Tag: Jai Lava Kusa

  • ಜೂ.ಎನ್‍ಟಿಆರ್ ನಟನೆಯ `ಜೈ ಲವ ಕುಶ’ ಟ್ರೇಲರ್ ಔಟ್

    ಜೂ.ಎನ್‍ಟಿಆರ್ ನಟನೆಯ `ಜೈ ಲವ ಕುಶ’ ಟ್ರೇಲರ್ ಔಟ್

    ಹೈದರಾಬಾದ್: ಟಾಲಿವುಡ್‍ನ ಬಹು ನಿರೀಕ್ಷಿತ ಜೂನಿಯರ್ ಎನ್.ಟಿ.ಆರ್ ಅಭಿನಯದ `ಜೈ ಲವ ಕುಶ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

    ಜೈ ಲವ ಕುಶ ಸಿನಿಮಾ ಮೂವರು ಸಹೋದರರು ನಡುವಿನ ಕಥಾ ಹಂದರವನ್ನು ಒಳಗೊಂಡಿದೆ. ಈಗಾಗಲೇ ಟೀಸರ್ ಮುಖಾಂತರ ಒಂದೊಂದು ಪಾತ್ರದ ಪರಿಚಯ ಮಾಡಿದ್ದ ಚಿತ್ರತಂಡ ಈಗ ಟ್ರೇಲರ್ ಬಿಡುಗಡೆ ಮಾಡಿದೆ. ಸಿನಿಮಾದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂ.ಎನ್‍ಟಿಆರ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದಾರೆ.

    ಬ್ಯಾಂಕ್ ಕೆಲಸ ಮಾಡುವ ಲವ, ಕಳ್ಳನಾಗಿ ಕುಶ ಮತ್ತು ರಾವಣ್ ಪಾತ್ರದಾರಿಯಾಗಿ ಜೈ ಮೂರು ವಿಭಿನ್ನ ಲುಕ್‍ನಲ್ಲಿ ಜೂ.ಎನ್.ಟಿ.ಆರ್ ನಟಿಸಲಿದ್ದಾರೆ. ಬೇರೆ ಬೇರೆ ವೃತ್ತಿಯಲ್ಲಿರುವ ಈ ಸಹೋದರ ನಡುವೆ ಉಂಟಾಗುವ ಕಥೆಯನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಮೂರು ಪಾತ್ರಕ್ಕೆ ಡಿಫರೆಂಟ್ ಲುಕ್ ನಲ್ಲಿ ಕಾಣುವಲ್ಲಿ ಹಾಲಿವುಡ್ ಮೇಕಪ್‍ಮನ್ ವ್ಯಾನ್ಸ್ ಹಾರ್ಟ್‍ವೆಲ್ ಅವರ ಕೈ ಚಳಕ ಅಡಗಿದೆ.

    ‘ಜೈ ಲವ ಕುಶ’ ಚಿತ್ರವನ್ನು ಕೆ.ಎಸ್.ರವೀಂದ್ರ ನಿರ್ದೇಶಿಸಿದ್ದಾರೆ. ಎನ್.ಟಿ.ಆರ್ ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರ ಸೆಪ್ಟೆಂಬರ್ 21ಕ್ಕೆ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೇಲರ್ ಯೂಟ್ಯೂಬ್ ನಲ್ಲಿ 45 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.