Tag: jailer 2

  • ತಲೈವಾ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ‘ಜೈಲರ್’ ಟೀಮ್‌ನಿಂದ ಗುಡ್ ನ್ಯೂಸ್- ಏನದು?

    ತಲೈವಾ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ‘ಜೈಲರ್’ ಟೀಮ್‌ನಿಂದ ಗುಡ್ ನ್ಯೂಸ್- ಏನದು?

    ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಡಿ.12ರಂದು 74ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ‘ಜೈಲರ್’ ಟೀಮ್ ಫ್ಯಾನ್ಸ್‌ಗೆ ‘ಜೈಲರ್ 2’ (Jailer 2) ಬಗ್ಗೆ ಅಪ್‌ಡೇಟ್ ಕೊಡೋದಾಗಿ ಸುಳಿವು ನೀಡಿದೆ. ಡಿ.12ರಂದು ರಜನಿಕಾಂತ್‌ ಸಿನಿಮಾ ಬಗ್ಗೆ ಬಿಗ್‌ ನ್ಯೂಸ್‌ ಹೊರಬೀಳಲಿದೆ. ಇದನ್ನೂ ಓದಿ:‘ಮನದ ಕಡಲು’ ಚಿತ್ರಕ್ಕಾಗಿ ಮತ್ತೆ ‘ಮುಂಗಾರು ಮಳೆ’ ನಿರ್ಮಾಪಕನ ಜೊತೆ ಕೈಜೋಡಿಸಿದ ಯೋಗರಾಜ್‌ ಭಟ್‌

    ಡಿ.12 ಅಭಿಮಾನಿಗಳ ಪಾಲಿಗೆ ಹಬ್ಬ. ನೆಚ್ಚಿನ ನಟ ತಲೈವಾಗೆ ಹುಟ್ಟುಹಬ್ಬದ ಸಂಭ್ರಮವಾಗಿದೆ. ಇದೀಗ ‘ಜೈಲರ್’ ನಿರ್ದೇಶಕ ನೆಲ್ಸನ್ ರಜನಿಕಾಂತ್, ಶಿವಣ್ಣ, ಜಾಕಿ ಶ್ರಾಫ್, ಮೋಹನ್ ಲಾಲ್ ಸೇರಿದಂತೆ ಅನೇಕರ ಪೋಸ್ಟರ್ ಅನ್ನು ಮತ್ತೊಮ್ಮೆ ಶೇರ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಅದಷ್ಟೇ ಅಲ್ಲ, ಈ ಮೂಲಕ ಪಾರ್ಟ್‌ 2ನಲ್ಲಿ ಈ ಪಾತ್ರಗಳು ಕಂಟಿನ್ಯೂ ಆಗುವ ಸೂಚನೆ ಕೂಡ ನೀಡಿದ್ದಾರೆ.

     

    View this post on Instagram

     

    A post shared by Sun Pictures (@sunpictures)

    ಮೂಲಗಳ ಪ್ರಕಾರ, ಡಿ.5ರಂದು ‘ಜೈಲರ್ ಪಾರ್ಟ್ 2’ರ ಪ್ರೋಮೋ ನಡೆಯಲಿದ್ದು, ಡಿ.12ರಂದು ತಲೈವಾ ಬರ್ತ್‌ಡೇಗೆ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ ಎನ್ನಲಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡುವವರೆಗೂ ಕಾದುನೋಡಬೇಕಿದೆ.

    ಸದ್ಯ ಮತ್ತೊಮ್ಮೆ ‘ಜೈಲರ್’ ಸಿನಿಮಾದ ಫೋಟೋಸ್ ಶೇರ್ ಮಾಡಿ ಹಿಂಟ್ ಪಾರ್ಟ್‌ 2 ಕುರಿತು ಕೊಟ್ಟಿರೋದ್ದಕ್ಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ಜೈಲರ್ 2’ ಜೊತೆ ‘ಕೂಲಿ’ ಸಿನಿಮಾದ ಅಪ್‌ಡೇಟ್‌ಗೆ ಎದುರು ನೋಡುತ್ತಿದ್ದಾರೆ.

  • ರಜನಿಕಾಂತ್‌ ಜೊತೆ ‌’ಜೈಲರ್‌ 2′ ಬರೋದು ಫಿಕ್ಸ್‌ ಎಂದ ನಿರ್ದೇಶಕ ನೆಲ್ಸನ್

    ರಜನಿಕಾಂತ್‌ ಜೊತೆ ‌’ಜೈಲರ್‌ 2′ ಬರೋದು ಫಿಕ್ಸ್‌ ಎಂದ ನಿರ್ದೇಶಕ ನೆಲ್ಸನ್

    ಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಯಶಸ್ವಿಯಾದ್ಮೇಲೆ ಇದರ ಸೀಕ್ವೆಲ್ ಅಪ್‌ಡೇಟ್‌ಗಾಗಿ ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಜೈಲರ್ 2’ (Jailer 2) ಬರೋದು ಫಿಕ್ಸ್ ಎಂದು ಡೈರೆಕ್ಟರ್ ನೆಲ್ಸನ್ ಅಧಿಕೃತ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಝೈದ್ ಖಾನ್‌ಗೆ ಮಲೈಕಾ ವಸುಪಾಲ್ ಹೀರೋಯಿನ್

    ಕಾಲಿವುಡ್‌ನಲ್ಲಿ ಕಳೆದ ವರ್ಷ ಸಂಚಲನ ಮೂಡಿಸಿದ ಸಿನಿಮಾ ಅಂದರೆ ಜೈಲರ್. ಈ ಸಿನಿಮಾದ ಸಕ್ಸಸ್ ಬಳಿಕ ಇದರ ಸೀಕ್ವೆಲ್ ಬರಲಿ ಎಂಬುದು ಅದೆಷ್ಟೋ ಅಭಿಮಾನಿಗಳ ಆಸೆಯಾಗಿತ್ತು. ಆದರೆ ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡದೆ ಸೈಲೆಂಟ್ ಆಗಿತ್ತು. ಈಗ ‘ಜೈಲರ್’ ಪಾರ್ಟ್ 2 ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ (Nelson Dilipkumar) ಹೇಳಿದ್ದಾರೆ. ಅದಷ್ಟೇ ಅಲ್ಲ, ಇದರ ಮುಂದುವರೆದ ಭಾಗದಲ್ಲಿ ರಜನಿಕಾಂತ್ (Rajanikanth) ಅವರೇ ಹೀರೋ ಆಗಿ ನಟಿಸಲಿದ್ದಾರೆ ಎಂದಿದ್ದಾರೆ.

    ಕಥೆ ಕೂಡ ಸಿದ್ಧವಾಗಿದ್ದು, ‌’ವೆಟ್ಟೈಯಾನ್’ ಸಿನಿಮಾದ ರಿಲೀಸ್‌ಗೂ ಮುನ್ನವೇ ‘ಜೈಲರ್ 2’ ಸಿನಿಮಾದ ಅಧಿಕೃತ ಘೋಷಣೆ ಆಗಲಿದೆ ಎಂದಿದ್ದಾರೆ. ತೆರೆಮರೆಯಲ್ಲಿ ಈ ಸಿನಿಮಾದ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕ ನೆಲ್ಸನ್‌ ಮಾಹಿತಿ ನೀಡಿದ್ದಾರೆ.

    ಅಂದಹಾಗೆ, ‘ಜೈಲರ್’ (Jailer) ಸಿನಿಮಾದಲ್ಲಿ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ, ಯೋಗಿ ಬಾಬು, ಕನ್ನಡದ ನಟ ಶಿವರಾಜ್‌ಕುಮಾರ್ (Shivarajkumar), ಮೋಹನ್‌ಲಾಲ್, ಕಿಶೋರ್, ಸುನೀಲ್ ಸೇರಿದಂತೆ ಅನೇಕರು ನಟಿಸಿದ್ದರು. ಕಳೆದ ವರ್ಷ ಆ.10ರಂದು ಜೈಲರ್ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು.

  • ‘ಜೈಲರ್‌’ ಪಾರ್ಟ್‌ 2ಗೆ ಟೈಟಲ್‌ ಬದಲಾವಣೆ? ಇಲ್ಲಿದೆ ಬಿಗ್‌ ಅಪ್‌ಡೇಟ್

    ‘ಜೈಲರ್‌’ ಪಾರ್ಟ್‌ 2ಗೆ ಟೈಟಲ್‌ ಬದಲಾವಣೆ? ಇಲ್ಲಿದೆ ಬಿಗ್‌ ಅಪ್‌ಡೇಟ್

    ಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಡೂಪರ್ ಸಕ್ಸಸ್ ಕಂಡಿತ್ತು. ತಲೈವಾ ಅಬ್ಬರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಮತ್ತೆ ಪಾರ್ಟ್ 2 ದರ್ಶನ ಯಾವಾಗ? ಎಂದು ಎದುರು ಅಭಿಮಾನಿಗಳು ನೋಡುತ್ತಿದ್ದರು. ಈಗ ‘ಜೈಲರ್ 2’ (Jailer 2) ಬಗ್ಗೆ‌ ಬಿಗ್ ಅಪ್‌ಡೇಟ್ ಸಿಕ್ಕಿದೆ.‌ ತೆರೆಮರೆಯಲ್ಲಿ ಟೈಟಲ್‌ ಬದಲಾವಣೆ ಕುರಿತು ಪ್ಲ್ಯಾನ್‌ ನಡೆಯುತ್ತಿದೆ.

    ಡೈರೆಕ್ಟರ್ ನೆಲ್ಸನ್ ‘ಜೈಲರ್’ ಪಾರ್ಟ್ 2ಗೆ ಪವರ್‌ಫುಲ್ ಕಥೆಯನ್ನು ಹೆಣೆದಿದ್ದಾರೆ. ಚಿತ್ರದ ಮೊದಲ ಡ್ರಾಪ್ಟ್ ರೆಡಿಯಾಗಿದ್ದು, ರಜನಿಕಾಂತ್ ಮತ್ತು ನಿರ್ಮಾಣ ಸಂಸ್ಥೆಗೆ ಕಥೆ ಇಷ್ಟವಾಗಿದೆ. ಡೈರೆಕ್ಟರ್ ಹೆಣೆದ ಕಥೆಗೆ ಮುಂದುವರೆಯಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ:‘ವಾರ್ 2’ನಲ್ಲಿ ಇರಲಿದೆ ನಾಟು ನಾಟು ರೀತಿಯೇ ಎನರ್ಜಿಟಿಕ್ ಡ್ಯಾನ್ಸ್

    ‘ಜೈಲರ್’ ಚಿತ್ರದ ಸಕ್ಸಸ್ ನಂತರವೇ ಪಾರ್ಟ್ 2ಗಾಗಿ ತಯಾರಿ ಮಾಡಿಕೊಳ್ತಿದ್ದರು. ಈಗ ಅಂತಿಮ ಹಂತದಲ್ಲಿದೆ. ಜೂನ್‌ನಿಂದಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಕೂಡ ಶುರುವಾಗಲಿದೆ.

    ಪಾರ್ಟ್ 2ಗೆ ಟೈಟಲ್ ಬದಲಿಸುವ ಸಾಧ್ಯತೆ ಇದೆ. ‘ಜೈಲರ್ 2’ ಅಥವಾ ‘ಹುಕುಮ್’ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ. ಚಿತ್ರತಂಡದವರು ಹುಕುಮ್‌ ಟೈಟಲ್‌ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ಎನ್ನಲಾಗಿದೆ. ಲೋಕೇಶ್ ಕನಗರಾಜ್ ಜೊತೆಗಿನ ಸಿನಿಮಾದ ನಂತರ ಜೈಲರ್ 2ಗೆ ಮುಹೂರ್ತ ಫಿಕ್ಸ್ ಆಗಲಿದೆ. 2025ರ ಶುರುವಿನಲ್ಲಿ ತಲೈವಾ ಜೊತೆ ನೆಲ್ಸನ್ ಶೂಟಿಂಗ್‌ಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಟೈಟಲ್‌ ಬದಲಾವಣೆ ವಿಚಾರ ನಿಜನಾ? ಎಂಬುದನ್ನು ಚಿತ್ರತಂಡದ ಕಡೆಯಿಂದ  ಅಧಿಕೃತ ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ.