Tag: Jai Shri Ram

  • ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದು ತಪ್ಪಾ?- ಕರ್ನಾಟಕ ಪೊಲೀಸರ ನಡೆ ಪ್ರಶ್ನಿಸಿದ ಸುಪ್ರೀಂ

    ಮಸೀದಿಯೊಳಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವುದು ತಪ್ಪಾ?- ಕರ್ನಾಟಕ ಪೊಲೀಸರ ನಡೆ ಪ್ರಶ್ನಿಸಿದ ಸುಪ್ರೀಂ

    ನವದೆಹಲಿ: ಮಸೀದಿ ಆವರಣದಲ್ಲಿ ‘ಜೈ ಶ್ರೀರಾಮ್’ (Jai Shri Ram) ಎಂದು ಕೂಗುವುದು ಹೇಗೆ ತಪ್ಪಾಗುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನಿಸಿದೆ. ಈ ವಿಚಾರದಲ್ಲಿ ಕರ್ನಾಟಕ ಪೊಲೀಸರ ನಿಲುವನ್ನು ಪ್ರಶ್ನೆ ಮಾಡಿದೆ.

    ದಕ್ಷಿಣ ಕನ್ನಡದ ಮಸೀದಿ (Mosque) ಆವರಣಕ್ಕೆ ನುಗ್ಗಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ ಆರೋಪಿಗಳ ಗುರುತು ಪತ್ತೆ ಹಚ್ಚಿದ್ಹೇಗೆ? ಅವರು ನಿರ್ದಿಷ್ಟ ಧಾರ್ಮಿಕ ನುಡಿಗಟ್ಟು ಅಥವಾ ಹೆಸರನ್ನು ಕೂಗುತ್ತಿದ್ದರು. ಅದು ಹೇಗೆ ಅಪರಾಧ ಎಂದು ಸುಪ್ರೀಂ ಕೋರ್ಟ್ ಕೇಳಿದೆ. ಇದನ್ನೂ ಓದಿ: ಸಂಸತ್‌ಗೆ ಪ್ಯಾಲೆಸ್ತೀನ್ ಬ್ಯಾಗ್‌ ಹಾಕಿಕೊಂಡು ಬಂದ ಪ್ರಿಯಾಂಕಾ – ಎಲ್ಲಾ ಸುದ್ದಿಗಾಗಿ ಎಂದ ಬಿಜೆಪಿ ಸಂಸದ

    ಆರೋಪಿಗಳ ಗುರುತು ಖಾತ್ರಿಪಡಿಸಿಕೊಳ್ಳುವ ಮುನ್ನ ಸಿಸಿಟಿವಿ ಇಲ್ಲವೇ ಇನ್ನಾವುದೇ ಪುರಾವೆಗಳನ್ನು ಪರಿಶೀಲಿಸಲಾಗಿದೆಯಾ? ಈ ಬಗ್ಗೆ ವರದಿ ನೀಡಿ ಎಂದು ರಾಜ್ಯ ಸರ್ಕಾರವನ್ನು ಜಸ್ಟೀಸ್ ಪಂಕಜ್ ಮಿತ್ತಲ್, ಸಂದೀಪ್ ಮೆಹ್ತಾ ಅವರಿದ್ದ ಪೀಠ ಕೇಳಿದೆ.

    ದಕ್ಷಿಣ ಕನ್ನಡದ ಐತ್ತೂರಿನ ಜುಮ್ಮ ಮಸೀದಿಗೆ ನುಗ್ಗಿದ್ದ ಕೀರ್ತನ್ ಮತ್ತು ಸಚಿನ್, ಜೈ ಶ್ರೀರಾಮ್ ಎಂದು ಕೂಗಿ ಬ್ಯಾರಿಗಳನ್ನು ಶಾಂತಿಯಿಂದ ಬದುಕಲು ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ ಅಂತಾ ಆರೋಪಿಸಲಾಗಿತ್ತು. ಈ ಸಂಬಂಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಇಬ್ಬರನ್ನು ಬಂಧಿಸಿದ್ದರು. ಆದರೆ, ಪ್ರಕರಣ ರದ್ದು ಕೋರಿ ಇಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನು ಮಾನ್ಯ ಮಾಡಿದ ನಾಗಪ್ರಸನ್ನ ಅವರಿದ್ದ ಪೀಠ, ಕೇಸ್ ರದ್ದು ಮಾಡಿದ್ದರು. ಇದನ್ನು ಪ್ರಶ್ನಿಸಿ ಹೈದರ್ ಆಲಿ ಎನ್ನುವವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜನವರಿಯಲ್ಲಿ ಮುಂದಿನ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಆನೆ ದಾಳಿ ತಡೆಗೆ ಕಾಂಪಾ ಅನುದಾನ – ಡಾ. ಸಿ.ಎನ್.ಮಂಜುನಾಥ್ ಮನವಿ

  • ಬೀದರ್‌ ಎಂಜಿನಿಯರಿಂಗ್ ಕಾಲೇಜಿನಿಂದ 19 ವಿದ್ಯಾರ್ಥಿಗಳು ಅಮಾನತು

    ಬೀದರ್‌ ಎಂಜಿನಿಯರಿಂಗ್ ಕಾಲೇಜಿನಿಂದ 19 ವಿದ್ಯಾರ್ಥಿಗಳು ಅಮಾನತು

    ಬೀದರ್‌: ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ (GND Engineering College Bidar) ನಡೆದ ಗುಂಪು ಸಂಘರ್ಷದಲ್ಲಿ ಭಾಗಿಯಾಗಿದ್ದ 19 ವಿದ್ಯಾರ್ಥಿಗಳನ್ನು  ಕಾಲೇಜಿನಿಂದ ಅಮಾನತು ಮಾಡಲಾಗಿದೆ.

    ಆಂತರಿಕ ವಿಚಾರಣೆ ಮುಗಿಯುವವರೆಗೆ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದ್ದು ಈಗಾಗಲೇ ಕಾಲೇಜಿನಲ್ಲಿ ಐದು ಜನರ ಉಪನ್ಯಾಸಕರ ವಿಚಾರಣೆ ಸಮಿತಿಯನ್ನು ರಚನೆ ಮಾಡಲಾಗಿದೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ಕೊನೆಗೂ ಮಧ್ಯಂತರ ಜಾಮೀನು ಮಂಜೂರು

     

    ಈ ಪ್ರಕರಣದಿಂದ ಕಾಲೇಜು ಆಡಳಿತ ಮಂಡಳಿಗೆ ಬಾರಿ ಮುಜುಗರವಾಗಿತ್ತು. ಈಗ ಕಾಲೇಜಿನ ನಿಯಮದ ಅಡಿಯಲ್ಲಿ ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಆಂತರಿಕ ವಿಚಾರಣೆ ಮಾಡುವ ಉದ್ದೇಶದಿಂದ ಅಮಾನತು ಮಾಡಲಾಗಿದೆ. ಕಾಲೇಜಿನ ಈ ವಿಚಾರಣೆ ಪೊಲೀಸರ ಮುಂದಿನ ವಿಚಾರಣೆಗೆ ಸಹಾಯವಾಗಲಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು – ಡಿಕೆಸು ಪ್ರಾಪರ್ಟಿ ಶ್ಯೂರಿಟಿ

    ಮೇ 29 ರಂದು ಕಾಲೇಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಜೈಶ್ರೀರಾಮ್ ಹಾಡು ಹಾಕಿದ್ದಕ್ಕೆ ಮುಸ್ಲಿಂ ಯುವಕರು ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದು ರಾಜ್ಯಾದ್ಯಂತ ಬಾರಿ ಸುದ್ದಿಯಾಗಿತ್ತು. ಈಗಾಗಲೇ ಗಾಂಧಿಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದುವರಿಸಿದ್ದಾರೆ.

  • ಮಸೀದಿಗಳ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗೋ ಪ್ರಕ್ರಿಯೆ ಶುರು ಮಾಡಬೇಕಾಗುತ್ತೆ ಹುಷಾರ್: ಮುತಾಲಿಕ್

    ಮಸೀದಿಗಳ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗೋ ಪ್ರಕ್ರಿಯೆ ಶುರು ಮಾಡಬೇಕಾಗುತ್ತೆ ಹುಷಾರ್: ಮುತಾಲಿಕ್

    – ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲಿನ ಹಲ್ಲೆ ಖಂಡನೀಯ

    ಬೆಂಗಳೂರು: ಇಲ್ಲಿನ ವಿದ್ಯಾರಣ್ಯಪುರದಲ್ಲಿ ಜೈ ಶ್ರೀರಾಮ್ ಘೋಷಣೆ (Jai Shri Ram) ಕೂಗಿದ್ದಕ್ಕೆ ಹಲ್ಲೆ ನಡೆಸಿದ್ದಕ್ಕೆ ಶ್ರೀರಾಮ ಸೇನೆಯ ಸಂಸ್ಥಾಪಕ ಮತ್ತು ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ.

    ಜೈ ಶ್ರೀರಾಮ್ ಅಂತಾ ಕೂಗಿದ್ದಕ್ಕೆ ಹಿಂದೂ ಯುವಕರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ. ಈ ಘಟನೆ ಖಂಡನೀಯ ಎಂದು ಮುತಾಲಿಕ್ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕಿಡಿ

    ಶ್ರೀರಾಮನವಮಿ ತಲಾತಲಾಂತರದಿಂದ ಮಾಡಿಕೊಂಡು ಬಂದಿರೋ ಹಿಂದೂಗಳ ಪದ್ಧತಿ, ಇದನ್ನ ಪ್ರಶ್ನೆ ಮಾಡೋಕೆ ನೀವ್ಯಾರು? ಮಸೀದಿಗಳ ಮುಂದೆ ಜೈಶ್ರೀರಾಮ್ ಘೋಷಣೆ ಕೂಗೋ ಪ್ರಕ್ರಿಯೆ ಶುರು ಮಾಡಬೇಕಾಗುತ್ತೆ ಹುಷಾರ್. ಇದೇ ರೀತಿ ಪುಂಡಾಟಿಕೆ ಮುಂದುವರೆದ್ರೆ ಬೇರೆ ಬೇರೆ ಪ್ರಕ್ರಿಯೆ ಶ್ರೀರಾಮ ಸೇನೆಯಿಂದ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಈ ಘಟನೆಯನ್ನ ಶ್ರೀರಾಮ ಸೇನೆ ಖಂಡಿಸುತ್ತದೆ. ರಾಮನ ನೆಲದಲ್ಲಿ ಜೈಶ್ರೀರಾಮ್ ಅಂತಾ ಕೂಗದೇ ಇನ್ನೆಲ್ಲಿ ಕೂಗಬೇಕು? ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿರೋ ಮುಸ್ಲಿಂ ಯುವಕರನ್ನ ಬಂಧಿಸಿ ಕಠಿಣಾಥಿ ಕಠಿಣ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

  • ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕಿಡಿ

    ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕಿಡಿ

    ಬೆಂಗಳೂರು: ವಿದ್ಯಾರಣ್ಯಪುರದಲ್ಲಿ ರಾಮನವಮಿ ದಿನದಂದು ಜೈ ಶ್ರೀರಾಮ್ (Jai Shri Ram) ಎಂದು ಘೋಷಣೆ ಕೂಗಿದ್ದನ್ನು ವಿರೋಧಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

    ಸರ್ಕಾರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್ (R.Ashok), ಕಾಂಗ್ರೆಸ್ ಸರ್ಕಾರದಲ್ಲಿ ಯಾವುದು ನಿಷಿದ್ಧ? ಭಾರತ್ ಮಾತಾ ಕೀ ಜೈ ಮತ್ತು ಜೈ ಶ್ರೀರಾಮ್. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದಕ್ಕೆ ಅನುಮತಿ? ಪಾಕಿಸ್ತಾನ ಜಿಂದಾಬಾದ್ ಮತ್ತು ಅಲ್ಲಾಹು ಅಕ್ಬರ್ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

    ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಇಂಥದ್ದೊಂದು ಅಧಿಸೂಚನೆ ಹೊರಡಿಸಿದರೂ ಅಚ್ಚರಿಯಿಲ್ಲ ಎಂದು ಚಾಟಿ ಬೀಸಿದ್ದಾರೆ.

    ಪ್ರಕರಣವನ್ನು ಖಂಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal), ನಿನ್ನೆ ಬೆಂಗಳೂರಿನಲ್ಲಿ ಶ್ರೀರಾಮನವಮಿಯ ಪ್ರಯುಕ್ತ ಕಾರಿನಲ್ಲಿ ಶ್ರೀರಾಮ ಘೋಷಣೆ ಕೂಗುತ್ತ ಹೊರಟಿದ್ದ ಹಿಂದೂಗಳನ್ನು ನಿಲ್ಲಿಸಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಈ ಘಟನೆ ತಾಜಾ ಉದಾಹರಣೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಅಂದಿದ್ದಕ್ಕೆ ಕಿರಿಕ್- ಅಲ್ಲಾಹು ಮಾತ್ರ ಕೂಗಬೇಕು ಅಂತೇಳಿ ಅಟ್ಯಾಕ್

    ಹಿಂದೂ ಹಬ್ಬಗಳಂದು ಬೇರೆ ಕೋಮಿನವರ ಅನುಮತಿ ಕೋರಿ ಘೋಷಣೆ ಕೂಗುವುದು, ಶ್ರೀರಾಮನ ಧ್ವಜ, ಅಲಂಕಾರಿಕ ವಸ್ತುಗಳನ್ನು ಹಾಕಿದರೆ ಕೀಳುವುದು, ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುತ್ತೆ ಅಂತ ಹೇಳುವುದು ಕಾಕತಾಳೀಯವೋ, ಸರ್ಕಾರದಿಂದ ಪ್ರೇರಿತವೋ ಹೇಳಬೇಕು. ಒಟ್ಟಿನಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ಈ ರೀತಿಯಾದ ಹಿಂದೂಗಳ ಮೇಲೆ ಹಲ್ಲೆ ಹೆಚ್ಚಾಗಿ ಒಂದು ಕೋಮಿನವರು ತಮ್ಮ ಪ್ರಾಬಲ್ಯ ಬೀರುತ್ತಿರುವುದು ಸತ್ಯ ಎಂದು ಕಿಡಿಕಾರಿದ್ದಾರೆ.

  • ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

    ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

    ಬೆಂಗಳೂರು: ಜೈ ಶ್ರೀರಾಮ್‌ (Jai Shri Ram) ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿಪ್ರಸಾದ್, ಘಟನೆಗೆ ಸಂಬಂಧಪಟ್ಟಂತೆ ನಾಲ್ವರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಕೂಡ ಮಾಡಲಾಗಿದೆ. ಘಟನೆಯಲ್ಲಿ ನಾಲ್ವರು ಭಾಗಿಯಾಗಿರುವುದು ಗೊತ್ತಾಗಿದೆ. ನಾಲ್ವರಲ್ಲಿ ಇಬ್ಬರು ಅಪ್ರಾಪ್ತರಿದ್ದಾರೆ. ಪ್ರಮುಖ ಆರೋಪಿ ಫರ್ಮಾನ್ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಅಂದಿದ್ದಕ್ಕೆ ಕಿರಿಕ್- ಅಲ್ಲಾಹು ಮಾತ್ರ ಕೂಗಬೇಕು ಅಂತೇಳಿ ಅಟ್ಯಾಕ್

    ತನಿಖೆ ಮುಂದುವರೆದಿದೆ. ಮತ್ತೆ ಯಾರಾದರೂ ಭಾಗಿಯಾಗಿದ್ದಾರಾ ಎಂದು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ಹೋಗುತ್ತಿರಬೇಕಾದರೆ ಕಾರನ್ನ ಗಮನಿಸಿದ್ದಾರೆ. ಕಾರಲ್ಲಿ ಬಾವುಟ ಹಿಡಿದು ಹೋಗ್ತಿರೋದು ನೋಡಿ ವಾಪಸ್‌ ಬಂದಿದ್ದಾರೆ. ಕಾರನ್ನು ಅಡ್ಡ ಹಾಕಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

    A1 ಆರೋಪಿ ಫರ್ಮಾನ್, A2 ಸಮೀರ್ ಹಾಗೂ ಇಬ್ಬರು ಅಪ್ರಾಪ್ತರ ಬಂಧನವಾಗಿದೆ. ತಡರಾತ್ರಿವರೆಗೂ ವಿದ್ಯಾರಣ್ಯಪುರ ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ. ಗಾಂಜಾ ನಶೆಯಲ್ಲಿ ಕಾರು ಅಡ್ಡ ಹಾಕಿ ಗಲಾಟೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಡರಾತ್ರಿಯೇ ಪೊಲೀಸರು ಆರೋಪಿಗಳ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಪ್ರೆಸಿಡೆಂಟ್ ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್- ಚರ್ಚೆಗೆ ಗ್ರಾಸವಾಯ್ತು ರಾಗಾ ಭಾಷಣ

  • ಭರತ್ ಶೆಟ್ಟಿ ವಿರುದ್ಧ ಕೇಸ್ – ಇನ್ಸ್‌ಪೆಕ್ಟರ್‌ ಫೋನ್‌ಕಾಲ್ ಡಿಟೇಲ್ಸ್ ಚೆಕ್ ಮಾಡಿ: ಸದನದಲ್ಲಿ ಅಶೋಕ್ ಆಗ್ರಹ

    ಭರತ್ ಶೆಟ್ಟಿ ವಿರುದ್ಧ ಕೇಸ್ – ಇನ್ಸ್‌ಪೆಕ್ಟರ್‌ ಫೋನ್‌ಕಾಲ್ ಡಿಟೇಲ್ಸ್ ಚೆಕ್ ಮಾಡಿ: ಸದನದಲ್ಲಿ ಅಶೋಕ್ ಆಗ್ರಹ

    – ರಾಮನ ಅವಮಾನಿಸಿದ ಶಿಕ್ಷಕಿ ಮೇಲೆ ಏಕೆ FIR ಹಾಕಿಲ್ಲ – ಭರತ್ ಶೆಟ್ಟಿ ಪ್ರಶ್ನೆ

    ಬೆಂಗಳೂರು: ಮಂಗಳೂರಿನ ಪಾಂಡೇಶ್ವರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಭರತ್ ಶೆಟ್ಟಿ (Bharat Shetty) ವಿರುದ್ಧ ಪ್ರಕರಣ ದಾಖಲಿಸಿದ ಇನ್ಸ್‌ಪೆಕ್ಟರ್‌ ಫೋನ್‌ಕಾಲ್ ಡಿಟೇಲ್ಸ್ ಪರಿಶೀಲನೆ ನಡೆಸುವಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashoka) ಸದನದಲ್ಲಿ ಒತ್ತಾಯಿಸಿದರು.

    ಮಂಗಳೂರಿನಲ್ಲಿ (Mangaluru) ಪ್ರೌಢಶಾಲೆ ಮುಂದೆ ನಿಂತು ಜೈಶ್ರೀರಾಮ್ ಘೋಷಣೆ ಕೂಗಿ, ಕ್ರೈಸ್ತ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಶಾಸಕ ಭರತ್ ಶೆಟ್ಟಿ ಪ್ರಸ್ತಾಪಿಸಿದರು.

    ಈ ವೇಳೆ ಆರ್.ಅಶೋಕ್ ಮಾತನಾಡಿ, ಭರತ್ ಶೆಟ್ಟಿ ಸ್ಥಳದಲ್ಲೇ ಇರಲಿಲ್ಲ ಅಂದ್ಮೇಲೆ ಕೇಸ್ ಹೇಗೆ ಹಾಕ್ತಾರೆ? ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ, ಯಾರ ಚಿತಾವಣೆಯಿಂದ ಕೇಸ್ ಹಾಕಿದ್ದಾರೆ? ಆ ಇನ್ಸ್‌ಪೆಕ್ಟರ್‌ನ (Police Inspector) ಅಮಾನತು ಮಾಡಿ, ಅವರ ಫೋನ್ ಕಾಲ್ ಡಿಟೇಲ್ಸ್ ತೆಗೆಯಿರಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಕ್ರಿಶ್ಚಿಯನ್‌ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ FIR

    ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಭರತ್ ಶೆಟ್ಟಿ, ಪಾಂಡೇಶ್ವರ್ ಪೊಲೀಸ್ ಠಾಣೆಯಲ್ಲಿ ನನ್ನ ಮೇಲೆ, ವೇದವ್ಯಾಸ ಕಾಮತ್ ಮೇಲೆ ಎಫ್‌ಐಐಆರ್ ಹಾಕಿದ್ದಾರೆ. ಒಂದು ಶಾಲೆಯಲ್ಲಿ ಒಬ್ಬ ಶಿಕ್ಷಕಿ 7ನೇ ತರಗತಿ ಮಕ್ಕಳಿಗೆ ಪಾಠ ಮಾಡುವಾಗ ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆ ಅಂತಾ ಪೋಷಕರು ಆರೋಪಿಸಿದ್ರು. ಆಗ ನಾನು ಡಿಡಿಪಿಐಗೆ ವಿಚಾರಣೆ ಮಾಡುವಂತೆ ಆಗ್ರಹಿಸಿದೆ. ಅಲ್ಲಿಂದ ನಾನು ಏರ್‌ಪೋರ್ಟ್ಗೆ ಹೋದರೆ ನಂತರ ವೇದವ್ಯಾಸ ಕಾಮತ್ ಶಾಲೆಯ ಬಳಿಗೆ ಪೋಷಕರ ಜೊತೆ ಹೋಗಿದ್ರು, ಅಲ್ಲಿ ಪ್ರತಿಭಟನೆ ನಡೆದಿದೆ. ಬಳಿಕ ಅಲ್ಲಿ ಶಿಕ್ಷಕಿಯನ್ನ ಅಮಾನತು ಮಾಡಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ನಾನು ಶಾಲೆ ಬಳಿ ಇರಲೇ ಇಲ್ಲ, ಆದ್ರೂ ನನ್ನ ಮೇಲೆ ಎಫ್‌ಐಆರ್ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ವೆಲೆನ್ಸಿಯಾ ಸೇಂಟ್ ಜೆರೋಸಾ ಪ್ರೌಢಶಾಲೆಯ ಶಿಕ್ಷಕಿ ಮೇಲೆ ಎಫ್‌ಐಆರ್ ಏಕೆ ಹಾಕಿಲ್ಲ, ನಮ್ಮ ಮೇಲೆ ಮಾತ್ರ ಏಕೆ ಎಫ್‌ಐಆರ್ ಆಗಿದೆ. ಅದು ಜಾಮೀನು ರಹಿತ ವಾರಂಟ್ ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಕಾಂಗ್ರೆಸ್ ಶಾಸಕರು ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಚಿವ ದಿನೇಶ್ ಗುಂಡೂರಾವ್, ಮಂಗಳೂರಲ್ಲಿ ಹೇಗೆ ಪ್ರಚೋದನೆ ಮಾಡಿಸ್ತಿದ್ದಾರೆ ಅಂತ ಗೊತ್ತಿದೆ. ದೂರು ಕೊಟ್ಟಿದ್ದಕ್ಕೆ ಎಫ್‌ಐಆರ್ ಆಗಿದೆ ಅದರಲ್ಲೇನು ಎಂದು ಕುಟುಕಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಅಧಿವೇಶನಕ್ಕೆ ಬಂದಂತಹ ಶಾಸಕರ ಮೇಲೆ ಎಫ್‌ಐಆರ್ ಹಾಕ್ತಾರೆ ಅಂದರೆ ಹೇಗೆ? ಯಾರೋ ದೂರು ಕೊಟ್ಟರೆ ಶಾಸಕರು ಅಧಿವೇಶನದಲ್ಲಿ ಇದ್ದಾಗ ಎಫ್‌ಐಆರ್ ಹೇಗೆ ಹಾಕ್ತಾರೆ? ಶಾಸಕರ ರಕ್ಷಣೆಗೆ ನೀವು ಬರಬೇಕು ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿಯಿಂದ 2, ಜೆಡಿಎಸ್‌ನಿಂದ 4 ಮಂದಿ ಕಾಂಗ್ರೆಸ್‌ಗೆ ಮತ ಹಾಕಲು ಸಿದ್ದರಿದ್ದಾರೆ: ಡಿಕೆಶಿ

  • ಕ್ರಿಶ್ಚಿಯನ್‌ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ FIR

    ಕ್ರಿಶ್ಚಿಯನ್‌ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ FIR

    ಮಂಗಳೂರು: ಇಲ್ಲಿನ ವೆಲೆನ್ಸಿಯಾ ಸೇಂಟ್‌ ಜೆರೋಸಾ ಪ್ರೌಢಶಾಲೆ ಮುಂದೆ ನಿಂತು ಜೈಶ್ರೀರಾಮ್ (Jai Shri Ram) ಘೋಷಣೆ ಕೂಗಿದ್ದಲ್ಲದೇ, ಕ್ರೈಸ್ತ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕರಾದ ವೇದವ್ಯಾಸ ಕಾಮತ್ (Veda Vyasa Kamath), ಭರತ್ ಶೆಟ್ಟಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಮಾಜಿ ಶಾಸಕ ಐವಾನ್ ಡಿಸೋಜಾ ನೇತೃತ್ವದ ಕಾಂಗ್ರೆಸ್ (Congress) ನಿಯೋಗವು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ‘ಮಿಂಟೋ’ ಆಸ್ಪತ್ರೆಯ ಕರ್ಮಕಾಂಡ – ಆಸ್ಪತ್ರೆಗೆ ಬೀಗ ಹಾಕಿ ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

    ದೂರಿನಲ್ಲಿ ಏನಿದೆ?
    ಮಂಗಳೂರು ನಗರದ ವೆಲೆನ್ಸಿಯಾ ಸೇಂಟ್‌ ಜೆರೋಸಾ ಪ್ರೌಢಶಾಲೆ ಶಿಕ್ಷಕಿ ಸಿಸ್ಟರ್ ಪ್ರಭಾ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವೇಳೆ ಹಿಂದೂ ದೇವರನ್ನು ಅವಮಾನ ಮಾಡಿರುತ್ತಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ. ಆದ್ರೆ ಪ್ರಭಾ ಅವರು ಯಾವುದೇ ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಈ ಬಗ್ಗೆ ಸ್ಥಳೀಯ ಶಾಲಾ ಆಡಳಿತ ಮಂಡಳಿ ಜೊತೆ ವಿಮರ್ಷೆ ಮಾಡದೇ ಶಾಸಕ ವೇದವ್ಯಾಸ ಕಾಮತ್ ಇದೇ ಫೆಬ್ರವರಿ 12 ರಂದು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ 2, ಜೆಡಿಎಸ್‌ನಿಂದ 4 ಮಂದಿ ಕಾಂಗ್ರೆಸ್‌ಗೆ ಮತ ಹಾಕಲು ಸಿದ್ದರಿದ್ದಾರೆ: ಡಿಕೆಶಿ

    ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಬಜರಂಗದಳದ ಮುಖಂಡ ಶರಣ್ ಪಂಪ್ವೆಲ್, ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ಸಂದೀಪ್ ಗರೋಧಿ, ಬಿಜೆಪಿ ಸದಸ್ಯ ಭರತ್ ಕುಮಾರ್ ಶಾಲೆ ಮುಂದೆ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದಾರೆ. ಶಾಲಾ ಗೇಟ್ ಮುಂಭಾಗದಲ್ಲಿ ನಿಂತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಕ್ರಿಶ್ಚಿಯನ್‌ ಧರ್ಮದ ವಿರುದ್ಧ ಮಾತನಾಡಿದ್ದಾರೆ. ಜೊತೆಗೆ ಶಾಲಾ ಆಡಳಿತ ಮಂಡಳಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸುವಂತೆ ಪ್ರಚೋದನೆ ನೀಡಿದ್ದಾರೆ.

    ಅಲ್ಲದೇ ಶಾಲಾ ಆಡಳಿತ ಮಂಡಳಿಗೆ ಬೆದರಿಕೆ ಹಾಕಿದ್ದು, ಹಿಂದೂ-ಕ್ರೈಸ್ತ ಧರ್ಮದ ನಡುವೆ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವಂತೆ ಮಾತನಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಿಯೋಗವು ದೂರಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ರಾಮ ಮಂದಿರಕ್ಕೆ 11 ಕೋಟಿ ದೇಣಿಗೆ ನೀಡಿದ್ದ ವಜ್ರ ಉದ್ಯಮಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್‌

  • ಶ್ರೀರಾಮ ಅವರಪ್ಪನ ಮನೆ ಆಸ್ತಿನಾ? – ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಡಿಕೆಶಿ

    ಶ್ರೀರಾಮ ಅವರಪ್ಪನ ಮನೆ ಆಸ್ತಿನಾ? – ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಡಿಕೆಶಿ

    ಬೆಂಗಳೂರು: ಶ್ರೀರಾಮ ಬಿಜೆಪಿಯವರ (BJP) ಅಪ್ಪನ ಮನೆ ಆಸ್ತಿನಾ ಎಂದು ಹೇಳುವ ಮೂಲಕ ಕಮಲ ನಾಯಕರ ವಿರುದ್ಧ‌ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಹೆಸರಿನಲ್ಲಿ ರಾಮ ಇದ್ದಾನೆ. ನನ್ನ ಹೆಸರಿನಲ್ಲಿ ಶಿವ ಇದ್ದಾನೆ, ಶಿವನ ಮಗ ಕುಮಾರನೂ ಇದ್ದಾನೆ. ಬಿಜೆಪಿಯವರಿಗೆ ಹೊಟ್ಟೆ ಉರಿ. ಏನಾದ್ರೂ ಮಾಡಿ ನಮ್ಮನ್ನ ಹಿಂದೂ ವಿರೋಧಿಗಳು ಅಂತಾ ಬಿಂಬಿಸಲು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆಗೆ ಆದೇಶ ಮಾಡಿಲ್ವಾ?. ರಾಮಲಿಂಗಾರೆಡ್ಡಿ (Ramalinga Reddy) ನೇತೃತ್ವದಲ್ಲಿ ಸಭೆ ಮಾಡಿ, ಪೂಜೆ ಮಾಡಲು ನಮ್ಮ ಸರ್ಕಾರ ಹೇಳಿದೆ. ರಘುಪತಿ ರಾಘವ ರಾಜಾರಾಮ್ ಪತೀತ ಪಾವನ ಸೀತಾರಾಮ್ ಅಂತಾ ಗಾಂಧೀಜಿ ಹೇಳಿಲ್ವಾ ಎಂದು ಪ್ರಶ್ನಿಸಿದ ಡಿಕೆಶಿ, ರಾಮನನ್ನೂ ಪೂಜಿಸ್ತೀವಿ, ಸೀತೆಯನ್ನೂ ಪೂಜಿಸ್ತೀವಿ ಎಂದರು. ಇದನ್ನೂ ಓದಿ: Bharat Jodo Nyay Yatra: ಅಸ್ಸಾಂನಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ – ಕೈ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ

    ರಾಹುಲ್ ಗಾಂಧಿ ಯಾತ್ರೆಗೆ ತಡೆ ಮಾಡ್ತಾ ಇದ್ದಾರೆ. ಇವತ್ತು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕಾರ್ಯಕರ್ತರು ಬಹಳ ಆಸಕ್ತಿಯಿಂದ ಅಭಿಮಾನದಿಂದ ಬಂದಿದ್ದಾರೆ. ರಾಹುಲ್ ಗಾಂಧಿ ನೇರವಾಗಿ ಮುನ್ನಡೆಯಬೇಕು. ಇವತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೀತಾ ಇದೆ. ಒಗ್ಗಟಿನಿಂದ ಮಾರ್ಗದರ್ಶನ ಆಗ್ತಾ ಇದೆ. ಯಾತ್ರೆಗೆ ಏನು ಷ್ಯಡ್ಯಂತ್ರ ನಡೀತಾ ಇದೆ ಅದು ಖಂಡನೀಯ. ನಾವು ಯಾವುದಕ್ಕೂ ಹೆದರುವುದಿಲ್ಲ. ಅವರ ಜೈಲು, ಬೇಲು, ಕೇಸು ಯಾವುದಕ್ಕೂ ಹೆದರಲ್ಲ. ಈ ದೇಶದ ಅಭಿವೃದ್ಧಿಗೆ ಐಕ್ಯತೆಗೆ ನಾವು ಒಮ್ಮತ ಮೂಡಿಸುತ್ತಿದ್ದೇವೆ ಎಂದಿದ್ದಾರೆ.

  • ʻಜೈ ಶ್ರೀರಾಮ್ʼ ಘೋಷಣೆ ಕೂಗುತ್ತಿದ್ದ ಯುವಕರ ಗುಂಪಿನ ಮೇಲೆ ಕಲ್ಲು ತೂರಾಟ

    ʻಜೈ ಶ್ರೀರಾಮ್ʼ ಘೋಷಣೆ ಕೂಗುತ್ತಿದ್ದ ಯುವಕರ ಗುಂಪಿನ ಮೇಲೆ ಕಲ್ಲು ತೂರಾಟ

    – ಪೊಲೀಸರಿಂದ ಲಘು ಲಾಠಿ ಪ್ರಹಾರ

    ಬೆಳಗಾವಿ: ಕೊನೆಗೂ ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ ನಿರ್ಮಾಣಗೊಂಡಿದೆ. 500 ವರ್ಷಗಳ ಕಾಯುವಿಕೆ ಅಂತ್ಯವಾಗಿದ್ದು, ಕೋಟ್ಯಂತರ ರಾಮಭಕ್ತರ ಕನಸು ನನಸಾಗಿದೆ.

    ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ (Ramlalla) ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ರಾಮನ ಭಕ್ತರು ವಿಶೇಷ ಪೂಜಾ ಕೈಂಯರ್ಯಗಳನ್ನು ನೆರವೇರಿಸುವ ಮೂಲಕ ರಾಮನ ಕೃಪೆಗೆ ಪಾತ್ರರಾದರು. ಇದೇ ವೇಳೆ ಬೆಳಗಾವಿಯಲ್ಲಿ (Belagavi) ಜೈಶ್ರೀರಾಮ್ ಘೋಷಣೆ ಕೂಗುತ್ತಾ ಮೆರವಣಿಗೆ ಹೊರಟ್ಟಿದ ಯುವಕರ ಗುಂಪಿನ ಮೇಲೆ ಅನ್ಯ ಗುಂಪೊಂದು ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.‌ ಇದನ್ನೂ ಓದಿ: ರೀಲ್ಸ್ ಮಾಡ್ತಾ ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ಆಕ್ಟೀವ್ ಆಗಿದ್ದ ಶಿಕ್ಷಕಿ – ಸಾವಿನ ಸುತ್ತ ಅನುಮಾನಗಳ ಹುತ್ತ!

    ಜೈಶ್ರೀರಾಮ್ (Jai Shri Ram) ಘೋಷಣೆ ಕೂಗುತ್ತಾ ಹೊರಟಿದ್ದ ಯುವಕ ಮೇಲೆ ಅನ್ಯ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಬಳಿಕ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಇದರಿಂದ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

    ಮುಂಚಿತವಾಗಿಯೇ ಸ್ಥಳದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನ ನಿಯೋಜನೆ ಮಾಡಿದ್ದ ಪೊಲೀಸರು, ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಪುಂಡರ ವಿರುದ್ಧ ಕ್ರಮ ವಹಿಸಲು ಘಟನಾವಳಿಯ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಸಾರ್ವಜನಿಕರಿಗೆ ತೆರೆಯುತ್ತಿದ್ದಂತೆಯೇ ರಾಮಮಂದಿರಕ್ಕೆ ಹರಿದು ಬರ್ತಿದೆ ಜನಸಾಗರ!

    ಪ್ರಾಣಪ್ರತಿಷ್ಠೆ ಸಂಪನ್ನ: ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರ ಬಾಲರಾಮನ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿತು. ಸರಿಯಾಗಿ ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿನ್‌ ಲಗ್ನದಲ್ಲಿ (ಅಭಿಜಿಬ್‌ ಅಂದ್ರೆ ʻವಿಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಅರ್ಚಕರು, ಪಂಡಿತರು ಹಾಗೂ ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿತು. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಸಿಎಂ ಯೋಗಿ ಆದಿತ್ಯನಾಥ್‌, ಗುಜರಾತ್‌ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಮೊದಲಾದವರು ಉಪಸ್ಥಿತರಿದ್ದರು. ದೇವಾಲಯ ಆವರಣದಲ್ಲಿ ಸರಿಸುಮಾರು 8 ಸಾವಿರ ಅತಿಥಿಗಳು ನೆರೆದಿದ್ದರು.

  • ಜೈ ಶ್ರೀರಾಮ್ ಎನ್ನದ್ದಕ್ಕೆ ಥಳಿಸಿ, ಗಡ್ಡ ಕತ್ತರಿಸಿದ್ರು

    ಜೈ ಶ್ರೀರಾಮ್ ಎನ್ನದ್ದಕ್ಕೆ ಥಳಿಸಿ, ಗಡ್ಡ ಕತ್ತರಿಸಿದ್ರು

    ಮುಂಬೈ: ಜೈ ಶ್ರೀರಾಮ್ (Jai Shri Ram) ಎಂದು ಕೂಗಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಗಳು ಮಸೀದಿಯೊಂದರ (Mosque) ಇಮಾಮ್‌ನನ್ನು (Imam) ಥಳಿಸಿ, ಅವರ ಗಡ್ಡ ಕತ್ತರಿಸಿರುವ ಅಮಾನುಷ ಕೃತ್ಯ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

    ಮಹಾರಾಷ್ಟ್ರದ ಅನ್ವಾ ಗ್ರಾಮದ ಮಸೀದಿಯಲ್ಲಿ ಇಮಾಮ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಭಾನುವಾರ ಸಂಜೆ 7:30ರ ವೇಳೆಗೆ ಮಸೀದಿಯೊಳಗೆ ಕುರಾನ್ ಓದುತ್ತಿದ್ದ ವೇಳೆ ಬಂದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ ಎಂದು ಇಮಾಮ್ ಜಾಕಿರ್ ಸೈಯದ್ ಖಾಜಾ ತಿಳಿಸಿದ್ದಾರೆ.

    CRIME

    ಅಪರಿಚಿತ ವ್ಯಕ್ತಿಗಳು ಮುಖಕ್ಕೆ ಬಟ್ಟೆ ಸುತ್ತಿಕೊಂಡು, ಮಸೀದಿಯನ್ನು ಪ್ರವೇಶಿಸಿದ್ದಾರೆ. ಇಮಾಮ್ ಕುರಾನ್ ಓದುತ್ತಿದ್ದ ವೇಳೆ ಅಪರಿಚಿತರು ಜೈ ಶ್ರೀರಾಮ್ ಎನ್ನಲು ಒತ್ತಾಯಿಸಿದ್ದಾರೆ. ಇಮಾಮ್ ಜೈ ಶ್ರೀರಾಮ್ ಎನ್ನಲು ನಿರಾಕರಿಸಿದಾಗ ಮೂವರು ವ್ಯಕ್ತಿಗಳು ಅವರನ್ನು ಮಸೀದಿಯ ಹೊರಗೆ ಎಳೆದುಕೊಂಡು ಹೋಗಿ, ಥಳಿಸಿದ್ದಾರೆ. ರಾಸಾಯನಿಕ ಲೇಪಿತ ಬಟ್ಟೆಯನ್ನು ಬಳಸಿ ಅವರನ್ನು ಪ್ರಜ್ಞಾಹೀನರನ್ನಾಗಿ ಮಾಡಿದ್ದಾರೆ. ತಮಗೆ ಪ್ರಜ್ಞೆ ಬಂದಾಗ ಕಿಡಿಗೇಡಿಗಳು ಗಡ್ಡ ಕತ್ತರಿಸಿರುವುದು ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ: ರಾಗಾಗೆ ಸಾವರ್ಕರ್ ಮೊಮ್ಮಗ ಸವಾಲು

    ರಾತ್ರಿ 8 ಗಂಟೆ ವೇಳೆಗೆ ಜನರು ಪ್ರಾರ್ಥನೆಗೆ ಮಸೀದಿಗೆ ಬಂದಾಗ ಇಮಾಮ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ನೋಡಿದ್ದಾರೆ. ಬಳಿಕ ಅವರನ್ನು ಸಿಲ್ಲೋಡ್‌ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಅವರನ್ನು ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರು ಈಗ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆ ಬಳಕಿಗೆ ಬಂದ ಬಳಿಕ ಪೊಲೀಸರು ಮಸೀದಿ ಇರುವ ಅನ್ವರ್ ಗ್ರಾಮಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಭೋಕರ್ದನ್ ಪರಧ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 452 (ಯೋಜಿತ ಹಲ್ಲೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ), ಮತ್ತು 34 (ಸಾಮಾನ್ಯ ಉದ್ದೇಶಕ್ಕೆ ಹಲವು ವ್ಯಕ್ತಿಗಳಿಂದ ಅಪರಾಧ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಘಟನೆ ಹಿನ್ನೆಲೆ ಗ್ರಾಮದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸ್ಥಳದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಯುಟ್ಯೂಬ್ ಇಲ್ಲ, ಯೋಗ ಶಿಕ್ಷಕರಿಲ್ಲ, ಆದ್ರೂ ಸೂರ್ಯ ನಮಸ್ಕಾರ ಮಾಡಿದ ಚಿರತೆ