Tag: Jaguar Car

  • ಐಷಾರಾಮಿ ಕಾರು ಡಿಕ್ಕಿ – ಭೀಕರ ಅಪಘಾತಕ್ಕೆ 24ರ ಯುವತಿ ಸಾವು

    ಐಷಾರಾಮಿ ಕಾರು ಡಿಕ್ಕಿ – ಭೀಕರ ಅಪಘಾತಕ್ಕೆ 24ರ ಯುವತಿ ಸಾವು

    ಲಕ್ನೊ: ಐಷಾರಾಮಿ ಕಾರೊಂದು (Luxury Car) ಯುವತಿಯ ದ್ವಿಚಕ್ರ ವಾಹನಕ್ಕೆ ಗುದ್ದಿ, ಕೆಲ ಮೀಟರ್‌ಗಳ ದೂರ ಎಳೆದೊಯ್ದು ಭೀರಕವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ.

    ದೀಪಿಕಾ ತ್ರಿಪಾಠಿ (24) ಮೃತಪಟ್ಟ ಯುವತಿ. ನೋಯ್ಡಾದ ಸೆಕ್ಟರ್ 96ನಲ್ಲಿ ಡಿವೈಡರ್ ನಿಂದ ತಮ್ಮ ಕಚೇರಿಗೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಶರವೇಗದಲ್ಲಿ ಬಂದ ಜಾಗ್ವಾರ್ ಕಾರು (Jaguar Car) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಕೆಲದೂರದ ವರೆಗೆ ಎಳೆದೊಯ್ದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಕಾರಿನ ಚಾಲಕ ಹರಿಯಾಣ ಮೂಲದ ಸ್ಯಾಮ್ಯುಯೆಲ್ ಆಂಡ್ರ‍್ಯೂ ಪೈಸ್ಟರ್ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

    ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ (Hospital) ಕರೆದೊಯ್ದರು, ಆದರೆ ಆಕೆ ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ನಂತರ ತಿಳಿಸಿದ್ದಾರೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ

    ದೀಪಿಕಾ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೊತ್ತಿ ಉರಿದ ಜಾಗ್ವಾರ್ ಕಾರ್- ತಪ್ಪಿತು ಭಾರೀ ಅನಾಹುತ

    ಹೊತ್ತಿ ಉರಿದ ಜಾಗ್ವಾರ್ ಕಾರ್- ತಪ್ಪಿತು ಭಾರೀ ಅನಾಹುತ

    ಬೆಂಗಳೂರು: ಜ್ವಾಗರ್ ಕಾರ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ನಗರದ ಹೊರ ವಲಯದ ನೆಲಮಂಗಲದಲ್ಲಿ ನಡೆದಿದೆ.

    ಮಾದಾವರದ ಹಾಗೂ ಮಾದನಾಯಕನಹಳ್ಳಿ ಮಧ್ಯೆ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶ ಕೇಂದ್ರದ ಬಳಿ ಜ್ವಾಗರ್ ಕಾರ್ ಬೆಂಕಿಗಾಹುತಿಯಾಗಿದೆ. ಕಾರು ಚಲಿಸುತ್ತಿರುವಾಗ ಬಾನೆಟ್‍ನಿಂದ ಹೊಗೆ ಕಾಣಿಸಿಕೊಂಡ ತಕ್ಷಣ ಚಾಲಕ ಪರಿಶೀಲನೆ ಮಾಡಲು ಕೆಳಗಡೆ ಇಳಿದಿದ್ದು, ಬಾನೆಟ್ ಬಿಚ್ಚಿ ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಕಂಡಿದೆ. ತಕ್ಷಣವೇ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.

    ಓವರ್ ಹೀಟ್‍ ಆಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಕಾರು ತುಮಕೂರು ಕಡೆಯಿಂದ ಬೆಂಗಳೂರುಗೆ ಆಗಮಿಸುತ್ತಿತ್ತು. ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರು ಅಪಘಾತ ಕೇಸ್, ಚಾರ್ಜ್‍ಶೀಟ್ ಸಲ್ಲಿಕೆ – ಶರ್ಮಿಳಾ ಮಾಂಡ್ರೆ ಆರೋಪಿಯಲ್ಲ

    ಕಾರು ಅಪಘಾತ ಕೇಸ್, ಚಾರ್ಜ್‍ಶೀಟ್ ಸಲ್ಲಿಕೆ – ಶರ್ಮಿಳಾ ಮಾಂಡ್ರೆ ಆರೋಪಿಯಲ್ಲ

    – ಹೈ ಗ್ರೌಂಡ್ಸ್ ಟ್ರಾಫಿಕ್ ಪೊಲೀಸರಿಂದ ಚಾರ್ಜ್‍ಶೀಟ್ ಸಲ್ಲಿಕೆ
    – ಎರಡು ದಿನ ಮೂರು ಆಸ್ಪತ್ರೆಗೆ ಜಿಗಿದಿದ್ದು ಯಾಕೆ?

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ನಟಿ ಶರ್ಮಿಳಾ ಮಾಂಡ್ರೆ ಅವರಿದ್ದ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಆದರೆ ಈ ಪ್ರಕರಣದಲ್ಲಿ ಶರ್ಮಿಳಾ ಮಾಂಡ್ರೆ ಆರೋಪಿಯಲ್ಲ ಎಂದು ಉಲ್ಲೇಖವಾಗಿದೆ.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಏಪ್ರಿಲ್ 4ರಂದು ಬೆಳಗಿನ ಜಾವ ನಟಿ ಶರ್ಮಿಳಾ ಮಾಂಡ್ರೆ ಇದ್ದ ಕಾರು ವಸಂತನಗರ ಫ್ಲೈ ಓವರ್‌ನ ಕಂಬಕ್ಕೆ ಗುದ್ದಿತ್ತು. ಅಪಘಾತವಾದ ಬಳಿಕ ಜಾಗ್ವಾರ್ ಕಾರ್ ಅಲ್ಲೇ ಬಿಟ್ಟು ಶರ್ಮಿಳಾ ಮತ್ತು ಅವರ ಸ್ನೇಹಿತರು ಆಸ್ಪತ್ರೆಗೆ ತೆರಳಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸರು 4ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.

    32 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಆದರಲ್ಲಿ ಶರ್ಮಿಳಾ ಮಾಂಡ್ರೆ ಆರೋಪಿ ಅಲ್ಲ ಎಂದು ಉಲ್ಲೇಖಿಸಲಾಗಿದೆ. ಡ್ರೈವಿಂಗ್ ಸರಿಯಾಗಿ ಬರದಿದ್ರೂ ಓವರ್ ಸ್ಪೀಡ್‍ನಲ್ಲಿ ಕಾರು ಓಡಿಸಿದ್ದೆ ಅಪಘಾತಕ್ಕೆ ಮುಖ್ಯ ಕಾರಣ ಎಂದು ಉಲ್ಲೇಖ ಮಾಡಲಾಗಿದೆ.

    ಪ್ರಕರಣದಲ್ಲಿ ಕಾರು ಚಾಲಾಯಿಸುತ್ತಿದ್ದ ಡಾನ್ ಥಾಮಸ್ ಆರೋಪಿ ಎಂದು ಗುರುತಿಸಿ, ಕಾರಿನಲ್ಲಿದ್ದ ಶಿಫಾ ಜೋಹರ್, ಲೋಕೇಶ್ ಕುಮಾರ್, ನಿಕಿಲ್ ಮತ್ತು ಶರ್ಮಿಳಾ ಮಾಂಡ್ರೆಯನ್ನು ಪ್ರಕರಣದಿಂದ ಕೈಬಿಡಲಾಗಿದೆ.

    ಚಾರ್ಜ್‍ಶೀಟ್‍ನಲ್ಲಿ ಏನಿದೆ?
    ಏಪ್ರಿಲ್ 4ರಂದು ನಡೆದ ಅಪಘಾತದಲ್ಲಿ ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರಿಗೆ ಗಂಭೀರವಾಗಿ ಗಾಯವಾಗಿತ್ತು. ಈ ವೇಳೆ ಬೆಳಗಿನ ಜಾವ 3:45ಕ್ಕೆ ಪೋರ್ಟಿಸ್ ಆಸ್ಪತ್ರೆಗೆ ತೆರಳಿದ್ದ ಗಾಯಾಳುಗಳು ಕೇವಲ ಪ್ರಾಥಮಿಕ ಚಿಕಿತ್ಸೆ ಪಡೆದು ಎಸ್ಕೇಪ್ ಆಗಿದ್ದರು. ನಂತರ ಅದೇ ದಿನ ಮಧ್ಯಾಹ್ನ 1:30ರ ವೇಳೆಗೆ ಯಶವಂತಪುರದ ಸ್ಪರ್ಶ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು. ಈ ವೇಳೆ ಸ್ಥಳೀಯ ಪೊಲೀಸರ ಮಾಹಿತಿ ಆಧರಿಸಿ ಹೈಗ್ರೌಂಡ್ಸ್ ಟ್ರಾಫಿಕ್ ಮಾಹಿತಿ ಪಡೆಯಲು ಆಸ್ಪತ್ರೆಗೆ ಹೋಗಿದ್ದರು.

    ಪೊಲೀಸರು ಬರುವಷ್ಟರಲ್ಲಿ ಅಲ್ಲಿಂದ ಶರ್ಮಿಳಾ ಮಾಂಡ್ರೆ ಪರಾರಿಯಾಗಿದ್ದರು. ವೈದ್ಯರ ಸಲಹೆ ಧಿಕ್ಕರಿಸಿ ಡಿಸ್ಚಾರ್ಜ್ ಆಗಿ ಹೋಗಿದ್ದರು. ನಂತರ ಏಪ್ರಿಲ್ 5ರಂದು ಸಂಜೆ 5:5ರಲ್ಲಿ ಹೆಬ್ಬಾಳದ ಆಸ್ಟ್ರಾ ಆಸ್ಪತ್ರೆಯಲ್ಲಿ ಶರ್ಮಿಳಾ ಕಾಣಿಸಿಕೊಂಡಿದ್ದರು. ಈ ವೇಳೆ ಹೈ ಗ್ರೌಂಡ್ಸ್ ಟ್ರಾಫಿಕ್ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಆದರೆ ಆಗ ಹೇಳಿಕೆ ಪಡೆಯದಂತೆ ಆಸ್ಪತ್ರೆಯ ವೈದ್ಯರು ತಡೆದಿದ್ದಾರೆ. ಬಳಿಕ ಏಪ್ರಿಲ್ 6ರಂದು ಪೊಲೀಸರಿಗೆ ಸಿಕ್ಕ ಶರ್ಮಿಳಾ ಮಾಂಡ್ರೆ ಮಾಹಿತಿ ನೀಡಿದ್ದಾರೆ.

    ಈ ವೇಳೆ ನಾನು ಕಾರು ಚಾಲನೆ ಮಾಡಿಲ್ಲ. ನನ್ನ ಸ್ನೇಹಿತ ಡಾನ್ ಥಾಮಸ್ ಅವರು ಕಾರು ಚಾಲನೆ ಮಾಡಿದ್ದಾರೆ ಎಂದು ಮಾಂಡ್ರೆ ಹೇಳಿದ್ದಾರೆ ಎಂಬ ಅಂಶ ಉಲ್ಲೇಖವಾಗಿದೆ.

    ಪ್ರಶ್ನೆಗಳಿಗೆ ಬೇಕಿದೆ ಉತ್ತರ?
    ಕೋವಿಡ್ ಪಾಸ್ ತೆಗೆದು ಶರ್ಮಿಳಾ ಜಾಲಿ ರೈಡ್ ಮಾಡಿದ್ರಾ? ಈ ನಡುವೆ ಘಟನೆ ನಡೆದು ಎರಡು ದಿನಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಶರ್ಮಿಳಾ ಮಾಂಡ್ರೆ ಹೋಗಿದ್ದು ಯಾಕೆ? ಫೋರ್ಟಿಸ್ ಆಸ್ಪತ್ರೆಯಲ್ಲಿ ರಕ್ತದ ಮಾದರಿ ತೆಗೆದುಕೊಳ್ಳಲು ಮುಂದಾಗಿದ್ದಕ್ಕೆ ಆಸ್ಪತ್ರೆ ಬದಲಾಯಿಸಿದ್ರಾ? ರಕ್ತದ ಮಾದರಿ ತೆಗೆದುಕೊಂಡರೆ ಸತ್ಯ ಹೊರಬುರುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆ ಬದಲಾಯಿಸಿದ್ರಾ? ಅಂದು ಮಾಡಿದ ಪಾರ್ಟಿಯ ಕುರುಹುಗಳು ಸಿಗಬಾರದೆಂದು ಮೂರು ದಿನ ಕಣ್ಣ ಮುಚ್ಚಾಲೆ ಆಡಿದ್ರಾ? ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ತರ ಸಿಗಬೇಕಿದೆ.

    ಶರ್ಮಿಳಾ ಹೇಳಿದ್ದು ಏನು?
    ಸ್ನೇಹಿತರೊಂದಿಗೆ ಶರ್ಮಿಳಾ ಪಾರ್ಟಿ ಮಾಡಲು ತೆರಳಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಅವರು, ನಾನು ಔಷಧಿ ತರುವ ಸಲುವಾಗಿ ಹೊರಗೆ ಬಂದಿದ್ದೆ ಎಂದು ಹೇಳಿದ್ದರು. ಅಪಘಾತಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿ ಇರುತ್ತಿದ್ದ ಶರ್ಮಿಳಾ ನಂತರ ಮೌನಕ್ಕೆ ಜಾರಿದ್ದರು. ಮೌನಕ್ಕೆ ಜಾರಿದ್ದು ಯಾಕೆ? ಔಷಧಿ ತರಲು ಅಷ್ಟು ಸಂಖ್ಯೆಯ ಸ್ನೇಹಿತರ ಜೊತೆ ತೆರಳಿದ್ದು ಯಾಕೆ ಎಂಬ ಪ್ರಶ್ನೆ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

    ತನಿಖೆಯ ಬಗ್ಗೆ ಅನುಮಾನ:
    ಅಪಘಾತ ನಡೆದ ಬಳಿಕ ಪೊಲೀಸರ ತನಿಖೆಯ ಬಗ್ಗೆ  ಸಾಕಷ್ಟು ಅನುಮಾನ ಎದ್ದಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಜನ ಪ್ರಶ್ನಿಸಿ ಬೆಂಗಳೂರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ಏಪ್ರಿಲ್ ಮೊದಲ ವಾರದಲ್ಲಿ ಲಾಕ್‍ಡೌನ್ ನಿಯಮಗಳು ತುಂಬ ಬಿಗಿಯಾಗಿತ್ತು. ಪಾಸ್ ಇಲ್ಲದೆ ಯಾವುದೇ ವಾಹನ ರಸ್ತೆಗೆ ಇಳಿಯುವಂತೆ ಇರಲಿಲ್ಲ. ಸೂಕ್ತ ಕಾರಣ ಇಲ್ಲದೆ ರಸ್ತೆಯಲ್ಲಿ ಕಾಣಿಸಿಕೊಂಡವರ ಮೇಲೆ ಪೊಲೀಸರು ಕ್ರಮ ಕೈಗೊಂಡು ವಾಹನಗಳನ್ನು ಜಪ್ತಿ ಮಾಡಿ ದಂಡ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಶರ್ಮಿಳಾ ಐಷಾರಾಮಿ ಕಾರಿನಲ್ಲಿ ಯಾಕೆ ಮತ್ತು ಎಲ್ಲಿಗೆ ಪ್ರಯಾಣ ಮಾಡುತ್ತಿದ್ದರು ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಜನ ಖಾರವಾಗಿ ಪ್ರಶ್ನೆ ಮಾಡುತ್ತಿದ್ದರು.

  • ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಜಾಗ್ವಾರ್ ಕಾರು ಗಿಫ್ಟ್

    ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಜಾಗ್ವಾರ್ ಕಾರು ಗಿಫ್ಟ್

    ಮೈಸೂರು: ನೂತನ ವಧು-ವರರಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಾರಿಗೆ ಹೊಸ ಜಾಗ್ವಾರ್ ಕಾರು ಗಿಫ್ಟ್ ನೀಡಲಾಗಿದೆ.

    ಚಂದನ್ ಕುಟುಂಬಸ್ಥರಿಂದ ಈ ಕಾರು ಗಿಫ್ಟ್ ಸಿಕ್ಕಿದೆ. ಮರೂನ್ ಬಣ್ಣದ ಹೊಸ ಸೀರಿಸ್ ಕಾರನ್ನು ಕುಟುಂಬಸ್ಥರು ನೂತನ ವಧು-ವರರಿಗೆ ನೀಡಿದ್ದಾರೆ. ಕಲ್ಯಾಣ ಮಂಟಪದ ಎದುರು ಕಾರು ನಿಲ್ಲಿಸಿ ಚಂದನ್ ಮತ್ತು ನಿವೇದಿತಾಗೆ ಫ್ಯಾಮಿಲಿ ಇಂದು ಸರ್ಪ್ರೈಸ್ ನೀಡಿದೆ.

    ಮೈಸೂರಿನ ಹಿನಕಲ್‍ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಬಿಗ್‍ಬಾಸ್ ಜೋಡಿ ಮದುವೆ ನಡೆದಿದೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ನಡೆದಿದೆ. ಬೆಳಗ್ಗೆ 8.15ರಿಂದ 9 ಗಂಟೆಗೆ ಧಾರಾ ಮುಹೂರ್ತ, ಮೀನ ಲಗ್ನದಲ್ಲಿ ನಿವೇದಿತಾಳನ್ನು ಚಂದನ್ ಶೆಟ್ಟಿ ವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್, ಚಂದನ್‍ಶೆಟ್ಟಿ ಪೋಷಕರಾದ ಪ್ರೇಮಲತಾ ಹಾಗೂ ಪರಮೇಶ್, ಆಪ್ತರು, ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ನಿವೇದಿತಾಗೆ ಚಂದನ್ ತಾಳಿ ಕಟ್ಟಿದ್ದಾರೆ.

    ಮಂಗಳವಾರ ಸಂಜೆ ಚಂದನ್ ಮತ್ತು ನಿವೇದಿತಾ ಆರತಕ್ಷತೆ ನಡೆದಿದೆ. ಬೇಬಿ ಡಾಲ್ ಮೆರೂನ್ ಕಲರ್ ಗೌನ್‍ನಲ್ಲಿ ಮಿಂಚಿದರೆ, ಚಂದನ್ ಕೂಡ ಅದೇ ಕಲರ್ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ದಂಪತಿ ಹಾಗೂ ಅಕುಲ್ ಬಾಲಾಜಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಶುಭ ಹಾರೈಸಿದ್ದಾರೆ.