Tag: Jaijagadeesh

  • ಬಾಟಲಿ ಬಿಸಾಡಿದ್ದಕ್ಕೆ ನಟ ಜೈ ಜಗದೀಶ್ ಮತ್ತು ಮಂಡ್ಯ ವ್ಯಕ್ತಿಯೊಂದಿಗೆ ಗಲಾಟೆ : ನಿಜ ಘಟನೆ ಏನು?

    ಬಾಟಲಿ ಬಿಸಾಡಿದ್ದಕ್ಕೆ ನಟ ಜೈ ಜಗದೀಶ್ ಮತ್ತು ಮಂಡ್ಯ ವ್ಯಕ್ತಿಯೊಂದಿಗೆ ಗಲಾಟೆ : ನಿಜ ಘಟನೆ ಏನು?

    ನಾಲ್ಕೈದು ದಿನಗಳಿಂದ ನಟ ಜೈ ಜಗದೀಶ್ ಅವರು ತಮ್ಮ ತೋಟಕ್ಕೆ ಹೊರಟಾಗ, ಬೆಳ್ಳೂರು ಕ್ರಾಸ್ ಟೋಲ್ ಬಳಿ ವ್ಯಕ್ತಿಯೊಂದಿಗೆ ಗಲಾಟೆಯಾಗಿ ಅದು ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತು. ಗಲಾಟೆಯಾಗಿ ಐದು ದಿನಗಳ ಬಳಿಕ ಆವ್ಯಕ್ತಿಯು ದೂರು ನೀಡಿದ್ದನ್ನು ಕೇಳಿ ಸ್ವತಃ ಜೈ ಜಗದೀಶ್ ಅವರೇ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಆ ವ್ಯಕ್ತಿ ಮಾಡಿರುವ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ. ಗಲಾಟೆ ನಡೆದದ್ದು ನಿಜವಾದರೂ, ಆ ವ್ಯಕ್ತಿ ದೂರಿನಲ್ಲಿ ಬರೆದದ್ದು ಸುಳ್ಳು ಎಂದು ಹೇಳಿದ್ದಾರೆ ಜೈ ಜಗದೀಶ್.

    ಪ್ರತಿವಾರವೂ ಜೈ ಜಗದೀಶ್ ನ್ಯಾಷನಲ್ ಹೈವೇಯಲ್ಲಿ ತೋಟಕ್ಕೆ ಹೋಗುತ್ತಾರಂತೆ. ಹೀಗೆ ಹೋಗುವ ಸಂದರ್ಭದಲ್ಲಿ ಬೆಳ್ಳೂರು ಕ್ರಾಸ್ ಟೋಲ್ ಬಳಿ ಬಸ್ ನಿಂತಿದೆ. ಆ ಬಸ್ ನಿಂದ ವ್ಯಕ್ತಿಯೊಬ್ಬ ಬಾಟಲಿ ಬಿಸಾಡಿದ್ದಾನೆ. ಅದನ್ನು ಕಂಡು ಜೈ ಜಗದೀಶ್ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಜಗಳ ಇಲ್ಲಿಂದ ಪ್ರಾರಂಭವಾಗಿದೆ. ಆ ವ್ಯಕ್ತಿಯು ಬಾಟಲಿ ಬಿಸಾಡಿದ್ದು ನಾನಲ್ಲ ಅಂದರೆ, ನೀನೇ ಬಿಸಾಡಿದ್ದು ಎಂದು ಜೈ ಜಗದೀಶ್ ಹೇಳಿದ್ದಾರೆ.  ಆಗ ಆ ವ್ಯಕ್ತಿಯೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಎಂದಿದ್ದಾರೆ ಜೈ ಜಗದೀಶ್. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ಮಾತಿಗೆ ಮಾತು ಬೆಳೆದಾಗ ಬರೀ ಬೈಗುಳಗಳು ಮಾತ್ರವಲ್ಲ, ಹೊಡೆಯುವಂತೆ ಜೈ ಜಗದೀಶ್ ಮೇಲೆ ಆ ವ್ಯಕ್ತಿ ಬಂದನಂತೆ. ಆ ಜೈ ಜಗದೀಶ್ ಕಾರು ಡ್ರೈವರ್ ಆತನ್ನು ಬಿಡಿಸುವುದಕ್ಕಾಗಿ ಹೋಗಿದ್ದಾರೆ. ಅಲ್ಲದೇ ವ್ಯಕ್ತಿಯು ಕಾರಿನ ಕೀ ಕಿತ್ತುಕೊಂಡಾಗ ಅದನ್ನು ವಾಪಸ್ಸು ಪಡೆಯಲು ಹರಸಾಹಸವೇ ನಡೆದಿದೆ. ಆ ವೇಳೆಯಲ್ಲಿ ವ್ಯಕ್ತಿ ಬಟ್ಟೆ ಹರಿದಿದೆ. ಘಟನೆ ನಡೆದು ಐದು ದಿನಗಳ ನಂತರ ದೂರು ದಾಖಲಾಗಿದೆ. ಅದು ಆ ವ್ಯಕ್ತಿಯಲ್ಲ, ಅವರ ತಂದೆ ಕೊಟ್ಟಿರುವ ದೂರು ಎಂದಿದ್ದಾರೆ ಜೈ ಜಗದೀಶ್.

  • ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಸ್ ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಜಯರಾಮೇಗೌಡ ಅನ್ನುವವರಿಗೆ ನಟ ಜೈಜಗದೀಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮತ್ತು ಹಲ್ಲೆ ಮಾಡಿದ್ದಾರೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಇದೇ ಜೂ.5ರಂದು ಈ ಘಟನೆ ನಡೆದದ್ದು, ಜಯರಾಮೇಗೌಡ ಅವರು ಬಸ್ಸಿನಿಂದ ಕೆಳಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಬಸ್ ನ ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ  ಜೈಜಗದೀಶ್ ಅವರು ಕಾರು ನಿಲ್ಲಿಸಿ, ಬಸ್ ನಿಂದ ಬಾಟಲಿ ಎಸೆಯುತ್ತೀಯಾ ಎಂದು ಕೆಟ್ಟದಾಗಿ ನಿಂದಿಸಿದರು. ಮಾತಿಗೆ ಮಾತು ಬೆಳೆದ ನಂತರ ಅವರು ನನ್ನ ಮೇಲೆ ಹಲ್ಲೆಗೆ ಮುಂದಾದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಜೈಪುರ ಪ್ರವಾಸದಲ್ಲಿ `ರಾಬರ್ಟ್’ ನಟಿ ಆಶಾ ಭಟ್

    ಈ ಕುರಿತು ಜೈಜಗದೀಶ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ವರದಿಯಾಗಿದೆ. ಜೈಜಗದೀಶ್ ಮತ್ತು ಜಯರಾಮೇಗೌಡ ಅವರು ಜಗಳ ಮಾಡುವ ಸಂದರ್ಭದಲ್ಲಿ ಸ್ಥಳೀಯರು ಜೈಜಗದೀಶ್ ಅವರಿಗೆ ಸಮಾಧಾನ ಮಾಡಿದರೂ, ಅವರು ಕೋಪ ಕಡಿಮೆ ಆಗಲಿಲ್ಲ ಎಂದಿದ್ದಾರೆ ಜಯರಾಮೇಗೌಡ.

  • ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

    ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್-7’ ಶುರುವಾಗಿ ಎರಡು ವಾರಗಳಾಗಿದೆ. ಈಗಾಗಲೇ ಮನೆಯಲ್ಲಿ ಜಗಳ ಶುರುವಾಗಿದ್ದು, ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ ಆಗಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳು ಮನೆಯ ಹೊರಗೆ ಕುಳಿತಿರುತ್ತಾರೆ. ಈ ವೇಳೆ ಕಿಶನ್, ಜೈ ಜಗದೀಶ್ ಅವರ ಬಳಿ ಹೋಗಿ ನೀವು ಎಲ್ಲರನ್ನು ಕೆಟ್ಟದಾಗಿ ನಿಂದಿಸುತ್ತೀರಿ. ತುಂಬಾ ಜನಕ್ಕೆ ಬೇಜಾರು ಮಾಡಿದ್ದೀರಿ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಜೈಜಗದೀಶ್ ವಿರುದ್ಧ ಗರಂ ಆಗಿದ್ದಾರೆ.

    ಈ ವೇಳೆ ಜಗದೀಶ್ ನೀನು ಇಷ್ಟು ದಿನ ಇರಲಿಲ್ಲ. ನಾನು ಯಾರಿಗೂ ಬೇಜಾರು ಮಾಡಿಲ್ಲ. ನಾನು ನೇರವಾಗಿ ಎಲ್ಲರ ಜೊತೆ ಮಾತನಾಡುತ್ತೇನೆ. ನೀನು ಇಷ್ಟು ದಿನಗಳಿಂದ ಇಲ್ಲಿ ಇರಲಿಲ್ಲ. ಹಾಗಾಗಿ ನಿನಗೆ ಸಂಪೂರ್ಣ ವಿಷಯ ಗೊತ್ತಿಲ್ಲ. ನೀನು ನನಗೆ ಬುದ್ಧಿ ಹೇಳಲು ಬರಬೇಡ ಎಂದು ಜೈ ಜಗದೀಶ್ ಕೋಪದಲ್ಲಿಯೇ ಉತ್ತರಿಸಿದ್ದಾರೆ.

    ಬಳಿಕ ಚೈತ್ರ ವಾಸುದೇವ್ ಅವರು ಕೂಡ ಕಣ್ಣೀರು ಹಾಕಿ, ನಾನು ಊಟಕ್ಕೆಂದು ಬಂದಿಲ್ಲ. ಬೇರೆಯವರ ಬಳಿ ನಾನು ಕಿತ್ತುಕೊಂಡು ತಿಂದಿಲ್ಲ. ನಾನು ತಿನ್ನುವುದಕ್ಕೆ ಬಂದಿರಲಿಲ್ಲ. ಕೆಲಸ ಹುಡುಕುತ್ತಿದ್ದೆ. ನಾನು ಕೇವಲ ಬಿಸ್ಕೇಟ್ ನೋಡುತ್ತಿದ್ದೆ. ಅದನ್ನು ತಿನ್ನಲು ಹೋಗಲಿಲ್ಲ ಎಂದು ಹೇಳಿದ್ದಾರೆ.

    ಕಿಶನ್ ಹಾಗೂ ಜೈ ಜಗದೀಶ್ ನಡುವೆ ಜಗಳ ಜಾಸ್ತಿ ಆಗುತ್ತಿದ್ದಂತೆ ನಟ ಹರೀಶ್ ರಾಜ್, ಸುಜಾತ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಕಿಶನ್ ಜಗಳವಾಡುತ್ತಿರುವುದನ್ನು ನೋಡಿ ಹರೀಶ್, ಇದು ಜೈ ಜಗದೀಶ್ ಅವರ ಆಡುಭಾಷೆ. ನಿನಗೆ ಹಾಗೆ ಅನಿಸಿರಬಹುದು ಎಂದು ಕಿಶನ್ ಹಾಗೂ ಜೈ ಜಗದೀಶ್ ಅವರನ್ನು ಸಮಾಧಾನಪಡಿಸಿದ್ದಾರೆ.

    ಗಲಾಟೆಯ ಬಳಿಕ ಅಡುಗೆ ವಿಭಾಗದಲ್ಲಿದ್ದ ಜೈ ಜಗದೀಶ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದ ರಶ್ಮಿ ಅವರನ್ನು ಕರೆದಿದ್ದಾರೆ. ರಶ್ಮಿ ಅವರನ್ನು ಕರೆದು ನನಗೆ ಅಡುಗೆ ಡಿಪಾರ್ಟ್ ಮೆಂಟ್ ಬೇಡ. ನನಗೆ ಬೇರೆ ಡಿಪಾರ್ಟ್ ಮೆಂಟ್ ಬೇಕು ಎಂದು ಹೇಳಿದ್ದಾರೆ.