಲೆಗೆ ಬೂದಿ ಹಚ್ಚಿ ಕೂದಲನ್ನು ಕೀಳುತ್ತಾರೆ. ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಊಟ ಮಾಡುತ್ತಾರೆ, ಸ್ವತಃ ಅಡುಗೆ ಮಾಡುವಂತಿಲ್ಲ. ಅಡುಗೆ ಮಾಡಲು ಯಾರನ್ನೂ ನೇಮಿಸಿಕೊಳ್ಳುವುದೂ ಇಲ್ಲ. ಎಷ್ಟೇ ದೂರದ ಪ್ರಯಾಣವಿದ್ದರೂ ವಾಹನ ಬಳಸುವ ಆಗಿಲ್ಲ. ವಿದ್ಯುತ್ ಲೈಟ್, ಮೊಬೈಲ್, ಫ್ಯಾನ್, ಎಸಿ, ಟಿವಿ ಯಾವುದನ್ನೂ ಬಳಸುವಂತಿಲ್ಲ. ಸೂರ್ಯಾಸ್ತದ ನಂತರ ಕತ್ತಲಲ್ಲೆ ಕಾಲ ಕಳೆಯಬೇಕು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕಠಿಣ ನಿಯಮಗಳು ಮೈಝುಮ್ಮೆನಿಸುವಂತಿವೆ. ಹೀಗಾಗಿ ಜೈನ್ ಸಮುದಾಯದಲ್ಲಿ ದೀಕ್ಷೆ ಪಡೆಯುವುದು ಸುಲಭದ ಮಾತಲ್ಲ.

    2013ರಲ್ಲಿ ರಾಯಚೂರು ನಗರದ ಯುವತಿಯೊಬ್ಬಳು ಸನ್ಯಾಸತ್ವ ಪಡೆದಿದ್ದಳು, ಈಗ ಒಂಭತ್ತು ವರ್ಷಗಳ ಬಳಿಕ ರಾಯಚೂರು ಜಿಲ್ಲೆಯಿಂದ ಮತ್ತೊಬ್ಬ ಯುವತಿ ಸನ್ಯಾಸತ್ವ ಪಡೆದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಕುತುಬ್ ಮಿನಾರ್ ಆವರಣದಲ್ಲಿ ಸದ್ದಿಲ್ಲದೇ ಸಮೀಕ್ಷೆ – ಹಿಂದೂ, ಜೈನ ದೇವರ ಅನೇಕ ವಿಗ್ರಹಗಳು ಪತ್ತೆ

    ಕುತುಬ್ ಮಿನಾರ್ ಆವರಣದಲ್ಲಿ ಸದ್ದಿಲ್ಲದೇ ಸಮೀಕ್ಷೆ – ಹಿಂದೂ, ಜೈನ ದೇವರ ಅನೇಕ ವಿಗ್ರಹಗಳು ಪತ್ತೆ

    ನವದೆಹಲಿ: ಜ್ಞಾನವಾಪಿ ಸರ್ವೇ ವಿವಾದವೇ ಮುಗಿದಿಲ್ಲ. ಇದರ ನಡುವೆ ಮತ್ತೊಂದು ವಿವಾದ ತೆರೆ ಮೇಲೆ ಬಂದಿದೆ. ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಕುತುಬ್ ಮಿನಾರ್ ಬಳಿ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ ಸದ್ದಿಲ್ಲದೇ ಸಮೀಕ್ಷೆ ಮುಗಿಸಿದೆ.

    ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಇಲ್ಲ ಇದೆಲ್ಲಾ ಸುಳ್ಳು ಎಂದು ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ದರು. ಯಾವುದೇ ಸರ್ವೇಗೆ ಆದೇಶ ನೀಡಿಲ್ಲ ಎಂದು ಹೇಳಿದ್ದರು. ಆದರೆ ಕವ್ವಾತುಲ್ ಇಸ್ಲಾಂ ಮಸೀದಿ ಆವರಣದಲ್ಲಿ ರಾಜ್ಯಸಭೆ ಮಾಜಿ ಸದಸ್ಯ ತರುಣ್ ವಿಜಯ್ ನೇತೃತ್ವದ ರಾಷ್ಟ್ರೀಯ ವಸ್ತುಸಂಗ್ರಹಾಲಯಗಳ ಪ್ರಾಧಿಕಾರ(ಎನ್‍ಎಂಎ) ಸಮೀಕ್ಷೆ ಜೊತೆಗೆ ಪ್ರತಿಮಾಶಾಸ್ತ್ರ(ಐಕಾನೋಗ್ರಫಿ)ವನ್ನು ಕೈಗೊಂಡಿದೆ.

    ಈ ವೇಳೆ 27 ಹಿಂದೂ ಮತ್ತು ಜೈನ ಮಂದಿರಗಳ ಅವಶೇಷಗಳನ್ನು ಬಳಸಿ ಇಲ್ಲಿ ದೊಡ್ಡಮಟ್ಟದ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿರೋದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಎನ್‍ಎಂಎ ಈಗಾಗಲೇ ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಕಳಿಸಿಕೊಟ್ಟಿದೆ ಎನ್ನಲಾಗಿದೆ. ಇದನ್ನೂ ಓದಿ: ಮುಸ್ಲಿಮರಿಗೆ ತೊಂದರೆ ಕೊಡೋದನ್ನ ನೋಡಲು ಸಿಎಂಗಳ ಪೈಪೋಟಿ : ಮುಫ್ತಿ

    ಎನ್‍ಎಂಎ ವರದಿಯಲ್ಲಿ ಏನೆಲ್ಲಾ ಇದೆ?
    ಶೇಷಶಯನ ವಿಷ್ಣು, ತೀರ್ಥಂಕರ ಪಾರ್ಶ್ವನಾಥ, ಮೇಲ್ಭಾಗದಲ್ಲಿ ತೀರ್ಥಂಕರರ ಚಿತ್ರ, ಕರುವಿಗೆ ಹಾಲುಣಿಸುತ್ತಿರುವ ಹಸು, ದೇಗುಲ ಮಾದರಿಯ ದ್ವಾರ, ಯಮುನಾ ದೇವಿ ವಿಗ್ರಹ, , ನವಿಲಿನೊಂದಿಗೆ ಕಾರ್ತಿಕೇಯ, ನವಗ್ರಹ, ಸೂರ್ಯ, ಯಮುನಾದೇವಿ, ನಂದಿಯ ಮೇಲೆ ಶಿವ , ಪ್ರಹ್ಲಾದನ ಜೊತೆ ನರಸಿಂಹ, ಬಾಲ ಕೃಷ್ಣ, ವಸುದೇವ, ದೇವಕಿ, ಗಣೇಶನ ವಿಗ್ರಹ ಸಿಕ್ಕಿವೆ.

    ತರುಣ್ ವಿಜಯ್ ಹೇಳೋದೇನು?
    1052ರಲ್ಲಿ ದೆಹಲಿ ಸ್ಥಾಪಿಸಿದ ಮಹಾರಾಜ ಅನಂಗ್‍ಪಾಲ್‌ನಿಂದ ವಿಷ್ಣುಗರುಡ ಧ್ವಜ ಸ್ಥಾಪನೆ. ಆ ವಿಷ್ಣು ಗರುಡ ಧ್ವಜವೇ ಈಗಿನ ಕುತುಬ್ ಮಿನಾರ್. ವಿಷ್ಣು ಸ್ಥಂಭದ ಬಳಿಯೇ 27 ದೇವಸ್ಥಾನಗಳನ್ನು ಅನಂಗ್‍ಪಾಲ್ ನಿರ್ಮಿಸಿದ್ದ. ಕಾಲನಂತರದಲ್ಲಿ ಕುತುಬುದ್ದೀನ್ ಐಬಕ್ ದೆಹಲಿ ಅತಿಕ್ರಮಿಸಿ ವಿಷ್ಣುಸ್ಥಂಭದ ಬಳಿಯ 27 ದೇಗುಲ ನಾಶಗೊಳಿಸಿದ. ದೆಹಲಿ ಸ್ಮಶಾನ ನಗರಿಯಲ್ಲ. ಇದು ಕಲೆ, ಸಂಸ್ಕೃತಿ, ತ್ಯಾಗದ ನಗರಿ. ಇದನ್ನೂ ಓದಿ: PFI ರ‍್ಯಾಲಿಯಲ್ಲಿ ಬಾಲಕನಿಂದ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ – ಪೊಲೀಸರಿಂದ ತನಿಖೆ

  • ಜೈನ ಪುರೋಹಿತರಿಗೆ ಸರ್ಕಾರದಿಂದ ಧನ ಸಹಾಯ ನೀಡುವಂತೆ ಸಿಎಂಗೆ ಮನವಿ

    ಜೈನ ಪುರೋಹಿತರಿಗೆ ಸರ್ಕಾರದಿಂದ ಧನ ಸಹಾಯ ನೀಡುವಂತೆ ಸಿಎಂಗೆ ಮನವಿ

    ಬೆಂಗಳೂರು: ಕರ್ನಾಟಕದ ಜೈನ ಬಸದಿಗಳಲ್ಲಿ ಪೂಜೆ ಮಾಡುತ್ತಿರೋ ಜೈನ ಪುರೋಹಿತರಿಗೆ ಸರ್ಕಾರದಿಂದ ಧನಸಹಾಯ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಕರ್ನಾಟಕ ಜೈನ ಅಸೋಸಿಯೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು.

    ಕೊರೊನಾ ಲಾಕ್ ಡೌನ್ ಪರಿಹಾರವನ್ನು ಸರ್ಕಾರ ವಿವಿಧ ವರ್ಗಗಳಿಗೆ ಘೋಷಿಸಿದೆ. ಹಾಗೆಯೇ ಜೈನ ದೇವಾಲಯಗಳಲ್ಲಿ ಪೂಜೆ ಮಾಡುತ್ತಿರೋ ಪುರೋಹಿತರ ಸ್ಥಿತಿ ಕಷ್ಟಕರವಾಗಿದೆ. ಬಸದಿಗಳಿಗೆ ಯಾವುದೇ ಭಕ್ತಾದಿಗಳು ದೇವರ ದರ್ಶನಕ್ಕೆ ಬರತ್ತಿಲ್ಲ. ಹೀಗಾಗಿ ಆದಾಯವೂ ತಪ್ಪಿ ಹೋಗಿದ್ದು ಸರ್ಕಾರ ಸಹಾಯ ನೀಡಬೇಕು.  ಇದನ್ನೂ ಓದಿ: ಶಾಲಾ-ಕಾಲೇಜುಗಳ ಬೋಧಕೇತರ ಸಿಬ್ಬಂದಿಗೂ ಪರಿಹಾರ ಕೊಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

    ರಾಜ್ಯದಲ್ಲಿ ಸುಮಾರು 1130 ಜೈನ ಬಸದಿಗಳಿವೆ. ಈ ಬಸ್ತಿಗಳಲ್ಲಿ ಸುಮಾರು 2000 ಸಾವಿರ ಪುರೋಹಿತರು ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಬಸದಿಗಳಲ್ಲಿ ಪೂಜೆ ಸಲ್ಲಿಸುವ ಪುರೋಹಿತರಿಗೆ ಹಾಗೂ ಅವರ ಕುಟುಂಬದವರಿಗೆ ತಲಾ ಐದು ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

  • ಜೈನ ಸಮುದಾಯದ ಬ್ಯಾನರ್ ಹರಿದ ಹೋರಾಟಗಾರರು ರೌಡಿಗಳು: ತೇಜಸ್ವಿ ಸೂರ್ಯ

    ಜೈನ ಸಮುದಾಯದ ಬ್ಯಾನರ್ ಹರಿದ ಹೋರಾಟಗಾರರು ರೌಡಿಗಳು: ತೇಜಸ್ವಿ ಸೂರ್ಯ

    – ಉರ್ದು ಭಾಷೆಯಲ್ಲಿ ಬ್ಯಾನರ್ ಹಾಕಿದ್ರೆ ಪ್ರಶ್ನೆ ಮಾಡಲ್ಲ
    – ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ

    ಬೆಂಗಳೂರು: ಯುವ ಬಿಜೆಪಿ ನಾಯಕ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕನ್ನಡ ಸಂಘಟನೆಯ ಕಾರ್ಯಕರ್ತರ ಕುರಿತು ಮಾಡಿರುವ ಟ್ವೀಟ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಜೈನ ದೇವಾಲಯದಲ್ಲಿ ಹಿಂದಿ ಬ್ಯಾನರ್ ಅಳವಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈನ ಸಹೋದರರ ಮೇಲೆ ಕೆಲ ರೌಡಿಗಳು ದಾಳಿ ಮಾಡಿರುವುದು ಬಹಳ ನೋವಾಗಿದೆ. ಆದರೆ ಇವರು ಬೆಂಗಳೂರಿನಲ್ಲಿ ಉರ್ದು ಭಾಷೆ ಬಳಕೆ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಕರ್ನಾಟಕಕ್ಕೆ ಕೊಡುಗೆ ನೀಡಿರುವ ಶಾಂತಿ ಪ್ರಿಯ ಜೈನರ ಮೇಲೆ ಹಲ್ಲೆ ನಡೆಸಿರುವುದು ನಿಜವಾದ ಕನ್ನಡಿಗರು ಮತ್ತು ಕಾರ್ಯಕರ್ತರಿಗೆ ಅಪಚಾರ ಮಾಡಿದಂತೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.

    ಇದಾದ ನಂತರ ಮತ್ತೊಂದು ಟ್ವೀಟ್ ನಲ್ಲಿ ದೊಡ್ಡ ಕವಿಗಳಾದ ಪಂಪ, ಪೊನ್ನ, ರನ್ನ ರತ್ನತ್ರಯರಾಗಿದ್ದು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಈ ಮೂವರು ಜೈನರಾಗಿದ್ದಾರೆ. ಹೀಗಾಗಿ ಕರ್ನಾಟಕ ಯುವ ಜೈನರು ಕರ್ನಾಟಕದ ಇತಿಹಾಸವನ್ನು ಓದಬೇಕು ಮತ್ತು ಸಂವಹನದ ವೇಳೆ ಕನ್ನಡವನ್ನು ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಸಂಘಟನೆಯ ಸದಸ್ಯರನ್ನು ರೌಡಿಗಳು ಎಂದು ಕರೆದಿದ್ದಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. 6 ಸಾವಿರಕ್ಕೂ ಹೆಚ್ಚು ಜನ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರೆ 23 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

    https://twitter.com/SwamiGeetika/status/1163088798890094598

    ಕನ್ನಡದ ನೆಲದಲ್ಲಿ ಕನ್ನಡ ಹಾಕದಿದ್ದರೆ ಪ್ರಶ್ನೆ ಮಾಡಬೇಕು ತಾನೇ? ಕನ್ನಡ ನೆಲದ ಜಾಗ, ನೀರು, ಹಣ ಎಲ್ಲಾ ಬೇಕು. ಆದರೆ ಕನ್ನಡ ಬೇಡವೇ? ಹೋಗಿ ಅವರನ್ನು ಓಲೈಕೆ ಮಾಡೋದು ನೋಡಿದರೆ ನೀವು ಕೇವಲ ಓಟಿಗಾಗಿ ನಿಮ್ಮ ಈ ಹೇಳಿಕೆ ಅನಿಸುತ್ತದೆ. ಅಷ್ಟು ಕನ್ನಡ ಜನರ ಕಾಳಜಿ ಇದ್ದರೆ ನೆರೆ ಪರಿಹಾರ ತರಬೇಕಿತ್ತು. ಬಕೆಟ್ ಹಿಡಿಯೋದೇ ಜೀವನವಾಗಬಾರದು ಎಂದು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಕರ್ನಾಟಕದಲ್ಲಿರುವ ಬೋರ್ಡ್ ಗಳಲ್ಲಿ ಕನ್ನಡ ಇರಬೇಕು ಎನ್ನುವುದು ಹೇಗೆ ಅಪರಾಧ? ಇಲ್ಲದಿದ್ದಾಗ ಪ್ರಶ್ನಿಸುವುದು ಯಾವ ಅಪರಾಧ? ಕನ್ನಡಿಗರು ಏನೇ ಕೇಳಿದರೂ ಉರ್ದುವನ್ನು ಯಾಕೆ ಮಧ್ಯದಲ್ಲಿ ತರುತ್ತೀರಾ? ಕನ್ನಡದ ವಿಷಯದಲ್ಲಿ ಯಾಕೆ ವಸ್ತುನಿಷ್ಠ ವಾಗಿ ಹೇಳಿಕೆ ನೀಡುವುದಿಲ್ಲ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

    ಏನಿದು ಪ್ರಕರಣ?
    ಇನ್‍ಫೆಂಟ್ರಿ ರಸ್ತೆಯ ಬಳಿ ಜೈನ ಸಮುದಾಯದ ಪ್ರಾರ್ಥನಾ ಮಂದಿರದಲ್ಲಿ ಚಾತುರ್ಮಾಸ ಆಚರಣೆ ನಡೆಯುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಲಾಗಿತ್ತು. ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಿದ್ದಕ್ಕೆ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ.ಹರೀಶ್‍ಕುಮಾರ್, ಪದಾಧಿಕಾರಿಗಳಾದ ಮಂಜು, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಅಂಜನಪ್ಪ, ರಕ್ಷಣಾ ಸೇನೆಯ ರಮೇಶ್‍ಗೌಡ ಹಾಗೂ ಕರುನಾಡ ಸೇವಕರು ವೇದಿಕೆಯ ಮಾದೇಶ್‍ಗೌಡ ಈ ಬ್ಯಾನರ್ ಹರಿದು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬ್ಯಾನರ್ ಹರಿದು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡಪರ ಸಂಘಟನೆಗಳ ಆರು ಮಂದಿ ಕಾರ್ಯಕರ್ತರನ್ನು ಕೋಮು ಸೌಹರ್ದತೆಗೆ ಧಕ್ಕೆ ತರುವ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆರು ಮಂದಿಯನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

    ಆನಂದ ಚಾತುರ್ಮಾಸ ಸಮಿತಿಯ ಕಾರ್ಯದರ್ಶಿ ಫ್ಯಾನ್‍ಚಂದ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜೈನ ಸಮುದಾಯಕ್ಕಾಗಿ ನಡೆಸುವ ಕಾರ್ಯಕ್ರಮ ಆಗಿರುವುದರಿಂದ ಬೇರೆಯವರಿಗೆ ಪ್ರವೇಶ ಇರುವುದಿಲ್ಲ. ಈಗಾಗಿ ಕನ್ನಡದಲ್ಲಿ ಬ್ಯಾನರ್ ಹಾಕಿರಲಿಲ್ಲ. ಹಿಂದೆಯೂ ಹಿಂದಿ ಭಾಷೆಯಲ್ಲಿಯೇ ಬ್ಯಾನರ್ ಹಾಕಿದ್ದೇವೆ. ಎಂದೂ ಕೂಡ ಇಂತಹ ಅನುಭವ ಆಗಿಲ್ಲ. ಶುಕ್ರವಾರ ಮಾತ್ರ ಕೆಲ ಕಾರ್ಯಕರ್ತರು ಬ್ಯಾನರ್ ಹರಿದಿದ್ದಾರೆ. ನಾವು ಕನ್ನಡ ವಿರೋಧಿಗಳಲ್ಲ. ಚಾತುರ್ಮಾಸ್ಯಕ್ಕೆ ಕನ್ನಡಿಗರು ಬಾರದ ಕಾರಣ ಹಿಂದಿಯಲ್ಲಿ ಬ್ಯಾನರ್ ಹಾಕಲಾಗಿತ್ತು ಎಂದು ಹೇಳಿದ್ದಾರೆ.

  • ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಇನ್ನಿಲ್ಲ

    ಕ್ರಾಂತಿಕಾರಿ ಜೈನ ಮುನಿ ತರುಣ್ ಸಾಗರ್ ಇನ್ನಿಲ್ಲ

    ನವದೆಹಲಿ: ಕ್ರಾಂತಿಕಾರಿ ಜೈನಮುನಿ ತರುಣ್ ಸಾಗರ್ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

    51 ವರ್ಷ ವಯಸ್ಸಿನ ಮುನಿ ನವದೆಹಲಿಯ ಕೃಷ್ಣ ನಗರದ ರಾಧಾಪುರಿ ಜೈನ ಆಶ್ರಮದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಜಾಂಡೀಸ್ ಹಾಗೂ ಇತರ ಕೆಲ ಕಾಯಿಲೆಗಳಿಂದ ಬಳುತ್ತಿದ್ದ ಸಾಗರ್ ಅವರು, ಕಳೆದ 3 ವಾರಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ತೀರಾ ಹದಗೆಟ್ಟಿದ್ದರೂ ಕಳೆದ ಎರಡು ದಿನಗಳಿಂದ ಔಷಧವನ್ನೂ ಸೇವಿಸದೆ ಇದ್ದರು. ಜೊತೆಗೆ ಜೈನ ಮಂದಿರಕ್ಕೆ ತಮ್ಮನ್ನು ಕರೆದೊಯ್ಯುವಂತೆ ಅವರೇ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಜೈನ ಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು.

    ಜೈನ ಸಮುದಾಯದಲ್ಲಿ ಅನುಯಾಯಿಗಳನ್ನು ಹೊಂದಿರುವ ಮುನಿ ತರುಣ್ ಸಾಗರ್ ಜಾಂಡೀಸ್ ನಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮುನಿಯ ಅಂತಿಮ ವಿಧಿ ವಿಧಾನಗಳು ಇಂದು ಉತ್ತರ ಪ್ರದೇಶದ ತರುಣಸಾಗರಂ ನಲ್ಲಿ ನಡೆಯಲಿದೆ. ಸದ್ಯ ಮುನಿಯವರ ಅಕಾಲಿಕ ನಿಧನಕ್ಕೆ ಕೇಂದ್ರ ಸಚಿವರು ಸೇರಿದಂತೆ ಗಣ್ಯರಿಂದ ಸಂತಾಪ ಸೂಚಿಸಿದ್ದಾರೆ.

    1967 ರ ಜೂನ್ 26ರಂದು ಮಧ್ಯ ಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಜನಿಸಿದ ಪವನ್ ಕುಮಾರ್ ಜೈನ್ 1981 ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ತಮ್ಮ ಭಾಷಣಗಳ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv