Tag: jai ram thakur

  • ಮತಾಂತರ ಮಾಡಿದ್ರೆ 10 ವರ್ಷ ಜೈಲು – ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ನಿಷೇಧ

    ಮತಾಂತರ ಮಾಡಿದ್ರೆ 10 ವರ್ಷ ಜೈಲು – ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ನಿಷೇಧ

    ಶಿಮ್ಲಾ: ಹಿಮಾಚಲ ಪ್ರದೇಶದ ಸರ್ಕಾರವು ರಾಜ್ಯದಲ್ಲಿ ಸಾಮೂಹಿಕ ಮತಾಂತರವನ್ನು ನಿಷೇಧಿಸಿದ್ದು, ಬಲವಂತದಿಂದ ಮತಾಂತರ ಮಾಡುವವರಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಪ್ರಸಕ್ತ ವರ್ಷದ ಅಂತ್ಯಕ್ಕೆ ಹಿಮಾಚಲ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಸರ್ಕಾರ ಈ ಕಾನೂನು ಕ್ರಮವನ್ನು ಜರುಗಿಸಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ

    ಜೈ ರಾಮ್ ಠಾಕೂರ್ ನೇತೃತ್ವದ ಸರ್ಕಾರ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಇಲ್ಲಿ ಸಾಮೂಹಿಕ ಮತಾಂತರ ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿತು. ಅಲ್ಲದೇ 2019ರ ಕಾನೂನಿನ ಅನ್ವಯ ಯಾವುದೇ ಧರ್ಮಕ್ಕೆ ಮತಾಂತರ ಮಾಡುವವರಿಗೆ ಗರಿಷ್ಠ 10 ವರ್ಷಗಳ ಕಾಲ ಶಿಕ್ಷೆ ವಿಧಿಸುವುದಾಗಿ ನಿರ್ಧರಿಸಿತು. ಇದೇ ವೇಳೆ ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ‍್ಯ (ತಿದ್ದುಪಡಿ) ಮಸೂದೆ-2022 ಅನ್ನು ಧ್ವನಿ ಮತದೊಂದಿಗೆ ಸರ್ವಾನುಮತದಿಂದ ಅಂಗೀಕರಿಲ್ಪಟ್ಟಿತು.

    ಇತ್ತೀಚೆಗೆ ಇಬ್ಬರು ಅಥವಾ ಅದಕ್ಕಿಂತಲೂ ಹೆಚ್ಚಿನವರನ್ನು ಏಕಕಾಲದಲ್ಲಿ ಮತಾಂತರಗೊಳಿಸುತ್ತಿದ್ದಾರೆ. ಅದಕ್ಕಾಗಿ ಮತಾಂತರ ಶಿಕ್ಷೆಯ ಪ್ರಮಾಣವನ್ನು 7 ರಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮಸೂದೆಯಲ್ಲಿ ಸಭೆಯಲ್ಲಿ ಠಾಕೂರ್ ಉಲ್ಲೇಖಿಸಿದರು. ಇದನ್ನೂ ಓದಿ: ಒಡಿಶಾ ಸರ್ಕಾರದಿಂದ ನವ ವಿವಾಹಿತರಿಗೆ ಕಾಂಡೋಮ್, ಪ್ರೆಗ್ನೆನ್ಸಿ ಟೂಲ್ ಹೊಂದಿದ `ವೆಡ್ಡಿಂಗ್ ಕಿಟ್’ ಗಿಫ್ಟ್

    ಜೈ ರಾಮ್ ಠಾಕೂರ್ ನೇತೃತ್ವದ ಸರ್ಕಾರವು ಶುಕ್ರವಾರ ಹಿಮಾಚಲ ಪ್ರದೇಶ ಧರ್ಮದ ಸ್ವಾತಂತ್ರ‍್ಯ (ತಿದ್ದುಪಡಿ) ಮಸೂದೆ, 2022 ಅನ್ನು ಪರಿಚಯಿಸಿತು. ಇದು 18 ತಿಂಗಳುಗಳ ಹಿಂದಷ್ಟೇ ಜಾರಿಗೆ ಬಂದ ಹಿಮಾಚಲ ಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ -2019ರ ಹೆಚ್ಚು ಕಟ್ಟುನಿಟ್ಟಾದ ವಿಧೇಯಕವಾಗಿದೆ.

    2019ರ ಮಸೂದೆಯನ್ನು ಡಿಸೆಂಬರ್ 21, 2020 ರಂದು ಅಂದರೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ 15 ತಿಂಗಳ ನಂತರ ಅಧಿಸೂಚನೆ ಹೊರಡಿಸಲಾಗಿತ್ತು. 2019ರ ಕಾಯ್ದೆಯು 2006ರ ಕಾನೂನನ್ನು ಬದಲಿಸಿದೆ. ಆದರೆ, ಈ ಕಾಯ್ದೆ ಕಡಿಮೆ ಶಿಕ್ಷೆಯನ್ನು ಸೂಚಿಸಿದೆ. ಇನ್ನೊಂದೆಡೆ, ಶುಕ್ರವಾರ ಮಂಡಿಸಲಾಗಿರುವ ತಿದ್ದುಪಡಿ ಮಸೂದೆಯು ಬಲವಂತದ ಮತಾಂತರದ ಶಿಕ್ಷೆಯನ್ನು ಗರಿಷ್ಠ 7 ವರ್ಷಗಳಿಂದ ಗರಿಷ್ಠ 10 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ

    2019ರ ಕಾಯ್ದೆಯೂ ಸಾಮೂಹಿಕ ಮತಾಂತರವನ್ನು ತಡೆಯುವ ಅವಕಾಶಗಳನ್ನು ಹೊಂದಿಲ್ಲ. ಅದಕ್ಕಾಗಿ ಪರಿಣಾಮಕಾರಿ ನಿಬಂಧನೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಪ್ರಸ್ತಾಪಿಸಿದರು.

    ಬಿಜೆಪಿಯು ಮತಾಂತರ-ವಿರೋಧಿ ಕಾನೂನುಗಳ ಧ್ವನಿಯನ್ನು ಬೆಂಬಲಿಸುತ್ತಿದ್ದು, ಅನೇಕ ಪಕ್ಷ-ಆಡಳಿತ ರಾಜ್ಯಗಳು ಇದೇ ರೀತಿಯ ಕಾನೂನು ಕ್ರಮಗಳನ್ನು ಪರಿಚಯಿಸಿವೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಮಾಚಲ ಪ್ರದೇಶದ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ 50% ರಿಯಾಯಿತಿ: ಸಿಎಂ ಠಾಕೂರ್

    ಹಿಮಾಚಲ ಪ್ರದೇಶದ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ 50% ರಿಯಾಯಿತಿ: ಸಿಎಂ ಠಾಕೂರ್

    ಶಿಮ್ಲಾ: ಹಿಮಾಚಲ ಪ್ರದೇಶದ ಎಚ್‍ಆರ್‌ಟಿಸಿ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಟಿಕೆಟ್ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿರುವುದಾಗಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಘೋಷಿಸಿದ್ದಾರೆ.

    75ನೇ ಹಿಮಾಚಲ ಡೇ ಅಂಗವಾಗಿ ಸಿಎಂ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ 50% ರಿಯಾಯಿತಿ ಸೇರಿದಂತೆ 125 ಯೂನಿಟ್ ವರೆಗೆ ಗೃಹಬಳಕೆಯ ವಿದ್ಯುತ್ ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಆಗಮನದ ವೇಳೆ ಕೇಬಲ್ ವಯರ್ ಸ್ಫೋಟ – ವರದಿ ಕೇಳಿದ ಗೃಹ ಸಚಿವಾಲಯ

    ಜಲ ಶಕ್ತಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳಿಗೆ ನೀರಿನ ಬಿಲ್‍ನಲ್ಲಿ ರಿಯಾಯಿತಿ ನೀಡಿದ್ದಾರೆ. ಈ ಹಿಂದೆ 60 ಯೂನಿಟ್‍ವರೆಗಿನ ಗೃಹ ಬಳಕೆಯ ವಿದ್ಯುತ್ ಉಚಿತ ಸೇರಿದಂತೆ ಸರ್ಕಾರಿ ಬಸ್‍ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶೇ.25 ರಿಯಾಯಿತಿ ನೀಡಲಾಗಿತ್ತು. ಇದೀಗ ಈ ರಿಯಾಯಿತಿಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದನ್ನೂ ಓದಿ: ಒಂದೇ ಬಾರಿಗೆ 32 ಜನರಿಗೆ ವಾಯ್ಸ್ ಕಾಲ್ – ಹೀಗಿವೆ ವಾಟ್ಸಪ್‌ನ 4 ಹೊಸ ಫೀಚರ್ಸ್

    ಹಿಮಾಚಲ ಡೇ ಕಾರ್ಯಕ್ರಮದಲ್ಲಿ ಸಿಎಂ, ಪೊಲೀಸ್ ಹಾಗೂ ಮಿಲಿಟರಿ ಪಡೆಗಳಿಂದ ಧ್ವಜ ವಂದನೆ ಸ್ವೀಕರಿಸಿದರು. ಈ ಮೂಲಕ ಜನಪರ ಕಾರ್ಯಕ್ರಮಗಳನ್ನು ಘೋಷಿಸಿರುವ ಸಿಎಂ ಈ ವರ್ಷಾಂತ್ಯದಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.

  • ಭಾರತದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ: ಜೈರಾಮ್ ಠಾಕೂರ್

    ಭಾರತದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ: ಜೈರಾಮ್ ಠಾಕೂರ್

    ಶಿಮ್ಲಾ: ಭಾರತದ ರಾಜಕೀಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಭವಿಷ್ಯ ನುಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇದರಿಂದಾಗಿ ಮಿಷನ್ ರಿಪೀಟ್ 2022 ತನ್ನ ಗುರಿಯನ್ನು ಈಡೇರಿಸುವ ಮೂಲಕ ಗುಡ್ಡಗಾಡು ರಾಜ್ಯದಲ್ಲಿ ಬಿಜೆಪಿ ಮತ್ತೆ ತನ್ನ ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

    ಹಿಮಾಚಲ ಪ್ರದೇಶದಲ್ಲಿ ತಮ್ಮ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸದ್ಯಕ್ಕೆ ಸಂಪುಟ ವಿಸ್ತರಣೆಯ ಆಲೋಚನೆಯಿಲ್ಲ. 2022ರ ವಿಧಾನಸಭಾ ಚುನಾವಣೆಯಲ್ಲೂ ಬಹುಮತ ಸಾಧಿಸಿ ಪುನಃ ಅಧಿಕಾರವನ್ನು ಹಿಡಿಯುತ್ತೇವೆ ಎಂದರು. ಇದನ್ನೂ ಓದಿ: ಶೀಘ್ರದಲ್ಲೇ ಕೋಪ- ದ್ವೇಷದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ: ರಾಹುಲ್ ಗಾಂಧಿ

    ಸರ್ಕಾರಿ ನೌಕರರು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಭಟಿಸುವ ಮತ್ತು ತಮ್ಮ ಬೇಡಿಕೆಗಳ ಪರಿಹಾರವನ್ನು ಕೇಳುವ ಹಕ್ಕು ಅವರಿಗೆ ಯಾವಾಗಲೂ ಇದೆ. ಆದರೆ ಇಂದಿನ ದಿನಗಳಲ್ಲಿ ಅವರು ವರ್ತಿಸುತ್ತಿರುವ ರೀತಿ ಅರ್ಥವಾಗುತ್ತಿಲ್ಲ. ಅವರ ಬಹುತೇಕ ಎಲ್ಲಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಹಿಜಬ್‌ ತೀರ್ಪು ಪ್ರಕಟಿಸಿದ ಜಡ್ಜ್‌ಗಳಿಗೆ ಕೊಲೆ ಬೆದರಿಕೆ – ಕೇಸ್‌ ದಾಖಲು