Tag: Jai Jagdish

  • ನಟ ಜೈ ಜಗದೀಶ್ ಕಾರು ಅಪಘಾತ-ಪ್ರಾಣಾಪಾಯದಿಂದ ಪಾರಾದ ಹಿರಿಯ ನಟ

    ನಟ ಜೈ ಜಗದೀಶ್ ಕಾರು ಅಪಘಾತ-ಪ್ರಾಣಾಪಾಯದಿಂದ ಪಾರಾದ ಹಿರಿಯ ನಟ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟ ಜೈ ಜಗದೀಶ್ ಅವರ ಕಾರು ಅಪಘಾತಕ್ಕೊಳಗಾಗಿದ್ದು, ಪ್ರಾಣಾಪಾತಯದಿಂದ ಪಾರಾಗಿದ್ದಾರೆ.

    ಶುಕ್ರವಾರ ಅಪಘಾತ ನಡೆದಿದ್ದು, ಮಾರ್ಗ ಮಧ್ಯೆ ಬಂದ ಬೈಕಿಗೆ ಡಿಕ್ಕಿಯಾಗೋದನ್ನು ತಪ್ಪಿಸಲು ಹೋಗಿ ಕಾರ್ ರಸ್ತೆ ಬದಿಯ ಗದ್ದೆಗೆ ನುಗ್ಗಿದೆ. ಬೆಂಗಳೂರಿನಿಂದ ಚೆನ್ನರಾಯಪಟ್ಟಣ ಮೂಲಕ ಮಡಿಕೇರಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರಿಗೆ ಅಡ್ಡಲಾಗಿ ಬೈಕ್ ಬಂದ ತಕ್ಷಣ ಸವಾರ ಪ್ರಾಣ ಉಳಿಸಲು ಕಾರ್ ಟರ್ನ್ ಮಾಡಿದಾಗ ಜಮೀನಿಗೆ ನುಗ್ಗಿ ನಿಂತಿದೆ.

    ಅಪಘಾತದಲ್ಲಿ ಜೈ ಜಗದೀಶ್ ಅವರಿಗೆ ಸಣ್ಣ ಗಾಯಗಳಾಗಿದ್ದು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv