Tag: Jai Jagadeesh

  • ಬಿಕಿನಿಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಬಳುಕುವ ಬಳ್ಳಿ ವೈಭವಿ ಜಗದೀಶ್‌

    ಬಿಕಿನಿಯಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡ ಬಳುಕುವ ಬಳ್ಳಿ ವೈಭವಿ ಜಗದೀಶ್‌

    ಸ್ಯಾಂಡಲ್‌ವುಡ್ (Sandalwood) ನಟ ಜೈ ಜಗದೀಶ್ (Jai Jagadeesh) ಪುತ್ರಿ ವೈಭವಿ ಜಗದೀಶ್ (Vaibhavi Jagadeesh) ಅವರು ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಬ್ಯೂಟಿಯ ಬೋಲ್ಡ್ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ವೈಭವಿ ಬಿಕಿನಿ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಸಿನಿಮಾಗಳಲ್ಲಿ ನಟಿಸಿ ಹೈಲೆಟ್ ಆಗೋದಕ್ಕಿಂತ ನಟಿ ವೈಭವಿ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಮೋಡಿ ಮಾಡುತ್ತಲೇ ಇರುತ್ತಾರೆ. ಕೇಸರಿ ಬಣ್ಣ ಮತ್ತು ಬಿಳಿ ಬಣ್ಣದ ಉಡುಪಿನಲ್ಲಿ ಸಖತ್ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    ಯಾನ(Yaana), ಕಾಮಣ್ಣನ ಮಕ್ಕಳು (Kamannana Makkalu) ಸೇರಿದಂತೆ ಹಲವು ಪ್ರಾಜೆಕ್ಟ್‌ನಲ್ಲಿ ವೈಭವಿ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಜೈ ಜಗದೀಶ್- ವಿಜಯಲಕ್ಷ್ಮಿ ಸಿಂಗ್ ಮಗಳಿಗೆ ಚಂದನವನದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗುತ್ತಿಲ್ಲ. ತಂದೆ- ತಾಯಿಯಂತೆಯೇ ಬೆಳ್ಳಿಪರದೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ:ಪತ್ನಿ ರಾಖಿ ಸಾವಂತ್ ವಿರುದ್ಧ ಗುಡುಗಿದ ಮೈಸೂರು ಹುಡುಗ ಆದಿಲ್

    ಸ್ಟಾರ್ ಕಿಡ್ ಅನ್ನೋದು ಬಿಟ್ಟರೇ ಪ್ರತಿಭೆಯಲ್ಲಿ ವೈಭವಿ ಯಾರಿಗಿಂತ ಕಡಿಮೆಯಿಲ್ಲ. ಪ್ರತಿಭೆಯ ಜೊತೆ ಬ್ಯೂಟಿ ಇರುವ ಈ ಸುಂದರಿಗೆ ಸೂಕ್ತ ಅವಕಾಶ ಬೇಕಿದೆ. ಸದ್ಯ ನಟನೆಯಿಂದ ವೈಭವಿ ದೂರವಿದ್ದಾರೆ. ಉತ್ತಮ ಅವಕಾಶ, ಕಥೆ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತಾರಾ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಿಮಿಂಗ್‌ ಪೂಲ್‌ನಲ್ಲಿ ಹಾಟ್‌ ಲುಕ್‌ ಕೊಟ್ಟ ನಟಿ ವೈಭವಿ

    ಸ್ವಿಮಿಂಗ್‌ ಪೂಲ್‌ನಲ್ಲಿ ಹಾಟ್‌ ಲುಕ್‌ ಕೊಟ್ಟ ನಟಿ ವೈಭವಿ

    ಸ್ಯಾಂಡಲ್‌ವುಡ್‌ನಲ್ಲಿ ‘ಯಾನ’ (Yaana) ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜೈ ಜಗದೀಶ್ ಪುತ್ರಿ ವೈಭವಿ ಜಗದೀಶ್ (Vaibhavi Jagadeesh) ಅವರು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

    ಜೈ

    ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಅವರು ಒಬ್ಬರನೊಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದವರು. ಸ್ಯಾಂಡಲ್‌ವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ವೈಭವಿ, ವೈಸಿರಿ, ವೈನಿಧಿ ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೂವರು ಕೂಡ ಒಂದಲ್ಲಾ ಒಂದು ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ.

    ವೈಭವಿ ಜಗದೀಶ್ ಅವರು ‘ಯಾನ’ ಚಿತ್ರದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಿತರಾದರು. ಸದ್ಯ ಚಿತ್ರರಂಗದಿಂದ ದೂರಯುಳಿದಿರುವ ವೈಭವಿ, ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಾ ಇರುತ್ತಾರೆ. ಇದನ್ನೂ ಓದಿ:ಪ್ಯಾಂಟ್ ಧರಿಸದೇ ನೈಟ್ ಡ್ರೆಸ್‌ನಲ್ಲಿ ಮಿಂಚಿದ ಶ್ರೀಲೀಲಾ- ರಶ್ಮಿಕಾ ದಾರಿ ಹಿಡಿಯಬೇಡಿ ಎಂದ ನೆಟ್ಟಿಗರು

    ಕಪ್ಪು ಮತ್ತು ಪಿಂಕ್ ಬಣ್ಣದ ಧಿರಿಸಿನಲ್ಲಿ ನಟಿ ವೈಭವಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸ್ವಿಮಿಂಗ್ ಪೂಲ್‌ನಲ್ಲಿ ಕಪ್ಪು ಶಾರ್ಟ್ ಟಾಪ್ ಮತ್ತು ನೀಲಿ ಶಾಟ್ಸ್ ಧರಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ಪಿಂಕ್ ಬಣ್ಣದ ಬಿಕಿನಿ ಧರಿಸಿ ಮಿಂಚಿದ್ದಾರೆ. ಈ ಮೂಲಕ ಪಡ್ಡೆಹುಡುಗರ ಕಣ್ಣಿಗೆ ವೈಭವಿ ದರ್ಶನ ನೀಡಿದ್ದಾರೆ. ವೈಭವಿ ಹಾಟ್ ಲುಕ್‌ಗೆ ಬಾಯ್ಸ್ ಬೋಲ್ಡ್ ಆಗಿದ್ದಾರೆ.

  • ವ್ಯಕ್ತಿಯ ಮೇಲೆ ಹಲ್ಲೆ ಆರೋಪ: ಜೈ ಜಗದೀಶ್ ಪ್ರಕರಣಕ್ಕೆ ಟ್ವಿಸ್ಟ್

    ವ್ಯಕ್ತಿಯ ಮೇಲೆ ಹಲ್ಲೆ ಆರೋಪ: ಜೈ ಜಗದೀಶ್ ಪ್ರಕರಣಕ್ಕೆ ಟ್ವಿಸ್ಟ್

    ಸ್ಯಾಂಡಲ್‌ವುಡ್ ಹಿರಿಯ ನಟ ಜೈಜಗದೀಶ್ ಅವರು ವ್ಯಕ್ಯಿಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಸ್ವತಃ ಜೈಜಗದೀಶ್ ಠಾಣೆಗೆ ಹಾಜರಾಗಿದ್ದಾರೆ. ಈ ಪ್ರಕರಣ ರಾಜಿಯಲ್ಲಿ ಅಂತ್ಯಗೊಂಡಿದೆ.

    ವ್ಯಕ್ಯಿಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದದಿಂದ ನಿಂದಿಸಿರುವ ಆರೋಪ ಹಿರಿಯ ನಟ ಜೈಜಗದೀಶ್ ವಿರುದ್ಧ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಜಯರಾಮೇಗೌಡ ಎಂಬುವವರು ದೂರು ದಾಖಲಿಸಿದ್ದರು. ಬಳಿಕ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಇಂದು ನಟ ಜೈಜಗದೀಶ್ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಈ ಪ್ರಕರಣವನ್ನು ರಾಜಿ ಮಾಡಲಾಗಿದೆ. ಇದನ್ನೂ ಓದಿ:ತೆಲಂಗಾಣದ ಸೆಲೆಬ್ರಿಟಿ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅನುಮಾನಾಸ್ಪದ ಸಾವು

    ಈ ವೇಳೆ ಮಾಧ್ಯಮಗಳ ಎದುರು ಮಾತನಾಡಿದ ಜೈ ಜಗದೀಶ್, ಘಟನೆಯಲ್ಲಿ ಯಾವುದೇ ರೀತಿ ಹಲ್ಲೆ ನಡೆದಿಲ್ಲ. ಕಳೆದ ಭಾನುವಾರ (ಜೂ.5)ರಂದು ನನ್ನ ಮತ್ತು ಚಂದ್ರು ನಡುವೆ ಸಣ್ಣ ಭಿನ್ನಾಭಿಪ್ರಾಯ ಆಗಿತ್ತು. ಅಂದು ನಾನು ಕಾರಿನಲ್ಲಿ ಹೋಗುವಾಗ ಬಸ್ಸಿನಿಂದ ಅವರು ನೀರಿನ ಬಾಟಲಿಯನ್ನು ಎಸೆದಿದ್ದರು. ಅದಕ್ಕೆ ಪ್ರಶ್ನೆ ಮಾಡಿದ್ದು ಬಿಟ್ಟರೆ ಯಾವುದೇ ರೀತಿಯ ಹಲ್ಲೆ ಮಾಡಿರಲಿಲ್ಲ. ಆ ಬಗ್ಗೆ ಇಂದು ಕುಳಿತ ಮಾತುಕತೆ ನಡೆಸಿ, ಬಗೆಹರಿಸಿಕೊಂಡಿದ್ದೇವೆ. ಅಂದು ಯಾವುದೇ ಗಲಾಟೆಯಾಗಿರಲಿಲ್ಲ, ಸಣ್ಣ ಭಿನ್ನಾಭಿಪ್ರಾಯ ಆಗಿತ್ತು ಅಷ್ಟೇ ಎಂದು ಜೈಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

  • ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್‍ವುಡ್ ಏಕೆ ಟಾರ್ಗೆಟ್ ಮಾಡಲಾಗ್ತಿದೆ?: ಜೈ ಜಗದೀಶ್

    ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್‍ವುಡ್ ಏಕೆ ಟಾರ್ಗೆಟ್ ಮಾಡಲಾಗ್ತಿದೆ?: ಜೈ ಜಗದೀಶ್

    ಮಡಿಕೇರಿ: ಬೆಂಗಳೂರಿನ ಬಹುತೇಕ ಕಾಲೇಜುಗಳು, ಗೂಡಂಗಡಿ ಸೇರಿದಂತೆ ಎಲ್ಲೆಡೆ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದನ್ನು ಪೊಲೀಸರು ಏಕೆ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹಿರಿಯ ಚಿತ್ರನಟ ಜೈ ಜಗದೀಶ್ ಪ್ರಶ್ನಿಸಿದ್ದಾರೆ.

    ಸ್ಯಾಂಡಲ್‍ವುಡ್‍ಗೆ ಡ್ರಗ್ ನಂಟಿನ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಎನ್ನುವುದು ಎಲ್ಲೆಡೆ ಇದ್ದರೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಮಾತ್ರ ದೊಡ್ಡ ಸುದ್ದಿಯಾಗಿದೆ. ಮಾಧ್ಯಮಗಳು ಕೊರೊನಾ ಹಾಗೂ ಡ್ರಗ್ಸ್ ವಿಚಾರಗಳಿಗಷ್ಟೇ ಏಕೆ ಪ್ರಾಮುಖ್ಯತೆ ನೀಡುತ್ತಿವೆ ತಿಳಿಯುತ್ತಿಲ್ಲ. ಇದುವರೆಗೆ ಕನ್ನಡ ಚಿತ್ರರಂಗದಲ್ಲೇ ಇಂತಹ ಸಂಗತಿಗಳು ಪ್ರಸ್ತುತದಲ್ಲಿ ಮುನ್ನಲೆಗೆ ಬರುತ್ತಿವೆ. ಉದಯೋನ್ಮುಖ ನಟಿಯಯರಾದ ಸಂಜನಾ ಹಾಗೂ ರಾಗಿಣಿ ಇಬ್ಬರೂ ಇದರಲ್ಲಿ ಸಿಲುಕಿಕೊಂಡು ಜಾಮೀನಿಗಾಗಿ ಒದ್ದಾಡುತ್ತಿದ್ದಾರೆ ಎಂದರು.

    ಉತ್ತರ ಭಾರತದಿಂದ ಬಂದಂತಹ ಇಬ್ಬರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಆದಷ್ಟು ಕಾನೂನು ರೀತಿಯಲ್ಲಿ ಶೀಘ್ರವಾಗಿ ತನಿಖೆ ನಡೆಸಬೇಕು. ಬಂಧಿತರಿಗೆ ಜಾಮೀನು ಸಿಗಬೇಕು. ದೋಷದಿಂದ ಮುಕ್ತರಾಗಬೇಕು ಎಂದು ಇದೇ ವೇಳೆ ಹಿರಿಯ ನಟ ಒತ್ತಾಯಿಸಿದರು. ಇದನ್ನೂ ಓದಿ: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ- ಮತ್ತೆ ಜೈಲುವಾಸ

    ಡ್ರಗ್ಸ್ ದೇಶದಾದ್ಯಂತ ವ್ಯಾಪಿಸಿದೆ. ರಾಜ ಮಹಾರಾಜರ ಕಾಲದಿಂದಲೂ ಡ್ರಗ್ಸ್ ಬಳಸುತ್ತಿದ್ದರು. ಇಂದು ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಏಕೆ ಮೌನವಹಿಸಿದೆ. ದೇಶಕ್ಕೆ ಡ್ರಗ್ ಹೇಗೆ ಬಂತು?. ಪೆಡ್ಲರ್‍ಗಳು ಹೇಗೆ ಹುಟ್ಟಿಕೊಂಡರು ಎಂದು ಅವರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.

    https://www.youtube.com/watch?v=yncED482G14&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

  • ಜೈ ಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್

    ಜೈ ಜಗದೀಶ್ ಬಳಿ ಕ್ಷಮೆ ಕೇಳಿದ ಕಿಶನ್

    ಬೆಂಗಳೂರು: ಬಿಗ್ ಬಾಸ್ ಸೀಸನ್-7ನ ಸ್ಪರ್ಧಿ ಡ್ಯಾನ್ಸರ್ ಕಿಶನ್ ಹಿರಿಯ ನಟ ಜೈ ಜಗದೀಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ.

    ಕಿಶನ್ ಸೋಮವಾರ ಜೈ ಜಗದೀಶ್ ಅವರ ಜೊತೆ ಜಗಳವಾಡಿದ್ದರು. ಇದಾದ ಬಳಿಕ ಮನೆಯ ಸದಸ್ಯರು ಹಿರಿಯರನ್ನು ಎಲ್ಲರ ಮುಂದೆ ಈ ರೀತಿ ಪ್ರಶ್ನಿಸಬಾರದು ಇದು ಅವರನ್ನು ಅವಮಾನ ಮಾಡಿದಂತೆ ಎಂದು ಕಿಶನ್ ಬಳಿ ಹೇಳಿದ್ದರು. ಹೀಗಾಗಿ ಕಿಶನ್ ಮಂಗಳವಾರ ಜೈ ಜಗದೀಶ್ ಅವರ ಬಳಿ ಹೋಗಿ ಕ್ಷಮೆ ಕೇಳಿದ್ದಾರೆ.

    ಜೈ ಜಗದೀಶ್ ಅಡುಗೆ ಮನೆಯಲ್ಲಿದ್ದ ವೇಳೆ ಕಿಶನ್ ನಾನು ಆ ರೀತಿ ಮಾತನಾಡಬಾರದಿತ್ತು. ನನ್ನನ್ನು ಕ್ಷಮಿಸಿ. ಈ ವಿಷಯ ಇಷ್ಟು ದೊಡ್ಡದಾಗುತ್ತೆ ಎಂದು ನನಗೆ ತಿಳಿದಿರಲಿಲ್ಲ. ನಾನು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ಹೇಳಿದ್ದಾರೆ.

    ಕಿಶನ್ ಮಾತು ಕೇಳಿದ ಜೈ ಜಗದೀಶ್ ಅವರು ನೀನು ನನ್ನನ್ನು ಪ್ರಶ್ನೆ ಮಾಡಬೇಕೆಂದರೆ ಪ್ರತ್ಯೇಕವಾಗಿ ಕರೆದು ಕೇಳಬೇಕಿತ್ತು. ಅದನ್ನು ಬಿಟ್ಟು ಎಲ್ಲರ ಮುಂದೆ ಕೇಳಿ ನನಗೆ ಅವಮಾನ ಮಾಡಿದೆ. ಈಗ ಬಂದು ಕ್ಷಮೆ ಕೇಳುತ್ತಿದ್ದೀಯಾ. ಸರಿ ಎಂದು ಜೈ ಜಗದೀಶ್ ಕೋಪದಲ್ಲಿಯೇ ಪ್ರತಿಕ್ರಿಯಿಸಿದರು.

    ಕಿಶನ್ ಕ್ಷಮೆ ಕೇಳುತ್ತಿದ್ದಂತೆ ಮನೆಯಲ್ಲಿದ್ದ ಸದಸ್ಯರು ಎಲ್ಲವನ್ನು ಮರೆತು ಆತನನ್ನು ಕ್ಷಮಿಸಿ ಎಂದು ಜೈ ಜಗದೀಶ್ ಅವರಿಗೆ ಹೇಳಿದ್ದಾರೆ. ಮನೆಯ ಸದಸ್ಯರ ಮಾತು ಕೇಳಿ ಜೈ ಜಗದೀಶ್, ಕಿಶನ್‍ನನ್ನು ಕ್ಷಮಿಸಿದ್ದಾರೆ.

    ಕಿಶನ್ ಹೇಳಿದ್ದೇನು?
    ಸೋಮವಾರ ಕಿಶನ್, ಜೈ ಜಗದೀಶ್ ಅವರ ಬಳಿ ಹೋಗಿ ನೀವು ಎಲ್ಲರನ್ನು ಕೆಟ್ಟದಾಗಿ ನಿಂದಿಸುತ್ತೀರಿ. ತುಂಬಾ ಜನಕ್ಕೆ ಬೇಜಾರು ಮಾಡಿದ್ದೀರಿ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಜೈ ಜಗದೀಶ್ ವಿರುದ್ಧ ಗರಂ ಆಗಿದ್ದರು. ಈ ವೇಳೆ ಜಗದೀಶ್ ನೀನು ಇಷ್ಟು ದಿನ ಇರಲಿಲ್ಲ. ನಾನು ಯಾರಿಗೂ ಬೇಜಾರು ಮಾಡಿಲ್ಲ. ನಾನು ನೇರವಾಗಿ ಎಲ್ಲರ ಜೊತೆ ಮಾತನಾಡುತ್ತೇನೆ. ನೀನು ಇಷ್ಟು ದಿನಗಳಿಂದ ಇಲ್ಲಿ ಇರಲಿಲ್ಲ. ಹಾಗಾಗಿ ನಿನಗೆ ಸಂಪೂರ್ಣ ವಿಷಯ ಗೊತ್ತಿಲ್ಲ. ನೀನು ನನಗೆ ಬುದ್ಧಿ ಹೇಳಲು ಬರಬೇಡ ಎಂದು ಜೈ ಜಗದೀಶ್ ಕೋಪದಲ್ಲಿಯೇ ಉತ್ತರಿಸಿದ್ದರು.