Tag: jailey

  • ನೋಟ್‍ಬ್ಯಾನ್, ಜಿಎಸ್‍ಟಿಯಿಂದ ದೇಶದ ಆರ್ಥಿಕತೆ ಐಸಿಯುನಲ್ಲಿ: ರಾಹುಲ್ ಗಾಂಧಿ

    ನೋಟ್‍ಬ್ಯಾನ್, ಜಿಎಸ್‍ಟಿಯಿಂದ ದೇಶದ ಆರ್ಥಿಕತೆ ಐಸಿಯುನಲ್ಲಿ: ರಾಹುಲ್ ಗಾಂಧಿ

    ನವದೆಹಲಿ: ನೋಟ್ ಬ್ಯಾನ್ ಮತ್ತು ಜಿಎಸ್‍ಟಿಯಿಂದ ದೇಶದ ಆರ್ಥಿಕತೆ ಐಸಿಯುನಲ್ಲಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಜೇಟ್ಲಿಯನ್ನು ಡಾಕ್ಟರ್ ಎಂದು ಸಂಬೋಧಿಸಿ, ನೋಟ್ ಬ್ಯಾನ್ ಮತ್ತು ಜಿಎಸ್‍ಟಿಯಿಂದಾಗಿ ದೇಶದ ಆರ್ಥಿಕತೆ ಈಗ ಐಸಿಯುನಲ್ಲಿದ್ದು, ನಿಮ್ಮ ಔಷಧಿ ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದ್ದಾರೆ.

    ಮೂರು ದಿನಗಳ ಹಿಂದೆ ಗುಜರಾತ್ ಗಾಂಧಿನಗರದಲ್ಲಿ ನಡೆದ ನವಸರ್ಜನ್ ಜನದೇಶ್ ಮಹಾಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ಗಬ್ಬರ್ ಸಿಂಗ್ ಟ್ಯಾಕ್ಸ್ ತಂದಿದೆ ಎಂದು ಹೇಳಿ ಲೇವಡಿ ಮಾಡಿದ್ದರು.

    ಕಾಂಗ್ರೆಸ್ ಇದ್ದರೆ ಜಿಎಸ್‍ಟಿ ಗರಿಷ್ಟ ಮಿತಿ ಶೇ.18 ಮತ್ತು ಒಂದೇ ಶ್ರೇಣಿ ಇರುತಿತ್ತು. ಆದರೆ ಈಗ ತುರಾತುರಿಯಲ್ಲಿ ಜಿಎಸ್‍ಟಿಯನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ಸುಧಾರಣೆಯಾಗಬೇಕು ಎಂದು ಆಗ್ರಹಿಸಿದ್ದರು.