Tag: Jai Sriram

  • ಜೈಶ್ರೀರಾಮ್‌ ಹಾಡು ಹಾಕಿದ್ದಕ್ಕೆ ಮಾರಾಮಾರಿ – ಹಿಂದೂ ವಿದ್ಯಾರ್ಥಿಗಳ ಮೇಲಿನ FIR ಕೈಬಿಡುವಂತೆ ಆಗ್ರಹ!

    ಜೈಶ್ರೀರಾಮ್‌ ಹಾಡು ಹಾಕಿದ್ದಕ್ಕೆ ಮಾರಾಮಾರಿ – ಹಿಂದೂ ವಿದ್ಯಾರ್ಥಿಗಳ ಮೇಲಿನ FIR ಕೈಬಿಡುವಂತೆ ಆಗ್ರಹ!

    – ಹಿಂದೂಪರ ಸಂಘಟನೆ, ಬಿಜೆಪಿ ಕಾರ್ಯಕರ್ತರಿಂದ ಶಕ್ತಿ ಪ್ರದರ್ಶನ

    ಬೀದರ್: ಇಲ್ಲಿನ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಜೈ ಶ್ರೀರಾಮ್ (Jai SriRam) ಹಾಡು ಹಾಕಿದ್ದಕ್ಕೆ 2 ವಿದ್ಯಾರ್ಥಿ‌ ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಹಿಂದೂ ವಿದ್ಯಾರ್ಥಿಗಳ (Hindu Students) ಮೇಲೆ ದಾಖಲಾಗಿರುವ ಎಫ್‌ಐಆರ್‌ ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳಿಂದ ಬೀದರ್‌ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ನಗರದ ಪ್ರವಾಸಿ ಮಂದಿರದ ಬಳಿ ಸೇರಿದ್ದ 300ಕ್ಕೂ ಅಧಿಕ ಹಿಂದೂ ಸಂಘಟನೆ ಕಾರ್ಯಕರ್ತರು ಅಂಬೇಡ್ಕರ್ ವೃತದಿಂದ ಡಿಸಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ (Protest) ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರ‍್ಯಾಲಿಯಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ವಿಕೃತ ಕಾಮಿ, ಕೊನೆಯ ಉಸಿರಿರೋವರೆಗೂ ಶಿಕ್ಷೆ ನೀಡೋ ಕೇಸ್’- ಕೋರ್ಟ್‍ನಲ್ಲಿ ವಾದ, ಪ್ರತಿವಾದ ಹೇಗಿತ್ತು?

    ಈ ವೇಳೆ ಪ್ರತಿಭಟನಾಕಾರರನ್ನು ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರದ ಬಳಿಯೇ ತಡೆದ ಪೊಲೀಸರು ಇಲ್ಲೇ ಮನವಿ ಸಲ್ಲಿಸುವಂತೆ ತಾಕೀತು ಮಾಡಿದರು. ಬಳಿಕ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು, ಡಿಸಿ ಕಚೇರಿ ಮುಖ್ಯದ್ವಾರದ ಬಳಿಯೇ ಪ್ರತಿಭಟನೆ ನಡೆಸಲು ಮುಂದಾದರು. ಹಿಂದೂ ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್‌ ರದ್ದುಗೊಳಿಸದೇ ಇದ್ದರೆ ಜಿಲ್ಲೆಯಲ್ಲಿ ನಾವು ಶ್ರೀರಾಮನ ಅಭಿಯಾನ ಪ್ರಾರಂಭ ಮಾಡುತ್ತೇವೆ ಎಂದು ಪಟ್ಟು ಹಿಡಿದರು. ಬಳಿಕ ಡಿಸಿ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ಕಾಲೇಜಿನಲ್ಲಿ ಜೈ ಶ್ರೀರಾಮ್‌ ಹಾಡು ಹಾಕಿದ್ದಕ್ಕೆ ಮಾರಾಮಾರಿ- 17ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ FIR

    ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಶರಣು ಸಲಗರ್, ಎಂಎಲ್‌ಸಿ ರಘುನಾಥ್ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಸೇರಿ ಹಿಂದೂ ಸಂಘಟನೆಯ ಪ್ರಮುಖರು ಭಾಗಿಯಾಗಿದ್ದರು. ಇದನ್ನೂ ಓದಿ: ನಿರೀಕ್ಷೆಗೂ ಮೀರಿ ಜಿಡಿಪಿ ಅಭಿವೃದ್ಧಿ – 4ನೇ ತ್ರೈಮಾಸಿಕದಲ್ಲಿ 7.8% , 2023-24 ಹಣಕಾಸು ವರ್ಷದಲ್ಲಿ 8.2% ಪ್ರಗತಿ

    ಏನಿದು ಪ್ರಕರಣ?
    ಬೀದರ್‌ ನಗರದ ಕಾಲೇಜು ಒಂದರಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಮಾರಾಮಾರಿ ನಡೆದು, ಹಿಂದೂ-ಮುಸ್ಲಿಂ ಸೇರಿದಂತೆ 17 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

  • ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಘೋಷಣೆ ಕೂಗಿದ ಕೈ ಕಾರ್ಯಕರ್ತರು- ಮುಸ್ಲಿಮರೊಂದಿಗೆ ರಾಮನವಮಿ ಆಚರಣೆ

    ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಘೋಷಣೆ ಕೂಗಿದ ಕೈ ಕಾರ್ಯಕರ್ತರು- ಮುಸ್ಲಿಮರೊಂದಿಗೆ ರಾಮನವಮಿ ಆಚರಣೆ

    ತುಮಕೂರು: ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇಂದು ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಘೋಷಣೆ ಕೂಗಿ ಶ್ರೀರಾಮನವಮಿ ಆಚರಿಸಿದ್ದಾರೆ.

    ತುಮಕೂರು ನಗರದ ಭದ್ರಮ್ಮ ಸರ್ಕಲ್‍ನಲ್ಲಿ ಶಾಮಿಯಾನ ಹಾಕಿ ಕೋಸಂಬರಿ ಮತ್ತು ಪಾನಕ ಹಂಚಿದ್ದಾರೆ. ಈ ವೇಳೆ ಕಾಂಗ್ರೆಸ್‍ನ ಕೆಲ ಮುಸ್ಲಿಂ ಕಾರ್ಯಕರ್ತರೂ ಇದ್ದರು.

    ಕಳೆದ ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಅವಹೇಳನ ಮಾಡುವ ಭರದಲ್ಲಿ ಯೂತ್ ಕಾಂಗ್ರೆಸ್‍ನವರು ಕೇಸರಿ ಶಾಲಿಗೆ ಕಪ್ಪು ಮಸಿ ಬಳಿದು ಸ್ವಾಮೀಜಿಗಳ ಸಮೂಹಕ್ಕೆ ಅಪಮಾನ ಮಾಡಿದ್ದರು. ಆದರೇ ಇಂದು ನಾವೂ ಹಿಂದೂಗಳು ಎಂದು ಕೂಗಿ ಕೇಸರಿ ಶಲ್ಯ ಮೇಲೆ ಪ್ರೀತಿ ತೋರಿದ್ದು ಮುಂಬರುವ ಚುನಾವಣೆಯ ಗಿಮಿಕ್ ಎಂಬಂತೆ ಭಾಸವಾಗುತ್ತಿದೆ.

    ಕಾಂಗ್ರೆಸ್‍ನಿಂದ ಹಿಂದೆ ಕೇಸರಿ ಶಲ್ಯಕ್ಕೆ ಅಪಮಾನ ಆಗಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯೂತ್ ಕಾಂಗ್ರೆಸ್ ಅಧ್ಯಕ್ಷ, ಯಾಕೆ ಬಿಜೆಪಿ ಅವರು ಮಾತ್ರ ಕೇಸರಿ ಶಲ್ಯದ ಪೇಟೆಂಟ್ ತೆಗೆದುಕೊಂಡಿದ್ದಾರಾ ಎಂದು ವಿಚಾರವನ್ನು ಡೈವರ್ಟ್ ಮಾಡಿ ಸುಮ್ಮನಾದರು.

    ಪಾನಕ, ಕೋಸಂಬರಿ ತೆಗೆದುಕೊಳ್ಳಲು ಜನರೇ ಇಲ್ಲ: ಕೇವಲ ಪ್ರಚಾರದ ಉದ್ದೇಶದಿಂದಲೇ ಯೂತ್ ಕಾಂಗ್ರೆಸ್ ಕೇಸರಿ ಶಲ್ಯ ತೊಟ್ಟು ರಾಮನವಮಿ ಕಾರ್ಯಕ್ರಮ ಆಯೋಜಿಸಿತ್ತು. ರಾಮನವಮಿಯ ಪ್ರಮುಖ ಭಾಗ ಪಾನಕ ಮತ್ತು ಕೋಸಂಬರಿ ವಿತರಣೆ ಆಗಿತ್ತು. ವಿಪರ್ಯಾಸವೆಂದರೆ ಆ ವೇಳೆ ಯಾವೊಬ್ಬ ಸಾರ್ವಜನಿಕರೂ ಪಾನಕ-ಕೋಸಂಬರಿ ಸ್ವೀಕರಿಸಲು ಬಂದಿಲ್ಲ.

  • ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

    ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

    ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಎಲ್ಲೆಲ್ಲೂ ರಾಜಕೀಯವೇ ರಾರಾಜಿಸುತ್ತಿದೆ. ಇತ್ತೀಚೆಗೆ ಕ್ರಿಕೆಟಿಗ ಮನೋಜ್ ತಿವಾರಿ ಅವರ ಜಾಕೆಟ್ ಮೇಲೆ, ಅಗ್ನಿಮಿತ್ರ ಪಾಲ್ ಅವರ ಡಿಸೈನರ್ ಸೀರೆಗಳ ಕಮಲದ ಚಿಹ್ನೆ ಇತ್ತು. ಇದೀಗ ಸ್ವೀಟ್ ಅಂಗಡಿಯ ಮಾಲೀಕ ಸಂದೇಶ್ ಸರದಿ.

    ಕೋಲ್ಕತ್ತಾದ ಬಲರಾಮ್ ಮುಲ್ಲಿಕ್ ರಾಧರಮನ್ ಮುಲ್ಲಿಕ್ ಸ್ವೀಟ್‍ಗಳ ಮೇಲೆ ರಾಜಕೀಯ ಪಕ್ಷದ ಚಿಹ್ನೆಗಳನ್ನು ರಚಿಸುವ ಮೂಲಕ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

    ರಾಜಕೀಯದ ಪ್ರಮುಖ ಪಕ್ಷಗಳ ಚಿಹ್ನೆ ಸೇರಿದಂತೆ ಕಾಂಗ್ರೆಸ್, ಭಾರತೀಯ ಜನತಾ ಪಕ್ಷದ ಚಿಹ್ನೆ ಜೊತೆಗೆ ಜೈ ಶ್ರೀ ರಾಮ್ ಮತ್ತು ಖೇಲಾ ಹೋಬ್ ಎಂಬ ಎರಡು ಪದಗಳನ್ನು ಸ್ವೀಟ್‍ಗಳ ಮೇಲೆ ರಚಿಸಿದ್ದಾರೆ. ಇದೀಗ ಈ ಸ್ವೀಟ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

    ಈ ಕುರಿತಂತೆ ಮಾತನಾಡಿದ ಸ್ವೀಟ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ಸುದೀಪ್ ಮಲ್ಲಿಕ್, ವರ್ಷದ ಬಹುದೊಡ್ಡ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಾವು ಚುನಾವಣೆಯ ಸಂಬಂಧಪಟ್ಟಂತೆ ಸ್ವೀಟ್‍ಗಳನ್ನು ತಯಾರಿ ಮಾಡುತ್ತಿದ್ದು, ಈ ಸ್ವೀಟ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಖೇಲಾ ಹೋಬ್ ಮತ್ತು ಜೈ ಶ್ರೀ ರಾಮ್ ಎಂದು ಪದವನ್ನು ರಚಿಸಿರುವ ಸ್ವೀಟ್‍ಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿಹೋಗಿದೆ ಎಂದು ಹೇಳಿದ್ದಾರೆ.

    ಸದ್ಯ ಈ ಸ್ವೀಟ್‍ಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ಗ್ರಾಹಕರು ರಾಜಕೀಯ ಚಿಹ್ನೆಗಳುಳ್ಳ ಸ್ವೀಟ್‍ಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

  • ಡಿ ಬಾಸ್ ಸ್ಟೆಪ್ಸ್, ಶಂಕರ್ ಮಹಾದೇವನ್ ವಾಯ್ಸ್, ರಾಬರ್ಟ್‍ನಿಂದ ರಾಮ ಜಪ

    ಡಿ ಬಾಸ್ ಸ್ಟೆಪ್ಸ್, ಶಂಕರ್ ಮಹಾದೇವನ್ ವಾಯ್ಸ್, ರಾಬರ್ಟ್‍ನಿಂದ ರಾಮ ಜಪ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಜೈ ಶ್ರೀ ರಾಮ್ ಹಾಡಿನ ಇನ್ನೊಂದು ಶೈಲಿಯನ್ನು ಬಿಡುಗಡೆ ಮಾಡಿದೆ. ದೋಸ್ತಾ ಮೂಲಕ ಹುಚ್ಚೆಬಿಸಿದ್ದ ಚಿತ್ರ ತಂಡ, ಇದೀಗ ರಾಮನನ್ನು ಜಪಿಸುವಂತೆ ಮಾಡಿದೆ.

    ಈ ಮೂಲಕ ರಾಮನವಮಿಗೆ ರಾಬರ್ಟ್ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದ್ದು, ಜೈ ಶ್ರೀರಾಮ ಹಾಡಿನ ಮುಂದುವರಿದ ಭಾಗವನ್ನು ಮೇಕಿಂಗ್ ವಿಡಿಯೋ ಸಮೇತ ಬಿಡುಗಡೆ ಮಾಡಿದೆ. ಇಂದು ಬೆಳಗ್ಗೆ 10.5ಕ್ಕೆ ಹಾಡು ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ಈ ಹಿಂದೆ ದೋಸ್ತಾ ಹಾಡಿನ ಮೂಲಕ ಸ್ನೇಹಿತನ ಮಹತ್ವವನ್ನು ಸಾರಿದ್ದ ರಾಬರ್ಟ್ ಚಿತ್ರತಂಡ ಇದೀಗ ಜೈ ಶ್ರೀರಾಮ ಮೂಲಕ ರಾಮನ ಘಾತೆಯನ್ನು ಪರಿಚಯಿಸಿದೆ.

    ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಶಂಕರ್ ಮಹದೇವನ್ ಹಾಡಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ. ರಾಮಾಯ ರಾಮ ಭದ್ರಾಯ, ರಾಮಚಂದ್ರಾಯ ವೇದಸೇ……ರಘುನಾಥಾಯ……ಸೀತಾಯ ಪತಯೇ ನಮಃ ಎಂಬ ಸಾಲುಗಳಿಂದ ಹಾಡು ಪ್ರಾರಂಭವಾಗುತ್ತದೆ. ರಾಮ ನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು ಎಂದು ಮತ್ತೆ ಮುಂದುವರಿಯುತ್ತದೆ.

    ಹಾಡಿಗೆ ಮೇಕಿಂಗ್ ವಿಡಿಯೋ ಸೇರಿಸಿದ್ದು, ಡಿ ಬಾಸ್ ಸ್ಟೆಪ್ಸ್ ಸಹ ಕೇಂದ್ರೀಕರಿಸಲಾಗಿದೆ. ಅಲ್ಲದೆ ಅರ್ಜುನ್ ಜನ್ಯಾ ಪಿಯಾನೋ ನುಡಿಸುವ ದೃಶ್ಯ ಇದೆ. ಅಲ್ಲಲ್ಲಿ ಆರ್ಕೆಸ್ಟ್ರಾ ಬರುತ್ತದೆ. ಶಂಕರ್ ಮಹದೇವನ್ ಹಾಡುವ ಶೈಲಿಯನ್ನು ತೋರಿಸಲಾಗಿದೆ. ಶಂಕರ್ ಮಹದೇವನ್ ಏರು ಧ್ವನಿಯಲ್ಲಿ ಹಾಡುತ್ತಿದ್ದರೆ, ದೇಹದಲ್ಲಿ ಒಂದು ರೀತಿಯ ಸಂಚಲನವೇ ಸೃಷ್ಟಿಯಾಗುತ್ತದೆ. ಬೀಟ್ಸ್ ಸೌಂಡ್, ರಿಧಂ ಪ್ಯಾಡ್ ಹೊಂದಾಣಿಕೆ ಜುಗಲ್ಬಂಧಿಯಂತಿದೆ.

  • ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಬಿಜೆಪಿ ಸಚಿವ ಒತ್ತಾಯ – ವಿಡಿಯೋ ವೈರಲ್

    ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಬಿಜೆಪಿ ಸಚಿವ ಒತ್ತಾಯ – ವಿಡಿಯೋ ವೈರಲ್

    ರಾಂಚಿ: ಜಾರ್ಖಂಡ್‍ನ ಬಿಜೆಪಿ ಮಂತ್ರಿಯೊಬ್ಬರು ಕಾಂಗ್ರೆಸ್‍ನ ಮುಸ್ಲಿಂ ಶಾಸಕನಿಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿರುವ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜಾರ್ಖಂಡ್ ವಿಧಾನಸಭೆ ಕಟ್ಟಡದ ಮುಂಭಾಗವೇ ಈ ಘಟನೆ ನಡೆಸದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಟೀಕೆ ವ್ಯಕ್ತವಾಗುತ್ತಿದೆ. ‘ಸಹೋದರ ಇರ್ಫಾನ್ ನಾನು ಹೇಳಿದಂತೆ ಜೈ ಶ್ರೀರಾಮ್ ಎಂದು ಜೋರಾಗಿ ಹೇಳು’ವಂತೆ ಬಿಜೆಪಿ ಸಚಿವ ಸಿ.ಪಿ.ಸಿಂಗ್ ಅವರು ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಅವರಿಗೆ ಹೇಳಿಕೊಡುತ್ತಿದ್ದು, ಅಲ್ಲದೆ ಶಾಸಕರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಬಿಜೆಪಿ ಸಚಿವರು ಮುಂದುವರಿದು, ಅವನ ಪೂರ್ವಜರು ರಾಮ್ ವಾಲೆ(ಹಿಂದೂಗಳು)ಯೇ ಹೊರತು ಬಾಬರ್ ವಾಲೆ(ಮುಸ್ಲಿಂ)ಯಲ್ಲ ಎಂದು ಶಾಸಕರಿಗೆ ಸ್ಪಷ್ಟಪಡಿಸುತ್ತಾರೆ. ಇದಕ್ಕೆ ಶಾಸಕ ಅನ್ಸಾರಿ ಪ್ರತಿಕ್ರಿಯಿಸಿ, ನೀವು ರಾಮನ ಹೆಸರನ್ನು ಬೆದರಿಸಲು ಬಳಸುತ್ತೀರಿ, ಈ ಮೂಲಕ ರಾಮನ ಹೆಸರಿಗೆ ಅವಮಾನ ಮಾಡುತ್ತೀರಿ. ಇಂತಹ ವಿಷಯಗಳಿಗೆ ಸಮಯ ನೀಡುವ ಬದಲು ಉದ್ಯೋಗ ಸೃಷ್ಟಿ, ವಿದ್ಯುತ್, ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಊರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಮಯ ನೀಡಿ ಎಂದು ತಿರುಗೇಟು ನೀಡಿದ್ದಾರೆ.

    ನಾನು ನಿಮ್ಮನ್ನು ಹೆದರಿಸಲು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಿಮ್ಮ ಪೂರ್ವಜರು ‘ಜೈ ಶ್ರೀರಾಮ್’ ಎಂದು ಜಪಿಸುತ್ತಿದ್ದುದನ್ನು ಮರೆಯಬೇಡಿ. ತೈಮೂರ್, ಬಾಬರ್, ಘಜ್ನಿ ನಿಮ್ಮ ಪೂರ್ವಜರಲ್ಲ. ನಿಮ್ಮ ಪೂರ್ವಜರು ಶ್ರೀರಾಮನ ಅನುಯಾಯಿಗಳು ಎಂದು ಸಚಿವ ಸಿಂಗ್ ಹೇಳಿದ್ದಾರೆ.

    ಸಿ.ಪಿ.ಸಿಂಗ್ ಜಾರ್ಖಂಡ್‍ನ ಬಿಜೆಪಿ ಸರ್ಕಾರದ ನಗರಾಭಿವೃದ್ಧಿ, ವಸತಿ ಹಾಗೂ ಸಾರಿಗೆ ಸಚಿವರಾಗಿದ್ದು, ಇರ್ಫಾನ್ ಅನ್ಸಾರಿ ಜಮ್ತಾರಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಈ ಕುರಿತು ರಾಜ್ಯ ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದು, ಈ ಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.

    ಕಳೆದ ತಿಂಗಳು ಜಾರ್ಖಂಡ್‍ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಹಿಂಸಿಸಲಾಗಿತ್ತು. ಅಲ್ಲದೆ, ಗಂಟೆಗಟ್ಟಲೇ ಆತನನ್ನು ಥಳಿಸಲಾಗಿತ್ತು. ಹಲ್ಲೆ ಮಾಡಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದ. ಆದರೆ, ಸಾವನ್ನಪ್ಪಿದ 24 ಯುವಕ ಬೈಕ್ ಕದಿಯಲು ಯತ್ನಿಸಿದ್ದ ಎಂದು ಆರೋಪ ಕೇಳಿ ಬಂದಿತ್ತು.

  • ಪರಮೇಶ್ವರ್ ಭಾಷಣದ ವೇಳೆ ಜೈ ಶ್ರೀರಾಮ್ ಘೋಷಣೆ

    ಪರಮೇಶ್ವರ್ ಭಾಷಣದ ವೇಳೆ ಜೈ ಶ್ರೀರಾಮ್ ಘೋಷಣೆ

    ಬೆಂಗಳೂರು: ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಭಾಷಣದ ವೇಳೆಯೂ ವ್ಯಕ್ತಿಯೊಬ್ಬ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಜೈ ಶ್ರೀರಾಮ್ ಎಂದು ಕೂಗಿದ್ದಾನೆ. ಇವತ್ತು ಗಾಂಧಿ ಎಂದರೆ ಯಾರು? ಶ್ರೀರಾಮ ಅಂದರೆ ಯಾರು ಎಂದು ಕೇಳುವ ಸನ್ನಿವೇಶ ಇದೆ ಎಂದು ಪರಮೇಶ್ವರ್ ಹೇಳುತ್ತಿದ್ದಂತೆ ಸಭಿಕರ ಮಧ್ಯದಿಂದ ವ್ಯಕ್ತಿಯೋರ್ವ ಜೈ ಶ್ರೀರಾಮ್ ಎಂದು ಕೂಗಿದ್ದಾನೆ. ತಕ್ಷಣ ಪ್ರತಿಕ್ರಯಿಸಿದ ಡಿಸಿಎಂ,”ಇಷ್ಟೊತ್ತು ಚೆನ್ನಾಗಿದ್ದೆಯಲ್ಲಪ್ಪ, ಏನಾಯ್ತು ನಿನಗೆ” ಎಂದು ಪ್ರಶ್ನಿಸಿದ್ದಾರೆ. ಪರಮೇಶ್ವರ್ ಮಾತಿಗೆ ಜನ ನಗೆಗಡಲಲ್ಲಿ ತೇಲಿದರು.

    ಹೆಚ್ಚು ಜನರಿಗೆ ಪ್ರಶಸ್ತಿ: ಮುಂದಿನ ತಿಂಗಳು ನಮ್ಮ ಮೇಯರ್ ಜಯಂತಿ ಆಚರಿಸುತ್ತಾರೆ. ಬಹುದೊಡ್ಡ ಜಯಂತಿ ಆಚರಣೆ ಮಾಡುತ್ತಾರೆ. ಅದ್ಧೂರಿ ಜಯಂತಿ ಆಚರಿಸಿ 500 ಪ್ರಶಸ್ತಿ ನೀಡುತ್ತಾರೆ. ಸಾಧಕರಿರುತ್ತಾರೆ, ಆದರೆ ಅಷ್ಟು ಮಂದಿಗೆ ಕೆಂಪೇಗೌಡ ಪ್ರಶಸ್ತಿ ನೀಡುವುದು ಸರಿಯೇ. ಈ ಬಾರಿ ಕಡಿಮೆ ಮಾಡಲು ಸೂಚಿಸಿದ್ದೇನೆ. ಏನು ಮಾಡುತ್ತಾರೋ ನೋಡೋಣ ಎಂದು ಹೇಳಿದರು.

    ಕೆಂಪೇಗೌಡರ ಹೆಸರಿಡಿ: ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಮಾತನಾಡಿ, ನಾವು ಪ್ರತಿ ಬಾರಿಯ ಜಯಂತಿಯ ವೇಳೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಆದರೆ, ಆ ಬೇಡಿಕೆಗಳು ಹಾಗೇ ಉಳಿಯುತ್ತವೆ ಈ ಬಾರಿ ಹಾಗಾಗಬಾರದು, ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಬೇಕು ಎಂದು ಮನವಿ ಮಾಡಿದರು.

    ಕುಮಾರಸ್ವಾಮಿ ಮೆಟ್ರೋ ಯೋಜನೆ ತಂದವರು, ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಪಠ್ಯ ಪುಸ್ತಕದಲ್ಲಿ ಕೆಂಪೇಗೌಡರ ಪಠ್ಯ ಅಳವಡಿಸಬೇಕು. ನಗರದಲ್ಲಿ ವಿಶ್ವವೇ ತಿರುಗಿನೋಡುವಂತಹ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು. ಎಷ್ಟೇ ನೋವು ಬಂದರೂ ಮುಖ್ಯಮಂತ್ರಿಗಳು ಕಾಳಜಿವಹಿಸಬೇಕು. ಡಿಕೆ ಶಿವಕುಮಾರ್ ಅವರು ಸಿಎಂ ಆರೋಗ್ಯದ ಕಾಳಜಿವಹಿಸಬೇಕು. ಕುಮಾರಸ್ವಾಮಿ ಅವರು ಹೃದಯ ವೈಶಾಲ್ಯತೆ ಇರುವ ವ್ಯಕ್ತಿ ಎಂದರು.

    ಇದೇ ವೇಳೆ, ಆಡಳಿತ ನಡೆಸುವವರ ಭಾಷೆ ಹುಷಾರಾಗಿರಬೇಕು, ಮತ್ತೊಬ್ಬರನ್ನು ನೋಯಿಸುವ ಭಾಷೆಯಾಗಬಾರದು, ಯಾವುದನ್ನೂ ಬಯಸದೆ ಕೆಲಸ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿಗೂ ಶ್ರೀಗಳು ಸಲಹೆ ನೀಡಿದರು.

  • ದೀದಿಗೆ 10 ಲಕ್ಷ ‘ಜೈ ಶ್ರೀರಾಮ್’ ಕಾರ್ಡ್

    ದೀದಿಗೆ 10 ಲಕ್ಷ ‘ಜೈ ಶ್ರೀರಾಮ್’ ಕಾರ್ಡ್

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಪೋಸ್ಟ್ ಕಾರ್ಡುಗಳನ್ನು ಕಳುಹಿಸಲಾಗುವುದು ಎಂದು ಬಿಜೆಪಿ ನಾಯಕ ಅರ್ಜುನ್ ಸಿಂಗ್ ದೀದಿಗೆ ತಿರುಗೇಟು ನೀಡಿದ್ದಾರೆ.

    ತೃಣಮೂಲ ಕಾಂಗ್ರೆಸ್ಸಿನ ಶಾಸಕರಾಗಿದ್ದ ಅರ್ಜುನ್ ಸಿಂಗ್ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಯಾಗಿದ್ದರು. ಕೋಲ್ಕತ್ತಾದಲ್ಲಿ ಕೆಲ ದಿನಗಳ ಹಿಂದೆ ಟಿಎಂಸಿಯ ಸಭೆಯ ವೇಳೆ `ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ಘಟನೆ ಖಂಡಿಸಿ ದೀದಿ ನಿವಾಸಕ್ಕೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಅಂಚೆ ಕಾರ್ಡುಗಳನ್ನು ಬಿಜೆಪಿ ನಾಯಕರು ಕಳುಹಿಸಲಿದ್ದಾರೆ ಎನ್ನಲಾಗಿದೆ.

    ಅರ್ಜುನ್ ಸಿಂಗ್ ಹಾಗೂ ಬಿಜೆಪಿ ಮುಖಂಡ ಮುಕುಲ್ ರಾಯ್ ಮಗ ಸುಬ್ರಂಗ್ಶು ರಾಯ್ ಟಿಎಂಸಿ ತೊರೆದು ಬಿಜೆಪಿಗೆ ಸೇರಿದ ಬಳಿಕ ಈ ಪ್ರದೇಶದಲ್ಲಿ ತುಂಬಾ ತೊಂದರೆ ನೀಡುತ್ತಿದ್ದಾರೆ ಎಂದು ಟಿಎಂಸಿ ಮುಖಂಡ ಜ್ಯೋತಿಪ್ರಿಯಾ ಮಲಿಕ್ ಆರೋಪಿಸಿದ್ದಾರೆ. ಮಲ್ಲಿಕ್ ಮತ್ತಿತರು ಸಭೆ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಪರಿಸ್ಥಿತಿ ಕೈ ಮೀರಿದ್ದು, ಪೊಲೀಸರು ಲಾಠಿ ಚಾರ್ಚ್ ನಡೆಸಿರುವುದಾಗಿ ತಿಳಿದುಬಂದಿದೆ.

    ಬಂಗಾಳದಲ್ಲಿ ಇಂತಹ ಸಂಸ್ಕೃತಿಯನ್ನು ನೋಡಿರಲಿಲ್ಲ, ಇದು ಬಿಜೆಪಿಯ ಸಂಸ್ಕೃತಿಯಾಗಿದೆ ಎಂದು ಮಲಿಕ್ ಹೇಳಿದ್ದು, ಪ್ರತಿಭಟನಾಕಾರರು ತಮ್ಮ ಕಾರಿನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಲಿಕ್ ಆರೋಪಿಸಿದರು.

  • ಜೈ ಶ್ರೀರಾಮ ಹೇಳದ ಮುಸ್ಲಿಂ ಯುವಕನ ಮೇಲೆ ಹಲ್ಲೆ

    ಜೈ ಶ್ರೀರಾಮ ಹೇಳದ ಮುಸ್ಲಿಂ ಯುವಕನ ಮೇಲೆ ಹಲ್ಲೆ

    ಚಂಡೀಗಢ (ಗುರುಗ್ರಾಮ): ಜೈ ಶ್ರೀರಾಮ ಘೋಷಣೆ ಹೇಳದಕ್ಕೆ ಮತ್ತು ಬೀದಿಯಲ್ಲಿ ಟೋಪಿ ಧರಿಸಿ ತಿರುಗಾಡಿದ ಮುಸ್ಲಿಂ ಯುವಕನ ಮೇಲೆ ಕೆಲ ಪುಡಾರಿಗಳು ಹಲ್ಲೆ ನಡೆಸಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪುಡಾರಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

    ಮೊಹಮ್ಮದ್ ಬರಕತ್ ಆಲಮ್ ಹಲ್ಲೆಗೊಳಗಾದ ಯುವಕ. ಶನಿವಾರ ರಾತ್ರಿ ನಮಾಜ್ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಕೆಲ ಯುವಕರನ್ನು ಆಲಮ್ ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ರಂಜಾನ್ ಮಾಸವಾಗಿದ್ದರಿಂದ ಆಲಮ್ ಉಪವಾಸ ನಿರತನಾಗಿದ್ದರು. ಸಂಜೆ ನಮಾಜ್ ಬಳಿಕವೂ ಸರಿಯಾಗಿ ಆಹಾರ ಸೇವಿಸದ ಆಲಮ್ ರಾತ್ರಿ ಬೇಗ ಬೇಗ ಮನೆಗೆ ಹಿಂದಿರುಗುತ್ತಿದ್ದ ವೇಳೆ ಹಲ್ಲೆ ನಡೆದಿದೆ.

    ಈ ಕುರಿತು ರಾಷ್ಟ್ರೀಯ ವಾಹಿನಿ ಜೊತೆ ಮಾತನಾಡಿರುವ ಆಲಮ್, ಮಾರ್ಗ ಮಧ್ಯೆ ನಾಲ್ವರು ಬೈಕ್ ಸವಾರರು ಸೇರಿದಂತೆ ಮತ್ತಿಬ್ಬರು ನನ್ನನ್ನು ಅಡ್ಡಗಟ್ಟಿದರು. ಆರು ಜನರಲ್ಲಿ ಓರ್ವ ಈ ಪ್ರದೇಶದಲ್ಲಿ ಟೋಪಿ ಧರಿಸಿ ಹೋಗಬಾರದು ಎಂದು ಹೇಳಿದ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಹಲ್ಲೆಗೆ ಮುಂದಾದರು. ಈ ಗುಂಪಿನಲ್ಲಿದ್ದ ಮತ್ತೋರ್ವ ಜೈ ಶ್ರೀರಾಮ್ ಮತ್ತು ಭಾರತ್ ಮಾತಾ ಕೀ ಜೈ ಘೋಷಣೆ ಹೇಳಲು ಒತ್ತಾಯಿಸಿದರು. ನಾನು ಘೋಷಣೆ ಕೂಗದೇ ಇದ್ದಾಗ ತಲೆಯ ಮೇಲಿನ ಟೋಪಿ ರಸ್ತೆಗೆ ಎಸೆದು ಎಲ್ಲರೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ.

    ಕೆಲವರು ನನ್ನ ಶರ್ಟ್ ಹರಿದು, ಧರ್ಮ ನಿಂದನೆ ಮಾಡಿದರು. ಭಯಬೀತನಾದ ನಾನು ನಡುಗುತ್ತಾ ಸ್ಥಳದಲ್ಲಿದ್ದ ಪೌರ ಕಾರ್ಮಿಕರನ್ನು ಸಹಾಯಕ್ಕೆ ಅಂಗಲಾಚಿದೆ. ಆದ್ರೆ ಯಾರು ನನ್ನ ಸಹಾಯಕ್ಕೆ ಮುಂದಾಗಲಿಲ್ಲ. ಕೊನೆಗೆ ಸ್ಥಳೀಯ ಮಸೀದಿಯ ಕೆಲವರಿಗೆ ಹಾಗೂ ಕುಟುಂಬಸ್ಥರಿಗೆ ಹಲ್ಲೆಯ ವಿಷಯ ತಿಳಿಸಿದೆ. ಇತ್ತ ಆರು ಜನರು ಹಲ್ಲೆಯ ಬಳಿಕ ನಾಪತ್ತೆಯಾದರು ಎಂದು ಆಲಮ್ ಹೇಳುತ್ತಾರೆ.

    ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಮಸೀದಿಯ ಸಿಬ್ಬಂದಿ ಆಲಮ್ ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಪೊಲೀಸರು ಆಲಮ್ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದಲ್ಲಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಕೆಲ ಬೈಕ್ ಗಳು ನಿಂತಿರೋದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಆಲಮ್ ವಿಶ್ರಾಂತಿ ಪಡೆಯುತ್ತಿದ್ದಾರೆ.