Tag: jailer

  • ರಜನಿಕಾಂತ್‌ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ

    ರಜನಿಕಾಂತ್‌ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ‘ಜೈಲರ್‌ 2’ನಲ್ಲಿ (Jailer 2) ನಟಿಸುತ್ತಾರಾ ಎಂಬ ಸುದ್ದಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಸುದ್ದಿಗೋಷ್ಠಿವೊಂದರಲ್ಲಿ ‘ಜೈಲರ್ 2’ನಲ್ಲಿ ನಟಿಸೋದಾಗಿ ಶಿವಣ್ಣ (Shivanna) ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

    ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ‘ಜೈಲರ್ 2’ನಲ್ಲಿ ನಟಿಸುತ್ತೀರಾ ಎಂದು ಶಿವಣ್ಣಗೆ ವರದಿಗಾರರೊಬ್ಬರು ಕೇಳಿದ್ದಾರೆ. ಅದಕ್ಕೆ ನಟ ಮಾತನಾಡಿ, ನಾನು ‘ಜೈಲರ್ 2’ ಸಿನಿಮಾದ ಭಾಗವಾಗಲಿದ್ದೇನೆ. ಈ ಕುರಿತು ನಿರ್ದೇಶಕ ನೆಲ್ಸನ್ ನನ್ನ ಬಳಿ ಮಾತನಾಡಿದ್ದಾರೆ. ಈಗಾಗಲೇ ಇದರ ಶೂಟಿಂಗ್ ಶುರುವಾಗಿದೆ. ಆದರೆ ನನ್ನ ಭಾಗದ ಶೂಟಿಂಗ್ ಶುರು ಆಗಿಲ್ಲ. ‘ಜೈಲರ್‌’ನಲ್ಲಿ ನಾನು ನಟಿಸಿದ ಪಾತ್ರಕ್ಕೆ ಅಷ್ಟೊಂದು ಮಹತ್ವ ಸಿಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ. ಇದನ್ನೂ ಓದಿ:RCB ಅಂದ್ರೆ ಜೀವ, ನಮ್ಮ ಪ್ರಾಣ: ಶಿವಣ್ಣ ಗುಣಗಾನ

    ನಾನು ಈ ಸಿನಿಮಾ ಮಾಡಲು ರಜನಿಕಾಂತ್ (Rajinikanth) ಅವರೇ ಕಾರಣ. ಅವರು ನನ್ನ ಕುಟುಂಬವಿದ್ದಂತೆ. ಚಿಕ್ಕ ವಯಸ್ಸಿನಿಂದ ಅವರನ್ನು ನೋಡುತ್ತಾ ಬೆಳೆದಿದ್ದೇವೆ. ಜೈಲರ್‌ನಲ್ಲಿ ನಟಿಸಲು ಕೇಳಿದಾಗ ಕಥೆಯನ್ನು ಕೇಳದೇ ಸಿನಿಮಾ ಒಪ್ಪಿಕೊಂಡೆ. ರಜನಿಕಾಂತ್ ಸಿನಿಮಾದಲ್ಲಿ ಒಂದು ಕ್ಷಣ ಕಾಣಿಸಿಕೊಳ್ಳುವ ಪಾತ್ರವಾದರೂ ನಟಿಸಲು ಸಿದ್ಧನಿದ್ದೆ ಎಂದಿದ್ದಾರೆ. ಜೈಲರ್‌ನಲ್ಲಿ ನನ್ನನ್ನು ಅತ್ಯುತ್ತಮವಾಗಿ ತೋರಿಸಿದ ಛಾಯಾಗ್ರಾಹಕರಿಗೆ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್‌ಗೆ ನನ್ನ ಧನ್ಯವಾದಗಳು ಎಂದಿದ್ದಾರೆ.

    ಈ ವೇಳೆ, ‘ಜೈಲರ್ 2’ನಲ್ಲಿ ಬಾಲಯ್ಯ ಅವರು ನಟಿಸುವ ಬಗ್ಗೆ ಶಿವಣ್ಣಗೆ ಕೇಳಲಾಗಿದೆ. ನನಗೆ ಇದರ ಬಗ್ಗೆ ತಿಳಿದಿಲ್ಲ. ಒಂದು ವೇಳೆ ಬಾಲಯ್ಯ ನಟಿಸೋದಾದ್ರೆ, ಅವರೊಂದಿಗೆ ತೆರೆಹಂಚಿಕೊಳ್ಳಲು ಖುಷಿಯಿದೆ ಎಂದಿದ್ದಾರೆ. ಸದ್ಯ ನಟನ ‘ಜೈಲರ್ 2’ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡುತ್ತೇನೆ: ಬ್ರೇಕಪ್‌ ಬಗ್ಗೆ ತಮನ್ನಾ ಮಾತು

    ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡುತ್ತೇನೆ: ಬ್ರೇಕಪ್‌ ಬಗ್ಗೆ ತಮನ್ನಾ ಮಾತು

    ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಮತ್ತು ವಿಜಯ್ ವರ್ಮಾ (Vijay Varma) ನಡುವೆ ಬ್ರೇಕಪ್ ಆಗಿದೆ ಎನ್ನಲಾದ ವಿಚಾರ ಸಾಕಷ್ಟು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಇದುವರೆಗೂ ಇಬ್ಬರೂ ಇದರ ಬಗ್ಗೆ ಸ್ಪಷ್ಟನೆ ನೀಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ಕಾರ್ಯಕ್ರಮವೊಂದರಲ್ಲಿ ನಟಿ ಬ್ರೇಕಪ್ (Break Up) ಬಗ್ಗೆ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಮಗಳ ಆರೈಕೆಯ ನಡುವೆ ಮತ್ತೆ ಸಿನಿಮಾಗೆ ಮರಳುವ ಬಗ್ಗೆ ದೀಪಿಕಾ ಪಡುಕೋಣೆ ಓಪನ್‌ ಟಾಕ್

    ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಬ್ರೇಕಪ್ ಸುದ್ದಿ ಬಗ್ಗೆ ಮಾತನಾಡಿದ ತಮನ್ನಾ, ಇಲ್ಲಿ ನಾನು ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತೇನೆ. ನನಗೆ ಅದು ಸರಿ ಎಂದು ಅನಿಸಿದರೆ ಮಾತ್ರ ಹಂಚಿಕೊಳ್ಳುತ್ತೇನೆ. ಎಲ್ಲಿ ಯಾವ ವಿಷಯವನ್ನು ಹೇಳಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ. ನನ್ನ ಕಡೆಯಿಂದ ಯಾರ ಬಗ್ಗೆಯೂ ಹಾಗೂ ಯಾವುದರ ಬಗ್ಗೆಯೂ ದೂರುಗಳಿಲ್ಲ ಎಂದಿದ್ದಾರೆ.‌ ಈ ಮೂಲಕ ಪರೋಕ್ಷವಾಗಿ ಬ್ರೇಕಪ್‌ ಸುದ್ದಿ ನನ್ನ ವೈಯಕ್ತಿಕ ವಿಚಾರ ಎಂದಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ರವೀನಾ ಟಂಡನ್ ಮನೆಯಲ್ಲಿ ಹೋಳಿ ಹಬ್ಬ ಆಯೋಜಿಸಿದ್ದರು. ಈ ವೇಳೆ, ವಿಜಯ್ ಮತ್ತು ತಮನ್ನಾ ಪ್ರತ್ಯೇಕವಾಗಿ ಭಾಗಿಯಾಗಿದ್ದರು. ಇದು ಇಬ್ಬರ ಬ್ರೇಕಪ್ ವಿಚಾರಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು.

    ಇನ್ನೂ ಇತ್ತೀಚೆಗೆ ವಿಜಯ್ ಮತ್ತು ತಮನ್ನಾ 2 ವರ್ಷಗಳ ಡೇಟಿಂಗ್‌ಗೆ ಬ್ರೇಕ್ ಬಿದ್ದಿದೆ ಎಂದು ವರದಿಯಾಗಿದೆ. ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ. ಆದರೆ ಮುಂದಿನ ದಿನಗಳಲ್ಲಿ ಈ ಜೋಡಿ ಬ್ರೇಕಪ್ ಬಗ್ಗೆ ಮಾತನಾಡ್ತಾರಾ? ಎಂದು ಕಾದುನೋಡಬೇಕಿದೆ.

  • ‘ಜೈಲರ್ 2’ ಸಿನಿಮಾ ಶೂಟಿಂಗ್ ಪ್ರಾರಂಭ- ತಲೈವಾ ಭಾಗಿ

    ‘ಜೈಲರ್ 2’ ಸಿನಿಮಾ ಶೂಟಿಂಗ್ ಪ್ರಾರಂಭ- ತಲೈವಾ ಭಾಗಿ

    ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಜೈಲರ್ 2’ (Jailer 2) ಚಿತ್ರದ ಶೂಟಿಂಗ್ ಇಂದಿನಿಂದ (ಮಾ.10) ಆರಂಭವಾಗಿದೆ. ಈ ಸಿನಿಮಾದ ಶೂಟಿಂಗ್‌ಗೆ ತಲೈವಾ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಈಗಲೂ ರಶ್ಮಿಕಾ ಕರ್ನಾಟಕದ ಪರ ಇದ್ದೀನಿ ಅಂದ್ರೆ ನಾನು ತುಟಿ ಬಿಚ್ಚಲ್ಲ: ಶಾಸಕ ರವಿ ಗಣಿಗ ಕಿಡಿ

    ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಚೆನ್ನೈನಲ್ಲಿ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈ ಕುರಿತು ಸ್ವತಃ ಚಿತ್ರದ ನಿರ್ಮಾಣ ಸಂಸ್ಥೆ ಅಪ್‌ಡೇಟ್ ಹಂಚಿಕೊಂಡಿದೆ. ಶೂಟಿಂಗ್‌ನಲ್ಲಿ ತಲೈವಾ ಕೂಡ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. 14 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು, ಚಿತ್ರದ ಪ್ರಮುಖ ದೃಶ್ಯ ಶೂಟಿಂಗ್ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.

     

    View this post on Instagram

     

    A post shared by Sun Pictures (@sunpictures)

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ‘ಜೈಲರ್’ ಸಿನಿಮಾ 2022ರಲ್ಲಿ ಮೂಡಿ ಬಂದಿತ್ತು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದರ ಪಾರ್ಟ್ 2ಗೆ ಇಂದು ಚಾಲನೆ ಸಿಕ್ಕಿರುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ‘ಜೈಲರ್ ಪಾರ್ಟ್ 1’ರಲ್ಲಿ ಮೋಹನ್ ಲಾಲ್, ಜಾಕಿ ಶ್ರಾಫ್, ಶಿವಣ್ಣ ನಟಿಸಿದ್ದರು. ಭಾಗ 2ರಲ್ಲೂ ಇವರೆಲ್ಲಾ ನಟಿಸಲಿದ್ದಾರೆ ಎನ್ನಲಾಗಿದೆ.

  • ‘ಜೈಲರ್’ ನಟ ವಿನಾಯಕನ್ ಅಸಭ್ಯ ವರ್ತನೆ- ಚಿತ್ರರಂಗದಿಂದ ನಿಷೇಧಿಸಿ ಎಂದ ನೆಟ್ಟಿಗರು

    ‘ಜೈಲರ್’ ನಟ ವಿನಾಯಕನ್ ಅಸಭ್ಯ ವರ್ತನೆ- ಚಿತ್ರರಂಗದಿಂದ ನಿಷೇಧಿಸಿ ಎಂದ ನೆಟ್ಟಿಗರು

    ‘ಜೈಲರ್’ (Jailer) ಖ್ಯಾತಿಯ ನಟ ವಿನಾಯಕನ್ (Vinayakan) ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನೆರೆಮನೆಯವರ ಎದುರು ಅಶ್ಲೀಲವಾಗಿ ನಟ ವರ್ತಿಸಿದ್ದಾರೆ. ನಟನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಪುಷ್ಪ 2’ ಸಕ್ಸಸ್ ಬಳಿಕ ಮರಾಠಿ ಕ್ವೀನ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

    ವಿನಾಯಕನ್ ನೆರೆಮನೆಯವರಿಗೆ ಬೈಯುತ್ತಾ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ ನೋಡಿ ಅನೇಕರು ಟೀಕಿಸಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನೆರೆಮನೆಯವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ, ಸೊಂಟದ ಮೇಲಿಂದ ಲುಂಗಿ ಬಿದ್ದು ಹೋಗಿದ್ರೂ ಲೆಕ್ಕಿಸದೇ ಕುಡಿದು ಜಗಳಕ್ಕೆ ನಿಂತಿದ್ದಾರೆ. ನಟನ ಈ ನಡೆ ನೋಡಿದ ಅನೇಕರು ಇವರನ್ನು ಚಿತ್ರರಂಗದಿಂದ ನಿಷೇಧ ಮಾಡಿ ಎಂದು ಅಗ್ರಹಿಸಿದ್ದಾರೆ.

    ಈ ಹಿಂದೆ ಕೂಡ ನಟ ವಿನಾಯಕನ್ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕುಡಿದು ರಂಪಾಟ ಮಾಡಿದ್ದರು. ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಹೀಗೆ ಇತ್ತೀಚೆಗೆ ಸಾಕಷ್ಟು ಕಾಂಟ್ರವರ್ಸಿ ಮೂಲಕ ಅವರು ಸದ್ದು ಮಾಡಿದ್ದರು.

  • ತಲೈವಾ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ‘ಜೈಲರ್’ ಟೀಮ್‌ನಿಂದ ಗುಡ್ ನ್ಯೂಸ್- ಏನದು?

    ತಲೈವಾ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಸಿಗಲಿದೆ ‘ಜೈಲರ್’ ಟೀಮ್‌ನಿಂದ ಗುಡ್ ನ್ಯೂಸ್- ಏನದು?

    ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಡಿ.12ರಂದು 74ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ‘ಜೈಲರ್’ ಟೀಮ್ ಫ್ಯಾನ್ಸ್‌ಗೆ ‘ಜೈಲರ್ 2’ (Jailer 2) ಬಗ್ಗೆ ಅಪ್‌ಡೇಟ್ ಕೊಡೋದಾಗಿ ಸುಳಿವು ನೀಡಿದೆ. ಡಿ.12ರಂದು ರಜನಿಕಾಂತ್‌ ಸಿನಿಮಾ ಬಗ್ಗೆ ಬಿಗ್‌ ನ್ಯೂಸ್‌ ಹೊರಬೀಳಲಿದೆ. ಇದನ್ನೂ ಓದಿ:‘ಮನದ ಕಡಲು’ ಚಿತ್ರಕ್ಕಾಗಿ ಮತ್ತೆ ‘ಮುಂಗಾರು ಮಳೆ’ ನಿರ್ಮಾಪಕನ ಜೊತೆ ಕೈಜೋಡಿಸಿದ ಯೋಗರಾಜ್‌ ಭಟ್‌

    ಡಿ.12 ಅಭಿಮಾನಿಗಳ ಪಾಲಿಗೆ ಹಬ್ಬ. ನೆಚ್ಚಿನ ನಟ ತಲೈವಾಗೆ ಹುಟ್ಟುಹಬ್ಬದ ಸಂಭ್ರಮವಾಗಿದೆ. ಇದೀಗ ‘ಜೈಲರ್’ ನಿರ್ದೇಶಕ ನೆಲ್ಸನ್ ರಜನಿಕಾಂತ್, ಶಿವಣ್ಣ, ಜಾಕಿ ಶ್ರಾಫ್, ಮೋಹನ್ ಲಾಲ್ ಸೇರಿದಂತೆ ಅನೇಕರ ಪೋಸ್ಟರ್ ಅನ್ನು ಮತ್ತೊಮ್ಮೆ ಶೇರ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಅದಷ್ಟೇ ಅಲ್ಲ, ಈ ಮೂಲಕ ಪಾರ್ಟ್‌ 2ನಲ್ಲಿ ಈ ಪಾತ್ರಗಳು ಕಂಟಿನ್ಯೂ ಆಗುವ ಸೂಚನೆ ಕೂಡ ನೀಡಿದ್ದಾರೆ.

     

    View this post on Instagram

     

    A post shared by Sun Pictures (@sunpictures)

    ಮೂಲಗಳ ಪ್ರಕಾರ, ಡಿ.5ರಂದು ‘ಜೈಲರ್ ಪಾರ್ಟ್ 2’ರ ಪ್ರೋಮೋ ನಡೆಯಲಿದ್ದು, ಡಿ.12ರಂದು ತಲೈವಾ ಬರ್ತ್‌ಡೇಗೆ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ ಎನ್ನಲಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತ ಅಪ್‌ಡೇಟ್ ನೀಡುವವರೆಗೂ ಕಾದುನೋಡಬೇಕಿದೆ.

    ಸದ್ಯ ಮತ್ತೊಮ್ಮೆ ‘ಜೈಲರ್’ ಸಿನಿಮಾದ ಫೋಟೋಸ್ ಶೇರ್ ಮಾಡಿ ಹಿಂಟ್ ಪಾರ್ಟ್‌ 2 ಕುರಿತು ಕೊಟ್ಟಿರೋದ್ದಕ್ಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ‘ಜೈಲರ್ 2’ ಜೊತೆ ‘ಕೂಲಿ’ ಸಿನಿಮಾದ ಅಪ್‌ಡೇಟ್‌ಗೆ ಎದುರು ನೋಡುತ್ತಿದ್ದಾರೆ.

  • ಕುಡಿದು ರಂಪಾಟ – ʻಜೈಲರ್ʼ ಸಿನಿಮಾ ವಿಲನ್ ವಿನಾಯಕನ್ ಅರೆಸ್ಟ್!

    ಕುಡಿದು ರಂಪಾಟ – ʻಜೈಲರ್ʼ ಸಿನಿಮಾ ವಿಲನ್ ವಿನಾಯಕನ್ ಅರೆಸ್ಟ್!

    2023ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ಸಿನಿಮಾ ʻಜೈಲರ್ʼನಲ್ಲಿ (Jailer) ರಜನಿಕಾಂತ್ ಎದುರು ವಿಲನ್ ಆಗಿ ಅಬ್ಬರಿಸಿದ್ದ ಮಲಯಾಳಂ ನಟ ವಿನಾಯಕನ್ (Vinayakan) ಅವರನ್ನು ಅರೆಸ್ಟ್ ಮಾಡಲಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಠಪೂರ್ತಿ ಕುಡಿದಿದ್ದ ವಿನಾಯಕನ್, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

    ವಿನಾಯಕನ್ ಅವರು ಕೊಚ್ಚಿಯಿಂದ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಗೆ (Hyderabad Airport) ಆಗಮಿಸಿದ್ದರು. ಅಲ್ಲಿ ಇಂಡಿಗೋ ಸಿಬ್ಬಂದಿ ಜೊತೆಗೆ ಮೊದಲು ಅನುಚಿತವಾಗಿ ವರ್ತಿಸಿದ್ದಾರೆ. ಅವರು ವಿಪರೀತ ಕುಡಿದಿದ್ದರಿಂದ ಮೈಮೇಲೆ ಅರಿವೇ ಇಲ್ಲದಂತೆ ನಡೆದುಕೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಅಲ್ಲದೇ ಪ್ರಯಾಣಿಕರೊಂದಿಗೂ ಅಸಭುವಾಗಿ ವರ್ತಿಸಿದ್ದಾರೆ. ಈ ಬಗ್ಗೆ ದೂರು ನೀಡಿದ ಬಳಿಕ ಏರ್‌ಪೋರ್ಟ್ ಸಿಐಎಸ್‌ಎಫ್ (CISF) ಭದ್ರತಾ ಸಿಬ್ಬಂದಿ ವಿನಾಯಕನ್ ಅವರನ್ನು ವಶಕ್ಕೆ ಪಡೆದು, ಸ್ಥಳೀಯ ಏರ್‌ಪೋರ್ಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಅರೆಬೆತ್ತಲಾಗಿ ಕುಳಿತಿದ್ದ ನಟ:
    ವಿಮಾನ ನಿಲ್ದಾಣದಲ್ಲಿ ಧರಿಸಿದ್ದ ಶರ್ಟ್ ಬಿಚ್ಚಿ ಅರೆಬೆತ್ತಲಾಗಿ ಕುಳಿತಿದ್ದ ವಿನಾಯಕನ್ ಅವರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಏರ್‌ಪೋರ್ಟ್ ಪೊಲೀಸ್ ಠಾಣೆಯ ಸಿಐ ಬಾಲರಾಜ್, ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ

    ಉತ್ತಮ ನಟ:
    ಕಳೆದ 28 ವರ್ಷಗಳಿಂದ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ವಿನಾಯಕನ್ ಅವರು ಮಲಯಾಳಂನ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ, ಉತ್ತಮ ನಟ ಎನಿಸಿಕೊಂಡಿದ್ದಾರೆ. ʻಜೈಲರ್‌ʼ ಸಿನಿಮಾದಲ್ಲಿ ರಜನಿಕಾಂತ್ ಎದುರು ಖಳನಾಗಿ ನಟಿಸಿದ ಮೇಲೆ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. 2016ರಲ್ಲಿ ತೆರೆಕಂಡ ಮಲಯಾಳಂನ ʻಕಮ್ಮಟ್ಟಿಪಾಡಂʼ ಸಿನಿಮಾದ ನಟನೆಗಾಗಿ ವಿನಾಯಕನ್‌ಗೆ ಭಾರೀ ಮೆಚ್ಚುಗೆ ಸಿಕ್ಕಿತ್ತು. ಅದಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದರು. ಇದನ್ನೂ ಓದಿ: ಸದ್ದು ಮಾಡುತ್ತಿದೆ ಅನೀಶ್, ಮಿಲನಾ ನಾಗರಾಜ್ ನಟನೆಯ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರದ ಪೋಸ್ಟರ್

    ವಿವಾದಗಳಿಂದಲೇ ಫೇಮಸ್‌:
    ನಟ ವಿನಾಯಕನ್‌ ಅವರ ವಿವಾದ ಇದೇ ಮೊದಲೇನಲ್ಲ. 2023ರ ಅಕ್ಟೋಬರ್‌ನಲ್ಲಿ ಮಲಯಾಳಂ ಕೇರಳದ ಎರ್ನಾಕುಲಂನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಬಂಧಿಸಲಾಗಿತ್ತು. 2022ರಲ್ಲಿ ಮೀಟೂ ಆಂದೋಲನದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಇದನ್ನೂ ಓದಿ: ಗುರುದತ್‌ ಗಾಣಿಗ ನಿರ್ದೇಶನದ ‘ಜುಗಾರಿ ಕ್ರಾಸ್’ ಸಿನಿಮಾ ಅನೌನ್ಸ್- ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್

    ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ವಿನಾಯಕನ್‌, ಸದ್ಯ ವಿಕ್ರಮ್‌ ನಟನೆಯ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ʻಧ್ರುವನಚ್ಚತ್ತಿರಂʼ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಬಳಿಕ ತೆಕ್ಕು ವಡಕ್ಕು, ಕರಿಂತಂದನ್‌ ಮಲಯಾಳಂ ಸಿನಿಮಾಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಕಾಲ್‌ಶೀಟ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಅಂಬಾನಿ ಮನೆಯ ಗಣೇಶ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಸ್ಟಾರ್ಸ್

  • ರಜನಿಕಾಂತ್‌ ಜೊತೆ ‌’ಜೈಲರ್‌ 2′ ಬರೋದು ಫಿಕ್ಸ್‌ ಎಂದ ನಿರ್ದೇಶಕ ನೆಲ್ಸನ್

    ರಜನಿಕಾಂತ್‌ ಜೊತೆ ‌’ಜೈಲರ್‌ 2′ ಬರೋದು ಫಿಕ್ಸ್‌ ಎಂದ ನಿರ್ದೇಶಕ ನೆಲ್ಸನ್

    ಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಯಶಸ್ವಿಯಾದ್ಮೇಲೆ ಇದರ ಸೀಕ್ವೆಲ್ ಅಪ್‌ಡೇಟ್‌ಗಾಗಿ ಎದುರು ನೋಡುತ್ತಿದ್ದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಜೈಲರ್ 2’ (Jailer 2) ಬರೋದು ಫಿಕ್ಸ್ ಎಂದು ಡೈರೆಕ್ಟರ್ ನೆಲ್ಸನ್ ಅಧಿಕೃತ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಝೈದ್ ಖಾನ್‌ಗೆ ಮಲೈಕಾ ವಸುಪಾಲ್ ಹೀರೋಯಿನ್

    ಕಾಲಿವುಡ್‌ನಲ್ಲಿ ಕಳೆದ ವರ್ಷ ಸಂಚಲನ ಮೂಡಿಸಿದ ಸಿನಿಮಾ ಅಂದರೆ ಜೈಲರ್. ಈ ಸಿನಿಮಾದ ಸಕ್ಸಸ್ ಬಳಿಕ ಇದರ ಸೀಕ್ವೆಲ್ ಬರಲಿ ಎಂಬುದು ಅದೆಷ್ಟೋ ಅಭಿಮಾನಿಗಳ ಆಸೆಯಾಗಿತ್ತು. ಆದರೆ ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡದೆ ಸೈಲೆಂಟ್ ಆಗಿತ್ತು. ಈಗ ‘ಜೈಲರ್’ ಪಾರ್ಟ್ 2 ಬರಲಿದೆ ಎಂದು ಅಧಿಕೃತವಾಗಿ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ (Nelson Dilipkumar) ಹೇಳಿದ್ದಾರೆ. ಅದಷ್ಟೇ ಅಲ್ಲ, ಇದರ ಮುಂದುವರೆದ ಭಾಗದಲ್ಲಿ ರಜನಿಕಾಂತ್ (Rajanikanth) ಅವರೇ ಹೀರೋ ಆಗಿ ನಟಿಸಲಿದ್ದಾರೆ ಎಂದಿದ್ದಾರೆ.

    ಕಥೆ ಕೂಡ ಸಿದ್ಧವಾಗಿದ್ದು, ‌’ವೆಟ್ಟೈಯಾನ್’ ಸಿನಿಮಾದ ರಿಲೀಸ್‌ಗೂ ಮುನ್ನವೇ ‘ಜೈಲರ್ 2’ ಸಿನಿಮಾದ ಅಧಿಕೃತ ಘೋಷಣೆ ಆಗಲಿದೆ ಎಂದಿದ್ದಾರೆ. ತೆರೆಮರೆಯಲ್ಲಿ ಈ ಸಿನಿಮಾದ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕ ನೆಲ್ಸನ್‌ ಮಾಹಿತಿ ನೀಡಿದ್ದಾರೆ.

    ಅಂದಹಾಗೆ, ‘ಜೈಲರ್’ (Jailer) ಸಿನಿಮಾದಲ್ಲಿ ರಜನಿಕಾಂತ್ ಜೊತೆ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ, ಯೋಗಿ ಬಾಬು, ಕನ್ನಡದ ನಟ ಶಿವರಾಜ್‌ಕುಮಾರ್ (Shivarajkumar), ಮೋಹನ್‌ಲಾಲ್, ಕಿಶೋರ್, ಸುನೀಲ್ ಸೇರಿದಂತೆ ಅನೇಕರು ನಟಿಸಿದ್ದರು. ಕಳೆದ ವರ್ಷ ಆ.10ರಂದು ಜೈಲರ್ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು.

  • ತಮಿಳು ನಟ ರಜನಿಕಾಂತ್ ಟೆಂಪಲ್ ರನ್

    ತಮಿಳು ನಟ ರಜನಿಕಾಂತ್ ಟೆಂಪಲ್ ರನ್

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಹಿಮಾಲಯಕ್ಕೆ ಭೇಟಿ ಕೊಟ್ಟ ಬೆನ್ನಲ್ಲೇ ಉತ್ತರಾಖಂಡದ ಪವಿತ್ರ ಸ್ಥಳಗಳಾದ ಕೇದಾರನಾಥ, ಬದ್ರಿನಾಥ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಇಟಲಿಗೆ ಹಾರಿದ ಲವ್ ಬರ್ಡ್ಸ್- ಮದುವೆಗೂ ಮುನ್ನ ಅದಿತಿ ಜೊತೆ ಸಿದ್ಧಾರ್ಥ್‌ ಜಾಲಿ ಟ್ರಿಪ್

    ಕೇದಾರನಾಥ (Kedarnath) ಮತ್ತು ಬದ್ರಿನಾಥ (Badrinath) ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ವೇಳೆ, ರಜನಿಕಾಂತ್‌ ಅವರನ್ನು ಉತ್ತರಾಖಂಡ ಪೊಲೀಸ್ ಅಧಿಕಾರಿಯೊಬ್ಬರು ವಿಶೇಷವಾಗಿ ಸ್ವಾಗತಿಸಿದ್ದಾರೆ.

    ಸದ್ಯ ರಜನಿಕಾಂತ್ ‘ವೆಟ್ಟೈಯಾನ್’ ಸಿನಿಮಾದ ಶೂಟಿಂಗ್ ಮುಗಿಸಿಕೊಂಡಿದ್ದಾರೆ. ಸದ್ಯದಲ್ಲೇ ‘ಜೈಲರ್ ಪಾರ್ಟ್ 2’ ಚಿತ್ರತಂಡಕ್ಕೆ ನಟ ಸಾಥ್‌ ನೀಡಲಿದ್ದಾರೆ.

  • ಅಬುಧಾಬಿ ಮಂದಿರಕ್ಕೆ ಭೇಟಿ ನೀಡಿದ ರಜನಿಕಾಂತ್

    ಅಬುಧಾಬಿ ಮಂದಿರಕ್ಕೆ ಭೇಟಿ ನೀಡಿದ ರಜನಿಕಾಂತ್

    ಮಿಳಿನ ಸೂಪರ್ ಸ್ಟಾರ್ ನಟ ರಜನಿಕಾಂತ್ (Rajanikanth) ಸದ್ಯ ‘ಜೈ ಭೀಮ್’ (Jai Bhim) ನಿರ್ದೇಶಕನ ಜೊತೆಗಿನ ಸಿನಿಮಾ ಪೂರ್ಣಗೊಳಿಸಿದ ಬೆನ್ನಲ್ಲೇ ಅಬುಧಾಬಿಗೆ ಹಾರಿದ್ದಾರೆ. ಅಲ್ಲಿ ದೇವಸ್ಥಾನವೊಂದರಲ್ಲಿ ತಲೈವಾ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಕಾನ್ ಫೆಸ್ಟಿವಲ್‌ನಲ್ಲಿ ಮೊದಲ ಬಹುಮಾನ ಗೆದ್ದ ಕನ್ನಡಿಗನ ಸಾಧನೆಯನ್ನು ಹಾಡಿ ಹೊಗಳಿದ ಯಶ್

    ಸಿನಿಮಾಗಳ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಅಬುಧಾಬಿ ಹಿಂದೂ ಮಂದಿರಕ್ಕೆ ಭೇಟಿ ನೀಡಿ ರಜನಿಕಾಂತ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಕೆಲ ಸಮಯ ಕಳೆದಿದ್ದಾರೆ. ದೇವಸ್ಥಾನದ ವಿಶೇಷತೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಸದ್ಯ ರಜನಿಕಾಂತ್ ಭೇಟಿ ನೀಡಿರುವ ಸುಂದರ ವಿಡಿಯೋವೊಂದು ಇದೀಗ ಸಾಮಾಹಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಅಂದಹಾಗೆ, ‘ಜೈಲರ್’ ಸೀಕ್ವೆಲ್ ಮತ್ತು ‘ಕೂಲಿ’ ಸಿನಿಮಾವನ್ನು ರಜನಿಕಾಂತ್ ಕೈಗೆತ್ತಿಕೊಳ್ಳಲಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡುತ್ತಿದ್ದಾರೆ.

  • ‘ಜೈಲರ್‌’ ಪಾರ್ಟ್‌ 2ಗೆ ಟೈಟಲ್‌ ಬದಲಾವಣೆ? ಇಲ್ಲಿದೆ ಬಿಗ್‌ ಅಪ್‌ಡೇಟ್

    ‘ಜೈಲರ್‌’ ಪಾರ್ಟ್‌ 2ಗೆ ಟೈಟಲ್‌ ಬದಲಾವಣೆ? ಇಲ್ಲಿದೆ ಬಿಗ್‌ ಅಪ್‌ಡೇಟ್

    ಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಡೂಪರ್ ಸಕ್ಸಸ್ ಕಂಡಿತ್ತು. ತಲೈವಾ ಅಬ್ಬರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಮತ್ತೆ ಪಾರ್ಟ್ 2 ದರ್ಶನ ಯಾವಾಗ? ಎಂದು ಎದುರು ಅಭಿಮಾನಿಗಳು ನೋಡುತ್ತಿದ್ದರು. ಈಗ ‘ಜೈಲರ್ 2’ (Jailer 2) ಬಗ್ಗೆ‌ ಬಿಗ್ ಅಪ್‌ಡೇಟ್ ಸಿಕ್ಕಿದೆ.‌ ತೆರೆಮರೆಯಲ್ಲಿ ಟೈಟಲ್‌ ಬದಲಾವಣೆ ಕುರಿತು ಪ್ಲ್ಯಾನ್‌ ನಡೆಯುತ್ತಿದೆ.

    ಡೈರೆಕ್ಟರ್ ನೆಲ್ಸನ್ ‘ಜೈಲರ್’ ಪಾರ್ಟ್ 2ಗೆ ಪವರ್‌ಫುಲ್ ಕಥೆಯನ್ನು ಹೆಣೆದಿದ್ದಾರೆ. ಚಿತ್ರದ ಮೊದಲ ಡ್ರಾಪ್ಟ್ ರೆಡಿಯಾಗಿದ್ದು, ರಜನಿಕಾಂತ್ ಮತ್ತು ನಿರ್ಮಾಣ ಸಂಸ್ಥೆಗೆ ಕಥೆ ಇಷ್ಟವಾಗಿದೆ. ಡೈರೆಕ್ಟರ್ ಹೆಣೆದ ಕಥೆಗೆ ಮುಂದುವರೆಯಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ:‘ವಾರ್ 2’ನಲ್ಲಿ ಇರಲಿದೆ ನಾಟು ನಾಟು ರೀತಿಯೇ ಎನರ್ಜಿಟಿಕ್ ಡ್ಯಾನ್ಸ್

    ‘ಜೈಲರ್’ ಚಿತ್ರದ ಸಕ್ಸಸ್ ನಂತರವೇ ಪಾರ್ಟ್ 2ಗಾಗಿ ತಯಾರಿ ಮಾಡಿಕೊಳ್ತಿದ್ದರು. ಈಗ ಅಂತಿಮ ಹಂತದಲ್ಲಿದೆ. ಜೂನ್‌ನಿಂದಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಕೂಡ ಶುರುವಾಗಲಿದೆ.

    ಪಾರ್ಟ್ 2ಗೆ ಟೈಟಲ್ ಬದಲಿಸುವ ಸಾಧ್ಯತೆ ಇದೆ. ‘ಜೈಲರ್ 2’ ಅಥವಾ ‘ಹುಕುಮ್’ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ. ಚಿತ್ರತಂಡದವರು ಹುಕುಮ್‌ ಟೈಟಲ್‌ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ಎನ್ನಲಾಗಿದೆ. ಲೋಕೇಶ್ ಕನಗರಾಜ್ ಜೊತೆಗಿನ ಸಿನಿಮಾದ ನಂತರ ಜೈಲರ್ 2ಗೆ ಮುಹೂರ್ತ ಫಿಕ್ಸ್ ಆಗಲಿದೆ. 2025ರ ಶುರುವಿನಲ್ಲಿ ತಲೈವಾ ಜೊತೆ ನೆಲ್ಸನ್ ಶೂಟಿಂಗ್‌ಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಟೈಟಲ್‌ ಬದಲಾವಣೆ ವಿಚಾರ ನಿಜನಾ? ಎಂಬುದನ್ನು ಚಿತ್ರತಂಡದ ಕಡೆಯಿಂದ  ಅಧಿಕೃತ ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ.