Tag: Jai Bharath

  • ರಾಜ್ಯ ಸರ್ಕಾರ ಜನರ ಹಣ ಕದ್ದಿದೆ: ರಾಗಾ ಆರೋಪ

    ರಾಜ್ಯ ಸರ್ಕಾರ ಜನರ ಹಣ ಕದ್ದಿದೆ: ರಾಗಾ ಆರೋಪ

    ಕೋಲಾರ: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜನರ ಹಣ ಕದ್ದಿದೆ. ಏನೇ ಕೆಲಸ ಮಾಡಿದರೂ ಲಂಚ ಹೊಡೆದಿದ್ದಾರೆ ಎಂದು ಬಿಜೆಪಿ (BJP) ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹರಿಹಾಯ್ದರು.

    ಕೋಲಾರದಲ್ಲಿ (Kolar) ನಡೆದ ಜೈ ಭಾರತ್ (Jai Bharath) ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ 40% ಕಮಿಷನ್ ಬಿಟ್ಟು ಏನೂ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರ ಜನರ ಹಣ ಕದ್ದಿದೆ. ಏನೇ ಕೆಲಸ ಮಾಡಿದರೂ ಅದರಲ್ಲಿ 40% ಲಂಚ ಹೊಡೆದಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ. ಕಂಟ್ರಾಕ್ಟರ್‌ಗಳು ಮೋದಿಗೆ ಪತ್ರ ಬರೆದು ತಿಳಿಸಿದ್ದಾರೆ. ಮೋದಿ ಆ ಪತ್ರಕ್ಕೆ ಏನೂ ಉತ್ತರ ಕೊಟ್ಟಿಲ್ಲ. ಪತ್ರಕ್ಕೆ ಉತ್ತರ ಕೊಟ್ಟಿಲ್ಲ ಎಂದರೆ ಅದರಲ್ಲಿ ಮೋದಿ ಪಾಲು ಇದೆ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರಚಾರದ ನೆಪದಲ್ಲಿ ಮಹಿಳೆಯರನ್ನ ಮಂಚಕ್ಕೆ ಕರೆದ ಆರೋಪ – JDS ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ 

    ರಾಜ್ಯದಲ್ಲಿ ಟೀಚರ್, ಪೊಲೀಸ್ ಹಾಗೂ ಎಂಜಿನಿಯರ್ ನೇಮಕಾತಿಯಲ್ಲಿ ಹಗರಣ ನಡೆದಿದೆ. ನಾನು ಸಂಸತ್‌ನಲ್ಲಿ ಈ ವಿಚಾರ ಹಾಗೂ ಅದಾನಿ (Adani) ವಿಚಾರವಾಗಿ ಕೇಳಿದೆ. ಕೂಡಲೇ ನನ್ನ ಮೈಕ್ ಆಫ್ ಮಾಡಿದರು. ನಿಮಗೂ ಅದಾನಿಗೂ ಏನು ಸಂಬಂಧ ಎಂದು ಕೇಳಿ ನಾನು ಒಂದು ಫೋಟೋ ತೋರಿಸಿದೆ. ಅದಕ್ಕೆ ಏನು ಸಂಬಂಧ ಎಂದು ಕೇಳಿದೆ. ದೇಶದ ವಿಮಾನ ನಿಲ್ದಾಣವನ್ನು ಕಾನೂನು ಮೀರಿ ಅದಾನಿಗೆ ಕೊಟ್ಟಿದ್ದಾರೆ. ಅದು ಯಾಕೆ ಕೊಟ್ಟರು ಎಂದು ಕೇಳಿದೆ. ಅದಾನಿಗೆ ವಿಮಾನ ನಿಲ್ದಾಣ ವಿಚಾರದಲ್ಲಿ ಯಾವ ಅನುಭವವೂ ಇಲ್ಲ. ಅವರು ನಿಯಮ ಮೀರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಈ ಬಾರಿ ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತೆ: ರಾಹುಲ್ ಗಾಂಧಿ 

    ಮುಂಬೈ (Mumbai) ವಿಮಾನ ನಿಲ್ದಾಣವನ್ನೂ ಅವರಿಗೆ ಕೊಟ್ಟರು. ಯಾರು ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದರೋ ಅವರಿಗೆ ಸಿಬಿಐ (CBI) ಭಯ ಹುಟ್ಟಿಸಿ ಅವರ ಕೈಯಿಂದ ಅದನ್ನು ತೆಗೆದುಕೊಂಡರು. ನಿರ್ಮಾಣ ಮಾಡಿದವರಿಂದ ಕಿತ್ತು ಅದನ್ನು ಅದಾನಿಗೆ ಕೊಟ್ಟರು. ಆಸ್ಟ್ರೇಲಿಯಾ ಭೇಟಿ ಕೊಟ್ಟಾಗ ಮೋದಿ (Narendra Modi) ಜೊತೆ ಅದಾನಿಯವರು ವಿಮಾನದಲ್ಲಿ ಕೂತಿದ್ದರು. ಬಳಿಕ ಎಸ್‌ಬಿಐ (SBI) ಅವರು ಅದಾನಿಯವರಿಗೆ ಸಾಲವನ್ನೂ ನೀಡಿದ್ದಾರೆ. ಅದು ಹೇಗೆ ಸಾಧ್ಯ? ಅದಾನಿಯವರದ್ದು ನಕಲಿ ಕಂಪನಿ ಹಾಗೂ ಬೇನಾಮಿ ಆಸ್ತಿಯಿದೆ. 20 ಸಾವಿರ ಕೋಟಿ ಬೇನಾಮಿ ಯಾರದ್ದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯವನ್ನು ರಕ್ಷಣೆ ಮಾಡುವ ಪಕ್ಷಕ್ಕೆ ಅಧಿಕಾರ ಕೊಡಿ: ಸಿದ್ದರಾಮಯ್ಯ 

    ನನ್ನನ್ನು ಸಂಸತ್ ಸ್ಥಾನದಿಂದ ರದ್ದು ಮಾಡಿದ್ದಾರೆ. ಬಿಜೆಪಿಯವರು ಅನರ್ಹ ಮಾಡಿದರೆ ನಾನು ಭಯ ಬೀಳುವುದಿಲ್ಲ. ನಾನು ಮತ್ತೆ ಸ್ಥಾನವನ್ನು ಕೇಳುತ್ತೇನೆ. ಅದಾನಿಯ 20 ಸಾವಿರ ಕೋಟಿ ಬೇನಾಮಿ ಹಣ ಎಲ್ಲಿಂದ ಬಂತು ಎಂದು ಉತ್ತರ ಕೊಡಿ. ಅವರು ಎಲ್ಲಿಯವರೆಗೆ ಉತ್ತರ ಕೊಡುವುದಿಲ್ಲವೋ ಅಲ್ಲಿಯವರೆಗೆ ನಾನು ಬಿಡುವುದಿಲ್ಲ. ನನ್ನನ್ನು ಜೈಲಿಗೆ ಹಾಕಿ ಅನರ್ಹ ಮಾಡಿದರೂ ನಾನು ಹೆದರುವುದಿಲ್ಲ ಎಂದರು. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ

  • ಈ ಬಾರಿ ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತೆ: ರಾಹುಲ್ ಗಾಂಧಿ

    ಈ ಬಾರಿ ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತೆ: ರಾಹುಲ್ ಗಾಂಧಿ

    ಕೋಲಾರ: ಈ ಬಾರಿ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) 150 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಒಟ್ಟಾಗಿ ಕೆಲಸ ಮಾಡುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಪೂರ್ಣ ಬಹುಮತಗಳೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದರು.

    ಕೋಲಾರದಲ್ಲಿ (Kolar) ನಡೆದ ಜೈ ಭಾರತ್ (Jai Bharath) ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ (BJP) 40% ಹಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೀಳಿಸಬಹುದು. ಕಳ್ಳ ಹಣದಲ್ಲಿ ಸರ್ಕಾರವನ್ನು ಕೆಡವುವ ಕೆಲಸ ಮಾಡಬಹುದು. ಬಿಜೆಪಿ ಭ್ರಷ್ಟಾಚಾರಕ್ಕೆ (Corruption) ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ರಾಜ್ಯವನ್ನು ರಕ್ಷಣೆ ಮಾಡುವ ಪಕ್ಷಕ್ಕೆ ಅಧಿಕಾರ ಕೊಡಿ: ಸಿದ್ದರಾಮಯ್ಯ 

    ಮೋದಿಯವರೇ (Narendra Modi) ವರದಿ ಬಿಡುಗಡೆ ಮಾಡಿ. ನೀವು ವರದಿ ಬಿಡುಗಡೆ ಮಾಡಲಿಲ್ಲ ಎಂದರೆ ಅದು ಒಬಿಸಿಗೆ (OBC) ಮಾಡಿದ ಅಪಮಾನ. ನೀವು ಒಬಿಸಿ ಬಗ್ಗೆ ಮಾತನಾಡಿದಿರಿ. ಅವರ ಜನಸಂಖ್ಯೆ ಎಷ್ಟಿದೆ ಎಂದು ನಮಗೆ ಗೊತ್ತಿದೆ. ಎಸ್‌ಸಿ (SC) ಮತ್ತು ಎಸ್‌ಟಿ (ST) ಜನಸಂಖ್ಯೆಯ ಅನುಗುಣವಾಗಿ ಅವರಿಗೆ ಅವಕಾಶ ನೀಡಿ. ಮೊದಲು 50% ಮೀಸಲಾತಿ (Reservation) ಇರುವುದನ್ನು ತೆಗೆದು ಹಾಕಿ. ಆಗ ಓಬಿಸಿ ಬಗ್ಗೆ ಮಾತಾಡಬಹುದು. ಮೋದಿ ಅದಾನಿಗೆ (Adani) ಸಹಾಯ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾರ್ಮಿಕರು ಹಾಗೂ ರೈತರಿಗೆ ಸಹಾಯ ಮಾಡುತ್ತೇವೆ. ಮೋದಿಯವರು ಬ್ಯಾಂಕ್ ಬಾಗಿಲನ್ನು ಉದ್ಯಮಿಗಳಿಗೆ ನೀಡಿದ್ದಾರೆ. ನಾವು ಬಂದರೆ ಜನರಿಗೆ ಬ್ಯಾಂಕ್ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹೋಗುವವರು ಹೋಗಲಿ ಪಕ್ಷ ಸ್ವಚ್ಛವಾಗುತ್ತದೆ: ಶೆಟ್ಟರ್ ವಿರುದ್ಧ ಜಾರಕಿಹೊಳಿ ಕಿಡಿ

    ಕರ್ನಾಟಕದ (Karnataka) ಜನರಿಗೆ 4 ಭರವಸೆ ನೀಡಿದ್ದೇವೆ. ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಹಾಗೂ ಯುವಕರಿಗೆ ಯುವನಿಧಿ ಯೋಜನೆಯನ್ನು ಘೋಷಿಸಿದ್ದೇವೆ. ಕಾಂಗ್ರೆಸ್ ಸರ್ಕಾರ ಸ್ವಲ್ಪ ದಿನದಲ್ಲೇ ಆಡಳಿತಕ್ಕೆ ಬರಲಿದೆ. ಈ ಸರ್ಕಾರ ಯುವಕರಿಗೆ, ಮಹಿಳೆಯರಿಗೆ, ರೈತರಿಗೆ ಯಾವ ರೀತಿಯ ಕಾರ್ಯಕ್ರಮವನ್ನು ಕೊಡುತ್ತೇವೆ ಎಂದೂ ಈಗಾಗಲೇ ಹೇಳಿದ್ದೇನೆ. ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು. ಭರವಸೆ ಈಡೇರಿಸಲು 6 ತಿಂಗಳು, ಒಂದು ವರ್ಷ ಕಾಯಬಾರದು. ಮೊದಲ ಕ್ಯಾಬಿನೆಟ್‌ನಲ್ಲಿಯೇ ಎಲ್ಲಾ ಭರವಸೆಗಳನ್ನು ಈಡೇರಿಸಬೇಕು ಎಂದರು. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಚಿಂಚನಸೂರ್ ಆರೋಗ್ಯ ವಿಚಾರಿಸಿದ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು 

    ಹಿಮಾಚಲ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಚುನಾವಣೆ ಆಗಿದೆ. ಹಿಮಾಚಲ ಪ್ರದೇಶದ ಸರ್ಕಾರ ಬಂದ ನಂತರ ಏನು ಮಾಡಬಹುದು ಎಂದು ಕೇಳಿದರು. ಅದಕ್ಕೆ ನಾನು ಮೊದಲ ಕ್ಯಾಬಿನೆಟ್ ನಲ್ಲಿಯೇ 2ರಿಂದ 3 ಭರವಸೆಗಳನ್ನು ಈಡೇರಿಸಬೇಕು ಎಂದು ಹೇಳಿದ್ದೇನೆ. ಭರವಸೆ ಕೊಟ್ಟ ನಂತರ, ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಅನುಷ್ಠಾನ ಮಾಡಿ ಎಂದು ವಿನಂತಿ ಮಾಡಿದ್ದೇನೆ. ಅದೇ ರೀತಿ ಕರ್ನಾಟಕದ ನಾಯಕರಿಗೂ ಹೇಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!  


    ಕಾಂಗ್ರೆಸ್ ಪಕ್ಷ ಹಾಗೂ ಕರ್ನಾಟಕದ ಜನತೆಗೆ ಉತ್ತಮ ಅವಕಾಶ ಒದಗಿ ಬಂದಿದೆ. ಪ್ರಧಾನಿ ಮೋದಿ ಅದಾನಿಗೆ ಸಾವಿರಾರು ಕೋಟಿ ಉಚಿತವಾಗಿ ಕೊಡುವಾಗ ನಾವು ಜನರಿಗೆ ಈ ಯೋಜನೆಗಳನ್ನು ಕೊಡುತ್ತಿದ್ದೇವೆ. ಮೋದಿ ಅದಾನಿಗೆ ಸಹಾಯ ಮಾಡಿದಂತೆ ನಾವು ಮನಸ್ಸು ಪೂರ್ವಕವಾಗಿ ಜನರಿಗೆ 4 ಯೋಜನೆಗಳನ್ನು ಕೊಡುತ್ತಿದ್ದೇವೆ. ಪ್ರಧಾನಿಯವರೇ ನೀವು ನಿಮ್ಮ ಕೆಲಸ ಮಾಡಿ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕಣ್ಣೀರು