Tag: jai shriram

  • ಸದನದಲ್ಲಿ ಜೈಶ್ರೀರಾಮ್, ಜೈಭೀಮ್ ಸದ್ದು- ಕೈ ಶಾಸಕನಿಗೆ ಕೇಸರಿ ಶಾಲು ಹಾಕಿದ್ರು ಮುನಿರತ್ನ

    ಸದನದಲ್ಲಿ ಜೈಶ್ರೀರಾಮ್, ಜೈಭೀಮ್ ಸದ್ದು- ಕೈ ಶಾಸಕನಿಗೆ ಕೇಸರಿ ಶಾಲು ಹಾಕಿದ್ರು ಮುನಿರತ್ನ

    ಬೆಂಗಳೂರು: ರಾಜ್ಯದಲ್ಲಿ ಧ್ವಜ ದಂಗಲ್ ತೀವ್ರಗೊಂಡಿರುವ ಹೊತ್ತಲ್ಲಿಯೇ ವಿಧಾನಮಂಡಲ ಅಧಿವೇಶನ ಶುರುವಾಗಿದೆ.

    ಮೊದಲ ದಿನವಾದ ಇಂದು ಜಂಟಿ ಅಧಿವೇಶನದಲ್ಲಿ ಕೇಸರಿಧಾರಿ ಬಿಜೆಪಿಗರು ಜೈಶ್ರೀರಾಮ್ (Jai Shri Ram) ಘೋಷಣೆ ಮೊಳಗಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರು ಭಾರತ್ ಮಾತಾಕಿ ಜೈ, ಜೈ ಭೀಮ್ (Jai Bheem) ಎಂಬ ಘೋಷಣೆಗಳನ್ನು ಕೂಗಿದ್ದಾರೆ. ರಾಜ್ಯಪಾಲರು ಭಾಷಣ ಮುಗಿಸುವಾಗ ಬೋಲೋ ಭಾರತ್ ಮಾತಾಕಿ ಜೈ ಅಂದ್ರು. ಆಗ ಎಲ್ರೂ ಭಾರತ್ ಮಾತಾಕಿ ಜೈ ಎಂದ್ರು.

    ಈ ಬೆನ್ನಲ್ಲೇ ಬಿಜೆಪಿ ಶಾಸಕರು ಜೈಶ್ರೀರಾಮ್ ಎಂದು ಮೂರ್ನಾಲ್ಕು ಬಾರಿ ಕೂಗಿದ್ರು. ಆಗ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕರು, ಭಾರತ್ ಮಾತಾಕಿ ಜೈ, ಜೈ ಭೀಮ್, ಜೈ ಬಸವಣ್ಣ ಎಂಬ ಘೋಷಣೆ ಮೊಳಗಿಸಿದ್ರು. ಇದಕ್ಕೂ ಮುನ್ನ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಸದನಕ್ಕೆ ಬಂದ್ರು. ಜೈಶ್ರೀರಾಮ್ ಎನ್ನುತ್ತಲೇ ಂದು ಘೋಷಣೆ ಮಾಡುತ್ತಲೇ ಮೊಗಸಾಲೆ ಪ್ರವೇಶಿಸಿದ್ರು.

    ಈ ವೇಳೆ ಅಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಶಾಸಕ ಗಣಿಗ ರವಿಗೆ ಮಾಜಿ ಮಂತ್ರಿ ಮುನಿರತ್ನ (Muniratna) ಕೇಸರಿ ಶಾಲು ಹಾಕಿದ್ರು. ಇದಕ್ಕೆ ಗಣಿಗ ರವಿ ಆಕ್ಷೇಪಿಸಲಿಲ್ಲ. ಕೇಸರಿ ಶಾಲಿನೊಂದಿಗೆ ಮೊಗಸಾಲೆಗೆ ತೆರಳಿದ್ರು. ಆದ್ರೆ, ಎಸ್‍ಟಿ ಸೋಮಶೇಖರ್ ಮಾತ್ರ ಕೇಸರಿ ಶಾಲು ಹಾಕಿಕೊಳ್ಳಲಿಲ್ಲ.. ಇದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಯ್ತು.ಬಿಜೆಪಿಗರ ಕೇಸರಿ ರಾಜಕೀಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಎಂದಿನ ಶೈಲಿಯಲ್ಲಿ ಕೌಂಟರ್ ನೀಡಿದ್ರು.

  • ರೀಲ್ಸ್‌ನಲ್ಲಿ ಜೈ ಶ್ರೀರಾಮ್‌ ಎಂದ  ಮುಸ್ಲಿಂ ಯುವಕ, ಯುವತಿಗೆ ಬೆದರಿಕೆ – ಆರೋಪಿ ಅರೆಸ್ಟ್‌

    ರೀಲ್ಸ್‌ನಲ್ಲಿ ಜೈ ಶ್ರೀರಾಮ್‌ ಎಂದ ಮುಸ್ಲಿಂ ಯುವಕ, ಯುವತಿಗೆ ಬೆದರಿಕೆ – ಆರೋಪಿ ಅರೆಸ್ಟ್‌

    ಬೆಂಗಳೂರು: ರೀಲ್ಸ್‌ನಲ್ಲಿ ಜೈ ಶ್ರೀರಾಮ್ (Jai Shriram) ಎಂದು ಘೋಷಣೆ ಕೂಗಿದ್ದಕ್ಕೆ  ಸಿಟ್ಟಾಗಿ ಯುವಕ, ಯುವತಿಗೆ ಬೆದರಿಕೆ ಹಾಕಿದ್ದ  ಆರೋಪಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

    ನಯಾಜ್ ಖಾನ್ ಬಂಧಿತ ಆರೋಪಿ. ಈತ ಕೋಣನಕುಂಟೆಯವನಾಗಿದ್ದು, ವೃತ್ತಿಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾನೆ. ಮುಸ್ಲಿಂ ಯುವಕ, ಯುವತಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ರೀಲ್ಸ್ ಮಾಡಿದ್ದರು.  ಇದನ್ನೂ ಓದಿ: ಪರಿಷತ್ ನೂತನ ಸದಸ್ಯರಾಗಿ ಮೂವರು ನಾಯಕರಿಂದ ಪ್ರಮಾಣ ವಚನ ಸ್ವೀಕಾರ

    ಈ ರೀಲ್ಸ್‌ ವೈರಲ್‌ ಆದ ಬೆನ್ನಲ್ಲೇ ಕುಪಿತಗೊಂಡ ಆರೋಪಿ ನಯಾಜ್ ಹಾಕಿಕೊಂಡಿರೋ ಬುರ್ಕಾ ತೆಗೆದು ಜೈ ಶ್ರೀರಾಮ್ ಎಂದು ರೀಲ್ಸ್ ಮಾಡುವಂತೆ ತಾಕೀತು ಮಾಡಿದ್ದಲ್ಲದೇ, ಯುವಕ ಯುವತಿಗೆ ಬೆದರಿಕೆ ಹಾಕಿ ವಿಡಿಯೋ ಮಾಡಿದ್ದ. ಆರೋಪಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ವಯಂಪ್ರೇರಿತ  ಪ್ರಕರಣ ದಾಖಲಿಸಿಕೊಂಡಿದ್ದ ತಲಘಟ್ಟಪುರ ಪೊಲೀಸರು ಆರೋಪಿಯನ್ನ ಬಂಧಿಸಿ ಬಿಡುಗಡೆ ಮಾಡಿದ್ದಾರೆ.

    ಇದೇ ಮಾದರಿಯಲ್ಲಿ ಕಳೆದ ವಾರ ಅನ್ಯ ಧರ್ಮದ ಯುವಕನೊಂದಿಗೆ ಬೈಕ್‌ನಲ್ಲಿ ಗೋವಿಂದಪುರ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವತಿಗೆ ರಷ್ಯಾದಲ್ಲಿ ವೈದಕೀಯ ವಿದ್ಯಾರ್ಥಿಯಾಗಿರೋ ಯುವಕನೋರ್ವ ಬುರ್ಕಾ ತೆಗೆದು ಹೋಗು ಎಂದು ನಡು ರಸ್ತೆಯಲ್ಲಿ ನಿಂದನೆ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಈಸ್ಟ್ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಜಾಕೀರ್ ಅಹಮದ್‌ನನ್ನ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ರಾಜ್ಯ ಬಿಜೆಪಿಗೆ ಬಿಎಲ್ ಸಂತೋಷ್ ಟಾನಿಕ್ – ವಲಸಿಗರ ಪರ ಬ್ಯಾಟಿಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೈ ಶ್ರೀರಾಮ್ ಹೇಳದ ಮುಸ್ಲಿಂ ಬಾಲಕನಿಗೆ ಬೆಂಕಿ ಹಚ್ಚಿದ ನಾಲ್ವರು

    ಜೈ ಶ್ರೀರಾಮ್ ಹೇಳದ ಮುಸ್ಲಿಂ ಬಾಲಕನಿಗೆ ಬೆಂಕಿ ಹಚ್ಚಿದ ನಾಲ್ವರು

    ಲಕ್ನೋ: ನಾಲ್ವರು ಅಪರಿಚಿತ ವ್ಯಕ್ತಿಗಳು 15 ವರ್ಷದ ಬಾಲಕನಿಗೆ ಬೆಂಕಿ ಹಚ್ಚಿದ್ದಾರೆ. ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

    ಬೆಂಕಿ ಹಚ್ಚಿದ ಪರಿಣಾಮ ಬಾಲಕನ ದೇಹ ಶೇ.60ರಷ್ಟು ಸುಟ್ಟು ಹೋಗಿದ್ದು, ಕಾಶಿಯ ಕಬಿರ್ ಚೌರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಸ್ಲಿಂ ಬಾಲಕ ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡು ಆತನಿಗೆ ಬೆಂಕಿ ಹಚ್ಚಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಬಾಲಕ ಎರಡು ರೀತಿಯ ಹೇಳಿಕೆಗಳನ್ನು ನೀಡಿದ್ದಾನೆ. ಮೊದಲು ಆತ, ನಾನು ಮಹಾರಾಜ್ ಪುರ ಗ್ರಾಮಕ್ಕೆ ಓಡಿಕೊಂಡು ಹೋಗುತ್ತಿದ್ದೆ. ಈ ವೇಳೆ ಸಿಕ್ಕ ನಾಲ್ವರು ನನ್ನ ಎಳೆದುಕೊಂಡು ಹೋಗಿ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾನೆ. ಎರಡನೇಯ ಹೇಳಿಕೆಯಲ್ಲಿ ನಾಲ್ವರು ನನ್ನನ್ನಲಿ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯ ಮಾಡಿದ್ದಾರೆ. ನಾನು ಅದನ್ನು ಹೇಳದಿದ್ದಕ್ಕೆ ನನ್ನನ್ನು ಥಳಿಸಿ ಬೆಂಕಿ ಹಚ್ಚಿದ್ದಾರೆ ಎಂದಿದ್ದಾನೆ ಅಂತ ಚಂದೌಲಿಯ ಎಸ್ ಪಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಅಲ್ಲದೆ ಇನ್ನೊಂದೆಡೆ ನಾಲ್ವರು ಬಂದು ನನ್ನನ್ನು ಸೇತುವೆಯ ಬಳಿಯಿಂದ ಬೈಕಿನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಅದರಲ್ಲಿ ಇಬ್ಬರು ನನ್ನ ಎರಡೂ ಕೈಗಳನ್ನು ಕಟ್ಟಿದ್ದಾರೆ. ಮೂರನೇಯವನು ನನ್ನ ಮೇಲೆ ಸೀಮೆಎಣ್ಣೆ ಸುರಿದಿದ್ದಾನೆ. ನಂತರ ನನ್ನ ಮೇಲೆ ಬೆಂಕಿ ಹಚ್ಚಿದ್ದಾರೆ. ನಂತರ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದ್ದಾನೆ.

    ಆದರೆ ಪೊಲೀಸರು ಮಾತ್ರ ಜೈಶ್ರೀರಾಮ್ ಹೇಳದ್ದಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ. ಸದ್ಯ ಬಾಲಕನ ಹೇಳಿಕೆಯಿಂದ ಪೊಲೀಸರೇ ಗೊಂದಲಕ್ಕೀಡಾಗಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತದೆ. ಅಲ್ಲದೆ ಬಾಲಕ ತಾನೇ ತಾನೇ ಬೆಂಕಿ ಹಚ್ಚಿಕೊಳ್ಳುತ್ತಿರುವುದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ ಎಂದು ಸಂತೋಷ್ ಕುಮಾರ್ ಹೇಳಿದ್ದಾರೆ.